ಶನಿವಾರ, ಫೆಬ್ರವರಿ 23, 2013
ಶುಕ್ರವಾರ, ಫೆಬ್ರವರಿ 22, 2013
ಪ್ರೆಸ್ತ
ಆಚಾರಿ ಮನೆ "ಪ್ರೆಸ್ತ"
...... ನನ್ನ ಚಿಕ್ಕಪ್ಪ ಇಡೀ ಊರಿಗೇ ಪುರೋಹಿತ.... ನಮ್ಮ ಕುಟುಂಬವೇ ಆ ವೃತ್ತಿ ಮಾಡಿಕೊಂಡು ಬಂದದ್ದು... ಊರಿಗೇ ಪ್ಪುರೋಹಿತ ಅಂದ್ರೆ ಸಾಮಾನ್ಯವಾಗಿ ಆ ಊರಲ್ಲಿರುವ ಕೇವಲ ಬ್ರಾಹ್ಮಣರ ಮನೆಗಷ್ಟೇ ಅಲ್ಲ.. ಎಲ್ಲಾ ಜಾತಿ ವರ್ಗದವರಿಗೂ ಕೂಡಾ...ಹಾಗಾಗಿ... ಯಾರದೇ ಮನೆಯಲ್ಲಿ ಏನೇ ಶುಭ ಶೋಭನಾದಿ ಕಾರ್ಯಗಳಾಗಲೀ, ಸಾವು ಶ್ರಾದ್ಧಾದಿ ಕಾರ್ಯಗಳಾಗಲೀ ಚಿಕ್ಕಪ್ಪ ಅಲ್ಲಿಗೆ ಹೋಗಿ ಕಾರ್ಯ ಮುಗಿಸಿಕೊಡುವುದು ಲಾಗಾಯತ್ತಿನಿಂದ ನಡೆದುಬಂದದ್ದು....ಅದೇ ರೀತಿ ನಮ್ಮ ಊರಿನಲ್ಲಿ ಒಂದಿಷ್ಟು ಆಚಾರಿಗಳ ಕುಟುಂಬ ಇದೆ.. ಆಚಾರಿ ಎಂದರೆ.. ಈ ಮರದ, ಕಬ್ಬಿಣದ ಕೆಲಸ ಮಾಡಿ ಬದುಕಿಕೊಂಡಿರುವ ಜನ. ಸ್ವಲ್ಪ ಪುಕ್ಕಲು ಸ್ವಭಾವದವರು... ಮತ್ತು ಅತಿಯಾದ ಬಾಂಧವ್ಯವನ್ನು ನೆಚ್ಚಿಕೊಳ್ಳುವವರು. ಬಡ ವರ್ಗ ಬೇರೆ... ಇವರು ಮೂಲತಃ ವಿಶ್ವಕರ್ಮ ಬ್ರಾಹ್ಮಣ ವರ್ಗಕ್ಕೆ ಸೇರಿದವರು..ಆದರೂ ಮಾಂಸಾಹಾರ ಸೇವನೆ ಮಾಡುವುದರಿಂದ ನಮ್ಮ ಬ್ರಾಹ್ಮಣರೊಂದಿಗೆ ಕೊಡುಕೊಳ್ಳುವ ಸಂಬಂಧ ಇಲ್ಲ.ಆದರೂ... ಎಲ್ಲಾ ಧಾರ್ಮಿಕ ಕಾರ್ಯಗಳೂ ಬ್ರಾಹ್ಮಣರ ಮನೆಯಲ್ಲಿ ನಡೆದಂತೇ ಇವರ ಮನೆಗಳಲ್ಲೂ ನಡೆಯಬೇಕು...
....ಹೀಗಿರುವ ಆಚಾರಿ ಕುಟುಂಬದಲ್ಲಿ ಆಗುವ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ನನ್ನ ಚಿಕ್ಕಪ್ಪನೇ ಪುರೋಹಿತನಾಗಿ ನಿಂತು ಮಾಡಿಸಿಕೊಡುತ್ತಿದ್ದ... ಬ್ರಾಹ್ಮಣ ಭೋಜನಕ್ಕಾಗಿ ಅವರ ಜಾತಿಕರೇ ಕೆಲವರು ಕೂರುತ್ತಿದ್ದರು.. ಚಿಕ್ಕಪ್ಪ ಕೇವಲ ಮಂತ್ರಾದಿಗಳನ್ನು ಮಾತ್ರ ಹೇಳಿ ಪೂಜೆ ಪುನಸ್ಕಾದಿಗಳನ್ನು ಮಾಡಿ ಬರುತ್ತಿದ್ದ.
ನಮ್ಮ ಮನೆಗೆ ಅತಿ ಸಮೀಪದಲ್ಲೇ ಇರುವ ಒಂದು ಈ ಆಚಾರಿ ಕುಟುಂಬ... ಮೂರ್ನಾಕು ಜನ ಅಣ್ಣ ತಮ್ಮಂದಿರು...ಎಲ್ಲರೂ ಅವರ ಕುಲ ಕಸುಬಿನಿಂದಲೇ ಹೊಟ್ಟೆ ತುಂಬಿಸಿಕೊಂಡು ಬದುಕು ಸಾಗಿಸುತ್ತಿದ್ದವರು...ಹೇಳಿಕೊಳ್ಳುವಂಥಾ ಆದಾಯದ ಕೆಲಸ ಇಲ್ಲ.ಆದರೂ.... ಬಳಗ ದೊಡ್ಡದೇ... ಏನಾದರೂ ಕಾರ್ಯಗಳಾದರೆ...ಬಹಳ ಮಂದಿ ನೆಂಟರುಗಳು ,ಬಂದುಹೋಗುವುದು ಸಾಮಾನ್ಯವಾಗಿತ್ತು. ಹೀಗಿರುವಾಗ ಆ ಮನೆಯಲ್ಲಿ ಒಂದು ಆ ನಾಲ್ಕುಜನ ಮಕ್ಕಳ ಹೆತ್ತಪ್ಪನಿಗೊಂದು ತಿಲೋದಕ ಬಿಡಬೇಕಿತ್ತು ಎಲ್ಲಾ ಸೇರಿ...
ನಾಲ್ಕು ದಿನ ಮುಂಚಿತವಾಗಿ ನನ್ನ ಚಿಕ್ಕಪ್ಪನಿಗೆ ಹೇಳಿಕೆ ಬಂದಿತ್ತು.... ಅಲ್ಲಾ..ವಡೆಯಾ.... ನಾಡ್ದೀಕೆ... ಅಪ್ಪ ವಂದ್ ಬತ್ತಾ... ನೀವು ಎಷ್ಟ್ ಮುಂಚೆ ಸಾಧ್ಯಾನೋ ಅಷ್ಟ್ ಮುಂಚೆ ಬನ್ನಿ... ನಮ್ಮೋರ್ ಮುಂಚೆ ಬತ್ತೆ ಹೇಳಿದ್ರು... ( ನಮ್ಮೋರು ಅಂದ್ರೆ ಅವರ ಮನೆಯ ತಿಥಿ ಊಟ ಉಣ್ಣುವ ಬ್ರಾಹ್ಮಣರ ಲೆಕ್ಕದ ಜನ ಅವರ ಜಾತಿಕರೇ)ಬ್ಯಾಗ್ ಬಂದಬುಡೀ.... ನಾಮತ್ತೆ ಕ್ವಾಸನ ( ಕ್ವಾಸ=ಮಗ) ಕಳಿಸ್ತೆ ಆದ್ ಕೂಡ್ಳೇಯಾ..ಬಿಲ್ರೋ...ಅದಕ್ಕೆ ಚಿಕ್ಕಯ್ಯ ವಾರ ದಿನಾ ನೋಡಿ ಬೇರೆ ಎಲ್ಲೆಲ್ಲಿ ಏನೇನು ಕೇರ್ಯಗಳಿವೆ ಎಂಬುದನ್ನೆಲ್ಲಾ ನೋಡಿ...ಅಂತೂ ಕೊನೆಗೆ...ಆಯ್ತಾ... ಬತ್ನಾ... ಹೇಳಿ ಅವನನ್ನು ಕಳಿಸಿಕೊಡುವುದು ವಾಡಿಕೆ.ಅಂತೆಯೇ ಹೇಳಿದ್ದ ಅಂದೂ ಕೂಡಾ...
