ಮಹಾಭಾರತ ತುಂಬ ಗಂಭೀರವಾದ ಕಥಾನಕ ಎಂಬ ಹೇಳಿಕೆಗಳು ಇದ್ದರೂ ಅದರಲ್ಲಿಯೂ ಶ್ರೀ ವ್ಯಾಸರು ತುಂಬ ಮಾರ್ಮಿಕವಾದ ತಮಾಷೆಯ ಅನೇಕ ಸನ್ನಿ ವೇಶಗಳನ್ನು ವರ್ಣಿಸಿ ಚಿಕ್ಕ ಚಿಕ್ಕ ಉಪಕಥೆಗಳನ್ನು ಸಂದರ್ಭೋಚಿತವಾಗಿ ಸೇರಿ ಸಿದ್ದಾರೆ..
ಯುಧಿಷ್ಟಿರಾದಿಗಳು ವನವಾಸಕ್ಕೆ ಹೊರಟ ಸಂದರ್ಭದಲ್ಲಿ ದಾರಿಯಲ್ಲಿ ಎದು ರಾದ ಲೋಮಶರು ಧರ್ಮರಾಜನಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡುವಂತೆ ತಿಳಿಸುತ್ತಾ ಬೇರೆ ಬೇರೆ ತೀರ್ಥ ಕ್ಷೇತ್ರಗಳಿಗೆ ಕರೆದೊಯ್ಯುತ್ತಾ ಅಲ್ಲಲ್ಲಿಯ ಸ್ಥಳ ಮಹಿಮೆಯನ್ನು ತುಂಬ ಸುಂದರವಾಘಿ ವರ್ಣಿಸುತ್ತಾರೆ.. ಅಂತಹ ಒಂದು ತೀರ್ಥ
**************************************************
ಯುಧಿಷ್ಟಿರಾಸೀನೃಪತಿಃಸೋಮಕೋ ನಾಮ ಧಾರ್ಮಿಕಃ
ತಸ್ಯ ಭಾರ್ಯಾಶತಂ ರಾಜನ್ ಸದೃಶೀನಾಮಭೂತ್ತದಾ||
ಬಹಳ ಹಿಂದೆ ’ಸೋಮಕ’ ಎಂಬ ಓರ್ವ ಬಹಳ ಧಾರ್ಮಿಕನಾದ ರಾಜನಿ ದ್ದ. ಅವನಿಗೆ ನೂರು ಜನ ಹೆಂಡತಿಯರಿದ್ದರು. ಬಹಳ ಕಾಲದ ನಂತರವೂ ಆ ನೂರು ಜನ ಹೆಂಡದಿರಿದ್ದರೂ ರಾಜನಿಗೆ ಪುತ್ರ ಸಂತಾನವಿರಲಿಲ್ಲ.ಧೃತರಾಷ್ಟ್ರನಿಗೆ ಒಂದೇ ಹೆಂಡತಿಯಲ್ಲಿ ನೂರೊಂದು ಜನ ಮಕ್ಕಳಿದ್ದರು.. ಆದರೆ ಈ ಸೋಮಕನಿಗೆ ನೂರು ಜನ ಹೆಂಡಂದಿರಿದ್ದರೂ ಒಂದೇ ಪುತ್ರ ಸಂತಾನವಿರಲಿಲ್ಲ. ರಾಜ ತುಂಬಾ ವ್ಯಾಕುಲನಾದ. ಹಲವಾರು ಹರಕೆಗಳನ್ನು ಹೊತ್ತ, ಹಲವು ತೀರ್ಥಗಳ ದರ್ಶನ ಮಾಡಿದ ತನ್ನ ಹೆಂಡತಿಯರೊಂದಿಗೆ. ಆದರೂ ತಾನು ವೃದ್ಧನಾಗುತ್ತಾ ಬಂದರೂ ಮಕ್ಕಳಾಗದ್ದನ್ನು ನೋಡಿ ಓರ್ವ ಬ್ರಾಹ್ಮಣನನ್ನು ಕೇಳಿದ.
