ಭಾರತೀಯ ಇತಿಹಾಸವನ್ನು ಇದಮಿತ್ಥಂ ಎಂದು ಇದುವರೆಗೆ ಯಾರೂ ಕಂಡು ಕೇಳಿದ್ದಿಲ್ಲ. ಇಲ್ಲಿನ ಇತಿಹಾಸಗಳೆಲ್ಲವೂ ಕೆಲವು ಶಾಸನಾಧಾರಿತವೂ ಕೆಲವು ಉಲ್ಲೇಖಗಳ ಆಧಾರಿತವೂ ಆಗಿದ್ದರೂ ಅನೇಕ ಐತಿಹಾಸಿಕ ಘಟನೆಗಳು ಕಪೋಲಕಲ್ಪಿತವಾದವುಗಳೇ ಆಗಿವೆ. ಇಂತಹ ಕಪೋಲ ಕಲ್ಪಿತ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನನಗೆ ನಮ್ಮ ಈ ಹವ್ಯಕ ಪರಂಪರೆ ಮತ್ತು ಇತಿಹಾಸವನ್ನು ಕೆದಕುವ ಮನಸ್ಸಾಯಿತು. ಇದನ್ನೇ ಎಳೆಯಾಗಿರಿಸಿಕೊಂಡು ನನ್ನ ಅನೇಕ ಹಿರಿಯರು ಹಾಗೂ ಗೆಳೆಯರೊಂದಿಗೆ ಚರ್ಚಿಸಿದಾಗ ಬಂದ ಕೆಲವು ಮಾಹಿತಿಗಳನ್ನು ಇಲ್ಲಿ ಕಲೆಹಾಕುವ ಪ್ರಯತ್ಮ ಮಾಡಿದ್ದೇನೆ. ಅದೇ "ನಾವು ಮತ್ತು ನಮ್ಮ ಇತಿಹಾಸ"
( ಇಲ್ಲಿ ಬರುವ ವಿವರಣೆಗಳೆಲ್ಲವೂ ಸತಾರ್ಕಿಕವೇ ಹೊರತೂ ಯಾವುದೇ ಆಧಾರಗಳನ್ನು ಹೊಂದಿರುವುದಿಲ್ಲ.)
ನೇರವಾಗಿ ಇತಿಹಾಸದ ಆಳಕ್ಕಿಳಿಯೋಣ... ಕಂಚಿಯ ಪಲ್ಲವರ ಮೇಲೆ ಕುಪಿತನಾದ ಕದಂಬರ ವಂಶಜನಾದ ಮಯ್ಯೂರ ಶರ್ಮ ಮಯ್ಯೂರ ವರ್ಮನಾದ ನೆಂಬ ಇತಿಹಾಸವನ್ನು ತಾವೆಲ್ಲರೂ ತಿಳಿದಿರುತ್ತೀರಿ. ಅಂತೆಯೇ ಅವನು ಈಗಿನ ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು ಈ ನೆಲವನ್ನು ಆಳಿದನೆಂಬುದು ಎಲ್ಲರಿಗೂ ತಿಳಿದಿದೆ. ಈ ಮಯ್ಯೂರ ವರ್ಮ ಮೂಲತಃ ಗೋದಾವರೀ ತೀರದ ಅಹಿಚ್ಛತ್ರದವನು ಮೇಲಾಗಿ ಬ್ರಾಹ್ಮಣ ( ಪೂರ್ವ ನಾಮ ’ಮಯ್ಯೂರ ಶರ್ಮ...!) ಇವನು ಕರ್ನಾಟಕದ ಬನವಾಸಿಯಲ್ಲಿ ತನ್ನ ಸಂಸ್ಥಾನವನ್ನು ಕಟ್ಟಿಕೊಂಡಮೇಲೆ ಇಲ್ಲಿ ಯಜ್ಞ ಕಾರ್ಯಗಳನ್ನು ನಡೆಸುವ ಸಲುವಾಗಿ ತನ್ನ ಮೂಲಸ್ಥಾನವಾದ ಅಹಿಚ್ಛತ್ರದಿಂದಲೇ ಅನೇಕ ಬ್ರಾಹ್ಮಣರುಗಳನ್ನು ಕರೆಸಿದ್ದ. ಬಂದ ಬ್ರಾಹ್ಮಣರು ತಮ್ಮ ಯಜ್ಞ ಕಾರ್ಯಾನಂತರ ಪುನಃ ಅಹಿಚ್ಛತ್ರಕ್ಕೇ ಹೊರಟು ಹೋಗಿದ್ದರು. ಆದರೆ ಅವನ ಮಗನಾದ ರವಿವರ್ಮ ಮತ್ತು ಮೊಮ್ಮಗನಾದ ಕಾಕುಸ್ಥವರ್ಮನು ತಮ್ಮ ಕಾಲದಲ್ಲಿ (ಅಂದರೆ ಸುಮಾರು ಕ್ರಿ.