ರಾಮ ನಿರ್ಯಾಣ.....
ಸೀತೆ ಹೆಸರೇ ಸೂಚಿಸುವಂತೆ ಅವಳು ಭೂಜಾತೆ. ..... ಈ ಭೂಮಿಗೆ ಆರೋಪಿತವಾದ ಎಲ್ಲಾ ಸದ್ಗುಣಗಳ ಸಾಕಾರ ಅವಳು. ಇಂದು ಅದೇಕೋ ನನ್ನ ಮನದಲ್ಲಿ ಅವಳ ಕುರಿತಾಗಿ ಗಾಢವಾದ ಕೆಲವು ಆಲೋಚನೆಗಳು ಧುಮ್ಮಿಕ್ಕಿ ಬಂತು.... ಭೂಮಿಯನ್ನು ನೆನೆದಾಗಲೆಲ್ಲಾ ನಾನು ಸೀತೆಯ ಮಡಿಲ ಮಗುವೆಂದು ಬಗೆಯುವುದು ಅಭ್ಯಾಸವಾಗಿ ಹೋಗ್ಯದೆ.ಆ ತಾಳ್ಮೆ, ಆ ಅನುರಾಗ, ಆ ಮಮತೆ, ಎಲ್ಲಾ.... ಪದಗಳೂ ಅವಳಿಗಾಗಿಯೇ ಹುಟ್ಟಿದ್ದೋ... ಅಥವಾ ಅವಳ ಮೂಲಕವೇ ಲೋಕವರಿಯಿತೋ ಒಂದೂ ಗೊತ್ತಾಗುವುದೇ ಇಲ್ಲಾ. ತಾಳ್ಮೆ..... ಹಹ್ಹಹ್ಹಾ ಯೆಷ್ಟು ಕಾಯುವುದು.... ಹುಟ್ಟಿದಂದಿನಿಂದ ಕಾಯುವುದೇ ಅವಳ ಕಾಯಕ..... ಆ ರಾಮ ಬರುವನೆಂದು ಶಬರಿ ಆ ಮುದಿ ವಯದಲ್ಲಿ ಕಾದಿದ್ದು ದೊಡ್ಡ ಸುದ್ದಿಯಾಗಿಬಿಡುತ್ತದೆ.. ಆದರೆ........ ಆದರೆ... ಆ ರಾಮನಿಗಾಗಿ ತನ್ನ ಜೀವಿತವನ್ನೆಲ್ಲಾ ಕಾಯ್ದವಳು ಜಾನ್ನಕಿ... ಅದೇನೋ... ಅವಳ ಜೀವನದಲ್ಲಿ ಲೋಕೋದ್ಧಾರ ಕ್ಕಾಗಿ ವಿಧಿ ಹೀಗೂ ಬರೆಯಬಹುದೆಂದು ನಾನೆಣಿಸಿರಲೇ ಇಲ್ಲ. ಒಬ್ಬ ರಾಮ ಬರೇ ಒಂದು ವರ್ಷ....!! ಹನ್ನೆರಡು ತಿಂಗಳು ಸೀತೆಯಿಲ್ಲದೇ ಪರಿತಪಿಸಿದ್ದು ಮಹಾಹವವನ್ನೇ ತಂದು ನಮ್ಮ ಕೈಗಿತ್ತಿದ್ದು ಆ ವಾಲ್ಮೀಕಿಗಳ ವಾಗ್ವೈಭವವೆನ್ನದೇ ಬೇರೆ ದಾರಿ ಯಿಲ್ಲ. ಆದರೆ ಕೈ ಹಿಡಿದ ದಿನದಿಂದ ಅದೆಷ್ಟು ವಿಯೋಗಗಳು.... ಸಪ್ತ ಪದಿ ತುಳಿದು ಇನಿಯನೊಡಗೂಡಿ ವನವಿಹಾರವ ಗೈವ ತನ್ನ ಕನಸಿಗೆ ಲೋಕೋತ್ತರವಾದ ವಿರಹ ವೇದನೆಯುಂಬ ಬಯಕೆಯಿದೆ ಎಂದು ಅರಿತಿರಲಾರಳು...ಮುಗುದೆ.
ಅಂತೂ ಸೀತೆ ರಾಮನ ಮನದನ್ನೆಯಾಗಿ ಬಂದಳು ಎಂಬಲ್ಲಿಗೆ ರಾಮಾಯಣದ ಹೊಸಾ ಪುಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ...ಈ ವಿಯೋಗದ ಅಥವಾ ವಿಯೋಗಗಳ ಸರಮಾಲೆಯೇ ಶ್ರೀಮದ್ರಾಮಾಯಣ... ವಿಯೋಗ, ವೇದನೆ, ಕಾಯುವಿಕೆ ಇವೆಲ್ಲಾ ರಾಮಾಯಣದ ಬಂಡವಾಲ. ಅದಿಲ್ಲದಿದ್ದರೆ...ಅದನ್ನು ಇದೆಂಥಾ ರಾಮಾಯಣ ಎನ್ನುವಷ್ಟು ಮುಳುಗಿಸಿ ಬಿಟ್ಟಿದೆ ನಮ್ಮನ್ನು ಈ ಜೀವಯಾತನೆ.... ಅಂದು ಬಂದ ಸೀತೆ... ಹೋದಳು.... ಮತ್ತೆ ಬರಲಾರಳು... ಹಿಂದೆಲ್ಲಾ ರಾಮನಿಗೆ ಈ ಪರಿ ಅನ್ನಿಸಿರಲಿಲ್ಲ.... ಯೇಕೆಂದರೆ.... ಹೋಗುವಾಗ ಹೇಳಿ ಹೋಗಿರಲಿಲ್ಲ...ಅಂದು. ಆದರೆ ಇಂದು ಹೇಳಿ ಹೋಗಿದ್ದಾಳೆ..... ಯಾವ ತಾಯಿ... ನನ್ನನ್ನು ಈ ನಿನ್ನ ಚರಣ ಸೇವೆಗಾಗಿ ಹೊತು ಹೆತ್ತು ಪೊರೆದು ಕೈಗಿತ್ತಳೋ... ರಾಮಾ.... ಆ ಕೆಲಸ ಮುಗಿ ಯಿತು..... ನಿನಗೆ ಸೇವೆಯ ಅಗತ್ಯವಿಲ್ಲ.... ಅನ್ನಿಸಿರಬೇಕು..... ಆ ಲವ-ಕುಶರಿಗಾಗಿ ನೀನು ನನ್ನನ್ನೇ ಪಾಲು ಮಾಡಿ ಅವರವ ಕೈಗಿತ್ತೆ.... ಕುಶಸ್ಥಲ-ಲವಪುರಿಗಳನ್ನು ನೀನವರಿಗೆ ಕೊಟ್ಟು ಕೈ ತೊಳೆದುಕೊಂಡೆ... ಅಲ್ಲಿಗೆ ನಿನಗೆ ಈ ಮಣ್ಣಿನ ಮೇಲೆ ಆಧಿಪತ್ಯ ಬೇಡವೆನಿಸಿತಲ್ಲವೇ? ರಾಜನಿಲ್ಲದ ರಾಜ್ಯ, ದೇವರಿಲ್ಲದ ಗುಡಿ.... ಯಾರಿಗೆ ಬೇಕು..... ಇದೋ... ನಿನ್ನೆದುರಿನಲ್ಲೇ ಮಣ್ಣಿಗೆ ಮಣ್ಣಾಗಿ ಹೋಗುತ್ತೇನೆ.... ನಿನಗಾಗಿ ನಾನು, ಓರ್ವ ಗೃಹಿಣಿಯಾಗಿ ಮನೆಗೆ,ಒಂದು ಕುಲಕ್ಕೆ ವಧುವಾಗಿ ಯೇನೆಲ್ಲವನ್ನೂ ಕೊಡ ಬಹುದೋ ಅದನ್ನೆಲ್ಲಾ ನೀಡಿದೆ.... ನನ್ನೊಳಗಿನ ಅಗ್ನಿಗೆ ಆಹುತಿಯಾದೆ....!!!ಇದೋ ಅದೇ ಆ ಅಗ್ನಿಯೇ ನನ್ನನ್ನು ಕರೆಯುತ್ತಿ ದ್ದಾನೆ... ತವರ ಹಂಬಲ ಹೆಚ್ಚುತ್ತಿದೆ... ಬಹುದಿನಗಳಾಗಿ ಹೋಯಿತು..... ನನ್ನವರು ನಿನ್ನವರೇ ಆಗಿದ್ದರು... ನಿನ್ನ ಪದತಲದಲ್ಲಿ ಯೆಲ್ಲರನ್ನೂ ಕಾಣುತ್ತಿದ್ದೆ... ಯಾಕೋ ಈಗನಿಸುತ್ತಿದೆ ಅಲ್ಲಿದ್ದಾರೆ ನನ್ನವರು...ಹೋಗಿ ನೋಡಬೇಕು.. ಅವರೊಂದಿಗೆ ಹರಟಬೇಕು..ನಿನ್ನ ನನ್ನ ಆ ಮಧುರ ಜೀವನದ ಕನಸಿನ ಕಥೆಯನ್ನೆಲಾ ಹೇಳಿಕೊಳ್ಳಬೇಕು.. ಅನ್ನಿಸಿದೆ.
