ಅದೊಂದು ಸುಂದರ ಸಂಜೆ.. ಮತ್ತು ನನ್ನ ಜೀವನದ ಮರೆಯಲಾರದ ಸುದಿನ. ಅಂದು ಏಪ್ರಿಲ್ ಹತ್ತು... ನಾನು ಶಾಲೆಗೆ ಶಿಕ್ಷಕನಾಗಿ ಸೇರಿದ ಮೇಲೆ ಮೊದಲಬಾರಿಗೆ ಮನೆಗೆ ರಜೆ ಕಳೆಯಲೆಂದು ಹೋಗುತ್ತಿದ್ದೆ. ಮನತುಂಬೆಲ್ಲಾ ತುಂಬಿಕೊಂಡ ಹರ್ಷದ ಮಹಾಪೂರ...!! ಅದುವರೆಗೆ ಸಂಪಾದಿಸಿದ ತಿಂಗಳ ಸಂಬಳವನ್ನೆಲ್ಲಾ ಕೂಡಿಟ್ಟು ಒಂದೇ ಕಂತಿನಲ್ಲಿ ನೋಟಿನ ಕಟ್ಟುಗಳನ್ನು ಅಮ್ಮನ ಮುಂದೆ ಹರಡಿ... ಇಕೋ...ನಿನ್ನ ಮಗ ದುಡಿದಿದ್ದು... ಎಂದು ತೋರಬೇಕೆಂಬ ಹಂಬಲ..
ಅಂದು ಸಂಜೆ ಬೇಗನೆ ಮನೆಗೆ ಬಂದು ಪಟಪಟನೆ ಮನೆಯ ಅಳಿದುಳಿದ ಹಳಸಲುಗಳನ್ನೆಲ್ಲಾ ಬದಿಗೆ ಒತ್ತರಿಸಿಟ್ಟು... ಹಾಳಾಗುವಂಥಹುದನ್ನು ಹೊರಗೆಸೆದು, ಬಟ್ಟೆ ಬರೆಗಳನ್ನೆಲ್ಲಾ ಗಂಟು ಕಟ್ಟಿ ಮೂಲೆಗೆ ಸೇರಿಸಿ ಒಪ್ಪಗೊಳಿಸಿ ಮನೆಗೆ ತೆಗೆದುಕೊಂಡು ಹೋಗಬೇಕಾದ ಅಮ್ಮನಿಗೆ ಕೊಡುವ ಹೊಸ ಸೀರೆ, ತಂಗಿಗೆ ಕೊಡುವ ಹೊಸ ಚೂಡಿದಾರ್ ಎಲ್ಲಾ ಶೂಟ್ ಕೇಸಿನಲ್ಲಿ ಭದ್ರ ಪಡಿಸಿ ಅಂತೂ.. ಗಡಿಬಿಡಿಯಲ್ಲೇ ರಾಮನಗರದಿಂದ ಬಸ್ಸನೇರಿದ್ದಾಯ್ತು... ನನಗಾಗಿ ಅಂದಿನ ಕುಮಟಾ ಬಸ್ಸಿನ ಒಂದು ಕಿಟಕಿ ಸೀಟು ಕಾಯ್ದಿರಿಸಿದ್ದೆ... ಬೆಂಗಳೂರು ಮೆಜೆಸ್ಟಿಕ್ ಎಂಬುದು ಒಂದು ಸ್ವರ್ಗವೇ ಆಗಿತ್ತು ಅಂದು... ಜನರ ಜಾತ್ರೆಯೇ ಸೇರಿತ್ತು ಅಲ್ಲಿ ಎಲ್ಲರೂ ಹೋಗುವವರೇ.. ಬಂದ ಬಸ್ಸುಗಳೇಲ್ಲಾ ಭರ್ತಿಯಾಗಿ ಹೊರಡುತ್ತಿದ್ದವು... ಅಂತೂ ನಾನು ಹೋಗಬೇಕಾದ ಬೆಂಗಳೂರು - ಕುಮಟಾ ಸೆಮಿ ಲಕ್ಸುರಿ ಬಂದು ನಿಂತಿತು.. ಸೆಕೆಯ ಆ ದಿನಗಳಲ್ಲಿ ಬೆಂಗಳೂರು ಸಣ್ಣಗೆ ನಡುಗುವ ಛಳಿಯನ್ನು ತೋರುತ್ತಿತ್ತು... ಅದು ಬೆಂಗಳೂರು...!! ಅಂ..ನಾನು ಬಸ್ಸನ್ನೇರಿ ನನ್ನ ನಂಬರಿನ ಸೀಟಿನಲ್ಲಿ ಕುಳಿತೆ..ಕಿಟಕಿ ಪಕ್ಕ. ನಾನು ಕುಳಿತ ಸೀಟಿನ ಪಕ್ಕದಲ್ಲಿ ಒಂದು ಖಾಲಿ ಇತ್ತು.. ಯಾರೂ ಇಲ್ಲ... ಬಸ್ಸೆಲ್ಲಾ ಫುಲ್ ಆಗಿತ್ತು... ಓಹ್ ಈ ಸೀಟು ಖಾಲಿಯೇ ಇರಲಪ್ಪಾ..ಆರಾಮಾಗಿ ಮಲಗಿ ಹೋಗಬಹುದಲ್ಲಾ ಎನ್ನಿಸಿತು.... ಕಂಡಕ್ಟರ್ ಮತ್ತೊಮ್ಮೆ ಬಂದು ಎಲ್ಲಾ ಸೀಟುಗಳೂ ಬಂದವೆಂಬುದನ್ನು ಖಾತ್ರಿ ಪಡಿಸಿಕೊಂಡು..." ರೈಟ್.... " ಹೇಳಿದ. ಅಂತೂ ಬಸ್ಸು ಮೆಜೆಸ್ಟಿಕ್ ನಿಂದ ಹೊರಟೇಬಿಟ್ಟಿತು... ಹಾಕಿದ್ದ ಗರಿಗರಿಯಾದ ಪ್ಯಾಂಟ್ ಶರ್ಟ್ ಸರಿ ಪಡಿಸಿಕೊಂಡು ಏನೋ ಒಮ್ದು ಉಲ್ಲಾಸದ ಉಸಿರು ಬಿಟ್ಟೆ.. ಮನೆಗೆ ಹೋಗಿ ಏನೇನು ಮಾಡಬೇಕು..