प्रज्वालितॊ ज्ञानमयप्रदीपः

ಗುರುವಾರ, ಜುಲೈ 17, 2014

ಸರ್ವ ನಾಶದ ಸನ್ನಾಹ...!!

 ಧೃತರಾಷ್ಟ್ರನ ಆಸ್ಥಾನ ನೂರೊಂದು ಜನ ಕೌರವರು, ಪಾಂಡವರು, ಎಲ್ಲರೂ ಒಂದೇ ಆಸ್ಥಾನದಲ್ಲಿ ಬದುಕುತ್ತಿದ್ದ ಕಾಲ. ಅದೇ ಆಸ್ಥಾನದಲ್ಲಿ ಸೌಭಲರು ನೂರು ಜನರೂ ಬದುಕು ಸಾಗಿಸುತ್ತಿದ್ದರು.
ಒಂದು ದಿನ ಭೀಮ ಆಸ್ಥಾನವನ್ನು ಪ್ರವೇಶಿಸಿದ.. ಓಹೋಹೋ..ಬರಬೇಕು ಬರಬೇಕು ವಾಯುಸುತರು..!! ಅರ್ಥ ಆಗಲಿಲ್ಲ ಭೀಮನಿಗೆ ಮುಂದೆ ಸಂಜೆ ತಾಯಿಯಲ್ಲಿ ..ಅಮ್ಮಾ ಇಮ್ದು ಆಸ್ಥಾದಲ್ಲಿ ಕೌರವರು ನನ್ನನ್ನು ವಾಯುಸುತ ಎಂದು ಹೇಳಿದರಲ್ಲಾ..ಇದರ ಮರ್ಮ ಏನು? ಎಂದು ಕೇಳಿದ. ...ಮಗನೇ ಹೌದು.. ನೀವೆಲ್ಲರೂ ಪಾಂಡುರಾಜನಿಗೆ ಹುಟ್ಟಿದವರಲ್ಲಾ ದೇವತಾಂಶ ಸಂಭೂತರಾದವರು.. ಯಮನಿಂದಾಗಿ ಯುಧಿಷ್ಠಿರನೂ ವಾಯುವಿನಿಂದಾಗಿ ನೀನೂ, ಇಂದ್ರನಿಂದಾಗಿ ಅರ್ಜುನನೂ ಅಶ್ವಿನೀ ದೇವತೆಗಳಿಂದಾಗಿ ನಕುಲ-ಸಹದೇವರೂ ಜನಿಸಿದಿರಪ್ಪಾ.... ಅದಿರಲೀ..ನಾಳೇ ನೀನು ಆಸ್ಥಾನಕ್ಕೆ ಹೋದಾಗ ಆ ಕೌರವರಿಗೆ ಕೇಳು.. ಸೌಖ್ಯವೇ ಹೋತಸುತರೇ?!!! ಎಂದು..
ಮರುದಿನ ಭೀಮ ಆಸ್ಥಾನಕ್ಕೆ ಹೋದವನು ಕೌರವರನ್ನು ಹೋತ ಸುತರೇ ಎಂದು ಸಂಬೋಧಿಸಿದ...!! ಅರ್ಥ ಆಗಲಿಲ್ಲ ದುರ್ಯೋಧನನಿಗೆ..ತಾಯಿಯ ಸಮೀಪ ತೆರಳಿ ಕೇಳಿದ ಅಮ್ಮಾ ನಾವೇನು ಹೋತ ಸುತರೇ.. ಭೀಮ ಹೇಳಿದನಲ್ಲಾ..!! ಗಾಂಧಾರಿ ತಲೆಯಾಡಿಸಿ ಹೌದೆಂದಳು..
ಈಗಿನ ಕಂದಹಾರ-ಗಾಂಧಾರ ಅದನ್ನೇ ಆಗ ಪಶ್ಚಿಮ ಕಳಿಂಗವೆನ್ನುತ್ತಿದ್ದರು.. ಅಲ್ಲಿಯ ದೊರೆ ಸೌಭ. ಅವನಿಗೆ ನೂರೊಂದು ಜನ ಮಕ್ಕಳು.. ಅವರಲ್ಲಿ ಮಗಳು ಸುರ ಸುಂದರಿ ಗಾಂಧಾರಿ..!! ಹಿರಿಯ ಗಂಡು ಮಗ ಶಕುನಿ..!! ವಾರ್ಷಿಕವಾಘಿ ಗಂಗಾ ಸ್ನಾನಕ್ಕಾಗಿ ಕಾಶೀ ಕ್ಷೇತ್ರಕ್ಕೆ ಕುಟುಂಬ ಸಮೇತನಾಗಿ ಬಂದ ಸೌಭ. ಇತ್ತ ಹಸ್ತಿನಾವತಿಯಲ್ಲಿ ತನ್ನ ಕುರುಡು ದೊರೆ ಧೃತರಾಷ್ಟ್ರನಿಗೆ ಯಾರೂ ಹೆಣ್ಣು ಕೊಡುವವರು ಇಲ್ಲದಾಗಿ ಅರಸುತ್ತಿದ್ದ ಭೀಷ್ಮನ ಕಣ್ಣಿಗೆ ತ್ರಿಲೋಕ ಸುಂದರಿಯಾದ ಗಾಂಧಾರಿ ಕಂಡಳು. ಆದರೂ ಹೋಗಿ ಹೆಣ್ಣು ಕೇಳುವುದಕ್ಕೆ ಏನೋ ಅಳುಕು.. ಸೌಭ ತನ್ನ ಯಾತ್ರೆಯನ್ನು ಮುಗಿಸಿ ಸ್ವರಾಜ್ಯಕ್ಕೆ ತೆರಳುವದರೊಳಗೇ ಗಾಂಧಾರಕ್ಕೆ ಭೀಷ್ಮನ ಸೈನ್ಯ ಮುತ್ತಿತು..ಾಧವಾದ ಸೈನ್ಯವನ್ನು ನೋಡಿದ ಸೌಭ ಭೀಷ್ಮನಿಗೆ ಶರಣಾದ.. ಭೀಷ್ಮ ಅವನ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿಕೊಟ್ತರೆ ನಿನ್ನನ್ನು ಈ ರಾಜ್ಯವಾಳುವುದಕ್ಕೆ ಬಿಡುತ್ತೇನೆ ಎಂದ ಹೀಗೆ ಬಲಾತ್ಕಾರವಾಗಿ ಸೌಭನ ಏಕಮಾತ್ರ ಸುಂದರ ಕುವರಿಯನ್ನು ತನ್ನ ಕುರುಡು ದೊರೆಗೆ ಮದುವೆ ಮಾಡಿಸಿಕೊಳ್ಳಲು ಕರೆತಂದ..
ರಾಜ ಜ್ಯೋತಿಷಿಗಳಲ್ಲಿ ಈ ಕುರುಡು ದೊರೆ ಮತ್ತು ಗಾಂಧಾರಿಯ ಜಾತಕ ತೆಗೆದುಕೊಂಡು ಹೋದ ಭೀಷ್ಮ ಅವರ ಮುಮ್ದಿನ ದಾಂಪತ್ಯ ಜೀವನದ ಬಗ್ಗೆ ವಿಚಾರಿಸಿದಾಗ ಅವರೆಂದರು.. ಗಾಂಧಾರಿಗೆ ವೈಧವ್ಯ ಯೋಗವಿದೆ..!! ಅಯ್ಯೋ ಏನು ಮಾಡುವುದು ಎಂದು ಚಿಂತಿಸಿದ ಭೀಷ್ಮ ಪರಿಹಾರಕ್ಕಾಗಿ ಆಕಾಲದಲ್ಲಿ ಪ್ರಚಲಿತವಿದ್ದ ಆಭಿಚಾರಿಕ ಪ್ರಕ್ರಿಯೆಗೆ ಮೊರೆಹೋದ.. ( ಹೆಣ್ಣಿನ ಜಾತಗ ಕೆಟ್ಟದಾಗಿದ್ದರೆ ಮದುವೆ ಮಾಡುವಾಗ ಬಾಳೆ ಮರಕ್ಕೆ ಕರಿಮಣಿ ಕಟ್ಟಿ ಆ ಬಾಳೆ ಮರವನ್ನು ತುಂಡರಿಸಿ ವಿದುರ ಯೋಗವನ್ನು ನಿವಾರಿಸಿಕೊಳ್ಳುವುದು, ಗಂಡಿನ ಜಾತಕ ಕೆಟ್ಟದಿದ್ದರೆ ಮದುವೆಗೆ ಮೊದಲು ಹೋತವೊಂದಕ್ಕೆ ಪಾಣಿಗ್ರಹಣ ಮಾಡಿಸಿ ಆ ಹೋತವನ್ನು ಬಲಿಕೊಟ್ಟು ವೈಧವ್ಯ ಯೋಗವನ್ನು ಕಳೆದುಕೊಳ್ಳುವುದು) ಒಂದು ಹೋತವನ್ನು ಕರೆತಂದು ಅದರೊಂದಿಗೆ ಗಾಂಧಾರಿಯ ಪಾಣಿಗ್ರಹಣ ಮಾಡಿಸಿ ಹೋತವನ್ನು ಬಲಿಕೊಟ್ಟು ಅವಳ ವೈಧವ್ಯ ಯೋಗವನ್ನು ಕಳ್ದು ಕೊಂಡು ಮುಂದೆ ಧೃತರಾಷ್ಟ್ರನಿಗೆ ಗಾಂಧಾರಿಯನ್ನು ಮದುವೆ ಮಾಡಿಸಿದ ಆ ಒಮ್ದು ಕ್ಷೇತ್ರ ಜನ್ಯವಾಗಿ ಮುಂದೆ ನಿಜವಾಗಿ ಧೃತರಾಶ್ಃತ್ರನಿಂದಲೇ ಜನಿಸಿದರೂ ಈ ಕೌರವರು ಹೋತ ಪುತ್ರರಾದರು.
ಸೌಭನ ಮರಣಾನಂತರ ಅರಾಜಕವಾದ ಈ ಸೌಭ ದೇಶ ಅವನ ನೂರು ಮಂದಿ ಮಕ್ಕಳಿಗೆ ಆಶ್ರಯ ಕೊಡದಾಯಿತು.. ಅವರೆಲ್ಲ ಅಕ್ಕ ಗಾಂಧಾರಿಯ ಸೆರಗಿಗೆ ಜೋತುಕೊಂಡು ಹಸ್ತಿನಾವತಿಗೆ ಬಂದು ಸೇರಿದರು.. ಎಲ್ಲರಲ್ಲೂ ಒಂದು ಮನದಾಳದ ಕೊರಗಿತ್ತು.. ನಮ್ಮಕ್ಕ ಕುರುಡು ದೊರೆಗೆ ಬಲಾತ್ಕಾರವಾಘಿ ಮಡದಿಯಾದಳಲ್ಲಾ... ಕೌರವನ ಆಸ್ಥಾನದಲ್ಲಿ ಈ ಸೌಭಲರು ನೂರು ಜನ ಮೆರೆಯ ತೊಡಗಿದರು.. ಇದು ದುರ್ಯೋಧನನಿಗೆ ಸಹಿಸದ ವಿಚಾರವಾಯಿತು.. ಹೇಗಾದರೂ ಮಾಡಿ ಇವರನ್ನು ಬಗ್ಗು ಬಡಿಯಲು ಕರ್ಣನ ಸಹಕಾರವನ್ನು ಬಯಸಿದ.. ಕರ್ಣನ ಉಪದೇಶದಂತೆ ಒಮ್ಮೆ ಈ ನೂರು ಮಂದಿಯನ್ನೂ ಬೇಂಟೆಗಾಗಿ ಕ್ಕಾಡಿಗೆ ಕರೆದೊಯ್ದ.. ಬೇಟೆಯಿಂದ ಬರುವಾಗ ಈ ಸೌಭ ಕುಮಾರರಿಗೆ ನಡುದಾರಿಯಲ್ಲಿ ಒಂದು ಬಂಡೆಯನ್ನು ನಿಲ್ಲಿಸಿದ.. ಆದರೆ ಅವರು ರಾತ್ರಿ ಬೆಳಗಾಗುವುದರೊಳಗೆ ಆ ಬಂಡೆಯನ್ನೇ ಒಡೆದು ದಾರಿ ಮಾಡಿಕೊಂಡು ಆಸ್ಥಾನ ಸೇರಿದ್ದರು.. ಇದು ಕೌರವನಿಗೆ ಅವರ ಶಕ್ತಿ ಮತ್ತು ಸಾಹಸಗಳ ಅರಿವಿಗೆ ದಾರಿ ಮಾಡಿಕೊಟ್ಟಿತು.. ಇದೆಲ್ಲ ನಡೆಯುತ್ತಿರುವಾಗ ಹೇಗಾದರೂ ಈ ಸೌಭಲರನ್ನು ಖೆಡ್ಡಾಕ್ಕೆ ಹಾಕುವ ಮಹಾ ಯೋಜನೆ ಅವನ ತಲೆ ತಿನ್ನತೊಡಗಿತು
ಒಂದು ದಿನ ಈ ಸೌಭ ಕುಮಾರರನ್ನು ಕೂಡಿಕೊಂಡು ಬೇಟೆಗಾಗಿ ಕಾಡಿಗೆ ತೆರಳಿದ ದುರ್ಯೋಧನ ಈ ಮೊದಲೇ ಅಲ್ಲಿ ಸಿದ್ಧ ಪಡಿಸಿದ ಒಂದು ಗುಹೆಯೊಳಕ್ಕೆ ಕರೆದೊಯ್ದ.. ಅಲ್ಲಿ ತನ್ನ ಬೊಕ್ಕಸವನ್ನು ಎಣಿಸುವ ಕೆಲಸ ಕೊಟ್ಟು ಸಾವಕಾಶವಾಗಿ ಅಲ್ಲಿಂದ ತಾನು ಹೊರಬಂದು ದೊಡ್ಡ ಬಂಡೆಯೊಂದನ್ನು ಗುಹೆಯ ಬಾಗಿಲಿಗೆ ಝಡಿದ... ಒಳಗಿನಿಂದ ಸೌಭಲರು ಕೂಗಿಕೊಳ್ಳತೊಡಗಿದರು.. ನಿರಾಯುಧರಾದ ಅವರಿಗೆ ಆ ಬಂಡೆಯನ್ನು ಅಲುಗಾಡಿಸಿ ಹೊರಬರಲು ಸಾಧ್ಯವಿರಲಿಲ್ಲ.. ಆಗ ದುರ್ಯೋಧನ ಅವರಿಗೆ ಒಬ್ಬೊಬ್ಬರಿಗೆ ಒಂದೊಂದು ತುತ್ತಿನಂತೆ ಆಹಾರ ಕೊಡಲು ಸೂಚಿಸಿದ.. ಇದು ಗಾಂಧಾರಿಗೂ ತಿಳಿಯಿತು..ಅವಳು ತನ್ನ ತಮ್ಮಂದಿರಿಗಾಗಿ ಗೋಳಾಡಿದಳು ಆದರೆ ದುರ್ಯೋಧನ ಅವಳ ಬಾಯಿಮುಚ್ಚಿಸಿದ..
ಪ್ರತಿ ದಿನ ಪ್ರತಿಯೊಬ್ಬರಿಗೂ ಲೆಕ್ಕ ಮಾಡಿ ಒಂದೊಂದೇ ತುತ್ತು ಭೋಜನವನ್ನು ನೀಡುತ್ತಾ ಬಂದ ದುರ್ಯೋಧನ.. ಆಗ ಒಳಗಿರುವ ಸೌಭಲರು ಚಿಂತಿಸಿದರು.. ಹೀಗೆ ನಾವು ಒಂದೊಂದೇ ತುತ್ತು ಉಂಡು ಎಲ್ಲರೂ ಕ್ರಮೇಣ ಸಾಯುವುದಕ್ಕಿಂತ ಯಾರಾದರೊಬ್ಬರು ಗಟ್ಟಿಯಾಗಿ ಉಂಡು ಈ ಕೌರವನ ಮೇಲೆ ಸೇಡು ತೀರಿಸಿಕೊಳ್ಳಲೇ ಬೇಕು ಅದಕ್ಕಾಗಿ ಒಂದು ಉಪಾಯ ಹೂಡಿದರು. ಭೋಜನ ನೀಡಲು ಬಂದ ದುರ್ಯೋಧನನಿಗೆ ಒಂದು ಬೇಡಿಕೆಯಿಟ್ಟರು.. ಅಯ್ಯಾ ನೀನು ಹೀಗೇ ಪ್ರತಿ ದಿನ ನಮಗೆ ಒಂದೊಂದು ತುತ್ತು ಪ್ರತ್ಯೇಕವಾಗಿ ನೀಡುವುದರ ಬದಲು ನೂರು ತುತ್ತುಗಳನ್ನೂ ಒಂದೇ ಬಾರಿ ಕೊಟ್ಟುಬಿಡು ನಾವದನ್ನು ಒಳಗೆ ಪಾಲು ಮಾಡಿಕೊಂಡು ತಿನ್ನುತ್ತೇವೆ..ಎಂದರು..ಅದೂ ಸರಿಯೆನಿಸಿತು ದುಷ್ಟನಿಗೆ..!!
ಒಟ್ಟಿಗೇ ಕೊಟ್ಟ ನೂರು ತುತ್ತುಗಳನ್ನು ನೋಡಿದ ಆ ನೂರುಜನ ಸೌಭಲರು ಮಂತ್ರಾಲೋಚನೆ ಮಾಡಿದರು... ಹೀಗೆ ಪ್ರತಿದಿನ ಒಂದೊಂದು ತುತ್ತು ತಿಂದು ಕೃಶವಾಗಿ ಎಲ್ಲರೂ ಸಾಯುವುದಕ್ಕಿಂತ ನಮ್ಮಲ್ಲಿ ಓರ್ವ ಚಾಣಕ್ಯನಾದವನು ಈ ನೂರೂ ತುತ್ತುಗಳನ್ನು ಭುಂಜಿಸಿ ಶಕ್ತಿವಂತನಾಗಿ ಹೊರ ಹೋಗಿ ಆ ದುರುಳನನ್ನು ಹೇಗಾದರೂ ಸರ್ವನಾಶ ಮಾಡಿದರೆ ಲೋಕಕ್ಕೆ ಒಳ್ಳೆಯದಾಗುವುದಲ್ಲವೇ...>?? ಹಾಗಾದರೆ ನಮ್ಮವರಲ್ಲಿ ಆ ಬುದ್ಧಿವಂತ ಯಾರು..? ಅದಕ್ಕೊಂದು ಉಪಾಯ ಹೊಳೆಯಿತು... ಇಂದು ರಾತ್ರಿ ಬೆಳಗಾಗುವುದರೊಳಗೆ ಇಲ್ಲಿ ಬಿದ್ದಿರುವ ಈ ಹವಳದ ಕಲ್ಲಿನ ಎಂಟು ತೂತುಗಳೊಳಗೆ ಯಾರು ದಾರವನ್ನು ಪೋಣಿಸುತ್ತಾರೋ ಅವರೇ ಬುದ್ದಿವಂತರೆಂದು ಪರಿಗಣಿಸುವುದು.. ಅವನಿಗೆ ನೂರೂ ತುತ್ತುಗಳನ್ನು ನೀಡಿ ಉಳಿದವ್ರು ಪ್ರಾಯೋಪವೇಶ ಮಾಡಿ ಪ್ರಾಣ ಬಿಡುವುದು ಎಂದು ತೀರ್ಮಾನವಾಯಿತು ಎಲ್ಲರೂ ಪ್ರಯತ್ನಕ್ಕಿಳಿದರು... ಯಾರಿಗೂ ಇದು ಆಗದ ಕೆಲಸವಾಯಿತು ಕೊನೆಯಲ್ಲಿ ಉಳಿದವನೇ ಈ ಶಕುನಿ...!!
ರಾತ್ರಿ ಕತ್ತಲ ಕೋಣೆಯೊಳಗೆ ಶಕುನಿ ಚಿಂತಾಕ್ರಾಂತನಾದ.. ತಮ್ಮಂದಿರೆಲ್ಲಾ ಸೋತು ಮಲಗಿದ್ದಾರೆ... ಹವಳದ ಗಡ್ಡೆ ದಾರ ಪೋಣಿಸಲಾಗದೇ ಹಾಗೇ ಬಿದ್ದಿದೆ.. ಕೌರವನ ಕುಲಕ್ಷಯ ಆಗದ ಮಾತೇ..? ಛೇ.. ಬಿಡಬಾರದು.. ಅಲ್ಲೇ ಬಿದ್ದಿರುವ ದಾರವನ್ನೂ ಆ ಎಂಟು ರಂಧ್ರಗಳ ಹವಳದ ಗಡ್ಡೆಯನ್ನೂ ಮತ್ತೆ ಮತ್ತೆ ನೋಡೀದ.. ಮನದಲ್ಲಿ ಏನೋ ಹೊಂಬೆಳಕು.. ದಾರವನ್ನು ಹಿಡಿದು ಮೇಲೆದ್ದ... ಅಲ್ಲೇ ಬಿದ್ದಿರುವ ಸಕ್ಕರೆಯ ಹರಳುಗಳನ್ನು ನೆನೆಸಿ ಆ ದಾರದ ಪ್ರತಿಯೊಂದು ತುದಿಗೂ ಹಚ್ಚಿದ...>! ಮುಂದೆ ಹವಳದ ಗಡ್ಡೆಯನ್ನು ತೆಗೆದುಕೊಂಡು ಒಂದು ಇರುವೆಯ ಹುತ್ತದ ಸಮೀಪ ಹೋಗಿ ಆ ಹುತ್ತದ ಬಾಗಿಲಿಗೆ ಗಡ್ಡೆಯನ್ನಿಟ್ಟು ಪ್ರತಿ ತೂತಿನ ಬಾಗಿಲಲ್ಲೂ  ಸಂಕರೆ ಲೇಪಿತವಾದ ದಾರದ ತುದಿಯನ್ನು ಇಟ್ಟ.....ಏನಾಶ್ಚರ್ಯ.. ಬೆಳಗಾಗುವುದರೊಳಗೆ ಆ ಎಂಟೂ ದ್ವಾರದೊಳಗೆ ದಾರ ಪೋಣಿಸಿತ್ತು..!!!
ತಮ್ಮಂದಿರೆಲ್ಲ ಎಚ್ಚರಗೊಂದು ಈ ಶಕುನಿಯ ತಂತ್ರವನ್ನು ಕೊಂಡಾಡಿದರು ಮತ್ತೂ ಅವನನ್ನೇ ನೂರು ತುತ್ತುಗಳನ್ನು ಭುಂಜಿಸಲು ಹೇಳಿದರು.. ಅದಕ್ಕೆ ಶಕುನಿ ಒಪ್ಪಿದ ಆದರೆ ಒಂದು ಮಾತು .. ನೀವೆಲ್ಲ ಸತ್ತು ನನ್ನನ್ನು ಬದುಕಿಸುತ್ತೀರಿ ತಮ್ಮಂದಿರೇ ಆ ಕೌರವನ ಸರ್ವನಾಶಕ್ಕಾಗಿ ನನಗೊಂದು ಮಾತು ಕೊಡಿ... ನಿಮ್ಮ ಮರಣಾನಂತರದಲ್ಲಿ ನಿಮ್ಮ ಚರ್ಮವನ್ನು ನಾನು ಪಗಡೆಯ ಹಾಸುಗಳಾಗಿ ಮಾಡಿಕೊಳ್ಳುತ್ತೇನೆ..ನಿಮ್ಮ ಮೂಳೆಗಳನ್ನೇ ದಾಳಗಳನ್ನಾಗಿ ಮಾಡಿಕೊಂಡು ಮುಂದಿನ ನಾಟಕಕ್ಕೆ ಮುಂದಾಗುತ್ತೇನೆ ನಿಮ್ಮ ಹರಕೆ ನನಗಿರಲಿ ..ಪಗಡೆಯ ಹಾಸಿನ ಮೇಲೆ ನಾನು ದಾಳಗಳನ್ನುರುಳಿಸುವಾಗ ನಾನು ಯಾವುದನ್ನು ನೆನ್ಯುತ್ತೇನೋ ಅದೇ ಅಂಕಿಗಳ ದಾಳಗಳು ಬೀಳುವ ಹಾಗೆ ನೀವು ಮನಮಾಡಬೇಕು...!! ಅಸ್ತು ಎಂದರು ದಿನ ದಿನಕ್ಕೂ ಒಬ್ಬೊರಾಗಿ ತಮ್ಮ ಜೀವಿತವನ್ನು ಕಳೆದುಕೊಂಡರು ಶಕುನಿ ನೂರೂ ತುತ್ತುಗಳನ್ನು ತಿನ್ನುತ್ತಾ ಬಲಿಷ್ಠನಾಗುತ್ತ ಬಂದ.. ಕೊನೆಗೊಂದು ದಿನ ಗುಹೆಯ ಬಾಗಿಲಿನಿಂದ ಬರುತ್ತಿರುವ ದುರ್ವಾಸನೆಯ ಜಾಡಿನಿಂದ ಸೌಭಲರೆಲ್ಲರೂ ಸತ್ತರೆಂದು ತಿಳಿದ ದುರ್ಯೋಧನ ಬಾಗಿಲನ್ನು ತೆರೆದ.. ಶಕುನಿ ಹೊರಬಂದ.. ಉಳಿದವರೆಲ್ಲ ಸತ್ತು ಇವನೊಬ್ಬ ಬಂದುದನ್ನು ನೋಡಿ ಓಹ್ ಇವನೊಬ್ಬನಿಂದ ಏನಾದೀತು ಎಂದು ತಿಳಿದು ಸುಮ್ಮನೇ ಬೀಟ್ಟ.. ದಾರಿಗಾಣದ ಶಕುನಿ ಪುನಃ ಗಾಂಧಾರಿಯ ಅಂತಃಪುರ ಹೊಕ್ಕು ಅವಳ ಪ್ರೀತಿಯ ಹೇಳಿಕೆಗೆ ಅಲ್ಲಿಯೇ ಉಳಿದ ..ಕೌರವನ ಕುಲಕ್ಷಯ ಪ್ರಾರಂಭವಾಗಲು ಸೌಭಲಕುಮಾರರ ಚರ್ಮ ಹದವಾಗುತ್ತಿತ್ತು..!! ಮೂಳೆಯ ದಾಳ.. ಕೆತ್ತಲ್ಪಟ್ಟಿತ್ತು.. ಸರ್ವನಾಶದ ಸನ್ನಾಹವಾಗಿತ್ತು..!!

ಬುಧವಾರ, ಜುಲೈ 16, 2014

ಕನ್ನಡ ಮೇಘದೂತ

ನನ್ನ ಆತ್ಮೀಯರಾದ, ಗುರುಗಳೂ ಆದ ಕುಮಟಾದ ಬಾಳಿಗಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾಗಿ ತಮ್ಮ ಕೈಂಕರ್ಯವನ್ನು ನಡೆಸಿಕೊಂಡು ಬಂದ ಶ್ರೀ ವಿ.ಆರ್. ಜೋಶಿಯವರು ರಚಿಸಿದ ಮಹಾ ಕವಿ ಕಾಲಿದಾಸ ವಿರಚಿತ ಮೇಘದೂತದ ಕನ್ನಡ ಭಾವ ಕಾವ್ಯವನ್ನು ಇಲ್ಲಿ ಪ್ರಸ್ತುತಿ ಪಡಿಸಲು ನನಗೊಂದು ಹೆಮ್ಮೆ.
*********************************************************
||ಪೂರ್ವ ಮೇಘ||

ಯಕ್ಷನೋರ್ವ ಅಲಕ್ಷದಿಂದ ತನ್ನ ಕೆಲಸ ಮರೆಯೆ
ಅಗಲಿದನು ಪ್ರಿಯೆಯ ವರುಷದವಧಿ ಭರ್ತೃ ಶಾಪ ಉರಿಯೆ|
ಭೂಮಿಜೆಯು ಮಿಂದ ನೆರಳಿಂದ ಮಂದವಾಗಿರ್ದ ತಾಣದಲ್ಲಿ
ವಸತಿ ಹೂಡಿದನು ಪುಣ್ಯ ತೀರ್ಥದಾ ರಾಮ ಗಿರ್ಯಂಗಳಲ್ಲಿ||01||

ಕೆಲವು ತಿಂಗಳನು ಕಳೆದನಲ್ಲಿ ಪ್ರಿಯತಮೆಯ ಅಗಲಿ ಆತ
ಅಯ್ಯೋ! ಸೊರಗಿದನು ಕಡಗ ಕಳಚಿ ಬರಿದಾಗೆ ಕೈಯ್ಯ ಸೋತ|
ಆಷಾಢಮಾಸದಾ ಮೊದಲನೆಯ ದಿನ ಗಿರಿಯನಪ್ಪೆ ಮೋಡ
ಕಂಡು ಬಂದಿತೋ ಕೋಟೆ ಒಡೆಯುವಾ ಮದ್ದಾನೆಯಂತೆ ಕಾಡ||02||

ತಾಳ್ಮೆಗೆಡಿಸಿದಾ ಮೋಡ ಕಂಡು ಧನಪತಿಯ ಪುರುಷನಂದು
ಎಂತೊ ಎಂತೋ ಕಣ್ಣೀರ ನುಂಗಿ ಬಹುಕಾಲ ಅಲ್ಲಿ ನಿಂದು|
ಮೋಡ ಕಂಡಾಗ ಸಖಿಯ ಹೃದಯವೂ ಬೇರೆ ಬಗೆವುದೇಕೋ
ಹತ್ತಿರದ ನಲ್ಲೆ ಮತ್ತಿರಲು ದೂರ ಬವಣೆ ಬೇಡ ಸಾಕೋ||03||

ಬಂತು ಶ್ರಾವಣಾ ಬದುಕಬೇಕು ಪ್ರಿಯೆ ಎಂಬ ಇಚ್ಛೆ ಧರಿಸಿ
ತನ್ನ ಅರ್ತಿಯನು ಮೋಡದೊಡನವನಂದೆ ಕಳಿಸ ಬಯಸಿ|
ಅದೆ ಆಗ ಬಿರಿದ ಬೆಟ್ಟಮಲ್ಲಿಗೆಯ ತಾನರ್ಘ್ಯ ಕಲ್ಪಿಸುತ್ತಾ
ಒಲವು ಉಲಿಯುತಿಹ ಮಾತನಾಡಿ ಸ್ವಾಗತವ ಗೈದನತ್ತ||04||

ಮಂಜು, ಮರುತ, ಉರಿ, ಸಲಿಲದಿಂದ ಕೂಡಿದ್ದ ಮೇಘವೆತ್ತ
ತೀಕ್ಷ್ಣ ಇಂದ್ರಿಯದ ಪ್ರಾಣಿಗಳೆ ಒಯ್ವ ಪ್ರೇಮ ಸಂದೇಶವೆತ್ತ|
ಅರಿಯದಂತೆರವ ಮೋಡದೊಡನಿಂತು ಬೇಡಿಕೊಂಬೆ ನಾನು
ಪ್ರಿಯೆಯನಗಲಿದವರ್ ಜಡ-ಚೇತನದಿ ಭೇದ ಕಾಂಬರೇನು||05||

ವಿಧಿವಶದಿ ನಲ್ಲೆ  ಅಗಲಿದ್ದ ನಾನು ಬೇಡಿಕೊಂಬೆ ಮೇಘ
ಪುಷ್ಕರಾದಿ ಜನಮಾನ್ಯ ವಂಶದಲಿ ಹುಟ್ಟಿ ನೀನಮೋಘಾ|
ಕಾಮರೂಪಿ ನೀ ಇಂದ್ರನಧಿಕಾರಿ ಎಂಬುದನ್ನು ಬಲ್ಲೆ
ವ್ಯರ್ಥವಲ್ಲ ಸಜ್ಜನರ ಅರ್ಥಿ ಅಧಮ ಸಿದ್ಧಿ ಬಲ್ಲೆ||06||

ದುಃಖಾರ್ತ ಜನಕೆ ರಕ್ಷಕನು ನೀನು ಅಲಕೆಗೋಗು ಮೇಘ
ಧನಪತಿಯ ಶಾಪದಿಂದಗಲಿದ ಪ್ರಿಯೆಗೆ ಮಾತು ತಿಳಿಸೊ ಬೇಗ|
ಉದ್ಯಾನದೊಳಗೆ ಶಿವನ ಶಿರದ ಶಶಿಕಳೆಯಬೆಳಕಿನಿಂದ
ಕಾಂಬ ಅರಮನೆಯ ಯಕ್ಷರಧಿಪನದು ಸಾಗು ಅಂದದಿಂದ||07||

ಪವನ ಪಥವನ್ನು ಬರೆ ನೀನು ಮುಂಗುರುಳ ಮೇಲೆ ಎತ್ತಿ
ಪಥಿಕವನಿತೆಯರು ಬಯಕೆಗೂಡಿ ನೋಡುವರು ಏರ ಹತ್ತಿ|
ನಿನ್ನ ದರ್ಶನದೆ ಯಾರು ತಾನೆ ಇಹರು ಪ್ರಿಯೆಯ ಬಿಟ್ಟು
ಪರರ ಹಂಗಿನಲಿ ದಿನನೂಕುತಿರುವ ನನ್ನಂಥ ಜೀವಿ ಬಿಟ್ಟು||08||

ಸುಶೀಲೆ ಬಾಲೆ ನಿರತಳಲ್ಲಿ ದಿನಗಳನು ಎಣಿಸುವಲ್ಲಿ
ಸಖನೆ ಅತ್ತಿಗೆಯ ಹೋಗಿ ನೋಡು ನಿರ್ವಿಘ್ನ ಮಾರ್ಗದಲ್ಲಿ|
ಕುಸುಮ ಕೋಮಲವು ನಾರಿ ಹೃದಯವು ವಿರಹದಲ್ಲಿ ಕಳಚಿ-
ಬೀಳದಂತೆ ಮೇಲೆತ್ತಿ ಹಿಡಿಯುವುದೆ ಕೂಡುವಾಸೆ ಸುರುಚಿ||09||

ಅನುಕೂಲ ಗಾಳಿ ಬೀಸಿ ನಿನ್ನನ್ನು ನೂಕುತಿರಲು ಮುಂದೆ
ಆಪ್ತ ಚಾತಕವು ಎಡಕೆ ಕೂಗುವುದು ಮಧುರ ಧ್ವನಿಯಲಿಂದೆ|
ಬೆದೆಯ ಬಯಸಿ ಬೆಳ್ವಕ್ಕಿ ತೋರಣದ ತೆರದಿ ಬಾನಿನಲ್ಲಿ
ಹಾರಿ ಸುಂದರನೆ..! ನಿನ್ನನನುಸರಿಸಿ ಬಂದಾವು ದಾರಿಯಲ್ಲಿ||10||










ಶುಕ್ರವಾರ, ಜೂನ್ 27, 2014

ಮೋಹಿನಿ ಆಟಂ...!!


