ಮಂಜಜ್ಜನ ಮಾನಗೇಡಿ ಭಾನಗಡಿಗಳು....!!....౧
ಅಪ್ಯಾ..... ಓ ಅಪ್ಯಾ.... ಈವತ್ತು ಆ ಕೆಳಗಿನ ಮನೇ ಸುಬ್ಬಕ್ಕ .................. ಯೆಂತದೋ ..? ತಮಾ... ಕರದ್ಯಾ? ಯೆನ್ನ..... ಮಾಣಿ ಮಾತು ಮುಗೀಸೂ ಮೊದ್ಲೇ ಅಪ್ಪಯ್ಯ ಅಡ್ಡಬಾಯಿ ಹಾಕ್ದಾ.... ಹೌದೋ.... ಅದೇ ಆ ಸುಬ್ಬಕ್ಕ....... ಮತ್ತೆ ಮಾಣಿ ಹೇಳೂಲಕ್ಕೂ......... ಬಚ್ಚಲ ಮನೇಲಿ ತಾಮ್ರದ ಚೊಂಬು ಹಂಡೆವಳಗೆ ...ಧಣ್..ಧಣಾಲ್..ಹೇಳೀ ಬೀಳುಲಕ್ಕೂ ಸರೀ ಹೋತು...!!! ಮಾಣಿ ಸಾಯಲಿ ಅಬ್ಬೇ...... ಯೆಂತಾ ಆತೇ....... ಹೇಳಿ ಮಾತು ಮರತು ಅಬ್ಬೇ ಕರೂದಕ್ಕೂ ಸರಿಹೋತು,,,,ಅಪ್ಪಯ್ಯ ಅಲ್ಲಿಂದ ಉಂಬ್ಲಕ್ಕೆ ಎರಡು ದೊಡ್ ಕೊಡಬಾಳೇನಾರೂ ಕೊಯ್ಕಾ ಬತ್ತೇ ಹೇಳಿ ಅಲ್ಲಿಂದ ಜಾಗಾ ಖಾಲೀ ಮಾಡ್ದಾ.... ಆದ್ರೂ ಮಾಣಿ ಮನಸಲ್ಲಿ ಸುಬ್ಬಕ್ಕ....... ಹಾಂಗೇ ಇದ್ದಿತ್ತು.....!!!!....ಅಲ್ಲಿ ದೇವರ ವಳಗಿಂದ....... ಅಜ್ಜ..... ಗೆಂಟೇ ಬಾರಿಸಿ... 'ವನಸ್ಪತಿ ರಸೋತ್ಪನ್ನೋ....ಗಂಧಾಡ್ಯೋ..... ' ಹೇಳೂದ ಕೇಳಿ ಬಚ್ಚಲ ಮನೇ ವಳಗಿಂದ ಅಬ್ಬೆ... ಕೂಸೇ.... ಅಜ್ಜಂಗೆ ನೈವೇದ್ಯಕ್ಕೆ ಆತಕು...... ಯನಗಿನ್ನೂ ಮಿಂದಾಜಿಲ್ಲೆ..... ಬಗೇಲಿ ತಡೂಲೆ ಹೇಳು..ಮಿಂದ್ಕಾ ಬತ್ತೆ ಆಯಿ...... ಹೇಲಿ ಕೂಸಿಗೆ ಕೂಗಿ ಹೇಳ್ತು.. ಕೂಸು ದೇವ್ರ ವಳದಿಕ್ಕೆ ಇಪ್ಪ ಅಜ್ಜನ ಹಿಂದೆ ಹೋಗಿ....ಅಜ್ಜಾ....ಬಗೇಲಿ ತಡ್ಯವಡೋ....ಆಯೀಗೆ ಮಿಂದಾಜಿಲ್ಯಡಾ..... ಅಂತು......ಅಥೋ...... ಇನ್ನೂ ಮಿಂದಾಜಿಲ್ಯಾ...... ಅಯ್ಯೋ ರಾಮಾ.....ಯೆನಗೆ...ಧೂಪಾರ್ತೀ ಮಾಡಾಗೋತಲೇ..ಕೂಸೇ...ಮೊದ್ಲೇ ಹೇಳೂಲೆ ಯೆಂತಾ ಧಾಡ್ಯಾಗಿತ್ತಡಾ....ಬೆಳಗಿಂದಾ ಯೆಂತಾ ದಂಡ್ ಕಡೀತಿತ್ತಡಾ.... ಗೋಲೆ.... ಗೋಲೆ... ಹಡ್ಬೆ ಸುದ್ದೀ ಹೇಳ್ ಹೇಳ್ ಹೊತ್ ಕಳೇತೋ. ... ಇನ್ನೂ ಮೀಯಗಿದ್ದೇ ಯೆಂತಾ ಸಾಯ್ತಿತ್ತಡಾ.... ಅಜ್ಜನ ಧೂಪಾರ್ತಿಯೊಟ್ಟೀಗೆ.... ಆಗ್ತ್ನೇ ಇದ್ದ ಮಂತ್ರಪುಷ್ಪಾ !!!!!...... ದೇವ್ರೀಗೇ ಪ್ರೀತಿ...
