प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 8, 2012

* ನನಗೇ ಬುದ್ಧಿ ಬಂದಿತ್ತು...!

    ನಾನು ಸಣ್ಣವನಾಗಿದ್ದೆ ಆಗ,( ಇಷ್ಟು ದೊಡ್ಡಾದ್ರೂ ಇನ್ನೂ ಬುದ್ಧಿ ಬಂಜಿಲ್ಯನಾ ಹೇಳಿ ಯೆನ್ನಪ್ಪ ಬೈದಾಗಲೇ ನಾನು ದೊಡ್ಡವನಾಗಿಬಿಟ್ಟಿದ್ದೆ) ಒಂದು ದಿನ ಪಕ್ಕದೂರಿನಲ್ಲಿರುವ ಒಂದು ಕಲ್ಲು ಬಸವನ ನೋಡಲೆಂದು ಒಂದು ನಮ್ಮ ಗುಂಪು ದಾರಿ ಸವೆಸಿತು. ನಾಮುಂದು ತಾಮುಂದು ಎಂದು ಓಡಿಕೊಂಡೇ ಹೋದೆವು ಅನ್ನಿ. ಅಂತೂ ಗುಡ್ಡ ಇಳಿದು ಹೊಳೆ ದಾಟಿ ಮತ್ತೊಂದು ಗುಡ್ಡ ಏರಿದರೆ ಅಲ್ಲಿ ಒಂದು ಪಾಳುಬಿದ್ದ ದೇವಸ್ಥಾನದ (ಅದು ಈಶ್ವರನ ದೇವಾಲಯ ಇತ್ತೆಂದು ಕಾಣುತ್ತದೆ) ಮುಂಭಾಗದಲ್ಲಿ ಒಂದು ದೊಡ್ಡ ಕಲ್ಲಿನ ಬಸವ ಇತ್ತು.. ನಾವು ಹೋದದ್ದು ಏಪ್ರಿಲ್-ಮೇ ರಜೆಯಲ್ಲಿ, ತುಂಬಾ ಸೆಕೆ... ಆದರೂ ಗುಡ್ಡದಲ್ಲಿ ಸಿಗುವ ತರಹೇವಾರಿ ಹಣ್ಣುಗಳ ರುಚಿನೋಡಬಹುದಾದ ಕಾಲ. ಮುಳ್ಳೇ ಹಣ್ಣು,ಕರಜಲು ಹಣ್ಣು.ಗೇರ ಹಣ್ಣು, ಬೊಕಳೇ ಹಣ್ಣು. ವಾಂಟೇ ಹಣ್ಣು,ಸಂಪಿಗೆ ಹಣ್ಣುಅಂಡಮುರುಗಲ ಹಣ್ಣು, ಬಿಳಿಮುಳ್ಳೇಹಣ್ಣು, ಹೀಗೇ ಹೊಟ್ಟೆ ತುಂಬುತ್ತಿತ್ತು. ಆದರೂ ಸೆಕೆ...ಅಬ್ಬಾ...
    ಅಂತೂ ಬಸವನ ಕಾಲ ಬುಡಕ್ಕೆ ಬಂದಾಯ್ತು. ಅತ್ತಿತ್ತ ನೋಡಿದೆವು ಯೇನೂ ವಿಶೇಷವಿಲ್ಲ ಬರೇ ಬೋಳು ದೇವಾಲಯ.. ಅದೂ ಪಾಳು. ಪೂಜೆಯಿಲ್ಲ,ನೈವೇದ್ಯವಿಲ್ಲಾ...ಅಸಲಿಗೆ ಅಲ್ಲಿ ದೇವರೇ ಇಲ್ಲಾ.. ಅಂತೂ ಬಸವನೊಬ್ಬ ಇದ್ದ. ಅಲ್ಲಿ ಇಲ್ಲಿ ತಿರುಗಿ ನೋಡುತ್ತಿದ್ದೆವು.. ನಮ್ಮ ಗ್ಯಾಂಗಿನ ನಾಯಕ ದಿವಾಕರ !!! ಬಲು ಜೋರು, ಅಷ್ಟೇ ಹಾಸ್ಯ ಸ್ವಭಾವದವ.. ಅವ...ಇದ್ದಕ್ಕಿದ್ದಂತೇ.."ಅಯ್ಯೊಯ್ಯೋ... ಅಬ್ಬಾ...." ಎಂದು ಕೈ ಕುಡುಗುತ್ತ ನಮ್ಮ ಕಡೆಗೆ ಬಂದ . ನಮ್ಮೊಟ್ಟಿಗಿನ ಕಿತ್ತೂರು ರಾಣಿ ಮಂಗಲ ಕೇಳಿದಳು "ಅಣ್ಣ.. ಯೆಂತದೂ..." ಅದಕ್ಕೆ ದಿವು.." ಇಲ್ಲ್ ನೋಡು ,'ಆಬಸವನ ಮೂಗಲ್ಲಿ ಒಂದ್ ಬಾರಿ ಕೈ ಬೆರಳಾಕು..ನೀನು... ಏಷ್ಟ್ ತಂಪೂ..ಆಹಾಹಾ..... ' ಅಂದ.. ಮಂಗಲಾ ಘಾಟಿ. "ಹೌದಾ... ನಾನೂ ಕೈ ಹಾಕುತ್ತೇನೆ ಹಾಗಾದರೆ'' ಎಂದು ಅವಳೂ ಬೆರಳು ತೂರಿಸಿದಳು.. ಅಮ್.. ಅಯ್ಯೊಯ್ಯೋ..ಎಷ್ಟ್ ತಂಪಲ್ಲವಾ..? ಏ ರಾಮೂ... ಇಲ್ಲ್ ಬಾ..ನೋಡು...ಇಲ್ಲಿ ಕೈ.ಹಾಕೂ...ನೀನೂ... ಅಹಾ...ತಂ..ಪೂ... ಎಂದಳು ಕೈ ಉಜ್ಜಿಕೊಳ್ಳುತ್ತ........ನನಗ್ಯಾಕೋ ಅನುಮಾನಾ..... ಮೊದಲಿಂದಾನೂ ಹಾಗೇ ನಾನು ಯಾವುದನ್ನೂ ನಂಬೋ ಗಿರಾಕಿ ಅಲ್ಲಾ... ಅದಕ್ಕೇ..ನಾನು ಮತ್ತೊಬ್ಬ ನಮ್ಮ ಅಣ್ಣ ದತ್ತಣ್ಣನಿಗೆ ಕೈಹಾಕಲು ಸೂಚಿಸಿದೆ. ಅವನಿಗೆ ಅದಾಗಲೇ ಮಂಗಳ ಕಣ್ಸನ್ನೆ ಮಾಡಿ ಆಗಿತ್ತು... ಅವ ಕೈ ಹಾಕಿದೋನು... ಅಮ್ಮಾ..ಅಯ್ಯೊಯ್ಯೋ...ಅದೆಷ್ಟು ತಂ....ಪೂ..ಅನ್ನುತ್ತಲೇ ಕೈ ಹಿಂದಕ್ಕೆಳೆದ.....ಆದರೂ...ಯಾಕೋ,,ಅನುಮಾನ ನನಗೆ.... ಏಕೆಂದರೆ ಈ ಮಂಗಲ ನನ್ನ ಓರಗೆಯವಳು.. ನಾವು ಮೂರ್ನಾಲ್ಕುಜನ ಸೇರಿ ಹೋಗುತ್ತಿದ್ದಾಗ ಹಲಸಿನ ಮರ ಹತ್ತಿ ಹಲಸಿನ ಹಣ್ಣು ಕೆಡವಿ ಬಿರಿದು ತಿನ್ನುತ್ತಿದ್ದೆವು ಆಗ ಅವಳು ಎಲ್ಲರಿಗಿಂತ ಮೊದಲೇ ಮೇಲೆ ಹತ್ತಿಬಿಡುತ್ತಿದ್ದಳು..ನಮಗೆಲ್ಲ..ಓ ..ಇವಳು ಹಣ್ಣು ಕೆಳಗೆ ಕೆಡವುತ್ತಾಳೆ ನಾವೆಲ್ಲ ಪಾಲು ಮಾಡಿ ತಿಂದರಾಯಿತು. ಎಂದುಕೊಂಡಿದ್ದರೆ... ಇವಳು ಮೇಲೇನೇ ಹಣ್ಣನ್ನು ಬಿರಿದು ತಿನ್ನೋದಕ್ಕೇ ಕುಳಿತುಬಿಡುತ್ತಿದ್ದಳು ನಾವು ಮೇಲೆ ನೋಡುತ್ತ ಜೊಲ್ಲುಸುರಿಸಿದ್ದೇ ಲಾಭಾ... ಬೇಳೆ ಮಾತ್ರ ಕೆಳ್ಗೆ ಉದುರುತ್ತಿತ್ತು...ಥತ್ತೇರಿಕೇ..
   ಈ ಎಲ್ಲ ಅನುಭವಗಳೇ ನನ್ನನ್ನು ಅವಿಶ್ವಾಸಿಯನ್ನಾಗಿ ಮಾಡಿದ್ದು.... ಅಂತೂ ಎಲ್ಲರೂ ಬಸವನ ಮೂಗಿಗೆ ಕೈ ಬೆರಳು ತೂರಿಸಿ ಅಮ್ಮಾ,ಅಯ್ಯೊಯ್ಯೋ,,ತಂಪೂ..ಎಲ್ಲಾ ಹೇಳಿದ್ದು ನೋಡಿ ನನಗೂ ತಡೆಯಲಾಗಲಿಲ್ಲಾ... ಸಾಲದ್ದಕ್ಕೆ ಸೆಕೆ ಬೇರೆ ತಂಪಾದರಾಗಲೀ ಎನ್ನುವ ಯೋಚನೆ ಬಂದು ಏನಾದರಾಗಲೀ ಮೊದಲು ಒಂದು ಚಿಕ್ಕ ಕೋಲನ್ನು ಬಸವನ ಮೂಗಿನೊಳಕ್ಕೆ ತೂರಿಸಿ ತಿರುವಿದೆ ನೋಡಿ....... ಆಗ ಅಲ್ಲಿಂದ  ಪುಳಕ್ ನೆ ಬಿತ್ತು ನೋಡಿ ಒಂದು ಕರೇ ಚೇಳು..... ಆಹಾಹಾ..ಈ ಖರ್ಮದವರು ನನ್ನನ್ನು ಹಳ್ಳಕ್ಕೇ ಹಾಕ ಬೇಕೆಂದಿದ್ದರು...! ಮಗ ನಾನು ಬೀಳುವವನೇ...? ಇಷ್ಟಾಗುವಾಗ ಈ ಖಳ್ಳನನ್ನ ಮಕ್ಕಳು ಬಸವನ ಬಾಲ ಅಳೆಯುತ್ತಿದ್ದರು...ಮುಸಿ ಮುಸಿ ನಗುತ್ತಾ....
     ಇದುವರೆಗೂ ಯೆಲ್ಲ ಇವರು ಆಹಾಹಾ ಎಂದದ್ದು ತಂಪಾಗಿ ಅಲ್ಲ ...! ಕೈಬೆರಳಾಕಿದಾಗ ಆ ಕರಿ ಚೇಳು ಮಾಡಿತ್ತಲ್ಲಾ ಇವರ ಬೆರಳಿಗೆ ಸರ್ಜರಿನಾ.... ಆದ್ರೂ ಬಡ್ಡೀಮಕ್ಕಳು ಅಯ್ಯೊಯ್ಯೊ ತಂಪೂ ಎಂದೇ ಬಡಕೊಂಡರಲ್ಲಾ..!!! ಆಮೇಲೆ ಒಬ್ಬೊಬ್ಬರ ಕೈಬೆರಳು ನೋಡಿದರೇ..... ಬಾಳೇಕಾಯಿ ಆದ ಹಾಗಿತ್ತು...! ಈ ಯೆಲ್ಲಾ ಮಂಗನಾಟಗಳ ಮುಗಿಸಿ ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದರೆ.... ಹೌದಾ... ನಿನಗೇನೂ ಆಗಿಲ್ಲವಲ್ಲಾ,,,, ಇದನ್ನೇ ಹೇಳೂದು ದೊಡ್ಡವರ ಲಕ್ಷಣ ಅಂತಾ.... ಬುದ್ಧಿ ಬಂದಾಗ ಹಿಂಗೆಲ್ಲಾ ಆಗುವುದಿಲ್ಲಾ ತಂತಾನೇ ವಿಚಾರ್ ಮಾಡುವ ಮನಸ್ಸು ಆಗುತ್ತದೆ . ಎಂದು ಹೇಳಿದಾಗ ನಾನು ನಿಜವಾಗಲೂ 'ದೊಡ್ಡವನಾಗಿದ್ದೇನೆ'...! ನನಗೂ 'ಬುದ್ಧಿ ಬಂದಿದೇ' ಅಂದುಕೊಂಡಿದ್ದು.

* "ಕಲ್ಪನಾ ದಾರಿದ್ರ್ಯ"

ಒಂದು ದಾರಿಯಲ್ಲಿ ಪಥಿಕನೋರ್ವ ಬರುತ್ತಿದ್ದ. ದಾರಿಯಂಚಿನ ಮರದ ಕೆಳಗೆ ಕುಳಿತ ಓರ್ವ ಭಿಕ್ಷುಕ ತನ್ನೆದುರು ಇದ್ದ ಅಲ್ಯೂಮೀನಿಯಂ ತಟ್ಟೆಯಲ್ಲಿ ಇರುವ ಯಾರೋ ಕೊಟ್ಟ ರೊಟ್ಟಿಯನ್ನು ಚೂರು ಮಾಡಿ ಕೈಗೆ ತೆಗೆದುಕೊಂಡು ಇನ್ನೊಂದು ಕೈಯ್ಯಲ್ಲಿ ಅಜ್ಜಿಕೊಂಡು ಬಾಯಿಗಿಡುತ್ತಿದ್ದ. ಈ ಚಟುವಟಿಕೆಯನ್ನು ಸುಮಾರು ದೂರದಿಂದಲೂ ಗಮನಿಸಿಕೊಂಡು ಬರುತ್ತಿದ್ದ ಆ ಪಥಿಕ ಭಿಕ್ಷುಕನ ಹತ್ತಿರ ಬಂದು ಕೇಳಿದ. "ಅಯ್ಯಾ, ಆವಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ, ಅದೇನೋ ರೊಟ್ಟಿಯ ಚೂರನ್ನು ನಿನ್ನ ಒಂದು ಬರಿಗೈಗೆ ಅಜ್ಜಿ ಅಜ್ಜಿ ತಿನ್ನುತ್ತಿರುವೆಯಲ್ಲಾ ಏಕೆ..?" ಅದಕ್ಕೆ ಭಿಕ್ಷುಕ " ಅಣ್ಣಾ, ನನಗೆ ಈ ರೊಟ್ಟಿಯನ್ನು ಕೊಟ್ಟವರು ನೆಂಚಿಕೊಳ್ಳಲು ಏನನ್ನೂ ಕೊಡಲಿಲ್ಲ , ನನ್ನ ಹತ್ತಿರ ಹಾಕಿಕೊಳ್ಳಲು ಚೂರು ಉಪ್ಪೂ ಇಲ್ಲ, ಯೇನು ಮಾಡೋದು ಖಾಲಿ ತಟ್ಟೆ ರೊಟ್ಟಿ ತಿನ್ನಲಾಗೋದಿಲ್ಲಾ,ಸಪ್ಪೆ, ಹಾಗಾಗಿ ಈ ಕೈಯ್ಯಲ್ಲಿ ಉಪ್ಪು ಇದೆ ಎಂದು ಭಾವಿಸಿಕೊಂಡು ನೆಂಚಿ ನೆಂಚಿ ತಿನ್ನುತ್ತಿದ್ದೇನೆ" ಎಂದ. ಇದನ್ನು ಕೇಳಿದ ಆ ಪಥಿಕನಿಗೆ ಅನಿಸಿತು'ಅಯ್ಯೋ ಖರ್ಮವೇ.... ಇವರಿಗೆ ಎಷ್ಟು ಮಾಡಿದರೂ ಅಷ್ಟೇ.... ಉದ್ಧಾರವಾಗುವುದಿಲ್ಲಾ.. ಅಲ್ಲಾ... ಈ ಬರಿಗೈಯಲ್ಲಿ ಉಪ್ಪು ಇದೇ ಎಂದು ನೆಂಚಿ ತಿನುವುದರ ಬದಲು ತುಪ್ಪ-ಸಕ್ಕರೆಯೇ ಇದೆ ಎಂದುಕೊಂಡು ತಿನ್ನಬಹುದಿತ್ತಲ್ಲಾ... ಅದೂ ದಾರಿದ್ರ್ಯವೇ..... ಇದನ್ನೇ ಅಲ್ಲವೇ "ಕಲ್ಪನಾ ದಾರಿದ್ರ್ಯ...!" ಎನ್ನುವುದೂ.... ಅಂದುಕೊಂಡು " ಆಯಿತಪ್ಪಾ...... ಹಾಗೇ ಆಗಲೀ..." ಎನ್ನುತ್ತ ಮುಂದೆ ಸಾಗಿದ...
.......ನೀವೇನಂತೀರಿ........

