ನಮ್ಮ ಮನೆಯ ಬಾಬ್ರಿ ಮಸೀದಿಯ ನಾನೇ ಧ್ವಂಸ ಮಾಡಿದ್ದೆ...!
ನಮ್ಮ ಮ್ಮ ಮನೆಯ ಗೋಡೆಯಾಚೆಯ ಪಾಳುಬಿದ್ದ ಸಣ್ಣ ಗುಡಿಸಲೊಂದಿತ್ತು. ಅದು ಯಾಕೆ ಅಲ್ಲಿತ್ತು...? ಗೊತ್ತಿಲ್ಲ. ಸುಮಾರು ದಿನಗಳ ಹಿಂದೆ ಅಪ್ಪನ ತಿಥಿಗೆ ಪಾತ್ರ್ಗಳನ್ನು ಕಲಾಯಿ ಹಾಕಿಸಬೇಕೆಂದು ಕುಮಟೆಯ ಜಬ್ಬಾರರನಿಗೆ ನಾನು ಹೇಳಿದ್ದೆ, ಅವ ಒಂದು ದಿನ ಶುಭ ಮುಹೂರ್ತದಲ್ಲಿ ಆ ಪಾಳು ಬಿದ್ದ ಬಂಗಲೆ !!ಯೊಳಕ್ಕೆ ಪ್ರವೇಶಿಸಿದ್ದ.. ತನ್ನ ತಿದಿ (ಕುಲುಮೆ) ಯೊಂದಿಗೆ...!ನಮ್ಮ ಮನೆಯ ಸರ್ವಸ್ವವೂ ಈಗ ಆ ಸೂರ ಸೇರಿತ್ತು, ಕಲಾಯಿಗಾಗಿ...! ಬೆಳಿಗ್ಗೆ ಏಳಕ್ಕೇ ತಿಂಡಿ ಚಹ, ಮಧ್ಯಾನ್ಹ ಒಂದಕ್ಕೆ ಊಟ... ಹೀಗೇ ವೇಳಾ ಪಟ್ಟಿಯಂತೇ ಸರಬರಾಜಾಗುತ್ತಿತ್ತು ಆ ಸಾಬಿಗೆ..!
ನಮ್ಮ ಮ್ಮ ಮನೆಯ ಗೋಡೆಯಾಚೆಯ ಪಾಳುಬಿದ್ದ ಸಣ್ಣ ಗುಡಿಸಲೊಂದಿತ್ತು. ಅದು ಯಾಕೆ ಅಲ್ಲಿತ್ತು...? ಗೊತ್ತಿಲ್ಲ. ಸುಮಾರು ದಿನಗಳ ಹಿಂದೆ ಅಪ್ಪನ ತಿಥಿಗೆ ಪಾತ್ರ್ಗಳನ್ನು ಕಲಾಯಿ ಹಾಕಿಸಬೇಕೆಂದು ಕುಮಟೆಯ ಜಬ್ಬಾರರನಿಗೆ ನಾನು ಹೇಳಿದ್ದೆ, ಅವ ಒಂದು ದಿನ ಶುಭ ಮುಹೂರ್ತದಲ್ಲಿ ಆ ಪಾಳು ಬಿದ್ದ ಬಂಗಲೆ !!ಯೊಳಕ್ಕೆ ಪ್ರವೇಶಿಸಿದ್ದ.. ತನ್ನ ತಿದಿ (ಕುಲುಮೆ) ಯೊಂದಿಗೆ...!ನಮ್ಮ ಮನೆಯ ಸರ್ವಸ್ವವೂ ಈಗ ಆ ಸೂರ ಸೇರಿತ್ತು, ಕಲಾಯಿಗಾಗಿ...! ಬೆಳಿಗ್ಗೆ ಏಳಕ್ಕೇ ತಿಂಡಿ ಚಹ, ಮಧ್ಯಾನ್ಹ ಒಂದಕ್ಕೆ ಊಟ... ಹೀಗೇ ವೇಳಾ ಪಟ್ಟಿಯಂತೇ ಸರಬರಾಜಾಗುತ್ತಿತ್ತು ಆ ಸಾಬಿಗೆ..!
