प्रज्वालितॊ ज्ञानमयप्रदीपः

ಶನಿವಾರ, ಆಗಸ್ಟ್ 4, 2012

ನಾವೂ...ಎಳೇಯ ಗೆಳೆಯರಾಗೋಣವೇ?

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೋ ಸುಂದರ
..............
ಹೌದು, ನಾವೆಲ್ಲಾ ಒಂದೇ ಒಂದು ಬಾರಿ ಎಳೇಯ ಗೆಳೆಯರಾಗೋಣವೇ?
ಅದೇ, ಉಡುದಾರದ ಬಲದ ಮೇಲೇ ನಿಂತಿರುವ ಗುಂಡಿಗಳಿಲ್ಲದ ಚೆಡ್ಡಿ....
ಮೇಲಿಂದು ಕೆಳಗೆ ಕೆಳಗಿನ ಗುಂಡಿ ಮೇಲೆ ಸಿಕ್ಕಿಸಿಕೊಂಡ ಅಂಗಿ,......
ಒಮ್ದುಕೈಯ್ಯಲ್ಲಿ ಬೀಳುತ್ತಿರುವ ಚೆಡ್ಡಿಯನ್ನು ಹಿಡಿದುಕೊಂಡೇ ...ಯೇ...ನಿಲ್ಲ...ನಾನೂ ಬತ್ತೆ... ನಾನೂ ಬತ್ತೆ ಹೇಳಿ ಓಡುವ ಓಡುವಾಗ ಕಲ್ಲು, ಕೊದಂಟಿಗಳು ತಡೆಸಿದರೂ ಸಾವರಿಸಿಕೊಂಡು ಓಡುವ ನಮ್ಮ ಆ ಅಗಾಧ ಭ್ರಾಮಕತೆ,
ಗುಬ್ಬಿ ಎಂಜಲು ಮಾಡಿ ತಿಂದ ಪೇರಳೆ ಹಣ್ಣು.......
ಸೊಂಟಕ್ಕೆ ಹಗ್ಗ ಕಟ್ಟಿ ಓಡಿಸುವ .....ಹೋಕ್ಯ ಹೋಕ್ಯ.... ಕಾಮನ ಹಬ್ಬ,
ನಿನ್ನೆ ನೋಡಿದ ಕೆರೆಮನೆ ಮ್ಯಾಳದ ಆಟದ ತದ್ರೂಪು....ಸೋಂಗೆ ಅಟ್ಟಣಿಗೆಯಲ್ಲಿ ಎತ್ತರ ಎತ್ತರ ಜಿಗಿದು... ಹಾಳೆ ಕೊಟ್ಟೆ ಬಡ್ಯುತ್ತಾ.. ....ತತ್ತೋಂಕ ಧಿಕುತಕ ತೈಯ್ಯ ತೈಯ್ಯ ತಕ ತತ್ತೋಂಗ ಧಿಕುತಾ ಧೇಂ.... ಬಚ್ಚಲ ಒಲೆಯ ಮಸಿ ಇಳ್ಗಾಳವ ತೇದು ಬಳಿದುಕೊಂಡ ಮೀಸೆ,
ಅರ್ಥವಾಗದ ವಯಸ್ಸಿನಲ್ಲೇ........ ಮಾನೀನಿ ಮಣಿಯೇ ಬಾರೇ... ಎಂದು ಆಚೆ ಮನೆ ಕೂಸಿನ ಕೈ ಹಿಡಿದೆಳೆದು... ಕುಣಿದ ಯಕ್ಷಗಾನ,
.... ಕೆಳಗೆ ಬೀಳಿಸಿದರೆ.... ಉಳಿದವರೆಲ್ಲಗೂ ಪಾಲು ಕೊಡಬೇಕಲ್ಲಾ ಎಂದು ಹಲಸಿನ ಮರದ ಮೇಲೇ ಕುಳಿತು ಪೂರಾ ಒಂದು ಚೆಕ್ಕೆ ಹಲಸಿನ ಹಣ್ಣು ಬಿರಿದು ತಿಂದು ಕೆಳಗಿಳಿದು ಬಂದು ಉಳಿದವರಿಗ್ರ್...... ತೊಮ್ಮೆ ನಿಂಗ್ ತೊಮ್ಮೆ... ಹೇಳಿದ್ದು....
ಮೊಣಕಾಲುದ್ದ ನೀರಿನ ಗದ್ದೆ ಹೊಂಡದಲ್ಲಿ.... ಕವಳೆ ಕಾಯಿ ಹೆಕ್ಕಿ ಹೆಕ್ಕಿ ನಂದು ಹೆಚ್ಚಾತು ನಂದು ಹೆಚ್ಚಾತು ಹೇಳಿ ಹಾಕಿದ ಅಂಗಿಯಲ್ಲೇ ಗಂಟು ಕಟ್ಟಿ ಮನೆಗೆ ಓಡಿ ಬಂದದ್ದು,,, ಅದರ ದೋಸೆ ಮಾಡಿಕೊಡು ಎಂದು ಅಮ್ಮನಿಗೆ ದುಂಬಾಲುಬಿದ್ದಿದ್ದು....
ಆಚೆಮನೆ ತಂಗಿ ಗೆ ಮರ ಹತ್ತುಲಾಗತಿಲ್ಲೆ ಹೇಳಿ... ಅಷ್ಟು ಎತ್ತರದ ಅಂಡಮುರುಗಲ ಮರ ಹತ್ತಿ.... ಅದರ ಹಳದಿ ಹಣ್ಣುಗಳನ್ನು ಕೊಯ್ದು ಕೆಳ ಹಾಕುವಾಗ ತಂಗಿ ತನ್ನ ಲಂಗವ ಹಿಡಿದು ಕೊಂಡು ಕಾಯ್ದಿದ್ದು..... ಅದು ಕಡೆಗೂ ಕಲ್ಲು ಬಂಡೆಯ ಮೇಲೆ ''' ಪಚಕ್... ಎಂದು ಬಿದ್ದು.....ಅಯ್ಯೊಯ್ಯೋ...ಬಿದ್ದೋತು...ಹೇಳಿದ್ದು..ಮತ್ತೊಂದು ಕೊಯ್ದು ಕೈಯ್ಯಲ್ಲೇ ಹಿಡಿದು ಕೆಳಬಂದು ಅವಳಕೈಗಿತ್ತು ಅವಳ ಆ ನಗುವಿನಲ್ಲಿ ನಾವೆಲ್ಲಾ ನೆಗಾಡಿದ್ದು..
ಇದು ಗೆಳೆತನ ಅಂದಿನ ನೆನಪು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