ಶ. 450-480) ಒಂದು ಮಹಾ ಯಜ್ಞವನ್ನು ನಡೆಸುವ ಸಲುವಾಗಿ ಮತ್ತು ತಮ್ಮ ರಾಜ್ಯದಲ್ಲಿ ಅಗ್ನಿಹೋತ್ರಾದಿಗಳು ನಡೆದುಕೊಂಡು ಬರಬೇಕು ಎಂಬ ಕಾರಣಕ್ಕಾಗಿ ಪುನಃ ಅಹಿಚ್ಛತ್ರದಿಂದ 7 ಗೋತ್ರದ ಸುಮಾರು 32 ಬ್ರಾಹ್ಮಣರನ್ನು ಬನವಾಸಿಗೆ ಕರೆಸಿದ. ಅವರಲ್ಲಿ ಕೆಲವು ಗೋತ್ರದವರು ಕಡಿಮೆ ಸಂಖ್ಯೆಯಲ್ಲಿದ್ದರು. ಇನ್ನು ಕೆಲವು ಗೋತ್ರದವರು ಬಹುಸಂಖ್ಯೆಯಲ್ಲಿದ್ದರು. ಬನವಾಸಿಯಲ್ಲಿ ಮಹಾಯಾಗವನ್ನು ನಡೆಸಿದ ನಂತರ ಆ ಬ್ರಾಹ್ಮಣರನ್ನು ತನ್ನದೇ ಸಾಮ್ರಾಜ್ಯದ ಒಂದು ಪ್ರದೇಶವಾದ ಈಗಿನ ’ಹೈಗುಂದ’ ಪ್ರಾಂತಕ್ಕೆ ಕರೆದೊಯ್ದು ಅಲ್ಲಿ ಅವರ ಯಜ್ಞ ಕಾರ್ಯಗಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಇರಿಸಿದ. ( ಯಜ್ಞಕಾರ್ಯಗಳಿಗೆ ಮೂರು ಕಡೆ ನೀರನ್ನು ಒಂದು ಕಡೆ ಭೂಮಿಯನ್ನೂ ಹೊಂದಿರುವ ಪ್ರದೇಶವು ಅತ್ಯಂತ ಪ್ರಶಸ್ಥ ಎಂಬುದು ವೈದಿಕ ಮತ)
ಹೀಗೆ ಹವ್ಯ-ಕವ್ಯಗಳನ್ನು ನಡೆಸುವ ಬ್ರಾಹ್ಮಣರು ಈ ಪ್ರದೇಶಕ್ಕೆ ಬಂದುದರಿಂದ ಇದನ್ನು "ಹೈಗುಂದ" ಎಂದು ಕರೆಯಲಾಯಿತು. ಅವರು ಹೈಗುಂದದಲ್ಲಿ ಯಜ್ಞಾದಿ ಕಾರ್ಯಗಳನ್ನು ನಡೆಸಿದರೂ ವಾಸಸ್ಥಳವು ಅದಕ್ಕೆ ಸಮೀಪವಿರುವ ಈಗಿನ ಅಗ್ರಹಾರ ( ಹೊನ್ನಾವರ- ಕುಮಟಾ ಮುಖ್ಯ ರಸ್ತೆಯಲ್ಲಿರುವ ) ವಾಗಿತ್ತು.
ಈಗ ಅಲ್ಲಿಗೆ ಬಂದ ಬ್ರಾಹ್ಮಣರಲ್ಲಿ ಈ ಯಜ್ಞ ಕಾರ್ಯವನ್ನು ನೋಡಿಕೊಳ್ಳುವ ಸಲುವಾಗಿ ಕೆಲವೊಂದು ಉಪಾಧಿಗಳನ್ನು ಅವರಲ್ಲಿಯೇ ಮಾಡಿಕೊಂಡರು ಅದು ಹೇಗೆಂದರೆ,

ಸಭಾಹಿತ - ಇವರು ಕಾಶ್ಯಪ ಗೋತ್ರದವರು
ಇವರದ್ದು ಒಂದೇ ಕುಟುಂಬ ಇದ್ದು ಒಮ್ದು ರೀತಿಯಲ್ಲಿ ಇದು ಧರ್ಮ ಪೀಠದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಹೆಗಡೆ - ಇವರು ವಾಸಿಷ್ಠ ಗೋತ್ರದವರು.
ಇವರು ಯಜ್ಞಕ್ಕೆ ಬೇಕಾದ ಯಾಜಮಾನ್ಯವನ್ನು ಹೊಂದಿದ್ದರು.
ಹೆಬ್ಬಾರ - ಇವರು ಗೌತಮ ಗೋತ್ರದವರು.
ಇವರದ್ದು ಯಜ್ಞದಲ್ಲಿ ವೇದಿಕೆಯ ನಿರ್ಮಾಣ ಹೊಣೆಯಾಗಿತ್ತು.

ಶಾನುಭೋಗ - ಇವರು ವಿಶ್ವಾಮಿತ್ರ ಗೋತ್ರದವರು
ಇವರದ್ದು ಲೆಕ್ಕಪತ್ರಗಳನ್ನು ಅರಸನಿಗೆ ಕೊಡುವ ಜವಾಬ್ದಾರಿಯಾಗಿತ್ತು.

