प्रज्वालितॊ ज्ञानमयप्रदीपः

ಸೋಮವಾರ, ಅಕ್ಟೋಬರ್ 7, 2013

ಸಪ್ತಶತೀ ಪ್ರಥಮೋಧ್ಯಾಯಃ

ಸಪ್ತಶತೀಪ್ರಥಮಚರಿತಮ್|
ಪ್ರಥಮಚರಿತಸ್ಯ ಬ್ರಹ್ಮಾ ಋಷಿಃ |
ಮಹಾಕಾಲೀ ದೇವತಾ|
ಗಾಯತ್ರೀ ಛಂದಃ|
ನಂದಾ ಶಕ್ತಿಃ|
ರಕ್ತದಂತಿಕಾ ಬೀಜಮ್|
ಅಗ್ನಿಸ್ತತ್ವಮ್|
ಋಗ್ವೇದಃ ಸ್ವರೂಪಮ್|
ಶ್ರೀ ಮಹಾಕಾಲೀ ಪ್ರೀತ್ಯರ್ಥಂ ಧರ್ಮಾರ್ಥಂ ಜಪೇ ವಿನಿಯೋಗಃ|
...
ಖಡ್ಗಂ ಚಕ್ರಗದೇಷುಚಾಪಪರಿಘಾನ್ ಶೂಲಂ ಭುಶುಂಡೀಂ ಶಿರಃ-
ಶಂಖಂ ಸಂದಧತೀಂ ಕರೈಸ್ತ್ರಿನಯನಾಂ ಸರ್ವಾಂಗಭೂಷಾವೃತಾಮ್|
ನೀಲಾಶ್ಮದುತಿಪಾದದಶಕಾಂ ಸೇವೇ ಮಹಾಕಾಲಿಕಾಂ-
ಯಾಮಸ್ತೌಸ್ತ್ವಪಿತೇ ಹರೌ ಕಮಲಜೋ ಹಂತುಂ ಮಧುಂ ಕೈಟಭಮ್||
ಓನ್ನಮಶ್ಚಂಡಿಕಾಯೈ|
ಓಂ ಐಂ ಮಾರ್ಕಂಡೇಯ ಉವಾಚ||೧||

ಸಾವರ್ಣಿಃ ಸೂರ್ಯ ತನಯೋ ಯೋ ಮನುಃ ಕಥ್ಯತೇಷ್ಟಮಃ|
ನಿಶಾಮಯ ತದುತ್ಪತ್ತಿಂ ವಿಸ್ತರಾದ್ಗದತೋ ಮಮ||೨||
...
ಮಹಾಮಾಯಾನುಭಾವೇನ ಯಥಾ ಮನ್ವಂತರಾಧಿಪಃ|
ಸ ಬಭೂವ ಮಹಾಭಾಗಃ ಸಾವರ್ಣಿಸ್ತನಯೋ ರವೇಃ||೩||
....
ಸ್ವಾರೋಚಿಷೇಂತರೇ ಪೂರ್ವಂ ಚೈತ್ರವಂಶಸಮುದ್ಭವಃ|
ಸುರಥೋ ನಾಮ ರಾಜಾಭೂತ್ಸಮಸ್ತೇ ಕ್ಷಿತಿಮಂಡಲೇ||೪||
...
ತಸ್ಯ ಪಾಲಯತಃ ಸಮ್ಯಕ್ಪ್ರಜಾಃ ಪುತ್ರಾನಿ ವೌರಸಾನ್|
ಬಭೂವುಃ ಶತ್ರವೋ ಭೂಪಾಃ ಕೋಲಾವಿಧ್ವಂಸಿನಸ್ತದಾ||೫||
...
ತಸ್ಯ ತೈರಭವದ್ಯುದ್ಧಮತಿಪ್ರಬಲದಂಡಿನಃ|
ನ್ಯೂನೈರಪಿ ಸ ತೈರ್ಯುದ್ಧೇ ಕೋಲಾವಿಧ್ವಂಸಿಭಿರ್ಜಿತಃ||೬||
...
ತತಃ ಸ್ವಪುರಮಾಯಾತೋ ನಿಜದೇಶಾಧಿಪೋಭವತ್|
ಆಕ್ರಾಂತಃ ಸ ಮಹಾಭಾಗಸ್ತೈಸ್ತದಾ ಪ್ರಬಲಾರಿಭಿಃ||೭||
..
ಅಮಾತ್ಯೈರ್ಬಲಿಭಿರ್ದುಷ್ಟೈದುರ್ಬಲಸ್ಯ ದುರಾತ್ಮಭಿಃ|
ಕೋಶೋ ಬಲಂ ಚಾಪಹೃತಂ ತತ್ರಾಪಿ ಸ್ವಪುರೇ ತತಃ||೮||
...
