प्रज्वालितॊ ज्ञानमयप्रदीपः

ಮಂಗಳವಾರ, ಸೆಪ್ಟೆಂಬರ್ 16, 2014

ಅಮ್ಮ ಹೇಳಿದ ಒಂದು ಕಥೆ.....


......... ಒಂದೂರಲ್ಲಿ ಒಬ್ಬ ಮನುಷ್ಯ ಇದ್ದಿದ್ನಡಾ.. ಅವಂಗೆ ಒಬ್ಬಳು ಮಗಳು ಇದ್ದಿದ್ಳಡಾ.. ಮಗಳು ಹುಟ್ಟಿ ಸ್ವಲ್ಪ ಸಮಯದಲ್ಲೇ ಹೆಂಡತಿ ಸತ್ತೋತಡಾ.. ಆಗ ಆ ಮನುಷ್ಯ ಬೇರೆ ಮದ್ವೆ ಆದ್ನಡಾ.. ಅಂದ್ರೆ ಆ ಮಗಳಿಗೆ ಒಬ್ಬಳು ಮಲತಾಯಿ ಬಂದ್ಳು... ಸುಮಾರ್ ದಿನ ಆದ್ ಮೇಲೆ ಆ ತಾಯಿ ಈ ಮಲ ಮಗಳೀಗೆ ಕಷ್ಟ ಕೊಡೂಲ್ ಶುರು ಮಾಡಿದ್ಲಡಾ.. ಪಾಪ ಇವಳೋ ಸಣ್ ಹುಡುಗಿ.. ಅವಳತ್ರಾನೇ ವಸ್ತ್ರ ತೊಳೇಸ್ತಿದ್ಳಡಾ.. ಪಾತ್ರೆ ತೊಳೆಸ್ತಿದ್ಳಡಾ.. ನೆಲ ಗುಡಸೂದು ವರಸೂದು ಎಲ್ಲಾ ಕೆಲಸನೂ ಈ ಹುಡುಗಿ ಹತ್ರಾನೇ ಮಾಡಸ್ತಿದ್ಳಡಾ.. ಅದಷ್ಟೇ ಅಲ್ಲದೇ ಅವಳೀಗೆ ಸರೀ ಊಟ ಆಸ್ರೀನೂ ಕೊಡದೇ ತ್ರಾಸ್ ಕೊಡತಿದ್ಳಡಾ.. ಪ್ರತೀ ದಿನ ಒಂದಲ್ಲಾ ಒಂದು ತಪ್ಪು ಕಂಡುಹಿಡಿದು ಆ ಮಗಳೀಗೆ ಬೈತಿದ್ಳಡಾ...!! ಇದನ್ನು ಕೇಳಿ ನೋಡೀ ಆ ಅಪ್ಪಂಗೆ ತುಂಬಾ ಬೇಜಾರಾಗ್ತಿತ್ತಡಾ..ಆದ್ರೂ ಕಿರಿ ಹೆಂಡತಿಗೆ ಹೆದ್ರಿ ಎಂತದೂ ಮಾತಾಡತಿದ್ನಿಲ್ಯಾಗಿತ್ತಡಾ.. ಕೊನೆಗೆ ಒಂದಿನ ಅವನ ಹೆಂಡತಿ ಮಗಳಿಗೆ ಬೈದು ಬೈದು. ನೀನು ಎಲ್ಲಾರೂ ಹೋಗು.. ನಮ್ ಜೀವನ ಹಾಳ್ ಮಾಡೂಲ್ ಇಲ್ಲೆಂತಕ್ಕಿದ್ದೆ ಹೇಳಿ ಬೈದು ಹೊರಗಾಕಿ.. ಗಂಡನತ್ರ ಅವಳನ್ನು ಎಲ್ಲಾದ್ರೂ ದೂರ ಕರಕಂಡು ಹೋಗಿ ಬಿಟ್ಟಿಕ್ ಬಂದ್ ಬುಡು ಅಂತಡಾ... ಗಂಡಮಗಳ ಕರಕಂಡು ಮನಿಂದಾ ಹೊರಟ್ನಡಾ..
