प्रज्वालितॊ ज्ञानमयप्रदीपः

ಬುಧವಾರ, ಏಪ್ರಿಲ್ 4, 2012

* ಎಚ್ಚರಾದವರೂ.... ಹೊದ್ದು ....!!

ಎಚ್ಚರಾದವರೂ.... ಹೊದ್ದು ಮಲಗಿದರು...!!!

ಅಂದು ವಿವೇಕರು ಎಚ್ಚರಿಸಿದರು!!

ಇನ್ನೂ ಮಲಗಿಹರೆಂದು ಭಾವಿಸಿಏಳಿರಿ! 

ಎಚ್ಚರಗೊಳ್ಳಿರೆಂದುಕರೆದ ಕರೆಯನು ಕೇಳಿ ಎದ್ದರು!!

ಎಲ್ಲಿ? ಯಾರಿಹರು ?

ಎದ್ದವರು ಎಂದು!!ಸುತ್ತ ನೋಡಿದರು...?

ಮತ್ತೆ ಕೂಗಾಡಿದರು!

ಎದ್ದವ ಇವನೊಬ್ಬನೇ.

.ಇವಗೆ ಬಾರದ ನಿದ್ದೆಗೆಜಗವ ದೂರುತ್ತಿಹನು!!

ನಮ್ಮ ಸುಖನಿದ್ದೆಯನೂ ಹಾಳುಗೆಡವಿದನು!!

ಎದ್ದವರು ಗೊಣಗಿದರು

ಇನ್ನೂ ಏಳದವರ ಕುಟ್ಟಿ ಎಚ್ಚರಿಸಿದರು !

ಮಾತ್ಸರ್ಯ!!ಅವರೆದ್ದ ಮೇಲೆ ಇವರು ಮುಸುಕೆಳೆದರು!!

ಸತ್ತ ಸಂಸತ್ತಿನಲಿ ಸುತ್ತು ತಿರುಗಿದರು

ಜಗವ ಮಲಗಿಸಲೆಂದೇ ಅವರ ಅಟಾಟೋಪ!!

ಎಚ್ಚರಾದವರೂ ಹೊದ್ದು ಮಲಗಿದರು!!!

ಅಂದು ಎಚ್ಚರಿಸಿದವ ಚಿರ ನಿದ್ರೆ ಗೈದ ...!!!

ಇಂದು ಎದ್ದಿರುವವರು ?  ಜಗಕೇ....!

ಚರಮಗೀತೆಯ ಬರೆಯ ಹತ್ತಿಹರು>>>>!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