ಅಂತೂ ಬಸವನ ಕಾಲ ಬುಡಕ್ಕೆ ಬಂದಾಯ್ತು. ಅತ್ತಿತ್ತ ನೋಡಿದೆವು ಯೇನೂ ವಿಶೇಷವಿಲ್ಲ ಬರೇ ಬೋಳು ದೇವಾಲಯ.. ಅದೂ ಪಾಳು. ಪೂಜೆಯಿಲ್ಲ,ನೈವೇದ್ಯವಿಲ್ಲಾ...ಅಸಲಿಗೆ ಅಲ್ಲಿ ದೇವರೇ ಇಲ್ಲಾ.. ಅಂತೂ ಬಸವನೊಬ್ಬ ಇದ್ದ. ಅಲ್ಲಿ ಇಲ್ಲಿ ತಿರುಗಿ ನೋಡುತ್ತಿದ್ದೆವು.. ನಮ್ಮ ಗ್ಯಾಂಗಿನ ನಾಯಕ ದಿವಾಕರ !!! ಬಲು ಜೋರು, ಅಷ್ಟೇ ಹಾಸ್ಯ ಸ್ವಭಾವದವ.. ಅವ...ಇದ್ದಕ್ಕಿದ್ದಂತೇ.."ಅಯ್ಯೊಯ್ಯೋ... ಅಬ್ಬಾ...." ಎಂದು ಕೈ ಕುಡುಗುತ್ತ ನಮ್ಮ ಕಡೆಗೆ ಬಂದ . ನಮ್ಮೊಟ್ಟಿಗಿನ ಕಿತ್ತೂರು ರಾಣಿ ಮಂಗಲ ಕೇಳಿದಳು "ಅಣ್ಣ.. ಯೆಂತದೂ..." ಅದಕ್ಕೆ ದಿವು.." ಇಲ್ಲ್ ನೋಡು ,'ಆಬಸವನ ಮೂಗಲ್ಲಿ ಒಂದ್ ಬಾರಿ ಕೈ ಬೆರಳಾಕು..ನೀನು... ಏಷ್ಟ್ ತಂಪೂ..ಆಹಾಹಾ..... ' ಅಂದ.. ಮಂಗಲಾ ಘಾಟಿ. "ಹೌದಾ... ನಾನೂ ಕೈ ಹಾಕುತ್ತೇನೆ ಹಾಗಾದರೆ'' ಎಂದು ಅವಳೂ ಬೆರಳು ತೂರಿಸಿದಳು.. ಅಮ್.. ಅಯ್ಯೊಯ್ಯೋ..ಎಷ್ಟ್ ತಂಪಲ್ಲವಾ..? ಏ ರಾಮೂ... ಇಲ್ಲ್ ಬಾ..ನೋಡು...ಇಲ್ಲಿ ಕೈ.ಹಾಕೂ...ನೀನೂ... ಅಹಾ...ತಂ..ಪೂ... ಎಂದಳು ಕೈ ಉಜ್ಜಿಕೊಳ್ಳುತ್ತ........ನನಗ್ಯಾಕೋ ಅನುಮಾನಾ..... ಮೊದಲಿಂದಾನೂ ಹಾಗೇ ನಾನು ಯಾವುದನ್ನೂ ನಂಬೋ ಗಿರಾಕಿ ಅಲ್ಲಾ... ಅದಕ್ಕೇ..ನಾನು ಮತ್ತೊಬ್ಬ ನಮ್ಮ ಅಣ್ಣ ದತ್ತಣ್ಣನಿಗೆ ಕೈಹಾಕಲು ಸೂಚಿಸಿದೆ. ಅವನಿಗೆ ಅದಾಗಲೇ ಮಂಗಳ ಕಣ್ಸನ್ನೆ ಮಾಡಿ ಆಗಿತ್ತು... ಅವ ಕೈ ಹಾಕಿದೋನು... ಅಮ್ಮಾ..ಅಯ್ಯೊಯ್ಯೋ...ಅದೆಷ್ಟು ತಂ....ಪೂ..ಅನ್ನುತ್ತಲೇ ಕೈ ಹಿಂದಕ್ಕೆಳೆದ.....ಆದರೂ...ಯಾಕೋ,,ಅನುಮಾನ ನನಗೆ.... ಏಕೆಂದರೆ ಈ ಮಂಗಲ ನನ್ನ ಓರಗೆಯವಳು.. ನಾವು ಮೂರ್ನಾಲ್ಕುಜನ ಸೇರಿ ಹೋಗುತ್ತಿದ್ದಾಗ ಹಲಸಿನ ಮರ ಹತ್ತಿ ಹಲಸಿನ ಹಣ್ಣು ಕೆಡವಿ ಬಿರಿದು ತಿನ್ನುತ್ತಿದ್ದೆವು ಆಗ ಅವಳು ಎಲ್ಲರಿಗಿಂತ ಮೊದಲೇ ಮೇಲೆ ಹತ್ತಿಬಿಡುತ್ತಿದ್ದಳು..ನಮಗೆಲ್ಲ..ಓ ..ಇವಳು ಹಣ್ಣು ಕೆಳಗೆ ಕೆಡವುತ್ತಾಳೆ ನಾವೆಲ್ಲ ಪಾಲು ಮಾಡಿ ತಿಂದರಾಯಿತು. ಎಂದುಕೊಂಡಿದ್ದರೆ... ಇವಳು ಮೇಲೇನೇ ಹಣ್ಣನ್ನು ಬಿರಿದು ತಿನ್ನೋದಕ್ಕೇ ಕುಳಿತುಬಿಡುತ್ತಿದ್ದಳು ನಾವು ಮೇಲೆ ನೋಡುತ್ತ ಜೊಲ್ಲುಸುರಿಸಿದ್ದೇ ಲಾಭಾ... ಬೇಳೆ ಮಾತ್ರ ಕೆಳ್ಗೆ ಉದುರುತ್ತಿತ್ತು...ಥತ್ತೇರಿಕೇ..