ಅವ ಯಾವಾಗ್ಲೂ ಹಾಂಗೇಯಾ...... ಬವ್ವುದೂ ಅಂದ್ರೆ....ಪರಮ ಪ್ರೀತಿ..... ಖರ್ಮ ತೀರೋಪ್ಲೇ.... ನೆಟ್ಟಗೆ ನಿತ್ಕಂಬ್ಲೇ ಆಗಿಗಿದ್ದೇ ಹೋದ್ರೂ........ ನೆಡಗಸ್ತಾ..ಯೆಲ್ಲರನೂವಾ..... ಯೆನಗೆಂತಾ ಗುತ್ತಿಲೇ ಹೇಳಿ ಮಾಡ್ಕಂಡ್ಯಾ...... ಯೆಲ್ಲಾ ಗುತ್ತಿದ್ದು ಇವನ ಅವಾಂತ್ರ...... ಹೇಳೂಲೆ ಹೋದ್ರೆ ಮೇಲ್ ಮೊಕನಾಗಿ ತೂಪಕಂಡಾಗೆ ಹೇಳಿ ಹೇಳಿಗಿದ್ದೇ ಕಳೀತ್ನೇ ಇದ್ದೆ... ಅದೇ..ಮತ್ತೆ ಹಂಬ್ಲಾತು.... ಈ ಮಳ್ ಮಂಜಜ್ಜ.... ಮೊನ್ನೆ.... ತೋಟ ತಿರಗೂಲೇ ಹೋದಾವ..... ಮಂಡಗಾದಿಗೇಲಿ.... ಮನಿಕಂಡಿದ್ದಿದ್ನಡಾ...ಹೇಳಿ ಬಾಳೆ ಕೊವ್ವುಲೆ ಬಂದ ಸುಬ್ಬಕ್ಕ ನೋಡದ್ದು ಹೇಳಿತ್ತು....... ಅದಷ್ಟೇ ಅಲ್ಲ...ಬಿಲ್ಯೋ......ಇನ್ನೂ ಸುಮಾರು ಕತೆ ಪುರಾಣಾ ಇದ್ದು ಅವಂದು......ಅಚಾರಿ ಗೌರಿ..... ಅಡ್ಕೆ ಸೊಲೂಲೆ ಬಂದಾಗ, ತುದೀಮನೆ ಯೆಂಟ್ರೊಣ ಭಾವಂಗೆ ಹೆಣ್ಣ ನೋಡುಲೆ ಹೇಳಿ ಹೊಸಾಕುಳೀಗೆ ಹೋದಾಗ, ಮುಕ್ರಗೋಳ್ ಮಕ್ಕಳ ಶಿಂಗೀಬೋಳನ ಕತೆಲಿ... 'ಶಿಂಗ್ಯ ತಂದ ಮುಂಡಕ್ಕೀಯಾ ಹ್ಯಾಂಗ್ ತಿಂದ್ಯೇ ಗಂಗವ್ವಾ',,,, ಹೇಳಿ ಜಟ್ಟಿ ಪದ.....ಹೇಳಕರೆ... ಈ ಮಜ್ಜಜ್ಜ.... ಅಲ್ಲಿ ಸೋಗೆ ಅಟ್ನಗೇ ತಡ್ಸ್ ಬಿದ್ದು ಮೊಳ್ಳಂಡೇ ವಡ್ಕಂಡು ಅಂಗೋಸ್ತ್ರ ಪಂಜೀ ಕಾಲಿಗೆ ಕಟ್ಕಂಡು ಸುಮ್ಮಂಗೆ ಮಂಚದ ಮೇಲೆ ಬಂದು ಬಿದ್ಕಂಡಾಗ,,.. ಹೀಂಗೆ ವಂದಲ್ಲ ಎರಡಲ್ಲಾ ...ಮಂಜ್ಜಜ್ಜನ ಭಾನಗಡಿ.......!!! ಅದಾರು ಯೆಂತದು...ಪೂರಾ ಮಾನಗೇಡಿದೇಯಾ.......!!!! ಹೇಳ್ತೆ... ಹೇಳ್ತೆ ತಡ್ಕಳಿ..ಬಗೇಲಿ.....ರಾಶೀ ಇದ್ದು ,,,. ಒಂದೊಂದೇಯಾ ಬಿಲ್ಯೋ.....