ಈ ಘಟನೆ ನೋಡಿದಾಗ ನನ್ನ ಒಂದು ಹಳೆಯ ನೆನಪು ಮತ್ತೆ ನೆನಪಿಗೆ ಬಂತು..
ನಾನಾಗ ತೋಟದ ಕೆಲಸ ಮಾಡಿಕೊಂಡು ಊರಿಲಿದ್ದೆ.. ಗೊಬ್ಬರಕ್ಕೆ ಬೇಕಾದ ಸೊಪ್ಪು ದೆರಕು ಇವನ್ನೆಲ್ಲಾ ದೂರದ ಚೆಂದಾವರ ಬೆಟ್ಟದಿಂದ ತಲೆಯಲ್ಲಿ ಹೊತ್ತು ತಂದು ಹಾಕಬೇಕಿತ್ತು.. ನನ್ನಂತೆ ಊರಿನ ಅನೇಕ ಗಂಡಸರು ಹೆಂಗಸರು ಹೆಮ್ಮಕ್ಕಳು ಬೆಳಗಿನ ಜಾವ ಸುಮಾರು ಮೂರು ಘಂಟೆಯಲ್ಲೇ ಮನೆಯಿಂದ ಹೊರಟು ಬೆಟ್ಟ ಸೇರಬೇಕಿತ್ತು..ಊರಿಂದ ತುಸು ದೂರದಲ್ಲಿ ಸಳ್ಳೇವಾರ ಎಂಬ ಒಂದು ಜಾಗೆ. ಅಲ್ಲಿ ಒಂದು ರೀತಿಯ ಬೆಟ್ಟದ ದಾರಿ..ಅಲ್ಲಿ ನಾವು ಗುಂಪು ಗುಂಪಾಗಿ ಹೋಗುತ್ತಿದ್ದೆವು.. ಕೆಲವರ ಕೈಯ್ಯಲ್ಲಿ ಮಡಲ ಸೂಡಿ ಉರಿಯುತ್ತಿತ್ತು ಅದರ ಮಂದ ಬೆಳಕಲ್ಲಿ ಪಯಣ..
ಕೆಲವು ಗುಂಪಿನವರು ಆಗಾಗ ಈ ದಾರಿಯಲ್ಲಿ ಒಂದು ದೆವ್ವ ಇದೆ.. ಮೋಹಿನಿ.. ದೆವ್ವ ಎಂದು ಭಯ ಬೀಳುತ್ತಿದ್ದರು.. ನನಗೆ ಇದುವರೆಗೆ ಕಂಡಿರಲಿಲ್ಲ.. ಅದಕ್ಕೆ ನಾನು ಗುಂಪು ಬದಲಿಸಿದೆ.. ನೋಡೋಣವೆಂದು ಆ ಮೋಹಿನಿಯನ್ನು...
ಎರಡು ದಿನ ಹೀಗೇ ಹೋಗುತ್ತಿದ್ದರೂ ನನಗೆ ಕಾಣಲಿಲ್ಲ.. ಮೂರನೇ ದಿನ ಗುಂಪಿನಲ್ಲಿ ಹೋಗುತ್ತಿರುವಾಘ ದೂರದಲ್ಲಿ ಬಿಳೀ ಮುಸುಕು ಹಾಕಿದ ಒಂದು ಆಕೃತಿ ನನ್ನೊಟ್ಟಿಗೆ ಹೋಗುತ್ತಿದ್ದ ಹೆಣ್ಣೊಬ್ಬಳಿಗೆ ಕಂಡು ಅವಳು ನನಗೆ ತೋರಿದಳು.. ನೋಡಿದರೆ ಹೆಣ್ಣಿನ ಹಾಗೇ ನಡಿಗೆ.. ತಲೆಯಿಂದ ಕಾಲಿನ ವರೆಗೂ ಬಿಳೀ ಬಟ್ಟೆ...ಮಸುಕು ಚಿತ್ರಣ..! ಹಾಗೇ ಮೆಲ್ಲಗೆ ಗುಂಪಿನಿಂದ ಹಿಂದೆ ಸರಿದು.. ನನ್ನ ನಡಿಗೆಯನ್ನು ನಿಧಾನ ಮಾಡಿದೆ...!!ಗುಂಪಿನ ಬೆಳಕಿನಿಂದ ತುಸು ದೂರಾದೆ.. ಮೋಹಿನಿಯ ಹತ್ತಿರಕ್ಕೆ ಬಂದೆ...!!!
ಇನ್ನೇನು ತೀರಾ ಹತ್ತಿರವಿರುವಾಗ.. ಮೋಹಿನಿ ಓಲಾಡಿಕೊಂಡು ಹಿಂದೆ ನೋಡದೇ ಹೋಗುತ್ತಿರುವುದು ಕಣ್ಣಿಗೆ ಕಂಡಿತು..ಮುಖ ಕಾಣುತ್ತಿರಲಿಲ್ಲ...! ನನ್ನ ಕೈ.. ತನ್ನಲ್ಲಿದ್ದ ದೆರಕು ಒಟ್ಟು ಮಾಡುವ ಕವಕೋಲನ್ನು ಗಟ್ಟಿಯಾಗಿ ಹಿಡೀದಿತ್ತು..! ಹತ್ತಿರ ..ತೀರಾ ಹತ್ತಿರ... ಇನ್ನೇನು ಮೋಹಿನಿ ಕೈಗೆ ಸಿಕ್ಕೇ ಬಿಟ್ಟಳು ಎನ್ನುವಾಗ ಕವಕೋಲು... ಆ ಮೋಹಿನಿಯ ಕುಂಡೆಗೆ ರಟ್...!! ಅಂತ ಒಂದು ಬಿಟ್ಟಿತು... ಯೆವ್ವಾ.....!!! ಎಂದು ಒಂದೇ ಉಸುರಿಗೆ ಓಡಿ ಮರೆಯಾಯಿತು...! ನಾನೂ ಓಡಬೇಕೆಂದು ಕೊಂಡರೂ ಬೆಳಕು ಸಾಕಾಗಲಿಲ್ಲ ದಾರಿಯಿಂದ ಕೆಳಕ್ಕೆ ಹೋಗಲಿಲ್ಲ..ಮುಂದೆ ಹೋಗಿ ಗುಂಪನ್ನು ಸೇರಿಕೊಂಡೆ... ಗುಂಪಲ್ಲಿ ಏನನ್ನೂ ಹೇಳಲಿಲ್ಲ... ಮೋಹಿನಿ ಓಡಿ ಹೋಯಿತು ಎಂದಷ್ಟೇ ಹೇಳಿದೆ....
ಬೆಟ್ತಕ್ಕೆ ಹೋಗಿ ದೆರಕು ತುಂಬಿಕೊಂಡು ಬೆಳಿಗ್ಗೆ ನಾವೆಲ್ಲಾ ಬಂದೆವು... ಊರಿಗೆ ಬಂದು ದೆರಕು ಗೊಬ್ಬರ ಕುಳಿಗೆ ಹಾಕಿ ಮನೆಯ ಹತ್ತಿರದ ಡಾ|| ಗಣಪಜ್ಜ( ಆವಾಗಿನ ನಮ್ಮೂರಿನ ಒಳ್ಳೇ ವೈದ್ಯರು) ನ ಮನೆಗೆ ಕೂಲಿ ಕೆಲಸಕ್ಕೆ ಹೋದೆ.. ಅಲ್ಲಿ ಅವರ ಮನೆಯಲ್ಲಿ ಕಮಲಕ್ಕ ಕೊಟ್ಟ ದೋಸೆ ತಿನ್ನುತ್ತಿರುವಾಗ ಒಂದು ನಾಯ್ಕನ ಹುಡುಗ ಕುಂಡೆ ನೀವಿಕೊಳ್ತಾ.. ಅಲ್ಲಿಗೆ ಡಾಕ್ಟರ್ ನೋಡಲು ಬಂದ...
ಬಂದ ಹುಡುಗನನ್ನು ಗಣಪಜ್ಜ..ಏನಾಯ್ತೋ.. ಎಂದು ಕೇಳಿದಾಗ .. ವಡ್ಯಾ.. ನಿನ್ನೆ ಸಂಜೆ ಹೊತ್ತೀಗೆ ಬೇಲಿ ಕಟ್ಟಬೇಕೂ ಅಂತ ತೋಟದಲ್ಲಿ ಬಿದ್ರ ಗಳು ಕಡೀತಾ ಇದ್ದೆ.. ಒಂದು ಬಿದ್ರು ಬಂದು ಹೊಡದುಬುಡ್ತು.. ..ಶಿಕ್ಕಾಬಟ್ಟೆ ನೋವು.. ಜರ ಬಂದಾಂಗ್ ಆಗಬುಟ್ತದೆ.. ಅಂದ.. ಕುಂಡಿ ತಿಕ್ಕಿಕೊಳ್ಳುತ್ತಾ... ಹೆತ್ತರಿಕೆ.... ಆಗ ನಾನೆಂದೆ......ಹುಡುಗಾ... ನೀ ಆ ಸಳ್ಳೇವಾರದ ನಾಗಪ್ ಗೊಡನ ಮಗ ಅಲ್ವಾ..?...ಹೌದೆಂಬಂತೆ ತಲೆಯಾಡಿಸಿದ...!! ಮೋಹಿನಿ... ಕಣ್ಣೆದ್ದುರೇ ಕಂಡಿದ್ದೆ..!!

ಬುಧವಾರ, ಏಪ್ರಿಲ್ 9, 2014

ಸ್ವರ್ಗದ ಸೊಳ್ಳೆಗಳ ಬಾರಾ ಭಾನಗಡಿ...!!

         ಕೆಲವು ಸಾರ್ತಿ ಹಾಗೇ.... ಯಾರು ಎಲ್ಲಿರಬೇಕೋ ಅಲ್ಲಿರದಿದ್ದರೆ... ತುಂಬ ಅಧ್ವಾನವಾಗಿಬಿಡುತ್ತದೆ.ಕೆಲೂ ಸರ್ತಿ ಹೀಂಗೇ ಆಪದು... ಯಾರು ಎಲ್ಲಿರವೋ 
ಅಲ್ಲಿರದೇ ಹೋದ್ರೆ...ಸ್ವರ್ಗ ಸೇರಿದ ಸೊಳ್ಳೆಗಳ ಬಾರಾ ಭಾನಗಡಿ...!!


ರಾತ್ರಿಯೆಲ್ಲಾ ಸಿರಿವಂತರ ಮನೆಯ ಸಜ್ಜನರ ರಕ್ತವನ್ನು ಹೀರಿದ ಸೊಳ್ಳೆಗಳಿಗೆ 

ಪುಣ್ಯದ ಪ್ರಮಾಣ ಜಾಸ್ತಿಯಾಗಿದ್ದು ಚಿತ್ರಗುಪ್ತನ ಅರಿವಿಗೆ ಬಂತು... ಹೊಡೆತದ 

ರಭಸಕ್ಕೆ ರಕ್ತ ಕಾರಿ ಸತ್ತ ಸೊಳ್ಳೆಗಳ ಪ್ರೇತಾತ್ಮ ಯಮಪುರಿಗೆ ಹೋದಾಗ...!!


ಯಮನಿಗೊಪ್ಪಿಸಿ ಆ ಸೊಳ್ಳೆಗಳನ್ನು ಸ್ವರ್ಗಕ್ಕೆ ರವಾನಿಸಿದೋ...

ಅಲ್ಲಿಗೆ ಹೋದ ಸೊಳ್ಳೆಗಳು ಸುಮ್ಮನಿರಬಾರದೇ... ಆ ಅಮೃತವನ್ನು ಕುಡಿದು 


ಈಗಾಗಲೇ ಮತ್ತೇರಿದ್ದ ರಂಭೆ-ಊರ್ವಶಿಯರ ಸೌಂದರ್ಯಕ್ಕೆ 


ಮನಸೋಲಬೇಕೇ..


ಛೇ...


ಸತ್ತ ಎಲ್ಲಾ ಸೊಳ್ಳೆಗಳೂ ಪ್ರೇತಾತ್ಮಗಳೇ ಆಗಿದ್ದೋ ಹೇಳೂಲ್ ಬಲವಾದ ಕಾರಣ 

...ಆ ಯಾವ ಸೊಳ್ಳೆಗಳಿಗೂ ಪ್ರೇತೋದ್ಧಾರ, ಅಂತ್ಯೇಷ್ಟಿ ಸರಿಯಾಗಿ ಆಯ್ದಿಲ್ಲೆ 

ಹೇಳಿ ಪುರೋಯ್ತ ಭಟ್ರು ಆಶ್ವಾಸನೆ ಮಂತ್ರಾಕ್ಷತೆಲಿ ಹೇಳಿದ್ರು..ಮತ್ತೆ..

