प्रज्वालितॊ ज्ञानमयप्रदीपः

ಬುಧವಾರ, ಆಗಸ್ಟ್ 13, 2014

ಅಷ್ಟಾವಕ್ರ...!!

            ಲೋಮಶರೊಂದಿಗೆ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಮುಮ್ದುವರಿದ ಧರ್ಮರಾಜ... ಒಂದು ಸುಂದರವಾದ, ಮರಗಿಡಗಳಿಂದಲೂ ಹೂವು ಹಣ್ಣುಗಳಿಂದಲೂ ತುಂಬಿರುವ  ಉಪವನಕ್ಕೆ ಬಂದರು. ಅಲ್ಲೊಂದು ಆಶ್ರಮವನ್ನು ಕಂಡರು. ಆ ಉಪವನದ ಸೊಬಗನ್ನು ವೀಕ್ಷಿಸಿದ ಧರ್ಮರಾಜ ಅದರ ಸೌಂದರ್ಯವನ್ನು  ಸವಿಯುತ್ತಾ ಅಲ್ಲಿನ ಆಶ್ರಮದ ಕುರಿತು ತಿಳಿದುಕೊಳ್ಳುವುದಕ್ಕಾಗಿ ಲೋಮಶರನ್ನು ಪ್ರಶ್ನಿಸಿದ... "ಮುನಿವರಾ ಇದೊಂದು ಸುಂದರವಾದ ಉಪವನವನ್ನೂ ಒಮ್ದು ಪ್ರಶಾಂತವಾದ ಆಶ್ರಮವನ್ನೂ ನಮಗೆ ತೋರಿಸಿದೆ.. ಆದರೆ ಈ ಆಶ್ರಮ ಯಾವುದು? ಇಲ್ಲಿದ್ದ ಆ ಮುನೀಶ್ವರನ್ಯಾರು? ಎಂದು ವಿವರವಾಗಿ ಹೇಳಬೇಕು" ಎಂದು .ಆಗ ಮಹಾಋಷಿ ಲೋಮಶರು..." ಯುಧಿಷ್ಠಿರಾ... ಇಲ್ಲಿ ಇನ್ನೊಂದು ಸುಂದರವಾದ ಕಥೆಯನ್ನು ಹೇಳುತ್ತೇನೆ ಕೇಳು .ಇಲ್ಲಿ ಹಿಂದೆ ಓರ್ವ ಶ್ವೇತಕೇತು ಎಂಬ ಮಹಾ ಮುನಿಯಿದ್ದ . ಅವನೋ ಮಹಾನ್ ಪಂಡಿತನೂ ತಪಸ್ವಿಯೂ ಆಗಿದ್ದ. ಅವನ ತಪೋಶಕ್ತಿ ಎಷ್ಟಿತ್ತೆಂದರೆ.. ಅವನೆದುರು ಸಾಕ್ಷಾತ್ ಸರಸ್ವತೀ ದೇವಿಯೇ ಬಂದು ನಿಲ್ಲುತ್ತಿದ್ದಳು...!! ಹೇಗೆಂದರೆ.. ಒಮ್ಮೆ ಸರಸ್ವತಿ ಮೊದಲಬಾರಿಗೆ ಅವನೆದುರು ಬಂದು ನಿಂತಾಗ ಅವಳನ್ನು ಗುರುತು ಹಿಡಿದು..’ನೀನೇ ಅಲ್ಲವೇ ಸರಸ್ವತಿ..?’ ಎಂದು ಪರಿಚಯವನ್ನು ತಾನಾಗಿ ಹೇಳಿದ ಮಾಹಾ ಮುನಿ ಅವನು..!! ಅಂತಹ ಮಹರ್ಷಿ ಬಾಳಿದ ಸ್ಥಳ ಇದು..ಅವರ ಕಥೆಯನ್ನು ಇನ್ನೂ ವಿಸ್ತಾರವಾಘಿ ಹೇಳುತ್ತೇನೆ ಕೇಳು...
       ಹಿಂದೆ ಇಬ್ಬರು ಮಹಾ ಪಂಡಿತರಾದ ಋಷಿಗಳಿದ್ದರು. ಅವರಲ್ಲೊಬ್ಬ ಮಾವ...!! ಇನ್ನೊಬ್ಬ ಅಳಿಯ...! .. ಹಿಂದೆ ಉದ್ದಾಲಕ ಎಂಬ ಓರ್ವ ಮುನಿಯಿದ್ದ. ಅವನಿಗೆ ಶ್ವೇತಕೇತು ಎಂಬ ಮಗನೂ,  ಸುಜಾತಾ ಎಂಬ ಮಗಳೂ ಇದ್ದರು . . ಉದ್ಧಾಲಕ ತನ್ನ ಮಗನೊಂದಿಗೆ ಕಹೋಡ(ಳ) ಎಂಬ ಇನ್ನೋರ್ವ ಶಿಷ್ಯನಿಗೂ  ವೇದ ವೇದಾಂತಗಳ ಪಾಠವನ್ನು ಮಾಡಿದ. ಅವರೆಲ್ಲ ಆ ಕಾಲದಲ್ಲಿ ಜನಕ ಮಹಾರಾಜನ( ವಿದೇಹದ ಜನಕನ - ಸೀತೆಯ ತಂದೆಯಲ್ಲ.)  ಧರ್ಮ ಸಭೆಯಲ್ಲಿ ತಮ್ಮ ವಿದ್ವತ್ ಪ್ರದರ್ಶನವನ್ನು ಮಾಡುತ್ತಿದ್ದರು. ಸ್ವತಃ ಜನಕ ಕೇಳುವ ಧರ್ಮ ಸೂಕ್ಷ್ಮಗಳನ್ನು ಕುರಿತಾಗಿ ಪ್ರಶ್ನೆ ಮಾಡುತ್ತಿದ್ದ. ಆಗ ಇವರೆಲ್ಲ ಅದಕ್ಕೆ ಉತ್ತರವನ್ನೀಯುತ್ತಿದ್ದರು..ಹೀಗೇ ಅನೇಕ ಪಂಡಿತರು ರಾಜನ ಮೆಚ್ಚುಗೆಗೆ ಪಾತ್ರರಾಗಿ ಅವನಿಂದ ಅನೇಕ ಬಹುಮಾನಗಳನ್ನು ಪಡೆದು ಹೋಗುತ್ತಿದ್ದರು. ಇಂಥವರಲ್ಲಿ ಆ ಕಾಲದ ಅನೇಕ ಜನರ ಹೆಸರು ನಮ್ಮ ಉಪನಿಷತ್ತುಗಳಲ್ಲಿ ಹೇಳಲ್ಪಟ್ಟಿದೆ.. ಆಶ್ವಲಃ ,  ಆರ್ತಭಾಗಃ,  ಭುಜ್ಯುಃ, ಲಾಹ್ಯಾಯನಿ  ಉಷಸ್ತಿ, ಚಾಕ್ರಾಯನಃ, ಕಹೋಳ ಕೌಶಿಕೇಯಃ,  ಉದ್ದಾಲಕಃ, ಆರುಣಿಃ,  ವಿದಗ್ಧಶಾಕಲ್ಯ, ಗಾರ್ಗಿವಾಚಕ್ನವೀ(ಸ್ತ್ರೀ)    ಮುಂತಾದ  ನವ ಪಂಡಿತರುಗಳು ಆಸ್ಥಾನದಲ್ಲಿ ರಾರಾಜಿಸುತ್ತಿದ್ದರು.  .....!! ಇವರೆಲ್ಲ ನಮ್ಮ ಭಾರತೀಯ ಪರಂಪರೆಗೆ ಬ್ರಹ್ಮ ವಿದ್ಯೆಯನ್ನು ಧಾರೆಯೆರೆದ ಮಹನೀಯರುಗಳು....!!
