ನಮ್ಮನ್ನು ಆಳುವವರಿಗೆ ನಮ್ಮ ದೇಶದ ಎಲ್ಲಾ ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಬೇಕೂ ಅನ್ನೂ ಮನಸ್ಸು ಇದೆಯಾ..? ಅದಕ್ಕಾಗಿ ಸಂವಿಧಾನ ಏನೋ ಹೇಳಿದೆ.. ಎಲ್ಲರಿಗೂ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರಕಬೇಕು ಅಂತ... ಅದಕ್ಕೇ ಇವರೂ ವರ್ಷಕ್ಕೊಂದು ಹೊಸಾ ಹೊಸಾ ಯೋಜನೆ ಮೂಲಕ ದುಡ್ಡು ಸುರೀತಾನೇ ಇದ್ದಾರೆ.. ಭಾಷಣಗಳಲ್ಲಿ ಹೇಳ್ತಾನೇ ಇದ್ದಾರೆ ಎಲ್ಲೋರಿಗೂ ಶಿಕ್ಷಣಾ ಸಿಗಬೇಕೂ... ಎಲ್ಲರೂ ಸಾಕ್ಷರರಾಗಬೇಕೂ ೧೦ ನೇ ತರಗತಿ ವರೆಗೆ ಎಲ್ಲಾ ಮಕ್ಕಳೂ ಕಲೀಲೇ ಬೇಕೂ..ಅದಕ್ಕಾಗಿ ಏನ್ ಬೇಕೋ ಅದ್ ಮಾಡ್ತೀವೀ... ಬಟ್ಟೆ ಕೊಡ್ತೀವಿ, ಊಟಾ ಕೊಡ್ತೀವಿ,,, ಸೈಕಲ್ ಕೊಡ್ತೀವಿ,,ಪುಸ್ತಕಾ ಕೊಡ್ತೀವಿ,, ಶೈಕ್ಷಣಿಕ ಪ್ರವಾಸ ಮಾಡಿಸ್ತೀವಿ.. ರೂಂ ಕೊಡ್ತೀವಿ.. ಎಲ್ಲಾ ಕೊಡ್ತೀವಿ...ಅಂತಾ... ಆದ್ರೆ ಒಳ್ಳೇ ಶಿಕ್ಷಣಾ ಕೊಡ್ತೀವಿ ಅನ್ನೋ ಒಂದೇ ಒಂದು ಯೋಜನೇನೂ ಇಲ್ವೇ ಇಲ್ಲಾ..!!!!! ಹೆತ್ತರಿಕೆ....!!! ಅಂದ್ರೆ ನಿಮಗೆಲ್ಲಾ ಶಿಕ್ಷಣಾ ಕೊಟ್ಬುಟ್ಟು ೧೦ ಕ್ಲಾಸ್ ಪಾಸಾದ್ರೆ... ನಮಗೆ ವೋಟಾಕಾಕೇ ಬರ್ತೀರಾ...ಊಹೂಂ ಖ್ಂಡಿತಾ ಬರಲ್ಲಾ...ಅದ್ಕೇ....ಸಂವಿಧಾನ ಏನೋ ಹೇಳ್ ಬಿಟ್ಟಿದೆ..ಕೊಡಬೇಕೂ ಅಂತ ಅದರ ವಿರುದ್ಧವಾಗಿ ಮಾತಾಡೋ ಹಾಗಿಲ್ಲಾ... ಅದ್ಕೇ ಅಂತೀವಪ್ಪಾ.. ಆದ್ರೆ ಮೇಸ್ಟ್ರುಗಳಿಗೆ ಪಾಟ್ಃಆ ಮಾಡೋಕೆ ಬಿಟ್ರೆ ತಾನೇ ನೀವ್ ಕ್ಲಿಯೋದೂ... ನೀವ್ ಕಲತರೆ ಮತ್ತೆ ನಮ್ಮನ್ ಮಾತಾಡ್ಸಲ್ಲಾ... ವೋಟೂ ಹಾಕಲ್ಲಾ,,,