ಕದಾಚಿತ್ ತಸ್ಯ ವೃದ್ಧಸ್ಯ ಘಟಮಾನಸ್ಯ ಯತ್ನತಃ|
ಜಂತುರ್ನಾಮ ಸುತಃ ತಸ್ಮಿನ್ ಸ್ತ್ರೀ ಶತೇ ಸಮಜಾಯತ||
ಆ ಬ್ರಾಹ್ಮಣನ ಉಪದೇಶದಂತೇ ಮಾಡಲಾಗಿ ಆ ವೃದ್ಧಾಪ್ಯಕ್ಕೆ ಹೋಗುತ್ತಿರುವ ರಾಜನ ನೂರು ಹೆಂಡತಿಯರಲ್ಲೊಬ್ಬಳಿಗೆ ಓರ್ವ ಪುತ್ರ ಜನನವಾಯಿತು. ನೂರು ಜನ ತಾಯಂದಿರಿಗೆ ಓರ್ವ ಮಗನಾಗಿ ಜನಿಸಿದ ಆ ಮಗುವಿಗೆ ’ಜಂತು’ ಎಂದು ನಾಮಕರಣ ಮಾಡಲಾಯಿತು. ಮಗು ತನ್ನ ಅರಮನೆಯಲ್ಲಿ ಬಹಳ ಮುದ್ದಿನಿಂದ ಬೆಳೆಯತೊಡಗಿತು. ಮಗುವನ್ನು ಆ ನೂರು ಜನ ತಾಯಂದಿರೂ ತಮ್ಮ ಮಗನೆಂ ದೇ ತಿಳಿದು ಸಲಹ ತೊಡಗಿದರು.. ಅತಿಯಾದ ಮುಚ್ಚಟೆಯ ಕಾರಣದಿಂದಾಗಿ ಆ ಮಗು ಒಂದರೆಘಳಿಗೆಯೂ ಭೂಮಿಯಲ್ಲಿ ತೆವಳಲೇ ಇಲ್ಲ.. ಒಬ್ಬರಾದ ಮೇಲೊಬ್ಬ ರಂತೆ ಮಗುವನ್ನು ಎತ್ತಿಕೊಂಡೇ ತಿರುಗುತ್ತಿದ್ದರು.ಮಗುವಿಗೆ ನಿಜವಾದ ತಾಯಿ ಯಾರೆಂದು ಗುರುತಿಸುವುದೇ ಕಷ್ಟವಾಗುತ್ತಿತ್ತು..!!
ಒಂದು ದಿನ ಅರಮನೆಯ ಅಂತಃಪುರದಲ್ಲಿ ಭಾರೀ ಕೋಲಾಹಲ...!! ರಾಣಿ ಯರೆಲ್ಲರೂ ಹಡಾವಿಡಿಯಿಂದ ಓಡಾಡುತ್ತಿದ್ದಾರೆ...! ಪರಿಚಾರಿಕೆಯರು ಅತ್ತಿಂದಿತ್ತ ಓಡುತ್ತಿದ್ದಾರೆ.. ಮಗು ಯಾವುದೋ ತಾಯಿಯ ಕಂಕುಳಲ್ಲಿ ಕುಳಿತು ಅಳುತ್ತಿದೆ...!! ಎಲ್ಲಿ ಕೇಳಿದರೂ ...ಏನಾಯಿತು..?....ಏನಾಯಿತು....? ...ಮಗು ಏಕೆ ಅಳುತ್ತಿದೆ...? ,.... ಮಗುವಿಗೇನಾಯಿತು...? ತಾಯಿಯ ಸೊಂಟವನ್ನೇರಿ ತಿರುಗುತ್ತಿರುವ ಮಗುವಿನ ಕುಂಡೆಗೊಂದು ಪುಟ್ಟ ಇರುವೆ ಕಚ್ಚಿಬಿಟ್ಟಿತ್ತು...!!!! ಫ್ಚ್...!!.. ಇಡೀ ಅರಮನೆ ಅಲ್ಲೋಲ ಕಲ್ಲೋಲವಾಯಿತು... ಅಂತಃಪುರದ ವಾರ್ತೆಯನ್ನು ಚಾರನೊ ಬ್ಬ ರಾಜ ಸಭೆಯಲ್ಲಿ ಮಂತ್ರಾಲೋಚನೆಯಲ್ಲಿ ಕುಳಿತಿದ್ದ ರಾಜನ ಕಿವಿಗೆ ಹಾಕಿದ.... " ಮಹಾರಾಜರೇ ಅಂತಃಪುರದಲ್ಲಿ ತಮ್ಮ ಮಗನ ಕುಂಡೆಗೆ ಇರುವೆ ಕಚ್ಚಿಬಿಟ್ಟಿದೆ.... .