ಇದೋ ಉರಿಯುತ್ತಿರುವ ಈ ಅಗ್ನಿ ನನ್ನನ್ನು ತನ್ನತ್ತ ಬರ್ಸೆಳೆದುಕೊಳ್ಳಲೀ.... ಛೇ.... ಅಗ್ನಿಗೆ ಸಂಕಟವಾಗುತ್ತಿರಬೇಕು.. ಅದೆಷ್ಟು ಭಾರಿ ನಿನ್ನ ಓಲೈಸಲೀ ಎಂದು ಕೋಪಿಸಿಕೊಂಡಾನು.... ಆದರೂ ಇದೋ ಇದೋ ಇದೊಂದೇ ಬಾರಿ ನಿನ್ನ ಆ ಕೆನ್ನಾಲಗೆಯ ಸ್ಪರ್ಷಕ್ಕಾಗಿ ಈ ಸೀತೆ ಹಂಬಲಿಸುತ್ತಿದ್ದಾಳೆ... ಬಾ..ಬಾ... ರಾಮಾ...ಯೋಗವಿದ್ದರೆ..ಆ ಸುಯೋಗವಿದ್ದರೆ ಮತ್ತೆ ಒಂದಾಗೋಣ.... ಅಲ್ಲಿ.... ಅಲ್ಲಿ ನಮ್ಮ ಮನೆಯಲ್ಲಿ...... ಬಂದು ಬಿಡು ಬೇಗ.... ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೇ ಹೌದು...ಸುಮ್ಮನೇ.... ನೀನೇ ಹೇಳಿದೆಯಲ್ಲಾ ನಾನು ಮಾನವ... 'ರಾಮೋಹಂ ಮಾನುಷಂ ಮನ್ಯೇ' ಹೌದು..ಅದು ಹಾಗೇ..... ನಿನ್ನನ್ನು ನೀನು ಲೋಕಕ್ಕೆ ತೆರೆದುಕೊಂಡಿದ್ದೇ ಹಾಗೆ... ಇಲ್ಲದಿದ್ದರೆ ಈ ಮಾನವ ಮಾತ್ರರಿರುವ ಈ ಮಣ್ಣಿಗೆ ಮನದನ್ನನಾಗುವ ಭಾಗ್ಯವಿತ್ತೇ..... ಮಕ್ಕಳೇ ಇದೋ ನಿಮ್ಮಪ್ಪ ಈ ಭುವಿಯಲ್ಲಿ ಸಾಧಿಸಿದ್ದು ನಿಮಗೆ ದಾರಿದೀವಿಗೆಯಾಗಲೀ... ಲೋಕ ಮರ್ಯಾದೆಯ ಭಯ ನಿಮ್ಮನ್ನೂ ಬೆಳೆಸಲೀ... ಪೂಜ್ಯರಾದ ವಸಿಷ್ಠರ ಕೃಪಾಶೀರ್ವಾದ ಈ ಎಳ್ಯ ಕಂದಮ್ಮಗಳ ಮೇಲೆಯೂ ಸದಾ ಇರಲಿ. ತಂದೆಯ ಬೆಳ್ಗೊಡೆಯ ಋಣಭಾರದಿಂದ ಅವರ ಶಿರಸ್ಸನ್ನು ಕಾಪಾಡುವ ಶಕ್ತಿ ನೀಡಬೇಕು ನೀವು.... ಹನುಮಾ... ಲೋಕವರಿತದ್ದು ಯೆಷ್ಟೋ ಗೊತ್ತಿಲ್ಲ... ನಾನರಿಯೆನೇ ನಿನ್ನ ಪರಾಕ್ರಮವಾ..? ಶೌರ್ಯ, ಧೈರ್ಯ, ಪರಾಕ್ರಮ ,ಸಾಹಸ, ಕೀರ್ತಿ ಈ ಎಲ್ಲ ಆಭೂಷಣಗಳೂ ನಿನ್ನ ಕೊರಳನ್ನಲಂಕಸಿವೆ... ಆದರೂ ಹಿಗ್ಗಿದವ ಕುಗ್ಗಿದವ ಬಗ್ಗಿದವನಲ್ಲ... ರಾಮ ಮಂತ್ರದ ಪರಮೋಚ್ಚ ಶಕ್ತಿಯನ್ನು ಲೋಕಕ್ಕೆ ತೋರಿದವನು ನೀನು... ಚಿರಾಯುವಾಗಿರು..... ಪುರ ಜನರೇ ಪರಿಜನರೇ..... ನಿಮ್ಮ ಉಳಿವಿನಿಂದ ಈ ರಾಮರಾಜ್ಯ ಉಳಿದಿದೆ... ಮುಂದೆಯೂ ಉಳಿಯುತ್ತದೆ... ನಾನು ಹೋಗಿಬರಲೇ......ಇಲ್ಲ ಹೋಗುತ್ತೇನೆ..... ಬರುವ ಮಾತೆಲ್ಲಿ...... ಬಂದರೆ..ಬಂದರೆ..ಮತ್ತದೇ ಬಂಧನ..... ಈ ಜಗದ ಬಂಧನ..... ರಾಮಾ..... ಈಗ ನಿನ್ನ ಹೆಸರನ್ನೇ ಹಿಡಿದು ಕೂಗುತ್ತೇನೆ. ಉಳಿದೆಲ್ಲಾ ಮನುಜರಿಗೆ ಈ ಭಾಗ್ಯವನ್ನು ನೀನೇ ಕೊಟ್ಟಿದ್ದೆ. ನಿನ್ನ ನಾಮವನ್ನು ಬಾಯ್ತುಂಬಿ ಕರೆಯಲು ಕೂಗಲು ಅವಕಾಶವಿತ್ತು.... ನನಗಾ ಭಾಗ್ಯವೇ ಇರಲಿಲ್ಲಾ.... ಆದರೆ...ಆದರೆ... ಇದೋ ಮನದಣಿಯೆ ಕೂಗುತ್ತೇನೆ ರಾಮಾ..ರಾಮಾ..... ಜಗದಾಭಿರಾಮಾ... ರಘುಕುಲತಿಲಕ ರಾಮಾ ಆಹಾ....ಆಹಾ...ಯೆಂಥಾ ಸುಖ...ಆನಿನ್ನ ನಾಮದಲ್ಲಿರುವ ಎರಡಕ್ಷರವ ಹೇಳಲದೇನು ಸುಖ..... ರಮಯತೇತಿ ರಾಮ... ನಿಜವಾಗಲೂ ನೀನು ರಮಮಾಣನೇ...ಯೇಕೆಂದರೆ ನೀನೆನ್ನ ರಮಣನೂ ಅಲ್ಲವೇ.... ಹೇ ಚಂದ್ರಾನ್ವಯದ ಮಹೋನ್ನತ ಶಿಖರವೇ..... ರಾಮಾ...ಇದೋ ನಾನು ಹೊರಟೆ...... ಯೆಲ್ಲಿಗೆಂದು ಕೇಳಬೇಡಾ..... ಏಕೆಂದರೆ....ಬರುವಾಗ ಎಲ್ಲಿಂದ ಬಂದೆ ಎಂದು ಯಾರೂ ಕೇಳಲಿಲ್ಲ..... ಹಾಗಾಗಿ ಬಂದಲ್ಲಿಗೇ ಹೋಗುತ್ತಿದ್ದೇನೆ.... (ಉರಿಯುತ್ತಿರುವ ಅಗ್ನಿಯಲ್ಲಿ ಲೀನವಾಗಿ ಹೋದಳು ಸೀತೆ)
