प्रज्वालितॊ ज्ञानमयप्रदीपः

ಭಾನುವಾರ, ಆಗಸ್ಟ್ 17, 2014

ವಿಷ್ಣು ಸಹಸ್ರನಾಮ

ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||
ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||
ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ |
ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ||
ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ |
ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ ||
ಓಂ ನಮೋ ವಿಷ್ಣವೇ ಪ್ರಭವಿಷ್ಣವೇ ||

ಶ್ರೀ ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || ೧ ||

ಶ್ರೀ ಯುಧಿಷ್ಠಿರ ಉವಾಚ
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || ೨ ||
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || ೩ ||

ಶ್ರೀ ಭೀಷ್ಮ ಉವಾಚ
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || ೪ ||
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || ೫ ||
ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || ೬ ||
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || ೭ ||
ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || ೮ ||
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || ೯ ||
ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || ೧೦ ||
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || ೧೧ ||
ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ || ೧೨ ||
ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || ೧೩ ||
ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ |
ಛಂದೋನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತಃ || ೧೪ ||
ಅಮೃತಾಂಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನ: |
ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ || ೧೫ ||
ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ |
ಅನೇಕರೂಪದೈತ್ಯಾಂತಂ ನಮಾಮಿ ಪುರುಷೋತ್ತಮಮ್ || ೧೬ ||
ಅಸ್ಯ ಶ್ರೀ ವಿಷ್ಣೋರ್ದಿವ್ಯಸಹಸ್ರನಾಮಸ್ತೋತ್ರಮಹಾಮಂತ್ರಸ್ಯ |
ಶ್ರೀ ವೇದವ್ಯಾಸೋ ಭಗವಾನ್ ಋಷಿಃ |
ಅನುಷ್ಟುಪ್ ಛಂದಃ |
ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ |
ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ |
ದೇವಕೀನಂದನಃ ಸ್ರಷ್ಟೇತಿ ಶಕ್ತಿಃ |
ಉಧ್ಭವಃ, ಕ್ಷೋಭಣೋ ದೇವ ಇತಿ ಪರಮೋ ಮಂತ್ರಃ |
ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್ |
ಶಾರ್ಙ್ಗಧನ್ವಾ ಗದಾಧರ ಇತ್ಯಸ್ತ್ರಮ್ |
ರಥಾಂಗಪಾಣಿರಕ್ಷೋಭ್ಯ ಇತಿ ನೇತ್ರಮ್ |
ತ್ರಿಸಾಮಾ ಸಾಮಗಃ ಸಾಮೇತಿ ಕವಚಮ್ |
ಆನಂದಂ ಪರಬ್ರಹ್ಮೇತಿ ಯೋನಿಃ |
ಋತುಸ್ಸುದರ್ಶನ: ಕಾಲ ಇತಿ ದಿಗ್ಭಂಧಃ |
ಶ್ರೀ ವಿಶ್ವರೂಪ ಇತಿ ಧ್ಯಾನಮ್ |
ಶ್ರೀಮಹಾವಿಷ್ಣುಪ್ರೀತ್ಯರ್ಥೇ ಸಹಸ್ರನಾಮ ಪಾರಾಯಣೇ ವಿನಿಯೋಗಃ |

ಧ್ಯಾನಮ್
ಕ್ಷೀರೋದನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇ ಮೌಕ್ತಿಕಾನಾಂ
ಮಾಲಾಕ್ಲೃಪ್ತಾಸನಸ್ಥಃ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ |
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷವರ್ಷೈಃ
ಆನಂದೀನಃ ಪುನೀಯಾದರಿನಳಿನಗದಾಶಂಖಪಾಣಿರ್ಮುಕುಂದಃ ||
ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರಸೂರ್ಯೌ ಚ ನೇತ್ರೇ
ಕರ್ಣಾವಾಶಾಃ ಶಿರೋ ದ್ಯೌರ್ಮುಖಮಪಿ ದಹನೋ ಯಸ್ಯ ವಾಸೋಯಮಬ್ಧಿಃ
ಅಂತಃಸ್ಥಂ ಯಸ್ಯ ವಿಶ್ವಂ ಸುರನರಖಗಗೋ ಭೋಗಿಗಂಧರ್ವದೈತ್ಯೈಃ
ಚಿತ್ರಂ ರಂ ರಮ್ಯತೇ ತಂ ತ್ರಿಭುವನವಪುಷಂ ವಿಷ್ಣುಮೀಶಂ ನಮಾಮಿ ||
ಓಂ ನಮೋ ಭಗವತೇ ವಾಸುದೇವಾಯ |
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ||
ಮೇಘಶ್ಯಾಮಂ ಪೀತಕೌಶೇಯವಾಸಂ
ಶ್ರೀವತ್ಸಾಂಕಂ ಕೌಸ್ತುಭೋದ್ಭಾಸಿತಾಂಗಮ್ |
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ
ವಿಷ್ಣುಂ ವಂದೇ ಸರ್ವಲೋಕೈಕನಾಥಮ್ ||
ನಮಃ ಸಮಸ್ತಭೂತಾನಾಮಾದಿಭೂತಾಯ ಭೂಭೃತೇ |
ಅನೇಕರೂಪರೂಪಾಯ ವಿಷ್ಣವೇ ಪ್ರಭವಿಷ್ಣವೇ ||
ಸಶಂಖಚಕ್ರಂ ಸಕಿರೀಟಕುಂಡಲಂ ಸಪೀತವಸ್ತ್ರಂ ಸರಸೀರುಹೇಕ್ಷಣಮ್ |
ಸಹಾರವಕ್ಷಃಸ್ಥಲಶೋಭಿಕೌಸ್ತುಭಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ ||
ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ |
ಆಸೀನಮಂಬುದಶ್ಯಾಮಮಾಯತಾಕ್ಷಮಲಂಕೃತಮ್ ||
ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತವಕ್ಷಸಮ್ |
ರುಕ್ಮಿಣೀಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ ||

ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಮ್
ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || ೧ ||
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋsಕ್ಷರ ಏವ ಚ || ೨ ||
ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || ೩ ||
ಸರ್ವಃ ಶರ್ವಃ ಶಿವಃ ಸ್ಥಾಣುಃ ರ್ಭೂತಾದಿರ್ನಿಧಿರವ್ಯಯಃ |
ಸಮ್ಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || ೪ ||
ಸ್ವಯಮ್ಭೂಃ ಶಮ್ಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || ೫ ||
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || ೬ ||
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಙ್ಗಲಂ ಪರಮ್ || ೭ ||
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || ೮ ||
ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ || ೯ ||
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ || ೧೦ ||
ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || ೧೧ ||
ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಂಮಿತಃ ಸಮಃ |
ಅಮೋಘಃ ಪುಣ್ಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || ೧೨ ||
ರುದ್ರೋ ಬಹುಶಿರಾ ಬಭ್ರುಃ ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ || ೧೩ ||
ಸರ್ವಗಃ ಸರ್ವವಿದ್ಭಾನುಃ ವಿಷ್ವಕ್ಸೇನೋ ಜನಾರ್ದನಃ |
ವೇದೋ ವಿದವ್ಯಙ್ಗೋ ವೇದಾಙ್ಗೋ ವೇದವಿತ್ ಕವಿಃ || ೧೪ ||
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಃ ಚತುರ್ದಂಷ್ಟ್ರಶ್ಚತುರ್ಭುಜಃ || ೧೫ ||
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || ೧೬ ||
ಉಪೇನ್ದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀನ್ದ್ರಃ ಸಙ್ಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || ೧೭ ||
ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |
ಅತೀನ್ದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ||೧೮ ||
ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |
ಅನಿರ್ದೇಶ್ಯವಪುಃ ಶ್ರೀಮಾನ್ ಅಮೇಯಾತ್ಮಾ ಮಹಾದ್ರಿಧೃಕ್ || ೧೯ ||
ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿಃ |
ಅನಿರುದ್ಧಃ ಸುರಾನನ್ದೋ ಗೋವಿನ್ದೋ ಗೋವಿದಾಮ್ಪತಿಃ || ೨೦ ||
ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || ೨೧ ||
ಅಮೃತ್ಯುಃ ಸರ್ವದೃಕ್ ಸಿಂಹಃ ಸನ್ಧಾತಾ ಸನ್ಧಿಮಾನ್ ಸ್ಥಿರಃ |
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || ೨೨ ||
ಗುರುರ್ಗುರುತಮೋ ಧಾಮಃ ಸತ್ಯಃ ಸತ್ಯಪರಾಕ್ರಮಃ |
ನಿಮಿಷೋsನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || ೨೩ ||
ಅಗ್ರಣೀರ್ಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ |
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || ೨೪ ||
ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಮ್ಪ್ರಮರ್ದನಃ |
ಅಹಃ ಸಂವರ್ತಕೋ ವಹ್ನಿಃ ಅನಿಲೋ ಧರಣೀಧರಃ || ೨೫ ||
ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |
ಸತ್ಕರ್ತಾ ಸತ್ಕೃತಃ ಸಾಧುಃ ಜಹ್ನುರ್ನಾರಾಯಣೋ ನರಃ || ೨೬ ||
ಅಸಙ್ಖ್ಯೇಯೋ‌sಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |
ಸಿದ್ಧಾರ್ಥಃ ಸಿದ್ಧ ಸಙ್ಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || ೨೭ ||
ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || ೨೮ ||
ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || ೨೯ ||
ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |
ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ || ೩೦ ||
ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || ೩೧ ||
ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ |
ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || ೩೨ ||
ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |
ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || ೩೩ ||
ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ |
ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ || ೩೪ ||
ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |
ಅಪಾಂ ನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || ೩೫ ||
ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ || ೩೬ ||
ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ || ೩೭ ||
ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ |
ಮಹರ್ದ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || ೩೮ ||
ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ |
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || ೩೯ ||
ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಸ್ಸಹಃ |
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || ೪೦ ||
ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || ೪೧ ||
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |
ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ || ೪೨ ||
ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋನಯಃ |
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ || ೪೩ ||
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ೪೪ ||
ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || ೪೫ ||
ವಿಸ್ತಾರಃ ಸ್ಥಾವರಃಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |
ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ|| ೪೬ ||
ಅನಿರ್ವಿಣ್ಣಃ ಸ್ಥವಿಷ್ಠೋಭೂರ್ಧರ್ಮಯೂಪೋ ಮಹಾಮಖಃ |
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ || ೪೭ ||
ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ |
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್ || ೪೮ ||
ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ || ೪೯ ||
ಸ್ವಾಪನಸ್ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್ |
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || ೫೦ ||
ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್ |
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ || ೫೧ ||
ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ |
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || ೫೨ ||
ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ |
ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ || ೫೩ ||
ಸೋಮಪೋಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಸ್ಸಾತ್ವತಾಂ ಪತಿಃ || ೫೪ ||
ಜೀವೋ ವಿನಯಿತಾಸಾಕ್ಷೀ ಮುಕುಂದೋಮಿತವಿಕ್ರಮಃ |
ಅಂಭೋನಿಧಿರನಂತಾತ್ಮಾ ಮಹೋದಧಿಶಯೋಂತಕಃ || ೫೫ ||
ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |
ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ || ೫೬ ||
ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ |
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ || ೫೭ ||
ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ || ೫೮ ||
ವೇಧಾಸ್ಸ್ವಾಂಗೋಜಿತಃ ಕೃಷ್ಣೋ ದೃಢಸ್ಸಂಕರ್ಷಣೋಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ || ೫೯ ||
ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || ೬೦ ||
ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ |
ದಿವಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || ೬೧ ||
ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸಂನ್ಯಾಸಕೃಚ್ಛಮಶ್ಯಾಂತೋ ನಿಷ್ಠಾ ಶಾಂತಿಃ ಪರಾಯಣಮ್ || ೬೨ ||
ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || ೬೩ ||
ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂ ವರಃ || ೬೪ ||
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || ೬೫ ||
ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ |
ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಛಿನ್ನಸಂಶಯಃ || ೬೬ ||
ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ |
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || ೬೭ ||
ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |
ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋಮಿತವಿಕ್ರಮಃ || ೬೮ ||
ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || ೬೯ ||
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ || ೭೦ ||
ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ || ೭೧ ||
ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ || ೭೨ ||
ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || ೭೩ ||
ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || ೭೪ ||
ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || ೭೫ ||
ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ |
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ || ೭೬ ||
ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ || ೭೭ ||
ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್ |
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || ೭೮ ||
ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || ೭೯ ||
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃತ್ |
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || ೮೦ ||
ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ |
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || ೮೧ ||
ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ |
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ || ೮೨ ||
ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || ೮೩ ||
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || ೮೪ ||
ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ |
ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ || ೮೫ ||
ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || ೮೬ ||
ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋನಿಲಃ
ಅಮೃತಾಶೋಮೃತವಪುಃ ಸರ್ವಜ್ಞಃ ಸರ್ವತೋಮುಖಃ || ೮೭ ||
ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |
ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರನಿಷೂದನಃ || ೮೮ ||
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |
ಅಮೂರ್ತಿರನಘೋಚಿಂತ್ಯೋ ಭಯಕೃದ್ಭಯನಾಶನಃ || ೮೯ ||
ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |
ಅಧೃತಸ್ಸ್ವಧೃತಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || ೯೦ ||
ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ |
ಆಶ್ರಮಃ ಶ್ರಮಣಃ, ಕ್ಷಾಮಃ ಸುಪರ್ಣೋ ವಾಯುವಾಹನಃ || ೯೧ ||
ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |
ಅಪರಾಜಿತಸ್ಸರ್ವಸಹೋ ನಿಯಂತಾ ನಿಯಮೋ ಯಮಃ || ೯೨ ||
ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || ೯೩ ||
ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || ೯೪ ||
ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಗ್ರಜಃ |
ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ || ೯೫ ||
ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || ೯೬ ||
ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || ೯೭ ||
ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ, ಕ್ಷಮಿಣಾಂ ವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || ೯೮ ||
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |
ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ || ೯೯ ||
ಅನಂತರೂಪೋನಂತಶ್ರೀರ್ಜಿತಮನ್ಯುರ್ಭಯಾಪಹಃ |
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || ೧೦೦ ||
ಅನಾದಿರ್ಭೂರ್ಭುವೋ ಲಕ್ಷ್ಮೀಸ್ಸುವೀರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || ೧೦೧ ||
ಆಧಾರನಿಲಯೋಧಾತಾ ಪುಷ್ಪಹಾಸಃ ಪ್ರಜಾಗರಃ |
ಊರ್ಧ್ವಗಸ್ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || ೧೦೨ ||
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || ೧೦೩ ||
ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ |
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ || ೧೦೪ ||
ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ |
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ || ೧೦೫ ||
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || ೧೦೬ ||
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || ೧೦೭ ||
|| ಸರ್ವಪ್ರಹರಣಾಯುಧ ಓಂ ನಮಃ ಇತಿ ||
ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ |
ಶ್ರೀಮಾನ್ ನಾರಾಯಣೋ ವಿಷ್ಣುರ್ವಾಸುದೇವೋಭಿರಕ್ಷತು || (ಈ ಶ್ಲೋಕವನ್ನು ಮೂರು ಸಲ ಅನ್ನಬೇಕು)