ಮಗು ಅಳುತ್ತಿದೆ... ರಾಣಿಯರೆಲ್ಲಾ ತುಂಬಾ ದುಃಖಿತರಾಗಿದ್ದಾರೆ.."!!ರಾಜನಿಗೂ ಗಾಬರಿಯಾಯಿತು.. ಮಂತ್ರಾಲೋಚನೆಯನ್ನು ಅರ್ಧದಲ್ಲೇ ನಿಲ್ಲಿಸಿ ಅಂತಃಪುರಕ್ಕೆ ಧಾವಿಸಿದ...! ಹುಟ್ಟಿದ ಒಬ್ಬನೇ ಮಗನಿಗೆ ಈ ರೀತಿ ಆಗುವುದೇ.. ಛೇ .. ಇದನ್ನು ಹೇಗೆ ಸಹಿಸಿಕೊಳ್ಳುವುದು.. ಅಂತಃಪುರದ ಚಾರರನ್ನು ಕೋಪದಿಂದ ಕೂಗಿದ...! "ಯಾರಲ್ಲಿ...." ಚಾರರು ಬಂದು ಕೈಮುಗಿದು ನಿಂತರು....." ನಿಮಗೆ ಅನ್ನ ಹಾಕು ವುದು ಇದಕ್ಕೇ ಏನು... ಏನು ಮಾಡುತ್ತಿದ್ದಿರಿ ನೀವು... ಆ ಇರುವೆ ಇಲ್ಲಿಗೆ ಹೇಗೆ ಬಂತು .. ನೀವೇನು ಮಾಡುತ್ತಿದ್ದಿರಿ..? ದಂಡ ಪಿಂಡಗಳೆ... ಇಷ್ಟೊಂದು ಜನ ಇದ್ದೂ ಆ ಇರುವೆ ನನ್ನ ಮಗನನ್ನು ಕಚ್ಚಿದೆಯೆಂದರೆ ನನ್ನಿಂದ ತಡೆದುಕೊಳ್ಳಲಾಗುವುದಿಲ್ಲ ......ಪಾಪ ಈ ನನ್ನ ಮಗನಿಗೆ ಅದೆಷ್ಟು ನೋವಾಗಿದೆಯೋ.... ಪಾಪಿಗಳಾ ತೊಲಗಿ ಇಲ್ಲಿಂದ...ಮುಖ ತೋರಿಸಬೇಡಿ...!!! " ಎಂದು ಬಡಬಡಿಸತೊಡಗಿದ.
ಹೀಗೆ ಇರುವ ಒಬ್ಬನೇ ಮಗನಿಗೆ ಇರುವೆ ಕಚ್ಚಿ ನೋವನ್ನನುಭವಿಸುತ್ತಿರು ವಾಗ ರಾಜನಿಗೆ ಒಂದು ವಿಚಾರ ಬಂತು..
ನನಗೆ ಒಬ್ಬನೇ ಮಗನಿರುವುದರಿಂದ .....
ಧಿಗಸ್ತು ಇಹೈಕಪುತ್ರತ್ವಂ ಅಪುತ್ರತ್ವಂ ವರಂ ಭವೇತ್|
ನಿತ್ಯಾತುರತ್ವಾತ್ ಭೂತಾನಾಂ ಶೋಕ ಏವೈಕಪುತ್ರತಾ||
ಥೂ...ಧಿಕ್ಕಾರವಿರಲಿ... ಹೀಗೇ ಒಬ್ಬನೇ ಮಗನಿರುವುದಕ್ಕಿಂತಲೂ ಮಕ್ಕಳಿಲ್ಲದಿರು ವುದೇ ಒಳ್ಳೆಯದಾಗಿತ್ತು ... ಒಬ್ಬನೇ ಮಗನಿದ್ದರೆ ಹೀಗೇ ಆಗುವುದು...ಹಾಗಾಗಿ ಈ ಒಬ್ಬನೇ ಮಗನಿಗಿಂತ ನಾನು ನೂರಾರು ಮಕ್ಕಳನ್ನು ಪಡೆಯಬೇಕು.. ಎಂದು ಚಿಂತಿ ಸಿದ...!! ಅದಕ್ಕಾಗಿ ಅನೇಕ ಬ್ರಾಹ್ಮಣರನ್ನು ಕೇಳಿದ...