ಹಾಗೆ ನಮ್ಮ ಮನೆಯ ಗೋಡೆಯಾಚೆಯಲ್ಲಿ ತಿದಿಯ ತಳವೂರಿ ನಮ್ಮ ಮನೆಯ ತಾಮ್ರದ ದಳ್ಳೆ(ಕಡಾಯಿ)ಗೆ ಸುತ್ತಿಗೆ ಪೆಟ್ಟು ಕೊಟ್ಟು ಬಣ್ಣ ಮೆತ್ತಿದ ಸಾಬಿ. ಅವನ ಸುತ್ತಿಗೆ ಪೆಟ್ಟಿನ ಸದ್ದು ಹಲವರ ಮನೆಯ ಪಾತ್ರೆಯನ್ನೂ ಹೊಸದು ಮಾಡಿತ್ತು. ನನಗೇ ...'ತಮಾ..ನಿಮ್ಮನೇಲಿ ಇಪ್ಪ ಸಾಯ್ಬಂಗೆ ..ಇದ್ನ ಕೊಡು... ಇದಕ್ಕೆ..ಚೊಟ್ಟು ಸರಿಮಾಡಲಿ..ಇದರ...ತಲಕ್ಕೆ ತಗಡು ಸೇರಿಸಲಿ.ಇದಕ್ಕೆ ಕಲಾಯಿ ಹಾಕಲಿ'.....!.. ಅಯ್ಯೋ ಖರ್ಮವೇ.... ಈ ಕಂಡವರ ಮನೆಯ ಪಾತ್ರೆಯ ಮಸಿಯನ್ನು ನನ್ನ ಹೆಗಲಿಗೆ ಹಚ್ಚಿಕೊಳ್ಳುವ ಖರ್ಮ.... ದುಡಿದಿದ್ದರೆ ಒಂದಿಷ್ಟು ಕಾಸಗುತ್ತಿತ್ತೇನೋ....ಕೂಲಿದು..ಬರಲೇಯಿಲ್ಲ ಆ ಬುದ್ಧಿ....ನನ್ನ ವಿದ್ಯೆ ನೈವೇದ್ಯವಾದದ್ದು ಇಂಥ ಪ್ರಸಂಗಗಳಿಂದಲೇ...
ಅಂತೂ ಸಾಬಿ ನಮ್ಮಪ್ಪನ ತಿಥಿ ಮುಗಿದರೂ... ನಮ್ಮ ಮನೆಯ ಒಂದು ಕೈಚೊಟ್ಟಿಗೆ ಕಲಾಯಿ ತಾಗಿಸಲು ಪುರುಸೊತ್ತಿ ಲ್ಲದೇ..ಹಾಗೇ ಇಟ್ಟಿದ್ದ ಮೂಲೆಯಲ್ಲಿ.ತಿಂಗಳೆರಡು ಮೂರಾಯ್ತು. ಮಳೆಗಾಲ ಹತ್ತಿರವಾಯ್ತು ದಿನಂಪ್ರತಿ ಊಟ-ತಿಂಡಿ ನಮ್ಮ ಮನೆಯಿಂದ ಹೋಗುತ್ತಿತ್ತು ಸಾಬಿಗೆ. ಬೆರೆಯವರೆಲ್ಲರ ಮನೆಯ ಪಾತ್ರೆಗಳ ರಾಶಿ ಕರಗಿರಲೇ ಇಲ್ಲ ಇನ್ನೂ..ನನ್ನಮ್ಮ ಅಯ್ಯೋ.. ನಮ್ಮನೆಯವರ ತಿಥಿಗೆ ಪಾತ್ರೆಗಳಿಗೆ ಕಲಾಯಿ ಹಾಕಿಕೊಟ್ಟ ಸಾಬಿ ಅಲ್ಲವೇ... ಅವಳು ಆ ಸಾಬಿಯನ್ನು ಆ 'ನಮ್ಮನೆಯವರಿಗಿಂತ' ಉನ್ನತ ಸ್ಥಾನ ಕೊಟ್ಟು ಬಿಟ್ಟಿದ್ದಳು.ಇದು ನನಗೆ ಆಶ್ಚರ್ಯ ಅಮ್ಮನ ಗುಣವೇ ಹಾಗೆ ಗಂಡನನ್ನು ದೇವರೆಂದೇ ಬಗೆದವಳು..! ಅವನಿಗಾಗಿ ಮಾಡುವ ಕೆಲಸ.ದೇವರ ಪೂಜೆ..ಅದು.ಅವನ ಕೆಲಸಕ್ಕಾಗಿ ಸಹಕರಿಸುವವರು.... ಅವರೂ ದೇವತೆಗಳೇ ಆಗಿಬಿಡುತ್ತಿದ್ದರು..!ಹಾಗಾಗಿ ನನಗೆ ಇಲ್ಲದಿದ್ದರೂ ಆ ತುರುಕರ ಸಾಬಿಗೆ ಹೊತ್ತಿಂದ ಹೊತ್ತಿಗೆ ಪೂಜೆ ನೈವೇದ್ಯಗಳು ..!ಸಾಗುತ್ತಿದ್ದವು.. ಕಂಡವರ ಮನೆಯ ಪಾತ್ರೆ ಹೊತ್ತಿದ್ದಲ್ಲದೇ ಸಾಬಿಗೆ ಊಟ ತಿಂಡಿ ಸಪ್ಲಾಯಿ ಮಾಡುವ ಬೇರರ್ ನಾನೇ ಆಗಿದ್ದೆ.