ರಾಮನ ಆಸ್ಥಾನ ಪುರಜನರಿಂದ ತುಂಬಿ ತುಳುಕುತ್ತಿದೆ.... ಯಾವುದೋ ಗಹನವಾದ ವಿಚಾರವನ್ನು ದೊರೆ ಪ್ರಜೆಗಳಿಗೆ ಸಾದರ ಪಡಿಸಬೇಕಿದೆ...... ಮುಂದಿರುವ ಸಿಂಹಾಸನ ಅರಸನ ಬರವನ್ನೇ ನಿರೀಕ್ಷಿಸುತ್ತಿದೆ... ಪುರೋಹಿತರು ಮಂಗಳಸೂಕ್ತವನ್ನು ಉಚ್ಚರಿಸುತ್ತಿದ್ದಾರೆ.. ಅದೋ..ಅದೋ...ಅಲ್ಲಿ..ಬರುತ್ತಿದ್ದಾನೆ...ರಾಜಾಧಿ ರಾಜ ರಘುಕುಲ ತಿಲಕ ಅಯೋಧ್ಯಾ ಸಿಂಹಾಸನಾಧೀಶ್ವರ... ಸೀತಾ ವಲ್ಲಭ... ಶ್ರೀ ರಾಮಚಂದ್ರ ಮಹಾಪ್ರಭುಗಳಿಗೇ ಬಹುಪರಾಕ್ ಬಹುಪರಾಕ್........ ಮಹಾರಾಜರು ಸಭೆಗೆ ಆಗಮಿಸುತ್ತಿದ್ದಾರೇ...... (ಎಲ್ಲರೂ ಎದ್ದುನಿಲ್ಲುತ್ತಾರೆ) ರಾಮ ಬಂದ.... ರಾಮನೇ ಬಂದ. ರಾಮನೊಬ್ಬನೇ ಬಂದ.... ಸಿತೆಯಿಲ್ಲದ ರಾಮನ ಹೆಜ್ಜೆಗಳು ಅರಮನೆಯ ನೆಲಹಾಸನ್ನು ತುಳಿದಿರಲಿಲ್ಲವೇನೋ.... ಅವೂ ಅಲ್ಲಲ್ಲಿ ಅಲ್ಲಲ್ಲಿ ಹುರುಪೆಯೆದ್ದು ಅಣಕಿಸುತ್ತಿದ್ದವು.... ಅಯ್ಯೋ ಹನುಮ...ಯೆಲ್ಲಿ ಆ ಹನುಮ...ಶ್ರೀ ರಾಮ ದೂತ..ಹನುಮ..ಅವನೂ ಬರಲಿಲ್ಲವೇ...ಅದೆಲ್ಲಿ ಘನಕಾರ್ಯವನ್ನು ಹೊಂಚಿ ಹೋದನೋ..... ತಮ್ಮ ಹೌದು ತಮ್ಮ ಲಕ್ಷ್ಮಣನಿಗೇನಾಯಿತು.? ಅವನೂ ಇಂದು ರಾಮನೊಡನಿಲ್ಲಾ...!!! ರಾಮನೊಬ್ಬನೇ ಆ ಭಾರವಾದ ಹೆಜ್ಜೆಗಳನ್ನಿಟ್ಟು ಅರಮನೆಯ ರಾಜಾಂಗಣದಲ್ಲಿ ನಡೆದು ಬರುತ್ತಿರುವುದು ಇದೇ ಮೊದಲು.... ಬಂದ... ಸಿಂಹಾಸನಕ್ಕೆ ಕೈಮುಗಿದು ಅದೇನೋ ಆಲೋಚಿಸುತ್ತಾ ನಿಂತೇ ಬಿಟ್ಟ.... ಹೊಸದಾಗಿ ಕಂಡಿರಬೇಕು ಸಿಂಹಾಸನ...ಅದರ ಕೈಯ್ಯಿಂದ ಸವರಿ ಸವರಿ ನೋಡುತ್ತಿದ್ದ.... ಮತ್ತೆ ಮತ್ತೆ ಮುಟ್ಟಿ ನಮಸ್ಕರಿಸುತ್ತಿದ್ದ... ಅದು ಇಕ್ಷ್ವಾಕು ವಂಶದ ಅಮರ ಸಿಂಹಾಸನ...!!! ತಿರುಗಿ ನಿಂತು ಪ್ರಜಾಕೋಟಿಗೆ ಕುಳಿತುಕೊಳ್ಳುವಂತೆ ಸನ್ನೆಯನ್ನೇನೋ ಮಾಡಿದ... ತಾನು ಕೂರಲೋ ಬೇಡವೋ ಎಂದು ಆಲೋಚಿಸುತ್ತಿದ್ದ..ಆದ್ದರಿಂದ ಇವರೂ ನಿಂತೇ ಇದ್ದರು..... ರಾಜ ಸಿಂಹಾಸನವೇರದೇ ಇವರೆಂತು ಕೂರುವುದು..... ಹಾಂ..... ವಸಿಷ್ಠರು..... ರಾಜ ಮಾಂಗಲ್ಯವನ್ನು ವಾಚಿಸಿದರು.... ಸ್ವಸ್ತಿವಾಚನ ಗೈದರು.... ರಾಮಾ..ಇದೇನಿದು.... ನಿನ್ನ ಪ್ರಜೆಗಳು ಕುಶಲಿಗಳಾಗಿದ್ದಾರೆ..... ರಾಜ ನರ್ತಕಿಯರ ಬಣ್ಣ ಮಾಸುತ್ತಿದೆ.... ದೀಪದ ಕುಡಿ ಕವಲೊಡೆಯುತ್ತಿದೆ... ಇನ್ನೂ ನಿಂತೇ ಇರುವೆಯಲ್ಲಾ.....ಆಂ....ಹೋ..ಹೌದಲ್ಲವಾ...ಕುಳಿತುಕೊಳ್ಳಿ ಕುಳಿತುಕೊಳ್ಳಿ...ಸಿಂಹಾಸನಾರೂಢನಾದ ಶ್ರೀರಾಮ ಎಂದಿನಂತಿಲ್ಲದ್ದು ಹೇಳಬೇಕಾಗಿರಲಿಲ್ಲ.... ಆದರೂ... ನರ್ತನಕ್ಕೆ ಅಣಿಯಾದರು ಅಂಗನೆಯರು... ನಿಲ್ಲಿ.... ಏಕೋ ಇಂದಿನ ಸಭೆಗೆ ನರ್ತನ ಬೇಕೆನಿಸುವುದಿಲ್ಲ.... ಗಾಯನ ರುಚಿಸುವುದಿಲ್ಲ.... ಮನಸ್ಸು ಹುಯ್ದಾಡುತ್ತಿದೆ... ಹನುಮನಿಲ್ಲದ ತಮ್ಮಲಕ್ಷ್ಮಣನಿಲ್ಲದ... ಅದೂ ಅಲ್ಲ ನನ್ನ ಮಕ್ಕಳು... ಮಕ್ಕಳು...ಲವ...ಕುಶ...ಅವರೀರ್ವರೂ ಇಲ್ಲದ ಸಭೆ..... ಬೆತ್ತಲೆಯಾದೆನೇ.... ಏಕಾಂಗಿಯಾದೆನೇ..... ಯಾರೂ ಇಲ್ಲವೇ....ಊಹೂಂ..ಯಾರೂ ಕಾಣಿಸುವುದೇ ಇಲ್ಲ..... ಬೇಡ ಏನೂ ಬೇಡ..... (ಸುಮ್ಮನೇ ಕುಳಿತುಕೊಳ್ಳುತ್ತಾನೆ... ಪ್ರಜೆಗಳು ಮೌನಕ್ಕೇ ಶರಣುಹೋಗುತ್ತಾರೆ)

