...........ತುಂಬಾ ಜನ ಇದ್ದಾರೆ ಆದರೆ ನನ್ನ ಬಾಲ್ಯದಲ್ಲಿ ನೋಡಿದ ನನ್ನೂರಿನ ಕೆಲ ಮಹನೀಯರ ಜೀವನದ ದಿಶೆಯನ್ನು ಮೆಲುಕು ಹಾಕುವ ಕುತೂಹಲ,ಅವರಂತೆ ನಾನಾಗಲಾರೆನಾ ಎಂಬ ಹಪಹಪಿಕೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಚಪಲ....................
..ಓದಿ...ಪ್ರತಿಕ್ರಿಯಿಸಿ.ಅವರಂತೆ ನಾವೂ ಆಗಬಹುದಾ.....ಚಿಂತೆ ಬ್ಯಾಡಾ..ಚಿಂತನೆ ನಡೆಸಿ.......ವಂದನೆಗಳು...
******************************************************************************************************
01) ನಾಣಿ (ನಾರಾಯಣ) ಸಭಾಹಿತರು:-
:- ಸಭಾಹಿತ ಕುಟುಂಬದ ಅತ್ಯಂತ ಗೌರವಾನ್ವಿತ ಮನುಷ್ಯ. ಆ ಕಾಲದಲ್ಲಿ ಒಂದು ರೀತಿಯಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಎದೆಯೊಡ್ಡಿ ನಿಲ್ಲಬಲ್ಲ ಸಮರ್ಥ.ಆ ಕಾಲದಲ್ಲಿ ಯಾರ ಮನೆಯಲ್ಲಿಯೇ ವಿವಾಹಾದಿ ಕಾರ್ಯಗಳು ನಡೆದರೂ ಅಲ್ಲಿನ ಮೇಲುಸ್ತುವಾರಿಕೆ ನಾಣಿ ಸಭಾಹಿತರದ್ದು, ಹೇಗೆಂದರೆ ಅಲ್ಲಿ ಯಾವುದೇ ಸಾಮಾನು ಸರಂಜಾಮುಗಳು ಕಡಿಮೆ ಆಗಿ ಕಾರ್ಯಕ್ಕೆಅಡ್ಡಿ ಆದಾಗ ತಾವೇ ತಮ್ಮ ಮನೆಯಿಂ ದಲೇ ತರಿಸಿ ಮಾಡಿ ಬಿಡುವಂಥ ಗುಣ ಅಂತೂ ಕಾರ್ಯ ನಿಲ್ಲಬಾರದು ಯಜಮಾನನ ಮಾನ ಹೋಗಬಾರದು, ಹೋದರೆ ಊರಿನ ಮಾನವೇ ಹೋದಂತೇ ಎಂದುಭಾವಿಸುವಂಥ ಧೀಮಂತ ವ್ಯಕ್ತಿತ್ವ.
ಅವರ ಪ್ರಾಯದ ಕಾಲಕ್ಕೆ ಸಂಬಂಧಿಸಿದಂತೆ ನಾನು ಅವರ ಬಗ್ಗೆ ಕೇಳಿದ ಮಾತೊಂದಿತ್ತು,ಅದೆಂದರೆ, ಆಗ ಬ್ರಿಟಿಷ್ ಆಳ್ವಿಕೆಯ ರೇಷನ್ನಿನ ಕಾಲ, ಜನ ತುತ್ತು ಅನ್ನಕ್ಕೆ ಪರದಾಡುವ ಕಾಲ. ಅಂತಹ ಸಮಯದಲ್ಲಿ ಊರಿನ ಕೆಲ ಮುಖಂಡರಿಗೆ ಸಂಸ್ಥಾನದ ಸವಾರಿಯನ್ನು ಊರಿಗೆ ಬರಮಾಡಿಕೊಂಡು ಮೆರೆಯುವ ಆತುರ. ಆದರೆ ಈ ಸಭಾಹಿತರಿಗೆ ಜನರು 'ನೊಂದಿದ್ದಾರೆ, ಈ ಸಮಯದಲ್ಲಿ ಸವಾರಿಯನ್ನು