ಹೀಗೇ ಅತ್ಯಂತ ಪ್ರತಿಭಾಶಾಲಿಯಾದ ಕಹೋಡ ಉದ್ದಾಲಕರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.. ಅವನ ಮೇಲಿನ ಅತಿಯಾದ ಪ್ರೀತಿಯಿಂದ ತನ್ನ ಮಗಳಾದ ಸುಜಾತೆಯನ್ನು ತನ್ನ ಶಿಷ್ಯೋತ್ತಮನಿಗೇ ಕೊಟ್ಟು ಮದುವೆ ಮಾಡಿದ ಉದ್ದಾಲಕ.... 
ನಂತರದಲ್ಲಿ ಈ ಮಾವ ಮತ್ತು ಅಳಿಯ ಇಬ್ಬರೂ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದು ಬದುಕಿದ ಆಶ್ರಮ ಇದು.
   ಕಹೋಡ-ಸುಜಾತೆಯರು ವಿವಾಹ ಆದನಂತರ ಅಲ್ಲಿಯೇ ಸಮೀಪದಲ್ಲಿ ಇನ್ನೊಂದು ಆಶ್ರಮವನ್ನು ಕಟ್ಟಿಕೊಂಡು ವಾಸಮಾಡಿಕೊಂಡಿದ್ದರು. ಕಹೋಡ ಸಂಸಾರದ ಚರಿತಾರ್ಥಕ್ಕಾಗಿ ವೇದ ವಿದ್ಯೆಯ ಸಹಾಯದಿಂದ ಹೊರ ಪ್ರದೇಶಗಳಿಗೆ ಹೋಗಿ ತನ್ನ ವಿದ್ಯಾ ಸಂಪನ್ನತೆಯಿಂದ ಗಳಿಸಿಕೊಂಡು ಬಂದ ಸಂಪತ್ತಿನಿಂದ ಬದುಕು ಸಾಗಿಸುತ್ತಿದ್ದರು. ಅದರಂತೆ ಪ್ರತಿ ದಿನವೂ ವೇದಾಭ್ಯಾಸವನ್ನು ತಪ್ಪದೇ ಮನೆಯಲ್ಲಿ ಮಾಡುತ್ತಿದ್ದ...ಹಲವಾರು ಗಂಟೆಗಳ ಕಾಲ ಈ ಸಂಗೀತಗಾರರು ಪ್ರದರ್ಶನ ಪೂರ್ವದಲ್ಲಿ ನಿರಂತರ ಅಭ್ಯಾಸ ಮಾಡುವಂತೆ ಮಂತ್ರಗಳನ್ನು ಉರುಹೊಡೆಯುತ್ತಿದ್ದ.ಇದಕ್ಕೆ ಕಾರಣವೂ ಇತ್ತು.. ಸುಜಾತೆ ಈಗ ನವಮಾಸಗಳನ್ನು ತುಂಬಿದ ಗರ್ಭಿಣಿಯಾಗಿದ್ದಳು ಅವಳು ಹೇಳಿದಳು.." ಆರ್ಯಾ.. ನನಗೀಗ ನವ ಮಾಸ ತುಂಬುತ್ತಿದೆ.. ಮುಮ್ದೆ ಹೆರಿಗೆಸಮಯ ಸಮೀಪಿಸುತ್ತಿದೆ.. ಅದ್ಕ್ಕೆ ಕೆಲವು ಸೋಪಸ್ಕರಗಳನ್ನು ತರಬೇಕು.ಅದಕ್ಕೆ ಹಣವನ್ನು ಹೊಂದಿಸಬೇಕು ನನ್ನ ತಂದೆಯನ್ನೂ ಕೇಳುವಂತಿಲ್ಲ.. ಇದೀಗ ತಾನೇ ಅಲ್ಲಿ ಶ್ವೇತಕೇತು ಜನಿಸಿ ತಂದೆಯು ಇದ್ದ ಸಂಪತ್ತನ್ನು ಕಳೆದುಕೊಂಡಿದ್ದಾನೆ.. ಹಾಗಾಗಿ ಎಲ್ಲಿಯಾದರೂ ಹೋಗಿ ಸಂಪತ್ತನ್ನು ಗಳಿಸಿಕೊಂಡು ಬನ್ನಿ" ಎಂದಳು.. ಅದಕ್ಕಾಗಿ ಜನಕನರಮನೆಗೆ ಹೋಗುತ್ತಿದ್ದ ಅಲ್ಲಿ ವೇದಾರ್ಥವನ್ನು ಹೇಳಿ ರಾಜನನ್ನು ಮೆಚ್ಚಿಸಿ ಸಂಪತ್ತನ್ನು ಗಳಿಸಿಕೊಂಡು ಬರುತ್ತಿದ್ದ..ಅದಕ್ಕಾಗಿ ಹಗಲಿರುಳು ವೇದವನ್ನು ಉರುಹೊಡೆಯುತ್ತಿದ್ದ...... ಅಲ್ಲಿ ಆ ಜನಕನ ಅರಮನೆಯಲ್ಲಿ ಇದ್ದ ವಂದಿಯು ವಿಚಿತ್ರವಾಗಿ ವಾದಗಳನ್ನು ಮಾಡುತ್ತಿದ್ದ ಅವನ ಪ್ರಶ್ನೆಗಳಿಗೆ ಉತ್ತರಿಸಿ ರಾಜನನ್ನು ಮೆಚ್ಚಿಸಬೇಕಿತ್ತು.. ಆ ವಂದಿಯೋ ಕುತರ್ಕಗಳ ಮೂಲಕ ಪಂಡಿತರನ್ನು ಗೋಳುಹೊಯ್ದುಕೊಳ್ಳುತ್ತಿದ್ದ...ಹಿಂದೆ ಒಂದು ಊರಿನಲ್ಲಿ ಸಕಲ ಶಾಸ್ತ್ರ ಕೋವಿದರಾದ ಮೂರು ಜನ ಬ್ರಾಹ್ಮಣರಿದ್ದರು.. ತರ್ಕ-ವ್ಯಾ ಕರಣಾದಿ ಶಾಸ್ತ್ರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು... ಹೀಗಿರುತ್ತಿರುವಾಗ ಒಂದು ದಿನ...
....... ಮೂವರೂ ಯಾವುದೋ ವಿದ್ವತ್ ಸಭೆಗೆ ಆಹ್ವಾನ ಬಂದುದರಿಂದ ಅಲ್ಲಿಗೆ ಹೊರಟರು.. ದಾರಿ ಯಲ್ಲಿ ಒಂದು ಹಳ್ಳಿ... ಅಲ್ಲಿಯೇ ಸ್ವಪಾಕ ಮಾಡಿ ಊಟಮಾಡಬೇಕೆಂದು ಒಂದು ತೊರೆಯ ಸಮೀಪ ಕ್ಕೆ ತೆರೆಳಿದರು. ಅಡುಗೆ ಮಾಡುವ ಸಲುವಾಗಿ ಒಬ್ಬನು ಒಲೆಯನ್ನು ಉರಿಸಿ ಮೇಲೆ ಮಣ್ಣಿನ ಪಾತ್ರ್ರೆ ಯಲ್ಲಿ ನೀರನ್ನು ಬಿಸಿಮಾಡಿ ಅಕ್ಕಿಯನ್ನು ಹಾಕಿ ಬೇಯಿಸ ತೊಡಗಿದನು.. ಇನ್ನೊಬ್ಬ ಊಟಕ್ಕೆ ತುಪ್ಪ ವನ್ನು ತರುವುದಕ್ಕಾಗಿ ಹಳ್ಳಿಯ ಮನೆಗಳ ಕಡೆಗೆ ಹೋದನು..