*********************************************************************************
ಮಾನಗೇಡಿ ಭಾನಗಡಿ .......ನಂ.౨
ತೋಟಕ್ಕೆ ಹೋದ ಮಂಜಜ್ಜ .........ಹಾಳೆಕಡೀಗೆ ಒಂದು ಛಲೋ ಹಾಳೆ ಬಿದ್ದಿದ್ರೆ ಹೆಕ್ಕಂಡು ಬನ್ನಿ ಮಾವಾ.. ಹೇಳಿ ಹೇಳಿದ ಸೊಸೆ ಪಾರ್ವತೀ ಮಾತ್ನಂತೆಯ ಇಡೀ ತೋಟ ತಿರಗಿ ಹಾಳೇಕಡೀಗೆ ಹಾಳೆ ಹೆಕ್ಕಂಡು ಇನ್ನೇನು ನೀರವಳೇಳಿ ಕೂತ್ಗಂಡು ...... ತೊಳಕತ್ನೇ ಇರಕರೆ ಮಾಣಿ...... ಅಜ್ಜಾ... ಓ ಅಜ್ಜಾ... ಯಾರೋ.. ಚೌಡೀ ಪೂಜೆ ಕೊಡೂಲೆ ಬಂಜ್ವೋ.... ಬೇಗ್ ಮಿಂದ್ಕಳವಡಾ.... ಅಪ್ಪಯ್ಯ ಅಡ್ಕೆ ತಗಂಡು ವಖಾರೀಗೆ ಹೋಜಾ... ಮೊಗಳಕೇರಿಲಿ ಇಪ್ಪ ಹಕ್ಕಲ ಚೌಡೀಗಡಾ... ಅಂದ... ಚೌಡಿ ಪೂಜೆ ಸುದ್ದಿ ಕೇಳದ್ದೇಯಾ... ಅಜ್ಜನ ಮೊಕ ಊರಗಲಾತು... ಮಾಣಿ... ಬಾಳೇಣ್ಣ ಕೊನೆ ಅಲ್ಲೇ ಹಕ್ಕೆಹೊಳ್ಳಿ ಕೆಳಬದೀಗೆ ಇಟ್ಟಿದ್ದೆ. ಬಾಕಿ ಪೂಜೆ ಸಾಮಾನೆಲ್ಲಾವ ಕೂಸನಕೂಡೇ ವಳಗಿಡೂಲೆ ಹೇಳಿದ್ದೆ... ನಾ ಬಗೇಲಿ ಮೇಲೆ ಕರಡದ ಬ್ಯಾಣದ ಬದೀಗೆ ಹೋಗ್ ಬತ್ತೆ... ಈಗಿತ್ಲಾಗಿ.... ಅಲ್ಲಿ ಯೆಲ್ಲಾ ಸೂರೆಯಾಗೋಜು...ದನಗಳ ಗೋಲೆ... ಸಂತೀಗೆ ಗೋವೇ ಬೀಜಪ್ಪಲೆ ಶುರುವಾಜು..... ಕದ್ದಕಂಡೋಪ್ಲೆ ಬಂದ್ ಸಾಯ್ತೋ.. ಕಳ್ನನನ್ ಮಕ್ಕೋ.. ಹೋಗಿ ನಾಕ್ ಮುಳ್ಳಜಡೇನಾರೂ ತುರ್ಕಿಕ್ಕಿ ಬತ್ತೆ..... ಹೇಳಿಕ್ಕಿ ಬೇಣಕ್ಕೆ ಓಡ್ದಾ..... ಮಂಜಜ್ಜ..... ಅತೋ ಯಾರೋ ಮಾಣೀ....ಪೂಜೆ ಕೊಡೂಲೆ ಬಂದವಾ..... ಆ ಸುಟ್.... ಗಾಣಗರ ಅಕ್ಕಮ್ಮನ ಮಗ...... ಸಣ್ಕೋಸಾಗಿಕ್ಕು...... ಅವನೇಯಾ ಪ್ರತೀ ವರ್ಷ.. ಆ ಹಕ್ಕಲ ಚೌಡೀಗೆ ನೆಡ್ಕಂಬವಾ.... ಹೇಳಿ ಗೊಣಗತ್ನೇ ತೋಟದಿಂದ ಮನೇ ಅಂಗಳಕ್ಕೆ ಬಂದು.... ಮುಂಗಚ್ಚೇ ವಳಗೆ ತುಂಬ್ಕಾ ಬಂದ ಹಣ್ಣಡಕೇನೆಲ್ಲಾವಾ ಕಚ್ಚೆ ಶೆರಗ ಬಿಚ್ಚಿ ಅಂಗಳದಲ್ಲಿ ಹಾಕಿಕ್ಕಿ...... ತಂಗೀ ಬಚ್ಚಲಲ್ಲಿ ಯಾರಿದ್ವೇ..?...ಮಿಂದ್ಕಂಡು ಹೋಗ್ ಸಾಯಕ್ಕಾತಲೀ....... ಅವನ ಪೂಜೆ ಕೊಡೂ ಶಾಸ್ತ್ರ ಮುಗೀಸಾಕಕ್ಕಾತು.... ಹನಿ ಬೆಂಕಿ ಜೋರ್ ಮಾಡು ಕೂಸೆ...... ನೀರು ಚೆಪ್ಪಗರೇತು....... ಹೇಳಿ ಬಚ್ಚಲೀಗೆ ಹೋದ.....