ಬರಮಾಡಿಕೊಂಡರೆ ಜನರು ಸವಾರಿಯ ಉಪಚಾರ ಮಾಡುವಷ್ಟು ಶಕ್ತರಿಲ್ಲ, ನಾವು ನಗೆಪಾಟಲಿಗೀಡಾಗಬೇಕಾಗುತ್ತದೆ, ಹಾಗಾಗಿ ಈಗ ಬೇಡ 'ಎಂದರು. ಆದರೆ ಶ್ರಿ ಗುರುಗಳಿಗೂ ಇಲ್ಲಿಗೆ ಬರಬೇಕು ಕಡತೋಕೆಯಲ್ಲಿ (ಕೆಕ್ಕಾರು) ಮಠದ ದೊಡ್ಡ ಕಟ್ಟಡ ಕಟ್ಟಬೇಕು,ಜನರಿಂದ ಸಂಗ್ರಹ ಮಾಡಬೇಕು,ಎಂಬ ಇರಾದೆ ಬಹಳಿತ್ತು. ಅದಕ್ಕೆ ಮುಖಂಡರ ಒತ್ತಾಸೆ ಬೇರೆ. ಹೇಗಾದರೂ ಮಾಡಿ ಕರೆಸಲೇ ಬೇಕು, ಗುರುಗಳಿಂದಲೇ ಸಭಾಹಿತರಿಗೆ ಒಂದು ಮಾತು ಹೇಳಿಸಿದರೆ ಹೇಗೆ ಎಂದು ಯೋಚಿಸಿ ವಿಷಯ ಗುರುಗಳಿಗೆ ತಿಳಿಸಿದರಂತೆ. ಅದರಂತೇ ಸ್ವತಃ ಶ್ರೀಗಳೇ ಸಭಾಹಿತರಿಗೆ ಒಂದು ನಿರೂಪು ಕಳುಹಿದರಂತೆ ' ಸವಾರಿ ನಿಮ್ಮ ಮನೆಗೇ ಬರುತ್ತದೆ, ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ,ಇತ್ಯಾದಿ' ಇದನ್ನು ತಿಳಿದ ಸಭಾಹಿತರು ಗುರುಗಳಿಗೇ ಕಾಗದ ಕಳುಹಿದರಂತೆ ಏನೆಂದರೆ, 'ತಮ್ಮ ಸವಾರಿ ಸಭಾಹಿತರ ಮನೆಗೆ ಬಂದರೆ ಸಭಾಹಿತರ ಸವಾರಿ ಹಳದೀಪುರಕ್ಕೆ ಹೋಗುತ್ತದೆ' ಎಂದು (ಅವರದ್ದು ಸಮೀಪದ ಹಳದೀಪುರದಲ್ಲಿಯೂ ಮನೆಯಿತ್ತು). ಅಂದರೆ, ಸತ್ಯವನ್ನು ಕ್ಠೋರವಾಗಿ ತಿಳಿಸುವ ಮನೋದಾರ್ಢ್ಯ ಇತ್ತು

02) ಕಡೇಮನೆ ಗೋಪಾಲ ಭಟ್ರು :-
:- ಆ ಕಾಲದಲ್ಲಿ ಇಡೀ ಕಡತೋಕೆ ಊರಿನ ಎಲ್ಲರ ಆಸ್ತಿಯನ್ನು ಒಂದೆಡೆ ಇಟ್ಟರೆ, ಆ ಎಲ್ಲಾ ಆಸ್ತಿಯಷ್ಟೇ ಜಾಗ ಕಡೆಮನೆ ಒಂದು ಮನೆ ಆಸ್ತಿಗೆ 'ಸಮ' ಆಗಿತ್ತಂತೆ ಅಂತಹ ಮನೆತನದ ವಾರಸುದಾರ ಈ ಗೋಪಾಲ ಭಟ್ರು. ಅಷ್ಟಿದ್ದರೂ ಇಡೀ ಊರಿನ ಜನರ ಕಷ್ಟಕ್ಕಾಗುವ ,ಕಣ್ಣ್ರೊರೆಸುವ ಹೃದಯ ವೈಶಾಲ್ಯ. ಅದಷ್ಟೇ ಅಲ್ಲ, ಊರಿನಲ್ಲಿ ಯಾವುದೇ ತಂಟೆ ತಕರಾರು,ಪಾಲು-ಪಟ್ಟಿ ವ್ಯವಹಾರಗಳಿದ್ದರೂ ಅಲ್ಲಿ ಕಡೆಮನೆ ಗೋಪಾಲಭಟ್ರು ಒಬ್ಬರು ಪಂಚಾಯತಿದಾರರು ಇರಲೇ ಬೇಕು. ಅವರ ನ್ಯಾಯ ದಾನ ನಿಖರ! ಎಂಬ ವಿಶ್ವಾಸವಿತ್ತು ಜನರಲ್ಲಿ.