ಆಗ ಒಬ್ಬ ಬ್ರಾಹ್ಮಣ ರಾಜನೆ ದುರಿಗೆ ಬಂದು ಆಶೀರ್ವಾದ ಮಾಡಿ ಹೇಳಿದ....." ಮಹಾರಾಜಾ ನೀನು ನೂರು ಮಕ್ಕಳನ್ನು ಸಾಮಾನ್ಯವಾದ ದೇವತಾರ್ಚನೆಗಳಿಂದಲೋ ಯಜ್ಞ ಯಾಗಗಳಿಂದ ಲೋ ಸಾಧ್ಯವಿಲ್ಲ...! ಅದಕ್ಕೆ ಒಂದು "ಆಭಿಚಾರಿಕ" ವನ್ನು ಮಾಡಬೇಕು....ನೀನು ನಮ್ಮ ತಲೆಯನ್ನು ಉಳಿಸುವೆಯಾದರೆ ಅದು ಏನೆಂದು ತಿಳಿಸುತ್ತೇವೆ" ಎಂದರು.. ರಾಜ ಹೇಳಿ ಎಂದ. ಅಭಯವನ್ನೂ ಕೊಟ್ಟ..!!!! ಆಗ" ರಾಜಾ ನಿನಗೆ ನೂರು ಮಕ್ಕ ಳನ್ನು ಪಡೆಯಲೇ ಬೇಕೆಂಬ ಆಸೆಯಿದ್ದರೆ ನಾವು ಒಂದು ಆಭಿಚಾರಕ ಯಾಗವನ್ನು ಮಾಡಬೇಕಿದೆ. ಅದಕ್ಕಾಗಿ ಆ ಯಾಗದಲ್ಲಿ ಪಶುಬಲಿಯನ್ನು ಕೊಡುವ ಕ್ರಮದಲ್ಲಿ ಈಗ ನಿನಗೆ ಹುಟ್ಟಿರುವ ’ಜಂತು’ ವನ್ನೇ ಬಲಿಕೊಡಬೇಕು... ಅವನ ಶರೀರದಿಂದ ತೆಗೆದ ’ವಪೆ’ಯನ್ನು ಅಗ್ನಿಗೆ ಸಮರ್ಪಿಸಬೇಕು"...ಎಂದರು...!! ಇದನ್ನು ಕೇಳಿದ ರಾಜ ಸೋಮಕ ಒಂದರೆಘಳಿಗೆ ಮೂರ್ಛಿತನಾದ... ಶೈತ್ಯೋಪಚಾರದ ನಂತರ ಎದ್ದುಕು ಳಿತ ರಾಜ.. ಆ ಬ್ರಾಹ್ಮಣನಿಗೆ "ಹಾಗೇ ಆಗಲಿ" ಎಂದುಬಿಟ್ಟ... ಈ ಆಭಿಚಾರಿಕ ಕ್ರಿಯೆ ಎಂದರೆ ಪ್ರೆಶ್ಶರ್ ಕುಕ್ಕರಿನಲ್ಲಿ ತರಕಾರಿ ಬೇಯಿಸಿದಂತೆ... ವೇದ ಮಂತ್ರಗ ಳಿಗೆ ಬಾರದ ದೇವತೆಗಳನ್ನು ಬಲತ್ಕಾರವಾಗಿ ಯಜ್ಞವೇದಿಗೆ ಎಳೆದು ತಂದು ಅವರಿ ಗೆ ಹವಿಸ್ಸುಗಳನ್ನು ನೀಡಿ ಅವರನ್ನು ಒತ್ತಾಯದ ಮೇಲೆ ಒಲಿಸಿಕೊಂಡು ಅವರಿಂದ ಪ್ರಾಪ್ತಿಯನ್ನು ಮಾಡಿಕೊಳ್ಳುವುದು....!...
ಯಾಗ ಪ್ರಾರಂಭವಾಯಿತು... ರಾಜ ಆ ಬ್ರಾಹ್ಮಣನನ್ನೇ ಮುಮ್ದಿಟ್ಟುಕೊಂಡು ಯಜ್ಞವನ್ನು ಪ್ರಾರಂಭಿಸಿಯೇ ಬಿಟ್ಟ...!! ಅವನಿಗೆ ನೂರು ಮಕ್ಕಳನ್ನು ಪಡೆಯಲೇ ಬೇಕು ಎಂಬ ಹಠ ಇತ್ತು... ಅದಕ್ಕೆ ಈ ಬ್ರಾಹ್ಮಣರೂ ತಮ್ಮ ಬ್ರಾಹ್ಮಣ್ಯವನ್ನು ಮಾರಿ ಕೊಂಡರು.. ಅಲ್ಲಿಗೆ ಮುಗಿಯಿತು..ಕಾರ್ಯಾಕಾರ್ಯವನ್ನು ಅರಿತೂ ಬ್ರಾಹ್ಮಣರು ಆಭಿಚಾರಿಕಕ್ಕೆ ಮೊದಲುಮಾಡಿದರು...!