ಎಲ್ಲೆಲ್ಲಿ ಹೋಗಬೇಕು, ಯಾರ್ಯಾರನ್ನು ಕಾಣಬೇಕು.ಅವರಿವರ ಮನೆಯ ಮದುವೆ ಉಪನಯನ ಹೊಸ ಮನೆಯ ಗೃಹಪ್ರವೇಶಗಳಿಗೆಲ್ಲಾ ನಾನು ಹೋಗಬೇಕು.. ಅದಕ್ಕೆಂದೇ ನಾಲ್ಕು ಜೊತೆ ಹೊಸಾ ಪ್ಯಾಂಟ್-ಶರ್ಟ್ ಹೊಲಿಸಿ ಶೂಟ್ಕೇಸ್ ತುಂಬಿದ್ದೆ.. ಎಲ್ಲರೂ ನನ್ನನ್ನು ಗಮನಿಸ ಬೇಕು..ಮುಖ್ಯವಾಗಿ ಗಮನಿಸುವಂಥವರಿಗೆ ನಾನು ಕಾಣಿಸಿಕೊಳ್ಳಬೇಕು.... ಇನ್ನೂ ೨೮ರ ಪ್ರಾಯ......ಇತ್ಯಾದಿ ಮನದ ಮೂಲೆಯಲ್ಲಿದ್ದುದೆಲ್ಲಾ ಒಂದೊಂದಾಗಿ ಬರುತ್ತಿತ್ತು..
ಬೋರೆಂದು ಶಬ್ದ ಮಾಡುತ್ತಾ ಬಸ್ಸು ಮುಂದೆ ಮುಂದೆ ಸಾಗುತ್ತಿತ್ತು.. ಅಲ್ಲಲ್ಲಿ ಹಂಪ್ಸ್ ಗಳು.. ಬ್ರೇಕ್ ಇನಸ್ಪೆಕ್ಟರುಗಳು..ಕುಲುಕಾಟ ಅಲುಗಾಟ ಇವೆಲ್ಲ ಬೆಂಗಳೂರಿನ ರಸ್ತೆಗಳ ಸ್ಥಿತಿಯನ್ನು ತೋರುತ್ತಿದ್ದವು... ಹಾಗೇ ಮನಸ್ಸಿನ ಕುದುರೆಯ ಹಗ್ಗವನ್ನು ಹರಿದು ಬಿಟ್ಟಾಗ ಎತ್ತೆತ್ತಲೋ ಓಡುತ್ತಿತ್ತು... ಡೈವರ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದಾಗಲೇ ಕಿಟಕಿಯಿಂದ ಕತ್ತೆತ್ತಿ ಆಚೆ ನೋಡಿದರೆ ..ರಾಜಾಜಿ ನಗರ..!!! ಛೇ..ಇನ್ನೂ ಬೆಂಗಳೂರು ಮುಗಿದಿಲ್ಲವಾ..? ನಾನು ಬೇಗೆ ಹೋಗಬೇಕು.. ಮನೆ ಸೇರಿ ಅಮ್ಮನಿಗೆ ನನ್ನನ್ನು ಕಾಣಿಸಬೇಕು... ನಾನು ಅಂದಿನ ನಾನಾಗಿರಲಿಲ್ಲವಲ್ಲ..! ಅಂತೂ ನಿಂತ ಬಸ್ಸಿಗೆ ಒಂದೆರಡು ಜನ ಹತ್ತಿದ ಹಾಗೇ ಕಂಡಿತು... ಬಸ್ಸು ನಿಧಾನಕ್ಕೆ ಚಲಿಸುತ್ತಿದ್ದಂತೇ ನನ್ನ ಪಕ್ಕದಲ್ಲಿ ಒಂದು ಸುಂದರ ತರುಣಿ ಬಂದವಳೇ ತನ್ನ ವ್ಯಾನಿಟಿ ಬ್ಯಾಗನ್ನು ಸೀಟಿನ ಮೇಲೆ ಬಿಸಾಡಿ ಕೈಯ್ಯಲ್ಲಿದ್ದ ಕೂಸಿನ ಮೊದಲು ಸೀಟಿನಲ್ಲಿ ಕೂರಿಸಿದಳು...!! ತುಂಬುಗೆನ್ನೆಯ ಆ ಮಗುವನ್ನು ನೋಡಿದರೆ ಯಾವುದೋ ಅಡ್ವಟಾಯ್ಜ್ ಮೆಂಟಿನಲ್ಲಿ ಕಂಡಂತೆ ಭಾಸವಾಯಿತು. ದುಂಡುಗೆನ್ನೆಯ ಬೆಳ್ಳಗಿನ ನಗುಮೊಗದ ಆ ಮಗುವನ್ನು ವರ್ಣಿಸಿದ ಮೇಲೆ ಅದನ್ನೆತ್ತಿಬಂದ ಆಮಗುವಿನ ಅಮ್ಮನ ಸೌಂದರ್ಯವನ್ನು ಹೊಸದಾಗಿ ಹೇಳಬೇಕಿಲ್ಲವಲ್ಲಾ...!!ನಗುನಗುತ್ತಿರುವ ಒಂದೆರಡು ವರ್ಷದ ಆಮಗು ನನ್ನನ್ನೂ ಅಮ್ಮನನ್ನು ಬಸ್ಸನ್ನೂ ಎವೆಯಿಕ್ಕದೇ ನೋಡುತ್ತಿತ್ತು... ಎಲ್ಲಾ ಹೊಸದು.... ಮಗುವಿನೊಂದಿಗೆ ಸೀಟಿನಲ್ಲಿ ಕುಳಿತ ಆ ತರುಣಿಗೆ ಚೂರು ಹೆಚ್ಚೇ ಜಾಗ ಮಾಡಿಕೊಟ್ಟೆ..!!!