ಯಾರದಾದರೂ ಮನೆಗೆ ಗೋಪಾಲ ಭಟ್ಟರು ಬಂದರೆ ಮನೆಯ ಜನರಿಗೆ ಸಂಭ್ರಮ. ಆ ಬರುವಿಕೆ,ಆ ಮಾತು, ಆ ಸಾಂತ್ವನ. ಹಾಗಿತ್ತು ಅವರ ವ್ಯಕ್ತಿತ್ವ. ಮನೆಯ ಜಗುಲಿಯಲ್ಲಿ ಕುಳಿತೇ ಆ ಮನೆಯ ಸರ್ವಸ್ವವನ್ನೂ ಅಳೆಯಬಲ್ಲ ಸಾಮರ್ಥ್ಯ. ಯಾವ ತೊಂದರೆ ಇದೆ ಅಲ್ಲಿ. ಕೊರತೆಯಿದೆ. ನಾನೇನು ಮಾಡಬಲ್ಲೆ , ಇವರ ಸಮಸ್ಯೆಗೆ ಎಂದು ನೋಟದಲ್ಲೇ ತಿಳಿದು ಸುಮ್ಮನೆ ಎದ್ದು ತಮ್ಮ ಮನೆಗೆ ಹೋಗಿ ಅಲ್ಲಿಂದಲೇ ಆ ಮನೆಯ ಸಮಸ್ಯೆಗೆ ಪರಿಹಾರ ಕೊಡಬಲ್ಲ, 'ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು' ಎಂಬ ನಿಲುವಿನ ಮನುಷ್ಯ.
ಅವರ ಕುರಿತು ಈ ಮಾತುಗಳು ಕೇಳಿ ಬರುತ್ತಿತ್ತು ಅದೆಂದರೆ, ಗೋಪಾಲ ಭಟ್ರು ಬೆಳಿಗ್ಗೆ ತಮ್ಮ ಮನೆಯಲ್ಲಿ ಆಸರಿ( ತಿಂಡಿ) ಕುಡಿದು ಹೊರಬಂದು ಹಕ್ಕೆಹೊಳ್ಳಿಯಲ್ಲಿ ಕುಳಿತಿರುತ್ತಿದ್ದರು. ಆ ಸಮಯದಲ್ಲಿ ಅವರ ಮನೆಯ ಮುಂಭಾಗದ ತೋಟದ ಅಡಿಕೆಗಿಡಗಳು ಅಲ್ಲಾಡಿದ್ದು ನೋಡಿ ಅಲ್ಲಿ ಯಾರೋ ಬರುತ್ತಿದ್ದಾರೆ ಎಂಬುದನ್ನು ಗಮನಿಸಿ ಬರುತ್ತಿರುವವ ನಮ್ಮ ಕೆಲಸದವನೇ ಎಂದು ತಿಳಿದು ಅವನಿಗೂ ಕೇಳಿಸುವಂತೆ ಹೇಳುತ್ತಿದ್ದರಂತೆ " ಹಾಂ...ಬಂದ.... ಈವತ್ತು... ಬೋ....ಮಗ... ಹಾಂ ಇನ್ನೆಂತಾ ಖರ್ಮ ...ಮತ್ತೆ ಬೇಕೆನೋ.....