ಫಲಶ್ರುತಿಃ
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ || ೧ ||
ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ |
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || ೨ ||
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್ || ೩ ||
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಮ್ || ೪ ||
ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || ೫ ||
ಯಶಃ ಪ್ರಾಪ್ನೋತಿ ವಿಪುಲಂ ಯಾತಿ ಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ || ೬ ||
ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ || ೭ ||
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || ೮ ||
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || ೯ ||
ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ || ೧೦ ||
ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || ೧೧ ||
ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮಾಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿಃ || ೧೨ ||
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || ೧೩ ||
ದ್ಯೌಸ್ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || ೧೪ ||
ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ || ೧೫ ||
ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಜ್ಞ ಏವ ಚ || ೧೬ ||
ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಯ್ಪತೇ |
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || ೧೭ ||
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || ೧೮ ||
ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |
ವೇದಾಶ್ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್ || ೧೯ ||
ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀನ್‌ಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || ೨೦ ||
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಛೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || ೨೧ ||
ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ |
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || ೨೨ ||
|| ನ ತೇ ಯಾಂತಿ ಪರಾಭವಮ್ ಓಂ ನಮ ಇತಿ ||

ಅರ್ಜುನ ಉವಾಚ
ಪದ್ಮಪತ್ರ ವಿಶಾಲಾಕ್ಷ ಪದ್ಮನಾಭ ಸುರೋತ್ತಮ |
ಭಕ್ತಾನಾಮನುರಕ್ತಾನಾಂ ತ್ರಾತಾ ಭವ ಜನಾರ್ದನ ||

ಶ್ರೀ ಭಗವಾನುವಾಚ
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ |
ಸೋಹಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ ||
|| ಸ್ತುತ ಏವ ನ ಸಂಶಯ ಓಂ ನಮ ಇತಿ ||

ವ್ಯಾಸ ಉವಾಚ
ವಾಸನಾದ್ವಾಸುದೇವಸ್ಯ ವಾಸಿತಂ ತೇ ಜಗತ್ರಯಮ್ |
ಸರ್ವಭೂತನಿವಾಸೋಸಿ ವಾಸುದೇವ ನಮೋಸ್ತು ತೇ ||
|| ಶ್ರೀವಾಸುದೇವ ನಮೋಸ್ತುತ ಓಂ ನಮ ಇತಿ ||

ಪಾರ್ವತ್ಯುವಾಚ
ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ |
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ ||

ಈಶ್ವರ ಉವಾಚ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ || (ಮೂರು ಸಲ)
|| ಶ್ರೀ ರಾಮನಾಮ ವರಾನನ ಓಂ ನಮ ಇತಿ ||

ಬ್ರಹ್ಮೋವಾಚ
ನಮೋಸ್ತ್ವನಂತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟಿಯುಗಧಾರಿಣೇ ನಮಃ ||
|| ಸಹಸ್ರಕೋಟಿಯುಗಧಾರಿಣೇ ನಮ ಓಂ ನಮ ಇತಿ ||

ಸಂಜಯ ಉವಾಚ
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ||

ಶ್ರೀಭಗವಾನುವಾಚ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
ಆರ್ತಾ ವಿಷಣ್ಣಾಃ ಶಿಥಿಲಾಶ್ಚ ಭೀತಾಃ
ಘೋರೇಷು ಚ ವ್ಯಾಧಿಷು ವರ್ತಮಾನಾಃ |
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ
ವಿಮುಕ್ತದುಃಖಾಃ ಸುಖಿನೋ ಭವಂತಿ ||
ಓಂ ತಸ್ಸದಿತಿ ಶ್ರಿಮನ್ಮಾಹಾಭಾರತೇ ಶತ ಸಾಹಸ್ರಿಕಾಯಾಂ ಸಂಹಿತಾಯಾಂ ವೈಯಾಸಿಕ್ಯಾಂ ಅನುಶಾಸನಿಕಪರ್ವಣಿ ಮೋಕ್ಷಧರ್ಮೆ ಶ್ರೀ ಭೀಷ್ಮ
ಯುಧಿಷ್ಠಿರ ಸಂವಾದೇ ಶ್ರೀ ವಿಷ್ಣೋರ್ದಿವ್ಯಸಹಸ್ರನಾಮಸ್ತೋತ್ರಂ ನಾಮ ಏಕೋ ನ ಪಂಚಾಶದಧಿಕಶತತಮೋsಧ್ಯಾಯಃ
ಇತಿ ಶ್ರೀ ವಿಷ್ಣು ಸಹಸ್ರನಾಮಸ್ತೋತ್ರಂ ಸಮಾಪ್ತಮ್

ಶನಿವಾರ, ಆಗಸ್ಟ್ 16, 2014

ಅಷ್ಟಾವಕ್ರ....

         ಅಷ್ಟಾವಕ್ರ....!! ದಾರಿಯಲ್ಲಿ ಎದುರಾಜ ಜನಕ ರಾಜನನ್ನು ಸಂಪ್ರೀತಗೊಳಿಸಿ ದವನಾಗಿ ಮುಂದೆ ಮಾರನೇ ದಿನ ರಾಜ ಸಭೆಗೆ ಬರಬೇಕೆಂದು ಬಂದ.. ಆದರೆ ಅಲ್ಲಿ ರಾಜನಿಗಿಂತ ರಾಜನ ವಂದಿಯಾದ ಉಗ್ರಸೇನನದ್ದೇ ದರ್ಬಾರು...!! ಎಲ್ಲಿಂದಲೋ ಸ್ವಲ್ಪ ವೇದ ವಿದ್ಯೆಯನ್ನು ಅರಿತಿದ್ದ ವಂದಿ ರಾಜನನ್ನೂ ಹೆದರಿಸಿ ಇಟ್ಟಿದ್ದ. ವಂದಿಯ ಮಾರ್ಗದರ್ಶನದಂತೆಯೇ ಅಲ್ಲಿ ಎಲ್ಲವೂ ನಡೆಯಬೇಕಿತ್ತು... ರಾಜ ಸಭೆಗೆ ಅನೇಕ ಜನ ಪಂಡಿತರುಗಳನ್ನು ಕರೆಯಿಸಿ ಅವರೊಂದಿಗೆ ಕುತರ್ಕಗಳನ್ನು ಮಾಡಿ ಬೇರೆ ಬೇರೆ ರೀತಿಯ ಪಣಗಳನ್ನು ಅವರೆದುರಿಟ್ಟು.. ಕೊನೆಯಲ್ಲಿ ಅವರು ಸೋಲುವಂತೆ ಮಾಡಿ ಅವರನ್ನು ನೀರು ತುಂಬಿದ ಕೊಳದಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿ ಸಿಬಿಡುತ್ತಿದ್ದ....!! ಓರ್ವ ಬ್ರಹ್ಮದ್ವೇಷಿಯಾಗಿ ರಾಜನ ಆಸ್ಥಾನದಲ್ಲಿ ಸೇರಿಕೊಂಡಿ ದ್ದ..!! ಹಿಂದೆ ಇದೇ ಅಷ್ಟಾವಕ್ರನ ತಂದೆಯಾದ ಕಹೋಡನನ್ನೂ ಇದೇರೀತಿಯಲ್ಲಿ ವಾದದಲ್ಲಿ ಸೋಲಿಸಿ ಉಸಿರುಗಟ್ಟಿಸಿ ಸಾಯಿಸಿದ್ದ... !! ಅದರ ಸೇಡು ತೀರಿಸಿಕೊಳ್ಳು ವ ಸಲುವಾಗಿ ಇಂದು ಎಳೆಯ ಬಾಲಕನಾದ ಅಷ್ಟಾವಕ್ರ ರಾಜನ ದರ್ಬಾರಿನ ದ್ವಾರ ದಲ್ಲಿ ನಿಂತಿದ್ದ...!! ಅಲ್ಲಿ ದ್ವಾರಪಾಲಕರು...! ದಡೂತಿ ದೇಹವನ್ನು ಹೊಂದಿದವರು...! ಈ ಬಾಲಕನನ್ನು ತಡೆದರು....!! ಆ ದ್ವಾರಪಾಲಕರು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅಷ್ಟಾವಕ್ರ.....ಆದರೂ ಒಳಗೆ ಬಿಡುವುದಿಲ್ಲವೆಂದು ಹಠ ಹಿಡಿದಾಗ "ಅಯ್ಯಾ.. ನಾನು ನಿನ್ನೆ ದಿವಸ ನಿಮ್ಮ ರಾಜನನ್ನು ನೋಡಿದ್ದೇನೆ.... ನನ್ನ ದಾರಿಗೆ ಅಡ್ಡಲಾಗಿ ಬರುತ್ತಿದ್ದ...!! ನಾಣು ಹೇಳಿದ ಮೇಲೆ ದಾರಿಯನ್ನು ಬಿಟ್ಟು ಅವನೇ ಪಕ್ಕಕ್ಕೆ ಸರಿದು ನಿಂತಿದ್ದ.. ಬಹಳ ಒಳ್ಳೆಯವ ನಿಮ್ಮರಸ... !! ಆದರೆ ಅಲ್ಲಿ ಸೇರಿಕೊಂಡಿದ್ದಾನಲ್ಲಾ ಅವನು ನಿಮ್ಮ ರಾಜನನ್ನೂ ತನ್ನ ಯಾವುದೋ ಪಾಶದಿಂದ ಕಟ್ಟಿ ಹಾಕಿದ್ದಾನೆ ಮಹಾ ಮೂರ್ಖ.. ಅವನನ್ನು ನೋಡಬೇಕು ನಮಗೆ..ಅದಕ್ಕಾಗಿ ಬಂದಿದ್ದೇವೆ.. ದಾರಿ ಬಿಡು.. ಹೋಗಿ ಹೇಳು ನಿನ್ನ ರಾಜನಿಗೆ ನಾವು ಬಂದಿದ್ದೇವೆ ಎಂದು.. ಅವನೇ ಬಂದು ನಮ್ಮನ್ನು ಸ್ವಾಗತಿಸುತ್ತಾನೆ.. ಎಂದು ಹೇಳಿದ.ಆದರೆ ಇದಕ್ಕೆ ಸಮ್ಮತಿಸದ ದ್ವಾರಪಾಲಕ  " ಹೇ ಹುಡುಗಾ.. ನೀನಿನ್ನೂ ಹತ್ತು ವರ್ಷದ ಹುಡುಗ.. ನಿನಗೆ ವಿದ್ಯೆಯೂ ಇಲ್ಲ,,,! ವಿನಯವೂ ಇಲ್ಲ.. ಆದರೂ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನೇನೋ ಕೊಟ್ಟಿದ್ದೀಯಾ.. ಹಾಗಾಗಿ...ಒಂದು ಕೆಲಸ ಮಾಡು.. ಇಲ್ಲೇ ನಿಂತಿರು.. ನಾನು ಹೋಗಿ ವಂದಿಗೆ ಒಪ್ಪಿಸಿ ನಿನ್ನನ್ನು ಒಳಗೆ ಬಿಡುವಂತೆ ಮಾಡೂತ್ತೇನೆ.." ಎಂದು ಒಳಕ್ಕೆ ಹೋದ...ಅಷ್ಟರಲ್ಲಿ ದರ್ಬಾರಿನಲ್ಲಿ ಕುಳಿತಿದ್ದ ರಾಜನನ್ನು ಕುರಿತು ಅಷ್ಟಾವಕ್ರ "ಭೋ...ಭೋ... ರಾಜನ್ .... "ಎಂದು ರಾಜನನ್ನು ಹೊಗಳಲು ಪ್ರಾರಂಭಿಸಿಬಿಟ್ಟ...!! ಕೆಲಸ ಆಗಬೇಕಾದರೆ ಹೊಗಳಿಕೆಯನ್ನು ಹೆಚ್ಚಾಗಿಯೇ ಮಾಡಬೇಕಂತೆ.. ಇವನ ಗಂಟೇನೂ ಹೋಗಲಿಲ್ಲವಲ್ಲಾ...  ಯಯಾತಿ ಮುಮ್ತಾದ ರಾಜರುಗಳಿಗಿಂತ ನೀನು ಪ್ರಬಲನಾಗಿದ್ದೀಯೇ..ಎಂದೆಲ್ಲಾ ಹೊಗಳಿದ... 
      ದ್ವಾರದಲ್ಲಿ ಬಾಲಕನೋರ್ವ ತನ್ನನ್ನು ಹೊಗಳುತ್ತಿರುವುದನ್ನು ಸಿಂಹಾಸನದಲ್ಲಿ ಕುಳಿತು ಕೇಳಿದ ರಾಜ.. ದ್ವಾರದ ಕಡೆಗೆ ನೋಡಿದ... ಅಲ್ಲಿಂದ ಎದ್ದು ಬರಲು ನೋಡಿ ದ... ಆದರೂ ರಾಜನಿಗೆ ವಂದಿಯ ಭಯ..!! ಅವನ ಮುಖವನ್ನೊಮ್ಮೆ ನೋಡಿ ಮತ್ತೆ ಕೆಳಗಿಳಿದು ದ್ವಾರದ ಬಳಗೆ ಬಂದ... ಬಾಲಕನನ್ನು ನೋಡಿ ಮಾತಾಡಿಸಿದ... " ಹೇ ಬಾಲಕಾ.. ನೀನೇನೋ ನನ್ನನ್ನು ಚೆನ್ನಾಗಿ ಸ್ತುತಿ ಮಾಡಿದೆ.. ಆದರೆ ಈ ಸಭೆಯಲ್ಲಿ ನಿನ್ನಂಥವರು ಏನೂ ಮಾಡುವುದಕ್ಕಿಲ್ಲ.. ಇದು ವೇದ ಸಭೆ!!! ಇಲ್ಲಿ ನಮ್ಮ ವಂದಿಯ ನ್ನು ವಾದದಲ್ಲಿ ಸೋಲಿಸಬೇಕು... ಒಂದು ವೇಳೆ ಅಂಡಿತರುಗ ಳೇ ಸೋತರೆ ಅವರ ನ್ನು ಉಸಿರುಗಟ್ಟಿಸಿ ಸಾಯಿಸಿಬಿಡುತ್ತಾನೆ.. ನಿನಗೂ ಅದೇ ಗತಿ ಬರಬಾರದೆಂದು ನಾನು ಇಷ್ಟೆಲ್ಲಾ ವ್ಯವಸ್ಥೆಯನ್ನು ಮಾಡಿದ್ದೆ.. ಬೇಡಪ್ಪಾ ಹೋಗು.. ಹಿಂತಿರುಗಿ ಹೋಗಿ ಬಿಡು.. ಆ ವಂದಿಯ ಕೈಯ್ಯಲ್ಲಿ ಸಾಯಬೇಡ ಮಗೂ... " ಎಂದ..ಅದಕ್ಕೆ ಅಷ್ಟಾವಕ್ರ ಬಹು ಧೈರ್ಯದಿಂದ ಹೇಳಿದ.... ಮಹಾರಾಜಾ.. ನಾನು ಹಿಂತಿರುಗಿ ಹೋಗುವುದಕ್ಕೆ ಬಂದವನಲ್ಲ.. ಇಂದು ಆ ನಿನ್ನ ವಂದಿಗೊಂದು ಗತಿ ಕಾಣಿಸಿಯೇ ಹೋಗುತ್ತೇನೆ.. 
"ವಿವಾದಿತೋಸೌ  ನಹಿ ಮಾದೃಶೈರಿಹಿ....." ದೊರೆಯೇ.. ನನ್ನಂಥವನು ಇದುವರೆಗೆ ಇಲ್ಲಿಗೆ ಬಂದಿರಲಿಲ್ಲ ಎನ್ನಿಸುತ್ತಿದೆ... ಇಂದು ಆ ವಂದಿಗೊಂದು ಲೋಕವನ್ನು ತೋರಿಸಿಯೇ ಹೋಗುತ್ತೇನೆ... ನಾಯಿಯೊಂದಕ್ಕೆ ಸಿಂಹದ ಮುಖವಾಡವನ್ನು ಹಾಕಿ ಸಿಂಹವೆಂದು ಲೋಕಕ್ಕೆ ಪರಿಚಯಿಸಿಬಿಟ್ಟಿದ್ದೀರಿ... ಅದು ನಾಯಿ ಎಂಬುದನ್ನು ತೋರಿಸಿಕೊಡುತ್ತೇನೆ . ಅದೊಂದು ಬದ್ರವಿಲ್ಲದ ಚಕ್ರವನ್ನು ಹೊಂದಿದ ಗಾಡಿಯಂತೆ.. ಬಿಡು ದಾರಿಯನ್ನು.. " ಎಂದಾಗ  ರಾಜ ಅಯ್ಯೋ ನಿನ್ನನ್ನು ಹೇಗೆ ಸಂತೈಸುವುದು.. ಆಗಲೀ.. ನಾನೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ ..ಅದಕ್ಕುತ್ತರಿಸು.. ಆನಂತರ ಒಳಗೆ ಬಿಡುತ್ತೇನೆ.. "ಎಂದ... ಆಗಲೀ ಎಂದ ಅಷ್ಟಾವಕ್ರ... ಅದಕ್ಕೆ ರಾಜ ಪ್ರಶ್ನೆಗಳನ್ನು ಸುರುವಿಟ್ಟುಕೊಂಡ..
ತ್ರಿಂಶಕ ದ್ವಾದಶಾಂಶಸ್ಯ ಚತುರ್ವಿಂಶತಿ ಪರ್ವಣಃ|
ಯಸ್ಮಿನ್ ತ್ರಿಷಷ್ಠಿ ಶತಾರಸ್ಯ ವೇದಾರ್ಥಂ ಸಪರಃ ಕವಿಃ|
{ ಯಾವುದರಲ್ಲಿ ಮೂವತ್ತೆರಡು, ಹನ್ನೆರಡು, ಇಪ್ಪತ್ನಾಲ್ಕು, ಮುನ್ನೂರ ಅರವತ್ತು ಈ ಸಂಖ್ಯೆಗಳಿವೆಯೋ ಅಂತಹ ವೇದಾರ್ಥವನ್ನು ಹೇಳು}
ಅದಕ್ಕೆ ಅಷ್ಟಾವಕ್ರ.. ಸುದರ್ಶನ ಎಂದ.. ಕಾಲ ಚಕ್ರ ಎಂದ..!! ಈ ಲೋಕದಲ್ಲಿ ಕಾಲಾತೀತವಾದುದು ಯಾವುದೂ ಇಲ್ಲ.. ಅದನ್ನು ಕಾಲ ಪುರುಷ ಮಾಡುತ್ತಾನೆ ಅದನ್ನು ಅನುಸರಿಸಿಯೇ ನಾವು ನಡೆಯಬೇಕು..
ರಾಜ ತಲೆದೂಗಿದ...













