ನಿಜವಾಗಿ ಹೇಳ್ತೇನೆ.. ಶಿವರಾತ್ರಿಯ ಜಾಗರಣೆ ಅಂದರೆ ಕೇಳಿದ್ದೆನೇ ಹೊರತೂ ಇದೂವರೆಗೆ ಮಾಡಿರಲಿಲ್ಲ..!! ನಿನ್ನೆ ಅದೇಕೋ ನೋಡೋಣ ನಾವೂ ಜಾಗರಣೆ ಮಾಡೋಣ ಎನ್ನಿಸಿ ಎಲೆಪೆಟ್ಟಿಗೆಗೆ ಮೊದಲೇ ಭರ್ತಿಗೊಳಿಸಿ ಹೆಂಡತಿಯೊಡನೆ ಹೇಳಿಕೊಂಡೆ ಮನದಿಂಗಿತವನ್ನು. ಅವಳೂ ಸಮ್ಮತಿಸಿದಳೂ ಅನ್ನಿ.
ಜಾಗರಣೆ ಎಂದರೆ ಎಚ್ಚರಾಗಿರುವುದು...! ಅಲ್ಲವೇ..? ಪಾಪಪ್ರಜ್ಞೆಯಕೊರತೆಯೋ ನನ್ನ ಅಹಂಕಾರದ ಪರಮಾವಧಿಯೋ ಯಾವುದೇ ದೇವರ ಧ್ಯಾನ-ಭಜನೆ-ಪೂಜಾದಿಗಳನ್ನು ಮಾಡಿ ಹೊತ್ತು ಕಳೆಯಬೇಕೆಂದೆನಿಸಲಿಲ್ಲ. ಟಿ.ವಿ. ನೊಡೋಣವೆಂದರೆ ಇದುವರೆಗೂ ಹೆಂಡತಿಗೆ ಟಿ.ವಿ.ಕೇಳಿ ಅಭ್ಯಾಸವೇ ಹೊರತೂ ನೋಡಿ ಅಭ್ಯಾಸವಿಲ್ಲ..ಅವಳು ಇಲ್ಲಿ ಟಿ.ವಿ. ಹಾಕಿ ಒಳಗೆ ಅಡಿಗೆ ಮನೆಯಲ್ಲಿ ಕಾಯಕದಲ್ಲಿ ತೊಡಗಿರುವವಳು.ಮಕ್ಕಳಿಬ್ಬರೂ ತಮಗೆ ಜಾಗರಣೆ ನಿಷಿದ್ಧ ಎಂದು ಮೊದಲೇ ಸಾರಿದ್ದರು...!!ನಾವಿಬ್ಬರೇ ಜಾಗರಣೆ ಮಾಡಬೇಕು..!! ಮೊದಲೆಲ್ಲಾ ಅನ್ನಿಸುತ್ತಿತ್ತು ಎಲ್ಲ ಗಂಡ ಹೆಂಡತಿಯರಿಗನ್ನಿಸಿದಂತೆ...!! ನಾವಿಬ್ಬರೇ ಇರಬೇಕು.. ನಾವೇ ಇರಬೇಕು.. ತುಂಬಾಹೊತ್ತು ನಾವಿಬ್ಬರೇ ಕಳೆಯಬೇಕು .....ಎಷ್ಟೊಂದು ಹೇಳಿಕೊಳ್ಳಬೇಕು..ಇನ್ನೂ ಏನೇನೋ...ಆದರೆ ಬದುಕಿನ ಬಹುದಿನಗಳನ್ನು ಹಾಗೆ ಕಳೆಯಬೇಕೆಂದೆನಿಸಲಿಲ್ಲ..ಕಳೆಯಲು ಪುರುಸೊತ್ತೂ ಇರಲಿಲ್ಲ.. ಆದರೆ ಇಂದು ನಮಗಾಗಿಯೇ ಈ ಶಿವರಾತ್ರಿ-ಜಾಗರಣೆ ಬಂತೇನೋ ಎನ್ನಿಸಿ ಇಬ್ಬರೂ ಜಾಗರಣೆಗೆ ಕುಳಿತೆವು. ಅದೂ ಇದೂ ಮಾತಾಡುತ್ತಾ ಹೊತ್ತು ಸರಿಯುತ್ತಿತ್ತು...