ತಕಂಡು ಹೋಗದ್ದು ಮುಕ್ಕಿ ಖರ್ಚಾತು ಬಂದ... (ಅಷ್ಟೊತ್ತಿಗೆ ಬಂದವ ಮನೆಯ ಸೂರಿನಡಿಯಲ್ಲಿ ಬಂದು ಕಾಲು ಕೆರೆಯುತ್ತ ನಿತಿರುತ್ತಿದ್ದ) ಗೋಪಾಲ ಭಟ್ಟರು ಅವನನ್ನು ನೋಡಿ ಯಾರೆಂದು ಖಚಿತ ಪಡಿಸಿಕೊಂಡು ಒಳಮನೆಗೆ ಅಂದರೆ ಹೆಂಡತಿಗೆ ಕೇಳಿಸುವಂತೆ ಹೇಳುತ್ತಿದ್ದರು " ಯೇ...ಹೌದನೇ.....( ಈ ಯೇ... ಹೌದನೇ..ಇದು ತಮ್ಮ ಹೆಂಡತಿಯನ್ನು ಕರೆಯುವ ಪ್ರೀತಿಯ ಪದ. ಸುಮಾರು ಜನ ಈ ಪದದಿಂದಲೇ ತಮ್ಮ ಹೆಂಡತಿಯನ್ನು ಕರೆಯುವುದನ್ನು ಕೇಳಿದ್ದೇನೆ) ಆ.... ಹೆಸರು ಹೇಳಿ --- ಬಂದಾ.... ಇನ್ನೆಂತಾ ಹಾಕ್ಕಿಕ್ ಹೋಗವನಾ...ಸಾಯಲೀ.... ಅವಂಗೆ ಆಸರೀಗೆ ಕೊಡು ಕಡೇಗೆ ನೋಡ್ವೋ....ಬಾ ಇಲ್ಲಿ...ಅಲ್ಲೆಂತಾ ಅಂಗಳ ಕೆರೂದು..... ಕೂತ್ಗ. " ಎಂದು ಸ್ವಾಗತ !! ಅವ ಬಂದು ಜಗುಲಿಯ ತುದಿಯಲ್ಲಿ ಕುಳಿತರೆ ಭಟ್ಟರ ಹೆಂಡತಿ ಒಂದು ಬಾಳೆ ಎಲೆಯತುಂಬಾ ಕಲಸಿದ ಅವಲಕ್ಕಿ, ದೊಡ್ಡ ಲೋಟದಲ್ಲಿ ಚಹ ಅವನ ಮುಂದೆ ತಂದಿಡುತ್ತಿದ್ದರು. ಆ ಆಳು ಅದನ್ನು ತಿಂದು ಮುಗಿಸುವ ವರೆಗೆ ಮಾತಿಲ್ಲ. ಭಟ್ಟರು ನೋಡುತ್ತ ಕುಳಿತುಕೊಳ್ಳುತ್ತಿದ್ದರು . ಅಷ್ಟೇ ಅಲ್ಲ... ಹೆಂಡತಿ ತಂದು ಹಾಕಿದ ಅವಲಕ್ಕಿ ಕಡಿಮೆಯೆನಿಸಿದರೆ.. ಮತ್ತೆ ಅವರೇ "ಹೌದನೇ....ಅವಲಕ್ಕಿಗೆ ಬರ!! ಬಂತನೇ..." ಸಾಕಿತ್ತು ಭಟ್ಟರ ಹೆಂಡತಿಗೆ... ತಂದೆ ತಂದೆ... ಎಂದು ಮತ್ತೊಂದಿಷ್ಟು ಅವಲಕ್ಕಿ ತ್ಹಂದು ಹಾಕುತ್ತಿದ್ದರು. ಅಂತೂ ಆಳು ಹೊಟ್ಟೆ ತುಂಬಾ ತಿನ್ನ ಬೇಕು. ಇದು ಭಟ್ಟರ ನಿಲುವು!!!!