ಯಜಸ್ವ ಜಂತುನಾ ರಾಜನ್ ತ್ವಂ ಮಯಾ ವಿತತೇ ಕ್ರತು
ತತಃ ಪುತ ಶತಂ ಶ್ರೀಮತ್ ಭವಿಷ್ಯತಿ ಅಚರೇಣತ್||
ವಪಾಯಾಮಾಹೂಯಮಾನಾಮ್ ಧೂಮಮಾಘ್ರಾಯ ಮಾತರ|
ತತಾಸು ಮಾಹಾ ವೀರ್ಯಾನ್ ಜನಿಷ್ಯಂತಿ ತೇ ಸುತಾನ್||
ಆ ಹೋಮ ಧೂಮವನ್ನು ಆಘ್ರಾಣಿಸಿದರೆ ಆ ತಾಯಂದಿರು ಮಕ್ಕಳನ್ನು ಪಡೆಯು ತ್ತಾರೆ.. ಅದೂ ಈ ಬಾಲಕನನ್ನೇ ಹೋಲುವ ಮಗುವನ್ನು ಪಡೆಯುತ್ತಾರೆ...ಎಂದು ಬ್ರಾಹ್ಮಣರು ಅಭಯ ನೀಡಿದರು....ಆಗ ರಾಜ ಅನುಮಾನಿಸಿದ... ಅದಕ್ಕೆ ಬ್ರಾಹ್ಮಣ ರು ಈ ಮಗುವಿನ ಸೊಂಟದಲ್ಲಿರುವ ಕಪ್ಪು ಮಚ್ಚೆಯನ್ನೇ ನೆನಪಿಟ್ಟುಕೋ..ಅದೇ ಮಚ್ಚೆಯನ್ನು ನಿನಗೆ ಮುಂದೆ ಹುಟ್ಟುವ ನೂರು ಮಕ್ಕಳೂ ಹೊಂದಿರುತ್ತಾರೆ... ಎಂದೆ ಲ್ಲಾ ರಾಜನಿಗೆ ಧೈರ್ಯ ತುಂಬಿದರು...
ಈ ಆಭಿಚಾರಕವೆಂಬುದೇ ಒಂದು ಅಸಂಬದ್ಧ...! ಅದರಲ್ಲೂ ಮನುಷ್ಯನನ್ನೇ ಯಾಗ ದಲ್ಲಿ ಬಲಿಕೊಡುವುದು ಇನ್ನೂ ಹೊಲಸು ಕೆಲಸ... ಹಾಗಿದ್ದೂ ಈ ಬ್ರಾಹ್ಮಣರು ರಾಜ ನಿಂದ ಈ ಅಕಾರ್ಯಕ್ಕೆ ಮುಂದಾದರು.. ಇದನ್ನು ಹೇಳುವಾಗ ಹಿಂದೆ ಶ್ರೀಮನ್ನಾರ ಯಣನು ತನ್ನನ್ನೇ ತಾನು ಯಾಜಿಸಿಕೊಂಡಿಲ್ಲವೇ ಎಂದು ಮನದಲ್ಲಿ ವಿಚಾರ ಬರುತ್ತದೆ..ಆದರೆ ಅದು ಮಹಾ ಪುರುಷ ಯಜ್ಞ...!! ಅಲ್ಲಿ ಭಗವಂತ ತನ್ನನ್ನೇ ಹೋಮದಲ್ಲಿ ಸಮಿತ್ತಾಗಿ ಬಳಸಿಕೊಂಡು ಸೃಷ್ಟಿಕಾರ್ಯಕ್ಕೆ ಮುಂದಾಗುತ್ತಾನೆ..
ತಂ ಯಜ್ಞಂ ಬರ್ಹಿಷಿ ಪ್ರೋಕ್ಷನ್ ಪುರುಷಂ ಜಾತಮಗ್ರತಃ.......