ಶನಿವಾರ, ಏಪ್ರಿಲ್ 7, 2012

* ಸಾಹಿತ್ಯ ಮತ್ತು ಸಂಸ್ಕೃತಿ: ಸೊಡರು....!!


ಸಂಸ್ಕೃತಿ

      - ಸಾಹಿತ್ಯ

                  ಒಂದು ಮಂಥನ..(Shankara Bhat Baalya)

     ಸಾಹಿತ್ಯ ಮತ್ತು ಸಂಸ್ಕೃತಿ:ಮನುಷ್ಯರಾದ ನಮಗೆ, ನಮ್ಮಲ್ಲಿ ಸಂಚಯನಗೊಳ್ಳುವ ಅನುಭವಗಳನ್ನು ಬೇರೆಯವರೆದುರು ತೋಡಿಕೊಳ್ಳುವುದರಲ್ಲಿ ಒಂದು ಬಗೆಯ ಸುಖವಿದೆ. ಈ ಸುಖಕ್ಕೆ. ನಮ್ಮೊಳಗಿನ ಅನುಭವಗಳ ಒತ್ತಡದವೇದನೆಗೆ ಒದಗುವಬಿಡುಗಡೆ ಒಂದು ಕಾರಣವಾದರೆ, ಅದನ್ನು ಹತ್ತು ಜನದ ಜತೆಗೆ ಹಂಚಿಕೊಳ್ಳುವುದರಿಂದ ಬರುವ 
ಸಮಾಧಾನಇನ್ನೊಂದು ಕಾರಣವಿರಬಹುದು. ಹೀಗೆತನ್ನಲ್ಲಿನಅನುಭವಗಳನ್ನುಸಮುಚಿತವಾದ ಭಾಷಾ ಮಾಧ್ಯಮದ ಮೂಲಕಪರಿಣಾಮಕಾರಿಯಾಗಿಬಿಡುಗಡೆ ಮಾಡಿಕೊಳ್ಳುವ ಕಲೆಗಾರಿಕೆಯನ್ನು ಸಾಹಿತ್ಯ ಎಂದು ಕರೆಯಬಹುದು.
    ಸಾಹಿತ್ಯ ನಿರ್ಮಿತಿ, ಸಾಹಿತ್ಯ ಅಧ್ಯಯನದಿಂದ ಆಗುವ ಕೆಲಸವಲ್ಲ ; ಸಾಹಿತ್ಯ ನಿರ್ಮಿತಿ ಸಾಹಿತಿಯೊಬ್ಬನ ಜೀವನದ 
ಅನುಭವದಿಂದ ಆಗತಕ್ಕದ್ದು. ಸಮಕಾಲೀನ ಬದುಕಿನೊಂದಿಗೆ ಹೀಗೆ ಸಂಬಂಧಿಸಿಕೊಂಡಂತಹ ಸಾಹಿತಿಗೆ ಮೊದಲು 
ಪ್ರಸ್ತುತವಾದದ್ದು ತನ್ನ ಸಮಕಾಲೀನತೆಯಲ್ಲಿ ತನ್ನ ಜತೆಗೋ, ತನಗಿಂತ ಹಿರಿಯರಾಗಿಯೋ ಇರುವಂಥವರ ಬರವಣಿಗೆ; 
ಅಥವಾ ತನಗೆ ತನ್ನ ಪರಿಸರದಲ್ಲಿ ಪರಿಚಿತವಾಗುವ ಸಮಕಾಲೀನ ಸಾಹಿತ್ಯ. ತನ್ನ ಸುತ್ತ ತನ್ನಂತೆಯೆ, ಸಮಕಾಲೀನತೆಗೆ 
ಬಾಯಿ ನೀಡುತ್ತಿರುವ ಸೃಜನಶೀಲ ಲೇಖಕರು ಮತ್ತು ಅವರ ಸಾಹಿತ್ಯ ನಿರ್ಮಿತಿ ಹೆಚ್ಚು ಪ್ರಸ್ತುತವಾಗಿರುತ್ತದೆ. ಅವರಿಂದ 
ಈತನಿಗೆ ಸಾಹಿತ್ಯ ನಿರ್ಮಿತಿಯ ಕಿಡಿ ಹೊತ್ತಿಕೊಳ್ಳಬಹುದು ; ಅವರ ಬರವಣಿಗೆಯ ಪ್ರಭಾವ ಇಂಥವನ ಬರೆಹದ ಮೇಲೆ 
ಮೊದಮೊದಲು ಆಗಬಹುದು; ಅವರ ಸಖ್ಯ ಸಂಬಂಧ, ಅವರ ದೃಷ್ಟಿ ಧೋರಣೆಗಳೂ, ಅವರ ಅಭಿವ್ಯಕ್ತಿಯ ವಿಧಾನಗಳೂ 
ಈತನ ಸಾಹಿತ್ಯ ನಿರ್ಮಿತಿಯ ಮೇಲೆ ತಕ್ಕಷ್ಟು ಪರಿಣಾಮ ಮಾಡಿರಬಹುದು: ಅಥವಾ ಅವರ ನಡುವೆ ಇದ್ದೂ, ತಾನು 
ಅವರಂತಾಗದೆ ಬೇರೊಂದು ಅಭಿವ್ಯಕ್ತಿಯನ್ನು ಕೊರೂಪಿಸಿಕೊಳ್ಳುವ ಸವಾಲುಗಳೂ ಸಮಸ್ಯೆಗಳೂ ಸಾಹಿತ್ಯ ಕ್ಷೇತ್ರಕ್ಕೆ 
ಕಾಲಿರಿಸಿದ ನಿಜವಾದ ಸಾಹಿತಿಗೆ ಎದುರಾಗಬಹುದು
      ಒಂದು ಅಖಂಡವಾದ, ಶತಶತಮಾನಗಳ ಜೀವನಾನುಭವ, ಮತ್ತು ಅದನ್ನು ಅಂದಂದಿನ ಕಾಲಕ್ಕೆ ಹಿಡಿದಿರಿಸಿದ 
ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತವೆ. ಈ ಕಾರಣದಿಂದ ವರ್ತಮಾನದ ಜೀವನ ಹಾಗೂ ಸಾಹಿತ್ಯವನ್ನು, 
ಅದಕ್ಕೆ ಹಿಂದಿನ ಜೀವನ ಹಾಗೂ ಸಾಹಿತ್ಯದಿಂದ ಬೇರ್ಪಡಿಸಲು ಬರುವುದಿಲ್ಲ. ಇವುಗಳಲ್ಲಿ ಯಾವುದನ್ನು, ತನಗೆ ಹಿಂದಿನ 
ಬದುಕು ಎನ್ನುತ್ತೇವೋ ಅದು, ಲೇಖಕನಿಗೆ ಅರಿವಿಲ್ಲದೆಯೇ ಅವನ ಒಳಪ್ರಜ್ಞೆಯಲ್ಲಿ ಮುಂದುವರಿಯುತ್ತದೆ ಎಂಬುದನ್ನು 
ಒಪ್ಪಿದರೂ, ಆ ಜೀವನಾನುಭವದ ದಾಖಲೆಗಳಾದ ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ಲೇಖಕನಿಗೆ 
ಮೈಗೂಡುವ ಸತ್ವ ಬಹಳ ಮುಖ್ಯವಾದದ್ದು. ಹೀಗೆ ಹಿಂದಿನದು ಸ್ವಲ್ಪಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ, ಮತ್ತು ಬಹುಮಟ್ಟಿಗೆ 
ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಿತಿಗೆ ನೆರವಾಗುತ್ತದೆ. ಈ 
ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ ಅಗತ್ಯವಾದ ಪರಿಕರಗಳಲ್ಲಿ 
ಒಂದಾಗಿದೆ-ಎನ್ನುವುದು ಈ ವಿಷಯ ಇಲ್ಲಿ ಯಾಕೆ ಬರೆದೆನೆಂದರೆ,ಸಾಹಿತ್ಯ-ಸಂಸ್ಕೃತಿ;ಎನ್ನುವಲ್ಲಿ 'ಸಂಸ್ಕೃತಿ'ಅನ್ನುವುದನ್ನು 
'ನಾಗರಿಕತೆ'civilization, ಅನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.Culture,ಅರ್ಥದಲ್ಲಿ ಅಲ್ಲ.ಯಾಕೆಂದರೆ ಸಾಹಿತ್ಯವು ಕಾಲ 
ಕಾಲಕ್ಕೆ,ನಾಗರಿಕತೆಯ ಜೊತೆಗೆ ಬದಲಾಗುತ್ತಾ ಸಾಗಿದೆ.ಆದರೆ ಸಂಸ್ಕಾರ-ಸಂಸ್ಕೃತಿ,ಯು ಜನಾಂಗದ,ಪ್ರದೇಶದ, 
ಆಹಾರ,ವಿಚಾರ,ಗಳ ಮೇಲೆಸಹ ಅವಲಂಬಿಸಿದೆ. ಆದ್ದರಿಂದ,ವೇದಗಳ ಕಾಲದ ಜನಜೀವನಕ್ಕೂ,ವೇದಗಳು ರಚನೆಯಾದ 
ಪರಿಸರ,ಕಾಲಘಟ್ಟದಲ್ಲಿದ್ದ ನಾಗರಿಕರೆಗೂ ನೇರ ಸಂಬಂಧವಿದೆ.ಪುರಾಣಗಳು,ಇತಿಹಾಸಗಳು,ಬಳಿಕ ರಚನೆಯಾದ 
ಕಾಳಿದಾಸ,ಭವಭೂತಿ,ಮೊದಲಾದವರ ನಾಟಕಗಳು,ಪಂಪ,ರನ್ನ,ಹರಿಹರ,ರಾಘವಾಂಕ,ಮೊದಲಾದ ಕವಿಗಳ 
ಕಾವ್ಯಗಳು,ಆಕಾಲದ ರಾಜ,ಮಹಾರಾಜರ,ನಾಗರಿಕತೆ,ಆಗಿನಜನಜೀವನ,
   ಆಸ್ಥಾನದ ವೈಭವ ಇತ್ಯಾದಿಗಳ ಜೊತೆಗೆ ಮಿಳಿತ ವಾಗಿದೆ.ನಂತರಬಂದ ರಮ್ಯ,ನವೊದಯ, ನವ್ಯ,ಬಂಡಾಯ, 
ಶೂದ್ರಕದಲಿತ,ಮೊದಲಾಗಿ ಕರೆಸಿಕೊಳ್ಳುವ ಸಾಹಿತ್ಯಗಳ ಸಾಹಿತಿಗಳ ಬದುಕಿನಅನುಭವ,ಬದುಕಿದ ಪರಿಸರ,ಅಧ್ಯಯನದ 
ಫಲಗಳಾಗಿವೆ.ಸಾಹಿತ್ಯ ಯಾವಾಗ,ಯಾರೇ ರಚಿಸಲಿ ಆ ಬರಹದ ಮೇಲೆ ಸಮಕಾಲಿನ ಬದುಕಿನ,ನಾಗರಿಕತೆಯ ಪ್ರಬಾವ 
ಇದ್ದೇ ಇರುತ್ತದೆ. ವೇದಗಳು "ಸಂಸ್ಕೃತ" ಭಾಷೆಯಲ್ಲಿರುವ ಅತ್ಯಂತ ಪ್ರಾಚೀನವಾದ ಸಾಹಿತ್ಯ"ಸಂಸ್ಕೃತ"ವು ಜಗತ್ತಿನ 
ಪ್ರಾಚೀನ ಭಾಷೆ.(ಸಂಸ್ಕೃತ ವು ಸ್ವಯಂಭೂ ಅಲ್ಲ,ಪ್ರಾಕೃತ ಭಾಷೆ ಗಳನ್ನು ಪರಿಷ್ಕರಿಸಿ,ಸಂಸ್ಕರಿಸಿ,ರೂಪುಗೊಂಡ 
ಭಾಷೆ. ಆದ್ದರಿಂದಲೇ ಅದರ ಹೆಸರು "ಸಂಸ್ಕೃತ" )"ಸಂಸ್ಕೃತ"ಭಾಷೆಯನ್ನು ತಿಳಿದವರು ಅದೃಷ್ಟವಂತರು, ಈ 
ಭಾಷೆಯ ಲ್ಲಿರುವಷ್ಟು ಸಾಹಿತ್ಯ ಇನ್ನಾವ ಭಾಷೆಯಲ್ಲೂ  ಇಲ್ಲ.(ನನಗೆ "ಸಂಸ್ಕೃತ" ಗೊತ್ತಿಲ್ಲ,ಈ ಕುರಿತು ನಾನು 
ದುರದೃಷ್ಟವಂತನೇ ಸರಿ).
      "ವೇದ" ಎಂದರೆ ಏನು?"ವಿದ್,ಜ್ಞಾನೇ" ಎಂಬ ಧಾತು ವಿನಿಂದ ಈ ಶಬ್ದ ರೂಪುಗೊಂಡಿದೆ.ಈ ಶಬ್ದಕ್ಕೆ ಜ್ಞಾನ ಎಂದು ಅರ್ಥ.ಯಾವುದರ ಜ್ಞಾನ ?ಆತ್ಮ,ಧರ್ಮ,ಕರ್ಮ,ಪುಣ್ಯ,ಪಾಪ,ದೇವತೆಗಳು,ಲೋಕ,ಲೋಕಾಂತರಗಳು- ಮುಂತಾದ ಗಹನ ವಿಷಯಗಳ ಜ್ಞಾನ.ನಮ್ಮ ಇಂದ್ರಿಯಗಳು ಕೊಡುವ ಜ್ಞಾನ ಪ್ರತ್ಯಕ್ಷ.ಊಹೆ ಅಥವಾ ತರ್ಕದಿಂದ ಬರುವ ತಿಳಿವು ಅನುಮಾನ. 
ಕೆಲವು ಸಂಗತಿಗಳು ಇವೆರಡಕ್ಕೂ ತಿಳಿಯಬರುವುದಿಲ್ಲ.ನಮ್ಮ ಇಷ್ಟವನ್ನು ಪದೆಯುವುದಕ್ಕೂ,ಅನಿಷ್ಟವನ್ನು 
ನಿವಾರಿಸುವುದಕ್ಕೂ ಅನೆಕ ಉಪಾಯ ಗಳಿವೆ.ಅವುಗಳಲ್ಲಿ ಯಾವುದು ಲೋಕದಲ್ಲಿ ಅನುಭವಕ್ಕೆ,ಪ್ರತ್ಯಕ್ಷ ಮತ್ತು ಅನುಮಾನ 
ಗಳಿಗೆ ನಿಲುಕದೇ ಇದ್ದು,ಅಲೌಕಿಕವೆನಿಸುವುದೋ ಅಂತಹ ಉಪಾಯವನ್ನು ತಿಳಿಸಿಕೊಡುವುದೋ ಅದು "ವೇದ".
    ವೇದಕ್ಕೆ,ಶ್ರುತಿ,ದರ್ಶನ,ಆಮ್ನಾಯ,ಎಂಬ ಹೆಸರುಗಳೂ ಇವೆ.ವೇದಗಳ ಅಗಾಧತೆ,ಅಪಾರತೆ,ಅದರಲ್ಲಿರುವಅಪರಿಮಿತ ಜ್ಞಾನ ಭಂಡಾರ,ಗಳಿಂದಾಗಿ ಇದು ಮನುಷ್ಯ ಮಾತ್ರರಿಂದ ರಚಿಸಲು ಅಸಾಧ್ಯವೆಂದು ತಿಳಿದು, ವೇದ ಗಳನ್ನು "ಅಪೌರುಷೇಯ"ವೆಂದು ಕರೆಯಲಾಯಿತು. <ನವ್ಯ ಮತ್ತು ನವೋದಯ ಕನ್ನಡ ಸಾಹಿತ್ಯವನ್ನವಲೋಕಿಸಿದಾಗ ಅಲ್ಲಿ ಭಟ್ಟಂಗಿತನ, ಭಾಷಾ ವಿಲಾಸ, ಅರ್ಥ ಸಂಪ್ರಾಪ್ತಿ, ವಿಮರ್ಶಾ ಕಾವ್ಯ ರಚನೆ, ಬೋಧಕಸಾಹಿತ್ಯ, ಮುಂತಾದ ಅನೇಕ ಹೊಳಹುಗಳಿದ್ದುದು ಕಂಡುಬರುತ್ತದೆ. >> ಸುಮನಸ ರಾಂಭಟ್ಟ ಅಗ್ನಿಹೋತ್ರಿಯವರ ಈ ಮಾತಿಗೆ ನನ್ನ ಒಪ್ಪಿಗೆಯಿದೆ.. ಇದು ಹೊಸ ಬೆಳವಣಿಗೆಯೇನಲ್ಲ. ಇತಿಹಾಸದುದ್ದಕ್ಕೂ ನಡೆದು ಬಂದಿರುವುದನ್ನು ಕಾಣಬಹುದು. ಹಿಂದಿನ ಅರಸೊತ್ತಿಗೆಗಳ ಕಾಲದಲ್ಲೂ ಕವಿಗಳು, ಸಾಹಿತಿಗಳಿಗೆ ರಾಜಾಶ್ರಯವಿತ್ತು. ಸಹಜವಾಗಿ ಅವರುಗಳು ಅರಸರುಗಳನ್ನು ಹೊಗಳಿ ಭಟ್ಟಂಗಿರನದ ಪ್ರದರ್ಶನ ಮಾಡುತ್ತಿದ್ದುದು ವಿಶೇಷವಲ್ಲ. ತುರ್ತು ಪರಿಸ್ಥಿತಿ ಕಾಲದಲ್ಲಿ ಅದನ್ನು ಸಮರ್ಥಿಸಿ ಬರೆದ 'ಸಾಹಿತಿ'ಗಳಿಗೆ ಕೊರತೆಯಿರಲಿಲ್ಲವೆಂಬುದನ್ನು ಗಮನಿಸಬಹುದು. ವೇದ, ವೇದಾಂಗಗಳು, ಇತ್ಯಾದಿಗಳಿಗೆ ಮಹಿಮಾನ್ವಿತರುಗಳು ಭಾಷ್ಯಗಳನ್ನು ರಚಿಸಿರುವುದು ಮೂಲ ಕೃತಿಗಳ ಮೌಲ್ಯ ಹೆಚ್ಚಿಸಿವೆ. ಇವೂ ಬೋಧಕ ಸಾಹಿತ್ಯವೆನ್ನಲು ಅಡ್ಡಿಯಿಲ್ಲ.
   ವೇದಗಳ,ಅಗಾಧತೆ,ಅಪರಿಮಿತ ಹರವು,ಅದರಲ್ಲಿ ಅಡಗಿರುವ ಅಪಾರ ಜ್ಞಾನ ಭಂಡಾರ ಗಳಿಂದಲಾಗಿ "ವೇದ"ವು ಅಪೌರುಷೇಯ ವೆಂದು ಕರೆಯಲ್ಪಟ್ಟಿತು.ಈ ಕುರಿತು ಒಂದು ಕಥೆ ಹೀಗಿದೆ:ಭರದ್ವಾಜ ಎಂಬ ಋಷಿ ಮುನ್ನೂರು ವರ್ಷಗಳಕಾಲ ಗುರುಕುಲದಲ್ಲಿ ಇದ್ದು ವೇದಗಳನ್ನು ಕಲಿಯುತ್ತಾ ಹಣ್ಣು ಹಣ್ಣು ಮುದುಕರಾದರು.ಆದರೂ ಸಹ ಮನೆಗೆ ಹಿಂತಿರುಗಿ ಗೃಹಸ್ಥಾಶ್ರಾಮವನ್ನು ಸ್ವೀಕರಿಸಲಿಲ್ಲ,ಮುಪ್ಪಿನಿಂದ ಬಳಲಿ ಬಿದ್ದಿದ್ದ ಅವರ ಬಳಿ ಇಂದ್ರದೇವನು ಬಂದು "ಭರದ್ವಾಜ ನಾನು ನಿನಗೆ ನಿನ್ನ ಆಯುಸ್ಸನ್ನು ನಾಲ್ಕುಪಟ್ಟು ಹೆಚ್ಚು ಮಾಡುವೆನು ಆಗ ಏನು ಮಾಡುವೆ? ಎಂದನು .ಅದಕ್ಕೆ ಭರದ್ವಾಜರು "ನಾನು ಬ್ರಹ್ಮಚರ್ಯ ವನ್ನು ಮುಂದುವರಿಸಿ ಇನ್ನೂ ಹೆಚ್ಚುವೇದಗಳನ್ನು ಕಲಿಯುವೆನು" ಎಂದರು.ಆಗ ಇಂದ್ರನು ಅವರಿಗೆ ವೇದಮಯವಾದ ಮೊರು ಬೆಟ್ಟಗಳನ್ನು ತೋರಿಸಿ,ಒಂದೊಂದರಿಂದಲೂ ಒಂದೊಂದು ಮುಷ್ಟಿಯಷ್ಟನ್ನು ಮಾತ್ರಾ ತೆಗೆದುಕೊಂಡು ಅವರಿಗೆ ತೋರಿಸುತ್ತಾ "ನೋಡು ಭರದ್ವಾಜ ಇವು ವೇದಗಳು.ಇವು ಅನಂತವಾಗಿವೆ,ನೀನು ಮುನ್ನೂರು ವರ್ಷಗಳಲ್ಲಿ ಕಲಿತದ್ದು ಈ ಮೋರುಮುಷ್ಟಿಯಷ್ಟು ಮಾತ್ರಾ.ಉಳಿದದ್ದನ್ನು ಕಲಿಯುವುದು ಯಾವಾಗ.?ಎಂದು ತಿಳಿಸಿದನಂತೆ.ಆದ್ದರಿಂದ ವೇದವು ಇಷ್ಟೇ ಎಂದು ಹೇಳಲಾಗದು.ಅದು ಅನಂತ ವಾಗಿದೆ.
         ನಮ್ಮ ಬುದ್ಧಿ ಮಟ್ಟದಲ್ಲಿ ಯೋಚಿಸಿದಾಗ 'ವೇದ' ಗಳು ಒಬ್ಬನೇ ಬರೆದ ಕೃತಿಗಳಲ್ಲ.'ವೇದಯುಗ' ಒಂದು 'ಕಾಲಘಟ್ಟ'.(ವೈದಿಕಯುಗ.) ಇದು ಹಲವು ನೂರು (ಸಾವಿರ.?)ವರ್ಷಗಳ ಕಾಲ ಮುಂದುವರಿದಿರ ಬಹುದು.ಋಷಿ,ಮುನಿಗಳು,ಗುರುಕುಲಗಳಲ್ಲಿ ತಮ್ಮ ಪಾಂಡಿತ್ಯ-ತಪೋಬಲಗಳಿಂದ ಕಂಡುಕೊಂಡ "ಸತ್ಯ"ಗಳ ಸಾಹಿತ್ಯ ರಾಶಿಗಳೇ ವೇದಗಳು.ಹಲವರು ಬರೆದ ಹಲವಾರು ವಿಷಯ ವೈವಿಧ್ಯಗಳುಳ್ಳ ಈರಾಶಿಯನ್ನು ವಿಭಾಗಿಸಿ ವಿಷಯಗಳಿಗೆ ಅನುಗುಣವಾಗಿ ವಿಂಗಡಿಸಿ ಸಮಾಜಕ್ಕೆ ನೀಡಿದ ಮಹನೀಯರುಗಳೇ "ವೇದವ್ಯಾಸ"ರುಗಳು.ವ್ಯಾಸರೆಂದರೆ ಒಬ್ಬರಲ್ಲ ಹಲವರು ಎಂಬ ವಾದವೂ ಇದೆ.ಈ ಬಗ್ಗೆ ವೇದಾಧ್ಯಯನ ಸಂಪನ್ನರಾದ 'ಮಹನೀಯರು'ಗಳು ನಮಗೆ ಮಾರ್ಗದರ್ಶನ ನೀಡಬೇಕಾಗಿ ನಮ್ರ ವಿನಂತಿ.