ಭಾನುವಾರ, ಜನವರಿ 5, 2014

ಭಾವನೆಗೆ ಸೋತ ಭಾಷೆ..( ಒಂದು ಸನ್ನಿವೇಷದ ಸದುಪಯೋಗ)

......ಯಾವನ ಕಾವ್ಯದಲ್ಲಿ ಕವಿಯ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಭಾಷೆಯೇ ಸೋತು ಶರಣಾಗುತ್ತದೋ ಅಲ್ಲಿ ಆ ಕಾವ್ಯದಲ್ಲಿ ಓದುಗನಿಗೆ ಬೇಕಾದ ಎಲ್ಲಾ ರಸಗಳ ಕಾವ್ಯಾನುಭೂತಿಯಾಗುತ್ತದೆ ಎಂಬುದಕ್ಕೆ ನಾನು ಇತ್ತೀಚೆಗೆ ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋದಾಗ ಹೇಳಿದ್ದೆ...!! ಇದನ್ನು ಮನಗಂಡ ಸಭಾಸದರು ನನ್ನ ಪಕ್ಕದಲ್ಲಿ ಕುಳಿತು ಕೇಳಿದ ಮಹನೀಯರು.. ನಾನೂ ಒಬ್ಬ ಮಹಾನ್ ..... ಎಂದು ಭ್ರಮಿಸಿದ್ದರೆಂದು ಕಾಣುತ್ತದೆ...
ಮೊನ್ನೆ ತಾನೇ ಮತ್ತೆ ಯಾವುದೋ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಬೇಕು ಎಂದು ಕರೆಯೋಲೆ ಬಂದಾಗ ಹೂಂ ಎಂದು ಹೇಳಿದೆ... ವಸ್ತುತಃ ನನಗೂ ಇಂದಿನ ಕಾವ್ಯಗಳು ಎಂಬ  ದಪ್ಪ ದಪ್ಪ ಬರಹಗಳಿಗೂ ಸಂಬಂಧವೇ ಇಲ್ಲ... ಕಾವ್ಯಂ ಯಶಸೇ ಅರ್ಥ ಕೃತೇ ವ್ಯವಹಾರವಿದೇ  ಮುಂತಾದ ಪ್ರಯೋಜನಗಳಲ್ಲಿ ಇಂದು ಕಾವ್ಯಕಳಲ್ಲಿ ಕಾಣುವ ಅರ್ಥ ಕೃತೇ ವ್ಯವಹಾರವಿದೇ ಎಂಬುದು ಬಿಟ್ಟರೆ ಇನ್ನೇನೂ ಸಿಕ್ಕಿಲ್ಲ.. ಆದರೂ ಕರೆದಾಗ ಒಲ್ಲೆನೆನ್ನದೇ ಹೋಗಿ ಕುಳಿತು ಕಾರ್ಯಕ್ರಮಕ್ಕೊಂದು ಸಂಖ್ಯಾಬಲವನ್ನು ತಂದುಕೊಟ್ಟು ಅವರಿಗೊಂದು ಸಮಾಧಾನವೆನ್ನಿಸಿ ಬರುತ್ತೇನೆ. ಇದು ಆಗಾಗ ಅಲ್ಲಲ್ಲಿ ನನ್ನನ್ನು ಇಂತಹ ಕಾರ್ಯಕ್ರಮಗಳಲ್ಲಿ ನೋಡಿ ಗಮನಿಸಿದ ಜನರಿಗೆ ನಾನೊಬ್ಬ ಕಾವ್ಯಪ್ರೇಮಿ ಎಂಬ ಗೌರವ ಮೂಡಿಸಿರಬಹುದೇನೋ. ಅದಕ್ಕೇ ಕರೆಯೋಲೆಯಂತೂ ಇದ್ದೇ ಇರುತ್ತದೆ.. ಪುರುಸೊತ್ತು ಹೆಚ್ಚಿರುವ ಉದ್ಯೋಗದಲ್ಲಿರುವ ಕಾರಣ ಕರೆದಲ್ಲೆಲ್ಲಾ ಹೋಗುವ ಚಟ ಬೇರೆ ಇದೆ.
.......ಹೀಗೆ ಅಂದು ಕೂಡಾ ನನ್ನ ಮಾಮೂಲು ದಿರಿಸಿನಲ್ಲಿ ಕಾರ್ಯಕ್ರಮ ನಡೆಯುವಲ್ಲಿಗೆ ಹೋದೆ. ಸಂಘಟಕ ಕಂ ಅಂದಿನ  ಬಿಡುಗಡೆಗೊಳ್ಳುವ ಪುಸ್ತಕದ ಕರ್ತೃ ಬಾಗಿಲಲ್ಲೇ  ನಿಂತು ಎಲ್ಲರಂತೇ ನನ್ನನ್ನೂ ಸ್ವಾಗತಿಸಿದ.. ಹೋಗಿ ನಾನು ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಅಲ್ಲಿ ಕುಳಿತುಕೊಳ್ಳುವ  ನಿರ್ದಿಷ್ಟ ಆಸನದಲ್ಲಿ ಆಸೀನನಾಗಬೇಕೆನ್ನುವಷ್ಟರಲ್ಲಿ ಸ್ವಾಗತಕೋರಿದ ಆ ಮಹಾನುಭಾವ ನನ್ನತ್ತಲೇ ಬರುತ್ತಿರುವುದ ಕಂಡು ನೇರ ನಿಂತೆ... ಬಂದವನು ನನ್ನನ್ನೇ ನೋಡಿ " ಸಾ...." ಎಂದ. ಏನು ಎಂಬಂತೆ ಕಣ್ಣು ಹೊರಳಿಸಿದೆ.. ಇಂದು ನೀವೇ ಈ ಪುಸ್ತಕಬಿಡುಗಡೆಯ ಕುರಿತು ನಾಕು ಮಾತಾಡಬೇಕು ಎಂದು ಪುಸ್ತಕವನ್ನು ಕೈಗಿತ್ತಾಗ ಬರ...!! ದ ಅರಿವಾಯಿತು....? ಅತ್ತಿತ್ತ ಕತ್ತು ಹೊರಳಿಸಿ ಬೇರೆಯವರನ್ನು ಗುರುತಿಸೋಣವೆಂದು ನೋಡೀದರೆ ಅಲ್ಲಿ ಮೈಕಿನವನು ಪರದೆಯವನು ಕಂಡರಷ್ಟೇ.. ಇನ್ನೇನು.. ಒಪ್ಪಿಕೊಳ್ಳಲೇಬೇಕಾಯ್ತು..!! ಆಯ್ತಪ್ಪ ಎಂದು ಚೂರು ಬಿಗುಮಾನವನ್ನು ತೋರಿಯೇ ಹೇಳಿದೆ.. ಏಕೆಂದರೆ ಸುಲಾಭಕ್ಕೆ ಒಪ್ಪಿದರೆ ಬಂಡವಾಲ ಇಲ್ಲಾ ಎಂದು ಭಾವಿಸಬಹುದಲ್ಲವೇ..ಅದಕ್ಕೆ...ಅವನು ಪುಕ್ಕಟೆಯಾಗಿ ಕೈಗಿತ್ತ ಪುಸ್ತಕವನ್ನೊಮ್ಮೆ ಕಣ್ಣಾಡಿಸೋಣವೆಂದು ಮೊದಲ ಪುಟಕ್ಕೆ ಕಣ್ಣಿಕ್ಕಿದೆ.. ಹೆಸರೇನೋ ಅಂದವಾಗಿತ್ತು.." ಬದುಕು ಬಂಗಾರ" (ಸಣ್ಣ ಕಥೆಗಳು)!!! ......
........ ಪುಸ್ತಕದ ಕುರಿತು ನಾಲ್ಕು ಮಾತಾಡಬೇಕು ಎಂದನಲ್ಲಾ..!! ನನಗೊಂದಿಷ್ಟು ಸಾಮಗ್ರಿ ಬೇಕಲ್ಲಾ ಎಂದು ಪುಟ ತಿರುವಿ ನೋಡಿದೆ... ಅಂತಹ ಓದಿಸಿಕೊಳ್ಲಬಲ್ಲ ಯಾವ ಬರಹವೂ ಕಣ್ಣಿಗೆ ಬೀಳಲಿಲ್ಲ.. ಆದರೂ ಯಾವುದಾದರೊಂದು ಬೇಕಲ್ಲಾ ಮಾತಿಗೆ ನಿಲ್ಲೋದಿಕ್ಕೆ ಎಂದು ಒಂದು ಕಥೆಯನ್ನು ಸುರುವಿಟ್ಟುಕೊಂಡೆ... ಕವಿ ಒಂದು ಹುಡುಗಿಯನ್ನು ಪ್ರೀತಿಸುತ್ತಾನೆ, ಅವಳನ್ನೇ ಮದುವೆಯಾಗುತ್ತಾನೆ, ಅವನ ಸಂಸಾರದಲ್ಲಿನ ಏಳು-ಬೀಳುಗಳು, ಮಕ್ಕಳು, ಮಾತು ಕೇಳದ ಮಗನಾಗುತ್ತಾನೆ,, ಹೀಗೇ ಸಾಗುವ ಕಥೆಯಲ್ಲಿ ಸ್ವಾರಸ್ಯವೇನೂ ಇಲ್ಲದಿದ್ದರೂ ಏನೋ ಇದೆ ಎಂದು ಸಭೆಯಲ್ಲಿ ಪರಿಚಯಿಸಬೇಕಿತ್ತು..!! ಅದರೊಂದಿಗೆ ಚೂರು ವಿಮರ್ಶೆಯನ್ನು ಮಾಡಿ ಎಂದು ಬೇರೆ ಅಪ್ಪಣೆ ಕೊಡಿಸಿದ್ದನಲ್ಲಾ...ಅಂತೂ ಒಂದು ಪರಿಚ್ಛೇದವು ನನ್ನ ಕಣ್ಣಿಗೆ ಬಿದ್ದಿತೆನ್ನಿ... ತುಂಬ ಪ್ರೀತಿಯಿಂದ ಸತಿ-ಪತಿಗಳಿಬ್ಬರೂ ತಮ್ಮದೇ ಸ್ವಂತ ಸಂಸಾರದ ಗೂಡಿನಲ್ಲಿ ಬದುಕು ಸವೆಸುತ್ತಿರುವಾಗ ಗರ್ಭಿಣಿಯಾಗಿ ಹೆರಿಗೆಗೆ ತವರಿಗೆ ಹೋಗಿ ಹೆರಿಗೆಯಾಗುತ್ತದೆ. ಇಲ್ಲಿ  ಹೆಂಡತಿಯನ್ನು ನೆನೆದು ವಿರಹಿಯಾದ ಗಂಡ ಮುಂಜಾವಿನ ನಸುಕಿನಲ್ಲೆದ್ದು ಮಾವನ ಮನೆಗೆ ಹೊರಡುತ್ತಾನೆ.. ( ಮೈಸೂರು ಮಲ್ಲಿಗೆಯ.. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು... ಕವನದ ಭಟ್ಟಿ ಬೇರೇನೂ ಕಾಣಲಿಲ್ಲ) ಹೋಗಿ ತಲುಪಿ ಹೆಂಡತಿಯ ಮುಖವನ್ನು ನೋಡಲು ಹೋದಾಗ ಹೆಂಡತಿ ತನ್ನ ಮಗುವನ್ನೆತ್ತಿ ಗಂಡನ ಕೈಗಿತ್ತು ನಿನ್ನ ಮಗ ಎಂದು ತೋರುತ್ತಾಳೆ... ಅದು ಒಂದು ಸಂಭ್ರಮ....... ಹೀಗೇ ಮುಂದೆ ಸಾಗುತ್ತದೆ...
....
ಈ ಕಥೆಯನ್ನು ಓದುತ್ತಾ ಹೋದಂತೆ ನನ್ನ ಮನದಲ್ಲಿ ಈ "ಕೃತ್ತಿಕಾ ವಿರಹ" ಹಾಗೂ "ಪ್ರಸವ ವೈರಾಗ್ಯ" ಎಂಬ ಎರಡು ಪದಗಳು ನೆನಪಾದವು... ಅಲ್ಲದೇ... ಹೆಂಡತಿ ತಾನು ಹಡೆದ ಮಗುವನ್ನು ತನ್ನ ಗಂಡನಿಗೆ ತೋರುವ ಪರಿ ಯಾಕೋ ನೀರಸವೆನಿಸಿದ್ದು ಕಂಡು ಅದಕ್ಕೊಂದು ಕಾವ್ಯಾತ್ಮಕವಾದ ಪದಗುಚ್ಛಗಳನ್ನು ಮನದಲ್ಲಿಯೇ ಹೆಣೆದೆ... ಅದೆಂದರೆ... ಹೆಂಡತಿಯ ಮುಖವನ್ನು ನೋಡುವ ಆಸೆಯಿಂದ ಬಂದ ಗಂಡನಿಗೆ ಪ್ರಸೂತಿಗೃಹದ ಬಾಗಿಲಿನಿಂದಲೇ ಹಾಲು ಹಸುಳೆಯ ಮುಖವನ್ನು ತೋರಿಸಿ ಇದೋ ... "ಸ್ವಾತಿಯ ಮಳೆಹನಿಯನ್ನು ಕಪ್ಪೆಯಚಿಪ್ಪಿನಲ್ಲಿ ಜೋಪಾನವಾಗಿರಿಸಿ ಮುತ್ತಾಗಿ ತೋರುತ್ತಿರುವೆ ನಿನಗೆ" "ಮುತ್ತಿಗೆ ಮುತ್ತು ಪೋಣಿಸಿ ಮಾಲೆಯಾಗಬೇಕಾದ್ದು ನನ್ನ ನಿನ್ನ ಕೊರಳಿಗೆ" ಎಂದು ಸೊಗಸಾಗಿ ಕಾವ್ಯಾನುಭೂತಿಯನ್ನುಣಿಸಬಹುದಿತ್ತು ಆದರೆ ಇಲ್ಲಿ ಕವಿ ಭಾಷೆಯನ್ನು ಸೋಲಿಸಲಾಗದೇ ಕವಿಯೇ ಸೋತಿದ್ದಾನೆ.. ಈಗ ಇದು ಕಥೆಯಾಗಬಹುದೇ ಹೊರತು..ಕಾವ್ಯವೆನ್ನಿಸದು ಎಂದು ಒಂದು ಚೌಕಟ್ಟನ್ನು ಹೆಣೆದುಕೊಂಡು ವೇದಿಕೆಯೇರಿದೆ...
...... ಕಿಕ್ಕಿರಿದ ಸಾಹಿತ್ಯಾಸಕ್ತರು..? ( ಪುಣ್ಯ... ಒಂದು ಹತ್ತಿಪ್ಪತ್ತಾದರೂ ಹಾಜರಿಯಿತ್ತು... ಹಾಜರಿಯಲ್ಲಿ ಬಹುತೇಕರು ಆಸಕ್ತರೇ ಇದ್ದರು ಎನ್ನಿ) ಅಂತೂ ಪುಸ್ತಕದ ಕುರಿತು ನಾಕು ಮಾತು ಪ್ರಾರಂಬಿಸಿದ ನಾನು ಮೇಲೆ ಹೇಳಿದುದನ್ನೇ ಮತ್ತೆ ಹೇಳಿದೆ ಅಷ್ಟೇ..... ಬಾಗಿಲಲ್ಲಿ ನಿಂತಿದ್ದ ಓರ್ವ ಬಹುಷಃ ಕವಯಿತ್ರಿಯಿರಬಹುದೇನೋ... ಜೋರಾಗಿ ಚಪ್ಪಾಳೆ ತಟ್ಟಿದಳು... ಹಾಂ...ಸಾರ್ಥಕವಾಯಿತು ಎಂದು ಮಾತು ನಿಲ್ಲಿಸಿ ಜೈ ಹಿಂದ್ ಜೈ ಕರ್ನಾಟಕ ಹೇಳಿದೆ.ಕೆಳಗೆ ಬಂದು ಕುಳಿತೆ.... ಪಕ್ಕದ ಮಹಾನುಭಾವರೊಬ್ಬರು......ಬಹಳ ಸೊಗಸಾಗಿ ಮಾತಾಡತೀರಿ ಸಾ.... ಆದ್ರೆ ಅರ್ಥ ಆಗೋದಕ್ಕೆ ಸಮಯ ಬೇಕಾಗುತ್ತೆ.. ಅಷ್ಟೊತ್ತಿಗೆ ನೀವು ಬೇರೆ ವಿಚಾರ ಹೇಳೋಕೆ ಸುರುಮಾಡಿರ್ತೀರಿ... ಹಾಗಾಗಿ ನಾವು ನಕ್ಕು ಚಪ್ಪಾಳೆ ಹೊಡೆಯೋದು ಯಾವಾಗಾ ಅಂತ ಗೊತ್ತಾಗೋದಿಲ್ಲಾ..ಅಂದು ಬಿಡೋದೇ.. ಛೇ.. ಅಷ್ಟೊತ್ತಿಗೆ ಬಾಗಿಲಲ್ಲಿ ನಿಂತು ಚಪ್ಪಾಳೆ ತಟ್ಟಿದ ಗರತಿ ಹತ್ತಿರಬಂದು.... ಹಹ್ಹಾಹ್ಹಾ.. ಎಂದು ನಗತಾನೇ ಇದ್ವಿ ಸಾರ್... ನೀವು ಹೇಳೋದೆಲ್ಲಾ ನಿಜವಾಗಿ ಅನುಭವಿಸಿ ಹೇಳಿದಾಂಗಿತ್ತು ಸಾರ್... ನೀವು ಯಾವತ್ತಾದ್ರೂ ಹೆರಿಗೆಗೆ ತವರಿಗೆ ಹೋಗಿದ್ರಾ ಸಾರ್... ಅದೇಂಗೆ ಗೊತ್ತಾಯ್ತು ಸಾರ್.. ನಿಮಗೆ ಹೆಂಗಸರ ಮನಸ್ಥಿತಿ..ಈಗ ನಗುವ ಸರದಿ ನನ್ನದಾಗಿತ್ತು...!!!ಹೇಗಪ್ಪಾ ನಿಭಾಯಿಸೋದು... ಎಂದು  ... ಅಂತೂ ನಗುವನ್ನು ತಡೆಯಲು ತಂದ ಆರಿದ ಚಹ ಮತ್ತು ಬಿಸ್ಕೇಟಿನ ತುಂಡು ಗಂಟಲಿಗೆ ಸ್ವಲ್ಪ ಕಸುವುಕೊಟ್ಟಿತ್ತು.. 