ತತೋ ಮೃಗಯಾವ್ಯಾಜೇನ ಹೃತಃ ಸ್ವಾಮ್ಯಃ ಸ ಭೂಪತಿಃ|
ಏಕಾಕೀ ಹಯಮಾರುಹ್ಯ ಜಗಾಮ ಗಹನಂ ವನಮ್||೯||
..
ಸ ತತ್ರಾಶ್ರಮಮದ್ರಾಕ್ಷೀದ್ದ್ವಿಜವರ್ಯಸ್ಯ ಮೇಧಸಃ|
ಪ್ರಶಾಂತಶ್ವಾಪದಾಕೀರ್ಣಂ ಮುನಿಶಿಷ್ಯೋಪಶೋಭಿತಮ್||೧೦||
..
ತಸ್ಥೌ ಕಂಚಿತ್ಸ ಕಾಲಂ ಚ ಮುನಿನಾ ತೇನ ಸತ್ಕೃತಃ|
ಇತಶ್ಚೇತಶ್ಚ ವಿಚರಂಸ್ತಸ್ಮಿನ್ಮುನಿವರಾಶ್ರಮೇ||೧೧||
....
ಸೋಚಿಂತಯತ್ತದಾ ತತ್ರ ಮಮತ್ವಾಕೃಷ್ಟಮಾನಸಃ||೧೨||
,....
ಮತ್ಪೂರ್ವೈಃ ಪಾಲಿತಂ ಪೂರ್ವಂ ಮಯಾ ಹೀನಂ ಪುರಂಹಿ ತತ್||
ಮದ್ಭೃತ್ಯೈಸ್ತೈರಸದ್ವೃತ್ತೈರ್ಧರ್ಮತಃ ಪಾಲ್ಯತೇ ನ ವಾ||೧೩||
..
ನ ಜಾನೇ ಸ ಪ್ರಧಾನೋ ಮೇ ಶೂರೋ ಹಸ್ತೀ ಸದಾಮದಃ|
ಮಮ ವೈರಿವಶಂ ಯಾತಃ ಕಾನ್ ಭೋಗಾನುಪಲಪ್ಸ್ಯತೇ||೧೪||
..
ಯೇ ಮಮಾನುಗತಾ ನಿತ್ಯಂಪ್ರಸಾದಧನಭೋಜನೈಃ|
ಅನುವೃತ್ತಿಂ ಧ್ರುವಂ ತೇದ್ಯ ಕುರ್ವಂತ್ಯನ್ಯಮಹೀಭೃತಾಮ್||೧೫||
..
ಅಸಮ್ಯಗ್ವ್ಯಯಶೀಲೈಸ್ತೈಃ ಕುರ್ವದ್ಭಿಃಸತತಂ ವ್ಯಯಮ್|
ಸಂಚಿತಃ ಸೋತಿದುಃಖೇನ ಕ್ಷಯಂ ಕೋಶೋ ಗಮಿಷ್ಯತಿ||೧೬||
...
ಏತಚ್ಚಾನ್ಯಚ್ಚ ಸತತಂ ಚಿಂತಯಾಮಾಸ ಪಾರ್ಥಿವಃ|
ತತ್ರ ವಿಪ್ರಾಶ್ರಮಾಭ್ಯಾಶೇ ವೈಶ್ಯಮೇಕಂ ದದರ್ಶ ಸಃ||೧೭||
..
ಸ ಪೃಷ್ಟಸ್ತೇನ ಕಸ್ತ್ವಂ ಭೋ ಹೇತುಶ್ಚಾಗಮನೇತ್ರ ಕಃ|
ಸಶೋಕ ಇವ ಕಸ್ಮಾತ್ವಂ ದುರ್ಮನಾ ಇವ ಲಕ್ಷ್ಯಸೇ||೧೮||
..
ಇತ್ಯಾಕರ್ಣ್ಯ ವಚಸ್ತಸ್ಯ ಭೂಪತೇಃ ಪ್ರಣಯೋದಿತಮ್|
ಪ್ರತ್ಯುವಾಚ ಸ ತಂ ವೈಶ್ಯಃ ಪ್ರಶ್ರಯಾವನತೋ ನೃಪಮ್||೧೯
..
ವೈಶ್ಯ ಉವಾಚ||೨೦||
..
ಸಮಾಧಿರ್ನಾಮ ವೈಶ್ಯೋಹಮುತ್ಪನ್ನೋ ಧನಿನಾಂ ಕುಲೇ|
ಪುತ್ರದಾರೈರ್ನಿರಸ್ತಶ್ಚ ಧನಲೋಭಾದಸಾಧುಭಿಃ||೨೧||
..
ವಿಹೀನಶ್ಚ ಧನೈರ್ದಾರೈಃ ಪುತ್ರೈರಾದಾಯ ಮೇ ಧನಮ್|
ವನಮಭ್ಯಾಗತೋ ದುಃಖೀ ನಿರಸ್ತಶ್ಚಾಪ್ತಬಂಧುಭಿಃ||೨೨||
..