..ಅಂತೂ... ಆದಿನ ಬಂತು...... ಚಿಕ್ಕಪ್ಪ ಬೇರೆ ಎರಡು ಮೂರು ಕಡೆ ಸತ್ಯನಾರಾಯಣ ಪೂಜೆ, ಪಾರಾಯಣ,,, ಇತ್ಯಾದಿಗಳನ್ನು ನೆರವೇರಿಸಲು ಬೆಳ್ಳಂಬೆಳಿಗ್ಗೆಯೇ ವೊಲೆಗೆ ಉರಿಹಾಕಿ ಮಿಂದು ದೇವರಿಗೆ ಪೂಜೆ ಸಲ್ಲಿಸಿ ಮಡಿಗಂಟಿನೊಂದಿಗೆ ಹೋದೋನು ಗಂಟೆ ಎರಡಾದರೂ ಇನ್ನೂ ಬರಲಿಲ್ಲ...!!! ಅಯ್ಯೋ ಇಂದು ಆ ಆಚಾರಿ ಮನೆಗೆ ಬೇರೆ ಹೋಗಬೇಕಲ್ಲಾ....ಇವ ಇನ್ನೂ ಬಂದೇ ಇಲ್ಲಾ... ಎಂದು ನಾವು ಹೇಳಿಕೊಳ್ಳುತ್ತಿರುವಾಗಲೇ ಗದ್ದೆಯ ತುದಿಯಲ್ಲಿ ಆ ಆಚಾರಿಯ ಮಗ ಬರುತ್ತಿರುವುದು ಕಾಣಿಸಿತು... ಹಾಂ... ಅವ ಬಂದೇ ಬಿಟ್ಟ ಈ ಚಿಕ್ಕಯ್ಯ ಎಲ್ಲಿ ಕುಳಿತಿದ್ದಾನೋ ಎಂದುಕೊಳ್ಳುತ್ತಿರುವಾಗಲೇ ಚಿಕ್ಕಯ್ಯನ ಚರ್ಮದ ಚಪ್ಪಲಿ ಶಬ್ದ ಕೇಳಿತ್ತು ತೋಟದ ಕಡೆಯಿಂದ...
ಅಂತೂ ಇಬ್ಬರೂ ಮನೆಗೆ ಬಂದು ನಿಂತರು... ಚಿಕ್ಕಯ್ಯ ಮಡಿಗಂಟನ್ನು ನನ್ನ ಕೈಗಿತ್ತು..ಒಳ ಕೊಂಡೋಗಿ ಕೊಡು ಎದವನೇ... ತಮಾ....!! ಹಾಂ...ಬಂದ್ಯಾ.... ನಾನು ಒಂದು ಚೂರು ಮಿಂದ್ ಬತ್ನಾ...ಘೋರ್ ಶೆಕೆ... ಬೆವರು... ಅಂದವನು ಬಚ್ಚಲಿಗೆ ಹೋದವ... ಸುಮಾರು ಹೊತ್ತು ಕಳೆದರೂ ಬರಲೇ ಇಲ್ಲ
ಅಲ್ಲಿಗೆ ಸುಮಾರು ಸಂಜೆ ೩-೦೦ ಗಂಟೆ ಆಗಿತ್ತು.... ಚಿಕ್ಕಮ್ಮ ಒಳಹೋಗಿ ಚಹದೊಂದಿಗೆ ಹಾಜರಿದ್ದಳು ಜಗುಲಿಯಲ್ಲಿ... ಮಿಂದು ಬಂದವನೇ ಚಿಕ್ಕಮ್ಮನ ಕೈಯ್ಯಿಂದ ಚಹದ ಲೋಟ ತೆಗೆದುಕೊಂಡು ಚಹ ಹೀರುತ್ತಾ ಕುಳಿತ... !!! ಚಹ ಕುಡಿದು ಒಂದು ಕವಳ ಹಾಕಿ ...ತಮಾ.... ಹೋಗ್ವನಾ... ಎಲ್ಲಾ ಬಂದಿರೂರಪ್ಪಾ.... ಅತ್ತೆ ಮಾವಂದಿಕ್ಕಳು ಬದ್ ಮುಟ್ಟರ್ಯಾ...? ಎಂದು ವಿಚಾರಿಸುತ್ತಾ ಕಾಲಿಗೆ ಹಾವುಗೆ ಮೆಟ್ಟಿ ನಿಂತ .... ಆ ಹುಡುಗ ...ಈ ಬರೂರೂ( ಬರಬಹುದು) ಗಾಡೀ ಇನ್ನೂ ಹೋಗಲಿಲ್ಲಾ ಮೂರೂವರೆದೂ... ಎಂದ... ಅಂತೂ ಚಿಕ್ಕಪ್ಪ ಅವನ ಹಿಂದೆ ಹೆಜ್ಜೆ ಹಾಕಿ ಹೋದ...ಅಲ್ಲೇ ಆಡುತ್ತಿರುವ ನನಗೆ ಚಿಕ್ಕಪ್ಪನೊಟ್ಟಿಗೆ ನಾನೂ ಆ ಆಚಾರಿಯ ಮನೆಗೆ ಹೋಗಬೇಕು ನೋಡಬೇಕು ಎನ್ನಿಸಿತು... ನಾನೂ ಹೊರಟೆ...ಹಿಂಬಾಲಿಸಿ... ಚಿಕ್ಕಪ್ಪ ಒಂದೆರಡು ಬಾರಿ ಹಿಂತಿರುಗಿ ನನ್ನನ್ನು ನೋಡಿ ಮುಂದೆ ಸಾಗಿದ...ಅಲ್ಲೇ ಇರುವ ಇನ್ನೊಬ್ಬ ಚಿಕ್ಕಪ್ಪನ ಮನೆಯ ಒಳಗೆ ಹೋಗಿ ಕುಳಿತ..