ಬುಧವಾರ, ಆಗಸ್ಟ್ 13, 2014

ಅಷ್ಟಾವಕ್ರ...!!

            ಲೋಮಶರೊಂದಿಗೆ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಮುಮ್ದುವರಿದ ಧರ್ಮರಾಜ... ಒಂದು ಸುಂದರವಾದ, ಮರಗಿಡಗಳಿಂದಲೂ ಹೂವು ಹಣ್ಣುಗಳಿಂದಲೂ ತುಂಬಿರುವ  ಉಪವನಕ್ಕೆ ಬಂದರು. ಅಲ್ಲೊಂದು ಆಶ್ರಮವನ್ನು ಕಂಡರು. ಆ ಉಪವನದ ಸೊಬಗನ್ನು ವೀಕ್ಷಿಸಿದ ಧರ್ಮರಾಜ ಅದರ ಸೌಂದರ್ಯವನ್ನು  ಸವಿಯುತ್ತಾ ಅಲ್ಲಿನ ಆಶ್ರಮದ ಕುರಿತು ತಿಳಿದುಕೊಳ್ಳುವುದಕ್ಕಾಗಿ ಲೋಮಶರನ್ನು ಪ್ರಶ್ನಿಸಿದ... "ಮುನಿವರಾ ಇದೊಂದು ಸುಂದರವಾದ ಉಪವನವನ್ನೂ ಒಮ್ದು ಪ್ರಶಾಂತವಾದ ಆಶ್ರಮವನ್ನೂ ನಮಗೆ ತೋರಿಸಿದೆ.. ಆದರೆ ಈ ಆಶ್ರಮ ಯಾವುದು? ಇಲ್ಲಿದ್ದ ಆ ಮುನೀಶ್ವರನ್ಯಾರು? ಎಂದು ವಿವರವಾಗಿ ಹೇಳಬೇಕು" ಎಂದು .ಆಗ ಮಹಾಋಷಿ ಲೋಮಶರು..." ಯುಧಿಷ್ಠಿರಾ... ಇಲ್ಲಿ ಇನ್ನೊಂದು ಸುಂದರವಾದ ಕಥೆಯನ್ನು ಹೇಳುತ್ತೇನೆ ಕೇಳು .ಇಲ್ಲಿ ಹಿಂದೆ ಓರ್ವ ಶ್ವೇತಕೇತು ಎಂಬ ಮಹಾ ಮುನಿಯಿದ್ದ . ಅವನೋ ಮಹಾನ್ ಪಂಡಿತನೂ ತಪಸ್ವಿಯೂ ಆಗಿದ್ದ. ಅವನ ತಪೋಶಕ್ತಿ ಎಷ್ಟಿತ್ತೆಂದರೆ.. ಅವನೆದುರು ಸಾಕ್ಷಾತ್ ಸರಸ್ವತೀ ದೇವಿಯೇ ಬಂದು ನಿಲ್ಲುತ್ತಿದ್ದಳು...!! ಹೇಗೆಂದರೆ.. ಒಮ್ಮೆ ಸರಸ್ವತಿ ಮೊದಲಬಾರಿಗೆ ಅವನೆದುರು ಬಂದು ನಿಂತಾಗ ಅವಳನ್ನು ಗುರುತು ಹಿಡಿದು..’ನೀನೇ ಅಲ್ಲವೇ ಸರಸ್ವತಿ..?’ ಎಂದು ಪರಿಚಯವನ್ನು ತಾನಾಗಿ ಹೇಳಿದ ಮಾಹಾ ಮುನಿ ಅವನು..!! ಅಂತಹ ಮಹರ್ಷಿ ಬಾಳಿದ ಸ್ಥಳ ಇದು..ಅವರ ಕಥೆಯನ್ನು ಇನ್ನೂ ವಿಸ್ತಾರವಾಘಿ ಹೇಳುತ್ತೇನೆ ಕೇಳು...
       ಹಿಂದೆ ಇಬ್ಬರು ಮಹಾ ಪಂಡಿತರಾದ ಋಷಿಗಳಿದ್ದರು. ಅವರಲ್ಲೊಬ್ಬ ಮಾವ...!! ಇನ್ನೊಬ್ಬ ಅಳಿಯ...! .. ಹಿಂದೆ ಉದ್ದಾಲಕ ಎಂಬ ಓರ್ವ ಮುನಿಯಿದ್ದ. ಅವನಿಗೆ ಶ್ವೇತಕೇತು ಎಂಬ ಮಗನೂ,  ಸುಜಾತಾ ಎಂಬ ಮಗಳೂ ಇದ್ದರು . . ಉದ್ಧಾಲಕ ತನ್ನ ಮಗನೊಂದಿಗೆ ಕಹೋಡ(ಳ) ಎಂಬ ಇನ್ನೋರ್ವ ಶಿಷ್ಯನಿಗೂ  ವೇದ ವೇದಾಂತಗಳ ಪಾಠವನ್ನು ಮಾಡಿದ. ಅವರೆಲ್ಲ ಆ ಕಾಲದಲ್ಲಿ ಜನಕ ಮಹಾರಾಜನ( ವಿದೇಹದ ಜನಕನ - ಸೀತೆಯ ತಂದೆಯಲ್ಲ.)  ಧರ್ಮ ಸಭೆಯಲ್ಲಿ ತಮ್ಮ ವಿದ್ವತ್ ಪ್ರದರ್ಶನವನ್ನು ಮಾಡುತ್ತಿದ್ದರು. ಸ್ವತಃ ಜನಕ ಕೇಳುವ ಧರ್ಮ ಸೂಕ್ಷ್ಮಗಳನ್ನು ಕುರಿತಾಗಿ ಪ್ರಶ್ನೆ ಮಾಡುತ್ತಿದ್ದ. ಆಗ ಇವರೆಲ್ಲ ಅದಕ್ಕೆ ಉತ್ತರವನ್ನೀಯುತ್ತಿದ್ದರು..ಹೀಗೇ ಅನೇಕ ಪಂಡಿತರು ರಾಜನ ಮೆಚ್ಚುಗೆಗೆ ಪಾತ್ರರಾಗಿ ಅವನಿಂದ ಅನೇಕ ಬಹುಮಾನಗಳನ್ನು ಪಡೆದು ಹೋಗುತ್ತಿದ್ದರು. ಇಂಥವರಲ್ಲಿ ಆ ಕಾಲದ ಅನೇಕ ಜನರ ಹೆಸರು ನಮ್ಮ ಉಪನಿಷತ್ತುಗಳಲ್ಲಿ ಹೇಳಲ್ಪಟ್ಟಿದೆ.. ಆಶ್ವಲಃ ,  ಆರ್ತಭಾಗಃ,  ಭುಜ್ಯುಃ, ಲಾಹ್ಯಾಯನಿ  ಉಷಸ್ತಿ, ಚಾಕ್ರಾಯನಃ, ಕಹೋಳ ಕೌಶಿಕೇಯಃ,  ಉದ್ದಾಲಕಃ, ಆರುಣಿಃ,  ವಿದಗ್ಧಶಾಕಲ್ಯ, ಗಾರ್ಗಿವಾಚಕ್ನವೀ(ಸ್ತ್ರೀ)    ಮುಂತಾದ  ನವ ಪಂಡಿತರುಗಳು ಆಸ್ಥಾನದಲ್ಲಿ ರಾರಾಜಿಸುತ್ತಿದ್ದರು.  .....!! ಇವರೆಲ್ಲ ನಮ್ಮ ಭಾರತೀಯ ಪರಂಪರೆಗೆ ಬ್ರಹ್ಮ ವಿದ್ಯೆಯನ್ನು ಧಾರೆಯೆರೆದ ಮಹನೀಯರುಗಳು....!!
ಹೀಗೇ ಅತ್ಯಂತ ಪ್ರತಿಭಾಶಾಲಿಯಾದ ಕಹೋಡ ಉದ್ದಾಲಕರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.. ಅವನ ಮೇಲಿನ ಅತಿಯಾದ ಪ್ರೀತಿಯಿಂದ ತನ್ನ ಮಗಳಾದ ಸುಜಾತೆಯನ್ನು ತನ್ನ ಶಿಷ್ಯೋತ್ತಮನಿಗೇ ಕೊಟ್ಟು ಮದುವೆ ಮಾಡಿದ ಉದ್ದಾಲಕ.... 
ನಂತರದಲ್ಲಿ ಈ ಮಾವ ಮತ್ತು ಅಳಿಯ ಇಬ್ಬರೂ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದು ಬದುಕಿದ ಆಶ್ರಮ ಇದು.
   ಕಹೋಡ-ಸುಜಾತೆಯರು ವಿವಾಹ ಆದನಂತರ ಅಲ್ಲಿಯೇ ಸಮೀಪದಲ್ಲಿ ಇನ್ನೊಂದು ಆಶ್ರಮವನ್ನು ಕಟ್ಟಿಕೊಂಡು ವಾಸಮಾಡಿಕೊಂಡಿದ್ದರು. ಕಹೋಡ ಸಂಸಾರದ ಚರಿತಾರ್ಥಕ್ಕಾಗಿ ವೇದ ವಿದ್ಯೆಯ ಸಹಾಯದಿಂದ ಹೊರ ಪ್ರದೇಶಗಳಿಗೆ ಹೋಗಿ ತನ್ನ ವಿದ್ಯಾ ಸಂಪನ್ನತೆಯಿಂದ ಗಳಿಸಿಕೊಂಡು ಬಂದ ಸಂಪತ್ತಿನಿಂದ ಬದುಕು ಸಾಗಿಸುತ್ತಿದ್ದರು. ಅದರಂತೆ ಪ್ರತಿ ದಿನವೂ ವೇದಾಭ್ಯಾಸವನ್ನು ತಪ್ಪದೇ ಮನೆಯಲ್ಲಿ ಮಾಡುತ್ತಿದ್ದ...ಹಲವಾರು ಗಂಟೆಗಳ ಕಾಲ ಈ ಸಂಗೀತಗಾರರು ಪ್ರದರ್ಶನ ಪೂರ್ವದಲ್ಲಿ ನಿರಂತರ ಅಭ್ಯಾಸ ಮಾಡುವಂತೆ ಮಂತ್ರಗಳನ್ನು ಉರುಹೊಡೆಯುತ್ತಿದ್ದ.ಇದಕ್ಕೆ ಕಾರಣವೂ ಇತ್ತು.. ಸುಜಾತೆ ಈಗ ನವಮಾಸಗಳನ್ನು ತುಂಬಿದ ಗರ್ಭಿಣಿಯಾಗಿದ್ದಳು ಅವಳು ಹೇಳಿದಳು.." ಆರ್ಯಾ.. ನನಗೀಗ ನವ ಮಾಸ ತುಂಬುತ್ತಿದೆ.. ಮುಮ್ದೆ ಹೆರಿಗೆಸಮಯ ಸಮೀಪಿಸುತ್ತಿದೆ.. ಅದ್ಕ್ಕೆ ಕೆಲವು ಸೋಪಸ್ಕರಗಳನ್ನು ತರಬೇಕು.ಅದಕ್ಕೆ ಹಣವನ್ನು ಹೊಂದಿಸಬೇಕು ನನ್ನ ತಂದೆಯನ್ನೂ ಕೇಳುವಂತಿಲ್ಲ.. ಇದೀಗ ತಾನೇ ಅಲ್ಲಿ ಶ್ವೇತಕೇತು ಜನಿಸಿ ತಂದೆಯು ಇದ್ದ ಸಂಪತ್ತನ್ನು ಕಳೆದುಕೊಂಡಿದ್ದಾನೆ.. ಹಾಗಾಗಿ ಎಲ್ಲಿಯಾದರೂ ಹೋಗಿ ಸಂಪತ್ತನ್ನು ಗಳಿಸಿಕೊಂಡು ಬನ್ನಿ" ಎಂದಳು.. ಅದಕ್ಕಾಗಿ ಜನಕನರಮನೆಗೆ ಹೋಗುತ್ತಿದ್ದ ಅಲ್ಲಿ ವೇದಾರ್ಥವನ್ನು ಹೇಳಿ ರಾಜನನ್ನು ಮೆಚ್ಚಿಸಿ ಸಂಪತ್ತನ್ನು ಗಳಿಸಿಕೊಂಡು ಬರುತ್ತಿದ್ದ..ಅದಕ್ಕಾಗಿ ಹಗಲಿರುಳು ವೇದವನ್ನು ಉರುಹೊಡೆಯುತ್ತಿದ್ದ...... ಅಲ್ಲಿ ಆ ಜನಕನ ಅರಮನೆಯಲ್ಲಿ ಇದ್ದ ವಂದಿಯು ವಿಚಿತ್ರವಾಗಿ ವಾದಗಳನ್ನು ಮಾಡುತ್ತಿದ್ದ ಅವನ ಪ್ರಶ್ನೆಗಳಿಗೆ ಉತ್ತರಿಸಿ ರಾಜನನ್ನು ಮೆಚ್ಚಿಸಬೇಕಿತ್ತು.. ಆ ವಂದಿಯೋ ಕುತರ್ಕಗಳ ಮೂಲಕ ಪಂಡಿತರನ್ನು ಗೋಳುಹೊಯ್ದುಕೊಳ್ಳುತ್ತಿದ್ದ...ಹಿಂದೆ ಒಂದು ಊರಿನಲ್ಲಿ ಸಕಲ ಶಾಸ್ತ್ರ ಕೋವಿದರಾದ ಮೂರು ಜನ ಬ್ರಾಹ್ಮಣರಿದ್ದರು.. ತರ್ಕ-ವ್ಯಾ ಕರಣಾದಿ ಶಾಸ್ತ್ರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು... ಹೀಗಿರುತ್ತಿರುವಾಗ ಒಂದು ದಿನ...
....... ಮೂವರೂ ಯಾವುದೋ ವಿದ್ವತ್ ಸಭೆಗೆ ಆಹ್ವಾನ ಬಂದುದರಿಂದ ಅಲ್ಲಿಗೆ ಹೊರಟರು.. ದಾರಿ ಯಲ್ಲಿ ಒಂದು ಹಳ್ಳಿ... ಅಲ್ಲಿಯೇ ಸ್ವಪಾಕ ಮಾಡಿ ಊಟಮಾಡಬೇಕೆಂದು ಒಂದು ತೊರೆಯ ಸಮೀಪ ಕ್ಕೆ ತೆರೆಳಿದರು. ಅಡುಗೆ ಮಾಡುವ ಸಲುವಾಗಿ ಒಬ್ಬನು ಒಲೆಯನ್ನು ಉರಿಸಿ ಮೇಲೆ ಮಣ್ಣಿನ ಪಾತ್ರ್ರೆ ಯಲ್ಲಿ ನೀರನ್ನು ಬಿಸಿಮಾಡಿ ಅಕ್ಕಿಯನ್ನು ಹಾಕಿ ಬೇಯಿಸ ತೊಡಗಿದನು.. ಇನ್ನೊಬ್ಬ ಊಟಕ್ಕೆ ತುಪ್ಪ ವನ್ನು ತರುವುದಕ್ಕಾಗಿ ಹಳ್ಳಿಯ ಮನೆಗಳ ಕಡೆಗೆ ಹೋದನು..