ಸೋಹಂ ನವೇದ್ಮಿ ಪುತ್ರಾಣಾಂ ಕುಶಲಾಕುಶಲಾತ್ಮಿಕಾಮ್|
ಪ್ರವೃತ್ತಿಂ ಸ್ವಜನಾನಾಂ ಚ ದಾರಾಣಾಂ ಚಾತ್ರ ಸಂಸ್ಥಿತಃ||೨೩||
..
ಕಿಂ ನು ತೇಷಾಂ ಗೃಹೇ ಕ್ಷೇಮಮಕ್ಷೇಮಂ ಕಿಂ ನು ಸಾಂಪ್ರತಮ್||೨೪||
..
ಕಥಂ ತೇ ಕಿಂ ನು ಸದ್ವೃತ್ತಾ ದುರ್ವೃತ್ತಾಃ ಕಿಂ ನು ತೇ ಸುತಾಃ||೨೫||
..
ರಾಜೋವಾಚ||೨೬||
..
ಯೈರ್ನಿರಸ್ತೋ ಭವಾಂಲ್ಲುಬ್ಧೈಃ ಪುತ್ರದಾರಾದಿಭಿರ್ಧನೈಃ||೨೭||
...
ತೇಷು ಕಿಂ ಭವತಃ ಸ್ನೇಹಮನುಬಧ್ನಾತಿ ಮಾನಸಮ್||೨೮||
..
ವೈಶ್ಯ ಉವಾಚ||೨೯||
..
ಏವಮೇತದ್ಯಥಾ ಪ್ರಾಹ ಭವಾನಸ್ಮದ್ಗತಂ ವಚಃ|
ಕಿಂ ಕರೋಮಿ ನ ಬಧ್ನಾತಿ ಮಮ ನಿಷ್ಟುರತಾಂ ಮನಃ||೩೦||
..
ಯೈಃ ಸಂತ್ಯಜ್ಯ ಪಿತೃಸ್ನೇಹಂ ಧನಲುಬ್ಧೈರ್ನಿರಾಕೃತಃ|
ಪತಿಸ್ವಜನಹಾರ್ದ್ಸಂ ಚ ಹಾರ್ದಿತೇಷ್ವೇವ ಮೇ ಮನಃ||೩೧||
..
ಕಿಮೇತನ್ನಾಭಿಜಾನಾಮಿ ಜಾನನ್ನಪಿ ಮಹಾಮತೇ|
ಯತ್ಪ್ರೇಮಪ್ರವಣಂ ಚಿತ್ತಂ ವಿಗುಣೇಷ್ವಪಿ ಬಂಧುಷು||೩೨||
..
ತೇಷಾಂ ಕೃತೇ ಮೇ ನಿಃ ಶ್ವಾಸೋ ದೌರ್ಮನಸ್ಯಂ ಚ ಜಾಯತೇ||೩೩||
..
ಕರೋಮಿ ಕಿಂ ಯನ್ನ ಮನಸ್ತೇಷ್ವಪ್ರೀತಿಷು ನಿಷ್ಟುರಮ್||೩೪||
..
ಮಾರ್ಕಂಡೇಯ ಉವಾಚ||೩೫||
..
ತತಸ್ತೌ ಸಹಿತೌ ವಿಪ್ರ ತಂ ಮುನಿಂ ಸಮುಪಸ್ಥಿತೌ||೩೬
..
ಸಮಾಧಿರ್ನಾಮ ವೈಶ್ಯೋಸೌ ಸ ಚ ಪಾರ್ಥಿವ ಸತ್ತಮಃ||೩೭||
..
ಕೃತ್ವಾ ತು ತೌ ಯಥಾ ನ್ಯಾಯಂ ಯಥಾರ್ಹಂ ತೇನ ಸಂವಿದಮ್|
ಉಪವಿಷ್ಟೌ ಕಥಾಃ ಕಾಶ್ಚಿಚ್ಚಕ್ರತುರ್ವೈಶ್ಯಪಾರ್ಥಿವೌ||೩೮||
... 
ರಾಜೋವಾಚ||೩೯||
..
ಭಗವಂಸ್ತ್ವಾಮಹಂ ಪ್ರಷ್ಟುಮಿಚ್ಛಾಮ್ಯೇಕಂ ವದಸ್ವ ತತ್||೪೦||
..
ದುಃಖಾಯ ಯನ್ಮೇ ಮನಸಃ ಸ್ವಚಿತ್ತಾಯತ್ತತಾಂ ವಿನಾ||೪೧||
..
ಮಮತ್ವಂ ಗತರಾಜ್ಯಸ್ಯ ರಾಜ್ಯಾಂಗೇಷ್ವಖಿಲೇಷ್ವಪಿ|
ಜಾನತೋಪಿ ಯಥಾಜ್ಞಸ್ಯ ಕಿಮೇತನ್ಮುನಿಸತ್ತಮ||೪೨||
..