ಇಂದ್ರನ ಅಮರಾವತಿ..ಅದು ಬೆಳಗುತ್ತಲೇ ಇರಬೇಕು.... ಅದೇಕೋ ಇತ್ತೀಚೆಗೆ ಅಲ್ಲಿ ಬೆಳ್ಕು ಕಾಣಿಸುವುದಿಲ್ಲ... ಗೆಜ್ಜೆಯ ನಾದ...ಅದೇ ಅದೇ..ರಂಭೆ ಊರ್ವಶೀ, ಮೇನಕೆ,ತಿಲೋತ್ತಮೆಯರ ಕಾಲಿನ ಗೆಜ್ಜೆಯ ನಿನಾದ ಕೇಳಿಸುವುದಿಲ್ಲ....ಸೂರೆ ಹೋಗಬೇಕಾದ ಸಗ್ಗದ ಸುಖ ಅಲ್ಲಿಲ್ಲ.... ಏಕೆ..ಏನಾಗಿದೆ.... ತುಂಬಾದಿನಗಳಿಂದ ಕಿಲುಬು ಹಿಡಿದ ಪಾತ್ರೆಯಾಗಿದೆಯಲ್ಲಾ...ಓಹೋ... ಯಾರಿಗಾಗಿ ಲೋಕ ಕಾಯ್ದು ಕೂತಿತ್ತೋ ಅವರಿನ್ನೂ ಬಂದಿರಲಿಲ್ಲ.... ಅವರು ಬಾರದ್ದೇ ಈ ಲೋಕ ಬೆಳಗುವುದಿಲ್ಲ... ಪೂರ್ಣ ಚಂದ್ರಮನ ನಿರೀಕ್ಷೆಯಲ್ಲೇ ಕರಗಿ ಹೋಗುತ್ತಿರುವ ಸುರಲೋಕ..... ಯಾರು ಆ ಚಂದ್ರಮ? ಅದೋ ನಾರದರು ಅಲ್ಲಿ ತಂಬ್ರವ ಮೀಂಟಿ ಹೇಳುತ್ತಿದ್ದಾರೆ...... ರತ್ನಾಕರನಿಗೇನೋ ರಾಮಮಂತ್ರೋಪದೇಶ ಮಾಡಿದೆ.... ಅಂವ ರಾಮಾಯಣವನ್ನೂ ಬರೆದ.... ಲೋಕಕ್ಕೆ ಸಾರಿ ಹೇಳಿದ..... ಆದರೆ ಆದರೆ... ಈ ಲೋಕ ಇನ್ನೂ ಆ ರಾಮನನ್ನು ನೋಡುವ ಭಾಗ್ಯವಿಲ್ಲದೇ ಮಂದವಾಗುತ್ತಿದೆಯಲ್ಲಾ... ಯೆಲ್ಲಿ ರಾಮ ಬರಲೇಯಿಲ್ಲ...... ಹೋದವ ಬರಬೇಕಲ್ಲವೇ? ಹೇಳಿ ಹೋಗಿದ್ದಾನೆ.... ರಾವಣಾದಿಗಳ ಹನನಗೈದು ಬರುತ್ತೇನೆ.... ಯೆಲ್ಲವನ್ನೂ ಗಮನಿಸುತ್ತಿದ್ದ ಅದೇ ಯಮಧರ್ಮ...... ಯಮ..!!! ನಾರದರೇ.... ಏಕೆ ಹೀಗಾಯ್ತು..... ಅಮರರಿಗೆ ಮರವೆಯ ಸಂಕೋಲೆಯ ಬಂಧನ ಆಗಿರಬಹುದೇ? ಇಲ್ಲ...ಇದನ್ನು ನಾನೇ ವಿಚಾರಿಸಬೇಕು..... ಯೆಲ್ಲಿ ಆ ದೂರ್ವಾಸರು....ಮನೋ ವೇಗದಲ್ಲಿ ಸತ್ಯದ ಸಾಕ್ಷಾತ್ಕಾರಕ್ಕೆ ಮೂಲವಾದವರು...?ನಾರದರೇ.... ತುಂಬ ಸಂದಿಗ್ಧ ಕಾಲ ಇದು ಕಾಲವನ್ನೇ ಕಾಯುವ ಪರಿಸ್ಥಿತಿಯೊದಗಿ ಬಂದಿದೆ..ಆದರೆ ಆ ಕಾಲಕ್ಕೆ ಕೊನೆಮೊದಲಿಲ್ಲವಲ್ಲಾ... ಹಾಗಾಗಿ ಕಾಲನ ಕರೆ ಕೇಳಿಸಬೇಕು ಆ ರಾಮನಿಗೆ...... ಇದೋ ಸ್ವರ್ಗದಲ್ಲಿ ಇರಬೇಕಾದ ಸೊತ್ತು ಅದು..... ಹೇಳಿಹೋದವ ಬಾರದಿದ್ದರೆ ಹೇಗೆ....ಬರಬೇಕಲ್ಲಾ..... ಅದು ಯಾವ ಬಂಧನವೋ... ಈ ಮನುಷ್ಯರೇ ಹೀಗೆ.... ಸಾವಿನ ಸನಿಹದಲ್ಲಿದ್ದರೂ ಈ ಸ್ನೇಹವನ್ನು ಈ ಮಣ್ಣಿನ ಮೋಹವನ್ನು ಬಿಡಲೊಲ್ಲರು...ಎಚ್ಚರಿಸಬೇಕು...ಎಚ್ಚರಿಸಬೇಕು...ನಾನೇ ಹೋಗಿ ಯೆಚ್ಚರಿಸುತ್ತೇನೆ...ಅನುವು ಮಾಡುತ್ತೀರಾ ಮುನಿವರ್ಯಾ...ದೂರ್ವಾಸ ತಲೆಯಾಡಿಸುತ್ತಾನೆ... ಏನೋ ಅಳುಕು ಇಬ್ಬರಲ್ಲೂ.... ಅದು ಹಾಗೇ ಮೇಲೇರುವುದಕ್ಕೆ ಅಳುಕುವುದಿಲ್ಲ ಮನ... ಆದರೆ ಏರಿದವನು ಕೆಳಗಿಳಿಯಬೇಕು ಎಂದರೆ..... ಆದರೂ 'ಅವಶ್ಯಮನುಭೋಕ್ತವ್ಯಮ್'ಅಲ್ಲವೇ? ಕರೆತರಲೇಬೇಕು... ಇನ್ನೂ ಯೇನೇನೋ ಹಡಾವಿಡಿಗಳು ಲೋಕ ಕಂಟಕರು...ಕಾಯುತ್ತಿದ್ದಾರೆ...ಶ್ರೀಮನ್ನಾರಾಯಣನಿಗಾಗಿ.......ಭೂಜಾತೆ ಆ ಮಾತೆ ಲಕುಮೀದೇವಿ ಅದಾಗಲೇ ತವರ ಸೇರಿದಳಲ್ಲಾ... ಭೂರಮಣನೆಲ್ಲಿ....... ಅವನೆಲ್ಲಿ... ಇಲ್ಲಿಲ್ಲವಲ್ಲಾ...ಅದೋ ಆ ಅಯೋಧ್ಯೆ....ಅದರೊಳಗೆ ಮುಳುಗಿ ಹೋಗಿದ್ದಾನವನು.... ಈ ಭೂಮಿಯ ಮಮಕಾರವೇ ಹಾಗೆ ಇಳಿದವ ಮುಳುಗಿಯೇ ಹೋಗುತ್ತಾನೆ... ಅಂತೂ ನಾನೂ ಇಳಿಯಬೇಕು ಇಳೆಗೆ......................ಕಾಲಪುರುಷ...!!!!