ಮಗುವನ್ನು ನೋಡುವುದೇ ನನಗೆ ಆನಂದಕೊಡುತ್ತಿತ್ತು ಎಂದರೆ ನೀವು ನಂಬಲಿಕ್ಕಿಲ್ಲ... !!!ಹಾಗೇ ಚಲಿಸುತ್ತಿದ್ದ ಬಸ್ಸಿನ ಕುಲುಕಾಟಕ್ಕೆ ಆ ಮಗು ನನ್ನ ಕಾಲಮೇಲೆ ಬಂದು ಕೂರುತ್ತಿತ್ತು.. ಮತ್ತೆ ಅಮ್ಮನ ಮಡಿಲಿಗೆ ಹಾರುತ್ತಿತ್ತು... ಆಗ ಏನೋ ನೆನಪಾದವನಂತೆ ಪ್ಯಾಂಟಿನ ಜೇಬಿನೊಳಕ್ಕೆ ಕೈ ಹಾಕಿದೆ... ಅಲ್ಲೊಂದೈದಾರು ಚಾಕಲೇಟುಗಳು.... ಮಕ್ಕಳು ಅಂದು ಶಾಲೆಯ ಕೊನೇಯದಿನವೆಂದು ತಂದು ಕೊಟ್ಟಿದ್ದು... ಸಿಕ್ಕಿದ ಆ ಚಾಕಲೇಟುಗಳಲ್ಲಿ ಎರಡು ಕೈಗೆ ತೆಗೆದುಕೊಂಡು ಅದನ್ನು ಬಿಡಿಸಿ ಮಗುವಿನ ಮುಂದೆ ಹಿಡಿದೆ... ಮಗು ಅದನ್ನು ಊಂದೇ ಏಟಿಗೆ ಬಾಚಿಕೊಂಡು ಬಾಯಲ್ಲಿಕ್ಕಿ ನಗಾಡಿತು..ಅದರ ನಗುವಿಗಿಂತ ಮಗುವನ್ನು ನೋಡಿ ಮುಗುಳ್ನಗುವ ಆ ತರುಣಿಯ ಮುಖವೇ ನನಗೆ ಆಪ್ಯಾಯಮಾನವೆನಿಸಿತು...ಬಸ್ಸು ಸಾಗುತ್ತಿತ್ತು... ಕೈಯ್ಯಲ್ಲಿದ್ದ ಎರಡೂ ಚಾಕಲೇಟುಗಳನ್ನು ಮುಗಿಸಿ ಮತ್ತೆ ನನ್ನ ಕೈ ನೋಡುತ್ತಿದ್ದ ಮಗುವಿಗೆ ಇನ್ನೊಂದು ಬಿಡಿಸಿಕೊಟ್ತೆ,,,,.... ಅಂತೂ ಚಾಕಲೇಟ್ ಮಾಮನಾದೆ..!!. ಅಮ್ಮನ ಬಾಯಿಂದ ಹೊರಬಿದ್ದ ಧ್ವನಿ ಅದು..!! ಬಸ್ಸಿನ ನಸುಬೆಳಕು ನಮ್ಮ ಸೀಟಿನ ಮುಂದೇ ಇದ್ದುದು ಆ ಅಮ್ಮ ಮಗುವಿನ ಮುಖವನ್ನು ನನಗೆ ತೋರುತ್ತಿರುವುದರಲ್ಲಿ ಯಾವ ದಾಕ್ಷಿಣ್ಯಅನ್ವನೂ ತೋರಲಿಲ್ಲ್ಲ. ಬಸ್ಸು ಸಾಗುತ್ತಿತ್ತು ಅದರ ಭೋರಿಡುವ ಶಬ್ದವನ್ನು ಬಿಟ್ಟರೆ ಆ ಮಗುವಿನ ಕೇಕೆ ನಗು ಮಾತ್ರ ಕೇಳಿಸುತ್ತಿತ್ತು...