ಆ ಮನೆಯಲ್ಲಿ ಅವನಿಗೆ ತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿ ಕೊಟ್ಟರು. ಪಂಡಿತನು ಅದನ್ನೆತ್ತಿ ಕೊಂಡು ದಾರಿಯಲ್ಲಿ ಬರುತ್ತಿದ್ದನು... ಆಗ ಅವನಲ್ಲಿನ ಪಾಂಡಿತ್ಯ ಪ್ರಜ್ಞೆಯು.. ಒಂದು ಸಂಶಯಕ್ಕೆ ದಾರಿ ಮಾಡಿಕೊಟ್ಟಿತು...ಅವನು ಕಲಿತ ಮೀಮಾಂಸಾ ಶಾಸ್ತ್ರ.. ಎಲ್ಲವನ್ನೂ ಪೂರ್ವ ಪಕ್ಷ- ಸಿದ್ಧಾಂತ ಗಳ ಸಂಶಯವನ್ನೇ ಮುಂದಿಡುತ್ತಿತ್ತು.. ಅದರಂತೇ ತಾನು ತರುತ್ತಿರುವ ತುಪ್ಪದ ಪಾತ್ರೆಯನ್ನೊಮ್ಮೆ ವೀಕ್ಷಿಸಿದ ಆ ಪಂಡಿತ.. ಆಗ ಅವನಲ್ಲಿ ಈ ತುಪ್ಪ ಹಾಗೂ ಪಾತ್ರೆಗಳ ವಿಚಾರವಾಘಿ "ಆಧಾರ- ಆಧೇ ಯ" ಗಳ ಪ್ರಶ್ನೆ ಹುಟ್ಟಿತು.. ಪಾತ್ರ್ಗೆ ಮತ್ತು ತುಪ್ಪ ಇವೆರಡರಲ್ಲಿ ಆಧಾರ ಯಾವುದು...? ಆಧೇಯ ಯಾವುದು? ಪಾತ್ರೆಗೆ ತುಪ್ಪ ಆಧಾರವೋ..? ತುಪ್ಪಕ್ಕೆ ಪಾತ್ರ ಆಧಾರವೋ.. ಸಂಶಯ...!!! ಹೀಗೇ ಸಂಶಯಿತನಾದ ಪಂಡಿತ ದಾರಿಯಲ್ಲೇ ತುಪ್ಪದ ಪಾತ್ರವನ್ನು ತಲೆಕೆಳಗುಮಾಡಿಯೇ ಬಿಟ್ಟ...!! ಆಧಾರ ಯಾವುದು...? ತುಪ್ಪವೆಲ್ಲಾ ದಾರಿಯಪಾಲಾಯಿತು... ಕಣ್ಣುಜ್ಜಿಕೊಳ್ಳುತ್ತಾ.. ಓಹ್.. ಗೊತ್ತಾ ಯಿತು.. ಪಾತ್ರೆಯೇ ಆಧಾರ....! ....ತುಪ್ಪವೇ ಆಧೇಯ...... ನಾನು ಕಲಿತ ಮೀಮಾಂಶಾ ಶಾಸ್ತ್ರ ನಿಜಕ್ಕೂ ಪ್ರಯೋಜನಕ್ಕೆ ಬಂತು..!! ಬೇಗ ಹೋಗಿ ನನ್ನ ಗೆಳೆಯರಿಗೆ ಹೇಳಬೇಕು.. ಪಾತ್ರೆ ಆಧಾ ರ...ತುಪ್ಪ ಆಧೇಯ.. ಎಂದು.. ಹೀಗೇ ಹೇಳುತ್ತಾ.. ಅಡುಗೆ ಮಾಡುವಲ್ಲಿಗೆ ಬರುತ್ತಿದ್ದ....
......ಇನ್ನೋರ್ವ ಪಂಡಿತ...! "ವೈಯ್ಯಾಕರಣಿ"... ಪಾಣಿನಿಯ ಅಷ್ಟಾಧ್ಯಾಯಿಯನ್ನು ಅರೆದು ಕುಡಿದಿ ದ್ದ.. ಎಲ್ಲದಕ್ಕೂ ವ್ಯಾಕರಣದ ಮೂಲಕವೇ ಅವನ ಚಿಂತನೆ...!! ಒಲೆಯ ಮೇಲೆ ಮಣ್ಣಿನ ಮಡಿಕೆಯ ಲ್ಲಿ ಅನ್ನ ಕುದಿಯುತ್ತಿತ್ತು....!! ಬೆಂಕಿ ಜೋರಾಗಿ ಉರಿಯುತ್ತಿತ್ತು.. ಕಾರಣ ಅನ್ನವು ಕೊತಕೊತನೆ ಸಶಬ್ದವಾಗಿ ಕುದಿಯುತ್ತಿತ್ತು.... ಅದರ ಆ ಶಬ್ದವನ್ನು ಕೇಳಿದ ಈ ಪಂಡಿತನಿಗೆ ಅದೇನೆನ್ನ್ನಿಸಿತೋ ತನ್ನ ವೈಯ್ಯಾಕರಣವನ್ನು ಇಲ್ಲಿಯೂ ಹರಿಬಿಟ್ಟ... ಅನ್ನದ ಮಡಿಕೆಯನ್ನುದ್ದೇಶಿಸಿ ಹೇಳಿದ....." ಹೇ ಅನ್ನವೇ.. ನೀನು ಶಬ್ದವನ್ನು ತಪ್ಪಾಗಿ ಉಚ್ಚರಿಸುತ್ತಿರುವೆ,,.. ಅದು ಕ್ವತ ಕ್ವತ ಅಲ್ಲ.... ಕೊತ ಕೊತ ವೂ ಅಲ್ಲ...!! ಕುತಃ ಕುತಃ ಎಂದಾಗಬೇಕು ಸರಿ ಪಡಿಸಿಕೋ" ಎಂದು ಹೇಳಿದ... ಆದರೂ ಮಡಿಕೆ ಯಲ್ಲಿರುವ ಅನ್ನ.. ಮೊದಲಿನಂತೇ ಕೊತಕೊತನೆ ಕುದಿಯುತ್ತಿತ್ತು.. ಈ ಪಂಡಿತನಿಗೆ ಪಿತ್ಥ ನೆತ್ತಿ ಗೇರಿತು... ಎಲೋ ಂಊಢ ಅನ್ನದ ಪಾತ್ರೆಯೇ..ನಾಣು ನಿನಗೆ ಎಷ್ಟು ಹೇಳಲೀ.. ನೀನು ಉಚ್ಚ ರಿಸುತ್ತಿರುವ ಶಬ್ದವು ಅಶುದ್ಧವಾಘಿದೆ.. ಸರಿ ಮಾಡಿಕೋ ಎಂದು ಎಷ್ಟು ಹೇಳಿದರೂ ನಿನಗೆ ಅರ್ಥ ವಾಘುವುದಿಲ್ಲ.. ಛೀ.. ತಡಿ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ " ಎಂದವನೇ..ಒಲೆಯನ್ನು ಊದುವ ಕೊಳವೆಯನ್ನು ಎತ್ತಿ ಅನ್ನದ ಪಾತ್ರೆಯ ಮೇಲೆ ಪ್ರಹಾರ ಮಾಡಿಯೇ ಬಿಟ್ಟ...!!! ಕೊತಕೊತನೆ ಕುದಿ ಯುತ್ತಿದ್ದ ಮಡಿಕೆಯಲ್ಲಿನ ಅನ್ನ ಒಲೆಯ ಪಾಲಾಯಿತು... ಪಂಡಿತ ತಪ್ಪು ಉಚ್ಚಾರ ಮಾಡಿದ ಅನ್ನದ ಪಾತ್ರೆಗೆ ತಕ್ಕ ಶಾಸ್ತಿ ಮಾಡಿಯೇ ಬಿಟ್ಟೆ ... ವ್ಯಾಕರಣ ಜ್~ನವನ್ನು ಹೊಂದಿದ ನನ್ನ ಮಾತನ್ನು ಧಿಕ್ಕ ರಿಸಿದವರಿಗೆ ಇದೇ ಗತಿ ಎಂಬುದು ಗೊತ್ತಾಘಲಿ.. ನನ್ನ ಗೆಳೆಯರೂ ಇದರಿಂದ ನನ್ನ ಬಗ್ಗೆ ಸ್ವಲ್ಪ ಭಯ ಹೊಂದಲೀ.. ಎಂದು ಒಲೆಯನ್ನೆಲ್ಲಾ ಸ್ವಚ್ಛಗೊಳಿಸತೊಡಗಿದ...!!
....ಇನ್ನೊಬ್ಬ ಪಾಕವನ್ನು ಮಾಡುವುದಕ್ಕಾಗಿ ಸೊಪ್ಪನ್ನೋ ತರಕಾರಿಯನ್ನೋ ತರುವುದಕ್ಕಾಗಿ ಅಲ್ಲೇ ಪಕ್ಕಕ್ಕೆ ಹೋದ್.. ಅವನಿಗೆ ಅಲ್ಲಿ ಯಾವ ಸೊಪ್ಪೂ ದೊರೆಯಲಿಲ್ಲ.. ಕೊನೆಗೆ ಹಸಿರಾಘಿ ಬೆಳೆದ ಹುಲ್ಲು .. ಗರಿಕೆ..ಕಂಡಿತು.. ಧರ್ಮ ಶಾಸ್ತ್ರವನ್ನು ಆದ್ಯಂತವಾಘಿ ಅಧ್ಯಯನ ಮಾಡಿದ್ದ ಆತ.. ಯೋಚಿಸಿದ.... " ಈ ಲೋಕದಲ್ಲಿ ಸಕಲ ಜೀವಾತ್ಮರಿಗೂ ಆಹಾರವು ಆಧಾರವಾಗಿದೆ... ಪರ್ಜನ್ಯವು ಈ ಸಸ್ಯಗಳಿಂದಲೇ ಹುಟ್ಟುತ್ತದೆ.. ಪ್ರಾಣಿಗಳು ಶಾಕಾಹಾರಿಗಳಾಗಬೇಕು.. ಹಾಗಾಗಿ ಈ ಗರಿಕೆಯ ಹುಲ್ಲನ್ನೇ ಇಮ್ದು ಅಡುಗೆಗೆ ಆಹಾರಕ್ಕಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಹುಲ್ಲನ್ನು ಎತ್ತಿಕೊಳ್ಳಲು ಹೋದ...ತನ್ನ ಪಾಲಿನ ಹುಲ್ಲನ್ನು ಎತ್ತಿ ಕೊಂಡೊಯ್ಯುತ್ತಿರುವ ಪಂಡಿತನನ್ನು ನೋಡಿ ಒಂದು ಎತ್ತು ಅವನನ್ನು ಅಟ್ಟಿಸಿಕೊಂಡು ಬಂತು.. ಪಂಡಿತ ಓಡಿ ಬಂದ.. ತನ್ನ ಗೆಳೆಯರನ್ನು ಕೂಡಿಕೊಂಡ... ತುಪ್ಪದವನು ತುಪ್ಪ ತಂದಿರಲಿಲ್ಲ..! ಅನ್ನ ಬೇಯಿಸುವವನು ಗಡಿಗೆಯನ್ನೇ ಒಡೆದಿದ್ದ.... ಎಲ್ಲರಿಗೂ ಈ ಗರಿಕೆ ಪರಮಾಹಾರವಾಯಿತು... ತನ್ನ ಆಹಾರ ಕದ್ದೊಯ್ದು ತಿನ್ನುತ್ತಿರುವ ಈ ಪಂಡಿತೋತ್ತಮರನ್ನು ನೋಡಿದ್ದ ಬಸವ ಅಂಬಾ ಎಂದು ನಗುತ್ತಿತ್ತು... ಇವರೇ ಅಲ್ಲವೇ.."ಗಾಂಪರೊಡೆಯರು"...!!......ಇಂತಹ ತರ್ಕವನ್ನೇ ಮಾಡುತ್ತಿದ್ದ ವಂದಿ ಎಲ್ಲರನ್ನೂ ಪೇಚಿಗೆ ಸಿಲುಕಿಸುತ್ತಿದ್ದ..ಹೀಗೇ ವಾದದಲ್ಲಿಸೋಲಿಸಿದವರನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತಿದ್ದ.. ಹೀಗೇಯೆ ಕಹೋಡನನ್ನೂ ಒಂದು ದಿನ ನೀರಿನಲ್ಲಿ ಹಾಕಿ ಮುಳುಗಿಸಿ ಕೊಂದುಬಿಟ್ತ... ಅದು ಉದ್ದಾಲಕನಿಗೆ ಗೊತ್ತಾಯಿತು... ಉದ್ದಾಲಕ ತನ್ನ ಮೊಮ್ಮಗನಿಗೆ ಈ ವಂದಿಯು ತನ್ನಪ್ಪನನ್ನು ಕೊಂದಿದ್ದಾನೆ ಎಂಬುದು ಗೊತ್ತಾಗದಂತೆ ಬೆಳೆಸಿದ.. ಈ ಅಷ್ಟಾ ವಕ್ರನೋ ಉದ್ದಾಲಕನನ್ನೇ ತಂದೆಯೆಂದು ತಿಳಿದು ಬೆಳೆಯುತ್ತಿದ್ದ.. ಹಾಗೇ ಒಂದು ದಿನ ಉದ್ದಾಲಕನ ತೊಡೆಯೇರಿ ಕುಳಿತಿದ್ದ ಅಷ್ಟಾವಕ್ರನನ್ನು ನೋಡಿ ನಿಜವಾದ ಮಗನಾದ ಶ್ವೇತ ಕೇತು ತನ್ನಪ್ಪನ ತೊಡೆಯೇರಿದ್ದಕ್ಕಾಗಿ ಅವನನ್ನು ಎಳೆದು ಕೆಳಗೆ ಬೀಳಿಸಿ ಮನೆಗೆ ಕಳಿಸಿದ.. ಅಳುತ್ತಾ ಬಂದ ಅಷ್ಟಾವಕ್ರ ತಾಯಿಯನ್ನು ತನ್ನಪ್ಪ ಯಾರೆಂದು ಕೇಳಿದ.. ಅಷ್ಟಾವಕ್ರನ ಪಾಂಡಿತ್ಯ ಮತ್ತು ಮಹತಿಯನ್ನು ತಿಳಿದಿದ್ದ ತಾಯಿ ಸುಜಾತೆ ಮಗನಿಗೆ ಹೆದರಿ ನಿಜ ಸಂಗತಿಯನ್ನು ಮಗನಿಗೆ ಹೇಳಿಯೇಬಿಟ್ಟಳು... ಅಲ್ಲಿಂದ ಬಂದ ಅಷ್ಟಾವಕ್ರ ಶ್ವೇತಕೇತುವನ್ನು ಸಮೀಪಿಸಿ ನೀನು ಮಾಡಿದ ಕೆಲಸ ಒಳ್ಳೆಯದೇ ಆಯಿತು ಎಂದು ಹೇಳುತ್ತಾ ನಾಳೆ ನನ್ನೊಂದಿಗೆ ಸುತ್ತಾಟಕ್ಕೆ ಬರಬೇಕೆಂದು ತಿಳಿಸಿದ ಅಲ್ಲಿ ಹೋಗಿ ವಂದಿಯನ್ನು ವಾದದಲ್ಲಿ ಸೋಲಿಸಬೇಕೆಂದುಕೊಂಡ ..ಅದಕ್ಕೊಪ್ಪಿದ ಶ್ವೇತಕೇತು ಮತ್ತು ಅಷ್ಟಾವಕ್ರರು ಮುಂದೆ.. ಜನಕನ ಸಭೆಗೆ ಹೋಗಬೇಕೆಂದುಕೊಳ್ಳುತ್ತಾರೆ... 