ಓಹ್...ಗಾಳಿ ಬೀಸಲು ಸುರುವಾಯ್ತು.... ಕರಿ ಮೋಡ ಮೇಲೇರಿ ಬರುತ್ತಿತ್ತು... ಮಳೆಗಾಲ ಸನ್ನಿಹಿತವಾದ ಎಲ್ಲಾ ಲಕ್ಷಣಗಳೂ ಗೋಚರಿಸ ಹತ್ತಿದವು. ಗಾಳಿಗೆ ಗುಡಿಸಲಿನ ಮಡಲಗರಿಯೊಂದು ಎಗರಿ ಬಿತ್ತು, ಆ ಸಾಬಿಯ ತಿದಿಯ ಬೆಂಕಿಯೊಳಗೇ.. ಓಹೋ..ನೀರಾಕಿ..... ಹಾಂ... ಅಂತೂ ಅಲ್ಲೇ ಆರಿತು ಆ ಬೆಂಕಿ. ಆದರೆ ಸಾಬಿಯ ಮನದಲ್ಲಿ ಎದ್ದ ಈ ಬೆಂಕಿ ಬೂದಿ ಮುಚ್ಚಿದ ಕೆಂಡವಾಗಿತ್ತು ಎಂದು ಆಮೇಲೆ ತಿಳಿಯಿತು
ಸಾಬಿಯ ಶುಕ್ರವಾರದ ನಮಾಜು ಆ ತಿದಿಬೊಡ್ಡೆಯ ಮುಂದೇ ಆರಂಭವಾಯ್ತು..!
ಊಹೂಂ...ಮತ್ತೆ ಕುಮಟೆಯ ಸುದ್ದಿಯೇ ಇಲ್ಲ ಸಾಬಿದು..!! ದಿನಕ್ಕೆ ಹತ್ತಾರು ಪಾತ್ರೆಗಳಿಗೆ ಕುಟ್ಟಿ ಕಲಾಯಿಹಾಕಿ ಮಡುಗುವ ಸಾಬಿ ಬರಬರುತ್ತ ನಿಧಾನಿಯಾದ..! ಬಂದ ಒಂದೆರಡು ಪಾತ್ರೆಗೇ ಸಂಜಾಗುತ್ತಿತ್ತು..ಮಡಲಗರಿ ಹರಿದು ಬಿದ್ದ ಜಾಗೆಗೆ ಹೊಸಮಡಲು ಹಾಸಿಕೊಂಡಿದ್ದ.ಮಳೆಗಾಲದ ತಯಾರಿ ಸಾಬಿದೂ ಅಲ್ಲೇ ನಡೆಯುವುದನ್ನು ನೋಡಿ ನಾನು ಎಲಾ ಇವನಾ..! ಎಂದು ಒಂದು ದಿನ ಕೇಳಿಯೇ ಬಿಟ್ಟೆ ,, ಅಲ್ಲಾ..!ಸಾಯ್ಬರೇ.. ನೀವು ಹೋಗುವುದಿಲ್ಲವಾ...? ಅದಕ್ಕೆ ಆಸಾಬಿ...' ಯೆಂತಮಾಣಿ ಯೆಲ್ಲಿಗೆ ಹೋಗುವುದು..?' 'ಅದು ನಮದೂಕಿದು ಇದು ಇಲ್ಲೇ ಇಲ್ಲಾ... ಅದು ಬಿಟ್ಟಿ ನಾನು ಹೋಗೂದೂ... ನಿಮದು ಅಪ್ಪಂದು ಇದು ನನಗೆ ಗೊತ್ತಿಲ್ಲಾ,' ಎಂದೆಲ್ಲಾ ಬಡ ಬಡಿಸಿದಾಗ ಆಂ...ಓ ಇವ ಅಷ್ಟೇ..ಇನ್ನು.. ಎಂದು ಮನೆಗೆ ಬಂದವ ಅಮ್ಮನಿಗೆ ವಿಷ್ಯದ ಗುಟ್ಟು ತಿಳಿಸಿದೆ.ಅವರಿವರಲ್ಲಿ ಮೊದಲು....