ಹಾಗೇ ರಸ್ತೆಯ ಉದ್ದವನ್ನು ಅಳೆಯುತ್ತಾ ಸಾಗುತ್ತಿದ್ದ ಬಸ್ಸು... ನನ್ನ ಕಾಲ ಮೇಲೇ ಒರಗಿ ನಿದ್ದೆಗೆ ಜಾರುತ್ತಿರುವ ಆ ಮಗು... ಹೀಗೇ ನನಗೂ ಕಣ್ಣು ನಿದ್ದೆಯನ್ನು ಕರೆಯುತ್ತಿತ್ತು..ಅದೆಲ್ಲೋ ಬಸ್ಸು ಇದ್ದಕ್ಕಿದ್ದಂತೇ ರಸ್ತೆಯ ಪಕ್ಕಕ್ಕೆ ಸರಿದು ನಿಂತಿತು..ಕಂಡಕ್ಟರ್ ... ನಿಂತ ಬಸ್ಸಿನ ಜನರ ಸವಿನಿದ್ದೆಯನ್ನು ಕಳೆಯಲೆಂಬತೆ... ...."ನೋಡೀ ಯಾರಾದ್ರೂ ಊಟಾ ಮಾಡೋದಿದ್ರೆ ಬೇಗ ಹೋಗಿ ಬನ್ನಿ ಹತ್ ನಿಮಿಷ ಟೈಮಿದೆ" ಎಂದಾಗಲೇ ನಾನು ಹೊರ ನೋಡಿದ್ದು... ಬಸ್ಸು ತುಮಕೂರಿನಿಮ್ದ ಸ್ವಲ್ಪ ಮುಂದೆ ಬಂದಿರಬೇಕು..ಅಲ್ಲಿ ಹೋಟೇಲೊಂಡರಲ್ಲಿ ಪುಕ್ಕಟೆಯಾಗಿ ಸಿಗುವ ಊಟಕ್ಕಾಗಿ ಈ ಡ್ರೈವರ್ ಕಂಡಕ್ಟರ್ ಇಲ್ಲೇ ತಂದು ನಿಲ್ಲಿಸೋದು ಬಸ್ಸನ್ನು... ನಾನು ಅಲ್ಲಿ ಇಳಿದು ಏನೂ ಮಾಡುವುದಿರಲಿಲ್ಲ. ಕುಳಿತೇ ಇದ್ದೆ. ಅಷ್ಟರಲ್ಲಿ ಪಕ್ಕದಲ್ಲಿ ಕುಳಿತ ಆ ತರುಣಿ ಎದ್ದು .." ಸಾರ್.. ಒಂಚೂರು ಏನಾದ್ರೂ ತಿಂದು ಬರ್ತೇನೆ..ಬೆಂಗಳೂರಲ್ಲಿ ಆಗಲೇ ಇಲ್ಲ ಈ ಮಗುವನ್ನೂ ಕಟಗೊಂಡು..." ಎಂದಳು... ಮಗು ನನ್ನ ಕಾಲ ಮೇಲೆ ಹಾಯಾಗಿ ಮಲಗಿತ್ತು.. ಮಗುವನ್ನು ನನ್ನಲ್ಲೇ ಇರಲೀ ಎಂಬಂತೆ ಸನ್ನೆ ಮಾಡಿ ಬೇಡಿಕೊಂಡಳು... ಆಯಿತು ಹೋಗಿಬನ್ನಿ ಮಗುವನ್ನು ನಾನು ನೋಡಿಕೊಳ್ತೇನೆ ಎಂದು ಆ ಮಗುವಿಗೆ ನನ್ನ ಕತ್ತಿಗೆ ಬೇಕಾಗುತ್ತದೆಂದು ಇರಿಸಿಕೊಂಡಿದ್ದ ಶಾಲನ್ನು ತೆಗೆದು ಹೊದೆಸಿ ಅವಳನ್ನು ಬೀಳ್ಕೊಟ್ಟೆ...
"ಎಲ್ಲಾ ಬಂದ್ರಾ..?".... ರೀ ಅಲ್ಲಿ ಯಾರೀ ಆಸೀಟಿಗೆ ಇನ್ಯಾರ್ ಬರಬೇಕೂ.." ಎನ್ನುತ್ತಾ ಕಂಡಕ್ಟರ್ ಬಸ್ಸನ್ನು ಹೊರಡಿಸಲು ವಿಸಿಲ್ ಊದುವುದರಲ್ಲಿದ್ದ... ನಾನೆಂದೆ..." ಸಾರ್..ಇಲ್ಲೊಬ್ಬರು ಬರಬೇಕು.. " ಅದಕ್ಕೆ ಕಂಡಕ್ಟರ್.. ನನ್ನ ಸೀಟಿನ ಹತ್ತರ ಬಂದು ನೋಡಿ ಹೋದ... ಯಾರ್ರೀ ಅದೂ.. ಬೇಗ ಬನ್ರೀ..." ಪೀಂ.ಪೀಂ..ಪೀಂ.. ಎಂದು ಕೂಗಿಕೊಂಡ... ಊಹೂಂ... ಯಾರೂ ಬರಲಿಲ್ಲ... "ಇಲ್ಲೊಬ್ರು..ಲೇಡಿ ಬರಬೇಕ್ರೀ.." ಎಂದೆ... ಎಲ್ಲರೂ ನನ್ನನ್ನೇ ದುರುಗುಟ್ತಿ ನೋಡುತ್ತಿದ್ದರು... ಎಷ್ಟು ಹೊತ್ತು ಕಾದರೂ ಬಾರದಿದ್ದಾಗ ... ಕಂಡಕ್ಟರ್ ಬಸ್ಸಿಂದ ಇಲಿದು ಆಚೀಚೆ ನೋಡಿ ಎರಡು ಬಾರಿ ವಿಸಲ್ ಊದಿದ.. ಊಹೂ ಯಾರೂ ಇಲ್ಲ....!! ಉಂಡ ಹೋಟೇಲಿನಲ್ಲಿಯೂ ಯಾರೂ ಕಾಣುತ್ತಿಲ್ಲ ಎಂದ ಅಲ್ಲಿಗೆ ಹೋಗಿ ಬಂದ ಕಂಡಕ್ಟರ್...". ಅಯ್ಯೋ... ಮಗು ಇದೇರೀ..