ಅದ್ಕೇ ಮಗೂನೂ ಚಿವುಟ್ತೀವಿ ತೊಟ್ಳನ್ನೂ ತೂಗ್ತೀವಿ...!!!!!ಹ್ಯಾಂಗೇ...ಇಲ್ಲೊಬ್ರು ಒಳ್ಳೇ ಮೇಸ್ಟ್ರು ಇದ್ರು... ಆಶಾಲೆಗೆ ೧೯೯೬ ಬಂದ್ರಂತೆ... ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ರೂ ಆವಾಗ್ ಅವಕೈಯ್ಯಲ್ಲಿ ಓದಿದ್ ಮಕ್ಕಳು ಇಂದೂ ಅವರನ್ನು ಕಂಡು ಮಾತಾಡಿಸಿಕೊಂಡು ಹೋಗೋದನ್ನು ನೋಡಿದ್ದೇನೆ... ಆದ್ರೆ... ೨೦೦೭ರಲ್ಲಿ ಅದೇ ಶಾಲೆಯಲ್ಲಿ ಈ ರಾಜಕೀಯ ಅನ್ನೊದು ಪ್ರವೇಶ ಮಾಡ್ತು... ಆ ಮೇಸ್ಟ್ರ ಮೇಲೆ ಸುಮ್ ಸುಮ್ಮನೇ ಅಪವಾದಗಳು..ಸಿಲ್ಲಿ ಅಪವಾದಗಳು ಬರೋಕೆ ಶುರು ಆಯ್ತು... ಯಾರೋ ಒಬ್ಬ ಅಪ್ಪ ತನ್ ಮಗನೀಗೆ ಯೇಕೆ ಹೊಡೀತೀಯಾ ಅಂತ ತಗಾದೆ ತೆಗದು ರಾಮಾ ರಂಪ ಮಾಡಿದ... ಆಯ್ತು ಇನ್ನು ಹಾಗಾಗಲ್ಲಪ್ಪಾ ಅಂತ ಕಳಿಸಿದ್ದಾಯ್ತು.... ಮೇಸ್ಟ್ರು ಅದೇ ಶಾಲೆಯಲ್ಲಿ ಇದ್ದಾರೆ... ( ಗುಟ್ಟಿನಲ್ಲಿ ಅವ್ರು ಹೇಳಿದ್ದು) ಆದ್ರೆ..ಅಂದು ಎರಡು ಮೂರನೆ ಕ್ಲಾಸಿನ ಮಕ್ಕಳು ಮಗ್ಗಿ ಹೇಳಿ ವಾಕ್ಯಬರದು ತುಂಬಾ ಚೆನ್ನಾಗಿ ಕಲಿಕೆ ಮಾಡುತ್ತಿದ್ದವರು..ಇಂದು ಆಆಶಾಲೆಗೆ ಹೋಗಿ ನೋಡಿದರೇ... ಅಳು ಬರುತ್ತೇರೀ... ೫ ವರ್ಷದಲ್ಲಿ ಆ ಊರಿನ ಮಕ್ಕಳ ಅಂದರೆ ಒಂದು ಪೀಳಿಗೆಯ ಸರ್ವನಾಶ ಆಗೋಯ್ತು...೭ನೇ ಕ್ಲಾಸ್ ಹುಡುಗನಿಗೆ ಸ್ವಾತಂತ್ರ್ಯ ಅಂತ ಬರೆಯೋಕೆ ಬರೊಲ್ಲಾ... "ಸ್ವಾತತರ" ಅಂತ ಬರೆದೋನೇ ಕ್ಲಾಸಲ್ಲಿ ಹುಶಾರಿ ಹುಡುಗ...!!!! ಸಾಕಲ್ಲವಾ....ಅದ್ಕೇ ಹೇಳ್ತೀನಿ.... ವೈದ್ಯ..