प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 1, 2012

* ಹಕ್ಕೆಹೊಳ್ಳಿ.........!!!

ಹವೀಕರ ಹಕ್ಕೆಹೊಳ್ಳಿ.........!!!

ಯೆಂಗ ಹವೀಕರು ಹೇಂಗೆ ಅಂದ್ರೆ 
ಯೆಮ್ಮನೀಗೆ ಬಂದ್ ಭಾವನ ಕರಕಂಡು 
ಆಚಿ ಮನಿ ಅತ್ಗೆ ಮಾತಾಡ್ಸ್ಗ್ಯ ಬಂದಾಂಗಾತು ಹೇಳಿ 
ಅವರ ಮನಿ ಹಕ್ಕೆ ಹೊಳ್ಳಿಲಿ ಕುಂತು ಅಲ್ಲಿದೇ ಕವಳಾನೂ ಹಾಕ್ಯಂಡು 
ತುದೀ ಮನಿ ಕೂಸಿನ್ ನೋಡಾಲೆ ಸಣಕಲ ಮಾಣಿ ಬಂದಿದ್ದ 
ಈ ಕೂಸೀಗೆ ಡಾಕ್ಟರು ಇಂಜಿನೀಯರೇ ಆಯೆಕ್ಕಡ. 
ಆನೂ ಹೇಳಿದ್ದಿ ಕೂಸೇ ಇನ್ನೂ ವಂದೆರಡು ವರ್ಷ ತಡ ಆದ್ರೂ 
ಚಿಂತಿಲ್ಲೆ ನೀ ಹಾಂಗೇ ಮಾಡೂ ಹೇಳಿದ್ದಿ.ಹೇಳಿ 
ಯಾರದೊ ಮನೆ ಸುದ್ದಿ ಅವರಮನೇಲಿ ಹೇಳಿಕ್ಕಿ ಬಪ್ಪಕಾರೆ 
ಹೊಗೆಸಪ್ಪ ಅಂಡಿನೇ ತೆಗದು ಕಿಶ್ಗೆಗೆ ತುರ್ಕ್ಯ ಬತ್ಯ. 
ಇಲ್ಲಿ ನೋಡೀರೆ ಯೆಮ್ಮನಿ ಕೂಸು ಬಳೆ ಸಾಬನ ಕೈಲಿ ಬಳಿ ವಂದೇ ತುಂಬಿಸ್ಕ್ಯಂಜಿಲ್ಲೆ .....
...... ಅದನ್ನೂ ತುಂಬಿಸ್ಕ್ಯಂಡು ಅಪಾ....... ಹೇಳ್ತು . ಯೆಂತ ಮಾಡಿ ಸಾಯವೇ? 
ಅಡ್ಕೀಗೆ ದರ ಇಲ್ಲೇ ಯೆಂತಾ ಮದ್ವ ಮಣ್ಕಾಲ್ ಮಾಡೂದನಾ ಹೇಳಕರೆ 
ಈ ಭಾವಂಗೆ ಕೂಸಿನ್ ನೋಡಾಲೆ ಬಂದವಂಗೆ 
ಅಡ್ಕೆ ದರ ಹೆಚ್ಚಾದ್ರೂ ವಂದೇಯಾ ಕಮ್ಮಿಯಾರೂ ವಂದೇಯಾ 
ಅವ ಬೆಂಗ್ಳೂರಲ್ಲಿ ಬದ್ಕವ ಹೇಳದು ಮರ್ತು ಹೋಗಿರ್ತು!!!! 
ಥತ್ತೇರಿಕೆ...............................!!!!!!!!

2 ಕಾಮೆಂಟ್‌ಗಳು:

  1. ಆಹಾ, ಸೂಪರ್, :) ಧನ್ಯೋಸ್ಮಿ..ಹಕ್ಕೆಹೊಳ್ಳಿ ಅಂದ್ರೆ ಜಗಲಿನಾ ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಜಗುಲಿಯ ತುದಿಯಲ್ಲಿ ಕಟ್ಟಿರುವ ಓರ್ವ ಮಲಗಬಹುದಾದಷ್ಟು ದೊಡ್ಡದಾದ ಮಂಚದಂತಿರುವ ಚಿಟ್ಟೆ.="ಹಕ್ಕೇಹೊಳ್ಳಿ"
      ಅಂಡೆ= ಸುಣ್ಣ-ಹೊಗೆಸೊಪ್ಪನ್ನು ಸದ್ಯಕ್ಕೆ ಬೇಕಾದಷ್ಟು ತುಂಬಿ ಎಲೆಯಡಿಕೆ ತಟ್ಟೆಯಲ್ಲಿ ಇಟ್ಟಿರುವ ಡಬ್ಬ.

      ಅಳಿಸಿ