ದೀಕ್ಷಿತ - ಇವರು ಜಮದಗ್ನಿ ಗೋತ್ರದವರು
ಇವರದ್ದು ಯಜ್ಞವನ್ನು ನಡೆಸಿಕೊಡುವುದಾಗಿತ್ತು.
ಇವರದ್ದು ಯಜ್ಞವನ್ನು ನಡೆಸಿಕೊಡುವುದಾಗಿತ್ತು.
ಮಧ್ಯಸ್ಥ - ಇವರು ಆಂಗೀರಸ ಗೋತ್ರದವರು.
ಇವರು ಈ ಬ್ರಾಹ್ಮಣರಲ್ಲಿ ಒಡಮೂಡುವ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸುವುದಾಗಿತ್ತು.
ಯಾಜಿಗಳು - ಇವರು ಭಾರದ್ವಾಜ ಗೋತ್ರದವರಾಗಿದ್ದರು.
ಇವರದ್ದು ಯಜ್ಞ ಕಾರ್ಯವನ್ನು ನೆರವೇರಿಸುವುದಾಗಿತ್ತು
ಹೀಗೆ ಯಜ್ಞ ಸಂಬಂಧಿಯಾದ ಎಲ್ಲ ಉಪಾಧಿಗಳನ್ನೂ ಹಂಚಿಕೊಂಡು ಸಭಾಹಿತರ ಧರ್ಮ ಮಾರ್ಗದರ್ಶನದಲ್ಲಿ ಜೀವನವನ್ನು ಸಾಗಿಸಿಕೊಂಡು ಬರುತ್ತಿದ್ದರು
{ Dr. N.R.Nayak ರವರ ’ಉತ್ತರಕನ್ನಡದ ಜಾನಪದ’ ಎಂಬ ಉದ್ಗ್ರಂಥದಲ್ಲಿ ಉಲ್ಲೇಖಿಸಿರುವಂತೆ ಕಾಕುಸ್ಥವರ್ಮನ ಕಾಲದಲ್ಲಿ ಅಹಿಚ್ಛತ್ರದಿಂದ ಬಂದ 32 ಬ್ರಾಹ್ಮಣರು ಇಲ್ಲಿಗೆ ಬಂದ ನಂತರದಲ್ಲಿ ಅಗ್ರಹಾರ ಮತ್ತು ಸುತ್ತಲಿನ ಆಕಾಲದಲ್ಲಿ ವಾಸವಿದ್ದ ’ಹಾಲಕ್ಕಿ’ ಜನಾಂಗದ ಹೆಮ್ಮಕ್ಕಳನ್ನು ವಿವಾಹವಾಗಿ ತಮ್ಮ ಸಂತಾನವನ್ನು ಬೆಳೆಸಿದರು ಎಂದಿದ್ದರೆ. Dr. G.L.Hegde/ Dr.L.R.Hegde ಯವರ ಪ್ರಕಾರ ಬಂದ 32 ಜನ ಕೇವಲ ಬ್ರಾಹ್ಮಣರಲ್ಲ ಅವರು ಸಪತ್ನೀಕರಾಗಿಯೇ ಇಲ್ಲಿಗೆ ಬಂದಿದ್ದರು. ಏಕೆಂದರೆ ಆಕಾಲದಲ್ಲಿ ಯಜ್ಞಕ್ಕೆ ಸಪತ್ನೀಕರಾಗಿಯೇ ಹೋಗಬೇಕಿತ್ತು. ಎಂಬ ಎರಡು ವಾದಗಳಿವೆ.}
************************************************************************
ಹೀಗೇ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹವ್ಯಕರು ತಮ್ಮ ಬ್ರಾಹ್ಮಣ್ಯವನ್ನು ಮೆರೆಯುತ್ತಿರುವ ಸಂದರ್ಭದಲ್ಲಿ ಆ ಇಡೀ ಬ್ರಾಹ್ಮಣ ಸಮುದಾಯದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಸಭಾಹಿತರು ಕಾಣಿಸಿಕೊಂಡರು ಮತ್ತು ಎಲ್ಲ ಬ್ರಾಹ್ಮಣರೂ ಸಭಾಹಿತರನ್ನು ಗುರು ಪೀಠವೆಂದು ನಡೆದುಕೊಳ್ಳುತ್ತಿದ್ದರು. ನಂತರದಲ್ಲಿ...