************************************************************************************************************
ಮಾನಗೇಡಿ.. ಭಾನಗಡಿ..... ನಂ.౩
ಇಂದು ಏಕಾದಶಿಯಲದನೋ ಮಾಣೀ..... ಶಂಜಪ್ಪಾಗ ದೇಸ್ಥಾನದಲ್ಲಿ ಬಜ್ಞೆ ಇದ್ದು ಹೇಳಿದ್ನಪಾ .... ಗಣೇಶ್ ಬಾವಾ... ಅವಂಗೆ ಯೆಲ್ಲಾಪುರಕ್ಕೆ ದಾರೆ ಪೂಜೆಗೆ ಹೋಗೊ ಹೇಳಿ ಯೆಂಗೆ ವರಸಿಕ್ಕಿ ಹೋಗ್ತಾ ಅಂಬಾ ಕಾಣ್ತು......... ವಂದ ಮಳಗಾಲ ಬಿಡತ್ನಿಲ್ಲೆ ಖರ್ಮ ತೀರದಂವಾ..... ಅಲ್ಲಾ ಯಾನೂ... ಕಸುವಿದ್ದಾಗ ಹಾಂಗೇ ಆಗಿತ್ತು ಬಿಲ್ಯೋ..... ಈಗ ಆಗ್ತಿಲ್ಲೆ ... ಆದ್ರೂ ಕಳಚೆ ಗಣಪೆಗ್ಡೇರು ಪ್ರತೀ ವರ್ಷ ಹೇಳ್ ಕಳಸ್ತ್ರು.. ಮಂಜ ಭಟ್ರೇ.... ನೀವು ಪೂಜೆ ಮಾಡ್ದಾಂಗೆ ಆಗ್ತಿಲ್ಲೆ ಹೇಳ್ತು ಯಮ್ಮನೆ ಹೆಗ್ಗಡತಿ. ನೀವು ಮಂತ್ರಾಕ್ಷತೆನಾರೂ ಕೊಟ್ಟಿಕ್ಕಿ ಹೋಗಿ ಬಂದು, ಹೇಳಿ ವರಾತಾ ಮಾಡ್ತ್ರು.. ಯಾನು ಅಡ್ಡಿಲ್ಯರಾ ಬತ್ತೆ ,ಯಾವಾಗಾರೂವಾ..... ಬಂದಾಗ್ಲೇ ಅದ್ಯೆಂತಾ ಮಂತ್ರಾಕ್ಷತೆನಾರೂ ಕೊಡ್ತೆ ಹೇಳಿ ಹೇಳಿದ್ದೆ,...ಅಥೋ...... ಯಾ ಯೆನ್ನ ಪುರಾಣಾ ಹೇಳ್ತನೇ ಇದ್ದೆ ನೀ ಹಾಂಗೇ ಹೋದ್ಯಲೋ...... ಮಾರಾಯಾ.....
ಯೇ ಮಾಣೀ..... ಮಾಣೀ...... ಅಥೋ ಹೋಗತ್ಯೋ ಇಲ್ಯೋ.... ಹೇಳು,,, ಯಾನಾರೂ ಹೋಗಬತ್ತೆ... ಅಲ್ಲಿ ಆ ಸುಟ್ ಓಣಜೀಲಿ ಕಂಡ್ ಸಾಯತಿಲ್ಲೆ ಹೇಳಿ ಹೇಳದೇ..... ಅಂದ್ಕತ್ನೇ ತನ್ನ ಮುಂಗಚ್ಚೆಯಾ ಒಂದು ಬಾರಿ ಬಿಚ್ಚಿ ಸರಿಮಾಡಿಕಂಡ ಮಂಜಜ್ಜ... ಅಂತೂ ಮಾಣಿ ಬಜನೇಗ್ ಹೋಪು ನಮನಿ ಇಲ್ಲೇ ಹೇಳಿ ಮಂಜಜ್ಜ ತಾನೇ ಬೇಟ್ರಿ... ಹುಡ್ಕೂಲೆ ಹೋದ.... ....ಕೂಸೇ..... ಯೆಲ್ ಹಾಳಾಗೋದ್ಯೇ..... ಈ ಸುಟ್ ಕಣ್ಣು ಕಂಡೂ ಸಾಯ್ತಿಲ್ಲೆ.... ತಂಗೀ..... ಓ ತಂಗೀ.... ಬಗೇಲಿ ಅಜ್ಜನ ಆ 'ಎವರೆಡಿ' ಬೇಟ್ರಿ ಹುಡೀಕತ್ತೆ ...ಗುಬ್ಬಾ... ಆ ಚಿಮಣೀ ಹಚ್ಕಂಬಾ...ಇಲ್ಲಿ... ಯೆಂತದೂ ಕಾಣ್ತಿಲ್ಲೇ... ಯೆಮ್ಮನೆ ಪದ್ನಾಭ..... ಇಲ್ಲಿ ಯೆಲ್ಲಾ ಆ ಸುಟ್ ಕೌಯ್ತದ ಮಾಲ ಇಟ್ಟಿಕಿದಾ... ಕೈ ಹಾಕೀರೆ ಶಿಬಕೆ ಹೆಟ್ಟತು ಸಾಯಲೀ...... ತಂದ್ಯನೇ....
ಅಂತೂ ಕೊಟಗೇ ವಳಗಿಂದ....... ಅಜ್ಜಾ... ನಾ ಕೊಟ್ಟಗೇಲಿದ್ನೋ ಆಯಿ ದನಾ ಕರೂಲೆ ಬಾ ಬಗೇಲಿ ಚಾಳಿ ದನಾ ವದೇತು ಕೊಡ್ತಿಲ್ಲೆ ಹೇಳಿ ಯೆನ್ನ ಕರದ್ದು ... ಬಂದೆ.... ಅಲ್ಲೇ ಯೆಲ್ಲಾರೂ ಇದ್ದಿಕ್ಕ .... ಅಪ್ಪಯ್ಯಾ... ಅಲ್ಲೇ ಮೇಲೆ ಗಿಳೀಗೂಟಕ್ಕೆ ಇಡತಿದ್ನಪಾ.... ಅಲ್ಲೇ ಇದ್ದಿಕ್ಕಾ... ನೋಡು...ಇಲ್ದೋರೆ ನಾ ಬಂದು ತೆಕ್ಕೊಡ್ತೆ ತಡ್ಯಾ...ಅಂತು.
