प्रज्वालितॊ ज्ञानमयप्रदीपः

ಮಂಗಳವಾರ, ಸೆಪ್ಟೆಂಬರ್ 25, 2012

ಯಕ್ಷ ಪ್ರಶ್ನೆ ....???

ಯಕ್ಷ ಪ್ರಶ್ನೆ ....???

ಯಕ್ಷ :-    ಸೂರ್ಯನು ಉದಯಿಸುವಂತೆ ಮಾಡುವುದು ಯಾವುದು ?
              ಅವನ ಸುತ್ತಲೂ ಸಂಚಾರ ಮಾಡುವವರು ಯಾರು ?
              ಅವನನ್ನು ಮುಳುಗುವಂತೆ ಮಾಡುವವರು ಯಾರು ?
              ರವಿಯು ಪ್ರತಿಷ್ಠಿತನಾಗಿರುವುದೆಲ್ಲಿ ?
ಧರ್ಮ :- ಪರಬ್ರಹ್ಮವು   ಸೂರ್ಯನನ್ನು ಉದಯಿಸುವಂತೆ ಮಾಡುವುದು .
             ಅವನ ಸುತ್ತಲೂ ದೇವಾನು ದೇವತೆಗಳು ಸಂಚಾರ ಮಾಡುವವರು.
             ಕಾಲಧರ್ಮವು ಅವನನ್ನು ಮುಳುಗುವಂತೆ ಮಾಡುವುದು.
             ಸಕಲ ಜೀವಕ್ಕೂ ಕಾರಣನಾದ ಅವನು ಸತ್ಯದಲ್ಲಿ ಪ್ರತಿಷ್ಠಿತನಾಗಿರುವನು.

ಯಕ್ಷ :-   ಯಾವುದರಿಂದ ಮಾನವನು ಶ್ರೋತ್ರೀಯನೆನಿಸುವನು ?
             ಯಾವುದರಿಂದ ಮಹತ್ತನ್ನು ಸಾಧಿಸಬಲ್ಲನು ?
             ಯಾವುದರಿಂದ ದ್ವಿತೀಯ ವ್ಯಕ್ತಿತ್ವವು ಬರಲು ಸಾಧ್ಯ ?
             ಮಾನವನು ಹೇಗೆ ಚತುರನೆನಿಸಬಲ್ಲನು ?

ಧರ್ಮ :- ಶೃತಿವಾಕ್ಯಗಳನ್ನು ಕೇಳುವುದರಿಂದ ಶ್ರೋತ್ರೀಯನಾಗುವನು.
              ತಪೋಬಲದಿಂದ ಮಹತ್ತನ್ನು ಸಾಧಿಸಬಲ್ಲನು.
              ದ್ವಿತೀಯ ವ್ಯಕ್ತಿತ್ವವನ್ನು ಧೈರ್ಯವು ನೀಡಬಲ್ಲುದು.
              ಜ್ಞಾನ ವೃದ್ಧರ, ವಯೋವೃದ್ಧರ ಸಂಗ - ಸೇವನೆಯಿಂದ ಮಾನವನು ಚತುರನೆನಿಸುವನು.