......ಯಾವನ ಕಾವ್ಯದಲ್ಲಿ ಕವಿಯ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಭಾಷೆಯೇ ಸೋತು ಶರಣಾಗುತ್ತದೋ ಅಲ್ಲಿ ಆ ಕಾವ್ಯದಲ್ಲಿ ಓದುಗನಿಗೆ ಬೇಕಾದ ಎಲ್ಲಾ ರಸಗಳ ಕಾವ್ಯಾನುಭೂತಿಯಾಗುತ್ತದೆ ಎಂಬುದಕ್ಕೆ ನಾನು ಇತ್ತೀಚೆಗೆ ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋದಾಗ ಹೇಳಿದ್ದೆ...!! ಇದನ್ನು ಮನಗಂಡ ಸಭಾಸದರು ನನ್ನ ಪಕ್ಕದಲ್ಲಿ ಕುಳಿತು ಕೇಳಿದ ಮಹನೀಯರು.. ನಾನೂ ಒಬ್ಬ ಮಹಾನ್ ..... ಎಂದು ಭ್ರಮಿಸಿದ್ದರೆಂದು ಕಾಣುತ್ತದೆ...
ಮೊನ್ನೆ ತಾನೇ ಮತ್ತೆ ಯಾವುದೋ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಬೇಕು ಎಂದು ಕರೆಯೋಲೆ ಬಂದಾಗ ಹೂಂ ಎಂದು ಹೇಳಿದೆ... ವಸ್ತುತಃ ನನಗೂ ಇಂದಿನ ಕಾವ್ಯಗಳು ಎಂಬ ದಪ್ಪ ದಪ್ಪ ಬರಹಗಳಿಗೂ ಸಂಬಂಧವೇ ಇಲ್ಲ... ಕಾವ್ಯಂ ಯಶಸೇ ಅರ್ಥ ಕೃತೇ ವ್ಯವಹಾರವಿದೇ ಮುಂತಾದ ಪ್ರಯೋಜನಗಳಲ್ಲಿ ಇಂದು ಕಾವ್ಯಕಳಲ್ಲಿ ಕಾಣುವ ಅರ್ಥ ಕೃತೇ ವ್ಯವಹಾರವಿದೇ ಎಂಬುದು ಬಿಟ್ಟರೆ ಇನ್ನೇನೂ ಸಿಕ್ಕಿಲ್ಲ.. ಆದರೂ ಕರೆದಾಗ ಒಲ್ಲೆನೆನ್ನದೇ ಹೋಗಿ ಕುಳಿತು ಕಾರ್ಯಕ್ರಮಕ್ಕೊಂದು ಸಂಖ್ಯಾಬಲವನ್ನು ತಂದುಕೊಟ್ಟು ಅವರಿಗೊಂದು ಸಮಾಧಾನವೆನ್ನಿಸಿ ಬರುತ್ತೇನೆ. ಇದು ಆಗಾಗ ಅಲ್ಲಲ್ಲಿ ನನ್ನನ್ನು ಇಂತಹ ಕಾರ್ಯಕ್ರಮಗಳಲ್ಲಿ ನೋಡಿ ಗಮನಿಸಿದ ಜನರಿಗೆ ನಾನೊಬ್ಬ ಕಾವ್ಯಪ್ರೇಮಿ ಎಂಬ ಗೌರವ ಮೂಡಿಸಿರಬಹುದೇನೋ. ಅದಕ್ಕೇ ಕರೆಯೋಲೆಯಂತೂ ಇದ್ದೇ ಇರುತ್ತದೆ.. ಪುರುಸೊತ್ತು ಹೆಚ್ಚಿರುವ ಉದ್ಯೋಗದಲ್ಲಿರುವ ಕಾರಣ ಕರೆದಲ್ಲೆಲ್ಲಾ ಹೋಗುವ ಚಟ ಬೇರೆ ಇದೆ.
