...........ತುಂಬು ಕೂದಲಿನ ತಂಗಿಯ ತಲೆಬಾಚಿ ಜಡೆ ಹಾಕುತ್ತಿರುವ ಪ್ರೀತಿಯ ಅಣ್ಣನ ಎದುರು ಸಂತಸವನ್ನನುಭವಿಸುತ್ತಿರುವ ತಂಗಿ ಅವಳು........ ಎಂಥಾ ಪ್ರೀತಿ... ಎಂಥಾ ನೋಟ.... ನಿಮಗಾರಿಗೂ ಇಲ್ಲದ ಭಾಗ್ಯ ನನಗೆ ಸಿಕ್ಕಿದೆ ಎಂಬ ಉಲ್ಲಾಸದ ನೋಟ ಅದು.ಎಷ್ಟು ತಾದಾತ್ಮ್ಯ ಅಣ್ಣನದು ತಂಗಿಯ ಒಂದೊಂದು ಕೂದಲೂ ಸಿಕ್ಕಾಗದಂತೆ ನೋಡಿ ನೋಡಿ ಹೆಣೆಯುತ್ತಿದ್ದಾನೆ ಜಡೆಯನ್ನು. ನನ್ನ ತಂಗಿ ಹೇಗಿರಬೇಕು... ಜಗ ಮೆಚ್ಚುವಂತಿರಬೇಕು.... ಆಹಾ..ಆಹಾ...ಇದು ನಾವು ನೀವು ಅನುಭವಿಸಬೇಕಾದ್ದು,,,,,,ಅಲ್ಲವೇ?
ಬ್ಯಾಡಾ........ಮುಂದೆ ನನ್ನ ಹೆಂಡತಿಯಾಗಿ ಬರುವವಳ ಕೊರಳಹಿಂಭಾಗವನ್ನ ಲಂಕರಿಸುವ ನೀಳ ಕೇಶರಾಶಿಯನ್ನು ತನ್ನ ಕೈಗಳಿಂದಲೇ ಸವರಿ ಜಡೆ ಹಾಕಿದರೆ.... ಆ ಹೆಂಡತಿ ಪಡುವ ಖುಶಿ....... ಗಂಡನ ಬರುವಿಕೆಯನ್ನು ಹೇಗಾದರೂ ಕಾದಾಳು ಬಂದ ಗಂಡ ಹೀಗೆ ಒಂದು ಬಾರಿ ತನ್ನ ತಲೆ ನೇವರಿಸುತ್ತಾನೆಂದರೆ.ಅವಳಿಗೂ ಅನ್ನಿಸುವುದಿಲ್ಲವೇ....ಇಂತಹ ಗಂಡನಿಗೆ ತನ್ನ ಸರ್ವಸ್ವವನ್ನೂ ಅರ್ಪಣ ಮಾಡಬೇಕು ಎಂದು...ಆಹಾ....ಆಹಾ....ಎಂಥಾ ಸರಸ ದಾಂಪತ್ಯ....ಇದು ನಾವು ನೀವು ಅನುಭವಿಸಬೇಕಾದ್ದು...ಅಲ್ಲವೇ.. ?
.. ಹೀಗಿದ್ದರೆ ಸಾವಿಗೆ ಅಂಜಬೇಕೇ?.. ಬದುಕು ಇನ್ನೂ ನೂರು ವರ್ಷ ಹೆಚ್ಚಿರಲೀ ಎಂದೆನಿಸುವುದಿಲ್ಲವೇ..?...........ಅನುಭವಿಸಬೇಕು ಕಣ್ರೀ.... ಮುಗಿದು ಹೋಗಿಬಿಡುತ್ತೆ...ಮತ್ತೆ ಸಿಗೋದಿಲ್ಲಾ....
....ಇಲ್ಲಾ.. ನಾ ವು ಅವೆರಡನ್ನು ಇದ್ದರೂ ಅನುಭವಿಸದೇ ಕಾಲಕಳೆದಿದ್ದೇವೆ...... ಈಗ ಹಪ ಹಪಿಸುತ್ತೇವೆ....ಸಿನಿಮಾ, ಧಾರವಾಹಿಗಳಲ್ಲಿ ಗಂಡು-ಹೆಣ್ಣು ಡ್ಯಾನ್ಸ್ ಮಾಡುವುದನ್ನು ನೋಡಿ ಬೆಚ್ಚಗಾಗುತ್ತೇವೆ... ನಮ್ಮ ಹೆಂಡತಿ ಮನೆಯಲ್ಲಿ ಬಾಗಿಲು ತೊಳೆದು ರಂಗೋಲಿಯಿಕ್ಕಿ ಕಾಯುತ್ತಿರುತ್ತಾಳೆ... ಪುರುಷಪುಂಗವ ಬರುವನೆಂದು ..ಅವಳೊಂದಿಗೆ ಡ್ಯಾನ್ಸ್ಮನೆ ಹಾಳಾಗಿ ಹೋಗಲೀ ಪೇಟೇ ಸುತ್ತುವುದಕ್ಕೂ ಪುರುಸೊತ್ತಿಲ್ಲ.ಇಷ್ಟುಒಳ್ಳೆಯವರೆನಿಸಿಕೊಳ್ಳಲು ಹರಸಾಹಸ ಪಡುತ್ತಿರುವ ,ಒಂದೇ ತಲೆಯಿರುವ ನಮಗೇ ನೂರಾರು ದುಷ್ಟ ಆಲೋಚನೆಗಳು ಸುನಾಮಿಯಂತೇ ಬರುವಾಗ .......ಅಯ್ಯೋ ಆ ಹತ್ತು ತಲೆಯ ರಾವಣ..... ಅವನಿಗೆಂಥಾ ಆಲೋಚನೆಗಳು ಎಷ್ಟು ಬರಬೇಡಾ......!!!!!!!!!!!!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