ಲೋಕದಲ್ಲಿ ಭಾರತೀಯ ಪರಂಪರೆ ಅತಿ ಪ್ರಾಚೀನವಾದದ್ದು, ಪರಮಾತ್ಮ ತತ್ವವನ್ನು ಲೋಕಕ್ಕೆ ಸಾರಿದ್ದು, ಬದುಕಿನಲ್ಲಿ ಐಹಿಕ ಹಾಗೂ ಆಮುಷ್ಮಿಕ ಎಂಬ ಎರಡು ಬದುಕಿನ ತುರೀಯಾವಸ್ಥೆಗಳಿವೆ ಎಂದು ಪ್ರಪಂಚಕ್ಕೆ ಸಾರಿದ್ದು.ಇಲ್ಲಿನ ವೇದಗಳು, ಉಪನಿಷತ್ತುಗಳು, ಶಾಸ್ತ್ರಗಳು, ಪುರಾಣಗಳು, ಮಹಾಕಾವ್ಯಗಳು, ಇನ್ನೂ ಅ ನೇಕ ಸಾಹಿತ್ಯಗಳು ಮನುಷ್ಯನ ಬದುಕಿನಲ್ಲಿನ ಎರಡೂ ಕಾಲ ಘಟ್ಟಗಳ ಕುರಿತು ಮಾಹಿತಿಯನ್ನು ನೀಡುತ್ತವೆ ಮತ್ತು ಅವುಗಳಲ್ಲಿ ಆತ್ಯಂತಿಕವಾಗಿ ಸಾಧಿಸಬೇಕಾದ್ದು ಎರಡನೇಯದಾದ ಆಮುಷ್ಮಿಕ ಅಂದರೆ ಶರೀರಿಯಾಗಿ ಬಾಳಿದ ನಂತರದಲ್ಲಿ ಅವನು ಹೊಂದಬಹುದಾದ ಮೋಕ್ಷದ ಮಾರ್ಗವನ್ನು ಹೆಚ್ಚು ಅವಲಂಬಿಸಿಕೊಂಡಿದೆ ಎಂದು ಸಾರುತ್ತದೆ. ಹಾಗಾಗಿ ಈ ಬದುಕಿನಲ್ಲಿ ಅಂದರೆ ವಾಸ್ತವದ ಬದುಕಿನಲ್ಲಿ ಮುಂದೆ ತಾನು ಗಳಿಸಬೇಕಾದ ಎರಡನೇ ಬದುಕಿನ ಸುಖ ಮಾರ್ಗವನ್ನು ಹೇಗೆಲ್ಲ ಕಂಡುಕೊಳ್ಲಬಹುದು ಎಂಬುದಕ್ಕೆ ಅನೇಕ ಕೈಂಕರ್ಯಗಳನ್ನು ವಿಧಿಗಳನ್ನೂ ಹೇಳಿ ದೆ.. ಅವುಗಳಲ್ಲಿ ವರ್ಣ- ಆಶ್ರಮ- ಧರ್ಮ- ಕಾಯಕ ಎಂಬ ಜೀವನ ವಿಧಾನಗಳೂ. ಸತ್ಯ, ಅಸ್ತೇಯ, ಶ್ರದ್ಧಾ, ಜ್ಞಾನ ಎಂಬ ಕರ್ಮ ವಿಧಾನಗಳೂ ಬಹು ವಿಶದವಾಗಿ ನಿರೂಪಿತವಾಗಿವೆ. ಇದರಲ್ಲಿ ಈ ವರ್ಣಾಶ್ರಮ ಎಂಬುದು ಒಂದನ್ನು ಇನ್ನೊಂದು ಅವಲಂಬಿಸಿ ಬದುಕಲು ಬೇಕಾದ ಸನ್ಮಾರ್ಗವನ್ನು ಹಾಕಿಕೊಟ್ಟ ವಿಚಾರವಾಗಿದೆ. ವರ್ಣದಲ್ಲಿ ಯಾವುದೂ ಕನಿಷ್ಠವೋ ಗರಿಷ್ಠವೋ ಎಂಬುದನ್ನು ತೋರದೇ.. ಕೇವಲ ಸೌಲಭ್ಯಾನುಸಾರವಾಗಿ ಮಾಡಿಕೊಂಡ ವ್ಯವಸ್ಥೆ ಎಂಬುದು ತಿಳಿದುಬರುತ್ತದೆ.. ಎಲ್ಲರೂ ಎಲ್ಲವನ್ನೂ ಮಾಡುತ್ತೇನೆಂದು ಹೊರತಾಗ ಆಗುವ ಅಧ್ವಾನಗಳನ್ನು ತಡೆಯು ವುದಕ್ಕಾಗಿ ಕಾಯಕದ ವಿಂಗಡನೆ ಮಾಡಿದ್ದು ಈ ವ್ಯವಸ್ಥೆಯ ಮೂಲ ಕಾರಣವಾಗಿದೆ. ಆಶ್ರಮಗಳೂ ಕೂಡಾ.. ವ್ಯಕ್ತಿಯ ವಯೋಮಾನ ಮತ್ತು ಜ್ಞಾನದಾರ್ಢ್ಯವನ್ನು ಅವಲಂಬಿಸಿಕೊಂಡು ಲೋಕಕ್ಕೆ ಹಿತವನ್ನು ಯಾವ ಯಾವ ಕಾಲಘಟ್ಟಗಳಲ್ಲಿ ಹೇಗೇಗೆ ಸಾ ಧ್ಯವೋ ಅದನ್ನರಿತು ಮಾಡುವುದಕ್ಕಾಗಿ ವಿಧಿಸಿಕೊಂಡ ಜನಸ್ನೇಹಿ ಸಾಧನವಾಗಿದೆ.. ಅಂದರೆ ಈ ಬ್ರಹ್ಮಚರ್ಯ, ಗಾರ್ಹಸ್ತ್ಯ, ವಾನಪ್ರಸ್ಥ, ಸನ್ಯಾಸಗಳೆಂಬುದು ಸಾಧನಗಳು... ಇವು ಮಾನವನ ಜೀವನೋನ್ನತಿಯನ್ನು ಗಳಿಸಿಕೊಳ್ಳುವಲ್ಲಿ ಸಹಕಾರಿಯಾಗಿ ಕೆಲಸಮಾಡುತ್ತಿರಬೇಕು ಎಂಬುದು ಅಂಬೋಣ..
ಇದು ಎಲ್ಲ ವರ್ಣದಲ್ಲಿಯೂ ಆಯಾ ಕಾಲಘಟ್ಟ- ಮತ್ತು ಜ್ಞಾನ ಪ್ರಾಪ್ತಿಯ ಸ್ಥರವನ್ನು ಅವಲಂಬಿಸಿ ಬೆಳೆದುಕೊಂಡು ಬಂದಿದೆಯಾದರೂ.. ಕಾಲಕ್ರಮೇಣ ಈ ವರ್ಣ ವ್ಯ ವಸ್ಥೆಗೆ ಒಂದು ನಿಬಂಧನೆಯ ಚೌಕಟ್ಟು ಬಂದಾಗ ಅದಕ್ಕೊಂದು ಅರ್ಥವಿವರಣೆ ಕಂಡುಕೊಂಡಾಗ ಶ್ರೀ ಕೃಷ್ಣ ಗೀತೆಯಲ್ಲಿ "ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ-ಕರ್ಮ ವಿಭಾಗಶಃ" ಎಂದು ಎಂದಿಗೂ ಹುಟ್ಟಿನಿಂದ ಈ ವರ್ಣಗಳ ಮಾನದಂಡ ವನ್ನು ಹಾಕಿಕೊಳ್ಲಬಾರದು ಎಂದು ಸಾರಿದಂತೆ ಮುಂದೆ ಈ ಆಶ್ರಮ ವ್ಯವಸ್ಥೆಯಲ್ಲೂ ಇದರ ಪ್ರತಿರೂಪ ಕಂಡು ಬಂತು.. ಅದೆಂದರೆ.. ಯಾರು ಯಾರು ಯಾವ ಆಶ್ರಮಗ ಳಲ್ಲಿ ತಮ್ಮನ್ನು ಲೋಕ ಸುಖಕ್ಕೆ ತೊಡಗಿಸಿಕೊಳ್ಲಬಲ್ಲರು ಎಂಬುದು ಅದರಂತೆ ಎಲ್ಲರೂ ಎಲ್ಲಾ ಆಶ್ರಮಗಳನ್ನು ಹೊಂದುವುದಾಗಲೀ, ಅದರ ಮೂಲಕ ಲೋಕಕ್ಕೆ ತಮ್ಮ ಅನುಭವಗಳನ್ನು ಸಾರುವುದಾಗಲೀ ಮಾಡುವಂತಿಲ್ಲ ಎಂಬ ಕಟ್ಟುಪಾಡು ಗಳು ಬಂತು. ಒಂದು ವೇಳೆ ಎಲ್ಲರೂ ಹಾಗೆ ಮಾಡುವಂತಿದ್ದರೆ ಬಹುನಾಯಕತ್ವದ ಕಷ್ಟವನ್ನೆದುರಿಸಬೇಕಾಗುತ್ತದೆ ಎಂಬ ಅರಿವು ಪ್ರಾಚೀನರಿಗೆ ಇತ್ತು ಎಂಬುದು ಇದ ರಿಂದ ತಿಳಿದು ಬರುತ್ತದೆ.
