प्रज्वालितॊ ज्ञानमयप्रदीपः

ಭಾನುವಾರ, ಆಗಸ್ಟ್ 5, 2012

.............. ಹಸಿವು


............................
.............. ಹಸಿವು....... ಹಸಿವು...... ಅಮ್ಮಾ...ಹಸಿವಾಗ್ತಿದೆ....ಅಣ್ಣಾ....ಅಸಿವೂ..... ಯೆಂಥಾ ಹಸಿವೂ.. ಯೆಂಥಾ ಹಸಿವು...ಅಯ್ಯೋ.... ತಡಕೊಳ್ಳೋಕೇ ಆಗತಾ ಇಲ್ಲಾ... ಹಸಿವು....... ಸಿಕ್ಕಿದ್ದು ತಿಂದು ಬಿಡೋಣ ಅನ್ನಿಸುತ್ತದೆ......ಆದ್ರೆ ಯೇನೂ ಸಿಗುವುದಿಲ್ಲವಲ್ಲಾ..... ಅಯ್ಯೊ ಹಸಿವು.... ಈ ಹಸಿವನ್ನು ತಡೇಯೋದು ಹ್ಯಾಂಗೇ.... ಇಲ್ಲಾ ಇಲ್ಲಾ.... ಯೇನು ಸಿಕ್ಕಿದರೂ ತಿಂದು...ಹೂಂ...ಸಾಕು ಅದೂ ಆದೀತು....ಕೊಡಿ ಕೊಡಿ... ಈ ಹಸಿವಿನ ಮುಂದೆ...ಯೇನೂ ಇಲ್ಲಾ.... ಹೌದು....ಆಸ್ತಿ ,ಅಂತಸ್ತು..... ಊಹೂಂ...ಯೇನಿದ್ದರೇನು ಈ ಹಸಿವು ಹಾಗೇ ಇದೆಯಲ್ಲಾ....ಅಯ್ಯೋ, ಅಯ್ಯೋ, ನಾನು ಹಸಿವೂ ಅಂತ ಬೇಡ್ತಾ ಇದ್ದೇನೆ..... ಯಾರೂ ಕೊಡೋದಿಲ್ಲವಲ್ಲಾ..... ಈ ಮಾನಾ.. ಮರ್ಯಾದೆ.... ಊಹೂಂ..ಯಾವುದೂ ನನ್ನ ಈ ಹಸಿವನ್ನು ನೀಗಿಸಲಾರದಲ್ಲಾ..... ಹೌದು..ಹೌದು..... ಮಾನ ಇರೋದು ನನಗೋ ಈ ಶರೀರಕ್ಕೋ......? ಛೇ...ಈ ಅಧ್ಯಾತ್ಮ ಊಹೂಂ...ತಲೆಗೆಲ್ಲಿ ಹೋದೀತು..ಅಂಥಾ ಹಸಿವಾಗ್ತಿದೆ.... ಮಾನಹೋದ್ರೂ ಚಿಂತಿಲ್ಲಾ ಹಸಿವು ನೀಗಬೇಕು.... ಅದೋ ಅದೋ ಯಾರೋ ಉಂಡ ಎಂಜಲೆಲೆ ಅಲ್ಲಿ ಬೀಸಾಕಿದ್ರು ...ಓಡು ಓಡು...ಬೇಗ ಓಡು...