   ವೇದಗಳ ವಿಂಗಡನೆ,ಉಪನಿಷತ್ತುಗಳು,ವೇದಗಳಲ್ಲಿ ಏನಿದೆ.ಚತುರ್ವೇದಗಳು-ದಶೋಪನಿಷತ್ತುಗಳು;ನಮ್ಮ ಹೆಮ್ಮೆಯ ಸಾಹಿತ್ಯಗಳು.ವೈದಿಕ ಸಾಹಿತ್ಯ ಮತ್ತುಸಂಸ್ಕೃತಿ.ಹೀಗೆ ವಿಷಯದ ಹರವು (ವ್ಯಾಪ್ತಿ)ತುಂಬಾವಿಶಾಲವಾಗಿದೆ.ಸಹೃದಯರು ಬರೆಯಬೇಕಾಗಿ ವಿನಂತಿ. ಸಾಹಿತ್ಯ ಮತ್ತು ಸಂಸ್ಕೃತಿ> ಎಂದು ವಿಶ್ಲೇಷಿಸಿದರೆ>ಸಾಹಿತ್ಯ ಮತ್ತು ಸಂಸ್ಕೃತಿಗಿರುವ ಸಂಬಂಧವನ್ನು ವಿವರಿಸಿ, ವಿಮರ್ಶಿಸಭೇಕಾಗುತ್ತದೆ.ಸಾಹಿತ್ಯ-ಸಂಸ್ಕೃತಿ ಎಂದಾದರೆ ಸಾಹಿತ್ಯ ಅಂದರೇನು.?ಸಂಸ್ಕೃತಿ ಅಂದರೇನು.? ಎಂದು ವಿವರಿಸಿ,ಮತ್ತೆ ಅವುಗಳಿಗಿರುವ 'ಪೂರಕ ಸಂಬಂಧ'ವನ್ನು ವಿಮರ್ಶಿಸಬೇಕು.ಇಲ್ಲಿ ಒಂದು ಸಲ ಸಾಹಿತ್ಯದ ಬಗ್ಗೆ ವಿಮರ್ಶೆ ನಡೆದಿದೆ ಆದ್ದರಿಂದ 'ಸಂಸ್ಕೃತಿ'ಬಗ್ಗೆ ನನ್ನ ಅಭಿಪ್ರಾಯವನ್ನು ಪ್ರಸ್ತುತ ಪಡಿಸುತ್ತಿದ್ದೇನೆ.ವಿದ್ವಾಂಸರ ಕ್ಷಮೆ ಕೋರಿ........ಸಂಸ್ಕೃತಿ=ತಿದ್ದಿದ ನಡವಳಿಕೆ,ಮನಸ್ಸಿನ ಪಕ್ವತೆ,ಸಭ್ಯತೆ,ಸೌಜನ್ಯ,ಇತ್ಯಾದಿ ಅರ್ಥಗಳಿವೆ.ಶಬ್ಧಾರ್ಥಕ್ಕಿಂತ ರೂಢಿಯಲ್ಲಿ (ಬಳಕೆ)ರುವ ಅರ್ಥಕ್ಕೆ ಒತ್ತು ಕೊಡುವ ದೃಷ್ಟಿ ಯಿಂದ 'ಸಂಸ್ಕೃತಿ'ಶಬ್ಧ 'ಶಬ್ಧ ದ ಪ್ರಯೋಗವನ್ನು ಗಮನಿಸಿ:-ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಸಾಂಸ್ಕೃತಿಕ ಕಾರ್ಯಕ್ರಮ,ಸಿಂಧೂ ಕಣಿವೆ,ಮೊಹೆಂಜದಾರೋ-ಹರಪ್ಪ,ವೇದಕಾಲದ'ಸಂಸ್ಕೃತಿ'.ದ್ರಾವಿಡ-ಆರ್ಯರ 'ಸಂಸ್ಕೃತಿ'>ಇಲ್ಲಿ ನಾಗರೀಕತೆ,ಜನಜೀವನ,ಆಚಾರ ವಿಚಾರಗಳು,ಸಾಹಿತ್ಯ,ಕಲೆ,ವಿಜ್ಞಾನ ಎಲ್ಲವನ್ನೂ ಒಟ್ಟು ಸೇರಿಸಿ 'ಸಂಸ್ಕೃತಿ' ಎಂದು ಕರೆಯಲಾಗುತ್ತಿದೆ.ಸಂಸ್ಕಾರ ಹೊಂದಿದ ಕೃತಿ=ಸಂಸ್ಕಾರ ಹೊಂದಿದ ಜೀವನ ಪದ್ಧತಿಯೇ ''ಸಂಸ್ಕೃತಿ''.=ನಾಗರಿಕತೆ.
  ಇಂಗ್ಲಿಷಿ ನಲ್ಲಿ Culture ಎಂಬ ಪದಕ್ಕೆ 'ಸಂಸ್ಕೃತಿ'ಎಂದೂ, Civilization ಎಂಬ ಪದಕ್ಕೆ 'ನಾಗರಿಕತೆ' ಎಂದೂ ಪರ್ಯಾಯ ಪದಗಳು ಈಗ ನಮ್ಮಲ್ಲಿ ಬಳಕೆಯಲ್ಲಿದೆ.ಇಂಗ್ಲಿಷ್ ಶಬ್ದಕ್ಕೆ ಮೊಲವು ಲ್ಯಾಟಿನ್ ಭಾಷೆಯ Cultus(ಕಲ್ಟಸ್) ಎಂಬ ಪದ.ಈ ಪದಕ್ಕೆ,1. ಗೌರವಿಸುವಿಕೆ,ನಿಷ್ಠೆ,ದೀಕ್ಷೆ, ಮುಂತಾದ ಅರ್ಥಗಳ ಜೊತೆಗೆ 2. ಕೃಷಿ,ಬೆಳೆ ಬೆಳೆಸುವುದು,ಭೂಮಿ ದೇವಿಯ ಆರಾಧನೆ,ಮುಂತಾದ ಅರ್ಥಗಳಿವೆ.ಮೊದಲನೆಯ ಅರ್ಥವು ರೂಪಾಂತರ ಹೊಂದಿ,"ಒಳ್ಳೆಯ ತಿಳಿವು,ಒಳ್ಳೆಯ ಭಾವನೆ ಮತ್ತು ಒಳ್ಳೆಯನಡವಳಿಕೆ-ಇವುಗಳನ್ನು ತನ್ನ ಅಂತರಂಗ -ಬಹಿರಂಗ ಗಳಲ್ಲಿ,ವೈಯಕ್ತಿಕ ಮತ್ತು ಸಾಮಾಜಿಕ ಬಾಳಿನಲ್ಲಿ ರೂಪಿಸಿ ಕೊಳ್ಳುವುದು"ಎಂಬ ಅರ್ಥದಲ್ಲಿ ಈಗ ಬಳಕೆಯಲ್ಲಿದೆ. 'ಸಂಸ್ಕೃತಿ'ಎಂಬ ಶಬ್ದಕ್ಕೆ 'ಸಂಸ್ಕಾರ' ಎಂಬ ಶಬ್ಧ ವೂ ಹೆಚ್ಚು ಸಂವಾದಿ ಯಾಗಿದೆ."ಸಂಸ್ಕೃತಿ"ಯಬಗ್ಗೆ ಪೂಜ್ಯ ಡಿ.ವಿ.ಜಿ,ಯವರು ತಮ್ಮ'ಕೃತಿಶ್ರೇಣಿ' ಯಲ್ಲಿ ಹೀಗೆ ಹೇಳಿದ್ದಾರೆ........... "ಸಂಸ್ಕೃತಿ"ಯಬಗ್ಗೆ ಪೂಜ್ಯ ಡಿ.ವಿ.ಜಿ,ಯವರು ತಮ್ಮ'ಕೃತಿಶ್ರೇಣಿ' ಯಲ್ಲಿ ಹೀಗೆ ಹೇಳಿದ್ದಾರೆ........... 
 "ಸಂಸ್ಕೃತಿ" ಎಂಬುದು ಒಂದು ಬಗೆಯ ಆತ್ಮಶಿಕ್ಷಣ.ಅದು ಬರಿಯ ಮನಸ್ಸಿನ ವ್ಯಾಪಾರವಲ್ಲ ಅಥವಾ ಬರಿಯ ವ್ಯಾಪಾರವಲ್ಲ ಅಥವಾ ಬರಿಯ ಸ್ಮೃತಿ ಶಕ್ತಿಯ ವ್ಯಾಪಾರವೂಅಲ್ಲ.ಅದು ಮನಸ್ಸು,ಬುದ್ಧಿ,ಸ್ಮೃತಿ ಇವೆಲ್ಲಕ್ಕೂ ಸ್ವಾಮಿಯಂತಿರುವ ಜೀವಾತ್ಮನಿಗೆಸೇರಿದ್ದು. ಕಾಡಿನಲ್ಲಿರುವ ಸಂಪಿಗೆ,ಕೇದಿಗೆ,ಮಲ್ಲಿಗೆ,ಪಾದರಿ,ಸುರಗಿ,ಹೊನ್ನೆ ಮುಂತಾದ ನೂರಾರು ಜಾತಿಯ ವನಪುಷ್ಪಗಳ ಸೌರಭಕಣಗಳನ್ನು ಗಾಳಿಯು ಒಂದಾಗಿ ಬೆರೆಸಿ,ದೂರದಲ್ಲಿರುವವನಿಗೆ ಹೆಸರಿಸಲಾಗದ ಒಂದು ವಿಜಾತೀಯ ಪರಿಮಳಭಾರವನ್ನು ಬೀರುತ್ತದೆ.ಕಾಡುಬೆಟ್ಟಗಳಲ್ಲಿರುವ ಹಲವು ಹದಿನಾರು ಮೊಲಿಕೆಗಳ ಸಾರವನ್ನು ವೈದ್ಯನು ಪುಟಪಾಕದಲ್ಲಿರಿಸಿ ಒಂದೇ ಹೊಸ ಸಂಜಿವಿನೀ ರಸವನ್ನಾಗಿ ಇಳಿಸುತ್ತಾನೆ. ಸಂಸ್ಕೃತಿ ಎಂಬುದೂ ಹಾಗೆಯೇ.ಸಂಗೀತ ಸಾಹಿತ್ಯಾದಿ ನಾನಾ ಕಲಾನುಭವಗಳ ಮತ್ತು ನಾನಾ ಶಿಕ್ಷಣಗಳ ಫಲಿತಾಂಶಗಳ ಸಾರಸಮ್ಮೇಳನ ಅದು...........  