ಅಂತೂ ಮನೆಯ ಹತ್ತಿರದಲ್ಲೇ ಇತ್ತಲ್ಲಾ... ರಸ್ತೆ, ಬಸ್ ಸ್ಟ್ಯಾಂಡು..ಅಂಗಡಿಗಳು ಮೂರ್ನಾಲ್ಕು... ಅದನ್ನು ದಾಟಿ ಹೋದರೆ ಸಿಗುವುದೇ ಆಚಾರಿಯ ಮನೆ.....! ರಸ್ತೆಗೆ ಬಂದು ನಿಂತರೆ....!!! ತಿಥಿ ಮಾಡಬೇಕಾದ ಆಚಾರಿ ಯಜಮಾನ ಅಲ್ಲೇ ನಿಂತಿದ್ದ.!!!!. ಅವನ ಮಗ ಕೇಳಿದ... ಅಪ್ಪಾ..ಬಸ್ ಹೋಯ್ತಾ... ಅತ್ತಿ ಬಂತಾ..?... ಅಪ್ಪ ಗೋಣು ಆಡಿಸುತ್ತಿದ್ದಾಗಲೇ ಬಸ್ಸಿನ ಶಬ್ದ ಕೇಳಿಸಿತು... ಅಂತೂ ಬಸ್ಸು ಬಂತು... ಅತ್ತೆ ಮಾವ... ಬಸ್ಸಿಳಿದು ಈ ಯಜಮಾನ ಆಚಾರಿಯ ಹತ್ತಿರಕ್ಕೆ ಬಂದರು.. ನಾನು ಅಲ್ಲಿಯೇ ಗೆಳೆಯರೊಂದಿಗೆ ಮಾತಾಡಿಕೊಂಡು ನಿತ್ತಿದ್ದೆ... ಆ ಆಚಾರಿಯ ಮಗಅವನ ಹೆಸರು ಗೋಪಾಲ.... ಅಪ್ಪನ ಹೆಸರು... ಶಂಕರ... ಆದರೆ ನಾವೆಲ್ಲಾ ಕರೆಯುವುದು ಅಪ್ಪನಿಗೆ ಶಂಕ್ರಾಚಾರಿ.. ಮಗ ಗ್ವಾಪ್ಲ....!! ಈ ಗ್ವಾಪ್ಲ ಅತ್ತೆ ಕರಕೊಂಡು ಮನೆಯಕಡೆ ಹೆಜ್ಜೆ ಹಾಕಿದ.. ಮತ್ತೂ ಅಪ್ಪನಿಗೆ ಹೇಳಿದ.... ಅಪ್ಪಾ... ವಡೀದೀರು.. ಈ ಮನೇಲಿ ಕುಂತವ್ರೆ... ಬರೂಕೆ ಹೊತ್ ಮಾಡಬೇಡಾ... ಬ್ಯಾಗ್ ಬಾ... ಮಾವನ್ ಕರಕಂಡೂ..... ಎಂದ ... ನಾನುಅಲ್ಲೇ ಇದ್ದೆ..ಈ ಶಂಕಾಚಾರಿ... ಬಂದ ಆಭಾವನ ಕರಕ್ಕೊಂಡು ಅಂಗಡಿ ಒಳಕ್ಕೆ ಹೋದೋನು ಸುಮಾರು ಹೊತ್ತಿನ ಮೇಲೆ ಹೊರಗೆ ಬಂದ......!!! ಪಂಚೆಯಲ್ಲಿ... ಒಂದಿಷ್ಟು ಸಾಮಾನುಗಳೂ ಇದ್ದವು..ಅವನ್ನು ಗಂಟು ಕಟ್ಟಿ ಹೆಗಲ ಹಿಂಬದಿಗೆ ಜೋತು ಬಿಟ್ಟಿದ್ದ... ಹಾಗೇ ಹೇಳುತ್ತಿದ್ದ... ಬಾವಾ... ಚಾ ಕುಡ್ದ್ ಬಂದ್ಯಾ ಅಥ್ವಾ ಇಲ್ಲೇ ಕುಡೀವನಾ..? ಯೆ... ಬ್ಯಾಡ್ವೇ.. ನಾ ಬರುವಾಗ ಕುಮಟೀಲೇ ಕುಡ್ಕಾ ಬಂದೆ... ಅದು ಸತ್ತದ್ದು ಹಶ್ವಾಯ್ತದೇ... ಅಂತು... ಅದ್ಕೇ ಅಲ್ಲಿ ಬೋಂಡು.. ಮಿಸ್ಸೋಳ್ ಬಾಜಿ ತಿಂದ್ ಚಾಕುಡದೇ ಗಾಡಿ ಹತ್ತದ್ದು.. ಈಗೆಂತಾ ಬ್ಯಾಡ್ವೇ... ಎಂದು ಹೇಳುತ್ತಾ... ಹಿಂತಿರುಗಿ ತಿರುಗಿ ನೋಡುತ್ತಿದ್ದ... ಈ ಬಾವ ...... ಆಗ್ಲಾ ಬಾವಾ.... ವಂದ್ ಗುಟಕು ಕುಡೀವನಾ... ನಂಗೆ ಬೆಳಗಾಗೆ .. ಓ... ಆ ಕೇಶವ ಹೆಗಡೇರ್ ಮನೀಗೆ ಕೆಲ್ಸಕೆ ಹೋಗೀನಲಾ... ಅಲ್ಲೂ ಸರೀ ಆಸರಗೇ ಆಗ್ಲಿಲ್ಲಾ... ಅವರ ಮನೀಲಿ ಇಂದು ಸತ್ನಾರಣ ಕತಿ ಅಂತೆ...ಮುಸ್ರೀ ತಿಂಬೂಕಾಗಾ ಹೇಳಿ ಅವಲಕ್ಕಿ ಮಾಡೀರು... ಥೋ ನಂಗ್ ಮೆಚ್ಚೂದಿಲ್ವಾ ಬಾವಾ... ...ನಾ ...ಆ ಅವಲಕ್ಕೀ ಮಾತ್ರ ಎಲ್ಲೂ ಹಾಯಕಂಬೂದಿಲ್ಲಾ ನೋಡೂ... ಆದ್ರೂ ಆ ವಡತಿ ಮೊಗ್ ಮೊಗದೀ ಹಾಕತ್ರು... ಬಿಡೂಕಾಯ್ತದ್ಯಾ.... ಆದ್ರೂ ಈಗ ವನ್ನಮೂನಿ ಹಶ್ವಾಯ್ತದೆ... ಭಟ್ರ್ ಬರೂ ಹೊತ್ತಾಯ್ತೆನಾ ಆದ್ರೂ ಗಣಪತಿ ಅಂಗಡೀ ಚಾ ವಂದ ಹನೀ ಕುಡದ್ರೇ ಸಮಾದಾನಾ ಬಿಲಾ.. ಎನ್ನುತ್ತಾ ಬಾವನನ್ನೂ ಎಳಕೊಂಡು ಚಹದಂಗಡಿಗೆ ಹೋದ ಶಂಕ್ರ...!!