ಬ್ರಾಹ್ಮಣರ ಸಂತತಿ ಬೆಳೆಯುತ್ತಿದ್ದ ಹಾಗೇ ಈಗಿನ ಗೋಕರ್ಣ ಮತ್ತು ಗೋಕರ್ಣಕ್ಕೆ ತತ್ಸಂಬದ್ಧವಾದ ಧಾರೇಶ್ವರ ಗುಣವಂತೆ ಇಡಗುಂಜಿ ಮುಂತಾದ ಭಾಗಗಳಿಗೆ ತಮ್ಮ ವಿಸ್ತಾರವನ್ನು ಹೊಂದಿದರು.ಆ ವೇಳೆಗೆ ದಕ್ಷಿಣದಲ್ಲಿ ಕೋಟ, ಕೋಟೇಶ್ವರ, ಶಿವಳ್ಳಿ ಮೊದಲಾದ ಬ್ರಾಹ್ಮಣ ಕುಟುಂಬಗಳು ಬಂದಾಗಿತ್ತು.. ನಂತರದಲ್ಲಿ ಗುಣವಂತೆ ಪ್ರಾಂತದಲ್ಲಿ ವಾಸಿಸುತ್ತಿದ್ದ ಕೆಲ ಕುಟುಂಬಗಳು ಈಗಿನ ದಕ್ಷಿಣ ಕನ್ನಡದ ’ವಿಟ್ಳ’ ಪ್ರಾಂತಕ್ಕೆ ವಲಸೆ ಹೋದರು ಅದಲ್ಲದೇ ಕೇರಳ ಪ್ರಾಂತಕ್ಕೂ ಕೂಡಾ ಈ ಹವ್ಯಕರು ವಲಸೆ ಹೋದರೆಂಬುದು ತಿಳಿದುಬರುತ್ತದೆ. ಹಾಗೆ ಹೋದ ಒಂದು ಕುಟುಂಬ ಕೇರಳದ ’ಕಾಲಟಿ’ ಎಂಬಲ್ಲಿ ನೆಲೆ ನಿಂತಿತ್ತು. ಅಲ್ಲಿನ ಒಬ್ಬ ಹವ್ಯಕ ಮಾಣಿಗೆ ಬಾಲ್ಯ ವಿವಾಹ ಏರ್ಪಟ್ಟು ಆ ಹೆಣ್ಮಗಳಿಗೆ ಒಂದು ಪುತ್ರ ಸಂತಾನವಾಗುತ್ತಿದ್ದಂತೆ ಗಂಡನು ತೀರಿಕೊಳ್ಳಲಾಗಿ ( ಶ್ರೀ ಶಂಕರರ ಚರಿತ್ರೆಯಲ್ಲಿ ಎಲ್ಲಿಯೂ ಅವರ ತಂದೆಯ ಕುರಿತಾದ ಯಾವ ಮಾಹಿತಿಯೂ ಲಭ್ಯವಾಗುವುದಿಲ್ಲ.) ಅವಳು ಬಾಲವಿಧವೆಯಾದಳು ಮತ್ತು ಅವಳ ಮಗನು ಬಾಲ್ಯದಲ್ಲಿಯೇ ಸಂನ್ಯಾಸವನ್ನು ಸ್ವೀಕರಿಸಿ ಸಕಲ ವೇದಗಳನ್ನೂ ಅಧ್ಯಯನ ಮಾಡಿದವನಾಗಿ ವಿಖ್ಯಾತನಾದ ಶ್ರೀ ಶಂಕರನೆನಿಸಿಕೊಂಡನು ಎಂಬುದು ತಥಾ ಕಥಿತ ಇತಿಹಾಸ ಅದರಂತೆ ವೇದ ವೇದಾಂಗಗಳನ್ನು ವೈದಿಕ ಧರ್ಮವನ್ನು ಈ ದೇಶದಲ್ಲಿ ನೆಲೆಗೊಳಿಸಲು ಇಡೀ ದೇಶವನ್ನು ಪರ್ಯಟನೆ ಮಾಡಿ ವೈದಿಕ ಮತವನ್ನು ಪ್ರಸಾರ ಮಾಡಿದ. ಶ್ರೀ ಶಂಕರರು ತಮ್ಮ ಮೂಲಸ್ಥಾನವಾದ ಈ ಹವ್ಯಕ ಪ್ರದೇಶಕ್ಕೆ ಬಂದು ಅಲ್ಲಿನ ಅದುವರೆಗೆ ಧರ್ಮ ಪೀಠದಂತೆ ವರ್ತಿಸುತ್ತಿದ್ದ ಸಭಾಹಿತರನ್ನು ಗುರು ಪೀಠದ ಮುಖಾಂತರ ಧರ್ಮ ಕಾರ್ಯಗಳನ್ನು ನಡೆಸಿಕೊಂಡು ಬರುವಂತೆ ಕೇಳಿಕೊಂಡಾಗ ತಮ್ಮ ಸುಪರ್ದಿಯಲ್ಲಿದ್ದ ಧರ್ಮ ಪೀಠದ ಮಾನ್ಯತೆಯನ್ನು ಶ್ರೀ ಶಂಕರರ ಆಣತಿಯಂತೆ ಗೋಕರ್ಣದಲ್ಲಿ ಸಂಸ್ಥಾಪಿತವಾದ ಶ್ರೀ ಶಂಕರರ ಪ್ರ-ಪ್ರಥಮ ಅದ್ವೈತ ಪೀಠವೆಂದು ಘೋಷಿತವಾದ " ಸರ್ವತಂತ್ರ ಸ್ವತಂತ್ರ" ಇತ್ಯಾದಿ ಬಿರುದಾಂಕಿತವಾದ ಹವ್ಯಕ "ಮಂಡಲಾಧೀಶ್ವರ" ಪೀಠಕ್ಕೆ ಸರ್ವ ಸಮರ್ಪಣೆಯನ್ನು ಮಾಡಲಾಯಿತು.