ಮಾನ್ಯ ಶಂಕರ ಭಟ್ಟರಿಗೆ ಅಭಿನಂದನೆಗಳು.....




‌‌‌‌‌‌‌‌‌‌‍**॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑**


ಸಂಸ್ಕೃತಿ 

      - ಸಾಹಿತ್ಯ 

         ಒಂದು ಮಂಥನ (ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ )

       ಕಬ್ಬಿಣದ ಕಡ್ಳೆಯನ್ನು ಅಗಿಯಲು ಕೊಟ್ಟಿದ್ದಾರೆ!!! ತುಂಬಾ ಗಟ್ಟಿ!!! ಕಾರಣಅದರೊಟ್ಟಿಗೆ ಸ್ವಲ್ಪ ಚುರುಮುರಿ :- ಏನಂದರೆ,ಈಗ ನಾವು ಬಹುತೇಕರು ತಿಳಿದೂ ಏಕವಚನ-ಬಹುವಚನ ಪ್ರಯೋಗಗಳನ್ನು ಹೇಗೆ ಮಾಡುತ್ತಿದ್ದೇವೆ? ಸಾಮಾನ್ಯ ನಿಯಮ: ಒಂದಿದ್ದರೆ:ಏಕವಚನ ಒಂದಕ್ಕಿಂತಾ ಹೆಚ್ಚಿದ್ದರೆ ಬಹುವಚನ, ಅಲ್ಲವೇಕನ್ನಡದಲ್ಲಿ:::: ನಾವು ಸಾಮಾನ್ಯವಾಗಿ ಗೌರವ ಸೂಚಕ ಎಂಬ ಅಭಿಧಾನದಲ್ಲಿ ಯಾರ್ಯಾರಿಗೋ ಬಹುವಚನ ಪ್ರಯೋಗ ಮಾಡಬೇಕಾದ ಅನಿವಾರ್ಯ ಇದೆ.{ ( ಮುಂದೆ ಆಗುವ ಅಚಾತುರ್ಯವನ್ನು ನೆನೆದರೆ ಭಯವಾಗತ್ತದೆ ಇರಲಿ)ಸಾಹೇಬರು, ಪೂರ್ವಪರಿಚಿತರಲ್ಲದವರು,ಒಟ್ಟಾರೆ ಮನದಲ್ಲಿ ಗೌರವ ಭಾವ ಸ್ಫುರಿಸಿದವರು,ಹಿರಿಯರು,ಗುರುಗಳುಇತ್ಯಾದಿ} ಅದರಂತೆ

ಬಹು ವಚನಕ್ಕೆ ಯೋಗ್ಯರಾದ ಅನೇಕರನ್ನು ಏಕ ವಚನದಲ್ಲೇಸಂಬೋಧಿಸುತ್ತೇವೆ.{(ಹೇಗೆ ಮಾತಾಡಿಸುವುದೂ ಮೊದಲು ಬ.ವ. ಪ್ರಯೋಗಿಸಿ 'ದೇವರೇ' 'ನೀನೇ' ಕಾಪಾಡಬೇಕು ಎಂದು ಅಸಂಬದ್ಧವಾಗಿ ಪ್ರಲಾಪಿಸುತ್ತೇವೆ ಇರಲಿದೇವರಲ್ಲವೇ ಸುಧಾರಿಸಿಕೊಳ್ತಾನೆ,ಪಿತೃಗಳು,-ಇಲ್ಲೂ ಒಳಗೊಂದು ಹೊರಗೊಂದು ಎಲ್ಲರೆದುರಿಗೆ-ನಮ್ಮ ತಂದೆಯವರು, ಅವರ ಮುಂದೆ ನೀನು ತಾನು!,ಮನೆಯ ಹಿರಿಯರು ಅಣ್ಣ-ಅಕ್ಕ- ಇತರರು,} ಹೇಗೆ ಸಂಭಾಳಿಸುವುದು ಇದನ್ನಎಂದು ತಿಳಿಯದೇ ಪಾಣಿನಿಯಿಂದಾರಂಭಿಸಿ ಶಬ್ದಮಣಿಯವರೆಗೆ ಸವೆಸಿದರೂ ಇನ್ನೂಗೊಂದಲವೇ? ..................ಎಂತಾ ಸಂಸ್ಕಾರ ಅಲ್ಲವೇ? ನಮ್ಮ ಸಂಸ್ಕೃತಿಯ ಮೂಲ ಸ್ರೋತವೇ ಇದು!! ಯೆಷ್ಟೇ ದೊಡ್ಡವರಾಗಿರಲಿ ನಮ್ಮಆಂತರ್ಯಕ್ಕೆ ಅವರನ್ನು ಬರಮಾಡಿಕೊಂಡಾಗ ಮಾತ್ರ ಅವರು ನಾವಾಗಲಿಕ್ಕೆ ಸಾಧ್ಯ ಎಂಬ ಒಳಸುಳಿ ಇಲ್ಲಿದೆ. ನಾವು ಕೆಲವರನ್ನು ಹತ್ತಿರಾಗಿಸಿಕೊಳ್ಳೋದೇ ಹೀಗೆ ನಮ್ಮ ಅಪ್ಪ ಇಲ್ಲಿ ನನಗೆ 'ಅವನು' ಏ.ವ.: ದೇವರ ಮೊದಲು ದೂರ ಇದ್ದರೂ ಆಮೇಲಎಂಬಗೊಂದಲವೇ ಕಾರಣ ಇರಬಹುದೇನೋ ಯೇನಾದರಾಗಲೀ ಒಂದು ಹೊತಾಕಿ ಬಿಡೋಣ ಎಂದಿರಬಹುದು.) ದೇವರು,-ಅಯ್ಯೋ...ಶಿವನೇ ...ಅವನು ನಮ್ಮವನೇ ಆಗಿದ್ದಾಗ ಮಾತ್ರ ಸಾ-ಯುಜ್ಯ ಸಾಧ್ಯ..! ಅಲ್ಲವೇ..?... ಯೆಲ್ಲೋ ಇರುವ ನಿಮ್ಮನ್ನೆಲ್ಲಾ ನಾನು 'ಅಣ್ಣಾ' 'ಎನ್ನುವುದೂ ಇದಕ್ಕಾಗೇ ಅಲ್ಲವೇ ಹತ್ತಿರಾಗೋಣ !!! ಎಂಥಾ ಮಾಧುರ್ಯವಿದೆ,ಸ್ನಿಗ್ಧತೆಯಿದೆ,ಆತ್ಮಿಕ ಭಾವವಿರುತ್ತದೆ ಅಲ್ಲವೇ?ಇಲ್ಲಿಯೂ ನೀವು ತಾವು ಬನ್ನಿ ಹೋಗಿ : ಏಕೆ ದುಶ್ಶಾಸನ ಸೀರೆಯೆಳೆವಾಗ ಕೂಗಿದ ದ್ರೌಪದಿಗೆ ಕೄಷ್ಣ ಬೇಗ ಬರಲಿಲ್ಲ!!! ಏಕೆಂದು ದ್ರೌಪದಿ ಕೇಳಿದ್ದಕ್ಕೆ ಹೇಳಿದನಂತೆ ಪರಮಾತ್ಮ" ತಂಗೀ... ನಿನ್ನೊಳಗೇ ಇರುವ ಈ ಹರಿಯನ್ನು 'ಹೇ ದ್ವಾರಕಾ ವಾಸೀ' ಎಂದು ಬಹು ದೂರ ಕೊಂಡೋಗಿ ಮಡುಗಿದೆಯಲ್ಲಾ!!! ಕರೆಯಬಾರದಿತ್ತೇ ಓ'''ಅಣ್ಣಾ'''' ಎಂದು ಅಂದನಂತೆ ಹಾಗೇ ನಾವು ಬಹುವಚನವೀಯುವ ಭರದಲ್ಲಿ ಸಂಬಂಧಗಳನ್ನೂ ದೂರಮಾಡಿ ಪ್ರಿತಾಪ ಪಡುತ್ತಿರುತ್ತೇವೆ ಅಲ್ಲವೇ..? ಚಿಂತನೆ ಮಾಡಿ. ಪ್ರಕೃತಿಯನ್ನು ತುಂಬಾ ಸಂಸ್ಕರಿಸಲು ಹೋಗಿ ಮಾಡಿಕೊಳ್ಳುವ ಕೆಲ ಅವಾಂತರಗಳ ಸ್ಯಾಂಪಲ್ಲು ಇದು
ಜನ್ಮತಃ ಯಾರೂ ಮಾನವರು ಸಂಸ್ಕೃತರಾಗಿರಲಿಕ್ಕಿಲ್ಲ!!! ಅವರವರ ವೈಯ್ಯಕ್ತಿಕ ಬದುಕಿನ ಒಳಹೊಕ್ಕಾಗ ಅವರಲ್ಲಿರುವ ಪೈಶಾಚ ಭಾವದ ಅನಾವರಣ ತಂತಾನೇ ಆಗಿಬಿಡುತ್ತದೆ. ಸಂ ಘಜೀವನಕ್ಕೆ ಹೊಂದಿಕೊಂಡ ಅವ ಕೇವಲ "ಭಯ"ಕ್ಕೇ ಭಯಬಿದ್ದು ಬದಲಾಯಿಸಿಕೊಳ್ಳುವ, ಅಥವಾ ಹೊಂದಿಕೊಳ್ಳುವ ಸಂಪ್ರದಾಯಕ್ಕೆ ತನ್ನನ್ನು ತಾನು ಪಳಗಿಸಿಕೊಂಡ ಎನ್ನಬಹುದೇ ನೋ.ನಾನು ಈಗ ಕೇವಲ ಭಾರತೀಯ ಸಂಸ್ಕೃತಿಯ ಮೇಲೆ ಮಾತ್ರ ಬರೆಯಬೇಕಾಗಿದೆ,ಏ ಕೆಂದರೆ , ಸಂಸ್ಕೃತಿಯನ್ನು ಸಂಸ್ಕಾರದ ಮೂಸೆಯಲ್ಲಿ ಬೇಯಿಸಲು ತೊಡಗಿದವರು ಮೊದಲು ಭಾರತೀಯರು ಎಂಬುದು ನನ್ನ ನಂಬಿಕೆ. ಸಂಸ್ಕೃತಿಗೂ 'ನಾಗರೀಕತೆಗೂ" ಅಂತರವಿದೆ. ತೋರಿಕೆಯ ಬದುಕು ಬದುಕಲ್ಲ. ಬೌದ್ಧಿಕ ದಿವಾಳಿತನವನ್ನೇ ಹೊದ್ದು ಮಲಗಿದವರೂ ಇಂದು ನಾಗರೀಕರೆನಿಸಿಕೊಂಡುಬಿಟ್ಟಿದ್ದಾರೆ,ನಮ್ಮ ಆರ್ಷ್ಯ ಅನುಭವಗಳು ಕೇವಲ ಭೌತಿಕ ವಾದವ ನ್ನೇ ನೆಚ್ಚಿ ಕುಳಿತಿಲ್ಲ. ನಮ್ಮ ಪರಂಪರೆಯಲ್ಲಿ ಬದುಕಿಗಿಂತ ಹೆಚ್ಚಿನದಾದ ಮಹತ್ವ ಆನಂತರದ ಸ್ಥಿತಿಗೆ ಇದೆ. ನಮ್ಮ ಎಲ್ಲಾ ಪ್ರಕ್ರಿಯೆಗಳೂ ಅಧಿ ಭೌತಿಕ ,ಅಧಿ ದೈವಿಕ, ಅಧ್ಯಾತ್ಮಿಕ ಎಂಬ ತಾ ಪ ತ್ರಯಗಳ ಶಮನೋಪಾಯಕ್ಕಾಗಿಯೇ ನಡೆದುಕೊಂಡು ಬಂದಿವೆ ಸುಕೃತಿಗೆ ಸ್ವರ್ಗ ದುಷ್ಕೃ ತಿಗೆ ನರಕ ಎಂಬ ಭಯ ನಮ್ಮನ್ನಾಳಿಸುತ್ತಿದೆ(ಈಗ ಸ್ವಲ್ಪ ವ್ಯತ್ಯಸ್ತವಾಗಿ ತೋರಿದರೂ 'ಧರ್ಮಕ್ಕೇ ಜಯ' ಎಂಬುದನ್ನು ಅಲ್ಲಗಳೆಯಲಾಗಿಲ್ಲ!!)