ಅಂತೂ ಆ ಗಣಪತಿ ಮಡಿವಾಳನ ಅಂಗಡಿಯಲ್ಲಿ ಚಹ ಕುಡದು.. ಮನೆಯಕಡೆ ಹೆಜ್ಜೆ ಹಾಕಿದ್ರು..ಭಾವ-ಭಾವ...!!! ಅಲ್ಲಿ... ಮನೆಯ ಯಜಮಾನತಿ... ಈ ಶಂಕ್ರನ ಹೆಂಡತಿ.... ಗೌರಿ.. ಗಂಡನ ದಾರಿಯನ್ನೇ ಕಾಯುತ್ತಿದ್ದವಳು ಅವನನ್ನು ನೋಡಿದಾಕ್ಶಣ.. ಮಂತ್ರಾಕ್ಷತೆಯ ಮಳೆಯನ್ನೇ ಸುರಿಸ ಹತ್ತಿದಳು.. ಅಲ್ವೇ.... ನೀ ಹೀಂಗೇ ಹೇಳಿ ನಂಗ್ ಇಂದ್ ಗುತ್ತಾಯ್ತು ನೋಡು... ಅಲ್ಲಾ... ಪ್ರಸ್ತ್ ಕೇ ಹೇಳಿ ಮನೀಗೆ ನೆಂಟ್ರ ಬಂದ್ ಕುಂತವ್ರೇ.. ನೀ ಇನ್ನೂ ಆ ಸುಟ್ ಮಡವಾಳನ್ ಅಂಗಡಿಲೇ ಅಮಿತಶಿವಾಹರ ಮಾಡಕಂಡು ಕುಂತಿದ್ಯಾಲಾ.. ಯಾರಗೆ ಹೇಳೂದೂ..?... ಎಂದು ಹಲವರೆಯುತ್ತಾ.. ಅವನ ಬೆನ್ನ ಮೇಲೆ ಇದ್ದ ಪೊಟ್ಟಣವನ್ನು ತೆಗೆದುಕೊಂಡು ಒಳಹೋದಳು.. ಅತ್ಗೀ ನಾ ವಂಚಂಬ ಮಿಂದಕಂಡೇ ವಳಗ್ ಬತ್ನೇ.. ಎಂದು ಹೇಳುತ್ತಾ..ಬಚ್ಚಲ ಕಡೆಗೆ ನಡೆದ ಈ ಶಂಕ್ರ.. ಬಾಗಿಲಲ್ಲಿ ನಿಂತಿದ್ದ ಈ ಭಾವನನ್ನು ಮಾತಾಡಿಸುವವರು ಯಾರೂ ಇರಲಿಲ್ಲ....!!! ಅಲ್ಲಿ ಒಳಗೆ ಕೆರಸಿ ಮೊರ ಹಿಡಿಕುಂಟೆ.. ಸದ್ದು ಕೇಳಿಬರುತ್ತಿತ್ತು.. ಇದೀಗ ತಾನೇ ಅಂಗಡಿಯಿಂದ ಬಂದ ಸಾಮಾನುಗಳನ್ನು ಕೇರಿ ಒಂದು ಊಟಕ್ಕೆ ಅಣಿ ಮಾಡಬೇಕಿತ್ತಲ್ಲಾ.. ಅಂತೂ ಮಿಂದು ಬಂದ ಶಂಕ್ರ....ಅರೇ.. ಭಾವಾ.. ವಳಗ್ ಬಾರಾ...ಅಲ್ಲೇ ಅಂಗಳದಲ್ಲೇ ನಿಂತೀದೆ... ಎಂದು ಭಾವನಿಗೆ ಸ್ವಾಗತ ಸಮ್ಮಾನ ಮಾಡುತ್ತಾ... ಗೌರೀ..ಈ ಭಾವಂಗೆ ಚಾ ಬೇಕಾಗಿತ್ತಾ ಏನೆನಾ... ನಾ ಕೇಳ್ಳೂ ಇಲ್ಲಾ.. ನೀನಾರೂ ಮಾತಾಡ್ಸೀದ್ಯಾ... ಹೇಂಗೆ..ಎಂದು ಹೆಂದತಿಯ ಕಡೆಗೆ ಭವನ ಮಾತಾಡಿಸುವ ಹೊಣೆ ಹಾಕಿ ಒಳಕ್ಕೆ ಸರಿದು ಹೋದ....
ಮಿಂದು ಬಂದ ಶಂಕ್ರ ವಲೆಗೆ ಉರಿ ಹಚ್ಚಿ,,, ಅಕ್ಕೀ ಬೇಯಿಸಲು ಚರಿಗೆ ಇಟ್ಟ.. ಅನ್ನ ಆಯಿತು.. ಉಳಿದಂತೆ ಸಾಮ್ಬಾರು..ಪಾಯಸ. ಇಡ್ಳಿ.. ಹಾಗೇ ಒಂದು ಸಿಹಿ ತಯಾರಾದ್ದು.. ಹೊತ್ತು ಮುಳುಗುವ ಹೊತ್ತಿಗೆ..!!! ಅಷ್ಟಾಗುವಾಗ ಚಿಕ್ಕಪ್ಪ.. ಥೋ ಶಂಕ್ರಾ... ಇಂದು ನೀ ಹೊತ್ ಕಂತೂರೊಳಗೆ ಪಿಂಡಕ್ಕೆ ನೀರ್ ಬಿಡೂ ನಮನೀ ಕಾಂಬುದಿಲ್ವೋ... ಎನ್ನುತ್ತಾ ಅಲ್ಲಿಗೆ ಬಂದ......
ಊಹೂಂ.. ಆಗೋಯತ್ರಾ... ಇನೇನ್ ನಮ್ ಜನಾನೂ ಆಗ್ಲೇ ಬಂದವ್ರೇ.. ನೀವ್ ಸುರುಮಾಡಕಳೀ.. ಅಷ್ಟೊತ್ತೀಗೆ ನಮ್ಮನೇದು ತಂದಿಡ್ತದೇ ಯೆಲ್ಲಾವಾ.. ಎನ್ನುತ್ತಾ.. ವಡಾ... ನಾನೂ ಮಡಿ ಹಚ್ಚಲಾ..ಎಂದ.. ಅಂತೂ ಶ್ರಾದ್ಧಕ್ಕೆ ಮಡಿ ಹಚ್ಚಿ ಬಂದ ಶಂಕ್ರ.. ಚಿಕ್ಕಪ್ಪ ಶ್ರಾದ್ಧದ ಕರ್ಮಾಚರಣೆಗಳನ್ನು ಪ್ರಾರಂಭಿಸಿ...ಅಥ ದ್ವಿರಾಚಮ್ಯ... ದೇಶ ಕಾಲೌ ಸಂಕೀರ್ತ್ಯ... ಎನ್ನುತ್ತಾ ಒಂದು ಪಕ್ಕದಲ್ಲಿ ಕುಳಿತು.. ಅವರ ಜನಕ್ಕೆ ಹೇಳಿಕೊಡುತ್ತಾ ಈ ಶಂಕ್ರನಿಂದ ಎಲ್ಲ ಶ್ರಾದ್ಧ ಕರ್ಮಗಳನ್ನೂ ಮಾಡಿಸುತ್ತಿದ್ದ.... ಅಲ್ಲಿಗೆ ೫-೦೦ ಆಗುತ್ತಿತ್ತು...ಶ್ರಾದ್ಧದ ಎಲ್ಲಾ ಆಚರಣೆಗಳೂ ಸಾಂಗವಾಗಿ ಮುಗಿದು.. ಪಿಂಡ ಪ್ರದಾನವಾಗಿ ಎಲ್ಲರೂ ಊಟ ಮಾಡಿ ಎಂದು ಹೇಳಿ ಚಿಕ್ಕಪ್ಪ ಮನೆಯ ಕಡೆ ಹೆಜ್ಜೆ ಹಾಕಿದ -ಶಂಕ್ರ ಕೊಟ್ಟ ದಕ್ಷಿಣೆ ತಾಂಬೂಲದೊಂದಿಗೆ...