.......ಹೀಗೆ ಅಂದು ಕೂಡಾ ನನ್ನ ಮಾಮೂಲು ದಿರಿಸಿನಲ್ಲಿ ಕಾರ್ಯಕ್ರಮ ನಡೆಯುವಲ್ಲಿಗೆ ಹೋದೆ. ಸಂಘಟಕ ಕಂ ಅಂದಿನ ಬಿಡುಗಡೆಗೊಳ್ಳುವ ಪುಸ್ತಕದ ಕರ್ತೃ ಬಾಗಿಲಲ್ಲೇ ನಿಂತು ಎಲ್ಲರಂತೇ ನನ್ನನ್ನೂ ಸ್ವಾಗತಿಸಿದ.. ಹೋಗಿ ನಾನು ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಅಲ್ಲಿ ಕುಳಿತುಕೊಳ್ಳುವ ನಿರ್ದಿಷ್ಟ ಆಸನದಲ್ಲಿ ಆಸೀನನಾಗಬೇಕೆನ್ನುವಷ್ಟರಲ್ಲಿ ಸ್ವಾಗತಕೋರಿದ ಆ ಮಹಾನುಭಾವ ನನ್ನತ್ತಲೇ ಬರುತ್ತಿರುವುದ ಕಂಡು ನೇರ ನಿಂತೆ... ಬಂದವನು ನನ್ನನ್ನೇ ನೋಡಿ " ಸಾ...." ಎಂದ. ಏನು ಎಂಬಂತೆ ಕಣ್ಣು ಹೊರಳಿಸಿದೆ.. ಇಂದು ನೀವೇ ಈ ಪುಸ್ತಕಬಿಡುಗಡೆಯ ಕುರಿತು ನಾಕು ಮಾತಾಡಬೇಕು ಎಂದು ಪುಸ್ತಕವನ್ನು ಕೈಗಿತ್ತಾಗ ಬರ...!! ದ ಅರಿವಾಯಿತು....? ಅತ್ತಿತ್ತ ಕತ್ತು ಹೊರಳಿಸಿ ಬೇರೆಯವರನ್ನು ಗುರುತಿಸೋಣವೆಂದು ನೋಡೀದರೆ ಅಲ್ಲಿ ಮೈಕಿನವನು ಪರದೆಯವನು ಕಂಡರಷ್ಟೇ.. ಇನ್ನೇನು.. ಒಪ್ಪಿಕೊಳ್ಳಲೇಬೇಕಾಯ್ತು..!! ಆಯ್ತಪ್ಪ ಎಂದು ಚೂರು ಬಿಗುಮಾನವನ್ನು ತೋರಿಯೇ ಹೇಳಿದೆ.. ಏಕೆಂದರೆ ಸುಲಾಭಕ್ಕೆ ಒಪ್ಪಿದರೆ ಬಂಡವಾಲ ಇಲ್ಲಾ ಎಂದು ಭಾವಿಸಬಹುದಲ್ಲವೇ..ಅದಕ್ಕೆ...ಅವನು ಪುಕ್ಕಟೆಯಾಗಿ ಕೈಗಿತ್ತ ಪುಸ್ತಕವನ್ನೊಮ್ಮೆ ಕಣ್ಣಾಡಿಸೋಣವೆಂದು ಮೊದಲ ಪುಟಕ್ಕೆ ಕಣ್ಣಿಕ್ಕಿದೆ.. ಹೆಸರೇನೋ ಅಂದವಾಗಿತ್ತು.." ಬದುಕು ಬಂಗಾರ" (ಸಣ್ಣ ಕಥೆಗಳು)!!! ......
........ ಪುಸ್ತಕದ ಕುರಿತು ನಾಲ್ಕು ಮಾತಾಡಬೇಕು ಎಂದನಲ್ಲಾ..!! ನನಗೊಂದಿಷ್ಟು ಸಾಮಗ್ರಿ ಬೇಕಲ್ಲಾ ಎಂದು ಪುಟ ತಿರುವಿ ನೋಡಿದೆ... ಅಂತಹ ಓದಿಸಿಕೊಳ್ಲಬಲ್ಲ ಯಾವ ಬರಹವೂ ಕಣ್ಣಿಗೆ ಬೀಳಲಿಲ್ಲ.. ಆದರೂ ಯಾವುದಾದರೊಂದು ಬೇಕಲ್ಲಾ ಮಾತಿಗೆ ನಿಲ್ಲೋದಿಕ್ಕೆ ಎಂದು ಒಂದು ಕಥೆಯನ್ನು ಸುರುವಿಟ್ಟುಕೊಂಡೆ... ಕವಿ ಒಂದು ಹುಡುಗಿಯನ್ನು ಪ್ರೀತಿಸುತ್ತಾನೆ, ಅವಳನ್ನೇ ಮದುವೆಯಾಗುತ್ತಾನೆ, ಅವನ ಸಂಸಾರದಲ್ಲಿನ ಏಳು-ಬೀಳುಗಳು, ಮಕ್ಕಳು, ಮಾತು ಕೇಳದ ಮಗನಾಗುತ್ತಾನೆ,, ಹೀಗೇ ಸಾಗುವ ಕಥೆಯಲ್ಲಿ ಸ್ವಾರಸ್ಯವೇನೂ ಇಲ್ಲದಿದ್ದರೂ ಏನೋ ಇದೆ ಎಂದು ಸಭೆಯಲ್ಲಿ ಪರಿಚಯಿಸಬೇಕಿತ್ತು..!! ಅದರೊಂದಿಗೆ ಚೂರು ವಿಮರ್ಶೆಯನ್ನು ಮಾಡಿ ಎಂದು ಬೇರೆ ಅಪ್ಪಣೆ ಕೊಡಿಸಿದ್ದನಲ್ಲಾ...