ಯೇ ಮಾಣೀ..... ಮಾಣೀ...... ಅಥೋ ಹೋಗತ್ಯೋ ಇಲ್ಯೋ.... ಹೇಳು,,, ಯಾನಾರೂ ಹೋಗಬತ್ತೆ... ಅಲ್ಲಿ ಆ ಸುಟ್ ಓಣಜೀಲಿ ಕಂಡ್ ಸಾಯತಿಲ್ಲೆ ಹೇಳಿ ಹೇಳದೇ..... ಅಂದ್ಕತ್ನೇ ತನ್ನ ಮುಂಗಚ್ಚೆಯಾ ಒಂದು ಬಾರಿ ಬಿಚ್ಚಿ ಸರಿಮಾಡಿಕಂಡ ಮಂಜಜ್ಜ... ಅಂತೂ ಮಾಣಿ ಬಜನೇಗ್ ಹೋಪು ನಮನಿ ಇಲ್ಲೇ ಹೇಳಿ ಮಂಜಜ್ಜ ತಾನೇ ಬೇಟ್ರಿ... ಹುಡ್ಕೂಲೆ ಹೋದ.... ....ಕೂಸೇ..... ಯೆಲ್ ಹಾಳಾಗೋದ್ಯೇ..... ಈ ಸುಟ್ ಕಣ್ಣು ಕಂಡೂ ಸಾಯ್ತಿಲ್ಲೆ.... ತಂಗೀ..... ಓ ತಂಗೀ.... ಬಗೇಲಿ ಅಜ್ಜನ ಆ 'ಎವರೆಡಿ' ಬೇಟ್ರಿ ಹುಡೀಕತ್ತೆ ...ಗುಬ್ಬಾ... ಆ ಚಿಮಣೀ ಹಚ್ಕಂಬಾ...ಇಲ್ಲಿ... ಯೆಂತದೂ ಕಾಣ್ತಿಲ್ಲೇ... ಯೆಮ್ಮನೆ ಪದ್ನಾಭ..... ಇಲ್ಲಿ ಯೆಲ್ಲಾ ಆ ಸುಟ್ ಕೌಯ್ತದ ಮಾಲ ಇಟ್ಟಿಕಿದಾ... ಕೈ ಹಾಕೀರೆ ಶಿಬಕೆ ಹೆಟ್ಟತು ಸಾಯಲೀ...... ತಂದ್ಯನೇ....
ಅಂತೂ ಕೊಟಗೇ ವಳಗಿಂದ....... ಅಜ್ಜಾ... ನಾ ಕೊಟ್ಟಗೇಲಿದ್ನೋ ಆಯಿ ದನಾ ಕರೂಲೆ ಬಾ ಬಗೇಲಿ ಚಾಳಿ ದನಾ ವದೇತು ಕೊಡ್ತಿಲ್ಲೆ ಹೇಳಿ ಯೆನ್ನ ಕರದ್ದು ... ಬಂದೆ.... ಅಲ್ಲೇ ಯೆಲ್ಲಾರೂ ಇದ್ದಿಕ್ಕ .... ಅಪ್ಪಯ್ಯಾ... ಅಲ್ಲೇ ಮೇಲೆ ಗಿಳೀಗೂಟಕ್ಕೆ ಇಡತಿದ್ನಪಾ.... ಅಲ್ಲೇ ಇದ್ದಿಕ್ಕಾ... ನೋಡು...ಇಲ್ದೋರೆ ನಾ ಬಂದು ತೆಕ್ಕೊಡ್ತೆ ತಡ್ಯಾ...ಅಂತು.
ಈ ಮಂಜಜ್ಜಂಗೆ ಪುರುಸೊತ್ತಿಲ್ಲೆ ಅವ ಕೂಸು ಬಪ್ಪೂದ್ರೊಳಗೇ ಬೇಟ್ರೀ ಗಿಳೀಗೂಟದಿಂದ ತೆಗೂಲೆ ಹೋದ.ಯೆಂತಕ್ಕೇ ಅಂದ್ರೆ ದೇಸ್ತನಕ್ಕೆ ಇಂದು ಅಚಾರಕ್ಕೋ,ಮಡ್ವಾಳಕ್ಕೋ ಬತ್ತೋ ಅವರದ್ದೇ ಪಾಳಿ ಬಜ್ಞೆದು, ಅಚಾರಿ ಸುಬ್ಬಿ ಮಗಳು ಚಲೋ ಬಜ್ಞೆ ಹೇಳಕೊಡ್ತು ಹೇಳಿ ಈ ಬಜ್ಞೆಗೆ ರಾಶಿ ಜನ ಬತ್ತೋ ಹೇಳಿ ಯೆಂಗೆ ಕಡೇಗೆ ಗುತ್ತಾತು....!........ಧಡ್.....ಧಡಾಲ್.... ಓ ಬಿತ್ತು.... ಅಷ್ಟೂ ಬಿತ್ತು....... ತಮಾ........ಹೋತೋ...... ಅಯ್ಯಯೊ....ಕಾಲು....ಹೋತು.... ನಾನು..... ನಾಳೆ ಕೋಲೇಜಿಗೆ ಹೋಪ ಅಂಗಿ ತೊಳದಾಕೂಲೇ ಹೇಳಿ ಐನೂರಾವಂದ್ ಸಬಕಾರಾನಾ ತುಂಡ ಮಾಡ್ತಾ ಇದ್ದವ ಇವನ ಕೂಗಾಟ ಕೇಳಿ ಓಡೋದೆ ಹೋಗ್ ನೋಡೀರೆ........