ಶನಿವಾರ, ಅಕ್ಟೋಬರ್ 12, 2013

|| ಶ್ಯಾಮಲಾ ದಂಡಕಮ್ ||

ಜಯ ಜನನಿ ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಂರೂಢಬಿಲ್ವಾಟವೀಮಧ್ಯಕಲ್ಪದ್ರುಮಾ ಕಲ್ಪ 
ಕಾದಂಬಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ, ಸರ್ವಲೋಕ ಪ್ರಿಯೇ |


ಸಾದರಾರಬ್ಧಸಂಗೀತಸಂಭಾವನಾಸಂಭ್ರಮಾಲೋಲನೀಪಸ್ರಗಾಬದ್ಧಚೂಲೀಸನಾಥತ್ರಿಕೇ, ಸಾನುಮತ್ಪುತ್ರಿಕೇ |

ಶೇಖರೀಭೂತಶೀತಾಂಶುರೇಖಾಮಯೂಖಾ ವಲೀಬದ್ಧಸುಸ್ನಿಗ್ಧನೀಲಾಲಕಶ್ರೇಣಿ ಶೃಂಗಾರಿತೇ, ಲೋಕಸಂಭಾವಿತೇ |

 ಕಾಮಲೀಲಾಧನುಃಸನ್ನಿಭಭ್ರೂಲತಾಪುಷ್ಪ ಸಂದೋಹ ಸಂದೇಹ ಕೃಲ್ಲೋಚನೇ, ವಾಕ್ಸುಧಾಸೇಚನೇ|

ಚಾರುಗೋರೋಚನಾಪಂಕಕೇಲೀಲಲಾಮಾಭಿರಾಮೇ, ಸುರಾಮೇ ರಮೇ | 

ಪ್ರೋಲ್ಲಸದ್ವಾಲಿಕಾ ಮೌಕ್ತಿಕಶ್ರೇಣಿಕಾಚಂದ್ರಿಕಾಮಂಡಲೋದ್ಭಾಸಿಲಾವಣ್ಯಗಂಡಸ್ಥಲನ್ಯಸ್ತಕಸ್ತೂರಿಕಾಪತ್ರರೇಖಾಸಮುದ್ಭೂತ ಸೌರಭ್ಯಸಂಭ್ರಾಂತಭೃಂಗಾಂಗನಾಗೀತಸಾಂದ್ರೀಭವನ್ಮಂತ್ರ ತಂತ್ರೀಸ್ವರೇ, ಸುಸ್ವರೇ ಭಾಸ್ವರೇ|




ವಲ್ಲಕೀ ವಾದನಪ್ರಕ್ರಿಯಾಲೋಲ ತಾಲೀದಲಾಬದ್ಧತಾಟಂಕಭೂಷಾ ವಿಶೇಷಾನ್ವಿತೇ, ಸಿದ್ಧ ಸಂಮ್ಮಾನಿತೇ |

ದಿವ್ಯಹಾಲಾಮದೋದ್ವೇಲಹೇಲಾಲಸಚ್ಚಕ್ಷುರಾಂದೋಲನ ಶ್ರೀಸಮಾಕ್ಷಿಪ್ತಕರ್ಣೈಕನೀಲೋತ್ಪಲೇ ಪೂರಿತಾಶೇಷಲೋಕಾಭಿವಾಂಛಾಫಲೇ, ಶ್ರೀಫಲೇ |

ಸ್ವೇದಬಿಂದೂಲ್ಲಸತ್ಫಾಲಲಾವಣ್ಯ ನಿಃಷ್ಯಂದಸಂದೋಹಸಂದೇಹಕೃನ್ನಾಸಿಕಾಮೌಕ್ತಿಕೇ, ಸರ್ವಮಂತ್ರಾತ್ಮಿಕೇ ಕಾಟಿಕೇ|

ಮುಗ್ಧಮಂದಸ್ಮಿತೋದಾರ ಭದ್ರ ಸ್ಫುರತ್ಪೂಗತಾಂಬೂಲಕರ್ಪೂರಖಂಡೋತ್ಕರೇ, ಜ್ಞಾನಮುದ್ರಾಕರೇ, ಸರ್ವಸಂಪತ್ಕರೇ, ಪದ್ಮಭಾಸ್ವತ್ಕರೇ ಶ್ರೀಕರೇ|


ಕುಂದಪುಷ್ಪದ್ಯುತಿ ಸ್ನಿಗ್ಧ ದಂತಾವಲೀ ನಿರ್ಮಲಾಲೋಲಕಲ್ಲೋಲಸಂಮೇಲನಸ್ಮೇರಶೋಣಾಧರೇ, ಚಾರುವೀಣಾಧರೇ ಪಕ್ವ ಬಿಂಬಾಧರೇ |


ಸುಲಲಿತನವಯೌವನಾರಂಭಚಂದ್ರೋದಯೋದ್ವೇಲಲಾವಣ್ಯದುಗ್ಧಾರ್ಣವಾವಿರ್ಭವತ್ಕಂಬುಬಿಂಬೋಕಭೃತ್ಕಂಧರೇ, ಸತ್ಕಲಾಮಂದಿರೇ ಮಂಥರೇ|


ದಿವ್ಯರತ್ನಪ್ರಭಾಬಂಧು ರಚ್ಛನ್ನ ಹಾರಾದಿ ಭೂಷಾಸಮುದ್ದ್ಯೋತಮಾನಾನವದ್ಯಾಂಶು ಶೋಭೇ, ಶುಭೇ |

ರತ್ನಕೇಯೂರರಶ್ಮಿಚ್ಛಟಾಪಲ್ಲವ ಪ್ರೋಲ್ಲಸದ್ದೋರ್ಲತಾರಾಜಿತೇ ಯೋಗಿ ಭಿಃ ಪೂಜಿತೇ |




ವಿಶ್ವದಿಙ್ಮಂಡಲವ್ಯಾಪಿಮಾಣಿಕ್ಯತೇ ಜಃಸ್ಫುರತ್ಕಂಕಣಾಲಂಕೃತೇ ವಿಭ್ರಮಾಲಂಕೃತೇಸಾಧುರ್ಭಿ ಸತ್ಕೃತೇ |

ವಾ ಸರಾರಂಭ ವೇಲಾಸಮುಜ್ಜೃಂಭಮಾಣಾರವಿಂದ ಪ್ರತಿ ದ್ವಂದ್ವಿ ಪಾಣಿದ್ವಯೇಸಂತ ನೋ ದ್ಯದ್ದಯೇ ಅದ್ವಯೇ |



ದಿವ್ಯರತ್ನೋರ್ಮಿಕಾದೀಧಿತಿಸ್ತೋಮಸಂಧ್ಯಾಯಮಾನಾಂಗುಲೀವಲ್ಲವೋದ್ಯನ್ನಖೇಂದುಪ್ರಭಾಮಂಡಲೇ ಸನ್ನುತಾಖಂಡಲೇ ಚಿತ್ಪ್ರಭಾಮಂಡಲೇ ಪ್ರೋಲ್ಲಸತ್ಕುಂಡಲೇ |

ತಾರಕಾರಾಜಿನೀಕಾಶ ಹಾರಾವಲೀಸ್ಮೇರಚಾರುಸ್ತನಾಭೋಗಭಾರಾನಮನ್ಮಧ್ಯವಲ್ಲೀವಲಿಚ್ಛೇದವೀಚೀಸಮು ಲ್ಲಾ ಸ ಸಂದರ್ಶಿತಾಕಾರ ಸೌಂದರ್ಯರತ್ನಾಕರೇ ವಲ್ಲಕೀಭೃತ್ಕರೇ ಕಿಂಕರಶ್ರೀಕರೇ |

ಹೇಮ ಕುಂಭೋಪಮೋತ್ತುಂಗವಕ್ಷೋಜಭಾರಾವನಮ್ರೇ ತ್ರಿಲೋಕಾವನಮ್ರೇ |

ಲಸದ್ವೃತ್ತಗಂಭೀರನಾಭೀಸರಸ್ತೀರಶೈವಾಲಶಂಕಾಕರಶ್ಯಾಮರೋಮಾವಲೀಭೂಷಣೇ ಮಂಜುಸಂಭಾಷಣೇ |

ಚಾರುಶಿಂಜತ್ಕಟೀಸೂತ್ರನಿರ್ಭರ್ತ್ಸಿತಾನಂಗಲೀಲಾಧನುಃ ಶಿಂಜಿನೀಡಂಬರೇ ದಿವ್ಯರತ್ನಾಂಬರೇ |

ಪದ್ಮರಾಗೋಲ್ಲಸನ್ಮೇಖಲಾ ಭಾಸ್ವರಶ್ರೋಣಿಶೋಭಾಜಿತ ಸ್ವರ್ಣಭೂಭೃತ್ತಲೇ ಚಂದ್ರಿಕಾಶೀತಲೇ |




ವಿಕಸಿತನವಕಿಂಶುಕಾತಾಮ್ರದಿವ್ಯಾಂಶುಕಚ್ಛನ್ನಚಾರು ಭಾಪರಾಭೂತಸಿಂದೂರಶೋಣಾಯಮಾನೇಂದ್ರ

ಮಾತಂಗಹಸ್ತಾರ್ಗಲೇವೈಭವಾನರ್ಗಲೇ, ಶ್ಯಾಮಲೇ |



ಕೋಮಲಸ್ನಿಗ್ಧನೀಲೋತ್ಪಲೋ ತ್ಭಾಸಿತಾನಂಗತೂಣೀರಶಂಕಾಕರೋದಾರ ಜಂಘಾಲತೇ, ಚಾರುಲೀಲಾಗತೇ |
ನಮ್ರದಿಕ್ಪಾಲಸೀಮಂತಿನೀಕುಂತಲ ಸ್ನಿಗ್ಧ ನೀಲಪ್ರಭಾಪುಂಜಸಂಜಾತ ದುರ್ವಾಂಕುರಾ ಶಂಕಸಾರಂಗಸಂಯೋಗರಿಂಖನ್ನಖೇಂದುಜ್ವಲೇ, ಪ್ರೋಜ್ವಲೇ ನಿರ್ಮಲೇ | 



ಪ್ರಹ್ವದೇವೇಶ ಲಕ್ಷ್ಮೀಶ ಭೂತೇಶ ದೈತ್ಯೇಶ ಯಕ್ಷೇಶ ವಾಗೀಶ ಕೀನಾಶ ತೋಯೇಶ ವಾಯ್ವುಗ್ನೀಕೋಟೀರಮಾಣಿಕ್ಯಸಂಘ್ರುಷ್ಟ ಬಾಲಾತಪೋದ್ಧಾಮ ಲಾಕ್ಷಾರಸಾರುಣ್ಯ ತಾರುಣ್ಯ ಲಕ್ಷ್ಮೀ ಗೃಹೀತಾಂಘ್ರೀ ಪದ್ಮೇ, ಸುಪದ್ಮೇ ಉಮೇ|


ಸುರುಚಿರನವರತ್ನಪೀಠಸ್ಥಿತೇ, ಸುಸ್ಥಿತೇ |


ರತ್ನಸಿಂಹಾಸನೇ ರತ್ನಪದ್ಮಾಸನೇ, ಶಂಖಪದ್ಮದ್ವಯೋಪಾಶ್ರಿತೇ |




ತತ್ರ ವಿಘ್ನೇಶದೂರ್ವಾವಟುಕ್ಷೇತ್ರ ಪಾಲೈರ್ಯುತೇ ಮತ್ತಮಾತಂಗಕನ್ಯಾ ಸಮೂಹಾನ್ವಿತೇ, ಜುಲಾಮೇನಕಾದ್ಯಂಗನಾ ಮಾನಿತೇ, ಭೈರವೈರಷ್ಟಭಿರ್ವೇಷ್ಟಿತೇ |

ದೇವಿ ವಾವಾದಿಭಿಃ ಸಂಶ್ರಿತೆ ಶಕ್ತಿಭಿಃಸೇವಿತೇ ಧಾತ್ರಿಲಕ್ಷ್ಮ್ಯಾದಿ ಶಕ್ತ್ಯಷ್ಟಕೈಃ ಸಂಯುತೇ |

ಮಾತೃಕಾಮಂಡಲೈರ್ಮಂಡಿತೇ, ಭೈರವೀ ಸಮೃತೇ |

ಯಕ್ಷ ಗಂಧರ್ವ ಸಿದ್ಧಾಂಗನಾ ಮಂಡಲೈರರ್ಚಿತೇ |

ಪಂಚಬಾಣಾತ್ಮಿಕೇ ಪಂಚಬಾಣೇನ ರತ್ಯಾಚ ಸಂಭಾವಿತೇ |

ಪ್ರೀತಿಭಾಜಾ ವಸಂತೇನ ಚಾನಂದಿತೇ ಭಕ್ತಿಭಾಜಾಂ ಪರಂ ಶ್ರೇಯಸೇ ಕಲ್ಪಸೇ |

ಯೋಗಿನಾಂ ಮಾನಸೇ ದ್ಯೋತಸೇ ಛಂದಸಾಮೋಜಸಾ ಭ್ರಾಜಸೇ |

ಗೀತವಿದ್ಯಾವಿನೋದಾತಿ ತೃಷ್ಣೇನ ಕೃಷ್ಣೇನ ಸಂಪೂಜ್ಯಸೇ |

ಭಕ್ತಿ ಮಚ್ಚೇತಸಾ ವೇದಸಾ ಸ್ತೂಯಸೇ| 


ವಿಶ್ವ ಹೃದ್ಯೇನವಾದ್ಯೇನ ವಿದ್ಯಾಧರೈರ್ಗೀಯಸ|


ಶ್ರವಣಹರಣದಕ್ಷಿಣಾಕ್ವಾಣನಾ ವೀಣಯಾ ಕಿನ್ನರೈರ್ಗೀಯಸೇ |


ಯಕ್ಷ ಗಂಧರ್ವಸಿದ್ಧಾಂಗನಾಮಂಡಲೈರರ್ಚ್ಯಸೇ |



ಸರ್ವಸೌಭಾಗ್ಯ ವಾಂಛಾವತೀ ಭಿರ್ವದೂಭಿಃ ಸುರಾಣಾಂ ಸಮಾರಾಧ್ಯಸೇ |

ಸರ್ವವಿದ್ಯಾವಿಶೇಷಾತ್ಮಕಂ ಚಾಟುಗಾಥಾ ಸಮುಚ್ಚಾಟಣಂ ಕಂಠ ಮೂಲೋಲ್ಲಸದ್ವರ್ಣರಾಜಿತ್ರಯಂ ಕೋಮಲಂ ಶ್ಯಾಮಲೋದಾರಪಕ್ಷದ್ವಯಂ ತುಂಡಶೋಭಾದಿತಿದೂರೀಭವತ್ಕಿಂಶುಕಂ ತಂ ಶುಕಂ ಲಾಲಯಂತೀ ಪರಿಕ್ರೀಡಸೇ |

ಪಾಣಿಪದ್ಮದ್ವಯೇನ ಅಕ್ಷಮಾಲಾಮಪಿ ಸ್ಫಾಟಿಕೀಂ ಜ್ಞಾನಸಾರಾತ್ಮಕಂ ಪುಸ್ತಕಂ ಚಾಂಕುಶಂಪಾಶಮಾಬಿಭ್ರತೀ ಯೇನ ಸಂಚಿಂತ್ಯಸೇ, ತಸ್ಯ ವಕ್ತ್ರಾಂತರಾದ್ಗದ್ಯಪದ್ಯಾತ್ಮಿಕಾ ಭಾರತೀ ನಿಸ್ಸರೇತ್ |