ಒಂದು ರೋಗಿಯ ಜೀವ ತೆಗೀಬಹುದು ಆಲಸ್ಯ-ಅಸಡ್ಡೆ ಮಾಡಿದರೆ..ಆದರೆ..ಅದೇ ಅಸಡ್ಡೆನಾ ಒಬ್ಬ ಶಿಕ್ಷಕ ಮಾಡಿದರೆ..ಹಾಗೆ ಅವನ ಮನಸ್ಸಿಗೆ ನೋವು ಉಂಟು ಮಾಡಿದರೆ... ಇಡೀ ಒಂದು ಸಮುದಾಯದ ಒಂದು ಪೀಳಿಗೆಯ ಜನರ ಜೀವನವನ್ನೇ ಸರ್ವನಾಶ ಮಾಡಿಬಿಡಬಹುದು... ಹಾಗಾಗಿ ಅಪ್ಪ ಅಮ್ಮಂದಿರೇ.... ನಿಮ್ಮ ಮಗುವಿನ ಜೀವನ ಆ ಶಿಕ್ಷಕರ ಕೈಯ್ಯಲ್ಲಿದೆ ಎಂಬುದನ್ನು ಮರೆಯಬೇಡಿ... ನಿಮ್ಮ ಮಗುವಿನ ಮೇಲಿನ ಮಮಕಾರಕ್ಕೆ ಶಿಕ್ಷಕನಿಗೆ ನೋವುಂಟುಮಾಡಿದರೆ.... ನಿಮಗೆ ಅಳಿಸಲಾಗದ ನೋವು ಕಟ್ಟಿಟ್ಟ ಬುತ್ತಿ...!!!!
ಇಂದಿನ ಇಡೀ ಸಮಾಜದ ಮನುಷ್ಯರಲ್ಲಿ ಮಾನವೀಯತೆ, ಸತ್ಯ ,, ನ್ಯಾಯಪರತೆ ,ಸಹಕಾರ,, ಇದು ಸತ್ತೋಗಿರೊದಕ್ಕೆ ಖಂಡಿತವಾಗಿ ಶಿಕ್ಷಕ.ಮತ್ತು ಶಿಕ್ಷಣಾನೇ ಕಾರಣ...!!! ಎಲ್ಲೆಲ್ಲಿ ಶಿಕ್ಷಕನಿಗೆ ಬಿಗಿ ಮಾಡುತ್ತಾ ಬಂದರೋ.. ಎಲ್ಲೆಲ್ಲಿ ಶಿಕ್ಷಕನನ್ನು ಕಡೆಗ್ಣಿಸಿ ಇಡೀ ದೇಶದಲ್ಲಿ ಪ್ರಾಥಮಿಕ ಶಿಕ್ಷಕನನ್ನು ಮೂರನೇ ದರ್ಜೆಯ " ನೌಕರ" ಎಂದು ಪರಿಗಣಿಸಿದರೋ... ಅಲ್ಲಿಗೆ ಮುಗಿದು ಹೋಯ್ತು..... ಅವನಲ್ಲಿನ ಅಂತಃ ಸತ್ವಕ್ಕೇ ಕೊಡಲೀ ಪೆಟ್ಟು ಬಿದ್ದಮೇಲೇ ಅವನು ಎಲ್ಲವನ್ನೂ ನುಂಗಿ ನೀರ್ ಕುಡಿದುಬಿಟ್ಟ... ಶಿಕ್ಷ್ಣಣ ಎಲ್ಲಿಗೆ ಹೋಗಬೇಕಿತ್ತೋ ಅದರ ವಿರುದ್ಧ ದಿಕ್ಕಿಗೆ ತೆಕ್ಕೋಂಡು ಹೋಗಿ ನಿಲ್ಲಿಸಿದ..ಕಾಗದ ಕುದುರೆ ವ್ಯಾಪಾರಕ್ಕೆ ಇಳಿದುಬಿಟ್ಟ...ದಾಖಲೆ ಕೇಳುವೋರು ಕಂಡ್ರೂ...ಅವರೀಗೆ ಬೇಕಾದ್ ದಾಖಲೇ ಇಟ್ಟ... ಫಾಠ ಪ್ರವಚನ ಬಿಟ್ಟೇ ಬಿಟ್ಟ!!!.
"ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ " ಅಂತ ಬಾಯಲ್ಲಿ ಹೇಳೋದೂ ಅದೇ ಗಿಡಾನ ತಿದ್ದಿ ತೀಡಿ ಮಾಡುವ ಶಿಕ್ಷಕ ವರ್ಗಕ್ಕೆ ಕೊಡಬಾರದ ಹಿಮ್ಸೆ ಕೊಟ್ಟು ಗಿಡದ ಹತ್ರಾ ಎಲ್ಲು ಸುಳೀದಾಮ್ಗೇ ಮಾಡಿ ಆ ಗಿಡಗಳು ಬಗ್ಗಲೂ ಇಲ್ಲಾ ನೇರಾ ನಿಲ್ಲೋಕೆ ಗೊತ್ತೂ ಆಗಲ್ಲಾ ಹಾಗ್ ಮಾಡಿಸಿ ಇಡೀ ಸಮಾಜವನ್ನು ತ್ರಿಶಂಕು ಮಾಡಿ ಕೂರಿಸಿ ಇಂದು... ಮೊರಲ್ ಎಜ್ಯುಕೇಶನ್ ಬಗ್ಗೆ,,,, ಧೈರ್ಯ ತುಂಬೋದರ ಬಗ್ಗೆ... ಕಾನೂನು ಅರಿವಳಿಕೆಬಗ್ಗೆ... ಹೀಗೇ ಬೇರೆ ಬೇರೇದರ ಬಗ್ಗೆ ಬೇರೆ ಬೇರೇಯೋರ ಹತ್ರ ಶಿಬಿರಾ ಮಾಡೊ ಮಟ್ಟಕ್ ತಂದು ನಿಲ್ಲಿಸಿಬಿಟ್ರು... ಬೇಕಿತ್ತಾ ಇದೆಲ್ಲಾ...?
ಅಯ್ಯೋ ಖರ್ಮವೇ.... ಇವರೀಗೆ ಮಕ್ಕಳ ಪುಸ್ತಕದಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮನ್ ಪಾಠ ಅಂಬೇಡ್ಕರ್ ಪಾಠ ತೆಗೀ ಬಾರ್ದು..ಆದ್ರೆ ಮಕ್ಕಳೀಗೆ ಕಂಪ್ಯೂಟರ್ ನಾಲೇಜ್ ಬರಬೇಕೂ...ಅದೇಂಗ್ ಸಾಧ್ಯಾರೀ... ಅಂಬೇಡ್ಕರ್ ಪಾಠಕ್ಕೂ ಕಂಪ್ಯೂಟರಿಗೂ... ಪಾಪ ಆ ಪುಣ್ಯಾತ್ಮ ಸಾಯೋದ್ರೊಳಗೆ ಕಂಪ್ಯೂಟರ್ ಅನ್ನೋ ಪದಾನಾದ್ರೂ ಕೇಳಿದ್ನೋ ಇಲ್ವೋ...
..
..
