प्रज्वालितॊ ज्ञानमयप्रदीपः

ಮಂಗಳವಾರ, ಸೆಪ್ಟೆಂಬರ್ 16, 2014

ಅಮ್ಮ ಹೇಳಿದ ಕಾಗಕ್ಕ ಗುಬ್ಬಕ್ಕನ ಕಥೆ

.................. ಕಾಗಕ್ಕ ಗುಬ್ಬಕ್ಕನ ಕಥೆ....
........ ಒಂದಲ್ಲಾ ಒಂದೂರಲ್ಲಿ ಒಂದು ದೊಡ್ಡ್ ಮಾವಿನ್ ಮರ ಇದ್ದಿತ್ತಡ. ಆ ಮರದಲ್ಲಿ ಒಂದು ಕರೀ ಕಾಗಕ್ಕ, ಒಂದು ಬೆಳೀ ಗುಬ್ಬಕ್ಕ ಮನೆ ಕಟಗಂಡ್ ಇದ್ದಿದ್ವಡಾ.. ಅವಿಬ್ರೂ ಸ್ನೇಹಿತರಾಗಿದ್ದಿದ್ವಡಾ... ಒಂದ್ ದಿನ ಇಬ್ರೂ ಒಟ್ಟಿಗೇ ಹೊಳೆಗೋಗಿ  ವಸ್ತ್ರ ತೊಳಕಂಡು ಮಿಂದಕಂಡು ಬರೋ ಹೇಳಿ ಹೊರಟ್ವಡಾ... ಹೊಳೆಲಿ ಚೊಲೋ ನೀರಿದ್ದಿತ್ತಡಾ. ಗುಬ್ಬಕ್ಕ ಹೊಳೆಲಿ ಇಳದು ಬೇಗ್ ಬೇಗ ವಸ್ತ್ರ ತೊಳಕಂಡು ಮಿಂದಕಂಡತಡಾ.. ಕಾಗಕ್ಕನೂ ಮಿಂದಕತ್ತಾ ಇದ್ದಿತ್ತಡಾ.... ಗುಬ್ಬಕ್ಕ ಬೇಗ್ ಮಿಂದಕಂಡು ಹೊಳೆ ದಂಡೆಗೆ ಹತ್ ಬಂದು ವಸ್ತ್ರ ವಣಗಸೂಲೆ ಹಾಕಿಕ್ಕಿ ಕುತಗಂಡತಡಾ.. ಆದ್ರೆ ಕಾಗಕ್ಕಂದು ಇನ್ನೂ ಮೀಯಾಣವೇ ಮುಗದ್ದಿಲ್ಯಡಾ.. ಎಷ್ಟ್ ತಿಕ್ಕಿ ತಿಕ್ಕಿ ಮಿಂದಕಂಡ್ರೂ ಬೆಳೀದಾಜೇ ಇಲ್ಯಡಾ... ಅದ್ಕೇ ಇನ್ನೂ ಮಿಂದಕತ್ತಾನೇ ಇದ್ದಿತ್ತಡಾ.