ಅಂದು ಬಂದ ನೆಂಟರು ಉಂಡು ತೇಗಿ, ಅವರ ಮನೆಯ ಕವಳ ಬಟ್ಟಲ ಖಾಲಿ ಮಾಡಿ.. ಹೊರಡಲನುವಾಗುವಾಗ... ಥೋ...ಈಗೆಂತಾ ಹೋಗೂದಾ... ಭಾವಾ..ವಳಕಳಾ.. ಬೆಳಗಾಗೆ ಎದ್ದು ಹಾಂಗೇ ಹೋಗಲಾಗೂದೂ.... ಅದೂ ಈಗ್ ಮಾತ್ರ ಉಂಬೂಕೆ ಕುಂತದೇ... ಉಂಡ್ ಉಸರ್ ತೆಗೀದೇ ಓಡೂಕಾಯ್ತದಾ.. ಎಂದು ಸಮ್ಮಾನಕ್ಕೆ ಸುರುವಿಟ್ಟುಕೊಂಡ..ಶಂಕ್ರ... ಅದಕ್ಕೆ ಭಾವ ...ಊಹೂಮ್... ನಾ ಹೋಗ್ವವನೇಯಾ... ಇಶ್ಶೀ.. ನಂಗ್ ವಳೂಕೆಲ್ಲಾ ಆಗೂದಿಲ್ವಾ ಬಾವಾ.. ಅದ್ ಬೇಕಾರೆ ನಾಳೀಕೇ ಬರಲೀ... ಅತ್ಗೀ...ನಾ ಹೋಯ್ತ್ನೇ.... ಬಾ..ನೀನು..ಹಮ್.. ಎನ್ನುತ್ತಾ ಎರಡೆರಡು ಬಾರಿ ಹೋಗುವ ಮುನ್ಸೂಚನೆಯನ್ನು ಹೆಂಡತಿಗೆ ರವಾನಿಸುತ್ತಿದ್ದ ಆ ಭಾವ..!!......ಇಶ್ಶೀ..ಈಗೆಂತಾ ಹೋಗೂದಾ...? ಹೇಂಗೂ ಬಂದಾಗದೇ... ನಾಳೆ ವಳಕಂಡು..ಸಂಜೆ ಕಡಾಗೆ ಹೋದ್ರಾಯ್ತೂ.. ಇಲ್ಬಾ ಇಲ್ಲೀ... ಮತ್ತೆ ಹೋಗೂ ಸುದ್ದೀ ಹೇಳೂಕಿಲ್ಲಾ.....ಆದರೂ..ಈ ಭಾವ... ಅದೇನೋ ಹಠ ಹಿಡಿದವರಂತೇ ನಾನು.. ಇಂದು ಹೋಗ್ಲೇ ಬೇಕೂ.. ಆಗೂದೇ ಇಲ್ಲಾ... ಎನ್ನುತ್ತಾ ರಸ್ತೆಗಿಳಿಯುತ್ತಿದ್ದ.. ಅದನ್ನು ಗಮನಿಸಿದ ಶಂಕ್ರ ತಡೀ ನಾನೂ ಬಂದೆ.. ಅಲ್ಲಿ ಅಂಗಡೀ ತಕಾ ಬತ್ತೆ.. ಇನ್ನೂ ಬಸ್ ಬರೂಕೆ ಲೇಟದ್ಯಾ.. ಗಡಿಬಿಡಿ ಮಾಡಬೇಡ..ಎನ್ನುತ್ತಾ ಒಂದು ಲುಂಗಿ ಸುತ್ತಿ ಹೊರಗೆ ಬಂದ.. ಅಂತೂ ಮನೆಗೆ ಹೋಗಲೇಬೇಕೆನ್ನುವ ಆ ಭಾವನನ್ನೂ ಕರಕೊಂಡು ಬಸ್ ನಿಲ್ದಾಣಕ್ಕೆ ಬರುತ್ತಿದ್ದ... ಅಷ್ಟರಲ್ಲಿ ಬುರ್ರ್ರ್ರ್ರ್.. ಸದ್ದು ಮಾಡುತ್ತಾ ಬಸ್ಸು ಅಲ್ಲಿಂದ ಹೊರಟಿದ್ದ ಸದ್ದು ಇಬ್ಬರಿಗೂ ಕೇಳಿಸಿತು... ಓಹ್.. ಅತೋ ಬಾವಾ..ನೆಡೀತಲಾ ಬಸ್ಸೂ..ಇನ್ ಮನೀಗೋಗೂದು ಹ್ಯಾಂಗೇ... ಹೌದಲಾ ಆ ಸುಟ್ ಮಕದ್ ಅಬಸ್ಸೀಗೆ ಇಂದೇ ಬ್ಯಾಗ ಬರಬೇಕಾ.. ಸಾಯಲ್ಲೋ... ಬೆಂಕಿ ಸುಟ್ ಹೋಗೂಕೆ... ಆದರೂ ಭಾವನೊಟ್ಟಿಗೆ ಅಂಗಡಿ ಸಮೀಪಕ್ಕೆ ಬಂದ ಶಂಕ್ರ... ಬಾವಾ,,,, ಹ್ಯಾಂಗಂದ್ರೂ ನೀ ನಾಳೇಗ್ ಹೋಗೂದೇಯಾ.. ಇನ್ನು ಬೆಳಗ್ ವರೆಗೂ ಯಾವ್ ಗಾಡೀನೂ ಬರೂದಿಲ್ಲಾ.. ವಂದ್ ಕೆಲಸಾ ಮಾಡ್ವಾ... ಹ್ಯಾಂಗಂದ್ರೂ ಬಂದಾಗದೇ.. ಚಾ ಕುಡಕಂಡೀ.. ಹೋಗ್ವಾ.. ಎನ್ನುತ್ತಾ ಭಾವನನ್ನೂ ಕರಕೊಂಡು ಅಂಗಡಿ ವಳಕ್ಕೆ ಹೋದ.. ಅಲ್ಲಿಗೆ ಸಂಜೆ ದೀಪ ಹೊತ್ತಿಕೊಂಡಿತ್ತು....ಮತ್ತೆ ಶಂಕ್ರ ಭಾವನೊಟ್ಟಿಗೆ ಮನೆಯ ಕಡೆಗೇ ಹೆಜ್ಜೆ ಹಾಕಿದ್ದ... ಅಂತೂ ಪ್ರೆಸ್ತ ಮುಗಿದಿತ್ತು...
ಬುಧವಾರ, ಫೆಬ್ರವರಿ 20, 2013
BARAT BAND
ಇಂದು ಯಾರೋ ಹೇಳ್ತಿದ್ರು... ಮಂತ್ರಿಗಳು... ಈ ಬಂದ್ ಮಾಡಿದ್ರಿಂದ ಒಂದು ದಿನಕ್ಕೆ ೨೩ ಸಾವಿರ ಕೋಟಿ ನಷ್ಟ ಆಯ್ತಂತೆ...!!! ಅಂದ್ರೆ..... ಪ್ರತೀದಿನ ೨೩ ಸಾವಿರ ಕೋಟಿ ಲಾಭ ಆಗ್ತಿತ್ತು ಅಂತಾಯಿತಲ್ಲವೇ ಅಷ್ಟಾದ್ರೂ ಅದೆಲ್ಲಾ ಎಲ್ಲೀಗ್ ಹೋಗ್ತಿತ್ತೋ...ಆದೇವರೇ ಬಲ್ಲ...ಈ ಕಾರ್ಮಿಕರಿಗಂತೂ ಸಿಗಲೇ ಇಲ್ಲಾ ಬಿಡೀ.....ಆಯ್ತು...ಇಷ್ಟೆಲ್ಲಾ ನಷ್ಟ ಯಾಕ್ ಮಾಡ್ಕೋತೀರೀ.... ಇದೆಯಲ್ಲಾ ಅಲ್ಲಿ ಸ್ವಿಸ್ ಬ್ಯಾಖಲ್ಲಿ ತಂದುಬಿಡೀ ....... ಅದನ್ನ ತಂದ್ರೆ ...ಇನ್ನು ೩೦ ವರ್ಷ್ ಯಾರೂ ಟ್ಯಾಕ್ಸೇ ಕಟ್ಟೊದ್ ಬ್ಯಾಡವಂತೆ... ಅದೇ ಹಣದಲ್ಲಿ ಇಡೀ ದೇಶಾನ ಸಾಕಬಹುದಂತೆ...!!! ಅದೂ ಇರೋ ಸಾಲಾನೆಲ್ಲಾ ತೀರಿಸಿ.... ಅಬ್ಬಾ...!!! ನಿಜವಾಗಲೂ ಭಾರತ ಬಡವಾಗಿದ್ಯಾ...... ಇಲ್ಲಾರೀ...ಹಂ ....ಮತ್ತೆ ತಡ ಯಾಕೆ......ನಾಳೇನೇ ತಂದ್...ಚೆಲ್ಲಾಡ್ಬುಡೀ.... ಎಲ್ಲಾ ಸಂತೋಷವಾಗಿ ಇರಲೀ..