...ಇನ್ನೂ ಒಂದು ತಮಾಷೆ ಅಂದ್ರೆ...ಇ ಇತ್ತೀಚಿನ ಸಿನಿಮಾಗಳಲ್ಲಿ ಕಾಣೋಹಾಂಗೇ... ಒಂದು ಲವ್ವು... ಕಾಲೇಜ್ ಲೈಫ್, ಒಂದು ಹೊಡೆದಾಟ..೬ ಹಾಡು... ಕ್ಲೈಮ್ಯಾಕ್ಸಲ್ಲಿ ಒಂದು ಮದುವೆ.. ಹೀಗೇ ಪಟ್ಟಿ ಮಾಡಿಕೊಂಡು ರೀಲ್ ಬಿಚ್ಚಿದಾಂಗೇ ನಮ್ಮಪಟ್ಯಪುಸ್ತಕ ನೋಡಿ ಒಂದು ಅಂಬೇಡ್ಕರ್ ಪಾಠ, ಮೂರು ಹಾಡು ಅದ್ರಲ್ಲಿ ಒಂದು ದೇಶಭಕ್ತಿಗೀತೆ.( ಅವರೇ ಬರೆದಿರ್ತಾರೆ ಇದು ದೇಶಭಕ್ತಿ ಗಿತೆ ಅಂತ..!!) ಇನ್ನು ಬಸವಣ್ಣನ ಬಿಡೋಹಾಗಿಲ್ಲ...!! ಅಲ್ಲಾನ ಹೆಸರಿದ್ದಿದ್ದು ಒಮ್ದಾದ್ರೂ ಪಾಠ ಹಾಕದಿದ್ರೆ ಮುಸ್ಲೀಮರಿಗೆ ಬೇಜಾರಾಗತ್ತೆ... ಯಾವದಾದ್ರೂ ಒಮ್ದು ಪಾಠದಲ್ಲಿ ಮೇರಿ,ಥಾಮಸ್... ಅಬ್ದುಲ್ಲಾ... ಶಾಹಿದಾ ಬೇಗಂ ರವಿ ರಾಜು ಪುಟ್ಟಿ ಬರಲೇಬೇಕು...!! ಎರಡು ಕಥೆಗಳು... ಅದ್ರಲ್ಲಿ ಒಂದು ಎನಿಮೇಶನ್ ಪಿಚ್ಚರ್ ಥರದ್ದು..ಇನ್ನೊಂದು ಯಾವುದೋ ದೇಶದ್ ಯಾವುದೋ ಭಾಷೆಯ ಅನುವಾದಿತ ಕಥೆ.. ಇನ್ನು ಕೊನೇ ಪಾಠ ಗೋವಿನ ಹಾಡು ಇರಬೇಕಿತ್ತು,,,ಅದರ ಬದಲು ಇತ್ತೀಚಿನ ಯಾರೋ ಕವಿಗಳು ಬರೆದ ಅರ್ಥ ಅವರಿಗೇ ಆಗದ ಒಂದು ಊಊದ್ದ ಪದ್ಯ...ಅಲ್ಲಿಗೆ ಪುಸ್ತಕ ಕ್ಲೋಸ್... ಇನ್ನೇನು ಕಡಿದು ಕಟ್ಟೆ ಹಾಕ್ಯಾರು ಮಕ್ಕಳು...?
...
..
..
ಇನ್ನು ಇತಿಹಾಸ ಅಂತೂ ಕೇಳೋದೇ ಬ್ಯಾಡಾ..ಈವರ್ಷ ಆಳೋ ಪಕ್ಷದವರು ಯಾವದನ್ನು ನಮ್ಮ ಇತಿಹಾಸ ಅಂತ ಹೇಳಿ ಪಠ್ಯದಲ್ಲಿ ಹಾಕಿದ್ದರೋ ಮುಂದಿನ್ ವರ್ಷ ಬಂದ ಬೇರೆ ಸರಕಾರ ಅದು ಕಿತ್ತು ಬೇರೇನೇ ಇತಿಹಾಸ ಬರದು ನಂ ಕೈಗೆ ಕೊಟ್ಟು ಇದನ್ನೇ ಹೇಳಿ ಅಂತ ಹೇಳಿಸುತ್ತೆ.... ನಮಗೇ ಗೊಂದಲ ನಾವ್ ಓದಿದ್ ಇತಿಹಾಸ..!!! ಹಿಂದಿನ್ ಸರಕಾರ ಇದ್ದಾಗ ಕೊಟ್ಟ ಇತಿಹಾಸ...!!!!! ಈಗಿನ್ ಸರಕಾರದೋರು ಹೇಳೋ ಇತಿಹಾಸಾ...!!... ಯಾವ್ದೂ ಬ್ಯಾಡ ಅತ್ಲಾಗೆ ಸುಮ್ಮನೇ ಸೈನಾಕಿ ೩೦ ಕ್ಕೆ ಸಂಬ್ಳ ತಗಂಡು ಹೋಗೋಣಪ್ಪಾ ಅನ್ನಿಸಿಬಿಟ್ಟಿದೆ..