ಇಲ್ಲಿ... ಊಟ ಮಾಡೋಕೆ ಹೋಗಿದ್ದಾರೆ.. "... ಮತ್ತೂ ಚೂರ್ ಹೊತ್ತು ಕಾದರೂ ಯಾರೂ ಬಾರದಿದ್ದಾಗ.. ಮೇಲೆ ಬಸ್ಸನ್ನೇರಿದ ಕಂಡಕ್ಟರ್.. ನನ್ನ ಬಳಿಗೆ ಬಂದು.." ಯಾರೀ ಅದೂ" ಕಂಡಕ್ಟರ್.. "ಲೋ ನಡೀಯಪ್ಪಾ ಏನ್ ಜನಾನೋ.." ಎನ್ನುತ್ತಾ ಡ್ರೈವರ್ ನಿಗೆ ಬಸ್ಸನ್ನು ಮುಂದಕ್ಕೆ ಬಿಡಲು ಹೇಳಿದ...!!! ನನಗೋ.. ಏನಪ್ಪಾ ಇದೂ... ಹೀಗೂ ಮಾಡ್ತಾರಾ.." ರೀ.. ಏನ್ ..ನಿಮಗೆ ಬುದ್ಧಿ ಇಲ್ವಾ... ಮಗೂನ್ ಬಿಟ್ ಹೋಗಿದ್ದಾರೆ.. ಅವರನ್ ಬಿಟ್ ಹೋದ್ರೆ...?" ಎಂದೆ.... ಅದಕ್ಕೆ.. ಯಾರ್ರೀ ಅದೂ... ಮಗೂನ್ ಬಿಟ್ಟ್ ಹೋಗಿದ್ದಾರೇ ಅಂತ ನಾವ್ ರಾತ್ರಿಯೆಲ್ಲಾ ಇಲ್ಲೇ ಇರೋಕಾಗುತ್ತಾ..?" ಎಂದ... ಅಯ್ಯೋ ಶಿವನೇ.. ಇದೇನಪ್ಪಾ..? ಎಂದು ಆಚೀಚೆ ನೋಡುತ್ತಾ ಇರುವಾಗ..ಅದ್ಯಾರೋ ಹೇಳಿದ್ದು ಕೇಳಿಸಿತು.." ಅಯ್ಯ.... ಈ ಹೆಂಗಸರೀಗ್ ಇಷ್ಟ್.... ಇವರು ಯಾವಾಗ್ಲೂ ಹೀಂಗೇನೇ...ಇಲ್ಲೊಂದಿಷ್ಟ್ ಜನ ಸೇರಕಂಡು ಇದೇ ದಂಧೆ ಮಾಡಕಂಬುಟ್ಟವ್ರೇ..." ಅದೆಲ್ಲೋ ಇದ್ದ ಕಂಡಕ್ಟರ್.. ಹ್ವಾಯ್.. ಹೋ..ಇದು ಅದೇ ಕಥೆ ಕಣ್ರೀ..ಎನ್ನುತ್ತಾ... ನಡಿಯಪ್ಪಾ ನೀನು ಎಂದು ಡ್ರೈವರ್ ನಿಗೆ ಪುಸಲಾಯಿಸುತ್ತಿದ್ದ... ಅವರಿಗದು ಸಾಮಾನ್ಯವಾಗಿತ್ತೇನೋ... ಅಂತೂ ಬಸ್ಸಿನ ಚಕ್ರಗಳು ಚಲಿಸಲಾರಂಭಿಸಿದವು..ನನಗೋ... ಕಾಲಿನಲ್ಲಿ ಮಲಗಿದ ಮಗು ಕೆಂಡದಷ್ಟು ಕಾಯಿಸುತ್ತಿತ್ತು.... ಬಸ್ಸು ಚಲಿಸಿಯೇಬಿಟ್ಟಿತು... ಸುಮಾರು ದೂರ ಬಂದ ಬಸ್ಸನ್ನು ನಿಲ್ಲಿಸಿ ನಾನು ನನ್ನಧ್ವನಿಯನ್ನು ಏರಿಸಿದೆ..." ಏನ್ರೀ ನೀವ್ ಮಾಡ್ತಾ ಇರೋದು... ಈ ಮಗೂನ್ ಇಲ್ಲೇ ಬಿಟ್ಟು ಹೋಗಿದ್ದಾಳೆ ಅಂದ್ರೂ ಕೇಳಿಲ್ಲಾ ಈಗ್ ನೋಡಿದ್ರೆ ಮಗು ಬೇರೆ ನನ್ನ ಹತ್ತಿರನೇ ಇದೆ ಆ ಮಹತಾಯಿ ಅದೆಲ್ಲಿದ್ದಾಳೋ.".. ಎಂದೆಲ್ಲಾ ಬಡಬಡಿಸತೊಡಗಿದೆ...ಅದನ್ನು ಕೇಳಿದ ಡ್ರೈವರ್..ನನ್ನತ್ತ ತಿರುಗಿ.ನೋಡಿ.. ಬಸ್ಸನ್ನು ನಿಲ್ಲಿಸಿ.. ಹಿಂದೆ ನೋಡುತ್ತಾ ರಿವರ್ಸ್ ತೆಗೆದುಕೊಳ್ಳತೊಡಗಿದ.. ಬಸ್ಸು ಪುನಃ ತುಮಕೂರು ಕಡೆಗೆ ಮುಖ ಮಾಡಿ ಹೊರಟಿತು... ಬಸ್ಸು ಊಟಕ್ಕೆ ನಿಲ್ಲಿಸಿದ ಹೋಟೇಲು ಸಮೀಪಕ್ಕೇ ತಿರುಗಿ ಬಂತು... ಊಹೂಂ..ಎಲ್ಲೂ ಆ ತರುಣಿಯ ಸುಳಿವಿಲ್ಲ... ಆಚೀಚೆ ನೋಡಿದೆ..ಎಲ್ಲೂ ಕಾಣಿಸುತ್ತಿಲ್ಲ... ಬಸ್ಸನ್ನು ಚೂರು ಮುಂದಕ್ಕೆ ತೆಗೆದುಕೊಂಡು ಹೋಗಿ ನೋಡಿ... ಎಂದು ಬೇಡಿಕೊಂಡೆ...!!! ಡ್ರೈವರನಿಗೆ ಅದೇನು ಬುದ್ಧಿ ಬಂತೋ ..ಅಥವಾ ನನ್ನ ಅದೃಷ್ಟ ಚೆನ್ನಾಗಿತ್ತೋ ಹೇಳಿದ ಕೂಡಲೇ ಡ್ರೈವರ್ ಬಸ್ಸನ್ನು ತುಮಕೂರಿನಕಡೆಗೇ ಓಡಿಸತೊಡಗಿದ ....!!..