    


   ಕೃತಿಕೃತ್, ಕೃ, ಮಾಡು ಆಚರಿಸು, ತೊಡಗು,ಎಂಬ ವಾಚ್ಯಾರ್ಥದಿಂದ ಸ್ಫುರಿತವಾದರೂ, ಸಂಸ್ಕೃತಿ ಎಂಬ ಪದಕ್ಕೆ ಬಂದಾಗ, ಮಾಡಲ್ಪಟ್ಟ ಹಿಂದೆ ಆಚರಿಸಿಕೊಂಡು ಬಂದ,ಇತ್ಯಾದಿ ಧ್ವ್ನನ್ಯರ್ಥಗಳು ಸ್ಫೋಟಗೊಳ್ಳುತವೆ,ಅದೇನೇ ಇರಲಿ. ಸಾಮಾನ್ಯವಾಗಿ ಹೇಳುವುದಾದರೆ- ಕೃತಿ= (ಗ್ರಂಥಾದಿಗಳ ವಿಚಾರದಲ್ಲಿ ಕಾವ್ಯ,ಹೊತ್ತಗೆ,ಗ್ರಂಥ ಇತ್ಯಾದಿ ಬಂದರೂ) ಆಚರಣೆ, ಎಂಬ ಅರ್ಥವೇ ಪ್ರಾಧಾನ್ಯವನ್ನು ಹೊಂದಿದೆ. ಅದೇ ಈ ಆಚರಣೆ ಎಂಬುದು ಸಂಸ್ಕರಿತವಾದಾಗ ಅಂದರೆ ಭೋಜನಯೋಗ್ಯವಾದಾಗ,ಸಾಮಾಜಿಕ ನ್ಯಾಯ,ನಿಸರ್ಗನ್ಯಾಯದ ಮಂಥನದಲ್ಲಿ ಕಡೆಯಲ್ಪಟ್ಟು ನವನೀತವಾದಾಗ ಸಂ'ಸ್ಕೃತಿ ಎನಿಸಿಕೊಳ್ಳುತ್ತದೆ. (ಇಲ್ಲಿ ಸಾಮಾಜಿಕ ನ್ಯಾಯ-ನಿಸರ್ಗನ್ಯಾಯದ ವಿವರಣೆ ಬಲ್ಲವರಾದ ತಮಗೆ ಕೊಡಬೇಕೆನಿಸುವುದಿಲ್ಲ ಗ್ರಾಹಿಗಳಿದ್ದೀರಿ.) 


...... ಸಂಸ್ಕರಿಸಲ್ಪಡುವುದು :-ಕ್ಷೇತ್ರವಾರು {(ಭೌತಿಕ ಮತ್ತು ಬೌದ್ಧಿಕ)ವಿಶಾಲಾರ್ಥವಿದೆ}ಸಂಸ್ಕರಣೆನಡೆದಿದೆ.ಆದರೆ ನನಗನಿಸುವುದೇನೆಂದರೆ ನಾವು ದೊಡ್ಡ ಗುಡ್ಡವನ್ನು ಅಗೆಯುವುದು ಈ ಸಂದರ್ಭದಲ್ಲಿ ಸಮಂಜಸವೆನಿಸುವುದಿಲ್ಲ. ಎರಡುಬಗೆಯ ಸಂಸ್ಕಾರಗಳಲ್ಲಿ ಭೌತಿಕ ಸಂಸ್ಕಾರಕ್ಕೂ ಬೌದ್ಧ್ಹಿಕ ಸಂಸ್ಕಾರದ ತಳಹದಿಯೇ ಇರುವುದರಿಂದ ಆ ಕ್ಷೇತ್ರದ ವಿಷ್ಯದಲ್ಲಿ ಚಿಂತನೆ ನಡೆಸುವುದು ಸೂಕ್ತವೆನಿಸುತ್ತಿದೆ.


........... ಮಾನವ ಎಂದು ನಾನು ಹೇಳಿದಂತೇ ಕೇಳದವರೂ ಇದ್ದಾರೆ ಇಲ್ಲಿ ಎಂದು ಅರಿತಾಗ, ಈ ಪಂಚಭೂತಗಳಿಗೆ ಭಯಪಡಬೇಕಾಯಿತೋ ಅಂದಿನಿಂದ ಪ್ರಕೃತಿಯನ್ನು ಯಥಾವತ್ತಾಗಿ ಉಪಭೋಗಿಸುವುದಕ್ಕೆ ಹಿಂಜರಿದ.ಹಾಗಾದರೆ ಹೇಗೆ ಮುಂದುವರಿದ..... ತನ್ನ ಬಲಿಯನ್ನು ತನ್ನಿಂದ ತಿನ್ನಲಾಗದು ಎಂಬ ಕಾಲ ಸನ್ನಿಹಿತವಾದಾಗ ಈ ತಿನ್ನುವಿಕೆಗೆ ಅಡ್ಡಿಯಾಗುವದ್ಯಾವುದು ಎಂದು ಕಣ್ಣಾಡಿಸತೊಡಗಿದ. ಅಲ್ಲಿಂದ ಬಲಿಯ ಸಂಸ್ಕಾರ ಪ್ರಾರಂಭವಾಯ್ತು.......'ಬೆಂಕಿ,ನೀರು,,ಗಾಳಿ,ಭೂಮಿ,ಆಕಾಶ' ಇವುಗಳಿಂದ ಜನ್ಯವಾದುದನ್ನು ಸಂಸ್ಕರಿಸತೊಡಗಿದ........ ಈ ವಿಚಾರವನ್ನು ಪ್ರಸ್ತಾಪಿಸುವ ಮೊದಲೇ ಮುಖ್ಯವಾದ ಒಂದು ವಿಷಯವನ್ನರುಹುವುದು ಸೂಕ್ತ ಅದೆಂದರೆ ನಮಗೆ ಗೊತ್ತಿರುವ ಎಲ್ಲ ಚರಾಚರಗಳೂ ಗೋಚರಿಸಲ್ಪಡುವುದು-ಪಡುತ್ತಿರುವುದು. ಮೂರು ರೂಪಗಳಲ್ಲಿ ಅದೆಂದರೆ :-೧) ಪ್ರಕೃತಿ:-೨) ಸಂಸ್ಕೃತಿ:-೩) ವಿಕೃತಿಈ ಮೂರನ್ನೂ ಅರಿತ ಮಾನವ ಮೂರೂ ರೂಪಗಳ ಕೃತಿಗೆ ಕೈಹಾಕಿದ!! ಮೂರೂ ರೂಪದಲ್ಲಿ ಭೋಜನಕ್ಕೆ ಸಿದ್ಧನಾದ!!!


}ಮುಂದುವರೆದು................................................       ಜಗತ್ತ್ತಿನ ಸರ್ವೋತ್ಕೄಷ್ಟವಾದುದು ಎಲ್ಲ ಕಡೆಯಿಂದ ಹರಿದು ಬರಲೀ, ಎಂಬ ಸದುದ್ದೇಶವಿರಿಸಿಕೊಂಡ ಭಾರತೀಯ ಮನಸ್ಸು ಹೊರಗಿನ ಅನೇಕ ಸಂಸ್ಕಾರಗಳನ್ನು !! ತನ್ನದಾಗಿಸಿಕೊಂಡಿದ್ದು ಬಹುತೇಕ ಸಾಹಿತ್ಯದ ಮೂಲಕವೇ ಅಲ್ಲವೇ? ಪಾಶ್ಚಿಮಾತ್ಯ(ಪಾಶ್ಚಾತ್ಯವಲ್ಲ!!) ಪೌರ್ವಾತ್ಯ , ದಾಕ್ಷಿಣಾತ್ಯ, ಮತ್ತು ಔತ್ತರೇಯ ವಿಧಿ ವಿಧಾನಗಳ ಸಮ್ಮೇಳನ ಆಗಿದ್ದು ಸಾಹಿತ್ಯದಿಂದಲೇ ಅಲ್ಲವೇ.... ಈ ಸಾಹಿತ್ಯ-ದರ್ಶನಗಳಲ್ಲೂ ಸಾಮಾಜಿಕ ಸಂಸ್ಕಾರಕ್ಕೆ ಒತ್ತು ಕೊಟ್ಟವು, ವೈಯ್ಯಕ್ಕ್ತಿಕ ಸಂಸ್ಕಾರಕ್ಕೆ ಒತ್ತು ಕೊಟ್ಟವು, ಜೀವನ ದರ್ಶನ ಮಾಡಿಸಿದವು, ಮಾನಸಿಕ ವಿಭ್ರಮತೆಯನ್ನು ಹೋಗಲಾಡಿಸಿದವು , ವೈಚಾರಿಕ ದೃಷ್ಟಿಕೋನವನ್ನು ಜಾಗೃತಗೊಳಿಸಿದವು,ಇದೆಲ್ಲಕ್ಕಿಂತ ಅಭಿವ್ಯಕ್ತಿ ಮತ್ತೂ ಉತ್ತದಾಯೀ ಸಂಸ್ಕಾರವನ್ನು ಬೆಳೆಸಿದಂಥವು ಎಂದು ವಿಂಗಡಿಸಿ ನೋಡಿದರೆ ಕಾಲೀನ ಸಂಸ್ಕಾರಗಳನ್ನು ಸಾಹಿತ್ಯಗಳೇ ಬೆಳಕಿಗೆ ತರುವಲ್ಲಿ ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದೇ ನನ್ನ ಅಂಬೋಣ ಇದರೊಟ್ಟಿಗೆ..... ಪ್ರಕೃತಿಯನ್ನು ಸಂಸ್ಕಾರಗೊಳಿಸಿ ಸಂಸ್ಕೃತಿಯ ನಾವೀನ್ಯವನ್ನು ತುಂಬುವುದಕ್ಕಾಗಿಯೇ ಅನೇಕ ಸಾಹಿತ್ಯ 'ಪ್ರಕಾರಗಳ' ಉಗಮವಾಯಿತು ಎನ್ನಬಹುದು. ಹಾಗೆ ಮಾಡುವಾಗ ಮನುಷ್ಯಸಹಜವಾದ ಕುತೂಹಲವೋ,ಅವನಲ್ಲಡಗಿದ ಪೈಶಾಚೀ ಭಾವದ ಆವಿರ್ಭಾವವೋ ವಿಕೃತಿಯೂ ಓನಾಮ ಹಾಡಿತು.ಅಸಂಬದ್ಧಗಳ ಹುಟ್ಟೂ ಆಯಿತೆನ್ನಿ. ಇಂತಹ ಸಾಹಿತ್ಯಗಳ ರಂಜನಾಗುಣದಿಂದಾಗಿ ಪ್ರಾಚುರ್ಯವನ್ನೂ ಪಡೆಯಿತು.ಅದು ಮಾನವನ ವಿಕೄತ ಭಾವಗಳಿಗೆ ಹೊದೆಸಿದ್ದ ಅವಗುಂಠನವನ್ನು ಕಿತ್ತೆಸೆದು ಕುಣಿಯಲಾರಂಭಿಸಿತು!!!!
        ಇನ್ನೂ ಒಂದಿದೆ,, ನಾವು ಗಮನಿಸಿದಂತೆ ಅನೇಕ ಸಂಸ್ಕಾರಗಳು ಭಾಷೆಯ ಬಂಧನಕ್ಕೊಳಪಟ್ಟಿವೆ, ಭಾಷೆ ತನ್ನ ನಿರಂತರತೆಯನ್ನು ಕಳೆದುಕೊಂಡಾಗ ಸಂಸ್ಕಾರಗಳೂ ತಮ್ಮ ಮಹತ್ವವನ್ನು ಕಳೆದುಕೊಂಡಿದ್ದು ಐತಿಹ್ಯಗೋಚರ.ಬ್ರಾಹ್ಮೀ,ಪೈಶಾಚೀ,ಪ್ರಾಕೃತ,ಪಾಳಿ,ಸಂಸ್ಕೄತ,ಮತ್ತು ಸಂಸ್ಕೃತ ಜನ್ಯ ದೇಶ್ಯ ಭಾಷೆಗಳನ್ನು ಅವಲೋಕಿಸಿದಾಗ ಆಯಾ ಭಾಷೆಯ ಉಚ್ರಾಯಕಾಲದ ಸಾಹಿತ್ಯಗಳು ಸಮಕಾಲೀನ ಸಂಸ್ಕೃತಿಯನ್ನು ಮನಂಬುಗುವಂತೆ ವರ್ಣಿಸಿದ್ದು ಕಂಡುಬರುತ್ತದೆ(ಇದಕ್ಕೆ ಹೆಚ್ಚು ವಿವರಣೆ ಕೊಡುವುದು ಬೇಡಾ ಎಂದೆನಿಸುತ್ತಿದೆ)
ಹೀಗೇ ಬರಬರುತ್ತ ಆದೇಶ ಸಾಹಿತ್ಯಗಳ ಕಠೋರತೆಯು ಕರಗಿ ರಮ್ಯ ಸಾಹಿತ್ಯ-ಕಾಂತಾ ಸಂಹಿತೆಯು ಆವಿರ್ಭವಿಸಿತು. ಇದು ಸಂಸ್ಕೃತಿಯನ್ನು ಇನ್ನೊಂದು ರೀತಿಯಲ್ಲಿ ಬೆಳೆಸಿತಾದರೂ, ಪ್ರಭುತ್ವರಹಿತರಿಂದಾಗಿ ಸಾಮಾಜಿಕ ಪರಿವರ್ತನೆಯ ಹಾದಿಯನ್ನು ಕವಲೊಡೆಸಿತು ಎನ್ನಬಹುದು {ಹೀಗೇ ಬರಬರುತ್ತ ಆದೇಶ ಸಾಹಿತ್ಯಗಳ ಕಠೋರತೆಯು ಕರಗಿ ರಮ್ಯ ಸಾಹಿತ್ಯ-ಕಾಂತಾ ಸಂಹಿತೆಯು ಆವಿರ್ಭವಿಸಿತು. ಇದು ಸಂಸ್ಕೃತಿಯನ್ನು ಇನ್ನೊಂದು ರೀತಿಯಲ್ಲಿ ಬೆಳೆಸಿತಾದರೂ, ಪ್ರಭುತ್ವರಹಿತರಿಂದಾಗಿ ಸಾಮಾಜಿಕ ಪರಿವರ್ತನೆಯ ಹಾದಿಯನ್ನು ಕವಲೊಡೆಸಿತು ಎನ್ನಬಹುದು}ಮುಂದು ವರೆದಿದ್ದು......................................................... 


