प्रज्वालितॊ ज्ञानमयप्रदीपः

ಸೋಮವಾರ, ಏಪ್ರಿಲ್ 2, 2012

* ಪಾಗಾರದಂಥ ಹಾಳಿಕಂಟ,!! ಅಪ್ಪೇಹುಳಿ ಪೇಲೆ ತಟ್ಟೆ...!!

ಪೇಲೆ ತಟ್ಟೆಯ ಪುಣ್ಯ ಪ್ರಸಂಗ...!

   ಮನೆಯ ಹಕ್ಕೇಹೊಳ್ಳಿ ಮಾರುದ್ದ  ಇದ್ದಿತ್ತಾ............. ಅಪ್ಪಂಗೆ ವಯಸ್ಸಾಗಿತ್ತು.ಹಕ್ಕೇಹೊಳ್ಳಿ ಅಪ್ಪನ ಮಂಚವಾಗಿತ್ತು....... ಸೇರಿದರಲ್ಲ....... ಅಪ್ಪನ ಹಳೇ ಗ್ಯಾಂಗು..... ಹುಲೀ ಭಟ್ರು,ಮರಿ ಭಟ್ರು, ಚೌಕಿ ಭಟ್ರು ಚೆಕ್ಕೆ ಭಟ್ರು, ಅವಧಾನಿ ನಾರಣಭಾವ ಕಡೇಗೆ ಬಂದ...... ಅವಂಗೆ ಕೇಟು,ನೋಸ್ಟ್ರಂಪು...... ವಂದ್ ಪೇಲೆ ಮಜ್ಗೆ, ಇದ್ರೆ ಸಾಕಾಗಿತ್ತು.... ನಾಕ್ ದಿನಾನಾರೂ ಊಟದ ಗೊಡವೆ ಇದ್ದಿತ್ತಿಲ್ಲೆ.ಅಂತೂ ಯೆಲ್ಲಾ ಸೇರಿದ್ವಲಿ,.... ಹಾ... ಯೆಂತದಾರೂ ಇದ್ದನೋ ...? ನಾರಾಣ ಭಾವ ಚರಾ....ಪರಾ...ಅವಾಜ್ ಮಾಡು ಮೆಟ್ಟ ಕಾಲಿಂದ ವತ್ತಾಯ ಮಾಡಿ ಕಳಚೂಲೆ ಶುರು ಮಾಡ್ಕತ್ನೇ ಕೇಳ್ದಾ.....ಅರೇ.... ನೀ ಬರಾಕರೆ  ಅಲ್ಲೇ ಯೆಂಕುಟೀ ಭಾವನ ಕರದಿಕ್ಕಿ ಬಂದ್ಯೋ ಇಲ್ಯೋ?... ಅವ ಕಡೇಗೆ ಬೇಣ ತಿರ್ಗೂಲೆ ಬಂದಾಗಾರೂವ ಇಲ್ಲಿ ನಾಣಭಾವ... ಬೇರೆ ಭಟ್ಟಕ್ಕೋ ..ಯೆಲ್ಲಾ ಇದ್ದಿದ್ದೋ ಹೇಳಿ ಗುತ್ತಾದ್ರೆ... ಮಡಿವಾಳ ಮಂಜು ಮನೇವರೇಗೂ ಮಳ್ಕುನ್ನಿ ತಿರಗದಾಂಗೇ ತಿರಗಿ ಹಲಬಿಕ್ಕಿ ಬತ್ತಾ ಬಿಲ್ಯೋ... ಅಪ್ಪನ ದುಗುಡದ ನುಡಿ.
     ಅಂತೂ ಸೇರಿದ ಭಟ್ಟಕ್ಕೊ ಯೆಲ್ಲಾ ಲೆಕ್ಕ ಹಾಕೀರೆ ನಾಕಕ್ಕೆ ಹೆಚ್ಚು ಎಂಟಕ್ಕೆ ಕಡ್ಮೇ.... ಯೆಂತಾ ಮಾಡೂದೋ ಚೆಕ್ಕೇ.... ಹುಲಿ ಭಟ್ರು ಚೆಕ್ಕೇ ಮುಖ ನೋಡದ್ರು. ಅಡ್ಡಿಲ್ಯಾ ಈಗ ಯೆಂಕುಟೀ ಭಾವ ಬಪ್ಪಲ್ಲೀವರೇಗೆ ನಾವು ಕುರಡನ ಇಟ್ಕಂಡಾರೂವಾ ಆಡ್ವೋ. ಹೊತ್ ಹಾಳ್ ಮಾಡೂದು ಬೇಡ....... ಇಂತಿಪ್ಪಾಗ ಅಬ್ಬೆ .....ನಿಗೊಕ್ಕೆಲ್ಲಾ ಚಾ ಅಕ್ಕೋ ಮಜ್ಗೇ ನೀರಡ್ಡಿಲ್ಯಾ? ಕೇಳ್ತು......... ಅತ್ಗೇ... ಈ ಬಿಶಲುರೀಲಿ ಯೆಂತಾ ಚಾವೇ. ಯೆಂತದೂ ಬೇಡ ಮೊದ್ಲು ಮಂಡ್ಳ ಶುರುವಾಗ್ಲೀ. ಕಡೇಗೆ ಬೇಕಾರೆ ನೋಡ್ವೋ ಅಂದ ಚೌಕಿ ಭಾವ . ಅವ ಚಾನೂ ಕುಡಿತ್ನಿಲ್ಲೆ... ಪಿತ್ತಾಗೋಗ್ತು..! ಮಜ್ಗೆನೀರೂ ಊಹೂಂ.... ಥಂಡಿಯಾಗ್ತು ........ಅಕ್ಕಳಪ್ಪಾ  ನೀ ಹೇಳ್ದಾಂಗೇ ಯೆಂಕುಟೀ ಬಾವ ಬಂದೇ ಬುಟ್ಟಾ.... ಹಚ್ಚು ಹಚ್ಚು.. ಬೇಗ ಅವಮ್ಗೂ ಇರ್ಲೀ. ವಂದ್ ಕೈ.. ಮುರೀ ನೋಡ್ವಾ.....  ರಾಂಭಾವ ಅಂಗೋಸ್ತ್ರಪಂಜಿಲಿ ನೆಲದ ಧೂಳ ಹೊಡದಾ.... ಬಾ... ಭಾವಯ್ಯಾ... ನಿಂಗೇ ಹೇಳ್ ಕಳಸೋ ಹೇಳಿ ಆ ತಂಗಿ ಹತ್ರ ಹೇಳಿದ್ದಿದ್ದೆ ಅದು ಹಬ್ಬಲಿಗೆ ದಂಡೆ ಮೇಡೂಲೆ ಶುರುಮಾಡ್ಕಂಜು ..... ನಾ ಹೋಗತ್ನಿಲ್ಲೆ ಅಣ್ಣಯ್ಯಂಗೆ ಹೇಳು ಅಂತು. ಅವ ಮಳ್ಳ ಯೆಲ್ಲಿ ಹೋಜ್ನನಾ.. ಹೆಕ್ಕೂಲೆ.. ಬಾ...ನೀನು...ಹಚ್ಚಿಕಿದೋ....... ಅಂದ ಚೌಕಿಭಟ್ಟಣ್ಣ. ಅಂತೂ ಯೆಲ್ಲರೂ ಕೂಡದೋ ಹೇಳಾತು.