ಇನ್ನೇನು ಅರ್ಧ ಫರ್ಲಾಂಗ್ ಬಂದಿರಬೇಕು.. ಅಲ್ಲೊಬ್ಬಳು ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು... ನಾನು ಕೂಗಿಕೊಂಡೆ... "ಸಾರ್...ಸಾರ್... ನಿಲ್ಸೀ...ಅದೇ..ಅಲ್ಲೋಗ್ತಾ ಇದ್ದಾಳೆ...ಅವಳೇ ಅವಳೇ.... "... ಡ್ರೈವರ್... ಅವಳ ಪಕ್ಕದಲ್ಲೇ ತಂದು ಬಸ್ಸನ್ನು ನಿಲ್ಲಿಸಿದ... ಕಂಡಕ್ಟರ್ ಕ್ಷಣಮಾತ್ರದಲ್ಲಿ ಇಳಿದವನೇ ಆ ತರುಣಿಯ ಮುಮ್ದೆ ನಿಂತು.". ಏಯ್,,, ಯೆಲ್ಲೋಗ್ತಾ ಇದ್ದೀ.... ಮಗು ಬ್ಯಾಡ್ವಾ... ಮಗೂನ ಬಸ್ಸಲ್ಲಿ ಬಿಟ್ ಬಿಟ್ಟು ಹೀಗ್ ನಡಕೊಂಡ್ ಹೋಗ್ತಾ ಇದ್ದೀಯಲ್ಲಾ...ಲೇ..ನಿನಗೇ ಹೇಳ್ತಾ ಇರೋದು" ಎಂದು ಅವಳ ಭುಜವನ್ನು ಕುಕ್ಕಿದ..ಅವಳು ಗಕ್ಕನೆ ನಿಂತು ಅವಾಕ್ಕಾದಂತೇ ನೋಡಿದಳು..!! ಮತ್ತು ಒಂದೇ ಸಮನೆ ಕೂಗಿಕೊಳ್ಳತೊಡಗಿದಳು. "ಯಾರಾದ್ರೂ ಬನ್ನಿ ಇಲ್ನೋಡೀ ಇವನ್...". ನಾನೂ ಮಗುವನ್ನು ಕಟ್ಟಿಕೊಂಡೇ ಬಸ್ಸಿಳಿದು ಅವಳೆದುರು ಹೋಗಿ ನಿಂತೆ..ನೋಡಿದೆ...ಅವಳೇ...ಅವಳೇ..!!! ಅರೇ... ಇದೇನಪ್ಪಾ..?! "ಲೇ...ಇದೇನ್ ಮಾಡ್ತಾ ಇದ್ದೀಯಾ... ಮಗೂನ್ ಬಿಟ್ ಹೋಗ್ತಾ ಇದ್ದೀಯಲ್ಲಾ...ಬ್ಯಾಡ್ವೇ.... " ಎಂದೆ..ಅದಕ್ಕವಳು ನನ್ನನ್ನೊಮ್ಮೆ ನೋಡಿ ಮಗುವಿನ ಕಡೆ ನೋಡಿದವಳು ತನಗೆ ಸಂಬಂಧವೇ ಇಲ್ಲವೆಂಬಂತೆ ಮುಖ ಕೆಳಗೆ ಹಾಕಿದವಳು ಮತ್ತೆ ನಡೆಯಲು ಮುಂದಾದಳು... ನನಗೆ ಜಂಘಾಬಲವೇ ಉಡುಗಿ ಹೋದಂತಾಯ್ತು..!!ಆದರೂ ಬರಬಾರದ ಆಲೋಚನೆಗಳೆಲ್ಲಾ ಕ್ಷಣಮಾತ್ರದಲ್ಲಿ ನನ್ನನ್ನು ಕಟ್ಟಿ ಸುತ್ತಿದವು... ಏನೂ ಹೊಳೆಯುತ್ತಿರಲಿಲ್ಲ...ಆದರೂ ಏನೂ ಮಾಡುವಂತಿರಲಿಲ್ಲ.. ಮಗು ನನ್ನ ಭುಜದ ಮೇಲೆ ಮಲಗಿ ನಿದ್ರಿಸುತ್ತಿತ್ತು..." ಸಾರ್...ಇವಳೇ..ಇವಳೇ..ಈ ಮಗುವನ್ನು ಬಿಟ್ ಹೋದೋಳು ... ಗ್ಯಾರಂಟೀ ಇವಳೇ..ಈಗ್ ನಾಟಕಾ ಆಡ್ತಾ ಇದ್ದಾಳೇ.. ಎಳ್ಕೊಳ್ಳಿ ಇವಳನ್ನಾ,,, ರೀ ಡ್ರೈವರ್ರೇ.. ಸ್ತೇಶನ್ನಿಗೇ ತಗಂಡ್ ಹೋಗಿ ಈಯಮ್ಮನ್ನಾ... ಇಲ್ಲ್ದೇ ಇದ್ರೆ ಇವಳು ಬಾಯ್ ಬಿಡೊಲ್ಲಾ... " ಎನ್ನುತ್ತಾ ಒಂದುಕೈಯ್ಯಲ್ಲಿ ಆ ತರುಣಿಯ ಕೈಯ್ಯನ್ನು ಗಟ್ಟಿಯಾಗಿ ಹಿಡಿದು ಎಳೆದು ಬಸ್ಸಿನೊಳಕ್ಕೆ ಕರೆತಂದೆ..ಕಂಡಕ್ಟರ್ ಕುಡಾ ಸಹಕರಿಸಿದ..ಅಂತೂ ಕೂಗಿಕೊಳ್ಳುತ್ತಿರುವ ಆತರುಣಿಯನ್ನು ಚೆನ್ನಾಗಿ ಬೈದು.. ಸ್ಟೇಷನ್ ವರೆಗೆ ಬಸ್ಸನ್ನು ತೆಗೆದುಕೊಂಡುಹೋಗಲು ಹೇಳಿದೆ. ಡ್ರೈವ್ರ್ ಮುಂದಕ್ಕೆ ಬಸ್ಸನ್ನು ಓಡಿಸ ಹತ್ತಿದ ..ಅಂತೂ ತುಮಕೂರು ಪೋಲೀಸ್ ಸ್ಟೇಶನ್ ಒಳಕ್ಕೆ ಬಸ್ಸು ನುಗ್ಗಿತು....