ಅಯಂ ಚ ನಿಕೃತಃ ಪುತ್ರೈರ್ದಾರೈರ್ಭೃತ್ಯೈಸ್ತಥೋಜ್ಝಿತಃ|
ಸ್ವಜನೇನ ಚ ಸಂತ್ಯಕ್ತಸ್ತೇಷು ಹಾರ್ದೀ ತಥಾಪ್ಯತಿ||೪೩||
..
ಏವಮೇಷ ತಥಾಹಂ ಚ ದ್ವಾವಪ್ಯತ್ಯಂತದುಃಖಿತೌ|
ದೃಷ್ಟದೋಷೇಪಿ ವಿಷಯೇ ಮಮತ್ವಾಕೃಷ್ಟಮಾನಸೌ||೪೪||
..
ತತ್ಕಿಮೇತನ್ಮಹಾಭಾಗ ಯನ್ಮೋಹೋ ಜ್ಞಾನಿನೋರಪಿ|
ಮಮಾಸ್ಯ ಚ ಭವತ್ಯೇಷಾ ವಿವೇಕಾಂಧಸ್ಯ ಮೂಢತಾ||೪೫||
..
ಋಷಿರುವಾಚ||೪೬||
..
ಜ್ಞಾನಮಸ್ತಿ ಸಮಸ್ತಸ್ಯ ಜಂತೋರ್ವಿಷಯಗೋಚರೇ|
ವಿಷಯಾಶ್ಚ ಮಹಾಭಾಗ ಯಾಂತಿ ಚೈವಂ ಪೃಥಕ್ ಪೃಥಕ್||೪೭||
..
ದಿವಾಂಧಾಃ ಪ್ರಾಣಿನಃ ಕೇಚಿದ್ರಾತ್ರಾವಂಧಾಸ್ತಥಾಪರೇ|
ಕೇಚಿದ್ದಿವಾ ತಥಾ ರಾತ್ರೌ ಪ್ರಾಣಿನಸ್ತುಲ್ಯದೃಷ್ಟಯಃ||೪೮||
..
ಜ್ಞಾನಿನೋ ಮನುಜಾಃ ಸತ್ಯಂ ಕಿಂ ನು ತೇ ನ ಹಿ ಕೇವಲಮ್|
ಯತೋ ಹಿ ಜ್ಞಾನಿನಃ ಸರ್ವೇ ಪಶು ಪಕ್ಷಿ ಮೃಗಾದಯಃ||೪೯||
..
ಜ್ಞಾನಂ ಚ ತನ್ಮನುಷ್ಯಾಣಾಂ ಯತ್ತೇಷಾಂ ಮೃಗಪಕ್ಷಿಣಾಮ್|
ಮನುಷ್ಯಾಣಾಂ ಚ ಯತ್ತೇಷಾಂ ತುಲ್ಯಮನ್ಯತ್ತತೋಭಯೋಃ||೫೦||
..
ಜ್ಞಾನೇಪಿ ಸತಿ ಪಶ್ಯೈತಾನ್ಪತಂಗಾಚ್ಛಾವಚಂಚುಷು|
ಕಣಮೋಕ್ಷಾದೃತಾನ್ಮೋಹಾತ್ಪೀಡ್ಯಮಾನಾನಪಿಕ್ಷುಧಾ||೫೧||
..
ಮಾನುಷಾ ಮನುಜವ್ಯಾಘ್ರ ಸಾಭಿಲಾಷಾ ಸುತಾನ್ಪ್ರತಿ|
ಲೋಭಾತ್ಪ್ರತ್ಯುಪಕಾರಾಯ ನನ್ವೇತಾನ್ಕಿಂ ನ ಪಷ್ಯಸಿ||೫೨||
..
ತಥಾಪಿ ಮಮತಾವರ್ತೇ ಮೋಹಗರ್ತೇ ನಿಪಾತಿತಾಃ|
ಮಹಾಮಾಯಾಪ್ರಾಭಾವೇಣ ಸಂಸಾರಸ್ಥಿತಿಕಾರಿಣಾ||೫೩||
..
ತನ್ನಾತ್ರ ವಿಸ್ಮಯಃ ಕಾರ್ಯೋ ಯೋಗನಿದ್ರಾ ಜಗತ್ಪತೇಃ|
ಮಹಾಮಾಯಾ ಹರೇಶ್ಚೈಷಾ ತಯಾ ಸಂಮೋಹ್ಯತೇ ಜಗತ್||೫೪||
..
ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ|
ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ||೫೬||
..
ತಯಾ ವಿಸೃಜ್ಯತೇ ವಿಶ್ವಂ ಜಗದೇತಚ್ಚರಾಚರಮ್|
ಸೈಷಾ ಪ್ರಸನ್ನಾ ವರದಾ ನೃಣಾಂ ಭವತಿ ಮುಕ್ತಯೇ||೫೭||
..