..... ಓಹ್ ಬೆಳಗಾಗಿ ಹೋಯಿತು... ಇನ್ನೂ ಏನನ್ನೋ ಹೇಳಬೇಕಿತ್ತು... ಆಗಲೇ ಇಲ್ಲ.. ಬೆಳಗಾಗಿ ಹೋಯಿತು ಪುಟ್ಟಕ್ಕಾ... ಇನ್ನು ನಾವಿಬ್ಬರೇ ಮಾತಾಡೋದಕ್ಕೆ ಆಗದೇನೋ..ಹಾಲಿನವ ಬಂದೇಬಿಟ್ತ ಮಕ್ಕಳು ಮೈ ಮುರಿದು ಎದ್ದೇಳುವ ಹೊತ್ತು..ನಾವೂ ಎದ್ದು.. ಕಾಯಕದೆಡೆಗೆ ಸರಿದು ಹೋದೆವು.
....ಆಹಾ...ಎಂಥಾ ಜಾಗರಣೆ..ಎಂಥಾ ಜಾಗರಣೆ... ಬದುಕಿನ ಬಹುದಿನಗಳ ಸಿಂಹಾವಲೋಕನ...!!! ಅವಳು ಹೇಳಿದಳು... ನಾನು ಬಡವಿ...ನೀನೂ ಬಡವ ಒಲವೇ ನಮ್ಮ ಬದುಕು...ಛೇ....ನಾನೆಂದೆ... ಅಲ್ಲ ಪುಟ್ಟಕ್ಕಾ... ಬಡವರಲ್ಲ... ಎಂದೆಂದೂ ನನ್ನ ನಿನ್ನ ಬದುಕಿನಲ್ಲಿ ಬಡತನ ಬಂದಿಲ್ಲ ನೋಡೂ... ಎಂದೂ ಅತ್ತಿಲ್ಲ..ನೀನು... ಎಂದೂ ಎದೆಗುಂದಿಲ್ಲ ನಾನೂ.. . ಬದುಕಿಗೆ ಬಡತನ ಬಂದಿಲ್ಲ. ನಿನ್ನೆಯ ಚಿಂತೆಯಿಲ್ಲ..!! ನಾಳಿನ ಯೋಚನೆಯಿಲ್ಲ... ಏಕೆಂದರೆ.... ಶಿವ ಮೆಚ್ಚುವಂತೆ ಬದುಕಿದ್ದೀವಲ್ಲವೇ..? ಮುಂದೂ ಹಾಗೇ...
ಜಾಗರಣೆಯ ಫಲ......೧
...
........
ಮದುವೆಗೆ ಮುನ್ನ ಮಡದಿಯಾಗುವವಳನ್ನು ಕೇಳಬೇಕಾಗಿತ್ತು ಎಂದುಕೊಂಡಿದ್ದೆ... ಆದರೆ ಅದೇಕೋ ಕೇಳಲು ಆಗಿರಲಿಲ್ಲ...
೧) ನಿಜವಾಗಿ ನನ್ನನ್ನು ಮದುವೆ ಆಗೋದಕ್ಕೆ ಇಷ್ಟ ಇದೆಯಾ..?
೨) ನಿನ್ನ ಮನದಲ್ಲಿ ಮದುವೆ ಆಗುವವ ಶ್ರೀಮಂತನಾಗಿರಬೇಕು ಎಂದಿದೆಯಾ?
೩) ನನ್ನನ್ನು ಮದುವೆ ಆದರೆ ಸುಖವಾಗಿರುವೆನೆಂಬ ಸಮಾಧಾನ ಇದೆಯಾ?
.....ಕೇಳಲು ಪುರುಸೊತ್ತೇ ಇರಲಿಲ್ಲ...