.......... ಅಷ್ಟೊತ್ತಿಗೆ ಸಂಜಾಗ್ತಾ ಬಂತಡಾ.. ಆಕಾಶದಲ್ಲಿ ಕರೀ ಮೋಡ ಕಂಡತಡಾ.... ಮಳೆ ಬೀಳೂಲೆ ಶುರುವಾತಡಾ.. ಎಂಥಾ ಮಳೆ..!! ಬಸ ಬಸ ಮಳೆ..!! ಆ ಮಳೆಗೆ ಹೊಳೆಲಿ ಕೆಂಪಿ ನೀರು ಮೇಲೆ ಮೇಲ್ ಬಂತಡಾ.. ನೆಗಸು..! ಹೊಳೆಲಿ ಮಿಂದಕತ್ತಾ ಇದ್ ಕಾಗಕ್ಕಂಗೆ ಮೇಲಿಂದ ನೀರ್ ಬತ್ತಾ ಇದ್ದದ್ದು ಗುತ್ತಾಜಿಲ್ಯಡಾ... ಹಾಂಗಾಗಿ ಹೊಳೆ ನೆಗಸಲ್ಲಿ ಕಾಗಕ್ಕ ಬಳಕಂಡು ಹೋತಡಾ.. ಆತಾ..!! ಬಳಕಂಡು ಹೋಗಿ ಸುಮಾರ್ ದೂರ ಹೋತಡಾ..ಅಲ್ಲಿ ಒಂದು ಬೇಳಿಗೆ ಶೀಕ್ಕಾಯಕಂಡು ಬಿತ್ತಡಾ ಕಾಗಕ್ಕ.. ಅಲ್ಲಿಂದ ಬೇಲಿ ಹಿಡಕಂಡು ಹೇಂಗೋ ಮೇಲೆ ಹತ್ತಿ ಬಂತಡಾ...ಇಡೀ ಮೈಯ್ಯೆಲ್ಲಾ ವದ್ದೆ... ಮಳೆ ಬೇರೆ ಹೊಯ್ತಾ ಇದ್ದು.. ಕಾಗಕ್ಕ ಗಡಗಡ ನಡಗತಾ ಗುಬ್ಬಕ್ಕನ ಹುಡೀಕಂಡು ಹತ್ರಕ್ ಬಂತಡಾ.. ಛಳಿಲಿ ನಡಗತಾ ನಡಗತಾ ಗುಬ್ಬಕ್ಕನ ಹತ್ರ ಮನೆಗೋಪೋ ಬೇಗ ಅಂತಡಾ.. ಇಬ್ರೂ ಮನೆ ಹತ್ರಕ್ ಬಂದ್ವಡಾ...
........ ಅಲ್ಲಿ ಕಾಗಕ್ಕ ಗುಬ್ಬಕ್ಕ ಇಬ್ರೂ ಮರದ ಹತ್ರ ಬಂದು ಮನೆಗೆ ಹೋಗೋ ಹೇಳಿ ನೋಡೀರೆ ...? ಕಾಗಕ್ಕನ ಮನೆ ಕಾಣ್ತೇ ಇಲ್ಯಡಾ..?!! ಮನೆ ದೊಡ್ ಮಳೆಲಿ ಹರದ್ ಬಿದ್ದೋಗಿತ್ತಡಾ.... ಎಂತಕ್ಕೆ ಹೇಳೂ...? ,,,ಕಾಗಕ್ಕನ ಮನೆ ಶೆಗಣಿ ಮನೆ ಆಗಿತ್ತಡಾ..!! ..ಗುಬ್ಬಕ್ಕನ ಮನೆ ಹಾಂಗೇ ಇದ್ದಿತ್ತಡಾ..ಅದ್ರದ್ದು ಕಲ್ ಮನೆ ಆಗಿತ್ತಡಾ...!! ಆಗ ಕಾಗಕ್ಕ.. ಛಳಿಲಿ ನಡಗತಾ.. "ಗುಬ್ಬಕ್ಕಾ ಗುಬ್ಬಕ್ಕಾ.. ಈಗೆಂತಾ ಮಾಡೂದು.. ನನ್ ಮನೆ ಬಳದೋಜು.. ಹಾಂಗಾಘಿ ಇಂದ್ ವಂದ್ ರಾತ್ರಿ ಬೆಳಗ್ ಮಾಡಕಂಡು ಹೋಗ್ತೆ ನಿಮ್ಮನೆಲಿ.. " ಅಂತಡಾ... ಅದಕೆ ಗುಬ್ಬಕ್ಕ ಪಾಪ ಸಾಯಲೀ ಹೇಳಿ ಅಡ್ಡಿಲ್ಲೆ ಅಂತಡಾ.. ಗುಬ್ಬಕ್ಕನ ಮನೆಗೆ ಕಾಗಕ್ಕ ಹೋತಡಾ...!!