ಬ್ರಹ್ಮಚರ್ಯವು ಲೋಕವನ್ನು ಅರಿಯುವುದಕ್ಕಾಗಿ ಇರುವ ಮಹಾ ಮಾರ್ಗವಾ ದರೆ ಅಲ್ಲಿ ವೇದಜ್ಞಾನವನ್ನೂ ಲೋಕ ಜ್ಞಾನವನ್ನೂ ಐಹಿಕ ಮತ್ತು ಪಾರಮಾರ್ಥಿಕ ಜೀವನ ಮಾರ್ಗಗಳನ್ನು ಅಧ್ಯಯನ ಮಾಡಲು ಈ ಕಾಲಘಟ್ಟವನ್ನು ಉಪಯೋಗಿಸಿ ಕೊಳ್ಲಬೇಕು ಎಂಬುದು ನಿಲುವು. ಇದು.. ಲಾಗಾಯತ್ತಿನಿಂದ ವರ್ಣ ಭೇದವಿಲ್ಲದೇ ನಡೆಯಬೇಕಾದ ಪ್ರಕ್ರಿಯೆ ಎಂಬುದು ವಿದಿತ. ಅದೇ ರೀತಿ ಗಾರ್ಹಸ್ತ್ಯವೂ ಕೂಡಾ.. ಬ್ರಹ್ಮಚರ್ಯದಿಂದ ಗಳಿಸಿದ ಸದ್ಧರ್ಮದ ತಿರುಳನ್ನು ಲೋಕದಲ್ಲಿ ಪ್ರತಿಷ್ಠಾಪಿಸುವು ದಕ್ಕಾಗಿ ಬಳಸಿಕೊಳ್ಲಬೇಕಾದ ಕಾಲಘಟ್ಟ. ಇಲ್ಲಿ ವಿಫುಲಾವಕಾಶಗಳನ್ನು ಒದಗಿಸಿ ಕೊಟ್ಟಿದ್ದು.. ಕೇವಲ ಐಹಿಕ ಭೋಗಕ್ಕಾಗಿ ಮಾತ್ರವಲ್ಲ, ಆಮುಷ್ಮಿಕ ಜ್ಞಾನ ಮತ್ತು ಕರ್ಮ ಫಲ ಸಂಪಾದನೆಗೆ ಸಾಧನವಾಗಿದೆ. ಮುಂದಿನ ವಾನಪ್ರಸ್ಥಾಶ್ರಮವು ತಾನು ಗಳಿಸಿಕೊಂಡ ಜ್ಞಾನದ ಪ್ರಭಾವದಿಂದ ಲೋಕಾಚಾರಗಳ ಸಮೀಕ್ಷೆ ನಡೆಸಿ ಎಲ್ಲೆಲ್ಲಿ ವೈದಿಕ ಮಾರ್ಗವು ವ್ಯಸ್ತಗೊಳ್ಳುತ್ತಿದೆಯೆಂಬುದನ್ನು ಅರಿಯುವುದಕ್ಕಿರುವ ಸಾಧನ ವಾಗಿದೆ. ಆದರೆ ಈ ಹಿಂದಿನ ಮೂರೂ ಆಶ್ರಮಗಳು ಎಲ್ಲ ವರ್ಣದವರಿಗೆ ಹಂಚಿಕೆ ಯಾಗಿದ್ದರೂ.. ಜ್ಞಾನದ ಅನವಗಮನತೆಯ ಪರಿಣಾಮವಾಗಿ ಮುಂದಿನ ಆಶ್ರಮ ವಾದ ಸನ್ಯಾಸಕ್ಕೆ ಕೆಲವು ಬಾಧ್ಯತೆಗಳನ್ನು ನೀಡಲಾಯಿತು.