ಯೇನ ವಾ ಯಾವಕಾಭಾಕೃತಿರ್ಭಾವ್ಯಸೇ, ತಸ್ಯ ವಶ್ಯಾ ಭವಂತಿ ಸ್ತ್ರಿಯಃ ಪೂರುಷಾಃ |

ಯೇನ ವಾ ಶಾತಕುಂಭದ್ಯುತಿರ್ಭಾವ್ಯಸೇಸೋsಪಿ ಲಕ್ಷ್ಮೀಸಹಸ್ರೈಃ ಪರಿಕ್ರೀಡತೇ |



ಕಿಂ ನ ಸಿದ್ಧ್ಯೇದ್ವಪುಃ ಶ್ಯಾಮಲಂ ಕೋಮಲಂ ಚಂದ್ರಚೂಡಾನ್ವಿತಂ ತಾವಕಂ ಧ್ಯಾಯತಃ |

ತಸ್ಯ ಲೀಲಾಸರೋವಾರಿಧಿಸ್ತಸ್ಯ ಕೇಲೀವನಂ ನಂದನಂ, ತಸ್ಯ ಭದ್ರಾಸನಂ ಭೂತಲಂ, ತಸ್ಯ ಗೀರ್ದೇವತಾ ಕಿಂಕರೀ, ತಸ್ಯ ಚಾಜ್ಞಾಕರೀ ಶ್ರೀಃ ಸ್ವಯಮ್|



ಶ್ಯಾಮಲಾ ದಂಡಕಮ್:
ಧ್ಯಾನ:
ಮಾಣಿಕ್ಯವೀಣಾಮುಪಲಾಲಯಂತೀಂ
ಮದಾಲಸಾಂ ಮಂಜುಲವಾಗ್ವಿಲಾಸಾಮ್ |
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮಿ ||
(ಮುತ್ತಿನಂಥಾ ವೀಣೆಯ ಪ್ರೀತಿಂದ ನುಡಿಸಿಂಡು ಇಪ್ಪ, ಮಧುರ ಮಾತಿನ ವಿಲಾಸ ಇಪ್ಪ, ಮಹೇಂದ್ರ ನೀಲಬಣ್ಣದ ಮೃದುವಾದ ಶರೀರ ಹೊಂದಿದ, ಮತಂಗ ಋಷಿಯಕನ್ಯೆಯ ಯಾವಾಗಲೂ ಸ್ಮರಿಸುತ್ತೆ.)
ಚತುರ್ಭುಜೇ ಚಂದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ |
ಪುಂಡ್ರೇಕ್ಷು ಪಾಶಾಂಕುಶಪುಷ್ಪಬಾಣ-
ಹಸ್ತೇ ನಮಸ್ತೇ ಜಗದೇಕ ಮಾತಃ ||

(ನಾಲ್ಕು ಭುಜ ಇದ್ದುಗೊಂಡು, ಚಂದ್ರಕಲೆಯ ಮುಡುದಿಪ್ಪ, ಅಂದದ ಶರೀರ ಹೊಂದಿದ, ಕುಂಕುಮದ ಕೆಂಪು ಬಣ್ಣದ, ಕಬ್ಬಿನ ಜಲ್ಲೆ, ಪಾಶ, ಅಂಕುಶ, ಹೂಗಿನ ಬಾಣಂಗಳ ಕೈಗಳಲ್ಲಿ ಧರಿಸಿಪ್ಪ, ಜಗತ್ತಿನ ಒಬ್ಬನೇ ಅಮ್ಮನಾದ ನಿನಗೆ ನಮಸ್ಕಾರ ಮಾಡ್ತಾ ಇದ್ದೆ.)
ಮಾತಾ ಮರಕತಶ್ಯಾಮಾ ಮಾತಂಗೀ ಮದಶಾಲಿನೀ |
ಕಟಾಕ್ಷಯತು ಕಲ್ಯಾಣೀ ಕದಂಬವನವಾಸಿನೀ ||
(
ಪಚ್ಚೆ ಬಣ್ಣಲ್ಲಿಪ್ಪ, ಮತಂಗ ಋಷಿಯ ಮಗಳೂ, ಮದಂದ ಕೂಡಿದವಳೂ, ಕಲ್ಯಾಣಕರಳೂ, ಕದಂಬವನಲ್ಲಿ ವಾಸ ಮಾಡುವವಳೂ ಆದ ಅಬ್ಬೆ, ಕಟಾಕ್ಷ ಕರುಣಿಸಲಿ.)
ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ | 
ಜಯ ಸಂಗೀತರಸಿಕೇ ಜಯ ಲೀಲಾಶುಕಪ್ರಿಯೇ ||

