ಹೊನ್ನ ಶೂಲಕ್ಕೇರಿಸುವವರು...!!
ಪರರ ಮಾತನು ಕೇಳಿ ಅಹುದಹುದೆಂಬರು..!
ದಿಟವೋ ದಂಭವೋ ಎಂದೆಣಿಸರು
ಹೇಳದಿದ್ದರೂ ಅವರು ಹೇಳಿಸಲು ತೊಡಗುವರು
ಹಾಳು ಹೇಳಿದರೂ ಹಾಲೆಂದೆ ಹೊಗಳುವರು
ಹೊಗಳಿದವ ಹಾರುವನು.ಇವಮುಂದೆ ಓಡುವನು
ಹಾರಿದವ ಎಲ್ಲವನೂ ದಾಂಟಿ ಹೋಗುವನು
ಹಿಂದೋಡಿದವ ಬಿದ್ದು ಹೂಳ ನೆಕ್ಕುವನು
ಆದರೂ ಬಿಡನು
ಗೊತ್ತಿಲ್ಲ ಹೊನ್ನ ತೋರಿಸುವವರು
ಹೊನ್ನಿನ ಶೂಲ ತರುವರು ಎಂದು
ಹೊನ್ನಿನ ಶೂಲ ತರುವರು ಎಂದು
ಇವರೇ ತುಂಬಿಹರಿಲ್ಲಿ.....!!
ಹೊನ್ನ ಶೂಲಕ್ಕೇರಿಸುವವರು.....!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