ಈ ಕೃತಿಗೂ, ಕೃಷಿಗೂ ಅವಿನಾಭಾವ ಸಂಬಂಧವನ್ನು ಭಾರತೀಯ ಮನದಲ್ಲಿ ಕಾಣುತ್ತೇವೆ. ಅದರಂತೆ ವೇದದಲ್ಲಿ "ಸೀರಾ ಯುಜಂತಿ ಕವಯೋ ಯುಗಾ ವಿ ತನ್ವತೇ ಪೃಥಕ್.. ಧೀರಾ ದೇವೇಷು ಸುಮ್ನಯೌ" ಮುಂತಾದ ಮಂತ್ರಗಳು ಆ ಕಾಲದ ಸಂಸ್ಕೄತಿಯೊಡನೆ ಕೃಷಿಯೂ, ಕಾವ್ಯ ಪಟುತ್ವವೂ ಬೆಸೆದುಕೊಂಡಿರುವುದನ್ನು ತೋರಿಸುತ್ತದೆ. ಇದರ ಅರ್ಥವಿವರಣೆ ನನಗೆ ತಿಳಿದಂತೆ, ನನ್ನ ಪುಟ್ಟ ಮೆದುಳಿಗೆ ಹೊಳೆದಂತೆ, ಕೊಡುತ್ತೇನೆ ( ದೇವೇಷು ಧೀರಾಃ ಕವಯಃ= ಪ್ರಭುತ್ವವುಳ್ಳವರು/ಬುದ್ಧಿವಂತರು,:ಸೀರಾ ಯುಜಂತಿ= ನೇಗಿಲನ್ನು ಕಟ್ಟಿ ಉಳುಮೆ ಮಾಡುತ್ತಾರೆ; ಯೇಕೆಂದರೆ, ಸುಮ್ನಯೌ= ಸುಖ ಪ್ರಾಪ್ತಿಗಾಗಿ ; ಯುಗಾ ಪೃಥಕ್=ಬೇರೆ ಬೇರೆಯಾದ ಎತ್ತುಗಳಿಗೆ ಒಂದೇ ನೊಗವೂಡಿ : ವಿತನ್ವತೇ = ಹೇರುತ್ತಾರೆ  ಉಳುತ್ತಾರೆ ) ವಾಚ್ಯಾರ್ಥ :- ಜಾಣ್ರಾದವರು ತಮ್ಮ ಐಹಿಕ ಸುಖಕ್ಕಾಗಿ ಕೃಶಿಯಂಥಾ ಕೆಲಸಗಳಲ್ಲಿ ತೊಡಗುತ್ತಾರೆ,ಅದಕ್ಕಾಗಿ ನೇಗಿಲಿಗೆ ಜೋಡಿ ಎತ್ತುಗಳನ್ನು ಹೂಡಿ ಉಳುಮೆ ಮಾಡುತ್ತಾರೆ ; ..........................




( ಈ ವೇದ ಭಾಗ ಕೃಷಿಗೆ ಸಂಬಂಧಿಸಿದ್ದೇ ಆದರೂ ಇದನ್ನು ಆರೋಪ ಮಾಡಿಕೊಳ್ಳ ಬೇಕು)

* ದೇವರನ್ನೇ ದೂರುವವರು.....!!

  1. ದೇವರನ್ನೇ ದೂರುವವರು.....!!                                           .........ಕೆಲವರು ದೂರುತ್ತಾರೆ!!! ಯಲ್ಲರನ್ನು ದೂರುತ್ತಾರೆ,ಯೆಲ್ಲವನ್ನೂ ದೂರುತ್ತಾರೆ. ದೂರುವುದನ್ನೇ ಕಾಯಕ ಮಾಡಿಕೊಂಡಿರುತ್ತಾರೆ!! ಹಾಗಂತ ಹೊಗಳ್ಬೇಕೂ ಅಂತ ಅಲ್ಲ.!!!ಸುಮ್ಮನಾದ್ರೂ ಇರಬಾರದೇ? ಊಹೂಂ....ಚಪಲ!!!ನೋಡಿ.... ಗಾಂಧಿಯನ್ನೂ ದೂರಿದರು,ಬಾಬಾನನ್ನೂ ದೂರಿದರು,ಕೊನೇಗೆ ದೇವರನ್ನೂ ದೂರಿದರು,,, ಆದರೆ, ಆ..ದೂರಿದವರಾರೂ ಒಂದು ದಿನಕ್ಕೂ ಗಾಂಧಿಯಾಗಲೇ ಇಲ್ಲ, ಬಾಬಾ ಆಗಲೇ ಇಲ್ಲ. ದೇವರಾಗಲು ಗೊತ್ತೇಇಲ್ಲ ಬಿಡಿ!!! ಗಾಂಧಿ ಯೇನು ಸುಮ್ಮನೇ ಆದ್ರೇ, ಸತ್ಯವಿರಲಿಲ್ಲವೇ? ಇವರಾಗಲಿ ನೋಡೋಣ!!!ಬಾಬಾ ಯೇನು ದಿನಬೆಳಗಿನಲ್ಲಿ ವಿಖ್ಯಾತರಾದ್ರೇ....., ಸಿದ್ಧಿಯಿರಲಿಲ್ವೇ?ಇವರಾಗಲಿ ನೋಡೋಣ!!!ದೇವರೇನು ಮಾನ ಬಿಟ್ಟನೇ ದೇವರಾಗಲು? ಇವರಾಗಲಿ ನೋಡೋಣ!!! ....... ಹ್ವಾಯ್.... ಇವರು ಈ ದೂರುವವರು .....ಯಾರೂ ಆಗಲಿಲ್ಲ!!! ಬಾಬಾ ಆಗಲಿಲ್ಲ ಗಾಂಧೀ  ಆಗಲಿಲ್ಲ,ದೇವರೂ ಆಗಲಿಲ್ಲ, ...ಏಕೆಂದರೆ.... ಅವರಲ್ಲಿದ್ದ...ಸತ್ಯ-ಸಿದ್ಧಿ-ಮಾನ ಈ ಮೂರೂ ಇಲ್ಲವಲ್ಲಾ!!!ಥೂ ನಾಲಾಯ್ಕರು........ಮಾತಾ ಶತ್ರುಃ ಪಿತಾ ವೈರೀ ಯೇನ ಬಾಲೋ ನ ಪಾಠಿತಃನಶೋಭತೇ ಸಭಾ ಮಧ್ಯೇ ಹ೦ಸಮಧ್ಯೇ ಬಕೋ ಯಥಾ||


* ಮಂಜಜ್ಜನ ಮಾನಗೇಡಿ ಭಾನಗಡಿಗಳು..!!....ಕಥಾ ಮಾಲಿಕೆ

                         ಮಂಜಜ್ಜನ ಮಾನಗೇಡಿ ಭಾನಗಡಿಗಳು....!!....౧

    ಅಪ್ಯಾ..... ಓ ಅಪ್ಯಾ.... ಈವತ್ತು ಆ ಕೆಳಗಿನ ಮನೇ ಸುಬ್ಬಕ್ಕ .................. ಯೆಂತದೋ ..? ತಮಾ... ಕರದ್ಯಾ? ಯೆನ್ನ..... ಮಾಣಿ ಮಾತು ಮುಗೀಸೂ ಮೊದ್ಲೇ ಅಪ್ಪಯ್ಯ ಅಡ್ಡಬಾಯಿ ಹಾಕ್ದಾ.... ಹೌದೋ.... ಅದೇ ಆ ಸುಬ್ಬಕ್ಕ....... ಮತ್ತೆ ಮಾಣಿ ಹೇಳೂಲಕ್ಕೂ......... ಬಚ್ಚಲ ಮನೇಲಿ ತಾಮ್ರದ ಚೊಂಬು ಹಂಡೆವಳಗೆ ...ಧಣ್..ಧಣಾಲ್..ಹೇಳೀ ಬೀಳುಲಕ್ಕೂ ಸರೀ ಹೋತು...!!! ಮಾಣಿ ಸಾಯಲಿ ಅಬ್ಬೇ...... ಯೆಂತಾ ಆತೇ....... ಹೇಳಿ ಮಾತು ಮರತು ಅಬ್ಬೇ ಕರೂದಕ್ಕೂ ಸರಿಹೋತು,,,,ಅಪ್ಪಯ್ಯ ಅಲ್ಲಿಂದ ಉಂಬ್ಲಕ್ಕೆ ಎರಡು ದೊಡ್ ಕೊಡಬಾಳೇನಾರೂ ಕೊಯ್ಕಾ ಬತ್ತೇ ಹೇಳಿ ಅಲ್ಲಿಂದ ಜಾಗಾ ಖಾಲೀ ಮಾಡ್ದಾ.... ಆದ್ರೂ ಮಾಣಿ ಮನಸಲ್ಲಿ ಸುಬ್ಬಕ್ಕ....... ಹಾಂಗೇ ಇದ್ದಿತ್ತು.....!!!!....ಅಲ್ಲಿ ದೇವರ ವಳಗಿಂದ....... ಅಜ್ಜ..... ಗೆಂಟೇ ಬಾರಿಸಿ... 'ವನಸ್ಪತಿ ರಸೋತ್ಪನ್ನೋ....ಗಂಧಾಡ್ಯೋ..... ' ಹೇಳೂದ ಕೇಳಿ ಬಚ್ಚಲ ಮನೇ ವಳಗಿಂದ ಅಬ್ಬೆ... ಕೂಸೇ.... ಅಜ್ಜಂಗೆ ನೈವೇದ್ಯಕ್ಕೆ ಆತಕು...... ಯನಗಿನ್ನೂ ಮಿಂದಾಜಿಲ್ಲೆ..... ಬಗೇಲಿ ತಡೂಲೆ ಹೇಳು..ಮಿಂದ್ಕಾ ಬತ್ತೆ ಆಯಿ...... ಹೇಲಿ ಕೂಸಿಗೆ ಕೂಗಿ ಹೇಳ್ತು.. ಕೂಸು ದೇವ್ರ ವಳದಿಕ್ಕೆ ಇಪ್ಪ ಅಜ್ಜನ ಹಿಂದೆ ಹೋಗಿ....ಅಜ್ಜಾ....ಬಗೇಲಿ ತಡ್ಯವಡೋ....ಆಯೀಗೆ ಮಿಂದಾಜಿಲ್ಯಡಾ..... ಅಂತು......ಅಥೋ...... ಇನ್ನೂ ಮಿಂದಾಜಿಲ್ಯಾ...... ಅಯ್ಯೋ ರಾಮಾ.....ಯೆನಗೆ...ಧೂಪಾರ್ತೀ ಮಾಡಾಗೋತಲೇ..ಕೂಸೇ...ಮೊದ್ಲೇ ಹೇಳೂಲೆ ಯೆಂತಾ ಧಾಡ್ಯಾಗಿತ್ತಡಾ....ಬೆಳಗಿಂದಾ ಯೆಂತಾ ದಂಡ್ ಕಡೀತಿತ್ತಡಾ.... ಗೋಲೆ.... ಗೋಲೆ... ಹಡ್ಬೆ ಸುದ್ದೀ ಹೇಳ್ ಹೇಳ್ ಹೊತ್ ಕಳೇತೋ. ... ಇನ್ನೂ ಮೀಯಗಿದ್ದೇ ಯೆಂತಾ ಸಾಯ್ತಿತ್ತಡಾ.... ಅಜ್ಜನ ಧೂಪಾರ್ತಿಯೊಟ್ಟೀಗೆ.... ಆಗ್ತ್ನೇ ಇದ್ದ ಮಂತ್ರಪುಷ್ಪಾ !!!!!...... ದೇವ್ರೀಗೇ ಪ್ರೀತಿ... 
     ಅವ ಯಾವಾಗ್ಲೂ ಹಾಂಗೇಯಾ...... ಬವ್ವುದೂ ಅಂದ್ರೆ....ಪರಮ ಪ್ರೀತಿ..... ಖರ್ಮ ತೀರೋಪ್ಲೇ.... ನೆಟ್ಟಗೆ ನಿತ್ಕಂಬ್ಲೇ ಆಗಿಗಿದ್ದೇ ಹೋದ್ರೂ........ ನೆಡಗಸ್ತಾ..ಯೆಲ್ಲರನೂವಾ..... ಯೆನಗೆಂತಾ ಗುತ್ತಿಲೇ ಹೇಳಿ ಮಾಡ್ಕಂಡ್ಯಾ...... ಯೆಲ್ಲಾ ಗುತ್ತಿದ್ದು ಇವನ ಅವಾಂತ್ರ...... ಹೇಳೂಲೆ ಹೋದ್ರೆ ಮೇಲ್ ಮೊಕನಾಗಿ ತೂಪಕಂಡಾಗೆ ಹೇಳಿ ಹೇಳಿಗಿದ್ದೇ ಕಳೀತ್ನೇ ಇದ್ದೆ... ಅದೇ..ಮತ್ತೆ ಹಂಬ್ಲಾತು.... ಈ ಮಳ್ ಮಂಜಜ್ಜ.... ಮೊನ್ನೆ.... ತೋಟ ತಿರಗೂಲೇ ಹೋದಾವ..... ಮಂಡಗಾದಿಗೇಲಿ.... ಮನಿಕಂಡಿದ್ದಿದ್ನಡಾ...ಹೇಳಿ ಬಾಳೆ ಕೊವ್ವುಲೆ ಬಂದ ಸುಬ್ಬಕ್ಕ ನೋಡದ್ದು ಹೇಳಿತ್ತು....... ಅದಷ್ಟೇ ಅಲ್ಲ...ಬಿಲ್ಯೋ......ಇನ್ನೂ ಸುಮಾರು ಕತೆ ಪುರಾಣಾ ಇದ್ದು ಅವಂದು......ಅಚಾರಿ ಗೌರಿ..... ಅಡ್ಕೆ ಸೊಲೂಲೆ ಬಂದಾಗ, ತುದೀಮನೆ ಯೆಂಟ್ರೊಣ ಭಾವಂಗೆ ಹೆಣ್ಣ ನೋಡುಲೆ ಹೇಳಿ ಹೊಸಾಕುಳೀಗೆ ಹೋದಾಗ, ಮುಕ್ರಗೋಳ್ ಮಕ್ಕಳ ಶಿಂಗೀಬೋಳನ ಕತೆಲಿ... 'ಶಿಂಗ್ಯ ತಂದ ಮುಂಡಕ್ಕೀಯಾ ಹ್ಯಾಂಗ್ ತಿಂದ್ಯೇ ಗಂಗವ್ವಾ',,,, ಹೇಳಿ ಜಟ್ಟಿ ಪದ.....ಹೇಳಕರೆ... ಈ ಮಜ್ಜಜ್ಜ.... ಅಲ್ಲಿ ಸೋಗೆ ಅಟ್ನಗೇ ತಡ್ಸ್ ಬಿದ್ದು ಮೊಳ್ಳಂಡೇ ವಡ್ಕಂಡು ಅಂಗೋಸ್ತ್ರ ಪಂಜೀ ಕಾಲಿಗೆ ಕಟ್ಕಂಡು ಸುಮ್ಮಂಗೆ ಮಂಚದ ಮೇಲೆ ಬಂದು ಬಿದ್ಕಂಡಾಗ,,.. ಹೀಂಗೆ ವಂದಲ್ಲ ಎರಡಲ್ಲಾ ...ಮಂಜ್ಜಜ್ಜನ ಭಾನಗಡಿ.......!!! ಅದಾರು ಯೆಂತದು...ಪೂರಾ ಮಾನಗೇಡಿದೇಯಾ.......!!!! ಹೇಳ್ತೆ... ಹೇಳ್ತೆ ತಡ್ಕಳಿ..ಬಗೇಲಿ.....ರಾಶೀ ಇದ್ದು   ,,,. ಒಂದೊಂದೇಯಾ ಬಿಲ್ಯೋ..... 