ಜಾಗರಣೆಯಲ್ಲಿ...ಕೇಳಿದೆ...ಅದೇ ಪ್ರಶ್ನೆ... ಆದರೆ ಭೂತಕಾಲದ ರೂಪ...!!
ಅವಳೆಂದಳು..
೧) ಇದುವರೆಗಿನ ನನ್ನೊಂದಿಗಿನ ಬದುಕು ತೃಪ್ತಿ ಕೊಟ್ಟಿದೆಯಾ..?
೨) ನೀನು ಶ್ರೀಮಂತನಲ್ಲಾ ಎಂಬ ಕೊರಗು ಇನ್ನೂ ಇದೆಯಾ..?
೩) ಸುಖ ಎಂದರೆ ಏನು ಎಂದು ತಿಳಿಯುವುದು ಯಾವಾಗ? ದುಃಖದ ಮಡುವಲ್ಲಿದ್ದಾಗ ಅಲ್ಲವಾ?...
....ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾಗಿತ್ತು.....
ಇಬ್ಬರೂ ಕಣ್ಣುಜ್ಜಿಕೊಂಡೆವು.... ಬೆಳಗಾಯಿತು..ಜಾಗರಣೆ ಮುಗಿಸೋಣ..
ಜಾಗರನೆಯ ಫಲ...೨
...
ಅಂದು ನಿನ್ನ ಕೈಹಿಡಿಯುವಾಗ, ತಂದೆಯಿಲ್ಲದ ನನಗೆ ತಂದೆಯ ಸ್ಥಾನದಲ್ಲಿ ನಿಂತು ನಿನ್ನನ್ನು ಮನೆತುಂಬಿಸಿಕೊಳ್ಳುವಾಗ ನನ್ನ ಚಿಕ್ಕಪ್ಪ ಹೇಳಿದ್ದ ನನಗೆ.ಬರೇ ಹೇಳಿದ್ದಲ್ಲ...ಆದೇಶಿಸಿದ್ದ... ಅವನ ಮಾತೇ ಹಾಗೆ... ಎಲ್ಲವೂ ತಕ್ಕದ್ದು ಎಂಬ ಕ್ರಿಯಾಪದದೊಂದಿಗೇ ಅಂತ್ಯವಾಗುತ್ತಿತ್ತು...ಅವನ ಬದುಕೂ ಹಾಗೇ ಇತ್ತು..!!.. ನೋಡು.. ನಿನಗವಲು ಹೆಂಡತಿಯಾಗಿ ಇಂದಿನಿಂದ ನಿನ್ನ ಮನೆಯ ಹೊಸಿಲನ್ನು ತುಳಿದು ಬರುತ್ತಿದ್ದಾಳೆ.. ಕಳೆದ ಮೂವತ್ತು ವರ್ಷಗಳ ಅವಲ ಬದುಕಿನಲ್ಲಿ ನೀನಿರಲಿಲ್ಲ.. ಅಲ್ಲಿ ಅವಳ ಅಪ್ಪ-ಅಮ್ಮ.. ಅಕ್ಕಂದಿರು.. ಅದೇ ಅವಳ ಜಗತ್ತು ಆಗಿದ್ದಿತ್ತು.. ಆದರೆ ಇನ್ನು ಮುಂದೆ ಅವಳ ಜಗತ್ತೆಂದರೆ ನೀನೇ ನೀನೊಬ್ಬನೇ ಇಲ್ಲಿ ಅವಳ ಬದುಕು ಕೇವಲ ಮೂವತ್ತು ವರ್ಷಗಳದ್ದಲ್ಲ. !! ಇಲ್ಲಿ ಅವಳಪ್ಪ ಅವಳಮ್ಮ ಅಕ್ಕಂದಿರು ಇರುವುದಿಲ್ಲ... ಆದರೆ ಎಂದೂ ಕೂಡಾ ಅವಳು ಆ ಕೊರಗನ್ನನುಭವಿಸದಂತೆ ನೋಡ್ಕೊಳ್ಲಬೇಕಾದ್ದು ನಿನ್ನ ಕರ್ತವ್ಯ..!! ಇಂದಿನಿಂದ ನೀನು ಅಂದುಕೊಂಡಂತೆ ಕೇವಲ ಅವಳಿಗೆ ಗಂಡನೊಬ್ಬನೇ ಅಲ್ಲ..!! ಅವಳು ನೆನೆದಾಗ ನೀನೇ ಅಪ್ಪನಾಗಬೇಕು... ಬಯಸಿದಾಗ ಅಮ್ಮನಾಗಬೇಕು.. ಅಣ್ಣತಮ್ಮಂದಿರನ್ನು ಕಾಣದ ಅವಳಿಗೆ ಆ ಸೋದರವಾತ್ದ್ಸಲ್ಯದ ಸವಿಯನ್ನೂ ಉಣಬಡಿಸಬೇಕು..!! ನೋಡು ಕೊನೇಯದಾಗಿ ಹೇಳ್ತೇನೆ...ಏಕೆಂದರೆ ಇನ್ನು ನೀನು ನಮ್ಮ ಮಾತನ್ನು ಕೇಳುವುದೂ ಇಲ್ಲ ಕೇಳಬಾರದು ಕೂಡಾ..!!