ಅದೋ ಅದಾರೋ ಬಾಗಿಲಲ್ಲಿನಿಂತು ರಾಜಘಂಟಾನಾದವನ್ನು ಮಾಡುತ್ತಿದ್ದಾರೆ... ಇದೇನು ಅಚ್ಚರಿ ರಾಮರಾಜ್ಯ...!!! ಹೇಳಿ ಕೇಳಿ ಇದು ರಾಮ ರಾಜ್ಯ. ಇಲ್ಲಿ ಅತೃಪ್ತರಾರು ಕಾಣಸಿಗುವುದಿಲ್ಲ...!! ಅನ್ಯಾಯಕ್ಕೆ ಎಡೆಯಿಲ್ಲಾ... ಅಸತ್ಯವ ನುಡಿವರಿಲ್ಲ..!! ಕಳ್ಳರಿಲ್ಲ !! ಮೋಸ ವಂಚನೆಗಳಿಲ್ಲ!!! ಏಕೆಂದರೆ ಇದು ರಾಮರಾಜ್ಯ..!!!.ಆದರೂ ಒಂದು ದೂರು ಗಂಟೆ ಇದೆ .ಲಕ್ಷಣಕ್ಕಾಗಿ ಅದು. ಯಾರೂ ಬಡಿದಿಲ್ಲ ಇದುವರೆಗೆ.... ಆದರೆ ಇಂದು... ಅದೇನೋ ಸದ್ದು ಬರುತ್ತಿದೆಯಲ್ಲಾ...!!! ಯೇನಾಯಿತು? ಬಾಗಿಲಿನ ಕಾವಲುಗಾರ ವಿಚಾರಿಸಿ ಬಂದು ಒಡೆಯ ಶ್ರೀರಾಮನಿಗೆ ಅರುಹಿದ.... ಕಾಲ ಪುರುಷನಂತೆ.... ಜೀಯಾ....ಮಾತಾಡಬೇಕಂತೆ ನಿಮ್ಮಲ್ಲಿ.... ಬರಲಪ್ಪಣೆಯ ಬೇಡುತ್ತಿದ್ದಾನೆ.....!!!! ವಾಹ್.... ಕಾಲಾತೀತನಾದವನಿಗೆ ಕಾಲಪುರುಷನ ಕಾಯುವಿಕೆ..... ಯಮನೂ ಕಾಯಬಲ್ಲ...ಕಾಲವನ್ನು...ಯೇಕೆಂದರೆ..ಇದು ರಾಮರಾಜ್ಯ.... !!! ಓಹೋ....ಬಂದನೇ... ಬರಹೇಳು..... ಬಂದವ ಯಾರೇ ಆಗಿರಲಿ..ರಾಮನ ಮುಖ ದರ್ಶನ ಸುಲಭ ಇಲ್ಲಿ..... ಅಹಲ್ಯೆಗೆ ದೊರೆತಿಲ್ಲವೇ ಶಬರಿ ಅನುಭವಿಸಿಲ್ಲವೇ....ತುಂಬ ಸುಲಭ ಲಭ್ಯ..ಶ್ರೀ ರಾಮ...!!! ಅದಕ್ಕೇ ಅವ ರಾಮನಾದ...!!! ಹಾಂ ಅದೋ ಬಂದ.... ಕಾಲನರಮನೆಯ ಒಡೆಯ..... ಕರೆದೊಯ್ಯಬೇಕಿತ್ತು.... ಕಲಿಭೀಮ ರಾಮನನ್ನು.... ಅದಕ್ಕೇ ಬಂದ.ಬದವನಿಗೆ ಸೂಕ್ತ ಸ್ವಗತವಿತ್ತು ಸ್ಮುಚಿತಾಸನವನಿತ್ತ ರಾಮ.. ಯಾರಯ್ಯಾ...? ನೀನು? ನಾನು ಇದುವರೆಗೆ ನೋಡದ ಮುಖ...!!!! ಅಯ್ಯೋ ಅವನ ಮುಖ ಆಗಾಗ ಕಾಣಿಸಬಲ್ಲುದೇ? ಕಾಲಯಮ.. ಅವ...!!! ಯಮನ ದರ್ಶನ ಅಡಿಗಡಿಗೆ ಬಯಸುವರೇ... ಒಮ್ಮೆ ಮುಖ ಕಂಡರೆ....ಅದು ಇವನ ಕೊನೇಯ ನೋಟ ಮುಗಿದು ಹೋಗುತ್ತದೆ.... ಮುಂದೆ ಆ ಮುಖ ಕಾಣಸಿಗದು...ಇದು ಸಾಮಾನ್ಯರಿಗೆ ಮಾತ್ರ..ಆದರೆ..ಇಲ್ಲಿ ಸರ್ವ ದರ್ಶಕನಾದ ಶ್ರೀರಾಮನೇ ಕೇಳುತ್ತಿದ್ದಾನೆ... ನೋಡಿಲ್ಲ ನಿನ್ನ ಮೋರೆಯನ್ನು ಎಂದು. ......
ಮಹಾ ಬಾಹೋ........ ನನ್ನನರಿಯೆಯಾ..... ಇಷ್ಟು ಬೇಗ ಮರೆತು ಹೋಯಿತೇ..... ಅಂದರೇ..ಅಂದರೆ... ನೀನೂ ಮರೆತೆಯಾ .... ಓಹ್..ನಾನೇ ಮರೆತಿದ್ದೆ... ನೀನು ರಾಮನಲ್ಲವೇ.....ಅದು ಮರೆವಲ್ಲ...!!! ಮರೆತಂತೆ ನಟಿಸುತ್ತಿದ್ದೀಯಾ...ಇರಲಿ.... ಇದೋ ನಾನು ಬಂದುದು.... ಬೇಡ...ಇಲ್ಲಿ ಬೇಡಾ..... ಒಂದು ಏಕಾಂತ ಬೇಕು.... ಅಲ್ಲಿ ನಾನು ಮತ್ತು ನೀನು..ಅಷ್ಟೇ.... ಇದು ಈ ರಾಜ್ಯದ ಸುಖದುಃಖದ ವಿಚಾರವಲ್ಲಾ... ಅದೋ ಅದು ಆ ರಾಜ್ಯದ್ದು.... ಹೇಳು ಭಟರಿಗೆ... ಏಕಾಂತವೇರ್ಪಡಿಸು ನಾನೆಲ್ಲವನ್ನೂ ಹೇಳಿ ಹಗುರಾಗುತ್ತೇನೆ... ಹೌದು...ಇದು ಭಾರದ ವಿಷಯವೇ.... ಸಗ್ಗದ ಸಿರಿಯ ಭಾರ.... ಯಕ್ಷ,ಕಿನ್ನರ,ಕಿಂಪುರುಷಾದಿಗಳ ದುಃಖದ ಭಾರ ಆ ದಿವಿಜೇಂದ್ರನ ಕಣ್ಣಿರಿನ ಭಾರ ಹಾಗಾಗಿ ಯೇಕಾಂತ ಬೇಕು....ರಾಮ ತನ್ನ ಭಟರಿಗನುಜ್ಞೆಯನಿತ್ತ.... ಹೋಗಿ ಆ ನನ್ನ್ನ ತಮ್ಮ ಲಕ್ಷ್ಮಣನ ಬರ ಹೇಳು..... ಹೌದು... ಇಂಥಾ ಏಕಾಂತ ಅವನಿಗಲ್ಲದೇ ಬೇರಾರಿಗೆ ಸಿಕ್ಕೀತು.... ಲಕ್ಷ್ಮಣ... ಓಡೋಡಿ ಬಂದ ಅಣ್ಣನಾಗಮನಕ್ಕೆ ಕಾಣದವ ಈಗ ಬಂದ..... ಬರಲೇ ಬೇಕಿತ್ತು ...ಇದು ರಾಜಾಜ್ಞೆ...... ಅಣ್ಣನಾಜ್ಞೆಯೊಂದೇ ಅಲ್ಲವಲ್ಲಾ....ಬಂದವ ಅಲ್ಲಿ ಕುಳಿತಿರುವ ಕಾಲನ ಕಂಡು ಹುಬ್ಬೇರಿಸಿದ...? ಯಾರು ಈತ....
ಅಣ್ಣನನುಜ್ಞೆಯಂತೇ ತಮ್ಮ ಲಕ್ಷ್ಮಣ ಏಕಾಂತವೇರ್ಪಡಿಸಲು ಹೋದ.... ಯೆಂಥಾ ಏಕಾಂತ ........ ರಾಮನಿಗಾಗಿ ಏರ್ಪಡಿಸಬೇಕಾದ ಏಕಾಂತ ಅದು.... ಕಾವಲು ಕಾಯಬೇಕು..... ಯಾರೂ ಒಳನುಳಲನುವಿಲ್ಲದ ಕಾವಲು...!!! ಯೆಂಥಾ ಕಾವಲು ಹಾಂ...ಸರ್ಪಗಾವಲು... ಸರ್ಪಗಾವಲು... ಲಕ್ಷ್ಮಣನ ಕಾವಲು ಹೌದು ಅವನೇ ನಿಂತ.....ಅಣ್ಣಾ..... ಇದೋ ನಿನಗಾಗಿ ನಿನ್ನವರ ಮಾತುಕತೆಗಾಗಿ ಸ್ವತಹ ನಾನೇ ಕಾವಲು ಕಾಯ್ದು ನಿಲ್ಲುತ್ತೇನೆ... ನಿನನ್ನು ಕಾವಲು ಕಾಯುವುದೇ...?? ಹೆಹ್ಹೆಹ್ಹೇ... ಹೌದು ನನ್ನ ಕೆಲಸವೇ ಅದಲ್ಲವೇ..... ಆ ಕ್ಷೀರ ಸಾಗರದಲ್ಲಿ ನಾನೇ ಅಲ್ಲವೇ ನಿನ್ನನ್ನು ಕಾಯುತ್ತಿರುವವನು... ಅದೇ ಅದೇ ಸರ್ಪಗಾವಲಿದೆ ಇಲ್ಲೂ....