  ಮೊದಲೆಲ್ಲ ವೇದಾಧ್ಯಯನವನ್ನು ಮಾಡುವುದಕ್ಕೂ ಕಾಲವನ್ನು ದಿನವನ್ನೂ ನೋಡುತ್ತಿದ್ದರು, ಪರ್ವಕಾಲ , ಹುಣ್ಣಿಮೆ, ಅಷ್ಟಮಿ ಅಮಾವಾಸ್ಯೆ ಚತುರ್ದಶಿ ಮುಂತಾದ ತಿಥಿಗಳಲ್ಲಿ ಅಧ್ಯನ ನಿಷಿದ್ಧವಾಗಿತ್ತು. ಯಾರಾದರೂ ಹಿರಿಯರು ಬಂದಾಗಲೂ ಅವರೆದುರಿಟ್ಟುಕೊಂಡು ಅಧ್ಯಯನವನ್ನು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಈ  ಕುರಿತು ನಮ್ಮ ಶಾಸ್ತ್ರ ದಲ್ಲೂ ಯಜುರ್ವೇದಿಗಳಲ್ಲಿ ಆ ಅನಧ್ಯಯನ ಕಾಲದಲ್ಲಿ ಅಧ್ಯನ ಮಾಡಿದ ದೋಷ ಪರಿಹಾರಕ್ಕಾಗಿ ’ಉಪಾಕರ್ಮ’ ಮಾಡಿಕೊಳ್ಳುವ ದಿನದಂದು.. ಕಾಮೋಕಾರ್ಶೀತಿ ಮಂಜುರಕಾರ್ಶೀ ನಮೋ ನಮಃ( ಉಪಾಕರ್ಮದ ದಿನ ಯಜ್ಞೋಪವೀತವನ್ನು ಧರಿಸಿಕೊಂಡು ಈ ಜಪವನ್ನು  ಮಾಡಬೇಕು ನಾನು ಮಾಡಲಿಲ್ಲ..!  ನನ್ನ ಆಸೆಯು ಹೀಗೆ ಮಾಡಿಸಿತು, ನನ್ನ ಕೋಪವು ಹೀಗೆ ಮಾಡಿಸಿತು....|  "ಅಧ್ಯಾಯ ಉತ್ಸರ್ಜನ ಅಕರಣ ಪ್ರಾಯಶ್ಚಿತ್ತಾರ್ಥಂ"  ಯಾವ ವೇದ ಮಂತ್ರವನ್ನು ಎಲ್ಲಿ ಹೇಳಬಾರದಿತ್ತೋ ಅಲ್ಲಿ ಹೇಳಿದ್ದಕ್ಕಾಗಿ, ಅನದ್ಯಯನ ಕಾಳದಲ್ಲಿ ವೇದವನ್ನು ಹೇಳಿದ್ದಕ್ಕಾಗಿ ಪ್ರಾಯಶ್ಚಿತ್ತ ರೂಪವಾಗಿ ಈ ಕಾಮೋಕಾರ್ಶೀತಿ ಮಂಜುರಕಾರ್ಶೀತಿ  " ಜಪವನ್ನು ಮಾಡುತ್ತಾರೆ...
           ಹೀಗೇ ಅನಧ್ಯನ ಕಾಲದಲ್ಲಿಯೂ ವೇದವನ್ನು ಉರುಹೊಡೆಯುತ್ತಿದ್ದ ಕಹೋಡ....! ಅದೊಂದು ಹುಚ್ಚಿತ್ತು ಅವನಿಗೆ.. ವೇದಾದಿಗಳನ್ನು ಉರು ಹೊಡೆದು ರಾಜ ಸಭೆಯಲ್ಲಿ ಅದಕ್ಕೆ ಅರ್ಥಗಳನ್ನು ಹೇಳಿ ಸಂಪತ್ತಿಯನ್ನು ಗಳಿಸಬೇಕು ಎಂಬುದು ಅವನ ಮನಸ್ಸಿನ ಏಕೈಕ ಹಂಬಲವಾಗಿತ್ತು.. ಆದರೆ ಇದೊಂದು ಪಾಪವಾಗಿ ಮಾರ್ಪಟ್ಟಿತು ಕಹೋಡನಲ್ಲಿ.. ಅಂತೆಯೇ ಒಂದು ಅಷ್ಟಮಿಯ ದಿನ ಹೀಗೇ ವೇದವನ್ನು ಉರುಹೊಡೆಯುತ್ತ ಕುಳಿತಿದ್ದ ಕಹೋಡ...!! ಪಾಪ ಭೂಯಿಷ್ಟವು ಹೆಚ್ಚಲಾಗಿ ಅವನಿಗೆ ತೂಕಡಿಕೆ ಪ್ರಾರಂಬವಾಯಿತು.. ಅಲ್ಲಿಯೂ ವೇದವನ್ನು ಹೇಳಲಾಗಿ ಅದು ಸ್ವರ ವ್ಯತ್ಯಸ್ತವಾಗಿ ಅಪಸ್ವರ ಬಂತು.. ಇದನ್ನು ಅಲ್ಲಿಯೇ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಸುಜಾತೆಯ ಗರ್ಭದಲ್ಲಿರುವ ಶಿಶುವು ಕೇಳಿಸಿಕೊಂಡಿತು... ಅಲ್ಲದೇ ಹೇಳಿತು..." ಅಪ್ಪಾ.. ಅಕಾಲದಲ್ಲಿ ಅಕ್ರಮವಾಗಿ ಸ್ವರವ್ಯತ್ಯಸ್ತವಾಗಿ ಮಂತ್ರ ಹೇಳುತ್ತೀಯಲ್ಲಾ.. ಇದು ಸರಿಯೇ...?" ಇದನ್ನು ಕೇಳಿಸಿಕೊಂಡ ಕಹೋಡನಿಗೆ ಸಿಟ್ಟುಬಂತು.. "ಇನ್ನೂ ಭೂಮಿಗೇ ಬಾರದ ನೀನು ನನಗೇ ಬುದ್ಧಿ ಹೇಳುತ್ತೀಯಾ?" ಎಂದು ಅಲ್ಲಿಯೇ ಶಾಪವನ್ನು ಕೊಟ್ಟುಬಿಟ್ತ...!!! " ನೀನು ಅಷ್ಟಾವಕ್ರನಾಗು...!! ಅದೂ ಶಿಷ್ಯರೆಲ್ಲರ ಎದುರಲ್ಲಿ ಹೇಳಿದೆಯಲ್ಲಾ ಎಂದು ಕೋಪ ಹೆಚ್ಚಾಯಿತು" ಅಪ್ಪನೇ ಹುಟ್ಟದೇ ಇರುವ ಮಗನಿಗೆ ಶಾಪವನ್ನಿತ್ತ...!!
       