........ ಸುಮಾರು ದೂರ ಅಪ್ಪ ಮಗಳು ನಡಕೊಂಡು ಹೋದ್ವಡಾ... ಮಗಳೀಗೆ ನಡದೂ ನಡದೂ ಕಾಲೆಲ್ಲಾ ನೋವು ಬಂತಡಾ.. ಅಷ್ಟೊತ್ತಿಗೆ ಸಂಜಾತಡಾ.. ಆಗ ಅಪ್ಪ ಮಗಳಿಗೆ ತಂದ್ ಬುತ್ತಿ ತಿನ್ನಿಸಿ ಅಲ್ಲೇ ರಾತ್ರೆ ಮಲಗಿ ಬೆಳಿಗ್ಗೆ ಎದ್ದು ಮುಂದ್ನ್ ಊರಿಗೆ ಹೋಪ ಅಂದನಡಾ.. ನೆಡದು ಸುಸ್ತಾಗಿದ್ ಮಗಳು ಆಗ್ಲಿ ಹೇಳಿ ಅಲ್ಲೇ ಒಂದು ಕಲ್ ಬಂಡೆ ಹತ್ರ ಮಲಗತಡಾ.. ಪಕ್ಕದಲ್ಲೇ ಅಪ್ಪನೂ ಮನಗಿದ್ನಾಗಿತ್ತಡಾ.. ಅಪ್ಪನ ಹಿಡಕಂಡು ಮಗಳು ಚೆನ್ನಾಗಿ ನಿದ್ರೆ ಮಾಡಿತ್ತಡಾ..
..............ಹೀಂಗೇ ಸುಮಾರ್ ರಾತ್ರಿ ಆದ್ ಮೇಲೆ ಅಪ್ಪ ಸಾವಕಾಶ ಎದ್ದು ಅಲ್ಲೇ ಪಕ್ಕದಲ್ಲೇ ಇದ್ ಜುಮ್ಮಿನ ಮರದ್ ತುಂಡ್ ಒಂದ್ ತಂದು ಆ ಮಗಳ ಪಕ್ಕದಲ್ಲಿ ಇಟ್ಟು ಅದ್ಕೆ ಹೊದೆಸಿ ಅಲ್ಲಿಂದ ಹೊರಟು ಹೋಗಬುಟ್ನಡಾ...!! ರಾತ್ರಿ ಎಲ್ಲಾ ಆ ಮಗಳು ಒಬ್ಳೇ ತನ್ ಅಪ್ಪನ ಪಕ್ಕದಲ್ಲೇ ಮನಗಿದ್ದೇ ಹೇಳಿ ಸುಖವಾಗಿ ನಿದ್ದೆ ಮಾಡ್ತಾ ಇದ್ದಿತ್ತಡಾ.. ಅಷ್ಟ್ ಅಷ್ಟ್ ಹೊತ್ತೀಗೆ ಅಪ್ಪನ ಮೈಯನ್ನೆಲ್ಲಾ ಮುಟ್ಟಿ ನೋಡತಿತ್ತಡಾ.. ಮಯ್ಯೆಲ್ಲಾ ಮುಳ್ ಮುಳ್ಳು....!! ಹಾಂಗೇ ರಾತ್ರಿ ಎಲ್ಲಾ ಅಪ್ಪಂಗೆ ಎಂತದೋ ಮೈಯೆಲ್ಲಾ ಮುಳ್ ಮುಳ್ಳಾಗಿದ್ದು ಅಂತ ಎಲ್ಲಾ ಮುಳ್ಳನ್ನೂ ತೆಗದು ಒಗೆತಾ ಮನಗಿತ್ತಡಾ... ಕೊನೆಗೆ ಅಲ್ಲೇ ನಿದ್ರೆ ಮಾಡ್ತಿತ್ತಡಾ...