ಬಘವಂತನ ನಾನಾತ್ವದಿಂದ ಈ ಜಗತ್ತು ಸೃಷ್ಟಿಸಲ್ಪಟ್ಟಿತು...
ಭಗವಂತನ ನಾನಾತ್ವವನ್ನು ಏಕತ್ವದಲ್ಲಿ ಕಂಡುಕೊಳ್ಳುವುದು ಯಜ್ಞ
ಬ್ರಾಹ್ಮಣೋ ಅಸ್ಯ ಮುಖಮಾಸೀತ್....ಬಾಹೂ ರಾಜನ್ಯಃ ಕೃತಃ!! ಭಗವಂತನ ಅಂಗಾಗಗಳೆಲ್ಲವೂ ಯಜ್ಞವಾಗಿ ಏಕತ್ರೀಕೃತವಾಗಿ ಬಹು ಮುಖವುಳ್ಳ ಈ ಸೃಷ್ಟಿಗೆ ಕಾರಣವಾಯಿತು..
ಆರಣ್ಯಾಃ ಪಶವಃ| ಗ್ರಾಮ್ಯಾಃ ಪಶವಃ| ಇತ್ಯಾದಿಯಾಗಿ ಎಲ್ಲವೂ ಸೃಷ್ಟಿಯಾದವು...
ಹೀಗೇ ಒಂದು ಯಜ್ಞವನ್ನು ಮಾಡಲು ಪ್ರಾರಂಭಿಸಿದ..ರಾಜ ಸೋಮಕ.. ಮಗನನ್ನು ಬಲಿಕೊಡುವ ಸಂದರ್ಭದಲ್ಲಿ ರಾಣಿಯರು ಬಿಕ್ಕಿ ಬಿಕ್ಕಿ ಅತ್ತರು..ರಾಜನ ಮೂಢತ್ವವನ್ನು ಜೆರೆದರು.. ಅಯ್ಯೋ ಬೇಡಾ..ಎಂದು ಆ ಮಗುವಿನ ಒಂದು ಕೈಯ್ಯ ನ್ನು ರಾಣಿಯರೂ..ಇನ್ನೊಂದನ್ನು ರಾಜನೂ ಹಿಡಿದು ಜಗ್ಗಾಡಿದರು.. ಕಣ್ಣೀರ ಧಾರೆ ಕೋಡಿಯಾಗಿ ಹರಿಯಿತು.... ಅಯ್ಯೋ ಮಕ್ಕಳನ್ನು ಪಡೆಯಬೇಕು ಎಂಬ ಆತುರದಲ್ಲಿ ಹುಟ್ಟಿದ ಮಗನನ್ನೇ ಬಲಿಕೊಡಲು ಮುಂದಾದೆಯಲ್ಲಾ ಅಯ್ಯೋ ಅಪುತ್ರಸ್ಯ ಗತಿರ್ನಾಸ್ತಿ ಎಂದು ಮೂಢವಾಗಿ ಆಲೋಚಿಸುತ್ತೀರಲ್ಲಾ ಎಂದು ಕೂಗಾಡಿದರು... .ಮಕ್ಕಳಿದವರು ಅನೇಕರು ಈ ಲೋಕದಲ್ಲಿ ಆಗಿ ಹೋಗಿದ್ದಾರೆ..ಅವರೆಲ್ಲರಿಗೂ ಸ್ವ ರ್ಗದ ಗತಿ ಸಿಗಲಿಲ್ಲವೇ... ಛೇ ಎಂಥಾ ದುರ್ಗತಿ ಬಂತಪ್ಪಾ ಎಂದು ಹೊಟ್ಟೆ ಬಡಿದು ಕೊಂಡು ಅತ್ತರೂ..ಕೊನೆಯಲ್ಲಿ ಆ ಮಗುವನ್ನು ಎಳೆದುಕೊಂಡ ರಾಜ ಒಬ್ಬನೇ ಮಗ ನಾದ ಜಂತುವನ್ನು ಬಲಿಕೊಟ್ಟೇಬಿಟ್ಟ....!.. ಹೋಮ ಧೂಮವನ್ನು ರಾಣಿಯರೆಲ್ಲರೂ ಆಘ್ರಾಣಿಸಿದರು... ಅಂತೂ ಒಂದು "ಆಭಿಚಾರಿಕ" ಬ್ರಾಹ್ಮಣನಿಂದ ನಡೆದೇ ಹೋಯಿತು....