        ಮರಿ ರಾಂಭಾವಂಗೆ ಮೂವತ್ ನಂಬರ ಬೀಡಿ ಸೇದು ಚಟ... ತಡೆ ಬಂದೆ... ನಿಂಗೊ ಮುಂದ್ವರ್ಸೀ ಅಂದ... ಗಂಜೀಪರಾಕನ ಕಿಸ್ಗೇಲಿ ಕೈ ಇಟ್ಕಂಡು ಅಚೇಬದೀಗೆ ಹೋದ....... ಅಲ್ಲಿ ಬೆಂಕಿ ಬಿತ್ತು ಹೇಳಿ ಯೆಲ್ಲರಿಗೂ ಗುತ್ತಾತು. ಹೊಗೆ ಹಕ್ಕೆಹೊಳ್ಳಿ ಮೂಲಿಂದ ಮೇಲೇಳುಲೆ ಶುರುವಾತು... ಅಲ್ಲಿಂದಾನೇ ಕೂಗದಾ ಅಥೋ ನಾಣಭಾವಾ.... ಯೆಮ್ಮನೇ ಗಪ್ಪತ್ತಿ ಮೈಸೂರಿಂದ ಬರಾಕರೆ ಛಲೋ ಬಂಗಿಸೊಪ್ಪ ಹಿಡ್ಕಾ ಬಂದಿದ್ದಾ..... ಅದು ಯೆಮ್ಮನೇ ಪ್ರೇಣಿಗೆ ಗುತ್ತ್ತಿಲ್ಲೆ  (ಹೆಂಡತಿ) ಬಿಲ್ಯೋ.......ತರಸಲನೋ....?... ಹಾಂ.... ತರಸಾ... ನೋಡೇ ಬುಡ್ವಾ ವಂ ದಮ್ಮಾ.... ಅಂದ ಯೆಂಕುಟೀ ಭಾವ. ....ಯೇ ಮಾಣೀ... ಮಾಣೀ... ಬಾರಾ ಇಲ್ಲಿ... ಗೌಜಿ ಮಾಡೂಲೆ ಇಲ್ಲೆ ಸುಮ್ಮಂಗೆ ಯೆಮ್ಮನೆಗೆ ಹೋಗಿ  ಅಲ್ಲಿ ಹೊಗೆಸೊಪ್ಪನ ಅಂಡ್ಗೆ ಯೆಲ್ಲಿದ್ದು ಕೇಳು ..ಯೆಮ್ಮನೆ ಸಾವಿತ್ರಿಯಾ... ಅದು ತೋರಸ್ತು...ತೆಕ್ಕೊಡ್ತಿಲ್ಲೆ ಅದ್ಕೆ ಅದರ ಪರಮಾಳ ಆಗ್ತಿಲ್ಲೆ ..... ನೀ..ಹೋಗಿ ಅಡೀಗೆ ಕೈ ಹಾಕು ಅಲ್ಲಿ ಒಂದು ಪೊಟ್ಳ ಇದ್ದು ಅದರ ತಕಂಡು ಬಾ ... ಯೆಮ್ಮನೇದು ಕೇಳಿರೆ 'ನಮ್ಮಲಿ ಮಲಬಾರದ ಹೊಗೆಸೊಪ್ಪಿಲ್ಯಲೇ ಬಾಂದ್ರಿ!... ಅಪ್ಪಯ್ಯ್ಯ ತಿಂಬುದು... ಅದ್ಕೇ ರಾಮಜ್ಜ ಕಳಿಸಿದಿದ್ದ ಹೇಳು' ಚೆಡ್ಡಿಕಿಶೇಲಿ ಹಾಯ್ಕಾಂಡು ಬಾ.... ತಮಾ ಬೇಗ ಹೋಗು ಶಂಜಾಗೋಗ್ತು ಕಡೇಗೆ ...ಅಂದ ಮರಿ ರಾಂಭಾವ....