    ಮುಂದೆ.. 
ವಿದೇಹರಾಜ  ರಾಜ್ಯದಲ್ಲಿ ಜನಕ ಮಹಾರಾಜನಿದ್ದ.ನು ಸೀತೆಯ ತಂದೆಯಲ್ಲ.. ಆ ರಾಜ್ಯದಲ್ಲಿ ಆಳುವ ಎಲ್ಲಾ ಅರಸರಿಗೂ ಜನಕ ಎಂದೇ ಕರೆಯುತ್ತಿದ್ದರು.. ಈ ಜನಕನಾದರೋ ಮಹಾನ್ ಬುದ್ಧಿವಂತನೂ ಧರ್ಮಿಷ್ಠನೂ ವಿದ್ಯಾವಂತನೂ ಆಗಿದ್ದ.. ಅವನ ಆಸ್ಥವೆಲ್ಲವೂ ಪಂಡಿತರಿಂದಲೇ ತುಂಬಿಕೊಂಡಿತ್ತು ಎಂಬುದನ್ನು ಆಗಲೇ ಹೇಳಿದೆನಲ್ಲವೇ? ಅಲ್ಲದೇ ಅವನ ಆಸ್ಥಾನದಲ್ಲಿ ಈ ಕಹೋಡನ ಮಗನೂ ಮತ್ತು ಶ್ವೇತಕೇತು...ಸೋದರಳಿಯ ಮತ್ತು ಸೋದರ ಮಾವ ಇವರು ಹೋಗಲೆಳೆಸಿದರು.. ಆದರೆ ಅಲ್ಲೊಂದು ತೊಡಕಿತ್ತು.. ಆ ರಾಜನ ಆಸ್ಥಾನದಲ್ಲಿ ವಂದಿ . ಓರ್ವ ಸೂತನಿದ್ದ.. ಇವನೋ ರಾಜನ ಆಸ್ಥಾನಕ್ಕೆ ಅತಿ ಪ್ರಮುಖನಾದ ಪಾರಂಗತನಾಗಿದ್ದ.. ಹಾಗಾಗಿ ರಾಜನನ್ನು ಸಂದರ್ಶಿಸುವಾಗಲೂ ಮೊದಲು ವಂದಿಯನ್ನು ವಾದದಲ್ಲಿ ಸೋಲಿಸಿ ಮುಂದೆ ರಾಜನನ್ನು ಕಾಣಬೇಕಿತ್ತು..!! ( ವಂದಿಗಳು ಈಗಲೂ ಇದ್ದಾರೆ.. ಆದರೆ ಇವರಿಗೆ ಬುದ್ಧಿ ಮಾತ್ರ ಇರುವುದಿಲ್ಲ ಈ ಕಾಲದಲ್ಲಿ...!) ಈ ವಂದಿಯೂ ಕೂಡಾ ಜನಕನ ಸಭೆಗೆ ಒಂದು ಶಾಪ ರೂಪದಲ್ಲಿದ್ದ.. ಇವನು ಯಾರನ್ನೂ ಸುಮ್ಮನೇ ಬಿಡುತ್ತಿರಲಿಲ್ಲ..ಈ ಅಷ್ಟಾವಕ್ರನಾದರೋ ತಂದೆಯಿಂದ ಗರ್ಭದಲ್ಲಿರುವಾಗಲೇ ವೇದವನ್ನು ಅಧ್ಯಯನವನ್ನು ಮಾಡಿದ್ದರಿಂದ ಮಹಾನ್ ಬಾಲಕನಾಗಿ ಬೆಳೆದ.... ಮೈಯ್ಯಲ್ಲಿ ಎಂಟುಕಡೆಯಲ್ಲಿ ವಕ್ರತೆಯಿದ್ದರೂ ಬುದ್ಧಿ ಮಾತ್ರ ವಕ್ರವಾಗಿರಲಿಲ್ಲ... ಅತಿಯಾದ ವೇದಜ್ಞಾನವನ್ನು ಹೊಂದಿದ್ದ..!!
   ಹೀಗಿರಲಾಗಿ ಒಂದು ದಿನ ಈ ಹತ್ತು ವರ್ಷದ ಬಾಲಕನಾದ ಅಷ್ಟಾವಕ್ರ ಮಾರ್ಗದಲ್ಲಿ ಕುಂಟುತ್ತ ನಡೆದು ಹೋಗುತ್ತಿದ್ದ..  !! ಇತ್ತ ಜನಕನೋ..ವಾರ್ಷಿಕವಾಗಿ ಒಂದು ಯಜ್ಞವನ್ನು ಮಾಡುತ್ತಿದ್ದ..ಅಲ್ಲಿ ಅನೇಕ ಬ್ರಾಹ್ಮಣರು ಬರುತ್ತಿದ್ದರು.. ಅಲ್ಲಿ ಎಲ್ಲರಿಗೂ ಪುಷ್ಕಳವಾದ ಭೋಜನ ದಾನ ಮಾನಗಳು ನಡೆಯುತ್ತಿದ್ದವು . ಹೀಗೇ ಒಂದು ದಿನ ಉತ್ಸವದ ಸಂದರ್ಭದಲ್ಲಿ ಈ ಅಷ್ಟಾವಕ್ರ ಮತ್ತು ಶ್ವೇತ ಕೇತು ಅರಮನೆಗೆ ಹೋಗಬೇಕೆಂದು ಹೋಗುತ್ತಿರುವ ಸಂದರ್ಭದಲ್ಲಿ ದಾರಿಯಲ್ಲಿ ಅದೇ ಮಹಾರಾಜರು ಪಲ್ಲಕ್ಕಿಯಲ್ಲಿ ಕುಳಿತು ಅದೇ ದಾರಿಯಲ್ಲಿ ಎದುರು ಬರುತ್ತಿದ್ದರು..  ರಸ್ತೆ ಮಧ್ಯದಲ್ಲಿ ಈ ಹುಡುಗರು ನಡೆದು ಹೋಗುತ್ತಿದ್ದರು.. ರಾಜನ ಪಲ್ಲಕಿಯೆದುರು ದಂಡ ಹಿಡಿದು ದಾರಿ ಮಾಡಿಕೊಂಡು ಬರುತ್ತಿದ್ದರು.. ಅವರು ಈ ಹುಡುಗರನ್ನು ದಾರಿಯಿಂದ ಪಕ್ಕಕ್ಕೆ ಸರಿಯುವಂತೆ ತಿಳಿಸಿದರು.. ದೊರೆ ಬರುತ್ತಿದ್ದಾನೆ... ದಾರಿಬಿಡಿ ಎಂದರು...ಆದರೆ ಈ ಹುಡುಗರು ದಾರಿಯಿಂದ ಪಕ್ಕಕ್ಕೆ ಸರಿಯಲಿಲ್ಲ... ಎಷ್ಟು ಹೇಳಿದರೂ ಸರಿಯದಿದ್ದಾಗ ಅವರು ದೊರೆಗೆ ವಿಷಯ ತಿಳಿಸಿದರು..." ದೊರೆಯೇ..ಯಾರೋ ಈ ಬಾಲಕರು.. ಇನ್ನೂ ಬೆಳೆದವರಲ್ಲ.. ಆವರಿಗೆ ಎಷ್ಟು ಕೇಳಿಕೊಂಡರೂ ದಾರಿಯನ್ನು ಬಿಡಲೊಲ್ಲರು.." ಎಂದರು.. "ಹೌದೇ.. ಯಾರವರು.." ಎಂದು ಕೇಳುತ್ತಾ ಆ ಹುಡುಗರನ್ನು ನೋಡಿದ.."ಯಕಯ್ಯಾ ದಾರಿಯನ್ನು ಬಿಡುವುದಿಲ್ಲ ಅಂದಿರಲ್ಲಾ" ಅದನ್ನು ಕೇಳಿದ ಅಷ್ಟಾವಕ್ರ ರಾಜನಿಗೆ.." ದೊರೆಯೇ..ನಾವು ನಿನ್ನ ಆಸ್ಥಾನಕ್ಕೇ ಹೋಗುತ್ತಿದ್ದವರು... ಅಷ್ಟರಲ್ಲಿ ಸ್ವಾಗತ ಮಾಡಲೆಂಬಂತೆ ನೀನೇ ಇಲ್ಲಿ ನಮಗೆದುರಾದೆ... ಅಲ್ಲದೇ ನೀನೇ ಕೇಳುತ್ತಿದ್ದೀಯಾ ದಾರಿಯನ್ನು ಬಿಡೂ ಎಂದು.. ನಿನ್ನ ಆಸ್ಥಾನದಲ್ಲಿ ಮಹಾ ಮಹಾ ಪಂಡಿತರಿದ್ದಾರೆಂದು ಕೇಳಿದ್ದೇನೆ ಅವರ್ಯಾರೂ ಹೇಳಲಿಲ್ಲವೇ..?
ಅಂಧಸ್ಯ ಪಂಥಾಃ ಬಧಿರಸ್ಯ ಪಂಥಾಃ|
ಸ್ತ್ರಿಯಃ ಪಂಥಾಃ ಭಾರವಾಹಸ್ಯ ಪಂಥಾಃ |
ರಾಜ್ಞಃ ಪಂಥಾ ಬ್ರಾಹ್ಮಣೇನಾ ಸಮೇತ್ಯಾ|
..... (( ದಾರಿಯಲ್ಲಿ ಹೋಗುತ್ತಿರುವಾಗ ಓರ್ವ ಕುರುಡ ಎದುರಾಗಿ ಬರುತ್ತಿದ್ದರೆ, ಭಾರವನ್ನು ಹೊತ್ತು ಬರುತ್ತಿರುವಂಥಾ ವ್ಯಕ್ತಿ ಬರುತ್ತಿದ್ದರೆ, ಸ್ತ್ರೀಯರು ಬರುತ್ತಿದ್ದರೆ, ರಾಜರು ಬರುತ್ತಿದ್ದರೆ, ಬ್ರಾಹ್ಮಣ ಬರುತ್ತಿದ್ದರೆ.... ಅಲ್ಲದೇ ರಾಜ್ಞಃ ಪಂಥಾ ಬ್ರಾಹ್ಮಣೇನಾಸಮೇತ್ಯ...!! ಒಂದು ವೇಳೆ ಬ್ರಾಹ್ಮಣನು ಎದುರಾಗಿ ಬರುತ್ತಿದ್ದರೆ ರಾಜನೂ ದಾರಿ ಬಿಡಬೇಕು..!!) ಎಂಬುದು ಗೊತ್ತಿಲ್ಲವೇ ಎಂದು ಚೋಟುದ್ದದ ಅಷ್ಟಾವಕ್ರ ಹುಡುಗನೊಬ್ಬ ಕೇಳಿದ್ದಕ್ಕೆ.. ಅವಾಕ್ಕಾದ ಜನಕ ಆಯಿತಪ್ಪಾ ನೀನು ಹೇಳಿದ್ದು ಶಾಸ್ತ್ರ ಸಮ್ಮತವಾಗಿದೆ ..
ಪಂಥಾ ಅಯಂತೇದ್ಯ  ಮಯಾತಿ ದಿಷ್ಟಃ|
ಯೇನೇಚ್ಛಸಿ ತೇನ  ಕಾಮಂ ವ್ರಜಸ್ವ|
ನ ಪಾವಕೋ ವಿದ್ಯತೇ ಲ್ಕಘೀಯಾನ್|
ಇಂದ್ರೋಪಿ ನಿತ್ಯಂನಮತೇ ಬ್ರಾಹ್ಮಣಾನಾಮ್
ಅಗ್ನಿ ಚಿಕ್ಕದಾಗಿರಲೀ ದೊಡ್ಡದಾಗಿರಲೀ ಅಗ್ನಿ ಅಗ್ನಿಯೇ ...ಅದರ ಸುಡುವ ಗುಣಕ್ಕೆ ಚಿಕ್ಕದು ದೊಡ್ಡದು ಎಂಬ ಭೇದವಿದೆಯೇ..!!!ಹಾಗಾಗಿ ನೀನು ಎಲ್ಲಿಗೆ ಹೋಗಬೇಕೆಂದು ಕೊಂಡಿರುವೆಯೋ ಹೋಗು  ಬ್ರಾಃಮಣರಿಗೆ ಗೌರವವಿದ್ದ ಕಾಲ ಅದು...!! ಇದೋ ದಾರಿಯನ್ನು ಬಿಟ್ಟಿದ್ದೇನೆ ಎಂದು ರಾಜ ಪಕ್ಕಕ್ಕೆ ತನ್ನ ಪಲ್ಲಕಿಯನ್ನು ಸರಿಸಲು ಹೇಳಿದ.. ಆಗ ಅಷ್ಟಾವಕ್ರ .." ಮಹಾರಾಜಾ.. ನೀನೇ ಅಲ್ಲವೇ ಜನಕ ಎಂಬವನು... ನಾವು ನಿನ್ನರಮನೆಗೇ ಹೋಗುತ್ತಿದ್ದೇವೆ . 
 ಪ್ರಾಪ್ತೋಸ್ವ ಯಜ್ಞಂ ನೃಪಸಂದಿದೃಕ್ಷುಃ|
 ಕೌತೂಹಲಂ ನೋ ಬಲವನನ್ನರೇಂದ್ರ|
ಪ್ರಾಪ್ತಾವಿಹಾವತಿಥೀ ಪ್ರವೇಶಂ|
ಕಾಂಕ್ಷಾವಹೇ ದ್ವಾರಪತೇಃ ತವಾಜ್ಜಾಮ್|
 ಐಂದ್ರದ್ಯುಮ್ನೆ  ಯಜ್ಞದೃಶಾಮ್ ವಿಹಾವಾಮ್|
ತೌ ವೈ  ಕ್ರೋಧವಿಯಾಧಿನಾ  ದಹ್ಯಮಾನೋ 
ಅಯಂ ಚ ನೋ ದ್ವಾರಪಾಲೋ ಋಣದ್ಧಿ||

 ಅಪ್ಪಾ..ಅಲ್ಲಿ ನಿನ್ನ ದ್ವಾರಪಾಲಕರು ದುಷ್ಟರೆಂದು ಕೇಳಿದ್ದೇವೆ.. ಅವರು ಅರಮನೆಯೊಲಗೆ ಹೋಗಲು ಬಿಡುವುದಿಲ್ಲವಂತೆ.. ಸ್ವಲ್ಪ ಅವರಿಗೆ ಹೇಳಿಬಿಡು.. ನಾಳೆ ನಡೆಯುವ ರಾಜ ಸಭೆಗೆ ಬಾಲಕರೀರ್ವರು ಬರುತ್ತಾರೆ. ಅವರಿಗೆ ದಾರಿ ಮಾಡಿಕೊಡಿ ಬಾಗಿಲಲ್ಲಿ ತಡೆಯಬೇಡಿ ಎಂದು ಹೇಳಿಬಿಡು" ಎಂದ.. ರಾಜ ಅದಕ್ಕೆ ಸಮ್ಮತಿಸಿ ಮುಂದೆ ಹೋದ..ಆದರೆ ಕಾರ್ಯಬಾಹುಳ್ಯದಿಂದ ಅವನಿಗೆ ದ್ವಾರಪಾಲಕರಿಗೆ ಎಚ್ಚರಿಕೆ ಕೊಡುವುದು ಮರೆತು ಹೋಗಿತ್ತು..
ಮಾರನೇ ದಿನ ಬೆಳಿಗ್ಗೆ.. ಈ ಹುಡುಗರು ಜನಕನ ಅರಮನೆಯ ಬಾಗಿಲಿಗೆ ಹೋದರು  ವಂದಿಗೆ ಹೆದರುತ್ತಿದ್ದ ರಾಜ
ಅಲ್ಲಿ ಬಾಗಿಲಲ್ಲಿ ಇಬ್ಬರು ದಡೂತಿ ದ್ವಾರಪಾಲಕರು ನಿಂತಿದ್ದರು.. ಅವರು ಹೇಳಿದರು 
ವಂದೇಃ ಸಮಾದೇಶಕರಾ  ವಯಂ ಸ್ಮ|
ವಿಭೋಧವಾಕ್ಯಂ ಚ ಮಯೇರ್ಯಮಾಣಮ್|
ನ ವೈ ಬಾಲಾಃ  ಪ್ರವಿಶಂತ್ತ್ಯತ್ರ ವಿಪ್ರಾಃ|