ಅಲ್ಲಿ ಆ ಎಲೆಯಲ್ಲಿ ಉಳಿದಿದ್ದು ಯೇಣಾದರೂ ಸಿಕ್ಕೀತು..... ಓಹೋ...ಅದೋ ನನ್ನಂಥವರು ಸುಮಾರುಜೆನ ಓಡಿ ಬರುತ್ತಿದ್ದಾರೆ..ಅಲ್ಲಿಗೇ...ಹೋಯ್...ನಿಲ್ಲಿ..ನಿಲ್ಲಿ...ಮೊದಾಲು ನಾನು ನೋಡಿದ್ದು ಇದನ್ನ....ಮುಟ್ಟಬೇಡೀ..ನಂದು ಅದು....ಅಯ್ಯೋ..ಓಡಲೂ ಶಕ್ತಿಯಿಲ್ಲವಲ್ಲಾ....ಬಂದೇ ಬಿಟ್ಟರು...ಆಯ್..... ಹಚ್ಚಾ...ಈ ನಾಯಿ ಬೇರೆ... ಅದನ್ನೇ ಎಗರಿ ತಿನ್ನೋಕೆ ನೋಡ್ತಾಯಿದೆ.... ಅಯ್ಯಪ್ಪಾ...ಸತ್ತೇ,,,,, ಅದ್ಯಾರಪ್ಪಾ.. ನನ್ನ ಮೈಮ್ಯಾಲೇ ಬಿದ್ದುಬಿಟ್ರಲ್ಲಾ... ಥೂ... ಹಾಳು ಜನಾ... ಉಣ್ಣೋಕೂ ಬಿಡ್ತಾಯಿಲ್ಲಾ ಇಲ್ಲ ಇಲ್ಲ ಆಗಲ್ಲ  ಆಗಲ್ಲ ......ಕಟ್ಟಿಕೊಂಡು ಹೋಗೋದೇ ಸರಿ...ಆದ್ರೆಯೇನೂ  ಇಲ್ವೇ... ಹಾಂ..ಈ ಹರಿದೋಗಿರೋ ಅಂಗಿ... ಸಾಕು... ಸಾಕು..ಇದಾದ್ರೂ ಇದ್ಯಲ್ಲಾ.... ಯಪ್ಪಾ..... ಬಿಡಣ್ಣಾ... ನಾನ್ ಹೋಗ್ತೀನಿ ಬಿಡಣ್ಣಾ... ಅಯ್ಯಪ್ಪಾ..ಹೊಡೀಬ್ಯಾಡಾ... ನಿಂಗೇ ಕೊಡ್ತೇನೆ ತಗೋ... ಇದಾ... ನೀನೂ ಉಣ್ಣು.... ನನಗೆ ಒಂಚೂರು ಕೊಡು.....ಇಲ್ಲಣ್ಣಾ..ಯೇನೂ..ತಿಂದಿಲ್ಲಾ... ನೋಡು ಹೊಟ್ಟೆ ಹಸಿದಿದೆ... ನಿಲ್ಲೋಕೂ ಆಗ್ತಾ ಇಲ್ಲಾ... ಅಯ್ಯಯ್ಯೋ... ಯಾರಪ್ಪಾ ಇದೂ... ಅದೇ,,ಅದೇ ಅಲ್ಯಾರೋ ದೇವರ ನಾಮಾ ಹೇಳ್ತಾರೆ ಉಣ್ಣೋ ಮೊದ್ಲು ದೇವರ ನೆನೆಯಬೇಕಂತೆ.. ಹೌದು... ಹೌದು ಥೂ... ಅದ್ಕೂ ಬಿಡ್ತಾಯಿಲ್ವೇ ಈ ನಾಯಿಗಳೂ... ಅಯೋ ಹೊಯ್ತು..ಹೋಯ್ತು...