      ಮಾಣಿ ಸತ್ನೋ- ಬಿದ್ನೋ ಹೇಳ್ವಾಂಗೇ ಹಾಳಿಕಂಟ ಹಾರಕಂಡು ಓಡೋದ ರಾಮಜ್ಜನ ಮನೇಗೆ..... ಅವಂಗೂ ಅದೇ ಬೇಕಾಗಿತ್ತು ಅಲ್ಲಿ ಸಾವಿತ್ರಿ ಇದ್ದಿತ್ತು!!! ಕೂಸು ಶಾಲೆ ವಿದ್ಯದಲ್ಲಿ ಹಿಂದಾರೂವ ಬಾಕಿ ಮನವಾರ್ತ್ನೆ ಲಾಯಕ್ ಮಾಡ್ತಿತ್ತು ನೋಡೂಲೂ ಅಂಥಾ ಕುರೂಪಿ ಯೇನಲ್ಲ ಬಿಡು..! ಪಡಸಾಲಿ ಜೈರಾಮ ಪ್ರತೀ ವರ್ಷ ಕೆಕ್ಕಾರ ತೇರಲ್ಲೂ ಸಾವಿತ್ರಿಗೆ ಬಳೇ ಕೈಗಿಡಸತಿದ್ದ, ಈವರ್ಷನಾರೂ ಇದ್ದನೇ ಹೇಳಿ ಕೇಳ್ತಿದ್ದ. ಸಾವಿತ್ರಿ ಥು...ಹೋಗಾ ಜೈರಾಮಾ... ನಾ ಮದ್ವೆ ಗಿದ್ವೆ ಯೆಲ್ಲ ಆಗೂದಿಲ್ವಾ.... ನೀ ಬಳೆ ತುಂಬಸಿ ಕೊಡು ಕಡೇಗ್ ನೋಡ್ವೋ.. ಹೇಳ್ತಿತ್ತು ಸಾವಿತ್ರಿ... ಅದ್ಕೂ ಮಾಣಿ ಅಂದ್ರೆ ವನ್ನಮೂನಿಯಾ ....ಅದೇಯಾ....
   ಅಂತೂ ಮಾಣಿ ಓಡಬಂದು ...ಉಫು...ಉಫುಉ ..ಹೇಳಿ ಏದುಸ್ರು ಬಿಟ್ಟ.. ........ಸಾವಿತ್ರೀ !....ತಾತೀ..ತಾತೀ!!!... ಅಂದ.. ಸಾವಿತ್ರೀಗೆ ಅವ ಸಾವಿತ್ರೀ ಹೇಳಿ ಕರದ್ದು ಕೇಳ್ಸಿದ್ದಿಲ್ಲೆ ಅದೇ ತಾತೀ...! ಹೇಳದಕೂಡ್ಳೇ ಓ.....ಬಂದೆ.... ಅಂತು.... ಓಡಬಂತು ಹೆರಂಗೆ....ಆ ಕರೆಯುವ ದೆನಿ..... ಅವ್ಳಲ್ಲಿ ಒಂದ ರೀತಿ.... ಜುಂ.... ಅನ್ನಸ್ತು ಅಂಬಾ ಕಾಣ್ತು..... . ಅಥೋ... ಯೆಂತದೂ...? ಕಣ್ಣಲ್ಲೆ ಕೇಳ್ತು ಮಾಣಿಯಾ.... ನಿಮ್ಮನೇ ಹೊಗೆಸೊಪ್ಪನ ಅಂಡಿಗೆ ಯೆಲ್ಲಿದ್ದೇ??.... ಅಯ್ಯೋ ಶಿವನೇ   ನಾ ಯೆಂತದೋ ಹೊಸಾ ವಿಷ್ಯ ಇದ್ದು ಹೇಳಿ ಓಡೋಡಿ ಬಂದೆ.  ಪಲಕಾರಾ ಹೊಲೀತಾ ಇದ್ದಿದ್ದೆ.. ನಾಡದೀಗೆ ಅಕ್ಕನ ಮಗಂಗೆ ಅನ್ನ ಹಾಕೂದಲಿ.... ಪಲಕೆಲ್ಲಾ ಹಿಡೀತಿತ್ತು ಹೊಲಗೇ ಬಿಡ್ಸಿ ದೊಡ್ಡ ಮಾಡಕತ್ನೇ ಇದ್ದಿದ್ದೆ....... ಸಾವಿತ್ರಿ ಪಲಕು ಪಲಕಾರಾ ಹೇಳದ್ದೇಯಾ ಮಾಣಿ ಮೀಶೇಲೇ ನೆಗೆಯಾಡ್ದ...!....ಆದ್ರೂ ರಾಂಭಾವ ಹೇಳದ್ದು ಮರದ್ನಿಲ್ಲೆ....ಯೆ...ಹೊಗೇಸೊ.....?.... ಇಲ್ಲೇ ಮೇಲೆ ನಾಗಂದಿಗೆ ಮೇಲೆ ಇದ್ದು ,,, ನನಗೆ ಮುಟತಿಲ್ಲೆ.. ಅಂತು ಸಾವಿತ್ರಿ.......ಅಲ್ಲೇ ಸ್ಟೂಲ್ ಹತ್ಕಂಡು ತೆಗೆಯೇ....... ಅಂದ...ಮಾಣಿ..!! .... ಅದು ಮೇಲೆ ಹತ್ತದಾಗ ಇವಂಗೆ ಯೆಂತಾ ಕೆಲ್ಸಾ...? ಗುತ್ತಾಜಿಲ್ಲೆ..!!!!!! ಇಲ್ಯಪ್ಪಾ.. ನನಕೂಡಾಗಾ... ಬೇಕಾರೆ ತೆಕಂಡು ಹೋಪ್ಲೆ ಅಡ್ಡಿಲ್ಲೆ ಅಂತು ಸಾವಿತ್ರಿ... ಮಾಣಿ.... ಅಂಡ್ಗೆ ಅಡೀಗೆ ಕೈ ಹಾಕಿ ತೆಗದಾ..... ಕಿಶೇಲಿ ಹಾಯ್ಕಂಡಾ.... ನಾ ಬತ್ನೇ ತಾತೀ.....