ಆಸರಿ ಕುಡಿದಾದಮೇಲೆ ಕವಳಕ್ಕೆ (ತಾಂಬೂಲ) ಬೇಕಾದ ಸಾಮಗ್ರಿಯನ್ನು ಅವನೆಡೆಗೆ ತೂರಿ ' ಹಾಂ...ಕವಳ ಹಾಕು..... ಅದ್ಯೆಂತದೂ ಹೇಳಿ ...ಬೊಗಳು...... ಎಂತಾ... ಅಕ್ಕಿ ಬೇಕಾ....ಬೆಲ್ಲ ಬೇಕಾ.... ಯೆಂತಾ ಬೇಕು......" ಆಳು ವೀಳ್ಯದೆಲೆಗೆ ಸುಣ್ಣ ಸವರುತ್ತಾ ಮುಖ ಕೆಳ ಹಾಕಿ ಮೆಲ್ಲಗೆ ..... ಉಂಬೂಕೆ.....ಎಂದೆನ್ನುತ್ತಿರುವಾಗಲೇ... ಹಾಂ...ಗೊತ್ತಾಯ್ತು ಬಿಡು......ಕಳದವಾರ ಕೊಟ್ಟದ್ದು ಮುಗ್ದೋಯ್ತು... ಅದೆಂತದೋ ಮಾಡಿ ಕೊಡ್ತೆ ಹೇಳಿ ಸತ್ತಿದ್ಯಲಾ.... ಅದು ಮಾಡಿ ನನಗೆ ತಿನಸದೇ ನೋಡು ಮಣ್ಣ..... ಮೊಕ ಹಾಕಲೇ ಇಲ್ಲ ಇಲ್ಲೀವರೆಗೆ.... ಈಗ ತಕಂಡ ಹೋಗದ್ದು ಮುಕ್ಕಿ ಮುಗೀತು.. ಬಂದೆ... ಬೇಡೂಕೆ.... ಆಯ್ತು ......ಹೌದನೇ....ಎಂದು ಹೆಂಡತಿಯನ್ನು ಕೂಗಿ..ಓ ಇವಂಗೊಂದು ಎರಡು ಕೊಳಗ ಅಕ್ಕಿ ತಂದಾಕು..ತಗಂಡ್ ಹೋಗಿ ತಿಂದ್ ಸಾಯಲಿ...ತಿರಗ್ ಬಪ್ಪದಲ್ಲ..ಮತ್ತೆ.....ಹೂಂ...ಹೋಗು ಎದೆಮೇಲ್ ಹಾಯ್ಕಂಡ್ ಹೋಗು..ಇದನ್ನೂವಾ..ತಿಂದ್ ಹಾಳ್ ಮಾಡೂ.....ಮನೀಕಾ..... ಇನ್ನೊಂದೆರಡು ಹುಟ್ಟಲೀ..ಖರ್ಮಾ.ಖರ್ಮಾ... " ಎಂದು ಬೈಯ್ಯುತ್ತಲೇ ಹೇಳಿದರೆ ಅಕ್ಕಿ ಮೊರದಲ್ಲಿ ಬರುತ್ತಿತ್ತು ಒಳಗಿಂದ, ಆಳು ಪಂಚೆಯಲ್ಲಿ ಕಟ್ಟಿಕೊಂಡು 'ವಡ್ಯಾ...ನಾ ...ಬತ್ತೆ....'ಎಂದು ಹೇಳಿ ಮನೆಕಡೆ ಹೆಜ್ಜೆ ಹಾಕುತ್ತಿದ್ದ. ಇಲ್ಲಿ ಭಟ್ಟರು ''ಪಾಪವೇ.... ಬಡತನಾ....ಅವಂಗೆ.....ದೇವರು ಕೊಟ್ಟಿದ್ದ...ನಮಗೆ...... ತಿಂದುಂಡ್...ಇರಲೀ....ನಮ್ಮ ಮಕ್ಕೋ ಇದ್ದಾಂಗೇ ಅಲ್ದಾ..... ತಗಂಡ್ ಹೋಗ್ಲೀ..." ಎಂದು ತೋಟಕ್ಕೆ ಇಳಿಯುತ್ತಿದ್ದರು
..........ಬೇಕಾ...ನಮ್ಮೂರಿಗೆ ಇದಕ್ಕಿಂತಾ ದೊಡ್ಡ ಕೊಡುಗೈ ದಾನಿಗಳು....!!.ಊರು ಧನ್ಯವಾಗಿದ್ದು ಹೀಗೇ...!!