ಶ್ರೀ ಶಂಕರರ ಪ್ರಥಮ ಶಿಶ್ಯರಾದ ಶ್ರೀ ಸುರೇಶ್ವರಾಚಾರ್ಯರ ಶಿಷ್ಯರಿಗೆ ಈ ಧರ್ಮ ಪೀಠದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಆಕಾರಣಕ್ಕಾಗಿಯೇ ಇಂದಿಗೂ ಅನೂಚಾನವಾಗಿ ನಡೆಸಿಕೊಂಡು ಬಂದ ಪದ್ಧತಿಯನುಸಾರ ಈ ಸಭಾಹಿತ ಕುಟುಂಬಕ್ಕೆ ದೀಪಗಾಣಿಕೆ- ಪಾದಗಾಣಿಕೆ ಮೊದಲಾದ ಕಾಣಿಕೆಗಳಿಂದ ಮನಾಯಿ ಇರುತ್ತದೆ. ಅಲ್ಲದೇ ಸಭಾಹಿತ ಕುಟುಂಬವನ್ನು ’ಸರ್ವ ಮಾನ್” ಕುಟುಂಬ ಎಂದು ಸಾರಲಾಗಿದೆ. ಅಲ್ಲದೇ ಈ ಕುಟುಂಬದ ಸದಸ್ಯರು ಶ್ರೀ ಮಠಕ್ಕೆ ಆಗಮಿಸಿದಾಗ ಶ್ರೀ ಗುರುಗಳು ಸ್ವತಃ ಪೀಠದಿಂದ ಇಳಿದು ಬಂದು ಸಭಾಹಿತರನ್ನು ಕರೆದೊಯ್ದು ತಮ್ಮ ಬಲಭಾಗದಲ್ಲಿ ಆಸನವನ್ನು ಹಾಕಿ ಕೂರಿಸುವ ಕ್ರಮ ಇದೆ. ಅಲ್ಲದೇ ಸಭಾಹಿತರ ಕುಟುಂಬದಲ್ಲಿ ವರ್ಷದಲ್ಲಿ ಒಂದು ಗುರು ಪಾದುಕಾ ಪೂಜೆ ಹಾಗು ಗುರು ಭಿಕ್ಷವನ್ನು ಮಠದ ವತಿಯಿಂದಲೇ ನಡೆಸಿಕೋಂಡು ಬರಬೇಕೆಂಬ ವಿಧಿಯೂ ಇರುತ್ತದೆ..

ಹೀಗೇ ಅನೇಕ ವರ್ಷಗಳ ವರೆಗೆ ಗೋಕರ್ಣವನ್ನು ಮೂಲಸ್ಥಾನವನ್ನಾಗಿಸಿಕೊಂಡು ನಡೆದುಕೊಂಡು ಬಂದ ಧರ್ಮ ಪೀಠವು ಗೋವಾದ ಗೋಮಾಂತಕರ ದಾಳಿಯನ್ನೆದುರಿಸಲಾಗದ ಅಂದಿನ ಇಲ್ಲಿನ ರಾಜ ಪ್ರಭುತ್ವವು ಗೋಕರ್ಣದಲ್ಲಿದ್ದ ಶ್ರೀ ಗುರು ಮಠವನ್ನು ಈಗಿನ ಕಡತೋಕೆಯ ಮಧ್ಯಭಾಗದಲ್ಲಿರುವ ಆ ಕಾಲದ ಹೆಬ್ಬಾರರುಗಳು ವಾಸವಾಗಿದ್ದ "ಹಳೆ ಮಠ" ಎಂಬಲ್ಲಿಗೆ ತಂದು ಅದನ್ನು " ಶ್ರೀ ರಘೂತ್ತಮ ಮಠ" ಎಂದು ಪುನಃ ಮರುನಾಮಕರಣ ಮಾಡಿ ಶ್ರೀಗಳನ್ನು ಇರಿಸಲಾಯಿತು. ಆದರೆ ಅಲ್ಲಿ ವಾಸವಾಗಿದ್ದ ಯತಿಗಳೊಬ್ಬರು ಅಲ್ಲಿನ ಕೆರೆಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿ ಆಗಿನ ಹೆಬ್ಬಾರನ ಹೆಂಡತಿ ರಜಸ್ವಲೆಯಾಗಿದ್ದು ಅವಳು ಸ್ನಾನಕ್ಕೆ ಅದೇ ಕೆರೆಗೆ ಬಂದುದನ್ನು ಕಂಡು ಕುಪಿತರಾದ ಶ್ರೀಗಳು ವಂಶ ನಿರ್ವಂಶವಾಗಲೆಂದು ಶಪಿಸಿದರು. ಅಲ್ಲಿಂದೀಚೆಗೆ ಅಲ್ಲಿರುವ ಹೆಬ್ಬಾರ ಕುಟುಂಬವು ನಿರ್ನಾಮಗೊಂಡಿತು. ಈಗಲೂ ಅಲ್ಲಿ ಆ ಹೆಬ್ಬಾರರುಗಳು ವಾಸವಾಗಿದ್ದ ಬಗ್ಗೆ ದಾಖಲೆಗಳು ಹಾಗೂ ಹೆಬ್ಬಾರ ದೇವಸ್ಥಾನವೆಂದೇ ಕರೆಯಲ್ಪಡುವ ಒಂದು ದೇವಾಲಯವೂ ಇದೆ. ಹೀಗೆ ಶಾಪವನ್ನಿತ್ತ ಶ್ರೀಗಳು ಮುಂದೆ ಅದೇ ಕೆರೆಯನ್ನು ಉಪಯೋಗಿಸುವುದು ತರವಲ್ಲವೆಂದು ಹತ್ತಿರದಲ್ಲೇ ಇರುವ ಈಗಿನ ಮಠದ ಸಮೀಪಕ್ಕೆ ಹೋಗಿ ಅಲ್ಲಿ ಕುಟೀರವನ್ನು ಕಟ್ಟಿಕೊಂಡು ವಾಸಮಾಡತೊಡಗಿದರು ಎಂಬುದು ತಿಳಿದುಬರುತ್ತದೆ. ಆ ಕಾಲದ ಅಲ್ಲಿನ ಮಾಡಳಿಕನಾದ ಚಂದ್ರಸೇನನಿಗೂ ಶ್ರೀ ಮಠಕ್ಕೂ ಆಗಿನ ಸ್ವಾಮಿಗಳ ಶೀಘ್ರಕೋಪದ ಕಾರಣದಿಂದಾಗಿ ಅಷ್ಟು ಒಟ್ಟಂದದ ವ್ಯವಹಾರವಿರಲಿಲ್ಲ..!