(ಮಾತಂಗಋಷಿಯ ಮಗಳೇ,, ನೈದಿಲೆ ಬಣ್ಣ ಇಪ್ಪೋಳೇ, ಸಂಗೀತ ರಸಿಕಳೇ, ಲೀಲಾಶುಕನ ಪ್ರಿಯಳೇ, ಜಯಶೀಲೆಯಾಗು.)
ದಂಡಕಮ್:
ಜಯ ಜನನಿ ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಂರೂಢಬಿಲ್ವಾಟವೀಮಧ್ಯಕಲ್ಪದ್ರುಮಾ ಕಲ್ಪ ಕಾದಂಬಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ, ಸರ್ವಲೋಕ ಪ್ರಿಯೇ |
ಸಾದರಾರಬ್ಧಸಂಗೀತಸಂಭಾವನಾಸಂಭ್ರಮಾಲೋಲನೀಪಸ್ರಗಾಬದ್ಧಚೂಲೀಸನಾಥತ್ರಿಕೇ, ಸಾನುಮತ್ಪುತ್ರಿಕೇ |
ಶೇಖರೀಭೂತಶೀತಾಂಶುರೇಖಾಮಯೂಖಾ ವಲೀಬದ್ಧಸುಸ್ನಿಗ್ಧನೀಲಾಲಕಶ್ರೇಣಿ ಶೃಂಗಾರಿತೇ, ಲೋಕಸಂಭಾವಿತೇ |
ಕಾಮಲೀಲಾಧನುಃಸನ್ನಿಭಭ್ರೂಲತಾಪುಷ್ಪ ಸಂದೋಹ ಸಂದೇಹ ಕೃಲ್ಲೋಚನೇ, ವಾಕ್ಸುಧಾಸೇಚನೇ|
ಚಾರುಗೋರೋಚನಾಪಂಕಕೇಲೀಲಲಾಮಾಭಿರಾಮೇ, ಸುರಾಮೇ ರಮೇ |
ಪ್ರೋಲ್ಲಸದ್ವಾಲಿಕಾ ಮೌಕ್ತಿಕಶ್ರೇಣಿಕಾಚಂದ್ರಿಕಾಮಂಡಲೋದ್ಭಾಸಿಲಾವಣ್ಯಗಂಡಸ್ಥಲನ್ಯಸ್ತಕಸ್ತೂರಿಕಾಪತ್ರರೇಖಾಸಮುದ್ಭೂತ ಸೌರಭ್ಯಸಂಭ್ರಾಂತಭೃಂಗಾಂಗನಾಗೀತಸಾಂದ್ರೀಭವನ್ಮಂತ್ರ ತಂತ್ರೀಸ್ವರೇ, ಸುಸ್ವರೇ ಭಾಸ್ವರೇ|
ವಲ್ಲಕೀ ವಾದನಪ್ರಕ್ರಿಯಾಲೋಲ ತಾಲೀದಲಾಬದ್ಧತಾಟಂಕಭೂಷಾ ವಿಶೇಷಾನ್ವಿತೇ, ಸಿದ್ಧ ಸಂಮ್ಮಾನಿತೇ |
ದಿವ್ಯಹಾಲಾಮದೋದ್ವೇಲಹೇಲಾಲಸಚ್ಚಕ್ಷುರಾಂದೋಲನ ಶ್ರೀಸಮಾಕ್ಷಿಪ್ತಕರ್ಣೈಕನೀಲೋತ್ಪಲೇ ಪೂರಿತಾಶೇಷಲೋಕಾಭಿವಾಂಛಾಫಲೇ, ಶ್ರೀಫಲೇ |
ಸ್ವೇದಬಿಂದೂಲ್ಲಸತ್ಫಾಲಲಾವಣ್ಯ ನಿಃಷ್ಯಂದಸಂದೋಹಸಂದೇಹಕೃನ್ನಾಸಿಕಾಮೌಕ್ತಿಕೇ, ಸರ್ವಮಂತ್ರಾತ್ಮಿಕೇ ಕಾಟಿಕೇ|
ಮುಗ್ಧಮಂದಸ್ಮಿತೋದಾರ ಭದ್ರ ಸ್ಫುರತ್ಪೂಗತಾಂಬೂಲಕರ್ಪೂರಖಂಡೋತ್ಕರೇ, ಜ್ಞಾನಮುದ್ರಾಕರೇ, ಸರ್ವಸಂಪತ್ಕರೇ, ಪದ್ಮಭಾಸ್ವತ್ಕರೇ ಶ್ರೀಕರೇ|
ಕುಂದಪುಷ್ಪದ್ಯುತಿ ಸ್ನಿಗ್ಧ ದಂತಾವಲೀ ನಿರ್ಮಲಾಲೋಲಕಲ್ಲೋಲಸಂಮೇಲನಸ್ಮೇರಶೋಣಾಧರೇ, ಚಾರುವೀಣಾಧರೇ ಪಕ್ವ ಬಿಂಬಾಧರೇ ||1 ||
(ಸುಧಾಸಮುದ್ರಲ್ಲಿ ಚೆಂದದ ಮಣಿದ್ವೀಪಲ್ಲಿ ಬೆಳದಿಪ್ಪ ಬಿಲ್ವದ ಕಾಡಿನೊಳ ಕಲ್ಪವೃಕ್ಷದ ಹಾಂಗಿಪ್ಪ ಕದಂಬವೃಕ್ಷಂಗಳ ಕಾಡಿಲಿ ಸುಖವಾಗಿ ವಾಸ ಮಾಡುವೋಳೇ,
ಚರ್ಮಾಂಬರೆಯಾಗಿಪ್ಪ ಶಿವನ ಪ್ರೀತಿಪಾತ್ರೆಯೇ, ಎಲ್ಲಾ ಲೋಕಕ್ಕೂ ಪ್ರಿಯಳಾದವಳೇ, ತಾಯೇ, ಜಯಶೀಲೆಯಾಗು.
ಆದರಂದ ಸುರು ಆದ ಸಂಗೀತದ ಮೆಚ್ಚುಗೆಲಿ ಸಂಭ್ರಮಂದ ತೂಗಿಂಡಿಪ್ಪ, ಕುಸುಮಂಗಳ ಮಾಲೆಂದ ಕಟ್ಟಿದ ಕೇಶರಾಶಿಂದ ಅಲಂಕೃತವಾಗಿ ಶೋಭಿಸುವೋಳೇ, ಪರ್ವತರಾಜನ ಮಗಳು, ಮುಡಿಲಿ ಧರಿಸಿಪ್ಪ, ಚಂದ್ರಕಲೆಯ ಕಿರಣಂಗಳಿಂದ ಕಟ್ಟಿದ ಹಾಂಗಿಪ್ಪ, ಹೊಳೆತ್ತಾ ಇಪ್ಪ ಕರಿ ಬಣ್ಣದ ಮುಂಗುರುಳುಗಳ ಅಲಂಕಾರ ಹೊಂದಿದೋಳೇ, ಲೋಕಲ್ಲಿ ಪೂಜೆ ಪಡದೋಳೇ!
ಮನ್ಮಥನ ಬಿಲ್ಲಿನ ಹಾಂಗಿಪ್ಪ ಹುಬ್ಬುಗಳ ಹೊಂದಿದ್ದು, ಬಳ್ಳಿಯ ಹೂಗಿನ ಗೊಂಚಲುಗಳೋ ಹೇಳ್ತ ಹಾಂಗಿಪ್ಪ ಕಣ್ಣುಗಳ ಹೊಂದಿದೋಳೇ, ವಾಕ್ಸುಧೆಯ ಹರಿಸುವೋಳೇ, ಒಳ್ಳೆಯ ಗೋರೋಚನಾ ಕುಂಕುಮಂದ ಹಣೆಯ ಮೇಲಿನ ಅಲಂಕಾರಂದ ಭೂಷಿತಳಾದೋಳೇ, ಸುಂದರಿಯಾದ ಲಕ್ಷ್ಮೀ ಸ್ವರೂಪಳೇ!
ಹೊಳೆತ್ತಾ ಇಪ್ಪ ಕೆಮಿಯೋಲೆಯ ಮುತ್ತುಗಳ ಸಾಲಿನ ಬೆಳದಿಂಗಳಿನ ಮಂಡಲಲ್ಲಿ ಬೆಳಗುತ್ತಾ ಇಪ್ಪ ಕೆಪ್ಪಟೆಗಳ ಮೇಲೆ ಕಸ್ತೂರಿಂದ ಕಲ್ಪಿತ ಚಿತ್ರರೇಖೆಯ ಪರಿಮಳಂದ ಸಂಭ್ರಾಂತರಾದ ಭೃಂಗಾಗನೆಯೋರ ಗೀತೆ, ಸಾಂದ್ರತೆಯ ಪಡದ ನಿನ್ನ ವೀಣೆಯ ಮಂದ್ರ ತಂತ್ರಿಯ ಸ್ವರದ ಹಾಂಗೆ ಇದ್ದು, ಮಧುರ ಸ್ವರ ಇಪ್ಪೋಳೇ, ಪ್ರಕಾಶಮಾನಳಾದೋಳೇ!
ವೀಣೆಯ ನುಡಿಸುವ ಪ್ರಕ್ರಿಯೆಂದ ತೂಗಾಡುತ್ತಾ ಇಪ್ಪ ತಾಟಂಕ ಭೂಷಣ ವಿಶೇಷಂದ ಕೂಡಿದೋಳೇ, ಸಿದ್ಧರಿಂದ ಸನ್ಮಾನ ಪಡದೋಳೇ!!!
ದಿವ್ಯ ಆಸವದ ಮದಂದ ಅತಿಶಯವಾದ ಶೃಂಗಾರಭಾವಂದ ಅತ್ತಿತ್ತೆ ಹೊರಳುತ್ತಾ ಇಪ್ಪ ಕಣ್ಣುಗಳ ಕಾಂತಿಂದ ತಿರಸ್ಕರಿಸಿದ, ಕೆಮಿಲಿ ಕೆನ್ನೈದಿಲೆ ಹೊಂದಿದೋಳೇ, ಲೋಕದ ಎಲ್ಲರ ಆಸೆಗಳ ಪೂರೈಸುವೋಳೇ, ಮುಕ್ತಿಯ ಫಲವಾಗಿ ಕೊಡುವೋಳೇ, ಬೆಗರ ಹನಿ ಹೊರ ಹೊಮ್ಮುತ್ತಾ ಇಪ್ಪ ಮೋರೆಯ ಸೊಬಗಿಂಗೆ ಹನಿಯ ಹಾಂಗೆ ಇಪ್ಪ ಮೂಗುತಿಯ ಮುತ್ತು ಹೊಂದಿದೋಳೇ, ಎಲ್ಲ ವಿಶ್ವದ ಆತ್ಮ ಸ್ವರೂಪಳೇ, ಕಾಲಿಕೆಯೇ! ಮುದ್ದಾದ ಮಂದಹಾಸಂದ ಚೆಂದದ ಮೋರೆಲಿ ಹೊಳೆತ್ತಾ ಇಪ್ಪ ಕರ್ಪೂರದ ಚೂರಿನ ಎಲೆಅಡಕ್ಕೆ ಹಾಕಲೆ ಎತ್ತಿ ಹಿಡ್ಕೊಂದ ಕೈ ಇಪ್ಪೋಳೇ, ಜ್ಞಾನ ಮುದ್ರೆಯ ಧರಿಸಿಪ್ಪೋಳೇ, ಎಲ್ಲ ಸಂಪತ್ತಿನ ಉಂಟುಮಾಡುವೋಳೇ, ಪದ್ಮದ ಹಾಂಗೆ ಪ್ರಕಾಶ ಇಪ್ಪ ಕೈಯ್ಯೋಳೇ! ಕುಂದಕುಸುಮಂಗಳ ಕಾಂತಿಂದ ಹೊಳೆತ್ತಾ ಇಪ್ಪ ದಂತಪಂಕ್ತಿಯ ನಿರ್ಮಲ ಪ್ರಭಾತರಂಗದ ನಸುನೆಗೆಯಂದ ಕೂಡಿದ ಕೆಂದುಟಿಯೋಳೇ, ಸುಂದರ ವೀಣೆಯ ಹಿಡುದೋಳೇ, ಸುಂದರ ತೊಡಿ ಇಪ್ಪೋಳೇ
|| 
)
ಸುಲಲಿತನವಯೌವನಾರಂಭಚಂದ್ರೋದಯೋದ್ವೇಲ ಲಾವಣ್ಯದುಗ್ಧಾರ್ಣವಾವಿರ್ಭವತ್ಕಂಬುಬಿಂಬೋಕಭೃತ್ಕಂಧರೇ, ಸತ್ಕಲಾಮಂದಿರೇ ಮಂಥರೇ|
ದಿವ್ಯರತ್ನಪ್ರಭಾಬಂಧು ರಚ್ಛನ್ನ ಹಾರಾದಿ ಭೂಷಾಸಮುದ್ದ್ಯೋತಮಾನಾನವದ್ಯಾಂಶು ಶೋಭೇ, ಶುಭೇ |
ರತ್ನಕೇಯೂರರಶ್ಮಿಚ್ಛಟಾಪಲ್ಲವ ಪ್ರೋಲ್ಲಸದ್ದೋರ್ಲತಾರಾಜಿತೇ ಯೋಗಿ ಭಿಃ ಪೂಜಿತೇ |
ವಿಶ್ವದಿಙ್ಮಂಡಲವ್ಯಾಪಿಮಾಣಿಕ್ಯತೇ ಜಃಸ್ಫುರತ್ಕಂಕಣಾಲಂಕೃತೇ ವಿಭ್ರಮಾಲಂಕೃತೇಸಾಧುರ್ಭಿ ಸತ್ಕೃತೇ |
ವಾಸರಾರಂಭ ವೇಲಾಸಮುಜ್ಜೃಂಭಮಾಣಾರವಿಂದ ಪ್ರತಿ ದ್ವಂದ್ವಿ ಪಾಣಿದ್ವಯೇಸಂತ ನೋ ದ್ಯದ್ದಯೇ ಅದ್ವಯೇ |
ದಿವ್ಯರತ್ನೋರ್ಮಿಕಾದೀಧಿತಿಸ್ತೋಮಸಂಧ್ಯಾಯಮಾನಾಂಗುಲೀವಲ್ಲವೋದ್ಯನ್ನಖೇಂದುಪ್ರಭಾಮಂಡಲೇ ಸನ್ನುತಾಖಂಡಲೇ ಚಿತ್ಪ್ರಭಾಮಂಡಲೇ ಪ್ರೋಲ್ಲಸತ್ಕುಂಡಲೇ |
ತಾರಕಾರಾಜಿನೀಕಾಶ ಹಾರಾವಲೀಸ್ಮೇರಚಾರುಸ್ತನಾಭೋಗಭಾರಾನಮನ್ಮಧ್ಯವಲ್ಲೀವಲಿಚ್ಛೇದವೀಚೀಸಮು ಲ್ಲಾ ಸ ಸಂದರ್ಶಿತಾಕಾರ ಸೌಂದರ್ಯರತ್ನಾಕರೇ ವಲ್ಲಕೀಭೃತ್ಕರೇ ಕಿಂಕರಶ್ರೀಕರೇ |
ಹೇಮ ಕುಂಭೋಪಮೋತ್ತುಂಗವಕ್ಷೋಜಭಾರಾವನಮ್ರೇ ತ್ರಿಲೋಕಾವನಮ್ರೇ |
ಲಸದ್ವೃತ್ತಗಂಭೀರನಾಭೀಸರಸ್ತೀರಶೈವಾಲಶಂಕಾಕರಶ್ಯಾಮರೋಮಾವಲೀಭೂಷಣೇ ಮಂಜುಸಂಭಾಷಣೇ |
ಚಾರುಶಿಂಜತ್ಕಟೀಸೂತ್ರನಿರ್ಭರ್ತ್ಸಿತಾನಂಗಲೀಲಾಧನುಃ ಶಿಂಜಿನೀಡಂಬರೇ ದಿವ್ಯರತ್ನಾಂಬರೇ |
ಪದ್ಮರಾಗೋಲ್ಲಸನ್ಮೇಖಲಾ ಭಾಸ್ವರಶ್ರೋಣಿಶೋಭಾಜಿತ ಸ್ವರ್ಣಭೂಭೃತ್ತಲೇ ಚಂದ್ರಿಕಾಶೀತಲೇ ||2||
(ಚಂದ್ರೋದಯಂದ ಉಕ್ಕಿಹರಿವ ಲಾವಣ್ಯ ಹೇಳ್ತ ಹಾಂಗೆ ಇಪ್ಪ ಕ್ಷೀರಸಾಗರಂದ ಹೆರಬಂದ ಶಂಖವನ್ನೇ ತಿರಸ್ಕರಿಸುವಂಥಾ ಕಂಠವ ಹೊಂದಿ ಚೆಂದದ ಯೌವನ ಆರಂಭ ಆದೋಳೇ, ಸತ್ಕಲೆಗಳ ಮಂದಿರಳೇ, ಸುಂದರಿಯೇ!
ದಿವ್ಯ ರತ್ನಂಗಳ ಹೊಳಪ್ಪಿಂದ ದಟ್ಟವಾದ ಹಾರವೇ ಮೊದಲಾದ ಆಭರಣಂಗಳಿಂದ ಹೊಮ್ಮುತ್ತಿಪ್ಪ ಶ್ರೇಷ್ಠ ಬೆಳಕಿಂದ ರಾಜಿಸುತ್ತಿಪ್ಪೋಳೇ, ಶುಭತಪ್ಪೋಳೇ! ರತ್ನದ ಭುಜಾಭರಣಂಗಳ ಕಾಂತಿ ಸಮೂಹ ಹೇಳ್ತ ಚಿಗುರುಗಳ ಹೊಂದಿದ ಬಳ್ಳಿಯ ಹಾಂಗೆ ಇಪ್ಪ ತೋಳುಗಳ ಹೊಂದಿದೋಳೇ,
ಯೋಗಿಗಳಿಂದ ಪೂಜೆ ಪಡವೋಳೇ!
ಎಲ್ಲ ದಿಕ್ಚಕ್ರಂಗಳಲ್ಲಿಯೂ ಹರಡಿಪ್ಪ ಮಾಣಿಕ್ಯಂಗಳ ಕಾಂತಿಂದ ಮೆರೆತ್ತಾ ಇಪ್ಪ ಕಡಗಂಗಳಿಂದ ಅಲಂಕೃತಳೇ, ಇಂದ್ರಂದ ಸಮಸ್ಕರಿಸಲ್ಪಡುವೋಳೇ, ವಿಭ್ರಮಂದ ಅಲಂಕಾರವ ಪಡವೋಳೇ, ಸಾಧಕರಿಂದ ಸತ್ಕಾರವ ಹೊಂದುವೋಳೇ!
ಹೊತ್ತು ಮೂಡುವ ಸಮಯಲ್ಲಿ ಅರಳುತ್ತಾ ಇಪ್ಪ ತಾವರೆಯ ಸಮ ಕೈ ಇಪ್ಪೋಳೇ, ಯಾವಾಗಲೂ ದಯೆಯ ತೋರುವೋಳೇ! ಅದ್ವಯಳೇ!
ದಿವ್ಯವಾದ ರತ್ನದ ಉಂಗುರಂಗಳ ಕಾಂತಿಲಿ, ಹೊತ್ತಪ್ಪಗಾಣ ಹೊತ್ತಿಂಗೆ ಮೂಡುವ ಚಂದ್ರನ ಹಾಂಗೆ ಇಪ್ಪ ಉಗುರಿಪ್ಪೋಳೇ, ಇಂದ್ರಂದ ನಮಸ್ಕರಿಸಲ್ಪಟ್ಟೋಳೇ, ಚಿತ್ಪ್ರಭೆಯ ಮಂಡಲಸ್ವರೂಪಳೇ, ಹೊಳವ ಕುಂಡಲ ಹೊಂದಿದೋಳೇ!
ನಕ್ಷತ್ರದ ಸಾಲುಗಳೋ ಹೇಳ್ತ ಹಾಂಗೆ ಇಪ್ಪ ಹಾರಂಗಳಿಂದ ಬಳುಕುತ್ತಾ ಇಪ್ಪ ನಡುವಿನ ಬಳ್ಳಿಯ ಅಲೆಗಳ ಹಾಂಗೆ ಇಪ್ಪ ಸೌಂದರ್ಯ ಸಾಗರ ಹೊಂದಿದೋಳೇ!
ಕೈಲಿ ವೀಣೆಯ ಧರಿಸಿದೋಳೇ, ಸೇವಕರಿಂಗೆ ಮುಕ್ತಿಯ ಕೊಡುವೋಳೇ, ಸುಂದರ ಶರೀರಳೇ, ಮೂರು ಲೋಕಂಗಳನ್ನೂ ನಮ್ರವಾಗಿ ಮಾಡುವೋಳೇ!
ನಾಭೀ ಎಂಬ ಸರೋವರದ ತೀರದ ಪಾಚಿಯ ಹಾಂಗೆ ಇಪ್ಪ ನೀಲ ರೋಮಾವಳಿಗಳಿಂದ ಅಲಂಕೃತಳೇ, ಮಧುರವಾಗಿ ಮಾತಾಡುವೋಳೇ!
ದಿವ್ಯ ರತ್ನದ ಉಡುಗೆ ಹೊಂದಿದೋಳೇ!ಪದ್ಮರಾಗಂಗಳ ಪ್ರಭೆಂದ ಹೊಳೆತ್ತಾ ಇಪ್ಪ ಮೇಖಲೆಗಳಿಂದ ಬೆಳಗುತ್ತಾ ಇಪ್ಪ ಶ್ರೇಣಿಯ ಕಾಂತಿಂದ ಮೇರುಪರ್ವತದ ಸಾನುಪ್ರದೇಶವ ತಿರಸ್ಕರಿಸುವ ಹಾಂಗೆ ಮಾಡುವೋಳೇ, ಬೆಳದಿಂಗಳಿನ ಹಾಂಗೆ ತಂಪಿಪ್ಪೋಳೇ!||
) 