03) ಭಡ್ತಿ ಗೋವಿಂದ ಭಟ್ರು :-
04) ಧರ್ಮಶಾಲೆ ಪುಟ್ ಭಟ್ರು :-
05) ಭಡ್ತಿ ರಾಮಕೃಷ್ಣ ಭಟ್ರು :-
06) ಡಾ|| ಗಣಪಜ್ಜ :-
07) ಕಟ್ಟೆ ಪರಮೇಶ್ವರ ಭಟ್ರು :-
08) ಎಸ್. ಶಂಭು ಭಟ್ರು :-
09) ಭಡ್ತಿ ವಿ.ಜಿ.ಭಟ್ರು :-
10) ಕೊಂಕೇರಿ ಪರಮೇಶ್ವರ ಭಟ್ರು :-
11) ಮಹದೇವ ನಾಯ್ಕ :-
12) ಕೆ.ಎಸ್. ಮೋಹನ ಹೆಗಡೆ :-
13) ಎಸ್.ವಿ.ನಾಯ್ಕ :-
14) ಮೊಮ್ಮನ್ ರಾಂಭಟ್ರು :-
15) ಮಾಡಗೇರಿ ಗಣಪತಿ ಮಾಸ್ತರು :-
16) ಅವಧಾನಿ ಶಂಭು ಶಾನಭಾಗರು :-
17) ಸಂತನ್ ಶಂಭು ಹೆಗಡೆ :-
18) ನವಿಲಗೋಣ್ ಡಾ|| ವಿ.ವಿ. ಭಟ್ರು :-
19) ಮಧುಕರ (ಡಾ:) :-
20) ಕ್ರಿಶ್ಚನರ ಪಾವಲು :-
21) ಪಡಸಾಲಿ ಡೇವರು ಶೆಟ್ಟಿ :-
22) ಪಡಸಾಲಿ ಶಿವರಾಮ ಶೆಟ್ಟಿ :-
23) ಹೆಬ್ಳೇ ಕೇರಿ ಎಮ್.ಆರ್.ಭಟ್ರು :-
24) ಕೆಕ್ಕಾರು ಜೋಯಿಸರು :-
25) ದೇವಸ್ಥಾನ ಮಂಜ ಭಟ್ರು :-
26) ಗುಡ್ಡೂ ಜೋಯಿಸರು :-
27) ಘಾಟಿ ಗಣೇಶ ಹೆಗಡೇರು :-
28) ಮಂಜುನಾಥ ಭಾಗವತರು :-
29) ಜೋಗಿ ಕೃಷ್ಣ ಭಾಗವತರು :-
30) ಅಗ್ನಿ ಹೋತ್ರಿ ಮಹಾಬಲೇಶ್ವರ ಭಟ್ರು :-
31) ಜಿ. ಶಿವರಾಮ ಅಗ್ನಿ ಹೋತ್ರಿ :-
32) ಮಡಿವಾಳ ಹರಿಯಣ್ಣ :-
33) ಮಡಿವಾಳ ಮಂಜು ಸುಬ್ರಾಯ :-
34) ಮಠದ ಗೋಪಾಲ ಭಟ್ರು :-
35) ಮುಕ್ರಿ ಅಳ್ಳಿಕಟ್ಟಿ :-
36) ಬೆಣ್ಣೆ ಭಟ್ರು :-
37) ಪುಟಭಟ್ರ ಮನೆ ಮಂಜಜ್ಜ :-
38) ಮಡಿವಾಳ ಮಂಜು :-
39) ಬೂದಿಗುಡ್ಡೆ ತಿಮ್ಮಪ್ಪ ಶೆಟ್ಟಿ :-
40) ಗುಂಬ್ಲೆ ಪುಟ್ಟಿ ಮಹಾಬಲೇಶ್ವರ ಭಟ್ರು :-
41) ಶಿದ್ದನ ಮನೆ ಯೆಂಗ್ಟ :-
42) ಸೊನಗಾರ ವಿಟೋಬ ಶೆಟ್ಟಿ :-
43) ಸೊನಗಾರ ರಾಮಚಂದ್ರ ಶೆಟ್ಟಿ :-
44) ಮೋಹಿನೀ ಭಟ್ಟ :-
45) ದರ್ಜಿ ಲಕ್ಷ್ಮಣ ನಾಯ್ಕ :-
46) ರಾಮವಧಾನಿ :-
ಇವರೆಲ್ಲ ಕಡತೋಕೆಯ ಊರಿನ ಮಹನೀಯರೇ , ಕೆಲವರು ನಗಿಸುತ್ತಿರುವವರು, ಇನ್ನು ಕೆಲವರು ಅವರೇ ನಗೆಗೀಡಾದವರು...... ಊರಲ್ಲವೇ ಯೆಲ್ಲ ಥರದವರೂ ಬಾಳಿ ಬದುಕಿದರು. ಇವರಲ್ಲದೇ ಇನ್ನೂ ಅನೇಕರು ನನ್ನ ಮನದ ಮರೆಯಲ್ಲಿದ್ದಾರೆ.!!!!