ಇಲ್ಲಿಗೆ ಸುಮಾರು 28 ಯತಿ ಪರಂಪರೆಯು ಕಾಲವಾದುದಾಯಿತು. ಈಗ ಇತಿಹಾಸದ ದಿಕ್ಕು ಬದಲಾಗುತ್ತದೆ. ಇದು ತಾರ್ಕಿಕವಾದುದರಿಂದ ಯಾರೂ ಬೇಸರಗೊಳ್ಳುವ ಅಗತ್ಯವಿಲ್ಲ. ಸತ್ಯದೆಡೆಗೆ ಸಾಗುವುದಕ್ಕೊಂದು ದಾರಿ ಅಷ್ಟೇ.
ಈಗ ನಾವು ಶ್ರೀ ಪೀಠ ಸ್ವರ್ನವಳ್ಳಿಯ ಇತಿಹಾಸದ ಕಡೆಗೆ ಸ್ವಲ್ಪ ನೋಡೋಣ.
"ಸ್ವರ್ನವಳ್ಳಿ" ಇದು ಈಗಿರುವ ಸ್ಥಳದಲ್ಲಿಯೇ ಪ್ರಾರಂಭವಾದ ಧರ್ಮ ಪೀಠವಲ್ಲ. ಶ್ರೀ ರಘೂತ್ತಮ ಮಠದ ಇತಿಹಾಸ ಮತ್ತು ಯತಿ ಪರಂಪರೆಯನ್ನು ಮತ್ತು ಶ್ರೀ ಸಂಸ್ಥಾನ ಸ್ವರ್ನವಳ್ಳಿಯ ಪೀಠ ಮತ್ತು ಯತಿ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ನಮಗೆ ಹಿಂದಿನ 6 ತಲೆಮಾರಿನವರೆಗಿನ ಯತಿಗಳ ಬಗ್ಗೆ ಯಾವುದೇ ಮಾಹಿತಿ ಸರಿಯಾಗಿ ಲಭ್ಯವಾಗುವುದಿಲ್ಲ.
ನಾನು ಮೇಲೆ ತಿಳಿಸಿದಂತೆ ಹಳೇಮಠದಿಂದ ನಿರ್ಗಮಿಸುವಾಗ ಆ ಕಾಲದಲ್ಲಿದ್ದ ಶ್ರೀ ನರಸಿಂಹ ಭಾರತೀ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿಯಾಗಿತ್ತು. ಆದರೆ ಅವರೊಳಗಿನ ಭಿನ್ನಾಭಿಪ್ರಾಯದಿಂದಾಗಿ ಕಿರಿಯ ಶ್ರೀಗಳು ಮಠವನ್ನು ತೊರೆದು ಸಮೀಪದಲ್ಲೇ ಇರುವ " ಮೇಲಿನ ಮಠ" ಎಂಬಲ್ಲಿಗೆ ತಮ್ಮ ವಾಸಸ್ಥಳವನ್ನು ಬದಲಾಯಿಸಿಕೊಂಡರಲ್ಲದೇ ಮೊದಲಿನ ಮಠಕ್ಕೂ ತಮಗೂ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಆಕಾಲದ ಚಂದಾವರ ಪ್ರಾಂತದ ಮಾಂಡಳಿಕನಾದ ಚಂದ್ರಸೇನನಿಗೆ ಅರುಹಲಾಗಿ. ಅವನು ಈ ಗುರ್ ಪೀಠಕ್ಕೂ ಒಂದು ಸ್ಥಾನವನ್ನು ಕಲ್ಪಿಸಿ ತನ್ನ ಒಕ್ಕಲುತನವನ್ನು ಈ ಪೀಠಕ್ಕೇ ಸಮರ್ಪಿಸಿ ಮಠಕ್ಕೆ ಬೇಕಾದ ಆದಾಯಕ್ಕಾಗಿ ಸಮೀಪದ "ಅಂಸಳ್ಳಿ" ಹಾಗೂ "ಬಾದಳ್ಳಿ" ಎಂಬೆರಡು ಗ್ರಾಮಗಳನ್ನು ಉಂಬಳಿಯಾಗಿ ನೀಡಿ ಮೇಲಿನ ಮಠವೆಂಬ ಪ್ರದೇಶದಲ್ಲಿ ಮಠವನ್ನೂ ನಿರ್ಮಿಸಿಕೊಟ್ತನು. ಅಲ್ಲಿ ಬಂದ ಯತಿಗಳು ಅಕಾಲ ಮೃತ್ಯುವಿಗೆ ತುತ್ತಾಗಲಾಗಿ ಮುಂದೆ ರಾಜನ ಇಚ್ಛೆಯಂತೆ ಶ್ರೀ ಕ್ಷೇತ್ರ ಮತ್ತು ಆಮ್ನಾಯ ಪೀಠವಾದ ಶೃಂಗೇರಿಯಿಂದ ಸನ್ಯಾಸ ದೀಕ್ಷೆ ಕೊಡಿಸಿ ಅಲ್ಲಿಗೆ ಓರ್ವ ಪೀಠಾಧಿಪತಿಯನ್ನು ನಿಯಮಿಸಿಕೊಳ್ಳಲಾಯಿತು. ಮತ್ತು ಮುಂದೆ ಅದು "ಸರಸ್ವತೀ ಪೀಠ"ವಾಗಿ ಬೆಳೆದು ಬಂತು...!