ಬಂದರಿಬ್ಬರೂ..ಅಲ್ಲಿಗೆ. ರಾಮ ಕಾಲಪುರುಷ ಈರ್ವರೂ ಲಕ್ಷ್ಮಣನ ಏಕಾಂತ ಭವನಕ್ಕೆ ಅಡಿಯಿಟ್ಟರು.... ಇದೋ... ರಾಮಾ ಹೇಳು ಆನಿನ್ನ ತಮ್ಮನಿಗೆ... ಇದು ಏಕಾಂತ... ಯಾರೆಂದರೆ ಯಾರಿಗೂ ಎಡೆಯಿಲ್ಲ ಇಲ್ಲಿ... ಹಾಗೆ ಕಾವಲಿಗೆ ಹೇಳು... ಒಂದು ವೇಳೆ ಕಾವಲು ಕಲುಷಿತಗೊಂಡರೆ....... ತಮ್ಮ ತಮ್ಮನೆಂಬ ಮಮಕಾರ ಬೇಡ..... ಇದು ಸಾಮಾನ್ಯವಾದ ಮಾತಲ್ಲ... ಲೋಕ ರಕ್ಷಕನಾಗಿ ಇರಬೇಕಾದವ ನೀನು ನಿನ್ನ ಜೊತೆಗೆ ಆಡುವ ಮಾತು ನನ್ನದು ಏಕಾಂತಕ್ಕೆ ಭಂಗವಾದರೆ....ಭಂಗವಾದರೇ.... ತಮ್ಮನೆಂಬ ಮೋಹ ಬಿಡು .. ಅತ್ಯುಗ್ರವಾದ ಶಿಕ್ಷೆಗೊಳಪಡಿಸು.... ಆಯಿತು ಮಹರಾಯಾ... ನಿನ್ನಿಷ್ಟದಂತೆಯೇ ಆಗಲೀ.... ಇದೋ ತಮ್ಮಾ ...ಲಕ್ಷ್ಮಣಾ... ಕಾವಲಿಗೆ ನಿಂತವ ನೀನೇ ಹೌದಲ್ಲವೋ.... ಇದೋ ಕಾವಲಿನ ಕಾಯಕದಲ್ಲಿ ಮರೆತೆಯಾದರೆ.... ತಮ್ಮಾ...ಮರೆತೆಯಾದರೆ...ದೇಹಾಂತ ಶಿಕ್ಷೆ ಕಾದಿದೆಯೆಂಬುದನ್ನು ಮರೆಯ ಬೇಡಾ...ಇದು ರಾಜಾಜ್ಞೆ,...... ನಿನ್ನಣ್ಣನಾಜ್ಞೆ... ಅಯೋಧ್ಯಾ ಸಿಂಹಾಸನದ ಬೆಳ್ಗೊಡೆಯ ಆಜ್ಞೆ..!!! ದೇಹಾಂತ ಶಿಕ್ಷೆ....
ಅಣ್ಣಾ... ಅಣ್ಣಾ... ಅದೋ..ಅದೋ ಆ ಮಾತು ನನ್ನ ಕಿವಿಯಲ್ಲಿ ಕೆಂಡದ ಮಳೆ ಸುರಿದಂತೆ ಆಗುತ್ತಿದೆ ,,, ಅಣ್ಣನಾಜ್ಞೆ,, ಆ ಬಾಲರವಿಯ ಕಿರಣಗಳೂ ಅಣ್ಣನ ಸುಡಬಾರದೆಂದೆಣಿಸಿ ಆ ತಪೋವನಗಳಲ್ಲಿ ಅಣ್ಣನ ಶಿರಕ್ಕೆ ನನ್ನ ಕೈಯ್ಯಾನಿಸಿ ನೆರಳು ನೀಡಿ ಕರೆದೊಯ್ದ ಈ ಕೈಗಳು..... ಅದೋ ಅದೋ.... ಹದಿನಾಲ್ಕು ವರ್ಷಗಳೂ ಅಣ್ಣನಿಗಾಗಿ ತೇದ ಜೀವ.... ಆದೀತು ಅಣ್ಣಾ.. ದೇಹಾಂತ ಶಿಕ್ಷೆಯೇ... ಆಗಲೀ.... ಹಹ್ಹಾಹ್ಹಾಆ..... ತಿಳಿಯಿತು ಬಿಡು.... ನಾನೇ ನಾನೇ ಹೋಗಬೇಕಲ್ಲವೇ... ಆದೀತು.. ಆದೀತು..... ರಾಮ ರಾಜ್ಯದಲ್ಲಿ ಶಿಕ್ಷೆಯನ್ನನುಭವಿಸಿದವರಾರೂ ಸಿಗರು.... ನಾನೇ ಮೊದಲಿಗೆ... ಆಯಿತು ಅಣ್ಣಾ... ಸಾಕ್ಷಾತ್ ಸರ್ಪಗಾವಲನ್ನೇ ಹಾಕುತ್ತೇನೆ..... ಯಾರು ಯಾರು ಈ ಲಕ್ಷ್ಮಣ... ? ಅದೋ...ಆ ಕ್ಷೀರಾಬ್ಧಿಯ ನೊರೆತೆರೆಗಳಿಂದ ನಿನ್ನ ವಕ್ಷಸ್ಥಳವನ್ನು ತೋಯದಂತೆ ಕಾಪಿಟ್ಟ ಲಕ್ಷ್ಮಣ... ನಿನ್ನ ತ್ರಿಭುವನ ಪಾಲಕ ಭಾರವನ್ನು ನನ್ನ ಬಲವಾದ ಶರೀರ ಹೊತ್ತಿಲ್ಲವೇ..? ಆ ಸಿರಿದೇವಿ ಭೂದೇವಿಯರು ನಿನ್ನ ಕಾಲೊತ್ತಿ ಸಾರ್ಥಕ್ಯವ ಪಡೆದಾಗ ಆ ಭಾರವನ್ನೂ ಹೊತ್ತಿಲ್ಲವೇ.... ಅಷ್ಟೇ ಅಲ್ಲ... ಚತುರ್ದಶ ಭುವನಕ್ಕೊಡೆಯನಾದ ನಿನ್ನ ಶಿರ ಆ ಭಾನುವಿನ ಕಿರಣಗಳಿಂದ ಬಿಸಿಯೇರದಂತೇ ಸಹಸ್ರ ಸಹಸ್ರ ಹೆಡೆಗಳಿಂದ ರಕ್ಷಿಸಲಿಲ್ಲವೇ ಕಾಯಲಿಲ್ಲವೇ..... ತಿಳಿಯಿತು.ಬಿಡು..ಅದೇ ಕಾವಲು.. ಅದೇ ಕಾವಲು... ಆದರೆ ಆದರೆ ಆಗದಿದ್ದರೆ...ದೇಹಾಂತ ಶಿಕ್ಷೆ.... ಅಣ್ಣಾ...ದೇಹಾಂತ ಶಿಕ್ಷೆ..ಅದನ್ನು ಹೇಗೆ ತಡೆಯಲೀ.... ಒಳಗೆ ನಡೆಯುತ್ತಿದ್ದ ಕಾಲಪುರುಷ ಮತ್ತು ಶ್ರೀ ರಾಮನ ಸಂಭಾಷಣೆ.. ಅದು ಕೇವಲ ಮಾತಲ್ಲ... ಅದು ಲೋಕವರಿಯದ ಗುಟ್ಟು.... ರಾಮಾ..... ರಾಮಾ...ಇನ್ನೂ ಮುಗಿದಿಲ್ಲವೇ...? ಮತ್ತೆ ಏಕೆ ತಡ...ಅಲ್ಲಿ ನಿನ್ನವರು ಕಾಯುತ್ತಿದ್ದಾರೆ... ನೀನು ಬರುವಿಯೆಂದು ದಿವಿಜರು ಕಾಯುತ್ತಿದ್ದಾರೆ... ಆದರೂ ಈ ಸಾಕೇತವನ್ನು ಬಿಡಲೊಲ್ಲೆಯಲ್ಲಾ...ಸಾಕು ಸಾಕು...ಇನ್ನೂ ಸಾಕೇತಕ್ಕೆ...ಬೇಕೇ... ಬಾ.. ಬಂದುಬಿಡು....ಎಂದು ಉಸುರುತ್ತಿರುವಾಗಲೇ ಬಾಗಿಲು ಕಿರ್ರನೆ ತೆರೆದ ಸದ್ದು.... ಅದೇನದೂ..ಅದೇನದೂ.... ಲಕ್ಷ್ಮಣಾ....... ಹೌದು ಲಕ್ಷ್ಮಣ ಕಾವಲಿದ್ದಾನೆ... ಏಕಾಂತ ಅದು... ಅಲ್ಲಿಗೇ ಬಂದ ದೂರ್ವಾಸರು.....!!!!! ಅವರು ದೂರ್ವಾಸರೇ.....