ಅಂದ..  ಹಂ... ಮನೇಲಿ ರಾಶಿ ಜನ ಇದ್ದೊ... ನಾಳೆಗೆ ಅಲ್ಲಿಗೆ ಹೋಪ್ಲೆ ಬಂಜೋ... ಅಕ್ಕಾ....!!!!! ಆತು ...... ಮಾಣಿ ಹೊರಟ... ಆದ್ರೂ ಹೊಲಿತ್ನೇ ಇದ್ದ ಲಂಗ ಪಲ್ಕೀ ನೇ ಅವನ ಕಣ್ಣಲ್ಲಿ ತುಂಬಕಂಡಿದ್ದಿತ್ತು!!!!! ಅದು ಹಿಂದಿನ ತಿಂಗ್ಳು ಪ್ರಕಾಶಣ್ಣನ ಮದ್ವೇಲಿ ಉಟ್ಕಂಡ ಪತ್ಲಕ್ಕೆ ಯೆಂಥಾ ಸರೀ ಮ್ಯಾಚಾಗ್ತು ಅಂದ್ರೆ....... ಹಾಗೇ ಸಾವಿತ್ರೀ ಯೋಚ್ನೇಲೇ ಹಾಳಿಕಂಟ ದಾಟ್ದಾ... ಧಡಂ..... ಅಯ್ಯೊಯ್ಯೋ... ಬಿದ್ಬುಟಾ..... ಗೆದ್ದೆ ಬೈಲಲ್ಲಿದ್ದ ಒಂದ್ ಕೊಯ್ದ ಭತ್ತದ ಕೂಳೆ ತೊಡೆ ಸಂದೀಗೆ ಹೊಕ್ಕೋತು........ ಅಯ್ಯೋ ರಕ್ತಾ..... ಆದ್ರೂ.... ಅಲ್ಲೇ ಇಪ್ಪ ಯೆಂತದೋ ಯೆಲೆ ರಸ ಹಚ್ಕಂಡು ಓಡ ಬಂದು ರಾಮಜ್ಜಂಗೆ ಪೊಟ್ಳ ಕೊಟ್ಟಿಕ್ಕಿ ಬಚ್ಚಲಮನೇಗೆ ಹೋದ... ಕಾಲಿಂದಾ ಬತ್ನೇ ಇಪ್ಪಾ ರಕ್ತ ಸಾವಿತ್ರಿ ಪಲ್ಕೀ ಬಣ್ಣನೇ ಇದ್ದು ಹೇಳಿ ಮನಸಲ್ಲೇ ನೆಗೆ ಬಂತು.... ಮಳ್ ಸತ್ತವಂಗೆ....
    ರಾಂಭಾವ ಮಾಣಿ ತಕಾಬಂದಾ ಪೊಟ್ಳಾವಾ ಹಗೂರಕ್ಕೆ ಬಿಚ್ಚಿ ಪಟ್ಟುವ ವಂದೇ ಕೈಲಿ ಹಿಡ್ಕಂಡಿ ತೋರ್ಸದಾ....... ಅರೆರೆರೇ..ಹೌದಲೋ...... ಚಿಮಣಿ.......?   ..... ಚೆಕ್ಕೇ ಭಾವ..  ಬಾಯಿ ಬದೀಗೆ ಬಂದ್ ಕವಳಾವ ಅಂಗೋಸ್ತ್ರಕ್ಕೆ ವರಸಿ ಕೇಳದಾ. ಯೆಮ್ಮನೇಲಿದ್ದಾ...... ಅಂದ.... ಕೇಟು........ ಕೊಡ್ತಾ...ತನಿ.......ಯಾರಾರು ಇದ್ವಾ.... ಪಟ್ಟು ಕೌಂಚಿಟ್ಟಿಕ್ಕಿ ಚೌಕಿ ಭಾವ ಮೇಲೆದ್ದ.. ತಡೇ ಹನಿ ಉಚ್ಚಿ ಹೊಯ್ಕಾ ಬತ್ತೆ!.... ಎದ್ದೋದಾ.. ಚಿಮಣಿ ಬಂತು....! ಬೆಂಕಿ ಪೊಟ್ಣ ರಾಂಭಾವನ ಗಂಜೀಪರಾಕಿಂದ ಹೆರಗ ಬಿತ್ತು...!..... ಚಿಮಣೀಗೆ ಬಂಗಿಸೊಪ್ಪು ತಿಕ್ಕಿ ತಿಕ್ಕೀ ತುಂಬ್ಸಾತು.... ಯೆಂಕುಟೀ ಭಾವಂಗೆ..... ಬೆಂಕಿ ಬಿತ್ತು, ಚಿಮಣೀಗೆ.... ಹಾಂಗೇ ಉಚ್ಚಿ ಹೌವಲೆ ಹೋದ ಚೌಕಿ ಬಾವ ತಿರಗಿ ಬಂದ... ಅವನ ಪಂಜಿ ತುದಿ ವದ್ದೆಯಾಗಿತ್ತು.. ತುದೀಗೆ..!!!? ಸುತ್ಲು ಕುಂತ್ಕಂಡು ವಬ್ಬರಾದಮೇಲ್ ಒಬ್ಬರಂತೇಯಾ ಚಿಮಣಿ ಬಾಯಿಗಿಟ್ಟೊ ಮುದುಕರು!!! ಯೆನಗೇ... ಈ ದ್ರೌಪದಿ ಸ್ವಯಂವರದ ನೆನಪಾಗೋತು!!!!! ಆ ಪಂಚ ಪಾಂಡವರು ವಬ್ಳೇಯಾ ದ್ರೌಪದಿ.........ಹಿಹ್ಹಿಹ್ಹೀ...ಇಲ್ಲೂ ಚಿಮಣಿ ವಂದು ಇವು ಎಂಟೂ.....ಅರೆರೇ...