ಸಾ ವಿದ್ಯಾ ಪರಮಾ ಮುಕ್ತೇರ್ಹೇತುಭೂತಾ ಸನಾತನೀ|
ಸಂಸಾರಬಂಧಹೇತುಶ್ಚ ಸೈವಸರ್ವೇಶ್ವರೇಶ್ವರೀ||೫೮||
..
ರಾಜೋವಾಚ||೫೯||
..
ಭಗವನ್ಕಾ ಹಿ ಸಾ ದೇವೀ ಮಹಾಮಾಯೇತಿ ಯಾಂ ಭವಾನ್|
ಬ್ರವೀತಿ ಕಥಮುತ್ಪನ್ನಾ ಸಾ ಕರ್ಮಾಸ್ಯಾಶ್ಚ ಕಿಂ ದ್ವಿಜಃ||೬೦||
..
ಯತ್ಪ್ರಭಾವಾ ಚ ಸಾ ದೇವೀ ಯತ್ಸ್ವರೂಪಾ ಯದುದ್ಭವಾ||೬೧೨||
..
ತತ್ಸರ್ವಂ ಶ್ರೋತುಮಿಚ್ಛಾಮಿ ತ್ವತ್ತೋ ಬ್ರಹ್ಮವಿದಾಂ ವರ||೬೨||
..
ಋಷಿರುವಾಚ||೬೩||
..
ನಿತ್ಯೈವ ಸಾ ಜಗನ್ಮೂರ್ತಿಸ್ತಯಾಸರ್ವಮಿದಂತತಮ್||೬೪||
..
ತಥಾಪಿ ತತ್ಸಮುತ್ಪತ್ತಿರ್ಬಹುಧಾ ಶ್ರೂಯತಾಂ ಮಮ|೬೫||
..

ದೇವಾನಾಂ ಕಾರ್ಯಸಿಧ್ಯರ್ಥಮಾವಿರ್ಭವತಿ ಸಾ ಯದಾ|
ಉತ್ಪನ್ನೇತಿ ತದಾ ಲೋಕೇ ಸಾ ನಿತ್ಯಾಪ್ಯಭಿಧೀಯತೇ||೬೬||
..
ಯೋಗನಿದ್ರಾಂ ಯದಾ ವಿಷ್ಣುರ್ಜಗತ್ಯೇಕಾರ್ಣವೀಕೃತೇ|
ಆಸ್ತೀರ್ಯ ಶೇಷಮಭಜತ್ಕಲ್ಪಾಂತೇ ಭಗವಾನ್ಪ್ರಭುಃ||೬೭||
..
ತದಾ ದ್ವಾವಸುರೌ ಘೋರೌ ವಿಖ್ಯಾತೌ ಮಧುಕೈಟಭೌ|
ವಿಷ್ಣುಕರ್ಣಮಲೋದ್ಭೂತೌ ಹಂತುಂ ಬ್ರಹ್ಮಾಣಮುದ್ಯತೌ||೬೮||
..
ಸ ನಾಭಿಕಮಲೇ ವಿಷ್ಣೋಃ ಸ್ಥಿತೌ ಬ್ರಹ್ಮಾ ಪ್ರಜಾಪತಿಃ|
ದೃಷ್ಟಾ ತಾವಸುರೌ ಚೋಗ್ರೌ  ಪ್ರಸುಪ್ತಂ ಚ ಜನಾರ್ದನಮ್||೬೯||
..
ತುಷ್ಟಾವ ಯೋಗನಿದ್ರಾಂ ತಾಮೇಕಾಗ್ರಹೃದಯಸ್ಥಿತಃ|
ವಿಬೋಧನಾರ್ಥಾಯ ಹರೇರ್ಹರಿನೇತ್ರಕೃತಾಲಯಾಮ್||೭೦||
..
ವಿಶ್ವೇಶ್ವರೀಂ ಜಗದ್ಧಾತ್ರೀಂ ಸ್ಥಿತಿಸಂಹಾರಕಾರಿಣೀಮ್|
ನಿದ್ರಾಂ ಭಗವತೀಂ ವಿಷ್ಣೋರತುಲಾಂ ತೇಜಸಃ ಪ್ರಭುಃ||೭೧||
..
ಬ್ರಹ್ಮೋವಾಚ||೭೨||
..
ತ್ವಂ ಸ್ವಾಹಾ ತ್ವಂ ಸ್ವಧಾ ತ್ವಂ ಹಿ ವಷಟ್ಕಾರಃ ಸ್ವರಾತ್ಮಿಕಾ|
ಸುಧಾ ತ್ವಮಕ್ಷರೇ ನಿತ್ಯೇ ತ್ರಿಧಾಮಾತ್ರಾತ್ಮಿಕಾ ಸ್ಥಿತಾ||೭೩||
..
