ಯಕ್ಷ ಪ್ರಶ್ನೆ ....???
ಯಕ್ಷ :- ಸೂರ್ಯನು ಉದಯಿಸುವಂತೆ ಮಾಡುವುದು ಯಾವುದು ?
ಅವನ ಸುತ್ತಲೂ ಸಂಚಾರ ಮಾಡುವವರು ಯಾರು ?
ಅವನನ್ನು ಮುಳುಗುವಂತೆ ಮಾಡುವವರು ಯಾರು ?
ರವಿಯು ಪ್ರತಿಷ್ಠಿತನಾಗಿರುವುದೆಲ್ಲಿ ?
ಧರ್ಮ :- ಪರಬ್ರಹ್ಮವು ಸೂರ್ಯನನ್ನು ಉದಯಿಸುವಂತೆ ಮಾಡುವುದು .
ಅವನ ಸುತ್ತಲೂ ದೇವಾನು ದೇವತೆಗಳು ಸಂಚಾರ ಮಾಡುವವರು.
ಕಾಲಧರ್ಮವು ಅವನನ್ನು ಮುಳುಗುವಂತೆ ಮಾಡುವುದು.
ಸಕಲ ಜೀವಕ್ಕೂ ಕಾರಣನಾದ ಅವನು ಸತ್ಯದಲ್ಲಿ ಪ್ರತಿಷ್ಠಿತನಾಗಿರುವನು.
ಯಾವುದರಿಂದ ಮಹತ್ತನ್ನು ಸಾಧಿಸಬಲ್ಲನು ?
ಯಾವುದರಿಂದ ದ್ವಿತೀಯ ವ್ಯಕ್ತಿತ್ವವು ಬರಲು ಸಾಧ್ಯ ?
ಮಾನವನು ಹೇಗೆ ಚತುರನೆನಿಸಬಲ್ಲನು ?
ಧರ್ಮ :- ಶೃತಿವಾಕ್ಯಗಳನ್ನು ಕೇಳುವುದರಿಂದ ಶ್ರೋತ್ರೀಯನಾಗುವನು.
ತಪೋಬಲದಿಂದ ಮಹತ್ತನ್ನು ಸಾಧಿಸಬಲ್ಲನು.
ದ್ವಿತೀಯ ವ್ಯಕ್ತಿತ್ವವನ್ನು ಧೈರ್ಯವು ನೀಡಬಲ್ಲುದು.
ಜ್ಞಾನ ವೃದ್ಧರ, ವಯೋವೃದ್ಧರ ಸಂಗ - ಸೇವನೆಯಿಂದ ಮಾನವನು ಚತುರನೆನಿಸುವನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