ಬಸ್ಸಿಂದ ನಾನೇ ಮುಂದಾಗಿ ಇಳಿದು.." ಎಳಕೊಂಡ್ ಬನ್ನೀ ಅವಳನ್ನಾ.." ಎನ್ನುತ್ತಾ ನಾಲ್ಕೇ ಹೆಜ್ಜೆಗೆ ಸ್ಟೇಶನ್ ಒಳಸೇರಿದ್ದೆ ನಾನು... ಕಂಡಕ್ಟರ್ ಅವಳನ್ನೂ ಎಳಕೊಂಡು ಒಳಬಂದ... ಅಲ್ಲೇ ನಿಮ್ತಿದ್ದ ಸೆಂಟ್ರೀ..ಕಣ್ಣೋರೆಸಿಕೊಳ್ಳುತ್ತಾ "ಯಾರೀ..ಅದೂ... " ಎಂದ.. ಅವನಿಗೆ ಹೇಳುತ್ತಿರುವಾಗ್ಲೇ ಅಲ್ಲಿಗೆ ಬಂದ ಇನಸ್ಪೆಕ್ಟರ್..ನನ್ನನ್ನೂ..ನನ್ನ ತೋಳನ್ನೇರಿದ್ದ ಮಗುವನ್ನೂ, ಆ ತರುಣಿಯನ್ನೂ ಒಂದೇ ಸಮನೆ ನೋಡುತ್ತಿದ್ದ.. ಅದುವರೆಗೂ ಯಾವದೇ ಕಾರಣಕ್ಕೂ ಈ ಪೋಲೀಸರ ಸಹವಾಸವನ್ನೇ ಮಾಡದ ನಾನು ಆ ಖಾಖೀ ಬಟ್ತೆಯನ್ನು ನೋಡುತ್ತಲೇ ಒಳಗೊಳಗೇ ಬೆವೆತಿದ್ದೆ...
ಏನ್ರೀ..ಅದೂ... ಗೋಳೂ...ಎನ್ನುತ್ತಾ ಹತ್ತಿರ ಬಂದ ಆ ಇನಸ್ಪೆಕ್ತರನನ್ನು ನೋಡುತ್ತಾ ನಡೆದುದೆಲ್ಲವನ್ನೂ ಬಿಚ್ಚಿಟ್ಟೆ... " ನೋಡೀ ಸಾ... ಈಗ್ ಮಗು ತಂದೇ ಅಲ್ಲವೇನೋ ಅನ್ನೋಥರ ನಡಕೊಂಡು ಹೋಗ್ತಾ ಇದ್ದಾಳೇ..ಮಗೂ ಇಟಗೊಂದು ನಾನೇನ್ ಮಾಡ್ಳೀ.." ಎಂದೆ... ಇನಸ್ಪೆಕ್ಟರ್..ಅವಳತ್ತ ತಿರುಗೀ.. ಲೇ ಬೋಸೂಡಿ.... ಏನ್ ನಿನ್ ಕಥೆ..? ಬೊಗಳಲೇ... ಎಂದು ತನ್ನ ಪೋಲೀಸ್ ಭಾಷೆಯನ್ನು ಬೆಳಗಿದ..ಆಗವಳು.. ರ್ರೀ.. ಹೀಂಗೆಲ್ಲಾ ಮಾತಾಡ್ಬೇಡೀ..ನಾನೇನ್ ಈ ಮಗೂನ್ ಅಮ್ಮಾನೂ ಅಲ್ಲಾ..ನನಗೆ ಗೊತ್ತೂ ಇಲ್ಲಾ..ಫ್ಯಾಕ್ಟರೀ ಬಿಟ್ ಮನೆಗೆ ಬರತಿದ್ದೋಳನ್ನ ಹೀಂಗ್ ಎಳಕ್ಂಡ್ ಬಂದು ಏನ್ ತೊಂದ್ರೆ ಕೊಡ್ತೀರಾ.. ನನಗೆ ಮಗೂ ಆಗೋಕೆ ನಾನಿನ್ನೂ ಮದ್ವೇನೇ ಆಗಿಲ್ಲಾ.. ನಾಚ್ಕೆ ಆಗಲ್ವಾ ನಿಮಗೇ..ನಾನೇ ಒಮ್ದು ಕಂಪ್ಲೇಂಟ್ ಕೊತ್ರೆ ಸರೀ ಆಗುತ್ತೆ... " ಎಂದು ಜೋರಾದಳು... ಆಗ ಇನಸ್ಪೆಕ್ತರ್.. ಮತ್ತೆ ನನ್ನತ್ತ ತಿರುಗಿ... ಇದು ಆಗೋ ಮಾತಲ್ಲಾ ನೀವೇ ಏನೋ ನಾಟಕಾ ಆಡ್ತಾ ಇದ್ದೀರಿ.. ಎಂದು ಮಗುವನ್ನು ಎತ್ತಿಕೊಂಡ....!! ನೋಡೀ.. ಈಮಗೂ ಯಾರದೂ ಅಂತ ಬ್ಯಾಗ್ ಹೇಳಿ.. ಇಲ್ಲಾ ಅಂದ್ರೆ ಇಬ್ರನ್ನೂ ಒದ್ದು ಒಳ್ಗಾಕಿ ಬುದ್ಧೀ ಕಲೀಸ್ ಬೇಕಾಗುತ್ತೆ.. ಎನ್ನುತ್ತಾ ಒಳಗೆ ಹೋದ... ನನಗೋ ಪೀಕಲಾಟ.. ನನಗೆ ಗೊತ್ತಿತ್ತು..ಸತ್ಯ ಎಲ್ಲೀದ್ದರೂ ಗೆಲ್ಲುತ್ತದೆ ಎಂದು... ಸುಮ್ಮನೇ ನಿಂತಿದ್ದೆ... ಅವಳೂ ತನಗೆ ಸಂಬಂಧವೇ ಇಲ್ಲವೇನೋ ಎಂಬಂತೇ ನಿಂತೇ ಇದ್ದಳು... ಎಲಾ ಇವಳಾ..!!..