ಇದೊ.. ನಿನ್ನವಳ ಕಣ್ಣಲ್ಲಿ ಒಂದೇ ಒಂದು ದಿನ ಕೊರಗಿನ ಕಣ್ಣೀರು ತರಿಸಬೇಡ ಹಾಗೇನಾದರೂ ಬಂದರೆ... ಅದು ನಿನ್ನ ವಂಶವನ್ನೇ ತೊಳೆದುಕೊಂಡು ಹೋದಿತು...ಹಿರಿಯರ ಮಹಾನ್ ತಪಸ್ಸಿನ ಫಲವಾಗಿ ದೊರೆತ ಈ ವಂಶದ ಯಶದ ಹೊಲವನ್ನು ಅವಳ ಕಣ್ಣೀರ ಕೋಡಿಯಿಂದ ಕೊಚ್ಚಿಹೋಗುವಂತೆ ಮಾಡಬೇಡ..ಸರ್ವನಾಶವಾಗಿಬಿಡುತ್ತದೆ.. .!!
ಎಂದು ಅಂದು ಹೇಳಿದ್ದನಲ್ಲವಾ ಸಣ್ಣ ಮಾವ...! ನಾನೂ ಕೇಳಿಸಿಕೊಂಡಿದ್ದೆ... ಎಂದಾಗ ಜಾಗರಣೆ ಮುಗಿದಿತ್ತು ಬೆಳಕು ಕಂಡಿತ್ತು..!!

ಇದೊ.. ನಿನ್ನವಳ ಕಣ್ಣಲ್ಲಿ ಒಂದೇ ಒಂದು ದಿನ ಕೊರಗಿನ ಕಣ್ಣೀರು ತರಿಸಬೇಡ ಹಾಗೇನಾದರೂ ಬಂದರೆ... ಅದು ನಿನ್ನ ವಂಶವನ್ನೇ ತೊಳೆದುಕೊಂಡು ಹೋದಿತು...ಹಿರಿಯರ ಮಹಾನ್ ತಪಸ್ಸಿನ ಫಲವಾಗಿ ದೊರೆತ ಈ ವಂಶದ ಯಶದ ಹೊಲವನ್ನು ಅವಳ ಕಣ್ಣೀರ ಕೋಡಿಯಿಂದ ಕೊಚ್ಚಿಹೋಗುವಂತೆ ಮಾಡಬೇಡ..ಸರ್ವನಾಶವಾಗಿಬಿಡುತ್ತದೆ..
ಎಂದು ಅಂದು ಹೇಳಿದ್ದನಲ್ಲವಾ ಸಣ್ಣ ಮಾವ...! ನಾನೂ ಕೇಳಿಸಿಕೊಂಡಿದ್ದೆ... ಎಂದಾಗ ಜಾಗರಣೆ ಮುಗಿದಿತ್ತು ಬೆಳಕು ಕಂಡಿತ್ತು..!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