ಕಾಲಕ್ರಮದಲ್ಲಿ ಅಗ್ರಹಾರ ಹಾಗೂ ಸುತ್ತ ಮುತ್ತಲು ವಾಸಿಸುತ್ತಿದ್ದ ಬ್ರಾಹ್ಮಣ ( ಹವ್ಯಕ) ಕುಟುಂಬಗಳು ಜೀವನ ನಿರ್ವಹಣೆಗಾಗಿ ಘಟ್ಟದ ಮೇಲಿನ ಪ್ರಾಂತಗಳಿಗೂ ಹೋಗತೊಡಗಿದರು. ಈ ಮೇಲಿನ ಮಠಕ್ಕೆ ನಡೆದುಕೊಳ್ಲುತ್ತಿದ್ದ ಅನೇಕ ಕುಟುಂಬಗಳು ಹೋಗಿ ಸಿರ್ಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ನೆಲೆಸಲಾಗಿ ಇಲ್ಲಿ ಅಂಸಳ್ಳಿ ಬಾದಳ್ಳಿ ಪ್ರದೇಶಗಳಿಂದ ಬರುವ ಆದಾಯವೂ ಕ್ಷೀಣಿಸುತ್ತಾ ಬದಿರುವುದರಿಂದ ಮೇಲಿನ ಮಠದಲ್ಲಿ ಇರುವ ಶ್ರೀಗಳು ಇಲ್ಲಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲೇ ತಂಗಿದ್ದರು ಇಲ್ಲಿಗೆ ಸುಮಾರು 3 ಜನ ಯತಿಗಳು ಈ ಮೇಲಿನ ಮಠದಲ್ಲಿ ವಾಸವಿದ್ದ ಬಗ್ಗೆ ಕುರುಹುಗಳು ಲಭ್ಯವಿವೆ. ಅಲ್ಲದೇ ಇನ್ನೊಂದು ವಿಶೇಷವೆಂದರೆ, ಈ ಮೇಲಿನ ಮಠದಲ್ಲಿ ಇರುವ ಶ್ರೀ ಸರ್ವಜ್ಞೇಂದ್ರ ಸರಸ್ವತಿ, ಶ್ರೀ ವಿಶ್ವ ವಂದ್ಯ ಸರಸ್ವತಿ ಮುಂತಾದ ಮೂರು ಯತಿ ಪರಂಪರೆಯನ್ನೊಳಗೊಂಡ ಮುಂದೆ ಸ್ವರ್ನವಲ್ಲೀ ಕ್ಷೇತ್ರದಲ್ಲಿ ವಿಜೃಂಭಿಸಿದ ಯತಿಗಳನ್ನು ಹೊರತು ಪಡಿಸಿದರೆ ಈ ಎರಡೂ ಶ್ರೀ ಮಠಗಳ ಯತಿ ಪರಂಪರೆಯು ಒಂದೇ ಆಗಿರುವುದು ಸೋಜಿಗ.! ಹೀಗೆ ಮೇಲಿನ ಮಠದಲ್ಲಿ ಆದಾಯದ ಕೊರತೆಯುಂಟಾಗಿ ಶ್ರೀಗಳು ಕಾಶೀ ಕ್ಷೇತ್ರದ ಕಡೆಗೆ ಹೋದರು. ಮತ್ತು ನಂತರದಲ್ಲಿ ಈ ಘಟ್ಟದ ಮೇಲಿನ ಹವ್ಯಕರು ತಮ್ಮ ಊರಿಗೆ ಕರೆತಂದು ಈಗಿನ ಸ್ವರ್ನವಳ್ಳಿಯಲ್ಲಿ ಮಠವನ್ನು ನಿರ್ಮಿಸಿ ಅಲ್ಲಿ ಶ್ರೀಗಳ ಆವಾಸಕ್ಕೆ ವ್ಯವಸ್ಥೆಯನ್ನು ಮಾಡಿದರು ಅಲ್ಲದೇ ಅಲ್ಲಿಗೆ ನಡೆದುಕೊಳ್ಲಲು ಪ್ರಾರಂಭಿಸಿದರು. ಈ ಸ್ವರ್ನವಳ್ಳಿ ಮಠಕ್ಕೆ ಚಂದ್ರಸೇನನ ಕಾಲದಿಂದ ಇಲ್ಲಿ ಕಡತೋಕೆಯ ಮೇಲಿನ ಮಠಕ್ಕೆ ನಡೆದುಕೊಳ್ಳುತ್ತಿದ್ದ ರಾಮ ಕ್ಷತ್ರಿಯ ಸಮಾಜದವರೂ ಅಲ್ಲಿ ಹೋಗಿ ತಮ್ಮ ಗುರುಕಾಣಿಕೆಯನ್ನು ಸಮರ್ಪಿಸಿ ಬರಲಾರಂಭಿಸಿದರು....