ಅರ್ಧಮಾತ್ರಾಸ್ಥಿತಾ ನಿತ್ಯಾ ಯಾನುಚ್ಚಾರ್ಯಾ ವಿಶೇಷತಃ|
ತ್ವಮೇವ ಸಂಧ್ಯಾ ಸಾವಿತ್ರೀ ತ್ವಂ ದೇವಿ ಜನನೀ ಪರಾ||೭೪||
..
ತ್ವಯೈತದ್ಧಾರ್ಯತೇ ವಿಶ್ವಂ ತ್ವಯೈತತ್ಸೃಜ್ಯತೇ ಜಗತ್|
ತ್ವಯೈತತ್ಪಾಲ್ಯತೇ ದೇವಿ ತ್ವಮತ್ಸ್ಯಂತೇ ಚ ಸರ್ವದಾ||೭೫||
..
ವಿಸೃಷ್ಟೌ ಸೃಷ್ಟಿರೂಪಾ ತ್ವಂ ಸ್ಥಿತಿರೂಪಾ ಚ ಪಾಲನೇ|
ತಥಾ ಸಂಹೃತಿರೂಪಾಂತೇ ಜಗತೋಸ್ಯ ಜಗನ್ಮಯೇ||೭೬||
..
ಮಹಾವಿದ್ಯಾ ಮಹಾಮಾಯಾ ಮಹಾಮೇಧಾ ಮಹಾಸ್ಮೃತಿಃ|
ಮಹಾ ಮೋಹಾ ಚ ಭವತೀ ಮಹಾದೇವಿ ಮಹೇಶ್ವರೀ||೭೭||
..
ಪ್ರಕೃತಿಸ್ತ್ವಂ ಚ ಸರ್ವಸ್ಯ ಗುಣತ್ರಯವಿಭಾವಿನೀ|
ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚದಾರುಣಾ||೭೮||
..
ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ಧಿರ್ಬೋಧಲಕ್ಷಣಮ್|
ಲಜ್ಜಾ ಪುಷ್ಟಿಸ್ತಥಾ ತುಷ್ಟಿಸ್ತ್ವಂ ಶಾಂತಿಃ ಕ್ಷಾಂತಿರೇವ ಚ||೭೯||
..
ಖಡ್ಗಿನೀ ಶೂಲಿನೀ ಘೋರಾ ಗದಿನೀ ಚಕ್ರಿಣೀ ತಥಾ|
ಶಂಖಿನೀ ಚಾಪಿನೀ ಬಾಣಭುಶುಂಡೀಪರಿಘಾಯುಧಾ||೮೦||
..
ಸೌಮ್ಯಾಸೌಮ್ಯತರಾಶೇಷಸೌಮ್ಯೇಭ್ಯಸ್ತ್ವತಿಸುಂದರೀ|
ಪರಾಪರಾಣಾಂ ಪರಮಾ ತ್ವಮೇವ ಪರಮೇಶ್ವರೀ||೮೧||
..
ಯಚ್ಚ ಕಿಂಚಿದ್ ಕ್ವಚಿದ್ವಸ್ತು ಸದಸದ್ವಾಖಿಲಾತ್ಮಿಕೇ|
ತಸ್ಯ ಸರ್ವಸ್ಯ ಯಾ ಶಕ್ತಿಃ ಸಾ ತ್ವಂ ಕಿಂ ಸ್ತೂಯತೇ ಮಯಾ||೮೨||
..
ಯಯಾ ತ್ವಯಾ ಜಗತ್ ಸೃಷ್ಟಾ ಜಗತ್ಪಾತ್ಯತ್ತಿ ಯೋ ಜಗತ್|
ಸೋಪಿ ನಿದ್ರಾವಶಂ ನೀತಃ ಕಸ್ತ್ವಾ ಸ್ತೋತು ಮಹೇಶ್ವರಃ||೮೩||
..
ವಿಷ್ಣುಃ ಶರೀರಗ್ರಹಣಮಹಮೀಶಾನ ಏವ ಚ|
ಕಾರಿತಾಸ್ತೇ ಯತೋ ತಸ್ತ್ವಾಂ ಕಃ ಸ್ತೋತುಂ ಶಕ್ತಿಮಾನ್ಭವೇತ್|೮೪||
..
ಸಾತ್ವಮಿತ್ಥಂ ಪ್ರಭಾವೈಃ ಸ್ವೈರುದಾರೈರ್ದೇವಿ ಸಂಸ್ತುತಾ|
ಮೋಹಯೈತೌ ದುರಾಧರ್ಷಾವಸುರೌ ಮಧುಕೈಟಭೌ|೮೫||
..
ಪ್ರಬೋಧಂಚ ಜಗತ್ಸ್ವಾಮೀ ನೀಯತಾಮಚ್ಯುತೋ ಲಘು||೮೬||
..