ಆ ಮನೆಯಲ್ಲಿ ಅವನಿಗೆ ತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿ ಕೊಟ್ಟರು. ಪಂಡಿತನು ಅದನ್ನೆತ್ತಿ ಕೊಂಡು ದಾರಿಯಲ್ಲಿ ಬರುತ್ತಿದ್ದನು... ಆಗ ಅವನಲ್ಲಿನ ಪಾಂಡಿತ್ಯ ಪ್ರಜ್ಞೆಯು.. ಒಂದು ಸಂಶಯಕ್ಕೆ ದಾರಿ ಮಾಡಿಕೊಟ್ಟಿತು...ಅವನು ಕಲಿತ ಮೀಮಾಂಸಾ ಶಾಸ್ತ್ರ.. ಎಲ್ಲವನ್ನೂ ಪೂರ್ವ ಪಕ್ಷ- ಸಿದ್ಧಾಂತ ಗಳ ಸಂಶಯವನ್ನೇ ಮುಂದಿಡುತ್ತಿತ್ತು.. ಅದರಂತೇ ತಾನು ತರುತ್ತಿರುವ ತುಪ್ಪದ ಪಾತ್ರೆಯನ್ನೊಮ್ಮೆ ವೀಕ್ಷಿಸಿದ ಆ ಪಂಡಿತ.. ಆಗ ಅವನಲ್ಲಿ ಈ ತುಪ್ಪ ಹಾಗೂ ಪಾತ್ರೆಗಳ ವಿಚಾರವಾಘಿ "ಆಧಾರ- ಆಧೇ ಯ" ಗಳ ಪ್ರಶ್ನೆ ಹುಟ್ಟಿತು.. ಪಾತ್ರ್ಗೆ ಮತ್ತು ತುಪ್ಪ ಇವೆರಡರಲ್ಲಿ ಆಧಾರ ಯಾವುದು...? ಆಧೇಯ ಯಾವುದು? ಪಾತ್ರೆಗೆ ತುಪ್ಪ ಆಧಾರವೋ..? ತುಪ್ಪಕ್ಕೆ ಪಾತ್ರ ಆಧಾರವೋ.. ಸಂಶಯ...!!! ಹೀಗೇ ಸಂಶಯಿತನಾದ ಪಂಡಿತ ದಾರಿಯಲ್ಲೇ ತುಪ್ಪದ ಪಾತ್ರವನ್ನು ತಲೆಕೆಳಗುಮಾಡಿಯೇ ಬಿಟ್ಟ...!! ಆಧಾರ ಯಾವುದು...? ತುಪ್ಪವೆಲ್ಲಾ ದಾರಿಯಪಾಲಾಯಿತು... ಕಣ್ಣುಜ್ಜಿಕೊಳ್ಳುತ್ತಾ.. ಓಹ್.. ಗೊತ್ತಾ ಯಿತು.. ಪಾತ್ರೆಯೇ ಆಧಾರ....! ....ತುಪ್ಪವೇ ಆಧೇಯ...... ನಾನು ಕಲಿತ ಮೀಮಾಂಶಾ ಶಾಸ್ತ್ರ ನಿಜಕ್ಕೂ ಪ್ರಯೋಜನಕ್ಕೆ ಬಂತು..!! ಬೇಗ ಹೋಗಿ ನನ್ನ ಗೆಳೆಯರಿಗೆ ಹೇಳಬೇಕು.. ಪಾತ್ರೆ ಆಧಾ ರ...ತುಪ್ಪ ಆಧೇಯ.. ಎಂದು.. ಹೀಗೇ ಹೇಳುತ್ತಾ.. ಅಡುಗೆ ಮಾಡುವಲ್ಲಿಗೆ ಬರುತ್ತಿದ್ದ....
......ಇನ್ನೋರ್ವ ಪಂಡಿತ...! "ವೈಯ್ಯಾಕರಣಿ"... ಪಾಣಿನಿಯ ಅಷ್ಟಾಧ್ಯಾಯಿಯನ್ನು ಅರೆದು ಕುಡಿದಿ ದ್ದ.. ಎಲ್ಲದಕ್ಕೂ ವ್ಯಾಕರಣದ ಮೂಲಕವೇ ಅವನ ಚಿಂತನೆ...!! ಒಲೆಯ ಮೇಲೆ ಮಣ್ಣಿನ ಮಡಿಕೆಯ ಲ್ಲಿ ಅನ್ನ ಕುದಿಯುತ್ತಿತ್ತು....!! ಬೆಂಕಿ ಜೋರಾಗಿ ಉರಿಯುತ್ತಿತ್ತು.. ಕಾರಣ ಅನ್ನವು ಕೊತಕೊತನೆ ಸಶಬ್ದವಾಗಿ ಕುದಿಯುತ್ತಿತ್ತು.... ಅದರ ಆ ಶಬ್ದವನ್ನು ಕೇಳಿದ ಈ ಪಂಡಿತನಿಗೆ ಅದೇನೆನ್ನ್ನಿಸಿತೋ ತನ್ನ ವೈಯ್ಯಾಕರಣವನ್ನು ಇಲ್ಲಿಯೂ ಹರಿಬಿಟ್ಟ... ಅನ್ನದ ಮಡಿಕೆಯನ್ನುದ್ದೇಶಿಸಿ ಹೇಳಿದ....." ಹೇ ಅನ್ನವೇ.. ನೀನು ಶಬ್ದವನ್ನು ತಪ್ಪಾಗಿ ಉಚ್ಚರಿಸುತ್ತಿರುವೆ,,.. ಅದು ಕ್ವತ ಕ್ವತ ಅಲ್ಲ.... ಕೊತ ಕೊತ ವೂ ಅಲ್ಲ...!! ಕುತಃ ಕುತಃ ಎಂದಾಗಬೇಕು ಸರಿ ಪಡಿಸಿಕೋ" ಎಂದು ಹೇಳಿದ... ಆದರೂ ಮಡಿಕೆ ಯಲ್ಲಿರುವ ಅನ್ನ.. ಮೊದಲಿನಂತೇ ಕೊತಕೊತನೆ ಕುದಿಯುತ್ತಿತ್ತು.. ಈ ಪಂಡಿತನಿಗೆ ಪಿತ್ಥ ನೆತ್ತಿ ಗೇರಿತು... ಎಲೋ ಂಊಢ ಅನ್ನದ ಪಾತ್ರೆಯೇ..ನಾಣು ನಿನಗೆ ಎಷ್ಟು ಹೇಳಲೀ.. ನೀನು ಉಚ್ಚ ರಿಸುತ್ತಿರುವ ಶಬ್ದವು ಅಶುದ್ಧವಾಘಿದೆ.. ಸರಿ ಮಾಡಿಕೋ ಎಂದು ಎಷ್ಟು ಹೇಳಿದರೂ ನಿನಗೆ ಅರ್ಥ ವಾಘುವುದಿಲ್ಲ.. ಛೀ.. ತಡಿ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ " ಎಂದವನೇ..ಒಲೆಯನ್ನು ಊದುವ ಕೊಳವೆಯನ್ನು ಎತ್ತಿ ಅನ್ನದ ಪಾತ್ರೆಯ ಮೇಲೆ ಪ್ರಹಾರ ಮಾಡಿಯೇ ಬಿಟ್ಟ...!!! ಕೊತಕೊತನೆ ಕುದಿ ಯುತ್ತಿದ್ದ ಮಡಿಕೆಯಲ್ಲಿನ ಅನ್ನ ಒಲೆಯ ಪಾಲಾಯಿತು... ಪಂಡಿತ ತಪ್ಪು ಉಚ್ಚಾರ ಮಾಡಿದ ಅನ್ನದ ಪಾತ್ರೆಗೆ ತಕ್ಕ ಶಾಸ್ತಿ ಮಾಡಿಯೇ ಬಿಟ್ಟೆ ... ವ್ಯಾಕರಣ ಜ್~ನವನ್ನು ಹೊಂದಿದ ನನ್ನ ಮಾತನ್ನು ಧಿಕ್ಕ ರಿಸಿದವರಿಗೆ ಇದೇ ಗತಿ ಎಂಬುದು ಗೊತ್ತಾಘಲಿ.. ನನ್ನ ಗೆಳೆಯರೂ ಇದರಿಂದ ನನ್ನ ಬಗ್ಗೆ ಸ್ವಲ್ಪ ಭಯ ಹೊಂದಲೀ.. ಎಂದು ಒಲೆಯನ್ನೆಲ್ಲಾ ಸ್ವಚ್ಛಗೊಳಿಸತೊಡಗಿದ...!!