ಅಂತೂ ಒಂದು ಪರಿಚ್ಛೇದವು ನನ್ನ ಕಣ್ಣಿಗೆ ಬಿದ್ದಿತೆನ್ನಿ... ತುಂಬ ಪ್ರೀತಿಯಿಂದ ಸತಿ-ಪತಿಗಳಿಬ್ಬರೂ ತಮ್ಮದೇ ಸ್ವಂತ ಸಂಸಾರದ ಗೂಡಿನಲ್ಲಿ ಬದುಕು ಸವೆಸುತ್ತಿರುವಾಗ ಗರ್ಭಿಣಿಯಾಗಿ ಹೆರಿಗೆಗೆ ತವರಿಗೆ ಹೋಗಿ ಹೆರಿಗೆಯಾಗುತ್ತದೆ. ಇಲ್ಲಿ ಹೆಂಡತಿಯನ್ನು ನೆನೆದು ವಿರಹಿಯಾದ ಗಂಡ ಮುಂಜಾವಿನ ನಸುಕಿನಲ್ಲೆದ್ದು ಮಾವನ ಮನೆಗೆ ಹೊರಡುತ್ತಾನೆ.. ( ಮೈಸೂರು ಮಲ್ಲಿಗೆಯ.. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು... ಕವನದ ಭಟ್ಟಿ ಬೇರೇನೂ ಕಾಣಲಿಲ್ಲ) ಹೋಗಿ ತಲುಪಿ ಹೆಂಡತಿಯ ಮುಖವನ್ನು ನೋಡಲು ಹೋದಾಗ ಹೆಂಡತಿ ತನ್ನ ಮಗುವನ್ನೆತ್ತಿ ಗಂಡನ ಕೈಗಿತ್ತು ನಿನ್ನ ಮಗ ಎಂದು ತೋರುತ್ತಾಳೆ... ಅದು ಒಂದು ಸಂಭ್ರಮ....... ಹೀಗೇ ಮುಂದೆ ಸಾಗುತ್ತದೆ...
....
ಈ ಕಥೆಯನ್ನು ಓದುತ್ತಾ ಹೋದಂತೆ ನನ್ನ ಮನದಲ್ಲಿ ಈ "ಕೃತ್ತಿಕಾ ವಿರಹ" ಹಾಗೂ "ಪ್ರಸವ ವೈರಾಗ್ಯ" ಎಂಬ ಎರಡು ಪದಗಳು ನೆನಪಾದವು... ಅಲ್ಲದೇ... ಹೆಂಡತಿ ತಾನು ಹಡೆದ ಮಗುವನ್ನು ತನ್ನ ಗಂಡನಿಗೆ ತೋರುವ ಪರಿ ಯಾಕೋ ನೀರಸವೆನಿಸಿದ್ದು ಕಂಡು ಅದಕ್ಕೊಂದು ಕಾವ್ಯಾತ್ಮಕವಾದ ಪದಗುಚ್ಛಗಳನ್ನು ಮನದಲ್ಲಿಯೇ ಹೆಣೆದೆ... ಅದೆಂದರೆ... ಹೆಂಡತಿಯ ಮುಖವನ್ನು ನೋಡುವ ಆಸೆಯಿಂದ ಬಂದ ಗಂಡನಿಗೆ ಪ್ರಸೂತಿಗೃಹದ ಬಾಗಿಲಿನಿಂದಲೇ ಹಾಲು ಹಸುಳೆಯ ಮುಖವನ್ನು ತೋರಿಸಿ ಇದೋ ... "ಸ್ವಾತಿಯ ಮಳೆಹನಿಯನ್ನು ಕಪ್ಪೆಯಚಿಪ್ಪಿನಲ್ಲಿ ಜೋಪಾನವಾಗಿರಿಸಿ ಮುತ್ತಾಗಿ ತೋರುತ್ತಿರುವೆ ನಿನಗೆ" "ಮುತ್ತಿಗೆ ಮುತ್ತು ಪೋಣಿಸಿ ಮಾಲೆಯಾಗಬೇಕಾದ್ದು ನನ್ನ ನಿನ್ನ ಕೊರಳಿಗೆ" ಎಂದು ಸೊಗಸಾಗಿ ಕಾವ್ಯಾನುಭೂತಿಯನ್ನುಣಿಸಬಹುದಿತ್ತು ಆದರೆ ಇಲ್ಲಿ ಕವಿ ಭಾಷೆಯನ್ನು ಸೋಲಿಸಲಾಗದೇ ಕವಿಯೇ ಸೋತಿದ್ದಾನೆ.. ಈಗ ಇದು ಕಥೆಯಾಗಬಹುದೇ ಹೊರತು..ಕಾವ್ಯವೆನ್ನಿಸದು ಎಂದು ಒಂದು ಚೌಕಟ್ಟನ್ನು ಹೆಣೆದುಕೊಂಡು ವೇದಿಕೆಯೇರಿದೆ...
