ಅಷ್ಟಾವಕ್ರ....!! ದಾರಿಯಲ್ಲಿ ಎದುರಾಜ ಜನಕ ರಾಜನನ್ನು ಸಂಪ್ರೀತಗೊಳಿಸಿ ದವನಾಗಿ ಮುಂದೆ ಮಾರನೇ ದಿನ ರಾಜ ಸಭೆಗೆ ಬರಬೇಕೆಂದು ಬಂದ.. ಆದರೆ ಅಲ್ಲಿ ರಾಜನಿಗಿಂತ ರಾಜನ ವಂದಿಯಾದ ಉಗ್ರಸೇನನದ್ದೇ ದರ್ಬಾರು...!! ಎಲ್ಲಿಂದಲೋ ಸ್ವಲ್ಪ ವೇದ ವಿದ್ಯೆಯನ್ನು ಅರಿತಿದ್ದ ವಂದಿ ರಾಜನನ್ನೂ ಹೆದರಿಸಿ ಇಟ್ಟಿದ್ದ. ವಂದಿಯ ಮಾರ್ಗದರ್ಶನದಂತೆಯೇ ಅಲ್ಲಿ ಎಲ್ಲವೂ ನಡೆಯಬೇಕಿತ್ತು... ರಾಜ ಸಭೆಗೆ ಅನೇಕ ಜನ ಪಂಡಿತರುಗಳನ್ನು ಕರೆಯಿಸಿ ಅವರೊಂದಿಗೆ ಕುತರ್ಕಗಳನ್ನು ಮಾಡಿ ಬೇರೆ ಬೇರೆ ರೀತಿಯ ಪಣಗಳನ್ನು ಅವರೆದುರಿಟ್ಟು.. ಕೊನೆಯಲ್ಲಿ ಅವರು ಸೋಲುವಂತೆ ಮಾಡಿ ಅವರನ್ನು ನೀರು ತುಂಬಿದ ಕೊಳದಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿ ಸಿಬಿಡುತ್ತಿದ್ದ....!! ಓರ್ವ ಬ್ರಹ್ಮದ್ವೇಷಿಯಾಗಿ ರಾಜನ ಆಸ್ಥಾನದಲ್ಲಿ ಸೇರಿಕೊಂಡಿ ದ್ದ..!! ಹಿಂದೆ ಇದೇ ಅಷ್ಟಾವಕ್ರನ ತಂದೆಯಾದ ಕಹೋಡನನ್ನೂ ಇದೇರೀತಿಯಲ್ಲಿ ವಾದದಲ್ಲಿ ಸೋಲಿಸಿ ಉಸಿರುಗಟ್ಟಿಸಿ ಸಾಯಿಸಿದ್ದ... !! ಅದರ ಸೇಡು ತೀರಿಸಿಕೊಳ್ಳು ವ ಸಲುವಾಗಿ ಇಂದು ಎಳೆಯ ಬಾಲಕನಾದ ಅಷ್ಟಾವಕ್ರ ರಾಜನ ದರ್ಬಾರಿನ ದ್ವಾರ ದಲ್ಲಿ ನಿಂತಿದ್ದ...!! ಅಲ್ಲಿ ದ್ವಾರಪಾಲಕರು...! ದಡೂತಿ ದೇಹವನ್ನು ಹೊಂದಿದವರು...! ಈ ಬಾಲಕನನ್ನು ತಡೆದರು....!! ಆ ದ್ವಾರಪಾಲಕರು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅಷ್ಟಾವಕ್ರ.....ಆದರೂ ಒಳಗೆ ಬಿಡುವುದಿಲ್ಲವೆಂದು ಹಠ ಹಿಡಿದಾಗ "ಅಯ್ಯಾ.. ನಾನು ನಿನ್ನೆ ದಿವಸ ನಿಮ್ಮ ರಾಜನನ್ನು ನೋಡಿದ್ದೇನೆ.... ನನ್ನ ದಾರಿಗೆ ಅಡ್ಡಲಾಗಿ ಬರುತ್ತಿದ್ದ...!! ನಾಣು ಹೇಳಿದ ಮೇಲೆ ದಾರಿಯನ್ನು ಬಿಟ್ಟು ಅವನೇ ಪಕ್ಕಕ್ಕೆ ಸರಿದು ನಿಂತಿದ್ದ.. ಬಹಳ ಒಳ್ಳೆಯವ ನಿಮ್ಮರಸ... !! ಆದರೆ ಅಲ್ಲಿ ಸೇರಿಕೊಂಡಿದ್ದಾನಲ್ಲಾ ಅವನು ನಿಮ್ಮ ರಾಜನನ್ನೂ ತನ್ನ ಯಾವುದೋ ಪಾಶದಿಂದ ಕಟ್ಟಿ ಹಾಕಿದ್ದಾನೆ ಮಹಾ ಮೂರ್ಖ.. ಅವನನ್ನು ನೋಡಬೇಕು ನಮಗೆ..ಅದಕ್ಕಾಗಿ ಬಂದಿದ್ದೇವೆ.. ದಾರಿ ಬಿಡು.. ಹೋಗಿ ಹೇಳು ನಿನ್ನ ರಾಜನಿಗೆ ನಾವು ಬಂದಿದ್ದೇವೆ ಎಂದು.. ಅವನೇ ಬಂದು ನಮ್ಮನ್ನು ಸ್ವಾಗತಿಸುತ್ತಾನೆ.. ಎಂದು ಹೇಳಿದ.