ನಾನು ಇನ್ನು ಸ್ವಲ್ಪದಿನ ಇಲ್ಲಿರುತ್ತೇನೆ ಆಮೇಲೆ ಕುಮಟೆ ಇದ್ದೇ ಇದೆಯಲ್ಲಾ ಎನ್ನುತ್ತಿದ್ದವನು ಒಂದು ದಿನ ನನ್ನ ಅಮ್ಮನ ಹತ್ತಿರ ಹೇಳಿದ್ದೇನು ಗೊತ್ತಾ... ಅಮ್ಮೋರೇ... ನನಗೆ ನಿಮ್ಮನೆಯೋರು ಬಾಳ್ ಹಿಂದಿನಿಂದಲೂ ಪರಿಚಯ... ನಾನು ಅವ್ರೂ ವಂದೇ ಬಟ್ಳಲ್ಲಿ ಊಟ ಮಾಡುವಷ್ಟು ವಿಶ್ವಾಸ ..! ಕೇಳಿದ ನನಗೆ..... ಓ ಸಾಬಿಯ ಪೀಠಿಕೆ ಭಾರೀ ಚೆನ್ನಾಗಿದೆ ಅನ್ನಿಸತೊಡಗಿತು...ಹಾಂ.......ಭಟ್ರು ಬಾರೀ ಒಳ್ಳೆಯವರಾಗಿದ್ದರು.....ಕೊಡುಗೈದೊರೆ...ಬಿಡಿ ಅಮ್ಮಾವರೇ... ಈಗ ನನಗೇ ನೋಡಿ.... ಹೇಳಿದ್ರು ಅವರು.....ಜಬ್ಬಾರಾ... ನೀ ಇಲ್ಲೇ ಬಂದುಬಿಡು.... ಹೇಗಂದ್ರು.... ನಿನ್ ಸಂಸಾರ ಅಷ್ಟಕ್ಕಷ್ಟೇಯಾ..... ಅಷ್ಟೂ ತಲಾಖ್ ಕೊಟ್ಟು ಕೈ ತೊಳಕಂಡಿದ್ದೀಯಾ..ಮತ್ತೆಂತದೂ...ಅಲ್ಲಿ ಕುಮಟೇಲಿ.... ಇಲ್ಲಿ ಈ ನಮ್ಮನೆ ಗುಡಿಸಲು ನಿನಗೇಯಾ ತಗೋ ಬಂದ್ ಬಿಡು,, ಹೇಳಿ ಅಮ್ಮೊರೇ... ....ಹ್ವಾಯ್.... ಅಯ್ತಲ್ಲದಾ..... ಮುಗೀತು...ಈ ತುರಕಾ..ಇಲ್ಲೇ ಗಟ್ಟಿ...ಇನ್ನು...ಅಪ್ಪನ ವೀಲನ್ನು ಇವನೇ ಓದಿ ಹೇಳಿದನಲ್ಲಾ......ಯೆಂತರ ಮಾಡುದೂ...ಥೋ...ಸಾಯಲಿ. ..ಎಂದು ನಾನು ಅಮ್ಮನ ದೇವರಾದ ಸಾಬಿಯ ಸುದ್ದಿ ಬಿಟ್ಟು ಬಿಟ್ಟೆ... ಆದರೂ ಮನದಲ್ಲಿ ....ಅಯ್ಯೋ ಈ ಒಂದು ಒಳ್ಳೆಯ ಜಾಗದಲ್ಲಿ ಈ ತುರುಕನ ಸೇರಿಸಿಯಾಯಿತಲ್ಲಾ..ಅವ ಬೇರೆ ತಿದಿಬೊಡ್ಡೆಗೇ ಹಸಿರು ಬಟ್ಟೆ ಹೊಡಿಸಿ ಮೆಕ್ಕಾವನ್ನೂ ಮದೀನಾವನ್ನೂ ಗುಡಿಸಲ ಸಂದಿಯಲ್ಲೇ ತಂದು ಮಡುಗಿಯಾಗಿತ್ತು... ಇನ್ನು ಮುಗೀತು.... ಈ ಅಯೋಧ್ಯೆಯ ಗಲಾಟೆ ಬೇರೆ....ಹೇಗಪ್ಪಾ ದಾಟುವುದೂ...