ಯೆಲ್ಲಿ ಯೆಲ್ಲಿ ರಾಮಾ...ರಾಮಾ....ಎಲ್ಲಿದ್ದೀಯಾ...ಇನ್ನೂ ನಿದ್ದೆಯ ಏಕಾಂತವೇ.... ಇದೋ ನಿನ್ನನ್ನೇ ಹುಡುಕಿ ಬಂದಿದ್ದೇನೆ ಯಾರು ಯಾರದು ನನ್ನನ್ನು ತಡೆವವರು..ಓಹ್..ಲಕ್ಷ್ಮಣ...!!!! ಲಕ್ಷ್ಮಣಾ..... ಇದೇನಿದು ನನ್ನ ಪರಿಚಯವಿಲ್ಲವೇ.....? ಬಿಡು ದಾರಿಯನ್ನು.... ನಾನು ಈಗಲೇ ಪ್ರಭು ಶ್ರೀರಾಮನನ್ನು ಕಾಣಬೇಕು.... ಸ್ವಾಮಿನ್... ಇದೋ.. ಇದೋ..ನಿಲ್ಲಿ ನಿಲ್ಲಿ... ಅದು ಏಕಾಂತದಲ್ಲಿದ್ದಾನೆ ಅಣ್ಣ... ಅದಾರೋ ಮಾತಾಡುತ್ತಿದ್ದಾರೆ..ಸ್ವಲ್ಪ ಸೈರಿಸಿಕೊಳ್ಳಿ.... ಆಂ.... ಈ ದೂರ್ವಾಸನೂ...ಸೈರಿಸಿಕೊಳ್ಳುವುದೇ.... ನಿಲ್ಲುವುದೇ... ನಿನಗೆ ಗೊತ್ತಿಲ್ಲಾ ನಾನಾರೆಂಬುದನರಿಯೆ ನೀನು ಘನಕಾರ್ಯವಿಲ್ಲದೇ ತಿರುಗುತ್ತಿರುವ ಬಡ ಮುನಿಯೆಂದು ಭ್ರಮಿಸಿದೆಯಾ ಬೇಡ ಬೇಡ ನನ್ನನ್ನು ತಡೆಯ ಬೇಡಾ...ಕುಲ ನಾಶ ಮಾಡಿಯೇನು... ಎಚ್ಚರಾ....!!!!!. ಹೌದು ಅದು ದೂರ್ವಾಸರ ಸಹಜ ಭಾವ.... ಸಿಟ್ಟು ಅವರ ಸುತ್ತಿಕೊಂಡೇ ಇರುತ್ತದೆ..ಅರಿವಿಲ್ಲದಿಲ್ಲ.ಆದರೂ ಅಣ್ಣನಾಜ್ಞೆ!!!..ಬಿಡಲಾದೀತೇ...ಇಲ್ಲಾ...ಇಲ್ಲಾ...ಆಹಾಂ...ಲಕ್ಷ್ಮಣಾ...ಇದೋ ದಾರಿಗಡ್ಡ ನಿಲ್ಲಬೇಡಾ...ನಿನ್ನಿಂದಾಗಿ ಇಡೀ ಅಯೋಧ್ಯೆ ಸುಟ್ಟು ಭಸ್ಮವಾಗಬೇಕೇ?... ವಿಚಾರಮಾಡು... ಬಿಡು ದಾರಿಯನ್ನು.... ಓಹೋ...ಇದು ನಾನೆಣಿಸಿದಂತೇ ಆಗುತ್ತಿದೆ.... ಈ ಲಕ್ಷ್ಮಣನಿಂದಾಗಿ ಹಿರಿಯ ಜೀವಗಳು ಕಟ್ಟಿ ಬೆಳೆಸಿದ ಈ ಅಯೋಧ್ಯೆ ಸುಟ್ಟುರಿದು ಹೋಗಬೇಕೇ... ಹೋದರೆ ಹೋಗಲಿ ಈ ಲಕ್ಷ್ಮಣನೊಬ್ಬನೇ.... ಅದೇ ಅದೇ ದೇಹಾಂತ ಶಿಕ್ಷೆ.... ಆಗಲೀ... ಬಿಡುತ್ತೇನೆ... ಒಳಹೋಗಿ... .ದೂರ್ವಾಸರು...ಒಳಸೇರಿದರು...ಬಂದರು... ಅಷ್ಟೇ..... ಅದೋ ರಾಮ ಕೂಗಿದ..ತಮ್ಮಾ......ತಮ್ಮಾ... ಮುಗಿಸಿಬಿಟ್ಟೆಯಾ.... ಏಕಾಂತವೇರ್ಪಡಿಸುವೆನೆಂದು ನಂಬಿಸಿ ಈರೀತಿ ಮಾಡಬಹುದೇ... ರಾಮಾ....ರಾಮಾ...ಇದೋ ನಾನೂ ಹೊರಡುತ್ತೇನೆ...ಬಂದ ಕಾರ್ಯವಾಯಿತಲ್ಲಾ.... ಇರಲೀ...ನಿನ್ನ ಆಜ್ಞೆಗೆ ತಕ್ಕ ಫಲ ನೀಡಲೇ ಬೇಕಲ್ಲಾ.... ನುಡಿದಂತೆ ನಡೆಯುವ ಶ್ರೀರಾಮನಲ್ಲವೇ ನೀನು..ನಡೆ ನಡೆ...ಬರುತ್ತೇನೆ... ಕಾಲ ಪುರುಷ ಸಾಗಿಹೋದ...ಆಗಬೇಕಾದ ಘನಕಾರ್ಯ ಆಗಿ ಹೋಗಿತ್ತು..ಅಲ್ಲಿ...
ತಮ್ಮಾ...ಯೆಂಥಾ ಕೆಲಸವಾಗಿಹೋಯಿತು ನಿನ್ನಿಂದ.... ಏಕೆ ಮರವೆಯಾದೆ... ಹೀಗೇಕೆ ಮಾಡಿದೆ.. ಈ ರಾಮನ ನೆರಳು ಬೇಡವಾಯ್ತೇ... ನಿನಗೇ.. ? ಅಣ್ಣಾ...ಅದು ವಿಧಿಲಿಖಿತ.... ಅದು ಅವರ ಮೊರೆ... ನಾನು ಬಲ್ಲೆ..ಬಂದವ ಯಾರು ಎಂಬುದನ್ನು... ದೇಹಾಂತ ಶಿಕ್ಷೆ ಯಾಕಾಗಿ ಎಂಬುದನ್ನೂ ಬಲ್ಲೆ..ಅಣ್ಣಾ...!!! ತಮ್ಮಾ...ಇದೋ ಈ ಅಣ್ಣನ ಆಜ್ಞೆಯನ್ನು ಮೀರಿದೆ ಎಂಬ ಅಪಖ್ಯಾತಿಗೆ ಗುರಿಯಾದೆಯಲ್ಲಾ...ಬೇಕಿತ್ತೇ ನಿನಗೇ ಬಯಸಿದೆಯಾ ಇದನ್ನೂ.... ಹೋಗು ಹೋಗು ದೂರ ಹೊರಟು ಹೋಗು ಈ ಅಯೋಧ್ಯೆ... ಈ ಅಣ್ಣ...ಯೆಲ್ಲರಿಂದ ದೂರ ಹೋಗು... !!!! ಅಣ್ಣಾ..ಅಣ್ಣಾ...ನೀನು ಹೇಳುತ್ತಿರುವೆಯಾ ಈ ಮಾತನ್ನೂ... ನಾನಿಲ್ಲದೇ ನೀನು ಇರಬಲ್ಲೆಯಾ... ತಮ್ಮಾ ಲಕ್ಷ್ಮಣಾ..ಎಂದು ಯಾರನ್ನು ಕೂಗುವೆ..? ದೂರದಲ್ಲಿ ಹೆಹ್ಹೆಹ್ಹೇ..ನಿನ್ನನ್ನೂ ಬಿಟ್ಟು ಬಹುದೂರದಲ್ಲಿ ಈ ಲಕ್ಷ್ಮಣ....ಬದುಕಿಯಾನೇ.... ಅದು ಬದುಕೇ.... ರಾಮನ ಕಂಟದಿಂದೊರಲುವ ಈ ಲಕ್ಷ್ಮಣಾ ಎಂಬ ರವದಿಂದ ದೂರಾಗಿ ಬದುಕು ಮಾಡಿಯಾನೇ ಈ ಲಕ್ಷ್ಮಣ... ಇಲ್ಲ ಇಲ್ಲ.... ಅಣ್ಣಾ...ಯಾಕೆ ಇನ್ನೂ ಯೋಚಿಸಿ ಯೋಚಿಸಿ ಮಾತಾಡುತ್ತಿರುವೆ ನಿನ್ನ ಸೇವೆಗೆ ಇರಬೇಕಾದ ನಾನು ಇನ್ನು ಇಲ್ಲಿದ್ದರೆ ಆದೀತೇ... ಹಾಹಾ...ತಿಳಿದೂ ತಿಳಿಯದಂತೆ ಹೇಳುತ್ತಿರುವೆಯಲ್ಲಾ..... ಅಲ್ಲಿದೆ...ಅಲ್ಲಿದೆ ನಮ್ಮನೆ..... ಅಲ್ಲವೇ...ನಾನು ಹೋಗಿ ಸೇರಬೇಕಾದು ಮೊದಲಲ್ಲವೇ ನಿನಗೆ ಆಸನವಾಗಿ ಮಲಗಬೇಕಲ್ಲವೇ.... ಆ ಕ್ಷೀರಾಭ್ಧಿಯಲ್ಲಿ.... ಇದೋ ಅಣ್ಣಾ...ಹೋಗುತ್ತೇನೆ.... ಬಾ..ನೀನೂ ..ತಡಮಾಡಬೇ ಡಾ...!!! ಇದೋ ಇ ಸಲಿಲ ಸರಯೂ ನನ್ನನ್ನು ಕೈಬೀಸಿ ಕರೆಯುತ್ತಿದೆ ಯಾರಿಗೂ ಹೇಳಬೇಡಾ...ಇದೋ ಇದೇ ದಾರಿಯಲ್ಲಿ ಸಾಗಿ ಹೋಗುತ್ತೇನೆ ಅದೇ ದೇಹಾಂತ ಶಿಕ್ಷೆ,,,, ನಾರಾಯಣಾ... ..ಅಲ್ಲೇ ಎತ್ತರದ ಮರವೇರಿ ಈ ಕೌತುಕವನ್ನು ನೋಡುತ್ತಿದ್ದ ಹನುಮ... ಆಹಾ.... ಎಂಥಾ ಸೋದರ ವಾತ್ಸಲ್ಯ ...ಯೆಲ್ಲ ತೋರಿಕೆಗಾಗಿ ತೋರಿದ್ದು... ನಾರಾಯಣಾ.... ಲಕ್ಷ್ಮಣ ಆ ಸರಯೂ ನದಿಯ ನೀರಿಗಿಳಿದು ಮುಳುಗಿ ಹೋದ ಮುಳುಗಿ ಹೋದ ಹಾಗೇ...ಬಾಲ ಮಾತ್ರ ಕಾಣುತ್ತಿತ್ತು ಹನುಮನಿಗೆ........!!!!!