ಲಿಸ್ಟ್ ನೋಡಿ ಖುಷಿನೂ ಆತು ನಗೆನೂ ಬಂತು.
ಪ್ರತ್ಯುತ್ತರಅಳಿಸಿವಡಯ.. ಎಲ್ಲ ಹೆಸರಿನ ಮುಂದೆ ಸಲ್ಪ ವಿವರಣೆ ಇದ್ದಿದ್ರೆ ಚೊಲೋ ಆಗತಿತ್ತು
ಇಲ್ಲಿ ನಗೆ ಮತ್ತು ಗೌರವ ಭಾವ ಎರಡೂ ಮೂಡಿಸಬಲ್ಲ ವ್ಯಕ್ತಿಗಳ ಹೆಸರಿದ್ದು, ಮಾರ್ಮಿಕವಾದ ವಿವರಣೆಯ ಪಟ್ಟಿಯೂ ಇದ್ದು, ಇನ್ನೂ ಹಲವರ ಹೆಸರಿನ ಸೇರ್ಪಡೆಯೂ ಇದ್ದು.ಉದಾ:-ಕೊಳ್ಪೆಹೊಂಡದ ಅಂಗಡಿ ಗಣಪತ್ ನಾಯ್ಕ,ಯೆಮ್ಮೆ ಶಿವರಾಂಭಟ್ಟ ಇತ್ಯಾದಿ.
ಪ್ರತ್ಯುತ್ತರಅಳಿಸಿಕೊಳ್ಪೆಹೊಂಡದ ಗಣಪತ್ ನಾಯ್ಕರು ಹಾಗೂ ಕಣಕನ ಮೂಲೆ ಶಿವರಾಂ ಭಟ್ರ ಬಗ್ಗೆ ವಿವರಣೆ ಸಾಧ್ಯವಾದಾಗ ಬರಲಿ.
ಅಳಿಸಿವಿವರಣೆ ಕೊಡ್ತೆ ಶಾಲೆಗೆ ರಜೆ ಬೀಳ್ಳೀ ಹೇಳಿ ಕಾಯ್ತಾ ಇದ್ದೆ.ಶಾಮಾ.
ಪ್ರತ್ಯುತ್ತರಅಳಿಸಿಸಾಧಕರು ಹೇಳೂದಕಿಂತ ರೋಚಕ ವ್ಯಕ್ತಿ ಹೇಳಿದ್ರೆ ನಿಮ್ಮ ಲಿಸ್ಟಗೆ ಮೆರುಗು ಬತ್ತು ಹಂಗಾರೆ
ಪ್ರತ್ಯುತ್ತರಅಳಿಸಿಹೌದು ಅಲ್ದಾ. ಸಾಧಕರು ಹೇಳೂಲೆ ಅಂಥಾ ಸಾಧನೆ ಯೆಂತದೂ ಇಲ್ಲೆ. ಆದ್ರೂ ಕೆಲವರದ್ದು ಉದಾತ್ತವಾದ ಬದುಕಿದ್ದು,ಕೆಲವರದ್ದು ನಗೆಪಾಟಲಿನ ಬದುಕಿದ್ದು.ಒಂದು ಒಳ್ಳೆ ಶೀರ್ಷಿಕೆ ಕೊಡೋ ಹೇಳಿದ್ದು ನೀನು ಇನ್ನೊಂದೆರಡು ಶೀರ್ಷಿಕೆ ಹೆಸರ ಸೂಚಿಸು.
ಪ್ರತ್ಯುತ್ತರಅಳಿಸಿsuuuuuuuuuuuuuuuuuperro Rambhattre
ಪ್ರತ್ಯುತ್ತರಅಳಿಸಿ