..............ಗುಬ್ಬಕ್ಕಂಗೆ ಮೂರು ಮರಿ ಇದ್ದಿತ್ತಡಾ.. ಆವತ್ತು ರಾತ್ರಿ ತನ್ ಮೂರು ಮರಿಗೊಕ್ಕೆ ಊಟ ಹಾಕಿ ಹೊರಗೆ ಜಗಲೀ ಮೇಲೆ ಬೆಚ್ಚಗೆ ಮನಿಸಿಟ್ಟಿತ್ತಡಾ ಗುಬ್ಬಕ್ಕ.. ಕಾಗಕ್ಕಂಗೂ ಜಗಲೀ ಮೇಲೆ ಹಾಸಿಗೆ ಹಾಸಿ ಕೊಡ್ತಡಾ.. ಎಲ್ಲರೂ ಮನಿಕಂಡ್ವಡಾ.. ಮದ್ರಾತ್ರೆ ಹೊತ್ತೀಗೆ ....!! ಎಂತದೋ”ಗುಳುಂ’ ..."ಗುಳುಂ" ಶಬ್ದ ಕೇಳ್ತಡಾ ಗುಬ್ಬಕ್ಕಂಗೆ..!!? ಆಗ ಗುಬ್ಬಕ್ಕ ವಳಗಿಂದಾನೇಯ ...ಹುಳುಂ ಗುಳುಂ ಏನ್ ಕಾಗಕ್ಕಾ..? ಹೇಳಿ ಕೇಳ್ತಡಾ.. ಆಗ ಕಾಗಕ್ಕ ಅದಕೆ.." ಅಂಗಡಿಗೆ ಹೋಗಿದ್ದೆ ಮೂರು ಬೇಳೇ ತಂದಿದ್ದೆ.. ಒಂದ್ ಬೇಳೆ ತಿಂದೆ " ಅಂತಡಾ.. ಅದು ಹೌದಾಯಿಕ್ಕು ಹೇಳಿ ಗುಬ್ಬಕ್ಕ ಮುಸಕಾಯಕಂಡು ಮನಿಕಂಡತಡಾ.. ಮತ್ತೆ ಸುಮಾರ್ ಹೊತ್ನಲ್ಲಿ ಮತ್ತೆ.. ಗುಳುಂ ಗುಳುಂ ಶಬ್ದ ಕೇಳ್ತಡಾ.. ಮತ್ತೆ ಗುಬ್ಬಕ್ಕ ಕಾಗಕ್ಕನ್ ಕೇಳ್ತಡಾ.. ಆಗ್ಲೂ ಹಾಂಗೇ ಹೇಳ್ತಡಾ...!! ಹೀಂಗೇ ಮೂರು ಬಾರಿ ಶಬ್ದ ಕೇಳ್ತಡಾ.. ಮೂರು ಬಾರೀನೂ ಕಾಗಕ್ಕನ್ ಕೇಳೀರೆ ಅದೇ ಮಾತ್ ಹೇಳ್ತಡಾ...! ಅಂತೂ ಬೆಳಗಾತಡಾ...