ಆದರೆ ಇದಕ್ಕೆ ಸಮ್ಮತಿಸದ ದ್ವಾರಪಾಲಕ " ಹೇ ಹುಡುಗಾ.. ನೀನಿನ್ನೂ ಹತ್ತು ವರ್ಷದ ಹುಡುಗ.. ನಿನಗೆ ವಿದ್ಯೆಯೂ ಇಲ್ಲ,,,! ವಿನಯವೂ ಇಲ್ಲ.. ಆದರೂ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನೇನೋ ಕೊಟ್ಟಿದ್ದೀಯಾ.. ಹಾಗಾಗಿ...ಒಂದು ಕೆಲಸ ಮಾಡು.. ಇಲ್ಲೇ ನಿಂತಿರು.. ನಾನು ಹೋಗಿ ವಂದಿಗೆ ಒಪ್ಪಿಸಿ ನಿನ್ನನ್ನು ಒಳಗೆ ಬಿಡುವಂತೆ ಮಾಡೂತ್ತೇನೆ.." ಎಂದು ಒಳಕ್ಕೆ ಹೋದ...ಅಷ್ಟರಲ್ಲಿ ದರ್ಬಾರಿನಲ್ಲಿ ಕುಳಿತಿದ್ದ ರಾಜನನ್ನು ಕುರಿತು ಅಷ್ಟಾವಕ್ರ "ಭೋ...ಭೋ... ರಾಜನ್ .... "ಎಂದು ರಾಜನನ್ನು ಹೊಗಳಲು ಪ್ರಾರಂಭಿಸಿಬಿಟ್ಟ...!! ಕೆಲಸ ಆಗಬೇಕಾದರೆ ಹೊಗಳಿಕೆಯನ್ನು ಹೆಚ್ಚಾಗಿಯೇ ಮಾಡಬೇಕಂತೆ.. ಇವನ ಗಂಟೇನೂ ಹೋಗಲಿಲ್ಲವಲ್ಲಾ... ಯಯಾತಿ ಮುಮ್ತಾದ ರಾಜರುಗಳಿಗಿಂತ ನೀನು ಪ್ರಬಲನಾಗಿದ್ದೀಯೇ..ಎಂದೆಲ್ಲಾ ಹೊಗಳಿದ...
ದ್ವಾರದಲ್ಲಿ ಬಾಲಕನೋರ್ವ ತನ್ನನ್ನು ಹೊಗಳುತ್ತಿರುವುದನ್ನು ಸಿಂಹಾಸನದಲ್ಲಿ ಕುಳಿತು ಕೇಳಿದ ರಾಜ.. ದ್ವಾರದ ಕಡೆಗೆ ನೋಡಿದ... ಅಲ್ಲಿಂದ ಎದ್ದು ಬರಲು ನೋಡಿ ದ... ಆದರೂ ರಾಜನಿಗೆ ವಂದಿಯ ಭಯ..!! ಅವನ ಮುಖವನ್ನೊಮ್ಮೆ ನೋಡಿ ಮತ್ತೆ ಕೆಳಗಿಳಿದು ದ್ವಾರದ ಬಳಗೆ ಬಂದ... ಬಾಲಕನನ್ನು ನೋಡಿ ಮಾತಾಡಿಸಿದ... " ಹೇ ಬಾಲಕಾ.. ನೀನೇನೋ ನನ್ನನ್ನು ಚೆನ್ನಾಗಿ ಸ್ತುತಿ ಮಾಡಿದೆ.. ಆದರೆ ಈ ಸಭೆಯಲ್ಲಿ ನಿನ್ನಂಥವರು ಏನೂ ಮಾಡುವುದಕ್ಕಿಲ್ಲ.. ಇದು ವೇದ ಸಭೆ!!! ಇಲ್ಲಿ ನಮ್ಮ ವಂದಿಯ ನ್ನು ವಾದದಲ್ಲಿ ಸೋಲಿಸಬೇಕು... ಒಂದು ವೇಳೆ ಅಂಡಿತರುಗ ಳೇ ಸೋತರೆ ಅವರ ನ್ನು ಉಸಿರುಗಟ್ಟಿಸಿ ಸಾಯಿಸಿಬಿಡುತ್ತಾನೆ.. ನಿನಗೂ ಅದೇ ಗತಿ ಬರಬಾರದೆಂದು ನಾನು ಇಷ್ಟೆಲ್ಲಾ ವ್ಯವಸ್ಥೆಯನ್ನು ಮಾಡಿದ್ದೆ.. ಬೇಡಪ್ಪಾ ಹೋಗು.. ಹಿಂತಿರುಗಿ ಹೋಗಿ ಬಿಡು.. ಆ ವಂದಿಯ ಕೈಯ್ಯಲ್ಲಿ ಸಾಯಬೇಡ ಮಗೂ... " ಎಂದ..ಅದಕ್ಕೆ ಅಷ್ಟಾವಕ್ರ ಬಹು ಧೈರ್ಯದಿಂದ ಹೇಳಿದ.... ಮಹಾರಾಜಾ.. ನಾನು ಹಿಂತಿರುಗಿ ಹೋಗುವುದಕ್ಕೆ ಬಂದವನಲ್ಲ.. ಇಂದು ಆ ನಿನ್ನ ವಂದಿಗೊಂದು ಗತಿ ಕಾಣಿಸಿಯೇ ಹೋಗುತ್ತೇನೆ..