ಒಳಗಿನಿಂದ ಬಂದ ಇನಸ್ಪೆಕ್ಟರನ ಕೈಯ್ಯಲ್ಲಿ ಲಾಠಿಯೊಂದು ಕಂಡಿತು...!! ಅಯ್ಯೋ... ಇದೇನಪ್ಪಾ ಗ್ರಹಚಾರಾ..!! ಎನ್ನುತ್ತಾ ಸರಿದು ನಿಂತಿದ್ದೆ.. ಹತ್ತಿರ ಬಂದವನೇ ಇನ್ಸ್ಪೆಕ್ಟರ್...ತನ್ನಕೈಯ್ಯಲ್ಲಿದ್ದ ಎರಡು ಬಿಸ್ಕೇಟ್ ಗಳನ್ನು ನನಗೊಮ್ದು ಆ ತರುಣಿಯ ಕೈಗೊಮ್ದು ಇಡುತ್ತಾ... ಮಗು ಯಾರದೂ ಅಂತ ಇಲ್ಲೇ..ಈಗ್ಲೇ ಪತ್ತೆ ಮಾಡ್ತೀನ್ ನೋಡೀ ಎಂದೆನ್ನುತ್ತಾ... ನೋಡಿ ಇಬ್ರೂ..ಬಿಸ್ಕೇಟ್ ತೋರಿಸಿ ಆ ಮಗೂನಾ ಕರೆಯಿರಿ.. ಮಗು ಯಾರ್ ಹತ್ರಕ್ಕೆ ಹೋಗುತ್ತೋ... ನೋಡೋಣ ನಿಜವಾದ್ ಪಾಲಕರು ಯಾರೂ ಅಂತ ಗೊತ್ತಾಗಿಬಿಡುತ್ತೇ ಈಗ್ಲೇ ಎನ್ನುತ್ತಾ ಹಿಂದೆ ಸರಿದ...
ನನಗೋ ಹೇಗಂದರೂ ಮಗು ತಾಯಿಯ ಹತ್ತಿರಕ್ಕೇ ಹೋಗುತ್ತದೆ ಎಂಬ ದೃಢವಾದ ನಂಬಿಕೆ...ಅವಳೂ ಬಿಸ್ಕೇಟು ಹಿಡಿದು ಕೂಗಿಯೇ ಬಿಟ್ಟಳು.... ನಾನೂ ಕರೆದೆ....!!!!!!
ಛೇ... ಆ ಮಗು ನನ್ನತ್ತಲೇ ಬಂದುಬಿಡೋದಾ..?!!! ಮೊದಲೆರಡು ಚಾಕಲೇಟು ಕೊಟ್ಟು ಚಾಕಲೇಟು ಮಾಮ ಎನ್ನಿಸಿಕೊಂಡಿದ್ದೆನಲ್ಲಾ..!!! ನನ್ನ ಕೈಯ್ಯ ಬಿಸ್ಕೇಟ್ ಮಗುವಿನ ಬಾಯಿ ಸೇರಿ ಆಗಿತ್ತು... ಅಲ್ಲೇ ಇದ್ದ ತುಮಕೂರು ಸ್ಟೇಶನ್ ಇನಸ್ಪೆಕ್ಟರ್..ಕೈಯ್ಯಲ್ಲಿನ ಲಾಠಿ ನನ್ನ ಬೆನ್ನಿನ ಮೇಲೆ ಆಟ ಆಡಿತ್ತು... ಲೋಫರ್... ಸುಳ್ ಬೇರೆ ಬೊಗಳ್ತೀಯಾ..." ಃ.ಫ್ಟ್...ಅಯ್ಯೋ... ಸತ್ತೇ,,,, " ಎನ್ನುತ್ತಾ ಕಾಲಿನಿಂದ ಒಮ್ಮೆ ಒದರಿಕೊಂಡೆ...ಪಕ್ಕದಲ್ಲಿ ಮಲಗಿದ್ದ ನನ್ನ ಹೆಂಡತಿ..ಏನಾತ್ರೀ... ಮಧ್ಯರಾತ್ರೇಲಿ.... ಆನಮನೀ ಕೂಗತ್ರೀ.... ಥೋ... ಎಂದಳು.... ಕಣ್ಣೊರೆಸಿಕೊಂಡು ಅವಳನ್ನೇ ನೋಡಿದೆ... ಪಕ್ಕದ ಗೋಡೆಯ ಮೇಲಿನ ಗಡಿಯಾರ... ರಾತ್ರಿ ೩ ಘಂಟೆಯನ್ನು ತೋರುತ್ತಿತ್ತು...ಮುಸುಕೆಳೆದೆ ಮತ್ತೆ..!!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