....ಇನ್ನೊಬ್ಬ ಪಾಕವನ್ನು ಮಾಡುವುದಕ್ಕಾಗಿ ಸೊಪ್ಪನ್ನೋ ತರಕಾರಿಯನ್ನೋ ತರುವುದಕ್ಕಾಗಿ ಅಲ್ಲೇ ಪಕ್ಕಕ್ಕೆ ಹೋದ್.. ಅವನಿಗೆ ಅಲ್ಲಿ ಯಾವ ಸೊಪ್ಪೂ ದೊರೆಯಲಿಲ್ಲ.. ಕೊನೆಗೆ ಹಸಿರಾಘಿ ಬೆಳೆದ ಹುಲ್ಲು .. ಗರಿಕೆ..ಕಂಡಿತು.. ಧರ್ಮ ಶಾಸ್ತ್ರವನ್ನು ಆದ್ಯಂತವಾಘಿ ಅಧ್ಯಯನ ಮಾಡಿದ್ದ ಆತ.. ಯೋಚಿಸಿದ.... " ಈ ಲೋಕದಲ್ಲಿ ಸಕಲ ಜೀವಾತ್ಮರಿಗೂ ಆಹಾರವು ಆಧಾರವಾಗಿದೆ... ಪರ್ಜನ್ಯವು ಈ ಸಸ್ಯಗಳಿಂದಲೇ ಹುಟ್ಟುತ್ತದೆ.. ಪ್ರಾಣಿಗಳು ಶಾಕಾಹಾರಿಗಳಾಗಬೇಕು.. ಹಾಗಾಗಿ ಈ ಗರಿಕೆಯ ಹುಲ್ಲನ್ನೇ ಇಮ್ದು ಅಡುಗೆಗೆ ಆಹಾರಕ್ಕಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಹುಲ್ಲನ್ನು ಎತ್ತಿಕೊಳ್ಳಲು ಹೋದ...ತನ್ನ ಪಾಲಿನ ಹುಲ್ಲನ್ನು ಎತ್ತಿ ಕೊಂಡೊಯ್ಯುತ್ತಿರುವ ಪಂಡಿತನನ್ನು ನೋಡಿ ಒಂದು ಎತ್ತು ಅವನನ್ನು ಅಟ್ಟಿಸಿಕೊಂಡು ಬಂತು.. ಪಂಡಿತ ಓಡಿ ಬಂದ.. ತನ್ನ ಗೆಳೆಯರನ್ನು ಕೂಡಿಕೊಂಡ... ತುಪ್ಪದವನು ತುಪ್ಪ ತಂದಿರಲಿಲ್ಲ..! ಅನ್ನ ಬೇಯಿಸುವವನು ಗಡಿಗೆಯನ್ನೇ ಒಡೆದಿದ್ದ.... ಎಲ್ಲರಿಗೂ ಈ ಗರಿಕೆ ಪರಮಾಹಾರವಾಯಿತು... ತನ್ನ ಆಹಾರ ಕದ್ದೊಯ್ದು ತಿನ್ನುತ್ತಿರುವ ಈ ಪಂಡಿತೋತ್ತಮರನ್ನು ನೋಡಿದ್ದ ಬಸವ ಅಂಬಾ ಎಂದು ನಗುತ್ತಿತ್ತು... ಇವರೇ ಅಲ್ಲವೇ.."ಗಾಂಪರೊಡೆಯರು"...!!......ಇಂತಹ ತರ್ಕವನ್ನೇ ಮಾಡುತ್ತಿದ್ದ ವಂದಿ ಎಲ್ಲರನ್ನೂ ಪೇಚಿಗೆ ಸಿಲುಕಿಸುತ್ತಿದ್ದ..ಹೀಗೇ ವಾದದಲ್ಲಿಸೋಲಿಸಿದವರನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತಿದ್ದ.. ಹೀಗೇಯೆ ಕಹೋಡನನ್ನೂ ಒಂದು ದಿನ ನೀರಿನಲ್ಲಿ ಹಾಕಿ ಮುಳುಗಿಸಿ ಕೊಂದುಬಿಟ್ತ... ಅದು ಉದ್ದಾಲಕನಿಗೆ ಗೊತ್ತಾಯಿತು... ಉದ್ದಾಲಕ ತನ್ನ ಮೊಮ್ಮಗನಿಗೆ ಈ ವಂದಿಯು ತನ್ನಪ್ಪನನ್ನು ಕೊಂದಿದ್ದಾನೆ ಎಂಬುದು ಗೊತ್ತಾಗದಂತೆ ಬೆಳೆಸಿದ.. ಈ ಅಷ್ಟಾ ವಕ್ರನೋ ಉದ್ದಾಲಕನನ್ನೇ ತಂದೆಯೆಂದು ತಿಳಿದು ಬೆಳೆಯುತ್ತಿದ್ದ.. ಹಾಗೇ ಒಂದು ದಿನ ಉದ್ದಾಲಕನ ತೊಡೆಯೇರಿ ಕುಳಿತಿದ್ದ ಅಷ್ಟಾವಕ್ರನನ್ನು ನೋಡಿ ನಿಜವಾದ ಮಗನಾದ ಶ್ವೇತ ಕೇತು ತನ್ನಪ್ಪನ ತೊಡೆಯೇರಿದ್ದಕ್ಕಾಗಿ ಅವನನ್ನು ಎಳೆದು ಕೆಳಗೆ ಬೀಳಿಸಿ ಮನೆಗೆ ಕಳಿಸಿದ.. ಅಳುತ್ತಾ ಬಂದ ಅಷ್ಟಾವಕ್ರ ತಾಯಿಯನ್ನು ತನ್ನಪ್ಪ ಯಾರೆಂದು ಕೇಳಿದ.. ಅಷ್ಟಾವಕ್ರನ ಪಾಂಡಿತ್ಯ ಮತ್ತು ಮಹತಿಯನ್ನು ತಿಳಿದಿದ್ದ ತಾಯಿ ಸುಜಾತೆ ಮಗನಿಗೆ ಹೆದರಿ ನಿಜ ಸಂಗತಿಯನ್ನು ಮಗನಿಗೆ ಹೇಳಿಯೇಬಿಟ್ಟಳು... ಅಲ್ಲಿಂದ ಬಂದ ಅಷ್ಟಾವಕ್ರ ಶ್ವೇತಕೇತುವನ್ನು ಸಮೀಪಿಸಿ ನೀನು ಮಾಡಿದ ಕೆಲಸ ಒಳ್ಳೆಯದೇ ಆಯಿತು ಎಂದು ಹೇಳುತ್ತಾ ನಾಳೆ ನನ್ನೊಂದಿಗೆ ಸುತ್ತಾಟಕ್ಕೆ ಬರಬೇಕೆಂದು ತಿಳಿಸಿದ ಅಲ್ಲಿ ಹೋಗಿ ವಂದಿಯನ್ನು ವಾದದಲ್ಲಿ ಸೋಲಿಸಬೇಕೆಂದುಕೊಂಡ ..ಅದಕ್ಕೊಪ್ಪಿದ ಶ್ವೇತಕೇತು ಮತ್ತು ಅಷ್ಟಾವಕ್ರರು ಮುಂದೆ.. ಜನಕನ ಸಭೆಗೆ ಹೋಗಬೇಕೆಂದುಕೊಳ್ಳುತ್ತಾರೆ... 