      ಅಂತೂ ಚಿಮಣೀಲಿ ಹೊಗೆ ಬಪ್ಪುದು ಕಡಿಮೆಯಾಗೋತು.........ಅತೋ ಮುಗ್ದೋತಕಾ....ರಾಂಭಾವಾ..... ಇನ್ನೂ ಹನಿ ಸೊಪ್ಪಿದ್ದಕಾ ಕೊಟ್ಟೇಲಿ... ಅದ್ನೂ ತುಂಬು ಯೆಂಕುಟೀ ಭಾವಾ..ಹೇಳ್ದಾ...ಚೆಕ್ಕೆಭಾವ..... ಹೌದೋ...ಇದ್ದು...ಕಾಳಾವರ ಎಕ್ಕನೇ ಹೆರ್ಶೀ..... ಇನ್ನೂ ವಂದ್ ಪಟ್ಟು ಆಗವಕಾ...ಸಾಯಲೀ...... ತುರ್ಪು....ಕಾಲಿ ಆಗೋಜು...... ಇಳತಾ ಯಾರದೋ..... ಒಬ್ಬರೂ ಮಾತಾಡೂ ನಮನೀ ಇಲ್ಲೆ....... ಮಾತಾಡೀರೂ ಅದು ಯೆಲ್ಲೆಲ್ಲಿಗೋ ಹೋಗಿ ...ಕಡೇಗೆ..... ಶಿದ್ದನಮನೆ ಯೆಂಗ್ಟ- ಸೊನಗಾರ್ ವಿಟೋಬಶೇಟ್ಟಿ.... ಆಚಾರಿ ಲಕ್ಷ್ಮೀವರೆಗೆ ಹರದಾಡೂಲೆ ಶುರುವಾತು.... ನಿತ್ಕಂಡ್ರೆ ವನ್ನಮನೀ   ಓಲಾಡ್ತೋ.... ಹಾ...ವಯಾ....... ಇದು ಭಂಯಂಕರ ಸ್ಟ್ರೋಂಗ್ ಇದ್ದೋ... ಅವಧಾನಿ ನಾಣ ಭಾವ ಇಂಗ್ಲೀಷ್ ಹೇಳೂಲೆ ಶುರುಮಾಡ್ದಾ.... ಸುದ್ದಿ..ಯೆಲ್ಲೆಲ್ಲಿಗೋ ಹೋಗಿ.... ಇಸ್ಪೀಟಿನ ಪಟ್ಟು ಕೈ ಜಾರ್ತಿಲ್ಲೆ ....ಸಾಕು ಬಿಡ್ವೋ ಹೇಳೂ ಮಟ್ಟಕ್ಕೆ ಬಂದೋ......
    ಸಂಜಾಗೋತಕಾ....ನೋಡು,,,ಗುತ್ತೇ ಆಜಿಲ್ಲೆ!... ರಾತ್ರಿ ವಂಭತ್ತಾಗಿತ್ತು...ಆಗ!! ....ಆಯಿ.....ಉಂಬ್ಲಕ್ಕಾತು ಕಾಲ್ ತೊಳ್ಕಳಿ...ಸಾಕು ಬಿಡಿ....ಅಂತು.... ನಾನು ಸಂಧ್ಯಾವನೇಗೆ ಕುಂತಲ್ಲೇ ಅಪ್ಪೇ ಹುಳಿ ವಗ್ಗರಣೆ ಸರಿ ಆತೋ ಇಲ್ಯೋ ಹೇಳಿ ಹೇಳ್ದೆ.................ತಮಾ...... ಅಪ್ಪಯ್ಯ...ಕರದಾ......!! ಕೂಸೇ...ಅಪ್ಪಯ್ಯ ಕರೇತ್ನೇ ಇದ್ದಾ...... ಯೆಂತಕ್ಕೆ ಕೇಳು ?...ಅಂತು ವಗ್ಗರ್ಣೇ ಹುಟ್ಟ ಅಪ್ಪೇಹುಳಿ ತಪ್ಲೇಗೆ ಅದ್ದಿಕ್ಕಿಯ......ಅದು ಚೊಂಯ್....ಚುರಕ್...ಅಂತು...ಪರಮಾಳಾ ಘಂ ಗುಡ್ತು....... ಕೂಸು ಬರಕಾರೆ ಚಿಮಣೀಬುಡ್ಡಿ ಹಿಡ್ಕಂಡೇ ಬಂತು ಅಪ್ಪಯ್ಯನ ಕೂಗು ಯೆಂತಕ್ಕೇ ಹೇಳಿ ಗುತ್ತಿದ್ದಿತ್ತು ಅದ್ಕೆ ಹೋಪೋವಕ್ಕೆ ಸೂಡಿ ಹಚ್ಚೂಲೆ....! ಅಲ್ಲೇ..... ಕೆಳಗಿಡು ಕೂಸೇ... ಕೂಸು ಇಟ್ಟಿಕ್ಕಿ ವಳಗೆ ಹೋಗಿ ಬಜ್ಞೆ ಹೇಳೂಲೆ ಶುರು ಮಾಡಿದಮೇಲೆ  ಯೆಂಕುಟೀಭಾವ ಹೇಳದಾ... ಅಷ್ಟಾಗಿತ್ತು ಬಂಗಿ ಮೋಜು!....