ಇನ್ನು ಈ ವಿಜ್ಞಾನದ ಕಥೆ ಕೇಳೋದೇ ಬ್ಯಾಡಾ... ಇದುವರೆಗೂ ನಾವು ನ್ಯೂತನ್ ಅಣುಗಳನ್ನು ಕಂಡುಹಿಡಿದ.(ಕಂಡುಹಿಡಿಯೋಕೆ ಏನು ಅವು ತಪ್ಪಿಸಿಕೊಂಡು ಹೋಗಿದ್ವೇ..? ಇರಲೀ). ಏಣೊ ಎಂತೋ ಹೇಳಿ ಪಾಠ ಮಾಡಿದ್ದಾಯ್ತು..ಈಗ ನಮಗೆ ಅಲ್ಲ್ಲಲ್ಲಾ..ಅವನಿಗಿಂತಾ ನೂರಾರು ವರ್ಷ ಮೊದಲೇ ಬದುಕಿದ್ದ ನಮ್ಮ ದೇಶದವನೇ ಆದ ಕಣಾದ ಈ ಅಣುಗಳ ಇರುವಿಕೆಯನ್ನು ಪತ್ತೆ ಮಾಡಿದ ಎಂದು ಪಾಠ ಮಾಡಿ ಅಂದ್ರು... ಅಯ್ಯೋ ರಾಮಾ... ಕಣಾದ ಅನ್ನೋನು ಈ ದೇಶದಲ್ಲಿ ಇದ್ದೋನು ಅವನು ಅಣು ಶಾಸ್ತ್ರವನ್ನು ಬರೆದ ಅನ್ನೋದು ಈಗ ಗೊತ್ತಾಯ್ತಾ,,,? ಹಾಗಾದ್ರೆ ಸರ್ ಎಂ.ವಿ. ಸರ್ ಸಿವಿ.ರಾಮನ್ ಎಲ್ಲಾ ಇದನ್ನು ಓದೇ ಇಲ್ವಾ..ಆದ್ರೂ ಅವರೀಗೆ ವಿಜ್ಞಾನಿ ಪಟ್ಟ ಸಿಕ್ ಬುಡ್ತಾ..?ಥೂ...ಏನ್ ಬೇಕಾದ್ರೂ ಆಗೋಗ್ಲಿ...ಅಂದ್ಕೊಂಡ್ರೆ..
....
ಈ ಜೀವಶಾಸ್ತ್ರ ಅನ್ನೋ ಕಥೆ ಕೇಳಿದ್ರೆ...ಅಯ್ಯಯ್ಯ...ಅದೇನೋಪ್ಪಾ..ನಾವೂ ಓದಿದ್ವೀ ಪಾಟ್ಃಆನೂ ಮಾಡಿದ್ವೀ ಇದೂವರ್ಗೂ... ಹಾಲು ಮೊಸರು ಬೆಣ್ಣೆ ತುಪ್ಪ ಇವೆಲ್ಲಾ ಶಕ್ತಿ ವ್ರ್ಧಕ ಆಹಾರಗಳು ...ಇದನ್ನು ಬೆಳೆಯುವ ಮಕ್ಕಳು ತಿನ್ನಬೇಕು... ಎಂದು...ಈಗ್ ನೋಡಿದ್ರೆ ಅದು ಹಾಗಲ್ವಂತೆ... ಅವನ್ನು ತಿಂದ್ರೆ ಬೊಜ್ ಬರುತ್ತಂತೆ.... ಮಕ್ಕಳಿಗೆ ಆ ಪಾಠ ತಿರುಗಿಸಿ ಹೇಳಬೇಕು...!!! ಎಂಥಾ ಗ್ರಾಚಾರನಪ್ಪಾ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