ಬ್ರಾಹ್ಮಣನಾದವನಿಗೆ ಮಾತ್ರ ಸನ್ಯಾಸಾಧಿಕಾರ ಪ್ರಾಪ್ತಿಸುವುದು ಎಂಬ ನಿಲು ವನ್ನು ತಳೆದಿದ್ದು ಅವನು ಜ್ಞಾನವನ್ನು ಸಂಪಾದಿಸುವುದರೊಮ್ದಿಗೆ ಹಿಂದಿನ ಮೂರು ಆಶ್ರಮಗಳಲ್ಲಿ ಅಜಾತ ಶತ್ರುತ್ವವನ್ನೂ ಸಂಪಾದಿಸಿಕೊಂಡಿರುತ್ತಾನೆ.. ಸಮಾಜದ ಗೌರವಕ್ಕೆ ಪಾತ್ರನಾಗಿರುತ್ತಾನೆ ಎಂಬ ಕಾರಣಕ್ಕೆ ಅಷ್ಟೇ.. ಇಲ್ಲಿ ನೆನಪಿಡಬೇಕಾದ್ದು.. ಬ್ರಾಹ್ಮಣನೆಂದರೆ ಹುಟ್ಟಿನಿಂದ ಬಂದವನಲ್ಲ..!! ಗುಣ-ಕರ್ಮ ಗಳಿಂದ ಬಂದ ವನು!!! ಹೀಗಿರುವಾಗ.. ಈ ಸನ್ಯಾಸವನ್ನು ಲೋಕದಲ್ಲಿ ಅಬ್ರಾಹ್ಮಣರು ಪಡೆದುಕೊ ಳ್ಲುವುದಕ್ಕೆ ಪ್ರಾರಂಭಿಸಿದ ಮೇಲೆ.. ಆ ಆಶ್ರಮದ ಮಹತ್ವ ಕಡಿಮೆಯಾಗತೊಡಗಿದ್ದರಲ್ಲಿ ಆಶ್ಚರ್ಯವೇನಿಲ್ಲ..ಅದಲ್ಲದೇ ಇಲ್ಲಿ ಕೇವಲ ಬ್ರಾಹ್ಮಣನಾದವನು ಮಾತ್ರ ಸನ್ಯಾಸ ಸ್ವೀಕರಿಸಬೇಕು ಎಂಬ ನಿಲುವಿನೊಂದಿಗೆ, ಹಿಂದಿನ ಮೂರು ಆಶ್ರಮಗ ಳನ್ನೂ ಅತೀತವಾಗಿಸಿ.. ಬ್ರಹ್ಮಚರ್ಯದಿಂದಲೂ ನೇರವಾಗಿ ಸನ್ಯಾಸಕ್ಕೆ ಅರ್ಹತೆ ಯನ್ನು ಹೊಂದಬಲ್ಲ ಎಂಬ ಶ್ರುತಿ ವಾಕ್ಯವು ಇತ್ತೀಚೆಗೆ ಆ ಬ್ರಹ್ಮ ಚರ್ಯ ಮತ್ತು ಸನ್ಯಾಸ ಭಾವದ ಪೂರ್ವ ಮಜಲುಗಳನ್ನು ಮರೆತದ್ದರಿಂದಾಗಿ ಸನ್ಯಾಸವು ಕಳೆಗುಂ ದುತ್ತಿದೆ...ಲೋಕಕ್ಕೆ ಆಮುಷ್ಮಿಕ ಜ್ಞಾನಮಾರ್ಗವನ್ನು ದರ್ಶಿಸಬಲ್ಲ ಸಾಮರ್ಥ್ಯ ಕೇವ ಲ ಲೌಕಿಕ ಜಾನ ಸಂಪಾದನೆಯಿಂದ ಸಾಧ್ಯವಾಗುವುದಿಲ್ಲ.. ಅದಕ್ಕೆ ವ್ಯಕ್ತಿಯೋರ್ವ ದಾರ್ಶನಿಕನಾಗಿರಬೇಕಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