      ರಾಂಬ್ಭಾವ ಮನೇಗೋಗೋ ಹೇಳಿ ಸೂಡಿ ಕತ್ಸೂಲೆ ದೀಪಕ್ಕೆ ಸೂಡಿ ಹಿಡ್ದಾ..... ದೀಪಕ್ಕಿಂತಾ ಮೇಲೆ ಸೂಡಿ ಇದ್ದು ಹೇಗ್ ಬೆಂಕಿ ಹಿಡೀತು ಅದು !!!/ ದೀಪದ್ ಕೊಡೀಗೆ ಮಡ್ಳಗರಿ ತಾಗಿದ್ದೇ ಇಲ್ಲೆ..........!........ ರಾಂಭಾವಾ ಕೆಳಗೆ ಹಿಡಿಯಾ....ಅದ್ಯೆಂತಾ ಮೇಲೆ ಹಿಡದ್ದೆ? ....ಅಂದಾ ಚೆಕ್ಕೆ ಭಾವ. ಕೇಳ್ಗೆ ಶಿಕ್ಕಿದ್ದಿಲ್ಯಾ....ಅದ್ಕೇ...ಮೇಲೆ...ನೋಡ್ವಾ ಹೇಳೀ...........ಅಂತು....ರಾಂಭಾವಂಗೆ ಸೂಡಿ ಡಗಾ ಕೊಡ್ತು...ಚೌಕಿ ಭಾವ....ಹಾಂ ಹಿಡತ್ತಾ..... ನೆಡೆ..... ಹಾಂಗೇ ಯೆನಗೂ ತೋಸು ಅಂದ.... ರಾಂಭಾವ..... ಹೌದು...ಹಿಡದ್ದು ಅಂಬ್ಯಾ...ಹಾಂಗಾರೆ ಹೋಪೋ..ನೆಡೆ...ಹೇಳಿ ಕತ್ತಿಗಿದ್ದೇ ಹೋದ ಸೂಡೀಯಾ ಬೀಸೂಲೆ ಶುರುಮಾಡ್ದ.... ಚೆಪ್ಪಲ್ ಕಂಡಿದ್ದಿಲ್ಲೆ ಹಾ...ಅದಿಲ್ಲೇ ಇರ್ಲೀ..ನಾಳೆಗೆ ಬಂಡು ತಗಂಡ್ ಹೋಗ್ತೇ ಹೇಳಿಕ್ಕಿ ಹೊರಟ.... !! ದಣಪೆ ದಾಟಿ ಅಚೇಬದಿಗೆ ಹೋದ್ರೆ... ರಾಂಭಾವನ ಮನೇ....!!!! ಸೂಡಿಯೆಂತಕ್ಕೇ ಅವಂಗೇ ಹೇಳೇ ನನಗೆ ಅರ್ಥಾಜಿಲ್ಲೆ..!ಇನ್ನು ಚೆಕ್ಕೇಭಾವಂಗಾದ್ರೆ ಸುಮಾರು ದೂರಿದ್ದು  ಅವ ಬೀಡಿ ಹಚ್ಚುಲೇ ಹೇಳಿ ಅದ್ಯೆಂತದೋ ತಗಬಂದ್ಕಂಜ ಕುಮ್ಟೇಗೋದವ!! ಅದು ಹೆಬ್ಬೆರಳ್ಲ್ಲಿ ಗಿರಕ್ಕನೆ ವತ್ತದ್ ಕೂಡ್ಳೇ ಬೆಂಕಿ ಹತ್ಕತ್ತು.. ಅಡ್ಕೇ ವಖಾರಿ ಶಂಬೆಗ್ಡೆ ತೋರ್ಸಿದ್ನಾಗಿತ್ತಡಾ.. ಅದ್ನಾ... ಅದರಲ್ಲೇ ಹೋಗ್ತೆ ಅಂದ ಹೊರಟೇ ಬುಟಾ... 
         ಅಲ್ಲಿ ಕೆಳಗೆ ಬೈಲಲ್ಲಿ ಗೆದ್ದೆ ಕೊಯ್ಲಾಜು..ಸೀದಾ ಹೊದ್ರೆ ಚೆಕ್ಕೆ ಭಾವನ ಮನೇ ಕೀಬ್ಳೀಗೇ ಹೋಪ್ಲಾಗ್ತು... ಗೆದ್ದೆಲಿ ಹಾಳಿಕಂಟಾ ದಾಟೂದು ಹೇಂಗೇ...? ಅತೊತೊತೋ... ಇದ್ಯಾರನಾ........ಗೆದ್ದೇ ತುಂಬಾ ಪಾಗಾರಾ ಹಾಕಿಕ್ಕಿದೋ ಸಾಯಲೀ...... ಅಂತೂ ನಾರಣಂಗೆ ಹೇಳಕ್ಕಾತು...! ಈ ಪಾಗಾರಾ ಯೆಲ್ಲ ವಲಗಾಕು..ನಾಳೇನೇಯಾ..ಹೇಳಿ.ಥೋ. ಇದು ಸಾವೇರನ ಮನೆ ಗೆದ್ದೆ....ಗಾಳೀ ಶಂಭಟ್ಟ ಊರೆಲ್ಲಾ ತಂದೇಯಾ ಅಂಬ ಗೆದ್ದೇಲಿ ಗುಳ್ಳೇ ಹೆಕ್ಕಿ ಮಾರೂಲೂ ತಯಾರಿದ್ದಾ ಬಿಲೋ..... ಇದ್ಯೆಂತಾ ನಮನೀ ಹೇಳೇ ಅರ್ಥಾಗ್ತಿಲ್ಲೆ ..... ಸೊಸಾಯ್ಟೀ ಶಾಂತ್ ಭಟ್ಟ.ಬೆಳೆ ಸಾಲಾ ತುಂಬವ್ರೋ ಈ ವರ್ಷ ಹಿಂದೆ ಮುಂದೆ ಮಾಡೂಲೆ ಆಗ್ತಿಲ್ಲೆ... ಗಾಣಗರ ಸುಬ್ರಾಯ ಶೆಟ್ಟಿ ವಡ್ಯಾ ಈವರ್ಶ್ ಮಾತಾಡ್ಸೂಕೇ ಬರಬೇಡಿ ಹೇಳಿಕ್ಕಿದಾ..ಯೆಂತಾ ಮಾಡವನಾ?.... ಕೂಸೀಗೆ  ಹನ್ನೆರಡಾಣೆ ಆಗ್ತು  .......'ಜ್ಹಾತ್ಳಗಾ' ಹೇಳಿ ಹೇಳ್ ಕಳ್ಸಿದ್ದೊ.. ವಟ್ಟು ಈ ಮಳಗಾಲಕ್ಕೆ ...... ಗಟ್ಟದ ಮೇಲ್ ಬದೀಗೆ ಹೋಪದೇಯಾ ಅಂಬಾ ಕಾಣ್ತು..... ದೇಶಾವರಕ್ಕೆ..... ಹೇಳೇಲ್ಲಾ ಆಲೋಚ್ನೆ ಹಾಕಿರೂ .........ಹಾಳಿಕಂಟ ದಾಟೂಲೆ ಅಪ್ಪ ನಮನೀ ಇಲ್ಲೆ ಕಾಣ್ತು   .... ಈವತ್ತು....!