...... ನೋಡಿರಪ್ಪಾ ನಾವು ವಂದಿ ಹೇಳಿದಂತೇ ಕೇಳುವವರು... ಅವನಪ್ಪಣೆಯಾಗಿದೆ.. ಇಲ್ಲಿಗೆ ಬಾಲಕರೆಲ್ಲಾ ಬರುವ ಹಾಗಿಲ್ಲ.. ಒಳಗೆ ಹೋಗಬೇಡಿ ಹೋಗಿ ಮನೆಗೆ... ಅದನ್ನು ಕೇಳಿದ ಅಷ್ಟಾ ವಕ್ರ ಹೇಳಿದ 
ಯದ್ಯತ್ರ ವೃದ್ಧೇಷು ಕೃತ ಪ್ರವೇಶಃ|
ಯುಕ್ತಂ ಪ್ರವೇಷ್ಟುಂ ಮಮ ದ್ವಾರ ಪಾಲಾಃ|
ವಯಂ ಹಿ ವೃದ್ಧಾಃ ಚರಿತ ವ್ರತಾಶ್ಚ
ವೇದ ಪ್ರಭಾವೇಣ ಸಮನ್ವಿತಾಶ್ಚ|
ಶುಶ್ರೂಶುವಶ್ಚ ಪಿ ಜಿತೇಂದ್ರಿಯಶ್ಚ
......
ಈ ಜನಕನ ಸಭೆಗೆ ವೃದ್ಧರು ಮಾತ್ರ ಬರಬಹುದೆಂದು ಹೇಳುವಿರಾದರೆ ನಾವೂ ವೃದ್ಧರು..!!!! ಸಕಲ ವೇದ ಶಾಸ್ತ್ರಗಳನ್ನು ಓದಿ ಸ್ನಾತಕರಾಗಿದ್ದೇವೆ.. 
ಮೇಲ್ನೋಟಕ್ಕೆ ನಿಮಗೆ ನಾವು ಸಣ್ಣ ಮಕ್ಕಳಂತೆ ಕಾಣಬಹುದು ಆದರೆ ನಾವೂ ಜ್ಞಾನ ವೃದ್ಧರಪ್ಪಾ...ಎಂದರು.ಬಾಲಕರೆಂದು ನಮ್ಮನ್ನು ಉಪೇಕ್ಷೆ ಮಾಡಬೇಡ... ಎಂದಾಗ ದ್ವಾರಪಾಲಕರಿಗೆ ಸ್ವಲ್ಪ ಪಿತ್ಥ ನೆತ್ತಿಗೇರಿತು...ಹಾಗಾದರೆ ನಾವು ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಸರಿಯುತ್ತರವನ್ನಿತ್ತಿರಾದರೆ ಒಳಗೆ ಬಿಡುತ್ತೇವೆ..ಎಂದರು.. ಆಗಲಿ ಎಂದ ಅಷ್ಟಾವಕ್ರ... ಕೇಳು ಎಂದ... ಆಗ ಆ ದ್ವಾರಪಾಲಕರು...
.. ಸರಸ್ವತೀ ಮೀರೇ  ವೇದಜುಷ್ಟಾಮ್|
 ಏಕಾಕ್ಷರಾಂ ಬಹುರೂಪಾಂ ವಿರಾಜಾಮ್|
 ಅಂಗಾತ್ಮಾನಂ ಸಮವೇಕ್ಷ ಸ್ವ ಬಾಲಮ್|
  ಕಿಂ ಶ್ಲಾಘಸೇುರ್ಲಭೋ ವೈ ಮನೀಷಿ||
ಈ ಸೃಷ್ಟಿಯಲ್ಲಿ ಯಾವ ವೇದಾದಿಗಳಿಗೆ ಪ್ರಾಮಾಣ್ಯವೋ, ಒಂದೇ ಅಕ್ಷರದಿಂದ ಕರೆಯಲ್ಪಡುವ ಹಾಗೂ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೋ ಅಂಥವಳು ನಿನಗೆ ಗೊತ್ತೇ... ಗೊತ್ತಿದ್ದರೆ ಆ ಸರಸ್ವತಿಯ ಕುರಿತು ಹೇಳು.. ಬಾಲಕನಾದರೂ ನಿನ್ನನ್ನು ಒಳಗೆ ಬಿಡುತ್ತೇನೇ ಎಂದ ದ್ವಾರಪಾಲಕ...!! ಅದಕ್ಕೆ ಈ ಅಷ್ಟಾವಕ್ರ ಹೇಳಿದ..." ಓಂ" ಎಂಬುದೇ ಅವಳು... ಒಂದೇ ಅಕ್ಷರದಿಂದ ಕರೆಯಲ್ಪಡುವ ಪ್ರಣವಸ್ವರೂಪಳು.. ಅವ್ಳೇ ..ಗೌರೀಮಿಮಾಯ ಸಲಿಲಾನಿ ತಕ್ಷತ್ಯೇಕಪದೀ... ದ್ವಿಪದೀ ಸಾ ಚತುಷ್ಪದೀ... ಎಂಬಂತೆ ಆ ಗೌರಿಯೇ ಒಂದೇ ಅಕ್ಷದಿಂದ ಕರೆಯಲ್ಪಡುವ ಸರಸ್ವತಿಯಾಗಿದ್ದಾಳೆ.ಳು ಗುರುತ್ವವುಳ್ಳವಳೂ ಇಡೀ ವೇದ ರಾಶೀಯನ್ನು ತನ್ನ ಗರ್ಭದಲ್ಲಿ ತುಂಬಿಕೊಂಡವಳೂ ಆದ ವೇದ ಮಾತೆ ಸರಸ್ವತಿ ಗೊತ್ತಿಲ್ಲವೇ..? ಎಂದ.. ಆಗ ಬಾಗಿಲು ಕಾಯುವ ಚೂರು ತಗ್ಗಿದ... ಆಗ ಅಷ್ಟಾವಕ್ರ ಹೇಳಿದ ನೋಡಪ್ಪಾ ಕೇವಲ ಮೇಲ್ನೋಟಕ್ಕೆ ನೋಡುವುದರ ಮೂಲಕ ಅಳತೆ ಮಾಡಬೇಡ.. ಏಕೆಂದರೆ...
ನ ಜ್ಞಾಯತೇ ಕಾಯ ವೃದ್ಹ್ಯಾ ವಿವೃದ್ಧಿಃ|
ಯಥಾ ಷ್ಟೀಲಾ ಶಾಲ್ಮಲೇಃ ಸಂಪ್ರವೃದ್ಧಾಃ||
ನೋಡಪ್ಪಾಹೇಗೆ ಬೂರುಗದ ಮರವು ನೋಡುವುದಕ್ಕೆ ದೊಡ್ಡದಾಗಿ ಕಂಡರೂ ಒಳಗೆ ಟೊಳ್ಳಾಗಿ ಇರುತ್ತದೆಯೋ ಹಾಗೇ  ಕೇವಲ ನೋಡುವುದಕ್ಕೆ ದೊಡ್ಡವನಾಗಿ ಕಂಡರೂ ವಿದ್ಯೆ ಇಲ್ಲದವನು ಒಳಗೆ ಏನನ್ನೂ ಹೊಂದಿರುವುದಿಲ್ಲ.. ಪೆಡಂಭೂತದಂತೇ... 
{ ಕಥೆಯ ಮುಂದಿನ ಭಾಗ...ಅಷ್ಟಾವಕ್ರ ಗೀತೆಯಲ್ಲಿ ನೋಡಿ...}



ಸೋಮವಾರ, ಆಗಸ್ಟ್ 11, 2014

ಮಹಾಭಾರತದ ಒಂದು "ಕೂಟಶ್ಲೋಕ"

               "ಶ್ರೀಮನ್ಮಹಾಭಾರತ"... "ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನತತ್ ಕ್ವಚಿತ್" ಅಂದರೆ ಈ ಮಹಾ ಭಾರತವೆಂಬ”ಮಹಾಕಾವ್ಯದಲ್ಲಿ ಏನೇನು ಹೇಳಲ್ಪಟ್ಟಿದೆಯೋ ಅದು ಈ ಲೋಕದಲ್ಲಿ ಎಲ್ಲ ಕಡೆಯೂ ಇದೆ, ಇಲ್ಲಿ ಏನು ಹೇಳಿಲ್ಲವೋ ಅದು ಎಲ್ಲಿಯೂ ಇಲ್ಲ’ ಇಂತಹ ಅಮೋಘವಾದ ಪಂಚಮ ವೇದವನ್ನು ನಮಗೆ ಕರುಣಿಸಿದವರು ’ಶ್ರೀಮನ್ ವೇದವ್ಯಾಸರು’
          ತಮ್ಮ ಕಥಾ ಪ್ರೌಢಿಮೆಯನ್ನು ಮೆರೆಯುವುದಕ್ಕಾಗಿಯೇ ವನ ಪರ್ವದಲ್ಲಿ ತೀರ್ಥ ಕ್ಷೇತ್ರಗಳ ದರ್ಶನವನ್ನು ಧರ್ಮರಾಜನಿಗೆ ಮಾಡಿಸುವ ನೆಪದಲ್ಲಿ  ಮಹಾ ಮುನಿ "ಲೋಮಶ"ರ ಮುಖದಿಂದ ಅನೇಕ ದಿವ್ಯವಾದ ಕಥಾನಕಗಳನ್ನೂ ಧರ್ಮ ಸೂಕ್ಷ್ಮಗಳನ್ನೂ ಹೇಳಿಸುತ್ತಾರೆ.
          ಹಿಂದೆ ಬಹಳವಾದ ತೀರ್ಥಕ್ಷೇತ್ರಗಳನ್ನು ಧರ್ಮರಾಜ ತನ್ನ ತಮ್ಮಂದಿರಾದ ಭೀಮ, ನಕುಲ, ಸಹದೇವ ಹಾಗೂ ದ್ರೌಪದಿಯರೊಡನೆ ಸಂದರ್ಶನ ಮಾಡುತ್ತಾ ’ಸೋಮಕ’ ತೀರ್ಥವನ್ನು ನೋಡಿಕೊಂಡು ಮುಂದಕ್ಕೆ ಹೊರಡುತ್ತಾರೆ.. ಅವರೊಂದಿಗೆ ಲೋಮಶರೂ ಜತೆಗೂಡುತ್ತಾರೆ.. ಅವರು ಸಂದರ್ಶನ ಮಾಡುವ ಎಲ್ಲಾ ತೀರ್ಥ ಕ್ಷೇತ್ರಗಳ ಸ್ಥಳಪುರಾಣಗಳನ್ನು ವಿವರವಾಘಿ ಧರ್ಮರಾಜನಿಗೆ ಹೇಳುತ್ತಾ ಇಡೀ ಭಾರತದ ಭೌಗೋಲಿಕ ಐತಿಹಾಸಿಕ, ಪದರವನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಹಾಗೇ  ಮುಂದುವರಿದು ’ರೌಪ್ಯಾ’ ನದೀ ತೀರಕ್ಕೆ ಬರುತ್ತಾರೆ. ಯಾವುದು ಇದು "ರೌಪ್ಯಾ"?
ಲೋಮಶರು ಈ ಪ್ರದೇಶವು ನಿನ್ನ ಪೂರ್ವಜರಾದ ನಹುಷಾದಿಗಳು ವಾಸಮಾಡಿದ ಭೂಮಿ ಎಂದು ಹೇಳುತ್ತಾರೆ.. ಆಗ  ಈ ನದೀ ತೀರದಲ್ಲಿ ಒಂದು ಸುಂದರವಾದ ಪ್ರದೇಶದಲ್ಲಿ ಧರ್ಮರಾಜಾದಿಗಳು ವಾಸಮಾಡಬೇಕೆಂದು ಆಲೋಚಿಸಿದರು. ಇಲ್ಲಿ ಒಂದು ಚಮತ್ಕಾರಿಕವಾದ ಒಂದು ಕೂಟ ಶ್ಲೋಕವನ್ನು ವ್ಯಾಸರು ಲೋಮಶರಿಂದ ಹೇಳಿಸುತ್ತಾರೆ...
ಇಲ್ಲಿ ಹಿಂದಿನ ಒಂದು ಘಟನೆಯನ್ನು ಕೂಟ ಶ್ಲೋಕ ರೂಪದಲ್ಲಿ ಲೋಮಶರು ಧರ್ಮರಾಜನಿಗೆ ಹೇಳುತ್ತಾರೆ... ಹಾಗಾದರೆ ಈ "ಕೂಟ ಶ್ಲೋಕ" ಎಂದರೇನು? ವಿವಿಧಾರ್ಥಗಳನ್ನು ತನ್ನಲ್ಲಿ ಅಡಕಮಾಡಿಕೊಂಡಿರುವ, ಮೇಲ್ನೋಟಕ್ಕೆ ಸಾಮಾನ್ಯಾರ್ತಹವನ್ನು ಕಾಣಿಸುವ ಶ್ಲೋಕ....!! ಹಾಗಾದರೆ ಯಾವುದು ಆ "ಕೂಟಶ್ಲೋಕ"?
ಬಹಳ ಹಿಂದೆ ಇದೇ ಕ್ಷೇತ್ರದಲ್ಲಿ ಬಂದಂತಹ ಯಾತ್ರಿಕರೆಲ್ಲರಿಗೆ ಒಂದು ಅಶರೀರವಾಣಿ ಕೇಳಿಬರುತ್ತಿತ್ತು. ಅದು ಒಂದು "ಪಿಶಾಚ ಧ್ವನಿ" ಅದು ಹೇಳುವ ಒಂದು ಶ್ಲೋಕವೇ ಆ ಕೂಟಶ್ಲೋಕ...!

"ಯುಗಂಧರೇ ದಧಿಪ್ರಾಶ್ಯ ಉಷಿತ್ವಾಚ್ಚಾಚ್ಯುತಸ್ಥಲೇ|
   ತದ್ವದ್ಭೂತಲಯೇ ಸ್ನಾತ್ವಾ ಸಪುತ್ರಾ ವಸ್ತುಮರ್ಹಸಿ|
ಈ ಶ್ಲೋಕದ ಸಾಮಾನ್ಯಾರ್ಥ ತುಂಬ ಸುಲಭವಾಗಿದೆ. ಇಲ್ಲಿ ಒಂದು ಪ್ರಶ್ನೆಯೂ ಇನ್ನೊಂದು ಉತ್ತರವೂ ಅಡಗಿದೆ.
ಯುಗಂಧರಎಂಬಲ್ಲಿ ಮೊಸರನ್ನು ಕುಡಿದು, ಅಚ್ಯುತ ಎಂಬ ಜಾಗದಲ್ಲಿ ವಾಸಮಾಡಿ ಅಲ್ಲೇ ಇರುವ ಭೂತಲದಲ್ಲಿ ಸ್ನಾನವನ್ನೂ ಪೂರೈಸಿ ಆ ನಂತರದಲ್ಲಿ ಈ ಪ್ರದೇಶಕ್ಕೆ ಪುತ್ರಾದಿಗಳೊಂದಿಗೆ ಬಂದು ವಾಸಮಾಡಲು ಸಮರ್ಥನಾಗುತ್ತೀಯಾ..
ಇಲ್ಲಿ ಕೊನೇಯಲ್ಲಿರುವ "ಸಮರ್ಥನಾಗುತ್ತೀಯಾ" ಎಂಬುದು ಪ್ರಶ್ನಾರ್ಥಕವಾಗಿ ಯೂ ಉತ್ತರವಾಗಿಯೂ ಹೇಳಲ್ಪಟ್ಟಿದೆ.....!!
ಇದರ ನಾನಾರ್ಥವನ್ನು ಗುರುಮುಖದಿಂದ ಕೇಳಿ ತಮ್ಮ ಮುಂದಿಡಲು ಹರ್ಷವೆನಿಸುತ್ತದೆ.. ತಾವೂ ಆನಂದಿಸುವಿರಾಗಿ ನಂಬಿದ್ದೇನೆ.