ಹವ್ಯಕರ ಇನ್ನೊಂದು ಧರ್ಮ ಪೀಠ- "ನೆಲೆಮಾವು ಮಠ"
ಹೈಗುಂದ ಪ್ರಾಂತವು ಅದಾಗಲೇ ಶರಾವತೀ ನೀರಿನ ಪ್ರಭಾವದಿಂದಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿತ್ತು. ಆ ಕಾಲಕ್ಕೆ ಅಲ್ಲಿ ಧರ್ಮ ಸೂಕ್ಷ್ಮಗಳನ್ನು ತೀಲಿಸುವ ಸಲುವಾಗಿ ಒಂದು ಪೀಠ ಸ್ಥಾಪನೆಯಾಗಿತ್ತು. ಚತುರಾಮ್ನಾಯ ಪೀಠಸ್ಥರಾದ ಶ್ರೀ ಶೃಂಗೇರಿ ಸಂಸ್ಥಾನದ ವತಿಯಿಂದ ಸಂನ್ಯಾಸ ದೀಕ್ಷೆಯನ್ನು ಪಡೆದ ಯತಿವರರೊಬ್ಬರು ಸಾಮ ವೇದಿಗಳು..! ಅಲ್ಲಿ ನೆಲೆ ನಿಂತಿದ್ದರು ಮತ್ತು ಆ ಭಾಗದ ಜನರಿಗೆ ಧರ್ಮ ಗುರುವೆನ್ನಿಸಿಕೊಂಡು ತಮ್ಮ ಧರ್ಮಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಅಲ್ಲಿಯೂ ಆದಾಯ ಕ್ಷೀಣವಾಗಿರುವುದರಿಂದ ಮತ್ತು ಆ ಭಾಗದಲ್ಲಿ ಆಗ ತಲೆದೋರಿದ ಮೈಲಿ ಬೇನೆ ರೋಗದ ಕಾರಣ ಶ್ರೀಗಳು ವಿಚಲಿತರಾಗಿ ಘಟ್ಟದ ಪ್ರಾಂತಕ್ಕೆ ತಮ್ಮ ಆವಾಸವನ್ನು ಬದಲಿಸಲು ಮುಂದಾದರು. ಆಗ ಅವರು ಈಗಿನ ಸಿದ್ದಾಪುರದ ಸಮೀಪದ " ನೆಲೆ ಮಾವು" ಎಂಬಲ್ಲಿಗೆ ತೆರಳಿ ಅಲ್ಲಿ ವಾಸಮಾಡತೊಡಗಿದರು.
ಹೀಗೆ ಹವ್ಯಕರದ್ದಾಗಿ ಮೂರು ಧರ್ಮ ಪೀಠಗಳು ನಮ್ಮ ಸಮಾಜದ ಧರ್ಮ ಜಾಗೃತಿಯನ್ನು ಮುನ್ನಡೆಸಿಕೊಂಡು ಬಂದವು.
ಇಷ್ಟಾದರೂ ಇದರ ಇತಿಹಾಸ ನಿರ್ಣಾಯಕವಲ್ಲ. ಇನ್ನೂ ನಮಗೆ ಬೇಕಾದಷ್ಟು ಕಪೋಲ ಕಲ್ಪಿತ ಕಥೆಗಳು ದೊರೆಯುತ್ತಿವೆ. ಅವುಗಳನ್ನು ತಾರ್ಕಿಕವಾಗಿ ಕಾಲಾನುಕ್ರಮಕ್ಕೆ ಹೊಮ್ದಿಸಿ ಪರಾಮರ್ಶಿಸಿ ಬರೆಯಬೇಕಿದೆ.