"ವಿವಾದಿತೋಸೌ ನಹಿ ಮಾದೃಶೈರಿಹಿ....." ದೊರೆಯೇ.. ನನ್ನಂಥವನು ಇದುವರೆಗೆ ಇಲ್ಲಿಗೆ ಬಂದಿರಲಿಲ್ಲ ಎನ್ನಿಸುತ್ತಿದೆ... ಇಂದು ಆ ವಂದಿಗೊಂದು ಲೋಕವನ್ನು ತೋರಿಸಿಯೇ ಹೋಗುತ್ತೇನೆ... ನಾಯಿಯೊಂದಕ್ಕೆ ಸಿಂಹದ ಮುಖವಾಡವನ್ನು ಹಾಕಿ ಸಿಂಹವೆಂದು ಲೋಕಕ್ಕೆ ಪರಿಚಯಿಸಿಬಿಟ್ಟಿದ್ದೀರಿ... ಅದು ನಾಯಿ ಎಂಬುದನ್ನು ತೋರಿಸಿಕೊಡುತ್ತೇನೆ . ಅದೊಂದು ಬದ್ರವಿಲ್ಲದ ಚಕ್ರವನ್ನು ಹೊಂದಿದ ಗಾಡಿಯಂತೆ.. ಬಿಡು ದಾರಿಯನ್ನು.. " ಎಂದಾಗ ರಾಜ ಅಯ್ಯೋ ನಿನ್ನನ್ನು ಹೇಗೆ ಸಂತೈಸುವುದು.. ಆಗಲೀ.. ನಾನೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ ..ಅದಕ್ಕುತ್ತರಿಸು.. ಆನಂತರ ಒಳಗೆ ಬಿಡುತ್ತೇನೆ.. "ಎಂದ... ಆಗಲೀ ಎಂದ ಅಷ್ಟಾವಕ್ರ... ಅದಕ್ಕೆ ರಾಜ ಪ್ರಶ್ನೆಗಳನ್ನು ಸುರುವಿಟ್ಟುಕೊಂಡ..
ತ್ರಿಂಶಕ ದ್ವಾದಶಾಂಶಸ್ಯ ಚತುರ್ವಿಂಶತಿ ಪರ್ವಣಃ|
ಯಸ್ಮಿನ್ ತ್ರಿಷಷ್ಠಿ ಶತಾರಸ್ಯ ವೇದಾರ್ಥಂ ಸಪರಃ ಕವಿಃ|
{ ಯಾವುದರಲ್ಲಿ ಮೂವತ್ತೆರಡು, ಹನ್ನೆರಡು, ಇಪ್ಪತ್ನಾಲ್ಕು, ಮುನ್ನೂರ ಅರವತ್ತು ಈ ಸಂಖ್ಯೆಗಳಿವೆಯೋ ಅಂತಹ ವೇದಾರ್ಥವನ್ನು ಹೇಳು}
ಅದಕ್ಕೆ ಅಷ್ಟಾವಕ್ರ.. ಸುದರ್ಶನ ಎಂದ.. ಕಾಲ ಚಕ್ರ ಎಂದ..!! ಈ ಲೋಕದಲ್ಲಿ ಕಾಲಾತೀತವಾದುದು ಯಾವುದೂ ಇಲ್ಲ.. ಅದನ್ನು ಕಾಲ ಪುರುಷ ಮಾಡುತ್ತಾನೆ ಅದನ್ನು ಅನುಸರಿಸಿಯೇ ನಾವು ನಡೆಯಬೇಕು..
ರಾಜ ತಲೆದೂಗಿದ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