ಬೋಧಶ್ಚ ಕ್ರಿಯತಾಮಸ್ಯ ಹಂತುಮೇತೌ ಮಹಾಸುರೌ||೮೭||
..
ಋಷಿರುವಾಚ||೮೮||
..
ಏವಂ ಸ್ತುತಾ ತದಾ ದೇವೀ ತಾಮಸೀ ತತ್ರ ವೇಧಸಾ|
ವಿಷ್ಣೋಃ ಪ್ರಬೋಧನಾರ್ಥಾಯ ನಿಹಂತುಂ ಮಧುಕೈಟಭೌ||೮೯||
..
ನೇತ್ರಾಸ್ಯನಾಸಿಕಾಬಾಹುಹೃದಯೇಭ್ಯಸ್ತಥೋರಸಃ|
ನಿರ್ಗಮ್ಯ ದರ್ಶನೇ ತಸ್ಥೌ ಬ್ರ್ಹಹ್ಮಣೋ ವ್ಯಕ್ತಜನ್ಮನಃ||೯೦||
..
ಉತ್ತಸ್ಥೌ ಚ ಜಗನ್ನಾಥಸ್ತಯಾ ಮುಕ್ತೋ ಜನಾರ್ದನಃ|
ಏಕಾರ್ಣವೇಹಿಶಯನಾತ್ತತಃ ಸ ದದೃಶೇ ಚ ತೌ||೯೧||
..
ಮಧುಕೈಟಭೌ ದುರಾತ್ಮಾನಾವತಿವೀರ್ಯಪರಾಕ್ರಮೌ|
ಕ್ರೋಧರಕ್ತೇಕ್ಷಣಾವತ್ತುಂ ಬ್ರಹ್ಮಾಣಂ ಜನಿತೋದ್ಯಮೌ||೯೨||
..
ಸಮುತ್ಥಾಯ ತತಸ್ತಾಭ್ಯಾಂ ಯುಯುಧೇ ಭಗವಾನ್ ಹರಿಃ|
ಪಂಚ ವರ್ಷಸಹಸ್ರಾಣಿ ಬಾಹುಪ್ರಹರಣೋ ವಿಭುಃ||೯೩||
..
ತಾವಪ್ಯತಿಬಲೋನ್ಮತ್ತೌ ಮಹಾಮಾಯಾವಿಮೋಹಿತೌ|೯೪||
..
ಉಕ್ತವಂತೌ ವರೋಸ್ಮತ್ತೋ ವ್ರಿಯತಾಮಿತಿ ಕೇಶವಮ್||೯೫||
..
ಶ್ರೀ ಭಗವಾನುವಾಚ|| ೯೬||
..
ಭವೇತಾಮದ್ಯ ಮೇ ತುಷ್ಟೌ ಮಮ ವಧ್ಯಾವುಭಾವಪಿ||೯೭||
..
ಕಿಮನ್ಯೇನ ವರೇಣಾತ್ರ ಏತಾವದ್ಧಿ ವೃತಂ ಮಯಾ||೯೮||
..
ಋಷಿರುವಾಚ||೯೯||
..
ವಂಚಿತಾಭ್ಯಾಮಿತಿ ತದಾ ಸರ್ವಮಾಪೋಮಯಂ ಜಗತ್|
ವಿಲೋಕ್ಯ ತಾಭ್ಯಾಂ ಗದಿತೋ ಭಗವಾನ್ ಕಮಲೇಕ್ಷಣಃ||೧೦೦||
..
ಆವಾಂ ಜಹಿ ನ ಯತ್ರೋರ್ವೀ ಸಲಿಲೇನ ಪರಿಪ್ಲುತಾ||೧||
..
ಋಷಿರುವಾಚ||೨||
..
ತಥೇತ್ಯುಕ್ತ್ವಾ ಭಗವತಾ ಶಂಖಚಕ್ರಗದಾಭೃತಾ|
ಕೃತ್ವಾ ಚಕ್ರೇಣ ವೈ ಛಿನ್ನೇ  ಜಘನೇ ಶಿರಸೀ ತಯೋಃ||೩||
..
ಏವಮೇಷಾ ಸಮುತ್ಪನ್ನಾ ಬ್ರಹ್ಮಣಾ ಸಂಸ್ತುತಾ ಸ್ವಯಮ್|
ಪ್ರಭಾವಮಸ್ಯಾ ದೇವ್ಯಾಸ್ತು  ಭೂಯಃ ಶೃಣು ವದಾಮಿ ತೇ||
..