  ಮೊದಲೆಲ್ಲ ವೇದಾಧ್ಯಯನವನ್ನು ಮಾಡುವುದಕ್ಕೂ ಕಾಲವನ್ನು ದಿನವನ್ನೂ ನೋಡುತ್ತಿದ್ದರು, ಪರ್ವಕಾಲ , ಹುಣ್ಣಿಮೆ, ಅಷ್ಟಮಿ ಅಮಾವಾಸ್ಯೆ ಚತುರ್ದಶಿ ಮುಂತಾದ ತಿಥಿಗಳಲ್ಲಿ ಅಧ್ಯನ ನಿಷಿದ್ಧವಾಗಿತ್ತು. ಯಾರಾದರೂ ಹಿರಿಯರು ಬಂದಾಗಲೂ ಅವರೆದುರಿಟ್ಟುಕೊಂಡು ಅಧ್ಯಯನವನ್ನು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಈ  ಕುರಿತು ನಮ್ಮ ಶಾಸ್ತ್ರ ದಲ್ಲೂ ಯಜುರ್ವೇದಿಗಳಲ್ಲಿ ಆ ಅನಧ್ಯಯನ ಕಾಲದಲ್ಲಿ ಅಧ್ಯನ ಮಾಡಿದ ದೋಷ ಪರಿಹಾರಕ್ಕಾಗಿ ’ಉಪಾಕರ್ಮ’ ಮಾಡಿಕೊಳ್ಳುವ ದಿನದಂದು.. ಕಾಮೋಕಾರ್ಶೀತಿ ಮಂಜುರಕಾರ್ಶೀ ನಮೋ ನಮಃ( ಉಪಾಕರ್ಮದ ದಿನ ಯಜ್ಞೋಪವೀತವನ್ನು ಧರಿಸಿಕೊಂಡು ಈ ಜಪವನ್ನು  ಮಾಡಬೇಕು ನಾನು ಮಾಡಲಿಲ್ಲ..!  ನನ್ನ ಆಸೆಯು ಹೀಗೆ ಮಾಡಿಸಿತು, ನನ್ನ ಕೋಪವು ಹೀಗೆ ಮಾಡಿಸಿತು....|  "ಅಧ್ಯಾಯ ಉತ್ಸರ್ಜನ ಅಕರಣ ಪ್ರಾಯಶ್ಚಿತ್ತಾರ್ಥಂ"  ಯಾವ ವೇದ ಮಂತ್ರವನ್ನು ಎಲ್ಲಿ ಹೇಳಬಾರದಿತ್ತೋ ಅಲ್ಲಿ ಹೇಳಿದ್ದಕ್ಕಾಗಿ, ಅನದ್ಯಯನ ಕಾಳದಲ್ಲಿ ವೇದವನ್ನು ಹೇಳಿದ್ದಕ್ಕಾಗಿ ಪ್ರಾಯಶ್ಚಿತ್ತ ರೂಪವಾಗಿ ಈ ಕಾಮೋಕಾರ್ಶೀತಿ ಮಂಜುರಕಾರ್ಶೀತಿ  " ಜಪವನ್ನು ಮಾಡುತ್ತಾರೆ...
           ಹೀಗೇ ಅನಧ್ಯನ ಕಾಲದಲ್ಲಿಯೂ ವೇದವನ್ನು ಉರುಹೊಡೆಯುತ್ತಿದ್ದ ಕಹೋಡ....! ಅದೊಂದು ಹುಚ್ಚಿತ್ತು ಅವನಿಗೆ.. ವೇದಾದಿಗಳನ್ನು ಉರು ಹೊಡೆದು ರಾಜ ಸಭೆಯಲ್ಲಿ ಅದಕ್ಕೆ ಅರ್ಥಗಳನ್ನು ಹೇಳಿ ಸಂಪತ್ತಿಯನ್ನು ಗಳಿಸಬೇಕು ಎಂಬುದು ಅವನ ಮನಸ್ಸಿನ ಏಕೈಕ ಹಂಬಲವಾಗಿತ್ತು.. ಆದರೆ ಇದೊಂದು ಪಾಪವಾಗಿ ಮಾರ್ಪಟ್ಟಿತು ಕಹೋಡನಲ್ಲಿ.. ಅಂತೆಯೇ ಒಂದು ಅಷ್ಟಮಿಯ ದಿನ ಹೀಗೇ ವೇದವನ್ನು ಉರುಹೊಡೆಯುತ್ತ ಕುಳಿತಿದ್ದ ಕಹೋಡ...!! ಪಾಪ ಭೂಯಿಷ್ಟವು ಹೆಚ್ಚಲಾಗಿ ಅವನಿಗೆ ತೂಕಡಿಕೆ ಪ್ರಾರಂಬವಾಯಿತು.. ಅಲ್ಲಿಯೂ ವೇದವನ್ನು ಹೇಳಲಾಗಿ ಅದು ಸ್ವರ ವ್ಯತ್ಯಸ್ತವಾಗಿ ಅಪಸ್ವರ ಬಂತು.. ಇದನ್ನು ಅಲ್ಲಿಯೇ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಸುಜಾತೆಯ ಗರ್ಭದಲ್ಲಿರುವ ಶಿಶುವು ಕೇಳಿಸಿಕೊಂಡಿತು... ಅಲ್ಲದೇ ಹೇಳಿತು..." ಅಪ್ಪಾ.. ಅಕಾಲದಲ್ಲಿ ಅಕ್ರಮವಾಗಿ ಸ್ವರವ್ಯತ್ಯಸ್ತವಾಗಿ ಮಂತ್ರ ಹೇಳುತ್ತೀಯಲ್ಲಾ.. ಇದು ಸರಿಯೇ...?" ಇದನ್ನು ಕೇಳಿಸಿಕೊಂಡ ಕಹೋಡನಿಗೆ ಸಿಟ್ಟುಬಂತು.. "ಇನ್ನೂ ಭೂಮಿಗೇ ಬಾರದ ನೀನು ನನಗೇ ಬುದ್ಧಿ ಹೇಳುತ್ತೀಯಾ?" ಎಂದು ಅಲ್ಲಿಯೇ ಶಾಪವನ್ನು ಕೊಟ್ಟುಬಿಟ್ತ...!!! " ನೀನು ಅಷ್ಟಾವಕ್ರನಾಗು...!! ಅದೂ ಶಿಷ್ಯರೆಲ್ಲರ ಎದುರಲ್ಲಿ ಹೇಳಿದೆಯಲ್ಲಾ ಎಂದು ಕೋಪ ಹೆಚ್ಚಾಯಿತು" ಅಪ್ಪನೇ ಹುಟ್ಟದೇ ಇರುವ ಮಗನಿಗೆ ಶಾಪವನ್ನಿತ್ತ...!!
       
    ಮುಂದೆ.. 