*********************************************************************************

 ಮಾನಗೇಡಿ ಭಾನಗಡಿ .......ನಂ.౨
         ತೋಟಕ್ಕೆ ಹೋದ ಮಂಜಜ್ಜ .........ಹಾಳೆಕಡೀಗೆ ಒಂದು ಛಲೋ ಹಾಳೆ ಬಿದ್ದಿದ್ರೆ ಹೆಕ್ಕಂಡು ಬನ್ನಿ ಮಾವಾ.. ಹೇಳಿ ಹೇಳಿದ ಸೊಸೆ ಪಾರ್ವತೀ ಮಾತ್ನಂತೆಯ ಇಡೀ ತೋಟ ತಿರಗಿ ಹಾಳೇಕಡೀಗೆ ಹಾಳೆ ಹೆಕ್ಕಂಡು ಇನ್ನೇನು ನೀರವಳೇಳಿ ಕೂತ್ಗಂಡು ...... ತೊಳಕತ್ನೇ ಇರಕರೆ ಮಾಣಿ...... ಅಜ್ಜಾ... ಓ ಅಜ್ಜಾ... ಯಾರೋ.. ಚೌಡೀ ಪೂಜೆ ಕೊಡೂಲೆ ಬಂಜ್ವೋ.... ಬೇಗ್ ಮಿಂದ್ಕಳವಡಾ.... ಅಪ್ಪಯ್ಯ ಅಡ್ಕೆ ತಗಂಡು ವಖಾರೀಗೆ ಹೋಜಾ... ಮೊಗಳಕೇರಿಲಿ ಇಪ್ಪ ಹಕ್ಕಲ ಚೌಡೀಗಡಾ... ಅಂದ... ಚೌಡಿ ಪೂಜೆ ಸುದ್ದಿ ಕೇಳದ್ದೇಯಾ... ಅಜ್ಜನ ಮೊಕ ಊರಗಲಾತು... ಮಾಣಿ... ಬಾಳೇಣ್ಣ ಕೊನೆ ಅಲ್ಲೇ ಹಕ್ಕೆಹೊಳ್ಳಿ ಕೆಳಬದೀಗೆ ಇಟ್ಟಿದ್ದೆ. ಬಾಕಿ ಪೂಜೆ ಸಾಮಾನೆಲ್ಲಾವ ಕೂಸನಕೂಡೇ ವಳಗಿಡೂಲೆ ಹೇಳಿದ್ದೆ... ನಾ ಬಗೇಲಿ   ಮೇಲೆ ಕರಡದ ಬ್ಯಾಣದ ಬದೀಗೆ ಹೋಗ್ ಬತ್ತೆ... ಈಗಿತ್ಲಾಗಿ.... ಅಲ್ಲಿ ಯೆಲ್ಲಾ ಸೂರೆಯಾಗೋಜು...ದನಗಳ ಗೋಲೆ... ಸಂತೀಗೆ ಗೋವೇ ಬೀಜಪ್ಪಲೆ ಶುರುವಾಜು..... ಕದ್ದಕಂಡೋಪ್ಲೆ ಬಂದ್ ಸಾಯ್ತೋ.. ಕಳ್ನನನ್ ಮಕ್ಕೋ.. ಹೋಗಿ ನಾಕ್ ಮುಳ್ಳಜಡೇನಾರೂ ತುರ್ಕಿಕ್ಕಿ ಬತ್ತೆ..... ಹೇಳಿಕ್ಕಿ ಬೇಣಕ್ಕೆ ಓಡ್ದಾ..... ಮಂಜಜ್ಜ..... ಅತೋ ಯಾರೋ ಮಾಣೀ....ಪೂಜೆ ಕೊಡೂಲೆ ಬಂದವಾ..... ಆ ಸುಟ್.... ಗಾಣಗರ ಅಕ್ಕಮ್ಮನ ಮಗ...... ಸಣ್ಕೋಸಾಗಿಕ್ಕು...... ಅವನೇಯಾ ಪ್ರತೀ ವರ್ಷ.. ಆ ಹಕ್ಕಲ ಚೌಡೀಗೆ ನೆಡ್ಕಂಬವಾ.... ಹೇಳಿ ಗೊಣಗತ್ನೇ  ತೋಟದಿಂದ ಮನೇ ಅಂಗಳಕ್ಕೆ ಬಂದು.... ಮುಂಗಚ್ಚೇ ವಳಗೆ ತುಂಬ್ಕಾ ಬಂದ ಹಣ್ಣಡಕೇನೆಲ್ಲಾವಾ ಕಚ್ಚೆ ಶೆರಗ ಬಿಚ್ಚಿ ಅಂಗಳದಲ್ಲಿ ಹಾಕಿಕ್ಕಿ...... ತಂಗೀ ಬಚ್ಚಲಲ್ಲಿ ಯಾರಿದ್ವೇ..?...ಮಿಂದ್ಕಂಡು ಹೋಗ್ ಸಾಯಕ್ಕಾತಲೀ....... ಅವನ ಪೂಜೆ ಕೊಡೂ ಶಾಸ್ತ್ರ ಮುಗೀಸಾಕಕ್ಕಾತು.... ಹನಿ ಬೆಂಕಿ ಜೋರ್ ಮಾಡು ಕೂಸೆ...... ನೀರು ಚೆಪ್ಪಗರೇತು....... ಹೇಳಿ ಬಚ್ಚಲೀಗೆ ಹೋದ.....