ಒಂದು ದಿನ ಇದ್ದಕ್ಕಿದ್ದಂತೆ ತುರುಕ ಸಾಬಿಗೆ ಸುದ್ದಿ ಬಂತಂತೆ.... ಅಮ್ಮಾಜಾನ್.. ಅಲ್ಲಾನಪಾದ ಸೇರಿದಳು...ಕೂಡ್ಳೇ... ಹೊರಟು..ಬಾ...ಎಂದು....ಸಾಬಿ....ಎಲ್ಲವನ್ನೂ ಸರಿಸಿಟ್ಟು,, ದಬ್ಬೆಯ ಕಟ್ಟಿ ಹೋದ... ಕುಮಟೆಗೆ...ಇದೇ ಸುಸಮಯವೇದು...ನಾನು ಕಟ್ಟೆಭಟ್ಟರ ಮನೆಯ ದಾರಿ ಹಿಡೀದೆ.... ಈ ಕಟ್ಟೇ ಭಟ್ರು ಅಂದ್ರೆ ದೇವರ ಪ್ರತಿಷ್ಠೆ ,ದೇವರನ್ನೂ ಕೀಳೋದು ಹುಗಿಯೋದು ಯೆಲ್ಲ ಮಾಡುವ ಆಗಮಿಕರು....! ಅವ್ರಲ್ಲಿಗೆ ಹೋದೋನು ಹೇಳಿದೆ ನನ್ನಪ್ಪ ಹೇಳ್ತಾ ಇದ್ದ ನಮ್ಮದೊಂದು ಜಾಗದಲ್ಲಿ ಚೌಡಿಯೊಂದು ಇದ್ತ್ತು...ಮೊದಲು ಪೂಜೆ ಪುನಸ್ಕಾರಾ ಯೆಲ್ಲಾ ಇತ್ತು ಅದಕ್ಕೆ ಈಗ ಅದು ಇಲ್ಲದೇ ಹಕ್ಕಲು ಚೌಡಿಯಾಗಿದೇ....ಅದಕ್ಕೊಂದು ಗತಿ ಕಾಣಿಸಬೇಕು ಮಗನೇ ...ಎಂದು ಹಾಗಾಗಿ ಬಂದೆ ಭಟ್ರೇ..ಈಗ ಅರ್ಜೆಂಟಾಗಿ ಆ ಚೌಡಿಗೊಂದು ಅಷ್ಟಬಂಧ ಆಗಬೇಕಲ್ಲಾ ನೀವು ನಾಳೇನೇ ಬರಬೇಕು ಎಂದೆ......ಭಟ್ಟರಿಗೆ ಇರೋ ವಿಷಯದ ಆಳ ಅಗಲ ಎಲ್ಲಾ ಹೇಳಿದೆ ಅವಾರೂ ಒಪ್ಪಿದರು..... ಸಾಬಿ ಅಮ್ಮಾಜಾನನನ್ನ ಮೆಕ್ಕಾದ ದಾರಿ ಹಿಡಿಸಿ ಬರೋದ್ರೋಳಗೆ ಅವನ ತಿದಿ ಮಸೀದಿಯಲ್ಲಿ ಅಷ್ಟಬಂಧ ಆಗಬೇಕಿತ್ತು....!!