...... ಕಿಕ್ಕಿರಿದ ಸಾಹಿತ್ಯಾಸಕ್ತರು..? ( ಪುಣ್ಯ... ಒಂದು ಹತ್ತಿಪ್ಪತ್ತಾದರೂ ಹಾಜರಿಯಿತ್ತು... ಹಾಜರಿಯಲ್ಲಿ ಬಹುತೇಕರು ಆಸಕ್ತರೇ ಇದ್ದರು ಎನ್ನಿ) ಅಂತೂ ಪುಸ್ತಕದ ಕುರಿತು ನಾಕು ಮಾತು ಪ್ರಾರಂಬಿಸಿದ ನಾನು ಮೇಲೆ ಹೇಳಿದುದನ್ನೇ ಮತ್ತೆ ಹೇಳಿದೆ ಅಷ್ಟೇ..... ಬಾಗಿಲಲ್ಲಿ ನಿಂತಿದ್ದ ಓರ್ವ ಬಹುಷಃ ಕವಯಿತ್ರಿಯಿರಬಹುದೇನೋ... ಜೋರಾಗಿ ಚಪ್ಪಾಳೆ ತಟ್ಟಿದಳು... ಹಾಂ...ಸಾರ್ಥಕವಾಯಿತು ಎಂದು ಮಾತು ನಿಲ್ಲಿಸಿ ಜೈ ಹಿಂದ್ ಜೈ ಕರ್ನಾಟಕ ಹೇಳಿದೆ.ಕೆಳಗೆ ಬಂದು ಕುಳಿತೆ.... ಪಕ್ಕದ ಮಹಾನುಭಾವರೊಬ್ಬರು......ಬಹಳ ಸೊಗಸಾಗಿ ಮಾತಾಡತೀರಿ ಸಾ.... ಆದ್ರೆ ಅರ್ಥ ಆಗೋದಕ್ಕೆ ಸಮಯ ಬೇಕಾಗುತ್ತೆ.. ಅಷ್ಟೊತ್ತಿಗೆ ನೀವು ಬೇರೆ ವಿಚಾರ ಹೇಳೋಕೆ ಸುರುಮಾಡಿರ್ತೀರಿ... ಹಾಗಾಗಿ ನಾವು ನಕ್ಕು ಚಪ್ಪಾಳೆ ಹೊಡೆಯೋದು ಯಾವಾಗಾ ಅಂತ ಗೊತ್ತಾಗೋದಿಲ್ಲಾ..ಅಂದು ಬಿಡೋದೇ.. ಛೇ.. ಅಷ್ಟೊತ್ತಿಗೆ ಬಾಗಿಲಲ್ಲಿ ನಿಂತು ಚಪ್ಪಾಳೆ ತಟ್ಟಿದ ಗರತಿ ಹತ್ತಿರಬಂದು.... ಹಹ್ಹಾಹ್ಹಾ.. ಎಂದು ನಗತಾನೇ ಇದ್ವಿ ಸಾರ್... ನೀವು ಹೇಳೋದೆಲ್ಲಾ ನಿಜವಾಗಿ ಅನುಭವಿಸಿ ಹೇಳಿದಾಂಗಿತ್ತು ಸಾರ್... ನೀವು ಯಾವತ್ತಾದ್ರೂ ಹೆರಿಗೆಗೆ ತವರಿಗೆ ಹೋಗಿದ್ರಾ ಸಾರ್... ಅದೇಂಗೆ ಗೊತ್ತಾಯ್ತು ಸಾರ್.. ನಿಮಗೆ ಹೆಂಗಸರ ಮನಸ್ಥಿತಿ..ಈಗ ನಗುವ ಸರದಿ ನನ್ನದಾಗಿತ್ತು...!!!ಹೇಗಪ್ಪಾ ನಿಭಾಯಿಸೋದು... ಎಂದು ... ಅಂತೂ ನಗುವನ್ನು ತಡೆಯಲು ತಂದ ಆರಿದ ಚಹ ಮತ್ತು ಬಿಸ್ಕೇಟಿನ ತುಂಡು ಗಂಟಲಿಗೆ ಸ್ವಲ್ಪ ಕಸುವುಕೊಟ್ಟಿತ್ತು..

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