ಮರಿ ರಾಂಭಾವ.... ಹತ್ತಿಗಿದ್ದೇ ಹೋದ್ ಸೂಡಿ ಬೀಸ್ಕಂಡು ದಣಪೆ ದಾಟದಂವಾ....... ಮನೇಗೇ ಹೋಗೋ ಹೇಳಿ ಹೋಜ..!..... ಅಲ್ಲಿ ಬೆಳ್ಗಾ ಮುಂಚೆ ಯೋಳು ಗಂಟೇಗೆ ಕುಮ್ಟೆಗೆ ಹೋಪ ಹೋಲ್ಟಿಂಗ್ ಬಸ್ಸನ ಡ್ರೈವರ ನಮ್ಮನೆ ಹತ್ರ ಹೊರ್ನ ಮಾಡ್ಕಂಡು ಹೋಯ್....ಹೋಯ್... ಹೇಳಿ ಕರದಾ...ಹೋದೆ.  ಇದೆ..ನೋಡಿ. ನಿಮ್ಮನೇ ಅಚೇಮನೆ ರಾಂ ಭಟ್ರು....... ಅಲ್ಲಿ ಗಣಪತ್ನಾಯ್ಕನ ಅಂಗ್ಡೀ ಮುಂದ್ ಬದೀಗೆ ಸೂಡಿ ಬೀಸ್ಕತ್ನೇ ಹೋಗ್ತಾ ಇದ್ರಪಾ !!!!!!!!!ನಾ ಗಾಡಿ ಸ್ಟಾರ್ಟ್ ಮಾಡಕರೆ ನೋಡ್ದೇ.... ಅಂದ.......... ಅತೋಪಾ.... ಸಾಯಲೆ ಮರ್ಯಾದಿ ತೆಗದ್ಬುಟ್ಟಾ...ಈ ರಾಂಭಾವಾ..... ಕೇಳ್ತನೇ.....ಯೇ.. ಅಲ್ಲಿ ಇದ್ನಡಾ...ಇನ್ನೂವಾ..! ಬೆಳ್ಗಾಗಿ ಇಷ್ಟೊತ್ತಾತು ಈಗ್ಲೂ ಸೂಡಿ ಬೀಸ್ಕತ್ತೇ ಹೋಗ್ತಿದ್ನಡಾ...... ಅಲ್ಲಿ ಯೆಂತಕ್ ಹೋಗ ಸತ್ನನಾ... ಇಲ್ಲಿ ದಣಪೆ ದಾಟೀರೆ ಅವನ ಮನೆ ಅಂಗಳಾ....!
    ಮಾಣಿ...ಓ ಮಾಣೀ... ಬಗೇಲ್ ಹೋಗಾರೂ ಬಾರಾ.... ಕಡೇಗೆ.... ಅಲ್ಲಿ ಆ ಗಾಮೊಕ್ಕಲ ಕೇರಿ ಬದೀಗೆ ನೆಡದ್ ಬುಡ್ಗೂ......... ಅಲ್ಲಿ ಆ ಸೊಪ್ ತಪ್ಪ ಮಾದೇವಿ ಮನೆ ಅವಂಗೆ ಹಿಂದಿನಿಂದ್ಲೂ ಬಳಕೆ ಜಾಗಾ...ಮಾರಾಯಾ........ ಬಗೇಲಿ ಹೋಗ್ಬಾ...ಕರಕಂಡು ಬಾ....ಮಾಣಿ ಆಸ್ರೀ ಕುಡೂಲೆ ಕೂಚನ್ರೋ...... ಕಡೇಗೆ ಹೋಗ್ತಾ,,,ಬಿಡೀ... ತಮಾ ಚಾ ಹಾಕ್ಲನಾ..... ಪೇಲೆ ವಂದೂ ತೊಳದಾಜಿಲ್ಲೆ..... ಸಾಯಲೀ ನಿನ್ನೇ ರಾತ್ರಪ್ಪಾಗಾ ಇವರ ಅವತಾರ ಸುಧಾರ್ಸೂಲೇ ಆಗೋತು... ಅತ್ಲಾಗಿ ಮನೀಕತ್ವೂ ಇಲ್ಲೆ ಇತ್ಲಾಗಿ ಯೆನಗೆ ಮನುಗೂಲೂ ಬಿಡತ್ವಿಲ್ಲೆ... 'ಬರೀ ಗುಲ್ಲು ನಿದ್ರೆಗೇಡು' ಈಗ ಕಣ್ ಕೂರತು... ತಂಗೀ ಆ ಪೇಲೆ ತಕಂಬಾ ಅಣ್ಣಯ್ಯಂಗೆ ಚಾ ಹಾಕ್ತೇ.... ಕೂಸು ಮಡೇ ಬಾಚೂಲೆ ಹಣಕದ್ದು ಹಾಗೇ ಓಡೋಗಿ ಪೇಲೆ ತಂತು...ಆಯಿ ಪೇಲೆಗೆ ಚಾ ಹಾಕತು........ ಥ್ಫ್ ಫ್... ಉವ್ವೇಕ್..... ಅತೋ ಆಯೀ..... ಯೆಂತಾ ಇದ್ದಿತೇ ಈ ಪೇಲೆಲೀ,......ಇಶ್ಶೀ...... ವ್ವೇಕ್............ಅಥೋ ತಮಾ...