ಅಂತೂ ಒಂದು ಶುಕ್ರವಾರ ಕಟ್ಟೇಭಟ್ರು ಪರಿಚಾರಕನೋರ್ವನ ಜೊತೆಗೆ....ದೊಡ್ಡ ಮಡಿಗಂಟನ್ನು ಹೊತ್ತು ಬಂದರು.... ನಾನೂ ಗಣಪತ್ನಾಯಕನ ಅಂಗಡಿಯಿಂದ ಒಂದೆರಡು ಕೇ.ಜಿ ನೇ. ಕುಂಕುಮ...ತಂದೆ...!..ಅಕ್ಕಪಕ್ಕದ ಮನೆಯವರ ಕಣ್ಣು ಮುಚ್ಚಿಸಬೇಕಿತ್ತು...ಅವರೆಲ್ಲಾ ಆ ಸಾಬಿಯಿಂದ ಉಪಕೃತರೇ ಅಲ್ಲವೇ.....?.. ಕಟ್ಟೇಭಟ್ರು ಮಡಿಯುಟ್ಟು.. ಚಾಕರಿ ಭಟ್ಟ ಕೆಂಪು ನೀರು ಮಾವಿನ ಸೊಪ್ಪು.ಅಕ್ಷತೆಗಳನ್ನು ಭಟ್ಟರ ಮುಂದೆ ಇಟ್ಟ ಊರಿನ ಕೆಲವರಿಗೆ ತುರ್ತು ಕರೆಯನ್ನೂ ಕಳಿಸಿದ್ದೆ!!! ಅವರೆಲ್ಲರ ಸಮ್ಮುಖದಲ್ಲಿ ಪೂಜೆ ಕಟ್ಟೇಭಟ್ರದ್ದು ಆರಂಭ...! ಕೊನೆಯಲ್ಲಿ ಹಕ್ಕಲು ಚೌಡಿಯ ಹುಡುಕುವ ಮಂತ್ರ ಹೇಳಿ ಕೆಂಪುಮಡಿಯುಟ್ಟು ನಿಂತಿದ್ದ ನನ್ನ ಮೇಲೆ ಅಕ್ಷತೆಯ ಕಾಳು ಬಿದ್ದೊಡನೇ ನಾನು....ಹ್ಮು...ಉಹುಂ. ...ಊಹ್ಂ.... ..ಆಹಾ.. .ಗ್ರಾಮದೇವತೇ ಮನೆದೇವತೇ.. ..ಹುಮ್. ...ಹ್ಮೂ ..ಹೂಂ.. .ಇಡೀ ನಮ್ಮ ಜಮೀನಿನ ಸುತ್ತು ಹೊಡೆದೆ... ಭಟ್ಟರು ಕತ್ತಿಸಿ ಅಂಗೈಯ್ಯಲ್ಲಿಟ್ಟ ಕರ್ಪೂರವನ್ನು ಕೈ ಸುಡುವುದರೊಳಗೇ...ಬಾಯಲ್ಲಿ ಹಾಕಿ...ಹುಂ.ಎಂದೆ.......ತಿರುಗಿ ತಿರುಗಿ... ಬಂದು ನಿಂತೆ.....ಬಾ..ಬಾ... ಇಲ್ಲೇ ಇದ್ದೇನೆ....ಇಲ್ಲೇ...ಈ ತಿದಿಗುಡ್ಡೆಯ ಅಡಿಯಲ್ಲಿ ......!!! ನನಗೊಂದು ಸ್ಥಾನ ಬೇಕೂ...ಇಲ್ಲೇ ಆಗಬೇಕೂಊ,,, ಹಕ್ಕಲು ಚೌಡಿ ಸ್ಥಾನ ತೋರಿಸಿ ಹಲುಬಿತ್ತು.!!!! ಭಟ್ಟರು ಪಿಕಾಸಿ ಊರಿದರು ಅಲ್ಲಿ.... ಪರಿಚಾರಕ ತನ್ನ ಕೆಲಸ ಮುಂದುವರೆಸಿದ. ಗೊತ್ತಿತ್ತು ಅವನಿಗೆ ಕಟ್ಟೇಭಟ್ರು ಪಿಕಾಸಿ ಊರಿದಲ್ಲಿ ಯೇನು ಮಾಡಬೇಕು....ಎಂದು... ಎಲ್ಲಾ...ಖುಲ್ಲಾ.... ಕುಂಕುಮ ಕೇಜಿಯಷ್ಟು...ಚೆಲ್ಲಿತ್ತು ಮಾವಿನ ಸೊಪ್ಪು.. ಅಕ್ಷತ ಯೆಲ್ಲಾ...ಅಲ್ಲೇ..ಹಕ್ಕಲು ಚೌಡಿಗೆ ಪೂಜೆ ಆರಂಭವಾಯ್ತು...ಕಟ್ಟೇಭಟ್ಟರು ದಕ್ಷಿಣೆ ತೆಗೆದುಕೊಂಡು ಹೊರಟು ಹೋದರು...ಊರವರು ಅರೇ..ಅದು ಮೊದಲು ಆ ಚೌಡಿಯ ಮನೆಯೇ ಆಗಿತ್ತು.. ಇತ್ಯಾದಿ ಆಡಿಕೊಳ್ಳುತ್ತ ಅತ್ತ ಸಾಗಿದರು.