ಈ ಎಲ್ಲ ಅನುಭವಗಳೇ ನನ್ನನ್ನು ಅವಿಶ್ವಾಸಿಯನ್ನಾಗಿ ಮಾಡಿದ್ದು.... ಅಂತೂ ಎಲ್ಲರೂ ಬಸವನ ಮೂಗಿಗೆ ಕೈ ಬೆರಳು ತೂರಿಸಿ ಅಮ್ಮಾ,ಅಯ್ಯೊಯ್ಯೋ,,ತಂಪೂ..ಎಲ್ಲಾ ಹೇಳಿದ್ದು ನೋಡಿ ನನಗೂ ತಡೆಯಲಾಗಲಿಲ್ಲಾ... ಸಾಲದ್ದಕ್ಕೆ ಸೆಕೆ ಬೇರೆ ತಂಪಾದರಾಗಲೀ ಎನ್ನುವ ಯೋಚನೆ ಬಂದು ಏನಾದರಾಗಲೀ ಮೊದಲು ಒಂದು ಚಿಕ್ಕ ಕೋಲನ್ನು ಬಸವನ ಮೂಗಿನೊಳಕ್ಕೆ ತೂರಿಸಿ ತಿರುವಿದೆ ನೋಡಿ....... ಆಗ ಅಲ್ಲಿಂದ ಪುಳಕ್ ನೆ ಬಿತ್ತು ನೋಡಿ ಒಂದು ಕರೇ ಚೇಳು..... ಆಹಾಹಾ..ಈ ಖರ್ಮದವರು ನನ್ನನ್ನು ಹಳ್ಳಕ್ಕೇ ಹಾಕ ಬೇಕೆಂದಿದ್ದರು...! ಮಗ ನಾನು ಬೀಳುವವನೇ...? ಇಷ್ಟಾಗುವಾಗ ಈ ಖಳ್ಳನನ್ನ ಮಕ್ಕಳು ಬಸವನ ಬಾಲ ಅಳೆಯುತ್ತಿದ್ದರು...ಮುಸಿ ಮುಸಿ ನಗುತ್ತಾ....
ಇದುವರೆಗೂ ಯೆಲ್ಲ ಇವರು ಆಹಾಹಾ ಎಂದದ್ದು ತಂಪಾಗಿ ಅಲ್ಲ ...! ಕೈಬೆರಳಾಕಿದಾಗ ಆ ಕರಿ ಚೇಳು ಮಾಡಿತ್ತಲ್ಲಾ ಇವರ ಬೆರಳಿಗೆ ಸರ್ಜರಿನಾ.... ಆದ್ರೂ ಬಡ್ಡೀಮಕ್ಕಳು ಅಯ್ಯೊಯ್ಯೊ ತಂಪೂ ಎಂದೇ ಬಡಕೊಂಡರಲ್ಲಾ..!!! ಆಮೇಲೆ ಒಬ್ಬೊಬ್ಬರ ಕೈಬೆರಳು ನೋಡಿದರೇ..... ಬಾಳೇಕಾಯಿ ಆದ ಹಾಗಿತ್ತು...! ಈ ಯೆಲ್ಲಾ ಮಂಗನಾಟಗಳ ಮುಗಿಸಿ ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದರೆ.... ಹೌದಾ... ನಿನಗೇನೂ ಆಗಿಲ್ಲವಲ್ಲಾ,,,, ಇದನ್ನೇ ಹೇಳೂದು ದೊಡ್ಡವರ ಲಕ್ಷಣ ಅಂತಾ.... ಬುದ್ಧಿ ಬಂದಾಗ ಹಿಂಗೆಲ್ಲಾ ಆಗುವುದಿಲ್ಲಾ ತಂತಾನೇ ವಿಚಾರ್ ಮಾಡುವ ಮನಸ್ಸು ಆಗುತ್ತದೆ . ಎಂದು ಹೇಳಿದಾಗ ನಾನು ನಿಜವಾಗಲೂ 'ದೊಡ್ಡವನಾಗಿದ್ದೇನೆ'...! ನನಗೂ 'ಬುದ್ಧಿ ಬಂದಿದೇ' ಅಂದುಕೊಂಡಿದ್ದು.
ನಿಜವಾಗಲೂ 'ದೊಡ್ಡವರೇ'!!
ಪ್ರತ್ಯುತ್ತರಅಳಿಸಿ