ವಿಕಸಿತನವಕಿಂಶುಕಾತಾಮ್ರದಿವ್ಯಾಂಶುಕಚ್ಛನ್ನಚಾರು ಶೋಭಾಪರಾಭೂತಸಿಂದೂರಶೋಣಾಯಮಾನೇಂದ್ರಮಾತಂಗಹಸ್ತಾರ್ಗಲೇವೈಭವಾನರ್ಗಲೇ, ಶ್ಯಾಮಲೇ |
ಕೋಮಲಸ್ನಿಗ್ಧನೀಲೋತ್ಪಲೋ ತ್ಭಾಸಿತಾನಂಗತೂಣೀರಶಂಕಾಕರೋದಾರ ಜಂಘಾಲತೇ, ಚಾರುಲೀಲಾಗತೇ |
ನಮ್ರದಿಕ್ಪಾಲಸೀಮಂತಿನೀಕುಂತಲ ಸ್ನಿಗ್ಧ ನೀಲಪ್ರಭಾಪುಂಜಸಂಜಾತ ದುರ್ವಾಂಕುರಾ ಶಂಕಸಾರಂಗಸಂಯೋಗರಿಂಖನ್ನಖೇಂದುಜ್ವಲೇ, ಪ್ರೋಜ್ವಲೇ ನಿರ್ಮಲೇ |
ಪ್ರಹ್ವದೇವೇಶ ಲಕ್ಷ್ಮೀಶ ಭೂತೇಶ ದೈತ್ಯೇಶ ಯಕ್ಷೇಶ ವಾಗೀಶ ಕೀನಾಶ ತೋಯೇಶ ವಾಯ್ವುಗ್ನೀಕೋಟೀರಮಾಣಿಕ್ಯಸಂಘ್ರುಷ್ಟ ಬಾಲಾತಪೋದ್ಧಾಮ ಲಾಕ್ಷಾರಸಾರುಣ್ಯ ತಾರುಣ್ಯ ಲಕ್ಷ್ಮೀ ಗೃಹೀತಾಂಘ್ರೀ ಪದ್ಮೇ, ಸುಪದ್ಮೇ ಉಮೇ||3 ||
(ಅರಳಿದ ಹೊಸ ಮುತ್ತುಗದ ಹೂಗಿನ ಕೆಂಪು ಬಣ್ಣದ ಪೀತಾಂಬರ ಸುತ್ತಿ, ಸಿಂದೂರಾದಿಂದ ಅಲಂಕಾರ ಮಾಡಿದ ಇಂದ್ರನ ಐರಾವತದ ಸೊಂಡಿಲಿನ ಸೊಬಗಿನ ಮೀರಿಸಿದೋಳೇ, ಅನರ್ಗಲವಾದ ವಿಭವಂದ ಕೂಡಿದೋಳೇ, ಶ್ಯಾಮಲೇ!
ಕೋಮಲವಾದ ಹೊಳೆತ್ತಾ ಇಪ್ಪ ನೈದಿಲೆಗಳಿಂದ ಮನ್ಮಥನ ಬತ್ತಳಿಕೆಯ ಹಾಂಗೆ ಇಪ್ಪ ಶರೀರದ ಭಾಗ ಹೊಂದಿದೋಳೇ, ಚೆಂದದ ಲೀಲೆಂದ ಕೂಡಿದ ನಡಿಗೆ ಇಪ್ಪೋಳೇ!
ನಮಸ್ಕಾರ ಮಾಡುತ್ತಾ ಇಪ್ಪ ದಿಕ್ಪಾಲ ಕಾಂತೆಯರ ಕುಂತಲದ ಹೊಳೆವ ನೀಲಿಮೆಯ ಗರಿಕೆಯ ಭ್ರಮೆಂದ ಬಂದ ಸಾರಂಗದ ಒಟ್ಟಿಂಗೆ ಇಪ್ಪ ಮೃಗಾಂಕನ ಹಾಂಗೆ ಇಪ್ಪ ಕಾಲ್ಬೆರಳ ಉಗುರಿನ ಕಾಂತಿ ಇಪ್ಪೋಳೇ, ಪ್ರೋಜ್ವಲಳೇ!
ನಿರ್ಮಲೇ!
ಬಗ್ಗಿ ಇಪ್ಪ ಇಂದ್ರ, ವಿಷ್ಣು, ರುದ್ರ, ವರುಣ, ಬ್ರಹ್ಮ, ಯಮ, ಕುಬೇರ, ವಾಯು, ಅಗ್ನಿಗಳ ಕಿರೀಟಂಗಳ ಮಾಣಿಕ್ಯ ಪ್ರಭೆಂದ ಲಾಕ್ಷಾರಸವ ಬಳುದ ಹಾಂಗೆ ಕಾಂಬ ಯೌವನ ಸಿರಿಂದ ಕೂಡಿದ ಅಡಿದಾವರೆ ಇಪ್ಪೋಳೇ!, ಸುಪದ್ಮೇ!
ಉಮೇ! 
||
 )
ಸುರುಚಿರನವರತ್ನಪೀಠಸ್ಥಿತೇ, ಸುಸ್ಥಿತೇ |
ರತ್ನಸಿಂಹಾಸನೇ ರತ್ನಪದ್ಮಾಸನೇ, ಶಂಖಪದ್ಮದ್ವಯೋಪಾಶ್ರಿತೇ |
ತತ್ರ ವಿಘ್ನೇಶದೂರ್ವಾವಟುಕ್ಷೇತ್ರ ಪಾಲೈರ್ಯುತೇ ಮತ್ತಮಾತಂಗಕನ್ಯಾ ಸಮೂಹಾನ್ವಿತೇ, ಮಂಜುಲಾಮೇನಕಾದ್ಯಂಗನಾ ಮಾನಿತೇ, ಭೈರವೈರಷ್ಟಭಿರ್ವೇಷ್ಟಿತೇ |
ದೇವಿ ವಾವಾದಿಭಿಃ ಸಂಶ್ರಿತೆ ಶಕ್ತಿಭಿಃಸೇವಿತೇ ಧಾತ್ರಿಲಕ್ಷ್ಮ್ಯಾದಿ ಶಕ್ತ್ಯಷ್ಟಕೈಃ ಸಂಯುತೇ |
ಮಾತೃಕಾಮಂಡಲೈರ್ಮಂಡಿತೇ,  ಭೈರವೀ ಸಮೃತೇ |
ಯಕ್ಷ ಗಂಧರ್ವ ಸಿದ್ಧಾಂಗನಾ ಮಂಡಲೈರರ್ಚಿತೇ |
ಪಂಚಬಾಣಾತ್ಮಿಕೇ ಪಂಚಬಾಣೇನ ರತ್ಯಾಚ ಸಂಭಾವಿತೇ |
ಪ್ರೀತಿಭಾಜಾ ವಸಂತೇನ ಚಾನಂದಿತೇ ಭಕ್ತಿಭಾಜಾಂ ಪರಂ ಶ್ರೇಯಸೇ ಕಲ್ಪಸೇ |
ಯೋಗಿನಾಂ ಮಾನಸೇ ದ್ಯೋತಸೇ ಛಂದಸಾಮೋಜಸಾ ಭ್ರಾಜಸೇ |
ಗೀತವಿದ್ಯಾವಿನೋದಾತಿ ತೃಷ್ಣೇನ ಕೃಷ್ಣೇನ ಸಂಪೂಜ್ಯಸೇ |
ಭಕ್ತಿ ಮಚ್ಚೇತಸಾ ವೇದಸಾ ಸ್ತೂಯಸೇ| ವಿಶ್ವ ಹೃದ್ಯೇನವಾದ್ಯೇನ ವಿದ್ಯಾಧರೈರ್ಗೀಯಸೇ ||4||
(ಚೆಂದದ ನವರತ್ನ ಪೀಠಲ್ಲಿ ಕೂದಿಪ್ಪೋಳೇ, ಸುಖವಾಗಿ ಕೂದಿಪ್ಪ ರತ್ನ ಪದ್ಮಾಸನಳಾಗಿಪ್ಪೋಳೇ, ರತ್ನ ಸಿಂಹಾಸನ ಇಪ್ಪೋಳೇ, ಶಂಖ, ಪದ್ಮ ಹೇಳ್ತ ಎರಡು ನಿಧಿಗಳಿಂದ ಸೇವಿಸಲ್ಪಡುವೋಳೇ!
ಅಲ್ಲಿ, ವಿಘ್ನೇಶ, ದೂರ್ವಾ, ಕ್ಷೇತ್ರಪಾಲರುಗಳಿಂದ ಕೂಡಿದೋಳೇ, ಮದಿಸಿದ ಮಾತಂಗಕನ್ಯೆಯರ ಗುಂಪಿಂದ ಕೂಡಿದೋಳೇ, ಮಂಜುಲಾ ಮೇನಕಾದಿ ಅಪ್ಸರ ಸ್ತ್ರೀಯರಿಂದ ಪೂಜಿತಳೇ, ಅಷ್ಟಭೈರವರಿಂದ ಸುತ್ತುವರಿಯಲ್ಪಟ್ಟೋಳೇ!
ವಾಮಾ ಮೊದಲಾದ ಶಕ್ತಿಗಳಿಂದ ಸೇವಿಸಲ್ಪಡುವೋಳೇ, ದೇವಿ, ಲಕ್ಷ್ಮಿಯೇ ಮುಂತಾಗಿ ಎಂಟು ಜೆನ ಶಕ್ತಿಯರಿಂದ ಕೂಡಿದೋಳೇ, ಧಾತ್ರೈ!
ಮಾತೃಕೆಯರಿಂದ ಮಂಡಲದ ಅಲಂಕಾರವ ಪಡದೋಳೇ! ಮನ್ಮಥನ ಆತ್ಮವಾದೋಳೇ, ರತಿ ಮನ್ಮಥರಿಂದ ಪೂಜೆ ಪಡಕ್ಕೊಂಡೋಳೇ!
ಪ್ರೀತಿಪಾತ್ರನಾದ ವಸಂತಂದ ಆನಂದವ ಹೊಂದುವೋಳೇ, ಭಕ್ತಿ ಇಪ್ಪೋರಿಂಗೆ ಪರಮ ಶ್ರೇಯಸ್ಸಿನ ಕೊಡುವೋಳೇ! ಯೋಗಿಗಳ ಮನಲ್ಲಿ ಕಾಣುತ್ತೆ, ವೇದಂಗಳ ತೇಜಸ್ಸಿಲಿ ಬೆಳಗುತ್ತೆ.
ಭಕ್ತಿಂದ ಕೂಡಿದ ಮನಸ್ಸಿಪ್ಪ ಬ್ರಹ್ಮಂದ ಸ್ತೋತ್ರ ಮಾಡಿಸಿಗೊಂಡಿದೆ, ವಿಶ್ವಮನೋಹರವಾದ ವಾದ್ಯಂಗಳ ಒಟ್ಟಿಂಗೆ ವಿದ್ಯಾಧರರು ಹಾಡುತ್ತಾ ಇದ್ದವು.
||
 )
ಶ್ರವಣಹರಣದಕ್ಷಿಣಾಕ್ವಾಣನಾ ವೀಣಯಾ ಕಿನ್ನರೈರ್ಗೀಯಸೇ |
ಯಕ್ಷ ಗಂಧರ್ವಸಿದ್ಧಾಂಗನಾಮಂಡಲೈರರ್ಚ್ಯಸೇ |
ಸರ್ವಸೌಭಾಗ್ಯ ವಾಂಛಾವತೀ ಭಿರ್ವದೂಭಿಃ ಸುರಾಣಾಂ ಸಮಾರಾಧ್ಯಸೇ |
ಸರ್ವವಿದ್ಯಾವಿಶೇಷಾತ್ಮಕಂ ಚಾಟುಗಾಥಾ ಸಮುಚ್ಚಾಟಣಂ ಕಂಠ ಮೂಲೋಲ್ಲಸದ್ವರ್ಣರಾಜಿತ್ರಯಂ ಕೋಮಲಂ ಶ್ಯಾಮಲೋದಾರಪಕ್ಷದ್ವಯಂ ತುಂಡಶೋಭಾದಿತಿದೂರೀಭವತ್ಕಿಂಶುಕಂ ತಂ ಶುಕಂ ಲಾಲಯಂತೀ ಪರಿಕ್ರೀಡಸೇ |
ಪಾಣಿಪದ್ಮದ್ವಯೇನ ಅಕ್ಷಮಾಲಾಮಪಿ ಸ್ಫಾಟಿಕೀಂ ಜ್ಞಾನಸಾರಾತ್ಮಕಂ ಪುಸ್ತಕಂ ಚಾಂಕುಶಂಪಾಶಮಾಬಿಭ್ರತೀ ಯೇನ ಸಂಚಿಂತ್ಯಸೇ, ತಸ್ಯ ವಕ್ತ್ರಾಂತರಾದ್ಗದ್ಯಪದ್ಯಾತ್ಮಿಕಾ ಭಾರತೀ ನಿಸ್ಸರೇತ್ |
ಯೇನ ವಾ ಯಾವಕಾಭಾಕೃತಿರ್ಭಾವ್ಯಸೇ, ತಸ್ಯ ವಶ್ಯಾ ಭವಂತಿ ಸ್ತ್ರಿಯಃ ಪೂರುಷಾಃ |
ಯೇನ ವಾ ಶಾತಕುಂಭದ್ಯುತಿರ್ಭಾವ್ಯಸೇಸೋsಪಿ ಲಕ್ಷ್ಮೀಸಹಸ್ರೈಃ ಪರಿಕ್ರೀಡತೇ |
ಕಿಂ ನ ಸಿದ್ಧ್ಯೇದ್ವಪುಃ ಶ್ಯಾಮಲಂ ಕೋಮಲಂ ಚಂದ್ರಚೂಡಾನ್ವಿತಂ ತಾವಕಂ ಧ್ಯಾಯತಃ |
ತಸ್ಯ ಲೀಲಾಸರೋವಾರಿಧಿಸ್ತಸ್ಯ ಕೇಲೀವನಂ ನಂದನಂ, ತಸ್ಯ ಭದ್ರಾಸನಂ ಭೂತಲಂ, ತಸ್ಯ ಗೀರ್ದೇವತಾ ಕಿಂಕರೀ, ತಸ್ಯ ಚಾಜ್ಞಾಕರೀ ಶ್ರೀಃ ಸ್ವಯಮ್|
ಸರ್ವ ತೀರ್ಥಾತ್ಮಿಕೇ -
ಸರ್ವ ಮಂತ್ರಾತ್ಮಿಕೇ -
ಸರ್ವ ತಂತ್ರಾತ್ಮಿಕೇ -
ಸರ್ವ ಯಂತ್ರಾತ್ಮಿಕೇ -
ಸರ್ವ ಪೀಠಾತ್ಮಿಕೇ -
ಸರ್ವ ತತ್ವಾತ್ಮಿಕೇ -
ಸರ್ವ ಶಕ್ತ್ಯಾತ್ಮಿಕೇ -
ಸರ್ವ ವಿದ್ಯಾತ್ಮಿಕೇ -
ಸರ್ವ ಯೋಗಾತ್ಮಿಕೇ -
ಸರ್ವ ನಾದಾತ್ಮಿಕೇ -
ಸರ್ವ ಶಬ್ಧಾತ್ಮಿಕೇ -
ಸರ್ವ ವಿಶ್ವಾತ್ಮಿಕೇ -
ಸರ್ವ ದೀಕ್ಷಾತ್ಮಿಕೇ -
ಸರ್ವ ಸರ್ವಾತ್ಮಿಕೇ -
ಸರ್ವಗೇ ಹೇ ಜಗನ್ಮಾತೃಕೇ -
ಪಾಹಿ ಮಾಂ, ಪಾಹಿ ಮಾಂ, ಪಾಹಿ ಮಾಂ
ದೇವಿ ತುಭ್ಯಂ ನಮೋ,
ದೇವಿ ತುಭ್ಯಂ ನಮೋ,
ದೇವಿ ತುಭ್ಯಂ ನಮಃ || 5 ||
(ಕೇಳಲೆ ಇಂಪಾಗಿಪ್ಪ ಧ್ವನಿ ಇಪ್ಪ ವೀಣೆಯ ಒಟ್ಟಿಂಗೆ ಕಿನ್ನರಂಗ ಗಾನ ಮಾಡುತ್ತಾ ಇದ್ದವು.
ಯಕ್ಷ ಗಂಧರ್ವ ಸಿದ್ಧವನಿತೆಯರ ಮಂಡಲಂಗ ನಿನ್ನ ಪೂಜೆ ಮಾಡ್ತಾ ಇದ್ದು. ಎಲ್ಲಾ ಸಿರಿ ಸೊಬಗಿನ ಆಶಯಲ್ಲಿ ದೇವತಾ ಸ್ತ್ರೀಯರು ಆರಾಧಿಸುತ್ತಾ ಇದ್ದವು.
ಎಲ್ಲ ವಿದ್ಯಾವಿಶೇಷಣಂಗಳ ರೂಪ ಆದ, ಯುಕ್ತವಾಗಿ ಆಶುಕವಿತೆ ಮಾಡುವ, ಕೊರಳಿನ ಬುಡಲ್ಲಿ ಮೂರು ಬಣ್ಣಂಗಳಿಂದ ರಂಜಿತ ಆದ, ಕೋಮಲವಾದ ಪಚ್ಚೆ ಬಣ್ಣದ ಚೆಂದದ ರೆಕ್ಕೆಗಳ ಹೊಂದಿದ, ಕೊಕ್ಕಿನ ಕಾಂತಿಂದ ಮುತ್ತುಗದ ಹೂಗಿನನ್ನೇ ತಿರಸ್ಕಾರ ಮಾಡುತ್ತಾ ಇಪ್ಪ ಆ ಗಿಳಿಯ ಲಾಲಿಸಿಗೊಂಡು ಆಡುತ್ತಾ ಇದ್ದೆ. ಕರಕಮಲಂಗಳಲ್ಲಿ ಸ್ಫಟಿಕದ ಜಪಮಾಲೆಯನ್ನೂ, ಜ್ಞಾನ ಸಾರ ರೂಪವಾದ ಪುಸ್ತಕವನ್ನೂ, ಮತ್ತೆರಡು ಕೈಲಿ ಪಾಶಾಂಕುಶಂಗಳನ್ನೂ ಧರಿಸಿ ಇಪ್ಪ ನಿನ್ನ ರೂಪರಾಶಿಯ ಆರು ಧ್ಯಾನ ಮಾಡ್ತವೋ ಅವನ ವದನಂದ ಗದ್ಯಪದ್ಯಂಗಳ ಒಳಗೊಂಡ ಕವಿತೆ ಹರಿದು ಬತ್ತು.
ಅರಗಿನ ಹಾಂಗೆ ಕೆಂಪು ಬಣ್ಣ ಇಪ್ಪೋಳು ಹೇಳಿ ನಿನ್ನ ಆರು ಧ್ಯಾನಿಸುತ್ತವೋ ಅವಂಗೆ ಸ್ತ್ರೀ ಪುರುಷ ಎಲ್ಲರೂ ವಶವರ್ತಿಗೋ ಆವುತ್ತವು.
ಆರು ಹೊನ್ನಿನ ಬಣ್ಣದೋಳು ಹೇಳಿ ಧ್ಯಾನಿಸುತ್ತನೋ ಅವಂಗೆ ಸಾವಿರ ಸ್ತ್ರೀಯರ ಸಂಗ ದೊರೆತ್ತು.
ಚಂದ್ರನ ಮುಡುದಿಪ್ಪ ಕೋಮಲವೂ, ಶ್ಯಾಮಲವೂ ಆದ ನಿನ್ನ ಮೂರ್ತಿಯ ಧ್ಯಾನಿಸುವವಂಗೆ ಎಂತ ಸಿಕ್ಕದ್ದೆ ಇಕು?
ಸಾಗರ ಅವನ ಕ್ರೀಡಾ ಸರಸ್ಸು ಆವುತ್ತು. ನಂದನ ಅವನ ವಿಹಾರೋದ್ಯಾನ, ಭೂಮಂಡಲವೇ ಅವನ ಭದ್ರಾಸನ. ವಾಗ್ದೇವಿ ಅವನ ಸೇವಕಳಾವುತ್ತು, ಲಕ್ಷ್ಮೀ ತಾನೇ ಅವನ ಆಜ್ಞಾಧಾರಕೆ ಆವುತ್ತು. ಎಲ್ಲ ತೀರ್ಥಸ್ವರೂಪಳೇ, ಎಲ್ಲ ಮಂತ್ರಂಗಳ ಮೂರ್ತಿಯೇ, ಎಲ್ಲ ತಂತ್ರಂಗಳ ರೂಪಳೇ, ಎಲ್ಲ ಯಂತ್ರಂಗಳನ್ನೂ ಮೂರ್ತಿಯಾಗಿ ಇಪ್ಪೋಳೇ, ಎಲ್ಲ ಪೀಠಂಗಳ ಅಧಿಷ್ಠಾತ್ರಿ, ಎಲ್ಲ ತತ್ತ್ವಂಗಳ ಮೂಲವೇ, ಎಲ್ಲ ಶಕ್ತಿಯ ಸ್ವರೂಪಳೇ, ಎಲ್ಲ ಯೋಗಂಗಳ, ಎಲ್ಲ ನಾದಂಗಳ, ಎಲ್ಲ ಶಬ್ಧಂಗಳ, ಎಲ್ಲ ವಿಶ್ವದ, ಎಲ್ಲದರ ಆತ್ಮವಾಗಿಪ್ಪೋಳೇ, ಎಲ್ಲೆಡೆಲಿಯೂ ಇಪ್ಪೋಳೇ…
ಪಾಹಿಮಾಂ ದೇವಿ.. ನಿನಗೆ ನಮಸ್ಕಾರ…
ದೇವಿ ತುಭ್ಯಂ ನಮೋ ದೇವಿ ತುಭ್ಯಂ ನಮಃ ||
)
ಶ್ಯಾಮಲಾ ದಂಡಕಂ ಸಂಪೂರ್ಣಮ್ |




ಸೋಮವಾರ, ಅಕ್ಟೋಬರ್ 7, 2013

ಶಂಜಪ್ಪಾಗಣ್ ಹೊತ್ತು,,, ರಸ್ತೆ ಮೇಲೆ ಒಂದೋ ಎರಡೊ ಕಾರು ಸ್ಕೂಟರು ಓಡಾದ್ತಾ ಇದ್ದು...