************************************************************************************************************

ಮಾನಗೇಡಿ.. ಭಾನಗಡಿ..... ನಂ.౩

      ಇಂದು ಏಕಾದಶಿಯಲದನೋ ಮಾಣೀ..... ಶಂಜಪ್ಪಾಗ ದೇಸ್ಥಾನದಲ್ಲಿ ಬಜ್ಞೆ ಇದ್ದು ಹೇಳಿದ್ನಪಾ .... ಗಣೇಶ್ ಬಾವಾ... ಅವಂಗೆ ಯೆಲ್ಲಾಪುರಕ್ಕೆ ದಾರೆ ಪೂಜೆಗೆ ಹೋಗೊ ಹೇಳಿ ಯೆಂಗೆ ವರಸಿಕ್ಕಿ ಹೋಗ್ತಾ ಅಂಬಾ ಕಾಣ್ತು......... ವಂದ ಮಳಗಾಲ ಬಿಡತ್ನಿಲ್ಲೆ ಖರ್ಮ ತೀರದಂವಾ.....  ಅಲ್ಲಾ ಯಾನೂ... ಕಸುವಿದ್ದಾಗ ಹಾಂಗೇ ಆಗಿತ್ತು ಬಿಲ್ಯೋ..... ಈಗ ಆಗ್ತಿಲ್ಲೆ ... ಆದ್ರೂ ಕಳಚೆ ಗಣಪೆಗ್ಡೇರು ಪ್ರತೀ ವರ್ಷ ಹೇಳ್ ಕಳಸ್ತ್ರು.. ಮಂಜ ಭಟ್ರೇ.... ನೀವು ಪೂಜೆ ಮಾಡ್ದಾಂಗೆ ಆಗ್ತಿಲ್ಲೆ ಹೇಳ್ತು ಯಮ್ಮನೆ ಹೆಗ್ಗಡತಿ. ನೀವು ಮಂತ್ರಾಕ್ಷತೆನಾರೂ ಕೊಟ್ಟಿಕ್ಕಿ ಹೋಗಿ ಬಂದು, ಹೇಳಿ ವರಾತಾ ಮಾಡ್ತ್ರು.. ಯಾನು ಅಡ್ಡಿಲ್ಯರಾ ಬತ್ತೆ ,ಯಾವಾಗಾರೂವಾ..... ಬಂದಾಗ್ಲೇ ಅದ್ಯೆಂತಾ ಮಂತ್ರಾಕ್ಷತೆನಾರೂ ಕೊಡ್ತೆ ಹೇಳಿ ಹೇಳಿದ್ದೆ,...ಅಥೋ...... ಯಾ ಯೆನ್ನ ಪುರಾಣಾ ಹೇಳ್ತನೇ ಇದ್ದೆ ನೀ ಹಾಂಗೇ ಹೋದ್ಯಲೋ...... ಮಾರಾಯಾ..... 
      ಯೇ ಮಾಣೀ..... ಮಾಣೀ...... ಅಥೋ ಹೋಗತ್ಯೋ ಇಲ್ಯೋ.... ಹೇಳು,,, ಯಾನಾರೂ ಹೋಗಬತ್ತೆ... ಅಲ್ಲಿ ಆ ಸುಟ್ ಓಣಜೀಲಿ ಕಂಡ್ ಸಾಯತಿಲ್ಲೆ ಹೇಳಿ ಹೇಳದೇ..... ಅಂದ್ಕತ್ನೇ ತನ್ನ ಮುಂಗಚ್ಚೆಯಾ ಒಂದು ಬಾರಿ ಬಿಚ್ಚಿ ಸರಿಮಾಡಿಕಂಡ ಮಂಜಜ್ಜ... ಅಂತೂ ಮಾಣಿ ಬಜನೇಗ್ ಹೋಪು ನಮನಿ ಇಲ್ಲೇ ಹೇಳಿ ಮಂಜಜ್ಜ ತಾನೇ ಬೇಟ್ರಿ... ಹುಡ್ಕೂಲೆ  ಹೋದ.... ....ಕೂಸೇ..... ಯೆಲ್ ಹಾಳಾಗೋದ್ಯೇ..... ಈ ಸುಟ್ ಕಣ್ಣು ಕಂಡೂ ಸಾಯ್ತಿಲ್ಲೆ.... ತಂಗೀ..... ಓ ತಂಗೀ....  ಬಗೇಲಿ ಅಜ್ಜನ ಆ 'ಎವರೆಡಿ' ಬೇಟ್ರಿ ಹುಡೀಕತ್ತೆ ...ಗುಬ್ಬಾ... ಆ ಚಿಮಣೀ ಹಚ್ಕಂಬಾ...ಇಲ್ಲಿ... ಯೆಂತದೂ ಕಾಣ್ತಿಲ್ಲೇ... ಯೆಮ್ಮನೆ ಪದ್ನಾಭ..... ಇಲ್ಲಿ ಯೆಲ್ಲಾ ಆ ಸುಟ್ ಕೌಯ್ತದ ಮಾಲ ಇಟ್ಟಿಕಿದಾ... ಕೈ ಹಾಕೀರೆ ಶಿಬಕೆ ಹೆಟ್ಟತು ಸಾಯಲೀ...... ತಂದ್ಯನೇ....
     ಅಂತೂ ಕೊಟಗೇ ವಳಗಿಂದ....... ಅಜ್ಜಾ... ನಾ ಕೊಟ್ಟಗೇಲಿದ್ನೋ ಆಯಿ ದನಾ ಕರೂಲೆ ಬಾ ಬಗೇಲಿ ಚಾಳಿ  ದನಾ  ವದೇತು ಕೊಡ್ತಿಲ್ಲೆ ಹೇಳಿ ಯೆನ್ನ ಕರದ್ದು ... ಬಂದೆ.... ಅಲ್ಲೇ ಯೆಲ್ಲಾರೂ ಇದ್ದಿಕ್ಕ .... ಅಪ್ಪಯ್ಯಾ... ಅಲ್ಲೇ ಮೇಲೆ ಗಿಳೀಗೂಟಕ್ಕೆ ಇಡತಿದ್ನಪಾ.... ಅಲ್ಲೇ ಇದ್ದಿಕ್ಕಾ... ನೋಡು...ಇಲ್ದೋರೆ ನಾ ಬಂದು ತೆಕ್ಕೊಡ್ತೆ ತಡ್ಯಾ...ಅಂತು.
            ಈ ಮಂಜಜ್ಜಂಗೆ ಪುರುಸೊತ್ತಿಲ್ಲೆ ಅವ ಕೂಸು ಬಪ್ಪೂದ್ರೊಳಗೇ ಬೇಟ್ರೀ ಗಿಳೀಗೂಟದಿಂದ ತೆಗೂಲೆ ಹೋದ.ಯೆಂತಕ್ಕೇ ಅಂದ್ರೆ ದೇಸ್ತನಕ್ಕೆ ಇಂದು ಅಚಾರಕ್ಕೋ,ಮಡ್ವಾಳಕ್ಕೋ ಬತ್ತೋ ಅವರದ್ದೇ ಪಾಳಿ ಬಜ್ಞೆದು, ಅಚಾರಿ ಸುಬ್ಬಿ ಮಗಳು ಚಲೋ ಬಜ್ಞೆ ಹೇಳಕೊಡ್ತು ಹೇಳಿ ಈ ಬಜ್ಞೆಗೆ ರಾಶಿ ಜನ ಬತ್ತೋ ಹೇಳಿ ಯೆಂಗೆ ಕಡೇಗೆ ಗುತ್ತಾತು....!........ಧಡ್.....ಧಡಾಲ್.... ಓ ಬಿತ್ತು.... ಅಷ್ಟೂ ಬಿತ್ತು....... ತಮಾ........ಹೋತೋ...... ಅಯ್ಯಯೊ....ಕಾಲು....ಹೋತು.... ನಾನು..... ನಾಳೆ ಕೋಲೇಜಿಗೆ ಹೋಪ ಅಂಗಿ ತೊಳದಾಕೂಲೇ ಹೇಳಿ ಐನೂರಾವಂದ್ ಸಬಕಾರಾನಾ ತುಂಡ ಮಾಡ್ತಾ ಇದ್ದವ ಇವನ ಕೂಗಾಟ ಕೇಳಿ ಓಡೋದೆ ಹೋಗ್ ನೋಡೀರೆ........
         ಮಂಜಜ್ಜ ಮರದ ಬಾಗಲಪಟ್ಟಿ ರಾಶಿ ಅದೀಗೆ ಕಾಲ ಸಿಕ್ಕಿಸಿಕಂಡು ವದ್ದಾಡತ್ನೇ ಇದ್ದಾ...... ಯೆನಗೇ ವಂದ್ ಬಾರಿ ಕಣ್ಕತ್ಲೆ ಬಂದಾಂಗಾತು...... ಅಜ್ಜಾ...... ಯೆಂತದೋ ಇದೂ.... ಅಲ್ಯೆಂತಕ್ಕೆ ಸಾವಲೇ ಹೇಳಿ ಹೋಗಿದ್ಯಾ...... ಯಾರಿಗಾರೂ ಹೇಳೂದಲ್ಲದಾ.... ನಾಇದ್ದೆ ಕೂಸಿದ್ದು ಆಯಿದ್ದು...... ಊಹೂಂ.... ಯೋಳು ಯೆದ್ಕೋ....ಹ...ಸಾವಕಾಶ..... ಹೇಳಿ ಅವನ ಕೈ ಹಿಡಿದು ಎತ್ತೂಲೆ ನೋಡ್ದೆ.... ಅಷ್ಟೊತ್ತೀಗೆ ಅಪ್ಪಯ್ಯನೂ ಬಂದಾ... ಅವ ಸಂಜಪ್ಪಾಗ ವಂದ್ ಸ್ವ್ಲ್ಪಾ ಹೊತ್ತು ಹೆರಬದೀಗೆ ಕಾಲಾಡೂಲೆ ಹೋಗ್ತಾ.... ದಿನಾವಾ......ಅಲ್ಲಿ ಯೆಂಕುಟೀ ಭಾವಾ, ಗಣೇಶ್ ಭಾವಾ... ಶಿದ್ನಮನೇ ಯೆಂಗ್ಟ, ಮಡಿವಾಳ ಮಂಜು ಯೆಲ್ಲಾ ಸೇರೀರೆ,,,,, ವಂದ್ ಆಟಾ ಕೋಟಾಡೂದು,,,,,, ಇಲ್ದೋರೆ... ನಾಕೇ ಜೆನಾ ಆದ್ರೆ ನೋಸ್ಟ್ರಂಪು..... ಕತ್ಲಪ್ಪಕಾರೆ ಮನೆ ಸೇರೂದೇಯಾ.... ಇಲ್ದೋರೆ ಆಯಿ ಬಿಡಕಾತಲೀ....... ಗುರುಗಳಕಿಂತಾ ಛಲೋ ಮಂತ್ರಾಕ್ಷತೆ ಹಾಕ್ತು..ಅದು,,,ಹಾಂಗಾಗಿ ಬಂದ ಬಿಲ್ಯೋ..... 
      ಇವತ್ತು ಅಪ್ಪಯ್ಯ ಬಗೇಲಿ ಬೇಗ ಬಂದ , ಬಂದವನೇ ಇವನ ಅವತಾರಾ ನೋಡಿ....... ಥೋ..... ಸುಮ್ಮಂಗೆ ಕೂತ್ಗಂಬ್ಲೆ ಹೇಳಿ ಆಗ್ತೇ ಇಲ್ಯಾ ನೋಡ್ವೋ... ಯೆಂತದಾರೂ ವಂದ್ ಹರದೀನಾ ಮಾಡೇ ತೀರೋ ಹೇಳಿ ಇದ್ದಕೋ... ಕೈಲಾಗ್ತಿಲ್ಲೇ ಹೇಳಿ ಗುತ್ತಿದ್ದು..... ಹೀಂಗೇ ಬೈತ್ನೇ ಅಜ್ಜನ ಎತ್ತಿ ಕರಕಂಬಪ್ಪೂಲಕ್ಕೂ ......... "ಧರಮಶಾಲೆ ಪುಟ್ಭಟ್ರು "ಭಾರೀ ವಳ್ಳೇ ಜೆನಾ ಬಿಲ್ಯೋ.......... ಹೋಯ್....ಯಾರ್ರೋ ಮನೇಲಿ.... ಕುನ್ನಿದ್ದನ್ರೋ...!!!!! (ಮನೇಲಿಪ್ಪೋವು ಯೆಲ್ಲಾ....) ಹೇಳಿ ಕೇಳೂದಕ್ಕೂ,,,,, ಆಯಿ ಹಾಲ ಕರಕಂಡು ಶೆರಗಲ್ಲಿ ತಂಬಿಗೆ ಮುಚ್ಚಕಂಡು ಬಪ್ಪೂದಕ್ಕೂ ಸರೀ ಹೋತು,,,,,,,, ಅಷ್ಟರಲ್ಲಿ ಆ ಸೊನಗಾರಮನೇ ಬೇಳೀ ಕುನ್ನಿ ಸರಕ್ಕನೇ ಅಡಗಳತ್ತಕ್ಕು ಆಯಿ ಹೆದರಕಂಡಿ ........ಹಾಲಚೊಂಬಾ  ಬೀಳ್ಸೂಲೆ ಕೈಬಿಡುದು ಅಲ್ಲೇ ಅಬಗತ್ತಿ ಹಿಡಕಂಡತು. ಆದ್ರೂ ಹಾಲು ಹನಿ ಚೆಲ್ಲೋತಕು... ಅತೋಪಾ ಈ ಮನೆಹಾಳ್ ಕುನ್ನಿ ....... ಅಷ್ಟು ಹಾಲ್ ಚೆಲ್ಲಾಕ್ತಿತ್ತು ಈಗ.... ಅತೋ... ಪುಟ್ಟಿಮಾವಾ....... ಬಂದ್ಯಾ ...ಬಾ..... ವಳಗಿಟ್ಟಿಕ್ಕಿ ಬತ್ತೇ.... ಹೇಳಿ ವಳಗೋತು ಉಳಿಕೆ ಚೆಲ್ಲಿದ ಹಾಲ ಕುನ್ನಿ ನೆಕ್ಕೂದ ನೋಡಿ ಯೆಮ್ಮನೇ ಕರೀಬೆಕ್ಕು  ಅದ್ರ ಹೆದ್ರಸೂಲೆ ಗ್ವಾರ್.... ಗುಸ್... ಕ್ವೇ.... ಹೇಳಿ ಗುರುಗುಟ್ಟೂಲೆ ಬಂತು... 
        ಮಂಜಜ್ಜ ಹಗೂರಕ್ಕೆ ಕಾಲ ಯೆಳಕಂಡು ಎದ್ದು ಬಂದಾ... ಬಂದವನೇ ...ಕಾಲ ಕುಂಟಾಯಕಂಡೇ ....ಅತೋ ನೀನೂ ಬಜ್ಞೆಗೇ ಬಂದ್ಯೋ..... ಪುಟ್ ಭಾವಾ.... ಈವತ್ತು ಅಚಾರಕ್ಕಳ ಪಾಳಿ ಅಲ್ಲ್ದಾ ನೀ ಬತ್ತೇ ಹೇಳಿ ಯೆನಗೆ ಮೊದ್ಲೇ ಗುತ್ತಾಗಿತ್ತು.... ನೋಡಾ...ಆ ಸುಟ್ ಬೇಟ್ರೀ ತೆಗೂಲೇ ಹೇಳಿ...... ಹೋಗಿ ಯೆನ್ ಕಾಲೂ.......  ಅಂತಾನೇಯಾ ಹಗೂರಕ್ಕೆ ಪುಟ್ಟಭಟ್ರ ಮೊಕಾ ನೋಡ್ದಾ.... ಪುಟ್ ಭಾವ ಹಣ್ ಮೀಶೆ ಮೇಲೆ ಕೈಯ್ಯಾಡಿಸ್ತನೇಯಾ...(ಇವ ಬಂದ್ರೆ ತೊಂದ್ರೆಯಾಗ್ತಿತ್ತು) ..... ಹೂಂ..... ಹೌದೋ... ಮಂಜಣ್ಣ..... ಯಾನೂ ಅದ್ಕೇ ಬಂದೆ...... ನೀ ನೋಡೀರೆ ಈ ನಮನೀ ಮಾಡ್ಕಾ ಕೂತ್ಗಂಜೆ.....ಈವತ್ತು ಯಾ ವಬ್ಬನೇ ಸುದಾರ್ಸೂದೇಯನಾ!!! ಅಂಬಾ ಕಾಣ್ತು ನಿನ್ ನೋಡೀರೇ...... ಅಂದ....... ಹೌದೋ........ ಭಾವಾ..... ಭಾರೀ ಛಲೋ ಹೇಳತ್ಳು...ಅಲ್ದನಾ....!! ದೇವರು ಯೆದ್ ಬಂದಾಂಗಾಗ್ತು!! ಮಾರಾಯಾ.... ಯೆನ್ ಕಾಲು..... ಸಾಯಲಾ ಹೆಜ್ಜೆ ಕಿತ್ತಾಕೂಲೆ ಅಪ್ಪ ನಮನೀ ಕಾಣ್ತಿಲ್ಯೋ.... ನೀ ಹೋಗು ಮುಂದೆ..... ಕೂಸನ ಕೂಡೆ ಹನಿ ಜಂಡೂ ಬಾಮಾರೂ ಹಚ್ಚು ಹೇಳ್ತೇ.... ತಂಗೀ...... ಇಲ್ಬಾ..... ಅಲ್ಲಿ ನಾಗಂದಿಗೇ ಮೇಲೋ ಮಾಡ್ಗುಳೀಲೋ ಬಾಟ್ಳಿ ಇದ್ದು ತಗಬಾ... ಅಜ್ಜಂಗೆ ಬಗೇಲಿ ಹಚ್ಕೊಡೂ ನೋಡ್ವಾ..... ಅಂದ... ಕೂಸು .....ಬಾಟ್ಳೀ ತಂಜಿಲ್ಲೆ!! ತಂದ್ರೆ ಪುಟ್ಟಜ್ಜಂಗೂ ತಲ್ನೋವಿದ್ದಿರ್ತೂ ಹೇಳಿ ಗುತ್ತಿದ್ದು ಕೂಸೀಗೆ.....ಸೋದೇಮನೆ ....ಯೆಲೆ ಗಣಪತ್ನಾಯ್ಕ ಸುಣ್ಣಕಾಯಂಡೇ ಸುಣ್ಣ ಗೋರದಾಗೇ ಕೆರಟಿ ಮೆತ್ಕಂಬುಡತಾ...ಅವ....... ಕೈ ಬೆರಳೀಗೆ  ಮುಲಾಮ ಹಚ್ಕಂಡು ಬಂತು....... ಪುಟ್ಟಭಟ್ರು... ಬೀಸಗಾಲ ಹಾಕಿ ದೇಸ್ತನಕ್ಕೆ ಹೋದ್ರು... ಕಡೇಗೆ ತಪ್ಪೋಗ್ತು ಅಚಾರಿ ಮಗೂ ಬಜನೆ ಹೇಳಿ... ಅಪ್ಪಯ್ಯ ಕೊಟ್ಗೇಗೆ ಹುಲ್ಲಾಕೂಲೆ ಹೋದ...... ನಾನು ಅಂಗೀಗೆ ಇಸ್ತ್ರಿಗೆ ಮಾಡೋ ಹೇಳಿ ಕೈಚೊಟ್ಟಲ್ಲಿ ಕೆಂಡ ಹಾಯಕಂಡು ಬಪ್ಪಲೆ ಬಚ್ಚಲ ಮನೇಗೆ ಹೋದೆ.....

ಬುಧವಾರ, ಏಪ್ರಿಲ್ 4, 2012

* ದೇವರು ಬರಬಹುದೇ....?

  1. ದೇವರು ಬರಬಹುದೇ....?                                                          

  1.               ಏನು ಹೇಳಬೇಕೋ....ತಿಳಿಯುತ್ತಿಲ್ಲಾ.... ತುಂಬಾ...ಮುಗ್ಧರು ಕಣ್ರೀ... ನೀವು..ಛೇ....ದೇವರನ್ನ ಎಂದಾದರೂ ನಮ್ಮ ಹತ್ತಿರಕ್ಕೆ ಇಟ್ಟುಕೊಳ್ಳಬಹುದಾ? ಯೆಲ್ಲಿಯಾದರೂ ಈ ಮಾನವಜಾತಿಯಲ್ಲಿ ಹುಟ್ಟಿದ ಒಂದು ಹಸುಗೂಸು ಬಾಯಿ ಓರೆ...ಕೈಕಾಲು ಊನ...ಮಾತು ಬಾರಾ...ಅಂತಾದರೆ....ನಾವು ಅದನ್ನ ನೋಡೋ ರೀತಿ ಹ್ಯಾಗಿರುತ್ತೇ... ಅಂಥಾದ್ರಲ್ಲಿ.... ನಾಕು ಕೈ!! ಎರಡೇ ಕಾಲು!! ಇದ್ದರೆ ಒಂದೇ ತಲೆ!!! ಅಥವಾ ಹತ್ತಾರು ತಲೆ...!! ಥೂ ಆರೂಪಾನಾ ನೆನಕೊಂಡ್ರೆ ನಿದ್ದೇನೇ ಬರೊಲ್ಲಾ ಕಣ್ರೀ...... ವಿಕೃಷ್ಟದ ಪರಮಾವಧಿ!!! ಅವನಿರೋದು ಆಸ್ವರ್ಗ!!! ಯೇನೋ ನನಗತೂ ನಂಬೋಕೇ ಆಗಲ್ಲಾರೀ................................................ಆಯ್ತು ಹೇಗೋ ನಂಬೋಣ ಅಂತಂದ್ರೆ.........ನಾವೇ ಯೇನೋ ಕಷ್ಟ ಬಿದ್ದು ಆ ದೇವರ ಹತ್ರಾನೇ ಹೋಗೋಣ ಅಂದ್ರೆ ..............ಅಷ್ಟು ಪುಣ್ಯಾ ಮಾಡಿದ್ದೀವಾ? ಇಲ್ಲಾರೀ....ಮಾಡೋಕೆ ಪುರುಸೊತ್ತೇ ಇಲ್ಲಾ....!! ಹ್ಯಾಗೆ ಹೋಗೋದೂ?.... ಇಲ್ಲಾ...ಅವನನ್ನೇ ಇಲ್ಲೀಗೆ ಬರಹೇಳೋಣ ಅಂತಂದ್ರೆ ಈ ಪಾಪಿಗಳ ಲೋಕಕ್ಕೇ ಬಂದಾನಾ...... ? ಅವನು ....... ನಮ್ಮಷ್ಟು ಪಾಪಾ ಮಾಡಿಲ್ಲಾರೀ ಅವನೂ.... ಹ್ಯಾಗೆ ಬರ್ತಾನೇ?......... ಅಂತೂ....ದೇವರು ಸಿಗಲ್ಲಾರೀ.........ಬಿಟ್ಬಿಡೀ...ಆಸೇನಾ...........................................................ದೇವರಂಥವರೂ....ಹ..ಹ.ಹ್ಹ..ಹ್ಹಾ.. ನನಗೆ ದೇವರಾದವನು ನಿಮಗೆ ದೆವ್ವಾ...ನಿಮಗೆ ದೇವರಾದೋನು....... ನನಗೆ ವೈರಿ...ಕಣ್ರೀ.... ಹಲವು ದೇವರ ಮಾಡ್ಕೊಂಡು ಬಿಟ್ಟಿದ್ದೀವಿ ನಾವು ಹಾಗೇ ಹಲವು ರೂಪ ನಮ್ಮಲ್ಲೂ ಯೇನು ಮಾಡೋದು.....ಖರ್ಮಾ.....