....... ಬೆಳಗಾಮುಮ್ಚೆ ಎದ್ದು ಗುಬ್ಬಕ್ಕ ಹೆಬ್ಬಾಗಲ್ ತೆಗದಿ ನೋಡತಡಾ... ಕಾಗಕ್ಕ ಗೊರ್ಕೆ ಹೊಡೆತಾ ಮನಗಿತ್ತಡಾ... ಅಂತೂ ಕಾಗಕ್ಕನ ಏಳಿಸ್ತಡಾ.. ಗುಬ್ಬಕ್ಕ ತನ್ನ ಮರಿ ಎಬ್ಬಸೂಲೆ ಹೋದ್ರೆ ...ಅಲ್ಲಿ ಒಂದ್ ಮರೀನೂ ಇಲ್ಯಾಗಿತ್ತಡಾ..? ಅಯ್ಯೋ ದೇವರೇ ಮರಿ ಎಲ್ಲಾ ಎಲ್ಲೋದ್ವೆನ ಅಂತ ಗುಬ್ಬಕ್ಕ ವಳಬಾಯಲ್ಲೇ ಹೇಳ್ತಾ ಇದ್ದ್ದಿತ್ತಡಾ ಆದ್ರೆ ಕಾಗಕ್ಕ ತನಗೇನೂ ಗುತ್ತೇ ಇಲ್ಲೆ ಹೇಳ್ವಾಂಗೆ ಎದ್ದು ಮೊಕ ತೊಳಕಂಡು ಅಂತಡಾ... ಗುಬ್ಬಕ್ಕಂಗೆ ಕಾಗಕ್ಕನ ಮೇಲೆ ಸಂಶಯ ಇದ್ದಿತ್ತಡ.. ಬೆಳಗಣ್ ಆಸ್ರೀಗೆ ಎಂತಾ ಮಾಡೋ ಹೇಳಿ ಕಾಗಕ್ಕನ ಕೇಳೂಲ್ ಬಂತಡಾ.. ಕಾಗಕ್ಕಾ ಕಾಗಕ್ಕಾ ಬೆಳಗಣ್ ಆಸ್ರೀಗೆ ಹಶಿ ಬೆಣ್ಣೆ ಅಕ್ಕೋ ಬಿಶಿ ಬೆಣ್ಣೆ ಅಕ್ಕೋ ಕೇಳ್ತಡಾ.. ಆಗ ಛಳಿಲಿ ನಡಗತಾ ಇದ್ ಕಾಗಕ್ಕ.. ಬೆಚ್ ಬೆಚ್ಚಗೆ ಇರ್ತು ಹೇಳಿ ಬಿಶೀ ಬೆಣ್ಣೆನೇ ಅಕ್ಕು ಅಂತಡಾ... ಆಗ ಗುಬ್ಬಕ್ಕ ವಳಗೋಗಿ ಸುಣ್ನದ ಕೊಡಕ್ಕೆ ಕೈ ಹಾಕಿ ಎರಡು ಸುಣ್ಣದ ಉಂಡೆ ತಗಬಂದು ಕೊಡ್ತಡಾ ಕಾಗಕ್ಕಂಗೆ.. ಕಾಗಕ್ಕ ಛಳಿ ಆಗ್ತಾ ಇದ್ದಿದ್ದಕ್ಕೆ ಬೇಗ್ ಬೇಗ್ ಆ ಸುಣ್ನದ್ ಉಂಡೆಯ ನುಂಗಬುಡ್ತಡಾ..!!...ಆಗ ಕಾಗಕ್ಕಂಗೆ.. ಗಂಟಲು ಸುಟ್ಟಿ.. ವಾಂತಿ ಮಾಡಕಂಬ್ಲೆ ಶುರು ಮಾಡ್ತಡಾ... ಗೊಳಕು ಗೊಳಕು ವಾಂತಿ ಮಾಡಕ್ಕಾದ್ರೆ ಅದ್ರ ಹೊಟ್ತೆ ವಳಗಿದ್ ಗುಬ್ಬಕ್ಕನ ಮರಿಗೋ ಮೂರು ಹೊರಗ್ ಬಂದ್ವಡಾ... ಆಗ ಕಾಗಕ್ಕನ ಕಿತಾಪತಿ ಗೊತ್ತಾಗಿ ಗುಬ್ಬಕ್ಕ.. ವಳಗಿಂದಾ ದೊಣ್ಣೆ ತಗಬಂದು ಕಾಗಕ್ಕನ್ ಹೊಡದಿ ತೌರಾಕ್ತಡಾ.. ತನ್ನ ಮರಿನೆಲ್ಲಾ ಮೀಸಕಂಡು ಬಂದು ಮನೆಗೆ ಕರಕಂಡು ಬಂದು ಸುಖವಾಗಿ ಇದ್ದಿತ್ತಡಾ...!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