ವಿಧೀ......... ನೀನೂ ನಾಟಕವಾಡುತ್ತೀಯಾ..? ಈ ರಾಮ... ಬದುಕಿಯಾನೇ... ಸೀತೆಯಿಲ್ಲದ ರಾಮ ಬದುಕಿದ್ದ ..ಅಭ್ಯಾಸವಾಗಿಹೋಗಿತ್ತು.... ಅದು...ಜೀವನ ಇದು ಆದರೆ ಅದು..ಅದು... ನಿಯಮ..... ಅದನ್ನು ಮೀರಲಾದೀತೇ.. ತಮ್ಮಾ ನಿನ್ನನ್ನೂ ಕಳಕೊಂಡು ಬದುಕಿದವನ ರಾಮ ಎಂದು ಕರೆದಾರೇ...ಲೋಕ ಮೆಚ್ಚೀತೇ..ನನ್ನ..ಇಲ್ಲ...ಇಲ್ಲ... ಇದೋ... ಆ ಸರಯೂ ನನ್ನನ್ನೂ ಕೂಗುತ್ತಿದ್ದಾಳೆ... ರಾಮನ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಹೋಗ್ಯದೆ... ಅಯೋಧ್ಯೆ ಮಸುಕಾಗಿ ಕಾಣುತ್ತಿದೆ ರಾಮನ ಕಣ್ಣ ಕಂಬನಿಯ ಮಸುಪಲ್ಲಿ..... ಕಾಲು ಅದುರುತ್ತಿದೆ... ಇಲ್ಲಾ ಜಾರುತ್ತಿದೆ..ಸರಯೂ..ಎಳೆಯುತ್ತಿದ್ದಾಳೆ....ಅದೋ ವಸಿಷ್ಠರೇ... ಪುರಜನರೇ... ಇದೋ ನೋಡಿ ಇಲ್ಲಿ...ಯೇನಾಗುತ್ತಿದೆ ಅಯೋಧ್ಯೆಯಲ್ಲೀ ...ಹನುಮ ಕಿರುಚುತ್ತಿದ್ದಾನೆ.. ಊಹೂಂ..ಯಾರೂ ಇಲ್ಲ ಅಲ್ಲಿ... ಮತ್ತೂ ಮೇಲೇರಿ ದಿಟ್ಟಿಸುತ್ತಾನೆ... ಅದೋ ಅಲ್ಲಿ ಆ ಸಲಿಲ ಮಂಜುಳ ನಿನಾದದಲ್ಲಿ ಲೀನವಾಗುತ್ತಿದೆ ರಾಮನ ಬಣ್ಣದ ಬದುಕು... ಕಾಲು ನೀರನ್ನು ಪಾವನಗೊಳಿಸಿತು.... ಅದೋ..ಆ ಆಜಾನು ಬಾಹುವಿನ ಬಾಹುಗಳಿ ಸರಯೂ ಸಲಿಲವ ಬರಸೆಳೆದು ಬಿಗಿದಪ್ಪುತ್ತಿವೆ....ಆಯಿತು...ಆ ವಿಶಾಲ ವಕ್ಷಸ್ಥಲ.... ಯಾವ ಸೀತಾ ಮಾತೆಗೆ ಆಸರೆಯ ಅಡರಾಗಿ ನಿಂದಿತ್ತೋ... ಅದು ಮುಳುಗುತ್ತಿದೆ... ಹೌದು ಅದೋ ನನ್ನ ಪ್ರಭು ಶ್ರೀರಾಮ... ರಾಮಾ..ರಾಮಾ..ರಾಮಾ...... ನಿನ್ನ ಭಾಗ್ಯ ನನಗಿಲ್ಲದೇ ಹೋಯಿತೇ...ಮಾತೆ ಸೀತೆಯ ವರ.... ಮರಣವಿಲ್ಲದ ಬದುಕು..ಛೇ... ರಾಮಾ... ಅದೋ.ಅದೋ..ಆ ಕಪಿವೀರರೂ ಮುಳುಗುತ್ತಿದ್ದಾರೆ.... ಅಯ್ಯೋ ಇವರಿಗೇನಾಗಿದೆ..ಅದೋ ಆ ಮುವತ್ಮೂರು ಕೋಟಿ ಕಪಿವೀರರೂ ಅಲ್ಲಿ ಇಳಿಯುತ್ತಿರುವರಲ್ಲಾ... ಹಾಹ್ಹಾಹ್ಹಾ...ಹೌದದು ಹೋಗಲೇಬೇಕು ಮೂವತ್ಮೂರು ಕೋಟಿ ಕಪಿವೀರರು ಯಾರು ? ಯಾರವರು..? ಓಹ್.... ದೇವಾದಿ ದೇವತೆಗಳೂ ಮುಳುಗುತ್ತಿದ್ದಾರಲ್ಲಾ.... ಅದೋ ರಾಮನ ಕಣ್ಣು ಅಯೋಧ್ಯೆಯ ಜನರತ್ತಲೇ ನೆಟ್ಟಿದೆ ಅವರಿಗಭಯವಿತ್ತಾಂತೇ... ತೋರುತ್ತಿದೆ... ರಾಮಾ... ಹೋಗುತ್ತಿರುವೆಯಾ...ಕಪಟ ನಾಟಕ ಸೂತ್ರಧಾರೀ.... ಬಾ.... ಬುವಿಗಿಳಿದು ಬಾ.... ಕಾಯುವಿಕೆ ತಪ್ಪುವುದಿಲ್ಲ.... ಕಾಯುತ್ತೇನೆ..ಕಾಯುತ್ತೇನೆ.... ಅದೋ ಪುರಜನರಿಗೆ ಅರುಹಬೇಕಲ್ಲವೇ..... ಬೇಗ ಹೇಳ್ ಬೇಕು.... ರಾಮ ಸರಯೂವಿನಲ್ಲಿ ತೇಲಿ ತೇಲಿ ಹೋದ ವಿಚಾರವನ್ನು ಲವ ಕುಶರಿಗೆ ಹೇಳಬೇಕು...ಇದೋ ಇಳಿದು ಹೋಗುತ್ತೇನೆ ರಾಮಾ..ರಾಮಾ....ರಾಮಾ.... ಇನ್ನೆಲ್ಲಿ ರಾಮ...ಎಲ್ಲೆಲ್ಲಿ..ರಾಮ..ಎಲ್ಲೆಲ್ಲೂ................ರಾಮನೇ.... ಎದೆಬಗೆದು ನೋಡುತ್ತೇನೆ... ರಾಮಾ... ನೀನ್ಯಾಕೋ ...ನಿನ್ನ ಹಂಗ್ಯಾಕೋ...ಹೋಗು ಹೋಗು...ನಿನ್ನ ನಾಮದ ಬಲವೊಂದಿದ್ದರೆ ಸಾಕೋ...ರಾಮಾ..ರಾಮಾ......
||ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ|
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಭವೇತ್||