......... ಅಂತೂ ಬೆಳಗಾತು... ಎದ್ದು ಪಕ್ಕದಲ್ಲಿ ಮನಗಿದ್ ಅಪ್ಪನ ಎಬ್ಬಸೂಲೆ ಮುಸುಕು ತೆಗದ್ರೇ...??.... ಮನಗಿದ್ದಂವ ಅಪ್ಪ ಅಲ್ಲ..!!? ಜುಮ್ಮನ ಮರದ ತುಂಡು..!! ಆಗ ಆ ಸಣ್ ಮಗಳೀಗೆ ಹೆದ್ರಿಕೆ ಆತಡಾ.. ಅಪ್ಪ ಎಲ್ಲೋದಾ ಅಂತ ಸುತ್ತೆಲ್ಲಾ ಹುಡಕತಡಾ.. ಎಲ್ಲೂ ಕಂಡಿದ್ನಿಲ್ಲೆ.. ಅಪ್ಪಾ.....ಅಪ್ಪಾ... ಅಂತ ಕೂಗ್ತಡಾ... ಎಲ್ಲೂ ಅಪ್ಪನ ಪತ್ತೆನೇ ಇಲ್ಲೆ.. ತಿರುಗಿ ಮನೆಗೆ ಹೋಪ್ಲೆ ದಾರಿನೂ ಗುತ್ತಾಜಿಲ್ಯಡಾ.... ಆಗ ಅಳತಾ ಆ ಹುಡುಗಿ ದಾರಿಯಲ್ಲಿ ಹೋಗ್ತಾ ಇದ್ದಿತ್ತಡಾ....
...... ಅಳ್ತಾ ಹೋಗ್ತಾ ಇದ್ ಹುಡುಗಿ ಹೋಗಿ ಹೋಗೀ ಒಂದ್ ಊರಿಗೆ ತಲಪತಡಾ ..!! ಅಲ್ಲಿ ಬೆಳಿಗ್ಗೆ ಹೊತ್ತು ಎಲ್ಲರೂ ಎದ್ದು ತಮ್ ತಮ್ ಕೆಲಸ ಕಾರ್ಯಕ್ಕೆ ಹೋಗ್ತಾ ಇದ್ ಜನ ಕಂಡ್ವಡಾ... ಅವೆಲ್ಲಾ ಈ ಹುಡುಗಿ ನೋಡೀ.. ಅಲ್ಲಿಯ ಊರ್ ಯಜಮಾನಂಗೆ ಸುದ್ದಿ ಮುಟ್ಟಿಸಿದ್ವಡಾ... ಆ ಯಜಮಾನಂಗೆ ಮಕ್ಕೊ ಇಲ್ಯಾಗಿತ್ತಡಾ..ಅಂವ ಈ ಹುಡುಗಿಯನ್ನ ಮನೆಗೆ ಕರಕಂಡು ಹೋಗಿ ಸಾಕದ್ನಡಾ.. ಮುಂದೆ ಆಹುಡುಗಿ ಓದಿ ತುಂಬಾ ಬುದ್ಧಿವಂತೆ ಆದ್ಳಡಾ... ಅಷ್ಟೇ ಅಲ್ಲದೇ ಆ ಮನೆಯ ಯಜಮಾನಿಕೆಯನ್ನೂ ವಹಿಸಿಕಂಡ್ಳಡಾ.... ಹೀಗೇ ಆ ಊರಿನ ಯಜಮಾನಿಯೂ ಆಗಿ ಒಳ್ಳೇ ರಾಣಿ ಹಾಗೇ ಬದುಕಿದ್ಳಡಾ...ಊರಿನ ಜನ ಎಲ್ಲಾ ಅವಳನ್ನು ಬಹಳ ಪ್ರೀತಿಯಿಂದ ಕಾಣತಿದ್ವಡಾ... ಅವಳೂ ಊರಿನ ಜನರ ಕಷ್ಟಗಳಿಗೆಲ್ಲಾ ಒಳ್ಳೇ ಸಹಾಯ ಸಹಕಾರ ಕೊಟ್ಟು ಒಳ್ಳೇಯ ರಾಣಿ ಹೇಳಿಸಿಕೊಂಡ್ಳಡಾ... ಅವಳೇ ರಾಣಿ ಅಬ್ಬಕ್ಕ..!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