namma Sikshana
ನಮ್ಮನ್ನು ಆಳುವವರಿಗೆ ನಮ್ಮ ದೇಶದ ಎಲ್ಲಾ ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಬೇಕೂ ಅನ್ನೂ ಮನಸ್ಸು ಇದೆಯಾ..? ಅದಕ್ಕಾಗಿ ಸಂವಿಧಾನ ಏನೋ ಹೇಳಿದೆ.. ಎಲ್ಲರಿಗೂ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರಕಬೇಕು ಅಂತ... ಅದಕ್ಕೇ ಇವರೂ ವರ್ಷಕ್ಕೊಂದು ಹೊಸಾ ಹೊಸಾ ಯೋಜನೆ ಮೂಲಕ ದುಡ್ಡು ಸುರೀತಾನೇ ಇದ್ದಾರೆ.. ಭಾಷಣಗಳಲ್ಲಿ ಹೇಳ್ತಾನೇ ಇದ್ದಾರೆ ಎಲ್ಲೋರಿಗೂ ಶಿಕ್ಷಣಾ ಸಿಗಬೇಕೂ... ಎಲ್ಲರೂ ಸಾಕ್ಷರರಾಗಬೇಕೂ ೧೦ ನೇ ತರಗತಿ ವರೆಗೆ ಎಲ್ಲಾ ಮಕ್ಕಳೂ ಕಲೀಲೇ ಬೇಕೂ..ಅದಕ್ಕಾಗಿ ಏನ್ ಬೇಕೋ ಅದ್ ಮಾಡ್ತೀವೀ... ಬಟ್ಟೆ ಕೊಡ್ತೀವಿ, ಊಟಾ ಕೊಡ್ತೀವಿ,,, ಸೈಕಲ್ ಕೊಡ್ತೀವಿ,,ಪುಸ್ತಕಾ ಕೊಡ್ತೀವಿ,, ಶೈಕ್ಷಣಿಕ ಪ್ರವಾಸ ಮಾಡಿಸ್ತೀವಿ.. ರೂಂ ಕೊಡ್ತೀವಿ.. ಎಲ್ಲಾ ಕೊಡ್ತೀವಿ...ಅಂತಾ... ಆದ್ರೆ ಒಳ್ಳೇ ಶಿಕ್ಷಣಾ ಕೊಡ್ತೀವಿ ಅನ್ನೋ ಒಂದೇ ಒಂದು ಯೋಜನೇನೂ ಇಲ್ವೇ ಇಲ್ಲಾ..!!!!! ಹೆತ್ತರಿಕೆ....!!! ಅಂದ್ರೆ ನಿಮಗೆಲ್ಲಾ ಶಿಕ್ಷಣಾ ಕೊಟ್ಬುಟ್ಟು ೧೦ ಕ್ಲಾಸ್ ಪಾಸಾದ್ರೆ... ನಮಗೆ ವೋಟಾಕಾಕೇ ಬರ್ತೀರಾ...ಊಹೂಂ ಖ್ಂಡಿತಾ ಬರಲ್ಲಾ...ಅದ್ಕೇ....ಸಂವಿಧಾನ ಏನೋ ಹೇಳ್ ಬಿಟ್ಟಿದೆ..ಕೊಡಬೇಕೂ ಅಂತ ಅದರ ವಿರುದ್ಧವಾಗಿ ಮಾತಾಡೋ ಹಾಗಿಲ್ಲಾ... ಅದ್ಕೇ ಅಂತೀವಪ್ಪಾ.. ಆದ್ರೆ ಮೇಸ್ಟ್ರುಗಳಿಗೆ ಪಾಟ್ಃಆ ಮಾಡೋಕೆ ಬಿಟ್ರೆ ತಾನೇ ನೀವ್ ಕ್ಲಿಯೋದೂ... ನೀವ್ ಕಲತರೆ ಮತ್ತೆ ನಮ್ಮನ್ ಮಾತಾಡ್ಸಲ್ಲಾ... ವೋಟೂ ಹಾಕಲ್ಲಾ,,,
ಅದ್ಕೇ ಮಗೂನೂ ಚಿವುಟ್ತೀವಿ ತೊಟ್ಳನ್ನೂ ತೂಗ್ತೀವಿ...!!!!!ಹ್ಯಾಂಗೇ...ಇಲ್ಲೊಬ್ರು ಒಳ್ಳೇ ಮೇಸ್ಟ್ರು ಇದ್ರು... ಆಶಾಲೆಗೆ ೧೯೯೬ ಬಂದ್ರಂತೆ... ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ರೂ ಆವಾಗ್ ಅವಕೈಯ್ಯಲ್ಲಿ ಓದಿದ್ ಮಕ್ಕಳು ಇಂದೂ ಅವರನ್ನು ಕಂಡು ಮಾತಾಡಿಸಿಕೊಂಡು ಹೋಗೋದನ್ನು ನೋಡಿದ್ದೇನೆ... ಆದ್ರೆ... ೨೦೦೭ರಲ್ಲಿ ಅದೇ ಶಾಲೆಯಲ್ಲಿ ಈ ರಾಜಕೀಯ ಅನ್ನೊದು ಪ್ರವೇಶ ಮಾಡ್ತು... ಆ ಮೇಸ್ಟ್ರ ಮೇಲೆ ಸುಮ್ ಸುಮ್ಮನೇ ಅಪವಾದಗಳು..ಸಿಲ್ಲಿ ಅಪವಾದಗಳು ಬರೋಕೆ ಶುರು ಆಯ್ತು... ಯಾರೋ ಒಬ್ಬ ಅಪ್ಪ ತನ್ ಮಗನೀಗೆ ಯೇಕೆ ಹೊಡೀತೀಯಾ ಅಂತ ತಗಾದೆ ತೆಗದು ರಾಮಾ ರಂಪ ಮಾಡಿದ... ಆಯ್ತು ಇನ್ನು ಹಾಗಾಗಲ್ಲಪ್ಪಾ ಅಂತ ಕಳಿಸಿದ್ದಾಯ್ತು.... ಮೇಸ್ಟ್ರು ಅದೇ ಶಾಲೆಯಲ್ಲಿ ಇದ್ದಾರೆ... ( ಗುಟ್ಟಿನಲ್ಲಿ ಅವ್ರು ಹೇಳಿದ್ದು) ಆದ್ರೆ..ಅಂದು ಎರಡು ಮೂರನೆ ಕ್ಲಾಸಿನ ಮಕ್ಕಳು ಮಗ್ಗಿ ಹೇಳಿ ವಾಕ್ಯಬರದು ತುಂಬಾ ಚೆನ್ನಾಗಿ ಕಲಿಕೆ ಮಾಡುತ್ತಿದ್ದವರು..ಇಂದು ಆಆಶಾಲೆಗೆ ಹೋಗಿ ನೋಡಿದರೇ... ಅಳು ಬರುತ್ತೇರೀ... ೫ ವರ್ಷದಲ್ಲಿ ಆ ಊರಿನ ಮಕ್ಕಳ ಅಂದರೆ ಒಂದು ಪೀಳಿಗೆಯ ಸರ್ವನಾಶ ಆಗೋಯ್ತು...೭ನೇ ಕ್ಲಾಸ್ ಹುಡುಗನಿಗೆ ಸ್ವಾತಂತ್ರ್ಯ ಅಂತ ಬರೆಯೋಕೆ ಬರೊಲ್ಲಾ... "ಸ್ವಾತತರ" ಅಂತ ಬರೆದೋನೇ ಕ್ಲಾಸಲ್ಲಿ ಹುಶಾರಿ ಹುಡುಗ...!!!! ಸಾಕಲ್ಲವಾ....ಅದ್ಕೇ ಹೇಳ್ತೀನಿ.... ವೈದ್ಯ..ಒಂದು ರೋಗಿಯ ಜೀವ ತೆಗೀಬಹುದು ಆಲಸ್ಯ-ಅಸಡ್ಡೆ ಮಾಡಿದರೆ..ಆದರೆ..ಅದೇ ಅಸಡ್ಡೆನಾ ಒಬ್ಬ ಶಿಕ್ಷಕ ಮಾಡಿದರೆ..ಹಾಗೆ ಅವನ ಮನಸ್ಸಿಗೆ ನೋವು ಉಂಟು ಮಾಡಿದರೆ... ಇಡೀ ಒಂದು ಸಮುದಾಯದ ಒಂದು ಪೀಳಿಗೆಯ ಜನರ ಜೀವನವನ್ನೇ ಸರ್ವನಾಶ ಮಾಡಿಬಿಡಬಹುದು... ಹಾಗಾಗಿ ಅಪ್ಪ ಅಮ್ಮಂದಿರೇ.... ನಿಮ್ಮ ಮಗುವಿನ ಜೀವನ ಆ ಶಿಕ್ಷಕರ ಕೈಯ್ಯಲ್ಲಿದೆ ಎಂಬುದನ್ನು ಮರೆಯಬೇಡಿ... ನಿಮ್ಮ ಮಗುವಿನ ಮೇಲಿನ ಮಮಕಾರಕ್ಕೆ ಶಿಕ್ಷಕನಿಗೆ ನೋವುಂಟುಮಾಡಿದರೆ.... ನಿಮಗೆ ಅಳಿಸಲಾಗದ ನೋವು ಕಟ್ಟಿಟ್ಟ ಬುತ್ತಿ...!!!!