ಅಮ್ಮಾಜಾನಳ ಅಲ್ಲಾಹ್ ನ ಪಾದ ಸೇರಿಸಿ ಬಂದ ತುರುಕರ ಜಬ್ಬಾರ ತನ್ನ ತಿದಿ ಗುಡ್ಡೆ ಮಸೀದಿ ಹಕ್ಕಲಚೌಡಿಯ ಗುಡಿಯಾದ್ದನ್ನು ಕಂಡು ಹೌಹಾರಿದ. ಯೇನೂ ಅನ್ನುವಂತಿರಲಿಲ್ಲ. ಹಕ್ಕಲ ಚೌಡಿ ತುರುಕನ ತಕರಾರಿಗೆ ತಡೆಯಾಗಿದ್ದಳು.ನಮ್ಮ ಮನೆಯ ಗೋಡೆಯಾಚಿನ ಪಾಳು ಗುಡಿಸಲು ನಮ್ಮಲ್ಲೇ ಉಳಿದಿತ್ತು. ಕಟ್ಟೇಭಟ್ಟರು ಹೊಡೆದ ಅಕ್ಷತೆ ಅಷ್ಟು ಕೆಲಸ ಮಾಡಿತ್ತು. ಅವರು ನನಗೇ ಹೊಡೆದಿದ್ದರಲ್ಲಾ..ಅಕ್ಷತೇನಾ...
ಅಲ್ಲಿ ಅಯೋಧ್ಯದಲ್ಲಿ ಅಂತೂ ಧ್ವಂಸ ಮಾಡಿದ್ದರು.... ರಾಮ ಮಂದಿರವನ್ನೋ...ಬಾಬ್ರೀ ಮಸೀದಿಯನ್ನೋ....ಗೊತ್ತಿರಲಿಲ್ಲ. ..ನನಗೂ....! ಅವರಿಗೂ..!!!!!. ... ಅಂತೂ ನಮ್ಮ ಮನೆಯ ಪಕ್ಕದಲ್ಲಿ ಹಕ್ಕಲ ಚೌಡಿಗೆ ಸ್ಥಾನ ಕೊಟ್ಟಾಗಿತ್ತು.'ಅದು ನಮದೂಕಿದು ಇದು ಇಲ್ಲಿ ಇರಲಿಲ್ಲ'
ಬಹಳ ಒಳ್ಳೆಯ ಬರಹ. ನಮ್ಮತನದೊಳಕ್ಕೆ ಆಗುವ ಅತಿಕ್ರಮಣವನ್ನ ಬಹಳ ವಿನೋದಾತ್ಮಕವಾಗಿ ಬಿಚ್ಚಿಟ್ಟಿದ್ದೀರಿ. ಇನ್ನಷ್ಟು ಬರಹಗಳು ಬರಲಿ :)
ಪ್ರತ್ಯುತ್ತರಅಳಿಸಿಶ್ರೀಪಾದು, ಎಷ್ಟು ಬುದ್ಧಿ ಉಪಯೋಗಿಸುವುದೂ ಹೇಳೇ ಅರ್ಥ ಆಗ್ತಿಲ್ಲೆ ಅಲ್ದಾ?
ಅಳಿಸಿ