ಮಂಜಜ್ಜ ಮರದ ಬಾಗಲಪಟ್ಟಿ ರಾಶಿ ಅದೀಗೆ ಕಾಲ ಸಿಕ್ಕಿಸಿಕಂಡು ವದ್ದಾಡತ್ನೇ ಇದ್ದಾ...... ಯೆನಗೇ ವಂದ್ ಬಾರಿ ಕಣ್ಕತ್ಲೆ ಬಂದಾಂಗಾತು...... ಅಜ್ಜಾ...... ಯೆಂತದೋ ಇದೂ.... ಅಲ್ಯೆಂತಕ್ಕೆ ಸಾವಲೇ ಹೇಳಿ ಹೋಗಿದ್ಯಾ...... ಯಾರಿಗಾರೂ ಹೇಳೂದಲ್ಲದಾ.... ನಾಇದ್ದೆ ಕೂಸಿದ್ದು ಆಯಿದ್ದು...... ಊಹೂಂ.... ಯೋಳು ಯೆದ್ಕೋ....ಹ...ಸಾವಕಾಶ..... ಹೇಳಿ ಅವನ ಕೈ ಹಿಡಿದು ಎತ್ತೂಲೆ ನೋಡ್ದೆ.... ಅಷ್ಟೊತ್ತೀಗೆ ಅಪ್ಪಯ್ಯನೂ ಬಂದಾ... ಅವ ಸಂಜಪ್ಪಾಗ ವಂದ್ ಸ್ವ್ಲ್ಪಾ ಹೊತ್ತು ಹೆರಬದೀಗೆ ಕಾಲಾಡೂಲೆ ಹೋಗ್ತಾ.... ದಿನಾವಾ......ಅಲ್ಲಿ ಯೆಂಕುಟೀ ಭಾವಾ, ಗಣೇಶ್ ಭಾವಾ... ಶಿದ್ನಮನೇ ಯೆಂಗ್ಟ, ಮಡಿವಾಳ ಮಂಜು ಯೆಲ್ಲಾ ಸೇರೀರೆ,,,,, ವಂದ್ ಆಟಾ ಕೋಟಾಡೂದು,,,,,, ಇಲ್ದೋರೆ... ನಾಕೇ ಜೆನಾ ಆದ್ರೆ ನೋಸ್ಟ್ರಂಪು..... ಕತ್ಲಪ್ಪಕಾರೆ ಮನೆ ಸೇರೂದೇಯಾ.... ಇಲ್ದೋರೆ ಆಯಿ ಬಿಡಕಾತಲೀ....... ಗುರುಗಳಕಿಂತಾ ಛಲೋ ಮಂತ್ರಾಕ್ಷತೆ ಹಾಕ್ತು..ಅದು,,,ಹಾಂಗಾಗಿ ಬಂದ ಬಿಲ್ಯೋ.....