ಇಂದಿನ ಇಡೀ ಸಮಾಜದ ಮನುಷ್ಯರಲ್ಲಿ ಮಾನವೀಯತೆ, ಸತ್ಯ ,, ನ್ಯಾಯಪರತೆ ,ಸಹಕಾರ,, ಇದು ಸತ್ತೋಗಿರೊದಕ್ಕೆ ಖಂಡಿತವಾಗಿ ಶಿಕ್ಷಕ.ಮತ್ತು ಶಿಕ್ಷಣಾನೇ ಕಾರಣ...!!! ಎಲ್ಲೆಲ್ಲಿ ಶಿಕ್ಷಕನಿಗೆ ಬಿಗಿ ಮಾಡುತ್ತಾ ಬಂದರೋ.. ಎಲ್ಲೆಲ್ಲಿ ಶಿಕ್ಷಕನನ್ನು ಕಡೆಗ್ಣಿಸಿ ಇಡೀ ದೇಶದಲ್ಲಿ ಪ್ರಾಥಮಿಕ ಶಿಕ್ಷಕನನ್ನು ಮೂರನೇ ದರ್ಜೆಯ " ನೌಕರ" ಎಂದು ಪರಿಗಣಿಸಿದರೋ... ಅಲ್ಲಿಗೆ ಮುಗಿದು ಹೋಯ್ತು..... ಅವನಲ್ಲಿನ ಅಂತಃ ಸತ್ವಕ್ಕೇ ಕೊಡಲೀ ಪೆಟ್ಟು ಬಿದ್ದಮೇಲೇ ಅವನು ಎಲ್ಲವನ್ನೂ ನುಂಗಿ ನೀರ್ ಕುಡಿದುಬಿಟ್ಟ... ಶಿಕ್ಷ್ಣಣ ಎಲ್ಲಿಗೆ ಹೋಗಬೇಕಿತ್ತೋ ಅದರ ವಿರುದ್ಧ ದಿಕ್ಕಿಗೆ ತೆಕ್ಕೋಂಡು ಹೋಗಿ ನಿಲ್ಲಿಸಿದ..ಕಾಗದ ಕುದುರೆ ವ್ಯಾಪಾರಕ್ಕೆ ಇಳಿದುಬಿಟ್ಟ...ದಾಖಲೆ ಕೇಳುವೋರು ಕಂಡ್ರೂ...ಅವರೀಗೆ ಬೇಕಾದ್ ದಾಖಲೇ ಇಟ್ಟ... ಫಾಠ ಪ್ರವಚನ ಬಿಟ್ಟೇ ಬಿಟ್ಟ!!!.
"ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ " ಅಂತ ಬಾಯಲ್ಲಿ ಹೇಳೋದೂ ಅದೇ ಗಿಡಾನ ತಿದ್ದಿ ತೀಡಿ ಮಾಡುವ ಶಿಕ್ಷಕ ವರ್ಗಕ್ಕೆ ಕೊಡಬಾರದ ಹಿಮ್ಸೆ ಕೊಟ್ಟು ಗಿಡದ ಹತ್ರಾ ಎಲ್ಲು ಸುಳೀದಾಮ್ಗೇ ಮಾಡಿ ಆ ಗಿಡಗಳು ಬಗ್ಗಲೂ ಇಲ್ಲಾ ನೇರಾ ನಿಲ್ಲೋಕೆ ಗೊತ್ತೂ ಆಗಲ್ಲಾ ಹಾಗ್ ಮಾಡಿಸಿ ಇಡೀ ಸಮಾಜವನ್ನು ತ್ರಿಶಂಕು ಮಾಡಿ ಕೂರಿಸಿ ಇಂದು... ಮೊರಲ್ ಎಜ್ಯುಕೇಶನ್ ಬಗ್ಗೆ,,,, ಧೈರ್ಯ ತುಂಬೋದರ ಬಗ್ಗೆ... ಕಾನೂನು ಅರಿವಳಿಕೆಬಗ್ಗೆ... ಹೀಗೇ ಬೇರೆ ಬೇರೇದರ ಬಗ್ಗೆ ಬೇರೆ ಬೇರೇಯೋರ ಹತ್ರ ಶಿಬಿರಾ ಮಾಡೊ ಮಟ್ಟಕ್ ತಂದು ನಿಲ್ಲಿಸಿಬಿಟ್ರು... ಬೇಕಿತ್ತಾ ಇದೆಲ್ಲಾ...?
ಅಯ್ಯೋ ಖರ್ಮವೇ.... ಇವರೀಗೆ ಮಕ್ಕಳ ಪುಸ್ತಕದಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮನ್ ಪಾಠ ಅಂಬೇಡ್ಕರ್ ಪಾಠ ತೆಗೀ ಬಾರ್ದು..ಆದ್ರೆ ಮಕ್ಕಳೀಗೆ ಕಂಪ್ಯೂಟರ್ ನಾಲೇಜ್ ಬರಬೇಕೂ...ಅದೇಂಗ್ ಸಾಧ್ಯಾರೀ... ಅಂಬೇಡ್ಕರ್ ಪಾಠಕ್ಕೂ ಕಂಪ್ಯೂಟರಿಗೂ... ಪಾಪ ಆ ಪುಣ್ಯಾತ್ಮ ಸಾಯೋದ್ರೊಳಗೆ ಕಂಪ್ಯೂಟರ್ ಅನ್ನೋ ಪದಾನಾದ್ರೂ ಕೇಳಿದ್ನೋ ಇಲ್ವೋ...
..
..