ವಿದೇಹರಾಜ  ರಾಜ್ಯದಲ್ಲಿ ಜನಕ ಮಹಾರಾಜನಿದ್ದ.ನು ಸೀತೆಯ ತಂದೆಯಲ್ಲ.. ಆ ರಾಜ್ಯದಲ್ಲಿ ಆಳುವ ಎಲ್ಲಾ ಅರಸರಿಗೂ ಜನಕ ಎಂದೇ ಕರೆಯುತ್ತಿದ್ದರು.. ಈ ಜನಕನಾದರೋ ಮಹಾನ್ ಬುದ್ಧಿವಂತನೂ ಧರ್ಮಿಷ್ಠನೂ ವಿದ್ಯಾವಂತನೂ ಆಗಿದ್ದ.. ಅವನ ಆಸ್ಥವೆಲ್ಲವೂ ಪಂಡಿತರಿಂದಲೇ ತುಂಬಿಕೊಂಡಿತ್ತು ಎಂಬುದನ್ನು ಆಗಲೇ ಹೇಳಿದೆನಲ್ಲವೇ? ಅಲ್ಲದೇ ಅವನ ಆಸ್ಥಾನದಲ್ಲಿ ಈ ಕಹೋಡನ ಮಗನೂ ಮತ್ತು ಶ್ವೇತಕೇತು...ಸೋದರಳಿಯ ಮತ್ತು ಸೋದರ ಮಾವ ಇವರು ಹೋಗಲೆಳೆಸಿದರು.. ಆದರೆ ಅಲ್ಲೊಂದು ತೊಡಕಿತ್ತು.. ಆ ರಾಜನ ಆಸ್ಥಾನದಲ್ಲಿ ವಂದಿ . ಓರ್ವ ಸೂತನಿದ್ದ.. ಇವನೋ ರಾಜನ ಆಸ್ಥಾನಕ್ಕೆ ಅತಿ ಪ್ರಮುಖನಾದ ಪಾರಂಗತನಾಗಿದ್ದ.. ಹಾಗಾಗಿ ರಾಜನನ್ನು ಸಂದರ್ಶಿಸುವಾಗಲೂ ಮೊದಲು ವಂದಿಯನ್ನು ವಾದದಲ್ಲಿ ಸೋಲಿಸಿ ಮುಂದೆ ರಾಜನನ್ನು ಕಾಣಬೇಕಿತ್ತು..!! ( ವಂದಿಗಳು ಈಗಲೂ ಇದ್ದಾರೆ.. ಆದರೆ ಇವರಿಗೆ ಬುದ್ಧಿ ಮಾತ್ರ ಇರುವುದಿಲ್ಲ ಈ ಕಾಲದಲ್ಲಿ...!) ಈ ವಂದಿಯೂ ಕೂಡಾ ಜನಕನ ಸಭೆಗೆ ಒಂದು ಶಾಪ ರೂಪದಲ್ಲಿದ್ದ.. ಇವನು ಯಾರನ್ನೂ ಸುಮ್ಮನೇ ಬಿಡುತ್ತಿರಲಿಲ್ಲ..ಈ ಅಷ್ಟಾವಕ್ರನಾದರೋ ತಂದೆಯಿಂದ ಗರ್ಭದಲ್ಲಿರುವಾಗಲೇ ವೇದವನ್ನು ಅಧ್ಯಯನವನ್ನು ಮಾಡಿದ್ದರಿಂದ ಮಹಾನ್ ಬಾಲಕನಾಗಿ ಬೆಳೆದ.... ಮೈಯ್ಯಲ್ಲಿ ಎಂಟುಕಡೆಯಲ್ಲಿ ವಕ್ರತೆಯಿದ್ದರೂ ಬುದ್ಧಿ ಮಾತ್ರ ವಕ್ರವಾಗಿರಲಿಲ್ಲ... ಅತಿಯಾದ ವೇದಜ್ಞಾನವನ್ನು ಹೊಂದಿದ್ದ..!!
   ಹೀಗಿರಲಾಗಿ ಒಂದು ದಿನ ಈ ಹತ್ತು ವರ್ಷದ ಬಾಲಕನಾದ ಅಷ್ಟಾವಕ್ರ ಮಾರ್ಗದಲ್ಲಿ ಕುಂಟುತ್ತ ನಡೆದು ಹೋಗುತ್ತಿದ್ದ..  !! ಇತ್ತ ಜನಕನೋ..ವಾರ್ಷಿಕವಾಗಿ ಒಂದು ಯಜ್ಞವನ್ನು ಮಾಡುತ್ತಿದ್ದ..ಅಲ್ಲಿ ಅನೇಕ ಬ್ರಾಹ್ಮಣರು ಬರುತ್ತಿದ್ದರು.. ಅಲ್ಲಿ ಎಲ್ಲರಿಗೂ ಪುಷ್ಕಳವಾದ ಭೋಜನ ದಾನ ಮಾನಗಳು ನಡೆಯುತ್ತಿದ್ದವು . ಹೀಗೇ ಒಂದು ದಿನ ಉತ್ಸವದ ಸಂದರ್ಭದಲ್ಲಿ ಈ ಅಷ್ಟಾವಕ್ರ ಮತ್ತು ಶ್ವೇತ ಕೇತು ಅರಮನೆಗೆ ಹೋಗಬೇಕೆಂದು ಹೋಗುತ್ತಿರುವ ಸಂದರ್ಭದಲ್ಲಿ ದಾರಿಯಲ್ಲಿ ಅದೇ ಮಹಾರಾಜರು ಪಲ್ಲಕ್ಕಿಯಲ್ಲಿ ಕುಳಿತು ಅದೇ ದಾರಿಯಲ್ಲಿ ಎದುರು ಬರುತ್ತಿದ್ದರು..  ರಸ್ತೆ ಮಧ್ಯದಲ್ಲಿ ಈ ಹುಡುಗರು ನಡೆದು ಹೋಗುತ್ತಿದ್ದರು.. ರಾಜನ ಪಲ್ಲಕಿಯೆದುರು ದಂಡ ಹಿಡಿದು ದಾರಿ ಮಾಡಿಕೊಂಡು ಬರುತ್ತಿದ್ದರು.. ಅವರು ಈ ಹುಡುಗರನ್ನು ದಾರಿಯಿಂದ ಪಕ್ಕಕ್ಕೆ ಸರಿಯುವಂತೆ ತಿಳಿಸಿದರು.. ದೊರೆ ಬರುತ್ತಿದ್ದಾನೆ... ದಾರಿಬಿಡಿ ಎಂದರು...ಆದರೆ ಈ ಹುಡುಗರು ದಾರಿಯಿಂದ ಪಕ್ಕಕ್ಕೆ ಸರಿಯಲಿಲ್ಲ... ಎಷ್ಟು ಹೇಳಿದರೂ ಸರಿಯದಿದ್ದಾಗ ಅವರು ದೊರೆಗೆ ವಿಷಯ ತಿಳಿಸಿದರು..." ದೊರೆಯೇ..ಯಾರೋ ಈ ಬಾಲಕರು.. ಇನ್ನೂ ಬೆಳೆದವರಲ್ಲ.. ಆವರಿಗೆ ಎಷ್ಟು ಕೇಳಿಕೊಂಡರೂ ದಾರಿಯನ್ನು ಬಿಡಲೊಲ್ಲರು.." ಎಂದರು.. "ಹೌದೇ.. ಯಾರವರು.." ಎಂದು ಕೇಳುತ್ತಾ ಆ ಹುಡುಗರನ್ನು ನೋಡಿದ.."ಯಕಯ್ಯಾ ದಾರಿಯನ್ನು ಬಿಡುವುದಿಲ್ಲ ಅಂದಿರಲ್ಲಾ" ಅದನ್ನು ಕೇಳಿದ ಅಷ್ಟಾವಕ್ರ ರಾಜನಿಗೆ.." ದೊರೆಯೇ..ನಾವು ನಿನ್ನ ಆಸ್ಥಾನಕ್ಕೇ ಹೋಗುತ್ತಿದ್ದವರು... ಅಷ್ಟರಲ್ಲಿ ಸ್ವಾಗತ ಮಾಡಲೆಂಬಂತೆ ನೀನೇ ಇಲ್ಲಿ ನಮಗೆದುರಾದೆ... ಅಲ್ಲದೇ ನೀನೇ ಕೇಳುತ್ತಿದ್ದೀಯಾ ದಾರಿಯನ್ನು ಬಿಡೂ ಎಂದು.. ನಿನ್ನ ಆಸ್ಥಾನದಲ್ಲಿ ಮಹಾ ಮಹಾ ಪಂಡಿತರಿದ್ದಾರೆಂದು ಕೇಳಿದ್ದೇನೆ ಅವರ್ಯಾರೂ ಹೇಳಲಿಲ್ಲವೇ..?