ಮಂಜಜ್ಜ ಮರದ ಬಾಗಲಪಟ್ಟಿ ರಾಶಿ ಅದೀಗೆ ಕಾಲ ಸಿಕ್ಕಿಸಿಕಂಡು ವದ್ದಾಡತ್ನೇ ಇದ್ದಾ...... ಯೆನಗೇ ವಂದ್ ಬಾರಿ ಕಣ್ಕತ್ಲೆ ಬಂದಾಂಗಾತು...... ಅಜ್ಜಾ...... ಯೆಂತದೋ ಇದೂ.... ಅಲ್ಯೆಂತಕ್ಕೆ ಸಾವಲೇ ಹೇಳಿ ಹೋಗಿದ್ಯಾ...... ಯಾರಿಗಾರೂ ಹೇಳೂದಲ್ಲದಾ.... ನಾಇದ್ದೆ ಕೂಸಿದ್ದು ಆಯಿದ್ದು...... ಊಹೂಂ.... ಯೋಳು ಯೆದ್ಕೋ....ಹ...ಸಾವಕಾಶ..... ಹೇಳಿ ಅವನ ಕೈ ಹಿಡಿದು ಎತ್ತೂಲೆ ನೋಡ್ದೆ.... ಅಷ್ಟೊತ್ತೀಗೆ ಅಪ್ಪಯ್ಯನೂ ಬಂದಾ... ಅವ ಸಂಜಪ್ಪಾಗ ವಂದ್ ಸ್ವ್ಲ್ಪಾ ಹೊತ್ತು ಹೆರಬದೀಗೆ ಕಾಲಾಡೂಲೆ ಹೋಗ್ತಾ.... ದಿನಾವಾ......ಅಲ್ಲಿ ಯೆಂಕುಟೀ ಭಾವಾ, ಗಣೇಶ್ ಭಾವಾ... ಶಿದ್ನಮನೇ ಯೆಂಗ್ಟ, ಮಡಿವಾಳ ಮಂಜು ಯೆಲ್ಲಾ ಸೇರೀರೆ,,,,, ವಂದ್ ಆಟಾ ಕೋಟಾಡೂದು,,,,,, ಇಲ್ದೋರೆ... ನಾಕೇ ಜೆನಾ ಆದ್ರೆ ನೋಸ್ಟ್ರಂಪು..... ಕತ್ಲಪ್ಪಕಾರೆ ಮನೆ ಸೇರೂದೇಯಾ.... ಇಲ್ದೋರೆ ಆಯಿ ಬಿಡಕಾತಲೀ....... ಗುರುಗಳಕಿಂತಾ ಛಲೋ ಮಂತ್ರಾಕ್ಷತೆ ಹಾಕ್ತು..ಅದು,,,ಹಾಂಗಾಗಿ ಬಂದ ಬಿಲ್ಯೋ.....
ಇವತ್ತು ಅಪ್ಪಯ್ಯ ಬಗೇಲಿ ಬೇಗ ಬಂದ , ಬಂದವನೇ ಇವನ ಅವತಾರಾ ನೋಡಿ....... ಥೋ..... ಸುಮ್ಮಂಗೆ ಕೂತ್ಗಂಬ್ಲೆ ಹೇಳಿ ಆಗ್ತೇ ಇಲ್ಯಾ ನೋಡ್ವೋ... ಯೆಂತದಾರೂ ವಂದ್ ಹರದೀನಾ ಮಾಡೇ ತೀರೋ ಹೇಳಿ ಇದ್ದಕೋ... ಕೈಲಾಗ್ತಿಲ್ಲೇ ಹೇಳಿ ಗುತ್ತಿದ್ದು..... ಹೀಂಗೇ ಬೈತ್ನೇ ಅಜ್ಜನ ಎತ್ತಿ ಕರಕಂಬಪ್ಪೂಲಕ್ಕೂ ......... "ಧರಮಶಾಲೆ ಪುಟ್ಭಟ್ರು "ಭಾರೀ ವಳ್ಳೇ ಜೆನಾ ಬಿಲ್ಯೋ.......... ಹೋಯ್....ಯಾರ್ರೋ ಮನೇಲಿ.... ಕುನ್ನಿದ್ದನ್ರೋ...!!!!! (ಮನೇಲಿಪ್ಪೋವು ಯೆಲ್ಲಾ....) ಹೇಳಿ ಕೇಳೂದಕ್ಕೂ,,,,, ಆಯಿ ಹಾಲ ಕರಕಂಡು ಶೆರಗಲ್ಲಿ ತಂಬಿಗೆ ಮುಚ್ಚಕಂಡು ಬಪ್ಪೂದಕ್ಕೂ ಸರೀ ಹೋತು,,,,,,,, ಅಷ್ಟರಲ್ಲಿ ಆ ಸೊನಗಾರಮನೇ ಬೇಳೀ ಕುನ್ನಿ ಸರಕ್ಕನೇ ಅಡಗಳತ್ತಕ್ಕು ಆಯಿ ಹೆದರಕಂಡಿ ........ಹಾಲಚೊಂಬಾ ಬೀಳ್ಸೂಲೆ ಕೈಬಿಡುದು ಅಲ್ಲೇ ಅಬಗತ್ತಿ ಹಿಡಕಂಡತು. ಆದ್ರೂ ಹಾಲು ಹನಿ ಚೆಲ್ಲೋತಕು... ಅತೋಪಾ ಈ ಮನೆಹಾಳ್ ಕುನ್ನಿ ....... ಅಷ್ಟು ಹಾಲ್ ಚೆಲ್ಲಾಕ್ತಿತ್ತು ಈಗ.... ಅತೋ... ಪುಟ್ಟಿಮಾವಾ....... ಬಂದ್ಯಾ ...ಬಾ..... ವಳಗಿಟ್ಟಿಕ್ಕಿ ಬತ್ತೇ.... ಹೇಳಿ ವಳಗೋತು ಉಳಿಕೆ ಚೆಲ್ಲಿದ ಹಾಲ ಕುನ್ನಿ ನೆಕ್ಕೂದ ನೋಡಿ ಯೆಮ್ಮನೇ ಕರೀಬೆಕ್ಕು ಅದ್ರ ಹೆದ್ರಸೂಲೆ ಗ್ವಾರ್.... ಗುಸ್... ಕ್ವೇ.... ಹೇಳಿ ಗುರುಗುಟ್ಟೂಲೆ ಬಂತು...
