प्रज्वालितॊ ज्ञानमयप्रदीपः
'ಪಾಮರ' ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
'ಪಾಮರ' ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಮಾರ್ಚ್ 31, 2012

ಸಾಯಗೊಡದ ಸಾಡೇ ಸಾತಿಗಳು!!

..>>>..ಸಾಯಗೊಡರು!!....<<...

ಹೇಗೆ ಸಂಬಾಳಿಸಲಿ ಘನಚೋದ್ಯಗಳನೆರೆವ
ಸೋಗಲಾಡಿಗಳ ಸುಳ್ಳ ಸತ್ಯಮಾಡುವರು
ಹೆಣದ ಬೆಂಕಿಲಿ ಮೈಯ್ಯ ಛಳಿಯ ದೂಡುವರು
ಕೆಣಕೆ ಫಣಿಯೆಂಬವರು! ನೊಣಕೆ ಬೆರ್ಚುವರು!!
ಬೇಡದಿದ್ದರೂ ನೀಡಿ ಬಡವನೆಂದೆಣಿಸುವರು

ಕೋಡದಿದ್ದರೂ ಕರೆದು ಕೆರವ ತೋರುವರು
ಸಾವೆನೆಂದರು ಬಿಡರು ಸಾಯಬಡಿವರು ಜಗಕೆ
ನೋಯದಿದ್ದರೂ ಗಾಯ ತೋರಿ ಕೈಚಾಚುವರು
ಹೇಗೆ ಸಂಭಾಳಿಸಲೀ ಈ ಜನರ ಹುಚ್ಚಾಟ
ಕೊಟ್ಟ ಕುದುರೆಯನೇರಲರಿಯದೆ ಬಾಲ ಮೇಲೆತ್ತುವರು!!