ನೋಡಿದ್ನೇ ಇಲ್ಲೆ.... ನಿನ್ನೆ ಯಾನು ಅವ್ಕೇ ಹೇಳಿ ಅಪ್ಪೇ ಹುಳಿ ಕುಡೂಲೆ ಕೊಟ್ಟಿದ್ದಿದ್ದೇ... ಅದು ಹಾಂಗೇ ಇದ್ದಿತ್ತು ...... ಈ ಸುಟ್ ಕೂಸು,...... ಯೇ... ಬಾರೇ ಇಲ್ಲಿ .....ಇದ್ಯೆಂತಾ ತೊಳ್ಕಂಡೂ....ಬಪ್ಪದಲ್ಲದನೇ.... ಇದ್ಯೆಂತಾ ಸುಟ್ ಕೆಲಸವೇ ಮಾರಾಯ್ತೀ,,,,,,,, ಹಾಂಗೇ ತಂದಿಟ್ಟಿದ್ಯಲೇ ...ಪೇಲೆಯಾ..... ಯಾನೂ ಹೆಡ್ಡ.... ನೋಡಿದ್ನೇ ಇಲ್ಲೆ..... ಅದ್ಕೇ ಚಾ...ಸುರದ್ನಕ್ಕು........ ಸಾಯಲಿ ತಮಾ ಅದ್ರ ಅಲ್ಲೇ ಬಿಡು....ಬೇರೆ ಚಾಮಾಡ್ತೇ ಈಗ ಅವ್ಕೂ ಬೇಕಲಿ ವಂದ್ ಗಂಗಾಳಾ ತುಂಬಾವಾ.... ಚಾ...... ಹೇಳ್ತಾ ಇದ್ರೆ.... ಮಾಣಿ ...... ಆಯೀಈಈಈಈ ನಾ ಬತ್ನೇ...... ಅಲ್ಲಿ ಸಾವಿತ್ರಿ......... ಕೋಲೇಜಿಗೆ ಈವತ್ತು ಮೊದಲ್ನೇ ಪಿರಡು ಇದ್ದು ಹೇಳಿದ್ದು..... ಕೋನಳ್ಳಿ ಬಸ್ಸೀಗೆ ಸುಬ್ರಾಯಶೆಟ್ಟಿ ಡೈವರಾ... ...ಅದ್ಕಾಗಿ ನಾ ನವಿಲಗೋಣ್ ಬಸ್ಸೀಗೇ ಹೋಪೋ ವಟ್ಟೂವಾ ಹೇಳಿದ್ದೇ... ಹೇಳಿ ಪ್ಯಾಂಟ ಏರ್ಸಕತ್ನೇ ಹೇಳ್ದಾ...ಹಿತ್ಲಾಕಡಂಗೆ..... ಮಡವಾಳ ನಾಗಿ ಸೊಪ್ಪನ ಹೊರೆ ತಂದಾಕಿಕ್ಕೀ ವಡ್ತೀ.... ಅಂದ್ಲು ....ಅಪ್ಪಯ್ಯ ಅಡ್ಕೇ ಹೆಕ್ಕಂಡಿ ಬಂದಾ ಅಂಬ ಕಾಣ್ತೂ............ ಕೂಸೇ ಯೆಲ್ಲೋದ್ಯೇ.... ಓ ಆಯೀ....... ನಂಗೆ ಈವತ್ತು ಇಲ್ಲೇ ತಂದ ಕೊಡು ವಳಗೆ ಬತ್ನಿಲ್ಲೆ......! ಅಂತು.....ಅತೋ ತಿಂಗಳಾಗೋತನೇ.....!ಕೂಸೇ.... 

2 ಕಾಮೆಂಟ್‌ಗಳು:

  1. ನಂಗೆ ಉತ್ತರ ಕರ್ನಾಟಕದ್ ಕೆಲವು ಶಬ್ದ ಅರ್ಥ ಆಯ್ದಿಲ್ಲೆ. ಆದರೂ ಆ ಮನೆ, ಇಸ್ಫೀಟ್ ಆಡೋದರ, ಮಾಣಿ ಬಿದ್ದದೆಲ್ಲಾ ಕಣ್ ಮುಂದೆ ಬಂದಾಂಗಾತು. ನಿಂಗಳ ಬರಹದ ಶಕ್ತಿ ಅಮೋಘ.

    ಪ್ರತ್ಯುತ್ತರಅಳಿಸಿ
  2. ಕಿರಣ .. ಅದು ಉತ್ತರ ಕರ್ನಾಟಕದ ಭಾಷೆ ಅಲ್ಲ. ಉತ್ತರ ಕನ್ನಡದ ಘಟ್ಟದ ಕೆಳಗಣ ಹವ್ಯಕ ಭಾಷೆ. ಅದರಲ್ಲೂ ಹೊನ್ನಾವರ ತಾಲೂಕಿನ ಪಂಚಗ್ರಾಮ ಚೌಕಗ್ರಾಮಗಳ ಭಾಷೆ. !! ಹುಂ ಇಷ್ಟೋಂದು ಭಾಷಾ ವೈವಿಧ್ಯ ಇದ್ದ ಹೇಳಿ ಮತ್ತೆ ಕೇಳಡ ಬಿಲ.

    ಪ್ರತ್ಯುತ್ತರಅಳಿಸಿ