...ಇನ್ನೂ ಒಂದು ತಮಾಷೆ ಅಂದ್ರೆ...ಇ ಇತ್ತೀಚಿನ ಸಿನಿಮಾಗಳಲ್ಲಿ ಕಾಣೋಹಾಂಗೇ... ಒಂದು ಲವ್ವು... ಕಾಲೇಜ್ ಲೈಫ್, ಒಂದು ಹೊಡೆದಾಟ..೬ ಹಾಡು... ಕ್ಲೈಮ್ಯಾಕ್ಸಲ್ಲಿ ಒಂದು ಮದುವೆ.. ಹೀಗೇ ಪಟ್ಟಿ ಮಾಡಿಕೊಂಡು ರೀಲ್ ಬಿಚ್ಚಿದಾಂಗೇ ನಮ್ಮಪಟ್ಯಪುಸ್ತಕ ನೋಡಿ ಒಂದು ಅಂಬೇಡ್ಕರ್ ಪಾಠ, ಮೂರು ಹಾಡು ಅದ್ರಲ್ಲಿ ಒಂದು ದೇಶಭಕ್ತಿಗೀತೆ.( ಅವರೇ ಬರೆದಿರ್ತಾರೆ ಇದು ದೇಶಭಕ್ತಿ ಗಿತೆ ಅಂತ..!!) ಇನ್ನು ಬಸವಣ್ಣನ ಬಿಡೋಹಾಗಿಲ್ಲ...!! ಅಲ್ಲಾನ ಹೆಸರಿದ್ದಿದ್ದು ಒಮ್ದಾದ್ರೂ ಪಾಠ ಹಾಕದಿದ್ರೆ ಮುಸ್ಲೀಮರಿಗೆ ಬೇಜಾರಾಗತ್ತೆ... ಯಾವದಾದ್ರೂ ಒಮ್ದು ಪಾಠದಲ್ಲಿ ಮೇರಿ,ಥಾಮಸ್... ಅಬ್ದುಲ್ಲಾ... ಶಾಹಿದಾ ಬೇಗಂ ರವಿ ರಾಜು ಪುಟ್ಟಿ ಬರಲೇಬೇಕು...!! ಎರಡು ಕಥೆಗಳು... ಅದ್ರಲ್ಲಿ ಒಂದು ಎನಿಮೇಶನ್ ಪಿಚ್ಚರ್ ಥರದ್ದು..ಇನ್ನೊಂದು ಯಾವುದೋ ದೇಶದ್ ಯಾವುದೋ ಭಾಷೆಯ ಅನುವಾದಿತ ಕಥೆ.. ಇನ್ನು ಕೊನೇ ಪಾಠ ಗೋವಿನ ಹಾಡು ಇರಬೇಕಿತ್ತು,,,ಅದರ ಬದಲು ಇತ್ತೀಚಿನ ಯಾರೋ ಕವಿಗಳು ಬರೆದ ಅರ್ಥ ಅವರಿಗೇ ಆಗದ ಒಂದು ಊಊದ್ದ ಪದ್ಯ...ಅಲ್ಲಿಗೆ ಪುಸ್ತಕ ಕ್ಲೋಸ್... ಇನ್ನೇನು ಕಡಿದು ಕಟ್ಟೆ ಹಾಕ್ಯಾರು ಮಕ್ಕಳು...?
...
..
..
ಇನ್ನು ಇತಿಹಾಸ ಅಂತೂ ಕೇಳೋದೇ ಬ್ಯಾಡಾ..ಈವರ್ಷ ಆಳೋ ಪಕ್ಷದವರು ಯಾವದನ್ನು ನಮ್ಮ ಇತಿಹಾಸ ಅಂತ ಹೇಳಿ ಪಠ್ಯದಲ್ಲಿ ಹಾಕಿದ್ದರೋ ಮುಂದಿನ್ ವರ್ಷ ಬಂದ ಬೇರೆ ಸರಕಾರ ಅದು ಕಿತ್ತು ಬೇರೇನೇ ಇತಿಹಾಸ ಬರದು ನಂ ಕೈಗೆ ಕೊಟ್ಟು ಇದನ್ನೇ ಹೇಳಿ ಅಂತ ಹೇಳಿಸುತ್ತೆ.... ನಮಗೇ ಗೊಂದಲ ನಾವ್ ಓದಿದ್ ಇತಿಹಾಸ..!!! ಹಿಂದಿನ್ ಸರಕಾರ ಇದ್ದಾಗ ಕೊಟ್ಟ ಇತಿಹಾಸ...!!!!! ಈಗಿನ್ ಸರಕಾರದೋರು ಹೇಳೋ ಇತಿಹಾಸಾ...!!... ಯಾವ್ದೂ ಬ್ಯಾಡ ಅತ್ಲಾಗೆ ಸುಮ್ಮನೇ ಸೈನಾಕಿ ೩೦ ಕ್ಕೆ ಸಂಬ್ಳ ತಗಂಡು ಹೋಗೋಣಪ್ಪಾ ಅನ್ನಿಸಿಬಿಟ್ಟಿದೆ..
ಇನ್ನು ಈ ವಿಜ್ಞಾನದ ಕಥೆ ಕೇಳೋದೇ ಬ್ಯಾಡಾ... ಇದುವರೆಗೂ ನಾವು ನ್ಯೂತನ್ ಅಣುಗಳನ್ನು ಕಂಡುಹಿಡಿದ.(ಕಂಡುಹಿಡಿಯೋಕೆ ಏನು ಅವು ತಪ್ಪಿಸಿಕೊಂಡು ಹೋಗಿದ್ವೇ..? ಇರಲೀ). ಏಣೊ ಎಂತೋ ಹೇಳಿ ಪಾಠ ಮಾಡಿದ್ದಾಯ್ತು..ಈಗ ನಮಗೆ ಅಲ್ಲ್ಲಲ್ಲಾ..ಅವನಿಗಿಂತಾ ನೂರಾರು ವರ್ಷ ಮೊದಲೇ ಬದುಕಿದ್ದ ನಮ್ಮ ದೇಶದವನೇ ಆದ ಕಣಾದ ಈ ಅಣುಗಳ ಇರುವಿಕೆಯನ್ನು ಪತ್ತೆ ಮಾಡಿದ ಎಂದು ಪಾಠ ಮಾಡಿ ಅಂದ್ರು... ಅಯ್ಯೋ ರಾಮಾ... ಕಣಾದ ಅನ್ನೋನು ಈ ದೇಶದಲ್ಲಿ ಇದ್ದೋನು ಅವನು ಅಣು ಶಾಸ್ತ್ರವನ್ನು ಬರೆದ ಅನ್ನೋದು ಈಗ ಗೊತ್ತಾಯ್ತಾ,,,? ಹಾಗಾದ್ರೆ ಸರ್ ಎಂ.ವಿ. ಸರ್ ಸಿವಿ.ರಾಮನ್ ಎಲ್ಲಾ ಇದನ್ನು ಓದೇ ಇಲ್ವಾ..ಆದ್ರೂ ಅವರೀಗೆ ವಿಜ್ಞಾನಿ ಪಟ್ಟ ಸಿಕ್ ಬುಡ್ತಾ..?ಥೂ...ಏನ್ ಬೇಕಾದ್ರೂ ಆಗೋಗ್ಲಿ...ಅಂದ್ಕೊಂಡ್ರೆ..
....
ಈ ಜೀವಶಾಸ್ತ್ರ ಅನ್ನೋ ಕಥೆ ಕೇಳಿದ್ರೆ...ಅಯ್ಯಯ್ಯ...ಅದೇನೋಪ್ಪಾ..ನಾವೂ ಓದಿದ್ವೀ ಪಾಟ್ಃಆನೂ ಮಾಡಿದ್ವೀ ಇದೂವರ್ಗೂ... ಹಾಲು ಮೊಸರು ಬೆಣ್ಣೆ ತುಪ್ಪ ಇವೆಲ್ಲಾ ಶಕ್ತಿ ವ್ರ್ಧಕ ಆಹಾರಗಳು ...ಇದನ್ನು ಬೆಳೆಯುವ ಮಕ್ಕಳು ತಿನ್ನಬೇಕು... ಎಂದು...ಈಗ್ ನೋಡಿದ್ರೆ ಅದು ಹಾಗಲ್ವಂತೆ... ಅವನ್ನು ತಿಂದ್ರೆ ಬೊಜ್ ಬರುತ್ತಂತೆ.... ಮಕ್ಕಳಿಗೆ ಆ ಪಾಠ ತಿರುಗಿಸಿ ಹೇಳಬೇಕು...!!! ಎಂಥಾ ಗ್ರಾಚಾರನಪ್ಪಾ...

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)