ಹತ್ತು ತಿಂಗಳು ಬಳಿಕ ರಾಣಿಯರು ಒಂದೊಂದು ಗಂಡು ಮಗುವನ್ನು ಹಡೆದರು.. ಆ ಎಲ್ಲ ಮಕ್ಕಳೂ ಸೊಂಟದಲ್ಲಿ ಮಚ್ಚೆಯನ್ನು ಹೊಂದಿದ್ದರು.... ಅಂತೂ ರಾಜ ಹಸನ್ಮು ಖಿಯಾದ.... ಆದರೆ ಕೆಲವೇ ದಿನಗಳಲ್ಲಿ ಆ ಪುರೋಹಿತ ಸತ್ತುಹೋದ... ಮಾಡಬಾ ರದ್ದನ್ನು ಮಾಡಿ ನರಕಕ್ಕೆ ಹೋದ..... ಕೆಲವು ದಿನಗಳಲ್ಲೇ ರಾಜನೂ ಸತ್ತ.... ಸತ್ತ ರಾಜನ ಆತ್ಮ ನರಕದಲ್ಲಿ ತೊಳಲಾಡುತ್ತಿದ್ದ ಆ ಪುರೋಹಿತನ ಆತ್ಮವನ್ನು ನೋಡಿ ತು .. ಅಯ್ಯಾ.. ನೂರು ಜನ ಮಕ್ಕಳನ್ನು ನನಗೆ ಕೊಡಿಸುವುದಕ್ಕಾದ ನಿನಗೆ ಈ ನರಕದಿಂದ ಮುಕ್ತನಾಗುವುದಕ್ಕೆ ಆಗಲಿಲ್ಲವೇ ಎಂದು ರಾಜ ಪುರೋಹಿತನನ್ನು ಕೇಳಿದ...
ಇದನ್ನೇ..ಭಗವಂತ..ಗೀತೆಯಲ್ಲಿ ಹೇಳಿದ್ದು
ಇದು ಯಮಧರ್ಮ ಗೀತೆ...
ನಾನ್ಯಃ ಕರ್ತುಃ ಫಲಂ ರಾಜನ್ ಭುಭೂಂಕ್ತೇ ಕದಾಚನ|
ಇಮಾನಿ ತವ ದೃಷ್ಯಂತೇ ಫಲಾನಿ ವದತಾಂ ವರ||
ಹೀಗೇ ಹೇಳುತ್ತಾ ರಾಜ ಯಮನಿಗೆ ತಾನೂ ಈ ಬ್ರಾಹ್ಮಣನೊಟ್ಟಿಗೆ ಇಲ್ಲೇ ಇರು ತ್ತೇನೆ ಎಂದು ಹಠ ಹಿಡಿದ.. ಇದನ್ನು ಕೇಳಿದ ಯಮಧರ್ಮ ಕೊನೆಗೆ ಇಬ್ಬರನ್ನೂ ಸ್ವರ್ಗಕ್ಕೆ ಕಳುಹಿಸಿದ...
ಬ್ರಾಹ್ಮಣನಾದವನು ರಾಜನಿಗೆ ಸರಿಯಾದ ಮಾರ್ಗವನ್ನು ತಿಳಿಸಿದ್ದರೆ ಈ ನರಕ ದರ್ಶನಯೋಗವಿರಲಿಲ್ಲ.. ಬ್ರಾಹ್ಮಣನಿಗೆ ತುಂಬಾ ಕರ್ಮ ಕಾಠಿಣ್ಯವಿದೆ.. ತಿಳಿದೂ ತಪ್ಪನ್ನು ಬ್ರಾಹ್ಮಣನಾದವನು ಮಾಡಿದನಾದರೆ ಅವನಿಗೆ ಲೋಕೋತ್ತರದಲ್ಲೂ ಒಳ್ಳೆಯದಾಗುವುದಿಲ್ಲ ಎಂಬ ಕಥೆಯನ್ನು ಧರ್ಮರಾಜನಿಗೆ ಹೇಳಿದ ಲೋಮಶರು ಧರ್ಮರಾಜನನ್ನು ಮುಂದಿನ ತೀರ್ಥಕ್ಷೇತ್ರದ ಕಡೆಗೆ ಕರೆದುಕೊಂಡು ಹೋದರು....
Disturbing story!
ಪ್ರತ್ಯುತ್ತರಅಳಿಸಿ