ಶನಿವಾರ, ಆಗಸ್ಟ್ 4, 2012

ನಾವೂ...ಎಳೇಯ ಗೆಳೆಯರಾಗೋಣವೇ?

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೋ ಸುಂದರ
..............
ಹೌದು, ನಾವೆಲ್ಲಾ ಒಂದೇ ಒಂದು ಬಾರಿ ಎಳೇಯ ಗೆಳೆಯರಾಗೋಣವೇ?
ಅದೇ, ಉಡುದಾರದ ಬಲದ ಮೇಲೇ ನಿಂತಿರುವ ಗುಂಡಿಗಳಿಲ್ಲದ ಚೆಡ್ಡಿ....
ಮೇಲಿಂದು ಕೆಳಗೆ ಕೆಳಗಿನ ಗುಂಡಿ ಮೇಲೆ ಸಿಕ್ಕಿಸಿಕೊಂಡ ಅಂಗಿ,......
ಒಮ್ದುಕೈಯ್ಯಲ್ಲಿ ಬೀಳುತ್ತಿರುವ ಚೆಡ್ಡಿಯನ್ನು ಹಿಡಿದುಕೊಂಡೇ ...ಯೇ...ನಿಲ್ಲ...ನಾನೂ ಬತ್ತೆ... ನಾನೂ ಬತ್ತೆ ಹೇಳಿ ಓಡುವ ಓಡುವಾಗ ಕಲ್ಲು, ಕೊದಂಟಿಗಳು ತಡೆಸಿದರೂ ಸಾವರಿಸಿಕೊಂಡು ಓಡುವ ನಮ್ಮ ಆ ಅಗಾಧ ಭ್ರಾಮಕತೆ,
ಗುಬ್ಬಿ ಎಂಜಲು ಮಾಡಿ ತಿಂದ ಪೇರಳೆ ಹಣ್ಣು.......
ಸೊಂಟಕ್ಕೆ ಹಗ್ಗ ಕಟ್ಟಿ ಓಡಿಸುವ .....ಹೋಕ್ಯ ಹೋಕ್ಯ.... ಕಾಮನ ಹಬ್ಬ,
ನಿನ್ನೆ ನೋಡಿದ ಕೆರೆಮನೆ ಮ್ಯಾಳದ ಆಟದ ತದ್ರೂಪು....ಸೋಂಗೆ ಅಟ್ಟಣಿಗೆಯಲ್ಲಿ ಎತ್ತರ ಎತ್ತರ ಜಿಗಿದು... ಹಾಳೆ ಕೊಟ್ಟೆ ಬಡ್ಯುತ್ತಾ.. ....ತತ್ತೋಂಕ ಧಿಕುತಕ ತೈಯ್ಯ ತೈಯ್ಯ ತಕ ತತ್ತೋಂಗ ಧಿಕುತಾ ಧೇಂ.... ಬಚ್ಚಲ ಒಲೆಯ ಮಸಿ ಇಳ್ಗಾಳವ ತೇದು ಬಳಿದುಕೊಂಡ ಮೀಸೆ,
ಅರ್ಥವಾಗದ ವಯಸ್ಸಿನಲ್ಲೇ........ ಮಾನೀನಿ ಮಣಿಯೇ ಬಾರೇ... ಎಂದು ಆಚೆ ಮನೆ ಕೂಸಿನ ಕೈ ಹಿಡಿದೆಳೆದು... ಕುಣಿದ ಯಕ್ಷಗಾನ,
.... ಕೆಳಗೆ ಬೀಳಿಸಿದರೆ.... ಉಳಿದವರೆಲ್ಲಗೂ ಪಾಲು ಕೊಡಬೇಕಲ್ಲಾ ಎಂದು ಹಲಸಿನ ಮರದ ಮೇಲೇ ಕುಳಿತು ಪೂರಾ ಒಂದು ಚೆಕ್ಕೆ ಹಲಸಿನ ಹಣ್ಣು ಬಿರಿದು ತಿಂದು ಕೆಳಗಿಳಿದು ಬಂದು ಉಳಿದವರಿಗ್ರ್...... ತೊಮ್ಮೆ ನಿಂಗ್ ತೊಮ್ಮೆ... ಹೇಳಿದ್ದು....
ಮೊಣಕಾಲುದ್ದ ನೀರಿನ ಗದ್ದೆ ಹೊಂಡದಲ್ಲಿ.... ಕವಳೆ ಕಾಯಿ ಹೆಕ್ಕಿ ಹೆಕ್ಕಿ ನಂದು ಹೆಚ್ಚಾತು ನಂದು ಹೆಚ್ಚಾತು ಹೇಳಿ ಹಾಕಿದ ಅಂಗಿಯಲ್ಲೇ ಗಂಟು ಕಟ್ಟಿ ಮನೆಗೆ ಓಡಿ ಬಂದದ್ದು,,, ಅದರ ದೋಸೆ ಮಾಡಿಕೊಡು ಎಂದು ಅಮ್ಮನಿಗೆ ದುಂಬಾಲುಬಿದ್ದಿದ್ದು....
ಆಚೆಮನೆ ತಂಗಿ ಗೆ ಮರ ಹತ್ತುಲಾಗತಿಲ್ಲೆ ಹೇಳಿ... ಅಷ್ಟು ಎತ್ತರದ ಅಂಡಮುರುಗಲ ಮರ ಹತ್ತಿ.... ಅದರ ಹಳದಿ ಹಣ್ಣುಗಳನ್ನು ಕೊಯ್ದು ಕೆಳ ಹಾಕುವಾಗ ತಂಗಿ ತನ್ನ ಲಂಗವ ಹಿಡಿದು ಕೊಂಡು ಕಾಯ್ದಿದ್ದು..... ಅದು ಕಡೆಗೂ ಕಲ್ಲು ಬಂಡೆಯ ಮೇಲೆ ''' ಪಚಕ್... ಎಂದು ಬಿದ್ದು.....ಅಯ್ಯೊಯ್ಯೋ...ಬಿದ್ದೋತು...ಹೇಳಿದ್ದು..ಮತ್ತೊಂದು ಕೊಯ್ದು ಕೈಯ್ಯಲ್ಲೇ ಹಿಡಿದು ಕೆಳಬಂದು ಅವಳಕೈಗಿತ್ತು ಅವಳ ಆ ನಗುವಿನಲ್ಲಿ ನಾವೆಲ್ಲಾ ನೆಗಾಡಿದ್ದು..
ಇದು ಗೆಳೆತನ ಅಂದಿನ ನೆನಪು...