ಅಂಧಸ್ಯ ಪಂಥಾಃ ಬಧಿರಸ್ಯ ಪಂಥಾಃ|
ಸ್ತ್ರಿಯಃ ಪಂಥಾಃ ಭಾರವಾಹಸ್ಯ ಪಂಥಾಃ |
ರಾಜ್ಞಃ ಪಂಥಾ ಬ್ರಾಹ್ಮಣೇನಾ ಸಮೇತ್ಯಾ|
..... (( ದಾರಿಯಲ್ಲಿ ಹೋಗುತ್ತಿರುವಾಗ ಓರ್ವ ಕುರುಡ ಎದುರಾಗಿ ಬರುತ್ತಿದ್ದರೆ, ಭಾರವನ್ನು ಹೊತ್ತು ಬರುತ್ತಿರುವಂಥಾ ವ್ಯಕ್ತಿ ಬರುತ್ತಿದ್ದರೆ, ಸ್ತ್ರೀಯರು ಬರುತ್ತಿದ್ದರೆ, ರಾಜರು ಬರುತ್ತಿದ್ದರೆ, ಬ್ರಾಹ್ಮಣ ಬರುತ್ತಿದ್ದರೆ.... ಅಲ್ಲದೇ ರಾಜ್ಞಃ ಪಂಥಾ ಬ್ರಾಹ್ಮಣೇನಾಸಮೇತ್ಯ...!! ಒಂದು ವೇಳೆ ಬ್ರಾಹ್ಮಣನು ಎದುರಾಗಿ ಬರುತ್ತಿದ್ದರೆ ರಾಜನೂ ದಾರಿ ಬಿಡಬೇಕು..!!) ಎಂಬುದು ಗೊತ್ತಿಲ್ಲವೇ ಎಂದು ಚೋಟುದ್ದದ ಅಷ್ಟಾವಕ್ರ ಹುಡುಗನೊಬ್ಬ ಕೇಳಿದ್ದಕ್ಕೆ.. ಅವಾಕ್ಕಾದ ಜನಕ ಆಯಿತಪ್ಪಾ ನೀನು ಹೇಳಿದ್ದು ಶಾಸ್ತ್ರ ಸಮ್ಮತವಾಗಿದೆ ..
ಪಂಥಾ ಅಯಂತೇದ್ಯ  ಮಯಾತಿ ದಿಷ್ಟಃ|
ಯೇನೇಚ್ಛಸಿ ತೇನ  ಕಾಮಂ ವ್ರಜಸ್ವ|
ನ ಪಾವಕೋ ವಿದ್ಯತೇ ಲ್ಕಘೀಯಾನ್|
ಇಂದ್ರೋಪಿ ನಿತ್ಯಂನಮತೇ ಬ್ರಾಹ್ಮಣಾನಾಮ್
ಅಗ್ನಿ ಚಿಕ್ಕದಾಗಿರಲೀ ದೊಡ್ಡದಾಗಿರಲೀ ಅಗ್ನಿ ಅಗ್ನಿಯೇ ...ಅದರ ಸುಡುವ ಗುಣಕ್ಕೆ ಚಿಕ್ಕದು ದೊಡ್ಡದು ಎಂಬ ಭೇದವಿದೆಯೇ..!!!ಹಾಗಾಗಿ ನೀನು ಎಲ್ಲಿಗೆ ಹೋಗಬೇಕೆಂದು ಕೊಂಡಿರುವೆಯೋ ಹೋಗು  ಬ್ರಾಃಮಣರಿಗೆ ಗೌರವವಿದ್ದ ಕಾಲ ಅದು...!! ಇದೋ ದಾರಿಯನ್ನು ಬಿಟ್ಟಿದ್ದೇನೆ ಎಂದು ರಾಜ ಪಕ್ಕಕ್ಕೆ ತನ್ನ ಪಲ್ಲಕಿಯನ್ನು ಸರಿಸಲು ಹೇಳಿದ.. ಆಗ ಅಷ್ಟಾವಕ್ರ .." ಮಹಾರಾಜಾ.. ನೀನೇ ಅಲ್ಲವೇ ಜನಕ ಎಂಬವನು... ನಾವು ನಿನ್ನರಮನೆಗೇ ಹೋಗುತ್ತಿದ್ದೇವೆ . 
 ಪ್ರಾಪ್ತೋಸ್ವ ಯಜ್ಞಂ ನೃಪಸಂದಿದೃಕ್ಷುಃ|
 ಕೌತೂಹಲಂ ನೋ ಬಲವನನ್ನರೇಂದ್ರ|
ಪ್ರಾಪ್ತಾವಿಹಾವತಿಥೀ ಪ್ರವೇಶಂ|
ಕಾಂಕ್ಷಾವಹೇ ದ್ವಾರಪತೇಃ ತವಾಜ್ಜಾಮ್|
 ಐಂದ್ರದ್ಯುಮ್ನೆ  ಯಜ್ಞದೃಶಾಮ್ ವಿಹಾವಾಮ್|
ತೌ ವೈ  ಕ್ರೋಧವಿಯಾಧಿನಾ  ದಹ್ಯಮಾನೋ 
ಅಯಂ ಚ ನೋ ದ್ವಾರಪಾಲೋ ಋಣದ್ಧಿ||

 ಅಪ್ಪಾ..ಅಲ್ಲಿ ನಿನ್ನ ದ್ವಾರಪಾಲಕರು ದುಷ್ಟರೆಂದು ಕೇಳಿದ್ದೇವೆ.. ಅವರು ಅರಮನೆಯೊಲಗೆ ಹೋಗಲು ಬಿಡುವುದಿಲ್ಲವಂತೆ.. ಸ್ವಲ್ಪ ಅವರಿಗೆ ಹೇಳಿಬಿಡು.. ನಾಳೆ ನಡೆಯುವ ರಾಜ ಸಭೆಗೆ ಬಾಲಕರೀರ್ವರು ಬರುತ್ತಾರೆ. ಅವರಿಗೆ ದಾರಿ ಮಾಡಿಕೊಡಿ ಬಾಗಿಲಲ್ಲಿ ತಡೆಯಬೇಡಿ ಎಂದು ಹೇಳಿಬಿಡು" ಎಂದ.. ರಾಜ ಅದಕ್ಕೆ ಸಮ್ಮತಿಸಿ ಮುಂದೆ ಹೋದ..ಆದರೆ ಕಾರ್ಯಬಾಹುಳ್ಯದಿಂದ ಅವನಿಗೆ ದ್ವಾರಪಾಲಕರಿಗೆ ಎಚ್ಚರಿಕೆ ಕೊಡುವುದು ಮರೆತು ಹೋಗಿತ್ತು..