****************************************************
ಈ ಶ್ಲೋಕಕ್ಕೆ ಅನೇಕಾರ್ಥಗಳಿವೆಯೆಂದು ಈ ಮೊದಲೇ ಹೇಳಿದೆನಷ್ಟೇ.. ಅದನ್ನು ಒಂದೊಂದಾಗಿ ನೋಡೋಣ...
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಯುಗಂಧರೇ...( ನಿಷೇಧಾರ್ಥ)
   "ಯುಗಂಧರ" ಎಂಬ ಒಂದು ಪರ್ವತ ಇತ್ತು. ಅದು ಕುರುಕ್ಷೇತ್ರಕ್ಕೆ ಬರುವವರಿಗೆ ಪ್ರವೇಶದ್ವಾರದಂತಿತ್ತು. ರೌಪ್ಯಾ ನದಿಯ ದಂಡೆಯಲ್ಲಿ ಇರುವ ಈ ಪ್ರದೇಶದ ಮೂಲಕವೇ ಹಿಂದೆ ಜನರು ಪ್ರವಾಸ ಮಾಡುತ್ತಿದ್ದರು .ಹೀಗೆ ಯಾತ್ರೆ ಮಾಡುತ್ತಾ ಈ ಸ್ಥಳಕ್ಕೆ ಬಂದು ವಾಸ ಮಾಡುವವರಿಗೆ ಅಲ್ಲಿರುವ ಪಿಶಾಚಿಯು ಅದೃಶ್ಯ ರೂಪದ ಲ್ಲಿದ್ದು  ಹೇಳುತ್ತಿತ್ತು... ಯುಗಂಧರೇ ದಧಿಪ್ರಾಶ್ಯ..... ಅಂದರೆ ಈ ಸ್ಥಳದಲ್ಲಿ ದಧಿಪ್ರಾಶನ ನಿಷಿದ್ಧ...! ಅಂದರೆ ಈ ಯುಗಂಧರ ಪ್ರದೇಶದಲ್ಲಿ ಮೊಸರು ತಿನ್ನುವಂತಿಲ್ಲ...! ಅದು ನಿಷಿದ್ಧಾಹಾರ...! ಏಕೆಂದರೆ ಈ ಪ್ರದೇಶದಲ್ಲಿ ಗೋವುಗಳ ಸಂತತಿ ಇಲ್ಲ...! ಇಲ್ಲಿರುವುದೆಲ್ಲಾ ಒಂಟೆಗಳು, ಕುದುರೆಗಳು, ಹೇಸರಗತ್ತೆಗಳು...! ಅಂದರೆ ಒಂದೇ ಗೊರಸು ಹೊಂದಿರುವ ಪ್ರಾಣಿಗಳು. ಶಾಸ್ತ್ರದಲ್ಲಿ ಒಂದೇ ಗೊರಸನ್ನು ಹೊಂದಿರುವ ಪ್ರಾಣಿಯ ಹಾಲು ಮೊಸರುಗಳನ್ನು ಸೇವಿಸಬಾರದು ಎಂದಿದೆ.. ಇದೇ ಮಾತನ್ನು ಕರ್ಣ ಪರ್ವದಲ್ಲೂ ಶಲ್ಯನಿಗೆ ಕರ್ಣ ಹೇಳುತ್ತಾನೆ.. ನಿಮ್ಮ ದೇಶದಲ್ಲಿ ಕುಡಿಯಬಾರದ್ದನ್ನೆಲ್ಲಾ ಕುಡಿಯುತ್ತಾರೆ ಎಂದು ಮುಂತಾಗಿ... ಅಂದರೆ ಈಗಿನ ಇರಾಕ್,ಇರಾನ್ ಪ್ರಾಂತಗಳ ಪ್ರವಾಸಕ್ಕೆ ಹೋದವರು ಅಲ್ಲಿ ಈ ರೀತಿಯಾದ ಪ್ರಾಣಿಗಳ ಹಾಲು ಮೊಸರುಗಳನ್ನು ಉಪಯೋಗಿಸುತ್ತಾರೆ ಅಂಥವರು ಯಾತ್ರೆಯನ್ನು ಮುಗಿಸಿಕೊಂಡು ಈ ಯುಗಂಧರಕ್ಕೆ ಬರುತ್ತಾರೆ.. ಅಂತಹ ಸಂದರ್ಭದಲ್ಲಿ ಈ ಪಿಶಾಚವು ಈ ಮಾತನ್ನು ಹೇಳುತ್ತದೆ...!!! ಹೀಗೇ ಈ ಯುಗಂಧರ ಪ್ರದೇಶದಲ್ಲಿ  ನೀನು ಅಲ್ಲೆಲ್ಲ ದಧಿಎಂದರೆ ಮೊಸರನ್ನು ಸೇವಿಸಿದ್ದೀಯಾ ... ಅದಷ್ಟೇ ಅಲ್ಲ... "ಅಚ್ಯುತಸ್ಥಲೇ" ಸಾಮಾನ್ಯಾರ್ಥದಲ್ಲಿ ಅಚ್ಯುತ ಎಂಬ ಸ್ಥಳ ಎಂದು ಹೇಳಿದರೂ ಕೂಟಾರ್ಥವು... ಸಂಕರ ವರ್ಣದವರು ವಾಸಮಾಡುವ ಸ್ಥಳದಲ್ಲಿ ವಾಸಮಾಡಿದ್ದೀಯಾ... {ಸಂಕರ ವರ್ಣೀಯರು ಎಂದರೆ ತುರುಕರು ಎಂದು ವ್ಯಾಖ್ಯಾನ ಮಾಡಿದ್ದಾರೆ.}. ಅಂತಹ ಜನರೊಂದಿಗೆ ವಾಸಮಾಡಿದ್ದೀಯಾ..
ಭೂತಿಲಯ/ಭೂತಲಯೇ ಭೂತಾನಾಂ ಲಯ ಸ್ಥಾನೇ- ಪ್ರಾಣಿಗಳನ್ನು ಕೊಂದು ಬದುಕುವ ಜನರು ಇರುವಲ್ಲಿ( ತುರುಕ ದೇಶದಲ್ಲಿ) ಸ್ನಾನ ಮಾಡಿದ್ದೀಯಾ...ಬೆಂಕಿಯಲ್ಲಿ ಬೇಯದೇ ಇರುವ ಹೆಣಗಳನ್ನು ನದಿಗಳಿಗೆ ತಳ್ಳಿಬಿಡುತ್ತಿದ್ದಾರೆ ಅಂತಹ ನದಿಗಳಲ್ಲಿ ಸ್ನಾನ ಮಾಡಿದ್ದೀಯಾ...{" ಯೇನಗ್ನಿದಗ್ಧಾಃ ಯೇವಾಜಾತಾ ಕುಲೇ ಮಮ.. ಎಂದು ಹೇಳಿದೆ.. ಪಂಚಾಗ್ನಿ ಸಂಬದ್ಧನಾದ ವ್ಯಕ್ತಿಯನ್ನು ಅಗ್ನಿಯಲ್ಲೇ ಸುಡಬೇಕು ಎಂಬುದು ವೇದವಾಚ್ಯವಾದದ್ದು. ಬ್ರಾಹ್ಮಣನನ್ನು ಅಗ್ನಿಯಲ್ಲೇ ಸುಡಬೇಕು.. ಸನ್ಯಾಸಿಗಳನ್ನು ಹೂಳಬೇಕು. ಪಂಚಾಗ್ನಿ... ಬ್ರಾಹ್ಮಣನು ಹುಟ್ಟುವಾಗ ಮಾತಾ, ಶ್ರದ್ಧಾ,ಸೋಮ, ಮೇಘ, ಪರ್ಜನ್ಯ ಎಂದು  ಪಂಚಾಗ್ನಿಯಿಂದ ಬಂದಿರುತ್ತಾನೆ ಎಂದು ಉದ್ಧಾಲಕರು ಉಪನಿಷತ್ತಿನಲ್ಲಿ ಹೇಳಿದೆ. ಯಾರಿಗೆ ಯಜ್ಞೋಪವೀತ ಧಾರಣಾಧಿಕಾರವಿದೆಯೋ ಅವರೆಲ್ಲರನ್ನೂ ಅಗ್ನಿಯಲ್ಲೇ ಸುಡಬೇಕು... ಅದೇ ರೀತಿ ಸನ್ಯಾಸಿಗಳಿಗೆ ಅಗ್ನಿ ಸಂಸ್ಕಾರವಿಲ್ಲ...!! ಅವರು ಎಲ್ಲವನ್ನೂ ಕಳಚಿಕೊಂಡಿರುತ್ತಾರೆ..!!}
ಅದೇ ರೀತಿಯಲ್ಲಿ "ಅನಗ್ನಿದಗ್ಧಾನಾಂ" ಪ್ರದೇಶದಲ್ಲಿ ಸ್ನಾನ ಮಾಡಿದವಗಿದ್ದೀಯಾ.... ಹಾಗಾಗಿ ಈ ಕ್ಷೇತ್ರಕ್ಕೆ ಬರಬೇಡ.. ಒಂದು ವೇಳೆಇದನ್ನು ಮಾಡಿಲ್ಲದಿದ್ದರೆ ಇಲ್ಲಿ ನೀನು ಉಳಿದುಕೊಳ್ಳಬಹುದು.. ಎಂದು ಪಿಶಾಚವು ಹೇಳುತ್ತದೆ...!!
          ಹೀಗೆ ಅಲ್ಲಿ ಬಂದವರಿಗೆಲ್ಲ ಈ ಮೇಲಿನ ಮಾತುಗಳನ್ನು ಪ್ರಶ್ನಿಸುತ್ತಾ ಮತ್ತೂ ಉಳಿದುಕೊಂಡನಾದರೆ ... ಅಂದರೆ  ಯಾವನು ಆ ದೇಶಗಳಿಂದ  ಬರುವಾಗ ಅಲ್ಲಿನ ಒಂಟೆ ಇತ್ಯಾದಿ ಒಂದೇ ಗೊರಸನ್ನು ಹೊಂದಿದ ಪ್ರಾಣಿಗಳ ಮೊಸರನ್ನು ಸೇವಿಸಿದ್ದರೆ, ವರ್ಣ ಸಂಕರಗೊಂಡ ಜನರಿ ಬದುಕುತ್ತಿರುವಲ್ಲಿ ವಾಸ ಮಾಡಿ ಬಂದವನಾಗಿದ್ದರೆ.... ಮತ್ತು ಅಗ್ನಿ ದಗ್ಧಮಾಡದೆ ಅರ್ಧ ಬೆಂದ ಹೆಣಗಳನ್ನು ಎಸೆದ ನದಿಗಳಲ್ಲಿ ಸ್ನಾನ ಮಾಡಿ ಬಂದವನಾಗಿದ್ದರೆ ... ಇಲ್ಲಿ ಒಂದು ದಿನ ಕೂಡಾ ನಿನಗೆ ವಾಸಮಾಡುವುದಕ್ಕೆ ಬಿಡುವುದಿಲ್ಲ.. ಹೀಗೆ ಹೇಳುತ್ತಾ ಅನೇಕ ಜನರನ್ನು ಅಲ್ಲಿಂದ ಹೆದರಿಸಿ ಕಳಿಸಿಬಿಡುತ್ತಿತ್ತು.. 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
"ಯುಗಂಧರೇ"...( ಸಾದ್ವರ್ಥ)
ಯುಗಂಧರ ಎಂದರೆ ಸ್ಥೂಲ ಶರೀರ ಎಂದೂ ಹೆಸರಿದೆ. ಏಕೆಂದರೆ ಸುಖ ದುಃಖಾದಿಗಳನ್ನು ಲಾಭಾಲಾಭಗಳೆಂಬ ಯುಗಲಗಳನ್ನು ಈ ಶರೀರವು ಹೊಂದುವುದರಿಂದ ಇದನ್ನು ಅಂದರೆ ಶರೀರ ದಲ್ಲಿ.. ಮೊಸರನ್ನು ಕುಡಿದಿದ್ದೀಯಾ...( ದಧಿಪ್ರಾಶನ ಶಬ್ದೇನ  ಧರ್ಮಪ್ರಜಾ ಸಂಪತ್ಯರ್ಥೋ ದಾರ ಸಂಯೋಗಃ- ವಿವಾಹ ಕಾಲದಲ್ಲಿ ಬ್ರಹ್ಮವರ್ಯ ಸಮಾಪ್ತಿಗಾಗಿ ಮೊಸರನ್ನು ಕುಡಿಸುತ್ತಾರೆ..... ||ಸಮಜ್ಜಂತು ವಿಶ್ವೇ ದೇವಾಃ | ದಧ್ನ ಪ್ರಾಶ್ಯ| ಪ್ರತಿಪ್ರಯಚ್ಛೇತ್|(ಗೃಹ್ಯಸೂತ್ರ..) ಬ್ರಹ್ಮ ಚಾರಿಯಾದವನು ತನ್ನ ಬ್ರಹ್ಮರ್ಯವನ್ನು ಮುಗಿಸುವುದಕ್ಕಾಗಿ ಮೊಸರನ್ನು ಇಂದೂ ಕೂಡಾ ಕುಡಿಸುವುದಿದೆ. ಏಕೆಂದರೆ ಈ ಮೊಸರನ್ನು ಕುಡಿಯುವುದರಿಂದ ಪತ್ನಿಯಲ್ಲಿ ಪ್ರಜೋತ್ಪತ್ತಿಯನ್ನು ಮಾಡುವುದಕ್ಕೆ ಸಹಾಯಕವಾಗುವುದೆಂದು ಮಂತ್ರಗಳಿವೆ...!! ಹಾಗೆ ದಧಿ-ಮೊಸರನ್ನು ಕುಡಿಯುವುದರ ಮೂಲಕ ಸತ್ಪುತ್ರರನ್ನು ಪಡೆದವನಾಗಿದ್ದೀಯಾ....
ಅಚ್ಯುತಸ್ಥಲೇ.....
ಅಚ್ಯುತ ಎಂದರೆ ಲಿಂಗರೂಪ...!
ಲೀಂಗ ರೂಪವಾದ ಶರೀರ....!! ಇದು ಭೌತ ಶರೀರವಾದರೆ ಚ್ಯುತ... ಯಾವನಿಗೆ ಪ್ರೇತೋದ್ಧಾರ ಕಾರ್ಯವು ಆಗುವುದಕ್ಕೆ ಮೊದಲಿನ ರೂಪವಾದ  ಲಿಂಗ ರೂಪದಲ್ಲೇ ಸುತ್ತುತ್ತಿರುತ್ತಾನಾದ್ದರಿಂದ ಅಂತಹ ಸ್ಥಳದಲ್ಲಿ ಉಳಿದುಕೊಂಡಂಥಾ..
ಭೂತಲಯೇ ಸ್ನಾತ್ವಾ..
ಭೂತಾನಾಂ ಲಯಸ್ಥಾನೇ  ಸ್ನಾತ್ವಾ ಎಂದರೆ ಅಲ್ಲಿ ಶುದ್ಧಿಯನ್ನು ಹೊಂದಿದವನಾಗಿ...
ಅಂದರೆ ಈ ಕ್ಷೇತ್ರ ದಲ್ಲಿ ವಾಸಮಾಡಲು ಯೋಗ್ಯನಾಗಬೇಕಾದರೆ.. ವಿವಾಹವಾಗುವುದರ ಮೂಲಕ ಸತ್ಪುತ್ರರನ್ನು ಪಡೆದವನಾಗಿ ನಂತರದಲ್ಲಿ ಲಿಂಗರೂಪ ಶರೀರವನ್ನು ಹೊಂದುತ್ತಾ ಮುಂದೆ ಅದನ್ನೂ ಬಿಟ್ಟು ಶರೀರ ಶುದ್ಧಿಯನ್ನು ಹೊಂದಿ ಬ್ರಹಾನುಭವವನ್ನು ಹೊಂದಿದ ನಂತರ ಆ ನಂತರದಲ್ಲಿ ಇಲ್ಲಿಗೆ ಬಾ.. ಎಂದುಪಿಶಾಚವು ಹೇಳುತ್ತದೆ..
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
"ಯುಗಂಧರೇ...." {ವಾನಪ್ರಸ್ಥ.}

ಗ್ರಹಸ್ಥ ಧರ್ಮದಲ್ಲಿ ಇದ್ದವನು ಅಲ್ಲಿ ಆತ್ಮ ಶ್ರಾದ್ಧವನ್ನು ಮಾಡಿಕೊಂಡು ವಾನಪ್ರಸ್ಥವನ್ನೂ  ಅಲ್ಲಿ ಪುನಃ ಆತ್ಮ ಶ್ರಾದ್ಧವನ್ನು ಮಾಡಿಕೊಂಡು ಸನ್ಯಾಸವನ್ನು ಸ್ವೀಕರಿಸಿದವನಾಗಿ ಇಲ್ಲಿ ಬಂದು ವಾಸ ಮಾಡುತ್ತೀಯಾ....
ಹೀಗೇ ಪ್ರತಿಯೋಮ್ದು ಅರ್ಥದಲ್ಲೂ ಬ್ರಹ್ಮ ಚಾರೀ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ ಧರ್ಮ, ಹೀಗೇ ಆಶ್ರಮ ಚತುಷ್ಠಯಗಳನ್ನೂ ಮೀರಿದವನಾಗಿ ಇಲ್ಲಿ ಬಂದು ವಾಸಿಸುವುದಕ್ಕೆ ಮಾತ್ರ ಅವಕಾಶವುಂಟು ಎಂದು ಪಿಶಾಚವು ಎಚ್ಚರಿಕೆಯನ್ನು ಕೊಡುತ್ತದೆ  





       
  









ಮುಂದುವರೆಯುತ್ತದೆ...