ಮಂಜಜ್ಜ ಹಗೂರಕ್ಕೆ ಕಾಲ ಯೆಳಕಂಡು ಎದ್ದು ಬಂದಾ... ಬಂದವನೇ ...ಕಾಲ ಕುಂಟಾಯಕಂಡೇ ....ಅತೋ ನೀನೂ ಬಜ್ಞೆಗೇ ಬಂದ್ಯೋ..... ಪುಟ್ ಭಾವಾ.... ಈವತ್ತು ಅಚಾರಕ್ಕಳ ಪಾಳಿ ಅಲ್ಲ್ದಾ ನೀ ಬತ್ತೇ ಹೇಳಿ ಯೆನಗೆ ಮೊದ್ಲೇ ಗುತ್ತಾಗಿತ್ತು.... ನೋಡಾ...ಆ ಸುಟ್ ಬೇಟ್ರೀ ತೆಗೂಲೇ ಹೇಳಿ...... ಹೋಗಿ ಯೆನ್ ಕಾಲೂ....... ಅಂತಾನೇಯಾ ಹಗೂರಕ್ಕೆ ಪುಟ್ಟಭಟ್ರ ಮೊಕಾ ನೋಡ್ದಾ.... ಪುಟ್ ಭಾವ ಹಣ್ ಮೀಶೆ ಮೇಲೆ ಕೈಯ್ಯಾಡಿಸ್ತನೇಯಾ...(ಇವ ಬಂದ್ರೆ ತೊಂದ್ರೆಯಾಗ್ತಿತ್ತು) ..... ಹೂಂ..... ಹೌದೋ... ಮಂಜಣ್ಣ..... ಯಾನೂ ಅದ್ಕೇ ಬಂದೆ...... ನೀ ನೋಡೀರೆ ಈ ನಮನೀ ಮಾಡ್ಕಾ ಕೂತ್ಗಂಜೆ.....ಈವತ್ತು ಯಾ ವಬ್ಬನೇ ಸುದಾರ್ಸೂದೇಯನಾ!!! ಅಂಬಾ ಕಾಣ್ತು ನಿನ್ ನೋಡೀರೇ...... ಅಂದ....... ಹೌದೋ........ ಭಾವಾ..... ಭಾರೀ ಛಲೋ ಹೇಳತ್ಳು...ಅಲ್ದನಾ....!! ದೇವರು ಯೆದ್ ಬಂದಾಂಗಾಗ್ತು!! ಮಾರಾಯಾ.... ಯೆನ್ ಕಾಲು..... ಸಾಯಲಾ ಹೆಜ್ಜೆ ಕಿತ್ತಾಕೂಲೆ ಅಪ್ಪ ನಮನೀ ಕಾಣ್ತಿಲ್ಯೋ.... ನೀ ಹೋಗು ಮುಂದೆ..... ಕೂಸನ ಕೂಡೆ ಹನಿ ಜಂಡೂ ಬಾಮಾರೂ ಹಚ್ಚು ಹೇಳ್ತೇ.... ತಂಗೀ...... ಇಲ್ಬಾ..... ಅಲ್ಲಿ ನಾಗಂದಿಗೇ ಮೇಲೋ ಮಾಡ್ಗುಳೀಲೋ ಬಾಟ್ಳಿ ಇದ್ದು ತಗಬಾ... ಅಜ್ಜಂಗೆ ಬಗೇಲಿ ಹಚ್ಕೊಡೂ ನೋಡ್ವಾ..... ಅಂದ... ಕೂಸು .....ಬಾಟ್ಳೀ ತಂಜಿಲ್ಲೆ!! ತಂದ್ರೆ ಪುಟ್ಟಜ್ಜಂಗೂ ತಲ್ನೋವಿದ್ದಿರ್ತೂ ಹೇಳಿ ಗುತ್ತಿದ್ದು ಕೂಸೀಗೆ.....ಸೋದೇಮನೆ ....ಯೆಲೆ ಗಣಪತ್ನಾಯ್ಕ ಸುಣ್ಣಕಾಯಂಡೇ ಸುಣ್ಣ ಗೋರದಾಗೇ ಕೆರಟಿ ಮೆತ್ಕಂಬುಡತಾ...ಅವ....... ಕೈ ಬೆರಳೀಗೆ ಮುಲಾಮ ಹಚ್ಕಂಡು ಬಂತು....... ಪುಟ್ಟಭಟ್ರು... ಬೀಸಗಾಲ ಹಾಕಿ ದೇಸ್ತನಕ್ಕೆ ಹೋದ್ರು... ಕಡೇಗೆ ತಪ್ಪೋಗ್ತು ಅಚಾರಿ ಮಗೂ ಬಜನೆ ಹೇಳಿ... ಅಪ್ಪಯ್ಯ ಕೊಟ್ಗೇಗೆ ಹುಲ್ಲಾಕೂಲೆ ಹೋದ...... ನಾನು ಅಂಗೀಗೆ ಇಸ್ತ್ರಿಗೆ ಮಾಡೋ ಹೇಳಿ ಕೈಚೊಟ್ಟಲ್ಲಿ ಕೆಂಡ ಹಾಯಕಂಡು ಬಪ್ಪಲೆ ಬಚ್ಚಲ ಮನೇಗೆ ಹೋದೆ.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