ಮಾರನೇ ದಿನ ಬೆಳಿಗ್ಗೆ.. ಈ ಹುಡುಗರು ಜನಕನ ಅರಮನೆಯ ಬಾಗಿಲಿಗೆ ಹೋದರು  ವಂದಿಗೆ ಹೆದರುತ್ತಿದ್ದ ರಾಜ
ಅಲ್ಲಿ ಬಾಗಿಲಲ್ಲಿ ಇಬ್ಬರು ದಡೂತಿ ದ್ವಾರಪಾಲಕರು ನಿಂತಿದ್ದರು.. ಅವರು ಹೇಳಿದರು 
ವಂದೇಃ ಸಮಾದೇಶಕರಾ  ವಯಂ ಸ್ಮ|
ವಿಭೋಧವಾಕ್ಯಂ ಚ ಮಯೇರ್ಯಮಾಣಮ್|
ನ ವೈ ಬಾಲಾಃ  ಪ್ರವಿಶಂತ್ತ್ಯತ್ರ ವಿಪ್ರಾಃ|

...... ನೋಡಿರಪ್ಪಾ ನಾವು ವಂದಿ ಹೇಳಿದಂತೇ ಕೇಳುವವರು... ಅವನಪ್ಪಣೆಯಾಗಿದೆ.. ಇಲ್ಲಿಗೆ ಬಾಲಕರೆಲ್ಲಾ ಬರುವ ಹಾಗಿಲ್ಲ.. ಒಳಗೆ ಹೋಗಬೇಡಿ ಹೋಗಿ ಮನೆಗೆ... ಅದನ್ನು ಕೇಳಿದ ಅಷ್ಟಾ ವಕ್ರ ಹೇಳಿದ 
ಯದ್ಯತ್ರ ವೃದ್ಧೇಷು ಕೃತ ಪ್ರವೇಶಃ|
ಯುಕ್ತಂ ಪ್ರವೇಷ್ಟುಂ ಮಮ ದ್ವಾರ ಪಾಲಾಃ|
ವಯಂ ಹಿ ವೃದ್ಧಾಃ ಚರಿತ ವ್ರತಾಶ್ಚ
ವೇದ ಪ್ರಭಾವೇಣ ಸಮನ್ವಿತಾಶ್ಚ|
ಶುಶ್ರೂಶುವಶ್ಚ ಪಿ ಜಿತೇಂದ್ರಿಯಶ್ಚ
......
ಈ ಜನಕನ ಸಭೆಗೆ ವೃದ್ಧರು ಮಾತ್ರ ಬರಬಹುದೆಂದು ಹೇಳುವಿರಾದರೆ ನಾವೂ ವೃದ್ಧರು..!!!! ಸಕಲ ವೇದ ಶಾಸ್ತ್ರಗಳನ್ನು ಓದಿ ಸ್ನಾತಕರಾಗಿದ್ದೇವೆ.. 
ಮೇಲ್ನೋಟಕ್ಕೆ ನಿಮಗೆ ನಾವು ಸಣ್ಣ ಮಕ್ಕಳಂತೆ ಕಾಣಬಹುದು ಆದರೆ ನಾವೂ ಜ್ಞಾನ ವೃದ್ಧರಪ್ಪಾ...ಎಂದರು.ಬಾಲಕರೆಂದು ನಮ್ಮನ್ನು ಉಪೇಕ್ಷೆ ಮಾಡಬೇಡ... ಎಂದಾಗ ದ್ವಾರಪಾಲಕರಿಗೆ ಸ್ವಲ್ಪ ಪಿತ್ಥ ನೆತ್ತಿಗೇರಿತು...ಹಾಗಾದರೆ ನಾವು ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಸರಿಯುತ್ತರವನ್ನಿತ್ತಿರಾದರೆ ಒಳಗೆ ಬಿಡುತ್ತೇವೆ..ಎಂದರು.. ಆಗಲಿ ಎಂದ ಅಷ್ಟಾವಕ್ರ... ಕೇಳು ಎಂದ... ಆಗ ಆ ದ್ವಾರಪಾಲಕರು...
.. ಸರಸ್ವತೀ ಮೀರೇ  ವೇದಜುಷ್ಟಾಮ್|
 ಏಕಾಕ್ಷರಾಂ ಬಹುರೂಪಾಂ ವಿರಾಜಾಮ್|
 ಅಂಗಾತ್ಮಾನಂ ಸಮವೇಕ್ಷ ಸ್ವ ಬಾಲಮ್|
  ಕಿಂ ಶ್ಲಾಘಸೇುರ್ಲಭೋ ವೈ ಮನೀಷಿ||
ಈ ಸೃಷ್ಟಿಯಲ್ಲಿ ಯಾವ ವೇದಾದಿಗಳಿಗೆ ಪ್ರಾಮಾಣ್ಯವೋ, ಒಂದೇ ಅಕ್ಷರದಿಂದ ಕರೆಯಲ್ಪಡುವ ಹಾಗೂ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೋ ಅಂಥವಳು ನಿನಗೆ ಗೊತ್ತೇ... ಗೊತ್ತಿದ್ದರೆ ಆ ಸರಸ್ವತಿಯ ಕುರಿತು ಹೇಳು.. ಬಾಲಕನಾದರೂ ನಿನ್ನನ್ನು ಒಳಗೆ ಬಿಡುತ್ತೇನೇ ಎಂದ ದ್ವಾರಪಾಲಕ...!! ಅದಕ್ಕೆ ಈ ಅಷ್ಟಾವಕ್ರ ಹೇಳಿದ..." ಓಂ" ಎಂಬುದೇ ಅವಳು... ಒಂದೇ ಅಕ್ಷರದಿಂದ ಕರೆಯಲ್ಪಡುವ ಪ್ರಣವಸ್ವರೂಪಳು.. ಅವ್ಳೇ ..ಗೌರೀಮಿಮಾಯ ಸಲಿಲಾನಿ ತಕ್ಷತ್ಯೇಕಪದೀ... ದ್ವಿಪದೀ ಸಾ ಚತುಷ್ಪದೀ... ಎಂಬಂತೆ ಆ ಗೌರಿಯೇ ಒಂದೇ ಅಕ್ಷದಿಂದ ಕರೆಯಲ್ಪಡುವ ಸರಸ್ವತಿಯಾಗಿದ್ದಾಳೆ.ಳು ಗುರುತ್ವವುಳ್ಳವಳೂ ಇಡೀ ವೇದ ರಾಶೀಯನ್ನು ತನ್ನ ಗರ್ಭದಲ್ಲಿ ತುಂಬಿಕೊಂಡವಳೂ ಆದ ವೇದ ಮಾತೆ ಸರಸ್ವತಿ ಗೊತ್ತಿಲ್ಲವೇ..? ಎಂದ.. ಆಗ ಬಾಗಿಲು ಕಾಯುವ ಚೂರು ತಗ್ಗಿದ... ಆಗ ಅಷ್ಟಾವಕ್ರ ಹೇಳಿದ ನೋಡಪ್ಪಾ ಕೇವಲ ಮೇಲ್ನೋಟಕ್ಕೆ ನೋಡುವುದರ ಮೂಲಕ ಅಳತೆ ಮಾಡಬೇಡ.. ಏಕೆಂದರೆ...
ನ ಜ್ಞಾಯತೇ ಕಾಯ ವೃದ್ಹ್ಯಾ ವಿವೃದ್ಧಿಃ|
ಯಥಾ ಷ್ಟೀಲಾ ಶಾಲ್ಮಲೇಃ ಸಂಪ್ರವೃದ್ಧಾಃ||
ನೋಡಪ್ಪಾಹೇಗೆ ಬೂರುಗದ ಮರವು ನೋಡುವುದಕ್ಕೆ ದೊಡ್ಡದಾಗಿ ಕಂಡರೂ ಒಳಗೆ ಟೊಳ್ಳಾಗಿ ಇರುತ್ತದೆಯೋ ಹಾಗೇ  ಕೇವಲ ನೋಡುವುದಕ್ಕೆ ದೊಡ್ಡವನಾಗಿ ಕಂಡರೂ ವಿದ್ಯೆ ಇಲ್ಲದವನು ಒಳಗೆ ಏನನ್ನೂ ಹೊಂದಿರುವುದಿಲ್ಲ.. ಪೆಡಂಭೂತದಂತೇ... 
{ ಕಥೆಯ ಮುಂದಿನ ಭಾಗ...ಅಷ್ಟಾವಕ್ರ ಗೀತೆಯಲ್ಲಿ ನೋಡಿ...}



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