ಶ್ರೀ ಮಾರ್ಕಂಡೇಯಪುರಾಣೇಸಾವರ್ಣಿಕೇ ಮನ್ವಂತರೇ ದೇವೀಮಹಾತ್ಮ್ಯೇ ಪ್ರಥಮಃ







































ಬುಧವಾರ, ಆಗಸ್ಟ್ 14, 2013

ಮರೆಯಲಾಗದ ಮಾಸ್ತರರುಗಳು....!!

ನಾನು ಹೈಸ್ಕೂಲು ಓದುತ್ತಿರುವಾಗ ನಡೆದ ಒಂದು ಘಟನೆ:
ಹೈಸ್ಕೂಲಿನಲ್ಲಿ ಒಬ್ಬರು ಶಿಕ್ಷಕರು. (ಹೆಸರು ಬೇಡ.. ಹಾಕದಿದ್ದರೂ ಕೆಲವರಿಗೆ ಅವರ ಪರಿಚಯ ವಾಗಬಹುದು..ವಿವರಣೆಯನ್ನೋದಿ)
ಸಾಮಾನ್ಯವಾಗಿ ಹಿಂದಿ ಪಾಠ ಮಾಡುತ್ತಿದ್ದ ಅವರು ನಾನು 8ನೇ ಕ್ಲಾಸಿಗೆ ಸೇರಿದ ವರ್ಷವೇ ದುರದೃಷ್ಟವಶಾತ್ ಇತಿಹಾಸವನ್ನೂ ಬೋಧಿಸಬೇಕೆಂದು ನಮ್ಮ ತರಗತಿಗೆ ನಿಯೋಜಿಸಲ್ಪಟ್ಟರು... ಮೊದಲನೇ ಪಾಠ..( ಇಂದಿಗೂ ನೆನಪಿದೆ ಎಂದರೆ ಅದರ ಮಹತ್ವ ಗಮನಿಸಿ) "ಭಾರತಕ್ಕೆ ಯುರೋಪಿಯನ್ನರ ಆಗಮನ" ... ಸುಮಾರು ಆರು ಪುಟಗಳ ಪಾಠ... ತಿಂಗಳು ಮೂರು ಕಳೆಯಿತು...!! ಇನ್ನೂ ಮೊದಲನೇ ಪ್ಯಾರಾ ಓದಿಹೇಳಿ ಆಗಿತ್ತು ಅಷ್ಟೇ...!!
...
ಮೂರು ತಿಂಗಳ ಬಳಿಕ ಒಂದು ದಿನ ಕಿರು ಪರೀಕ್ಷೆಯ ವೇಳಾ ಪಟ್ಟಿ ಅವರು ಕ್ಲಾಸಿನಲ್ಲಿದ್ದಾಗಲೇ ಬರಬೇಕೇ....!!!..ಛೇ... ಪಾಠಾನೇ ಆಗಿಲ್ಲವಲ್ಲಾ... ಪರೀಕ್ಷೆ ಮಾಡಬೇಕಂತೆ ಎನ್ನುತ್ತಾ.. ಅಂದು ಮೂರು ಪಾಠ ಒಟ್ಟಿಗೇ  ಮಾಡಿ ನಾಳೆ ಇವೆಲ್ಲದರ ಪ್ರಶ್ನೋತ್ತರ ಬರೆದು ತನ್ನಿ... ನೋಡಿ ಸೈನ್ ಹಾಕ್ತೇನೆ ಎಂದು ಅವಧಿ ಮುಗಿಸಿ ಹೋದರು...
.....
...... ಮಾರನೇದಿನ...ಎಂದಿನಂತೆ.. ಕವಳದ ಬಾಯಿ ಉಗುಳುತ್ತಾ.. ತರಗತಿಗೆ ಪ್ರವೇಶ ಕೊಟ್ಟ ಶಿಕ್ಷಕರು... ಬಂದು ಕುಳಿತವರೇ... ಕನ್ನಡಕದ ಎಡೆಯಿಂದ ಎಲ್ಲರನ್ನೂ ನೋಡಿ... (ಕನ್ನಡಕ ಕಣ್ಣಿಗೆ ಸೋಕುತ್ತಿರಲಿಲ್ಲ) ಎಲ್ಲಾ ಬರೆದಿದ್ದೀರಾ... ತಗಬನ್ನಿ.. ಎನ್ನುತ್ತಾ ಯಾರದೋ ಪೆನ್ನನ್ನು ಕಸಿದು ಕುಳಿತರು..!!
..
...ಎಲ್ಲಾ...ಒಬ್ಬೊಬ್ಬರಾಗಿ ಹೆಣ್ಣು ಮಕ್ಕಳು ಬರೆದ ನೋಟ್ ಪುಸ್ತಕ ಹಿಡಿದು ಅವರೆದುರು ಸಾಲು ಮಾಡಿದರು... ಆ ಸಾಲಿನಲ್ಲಿ ಕೆಲವು ಹುಡುಗರೂ ಇದ್ದರು...!!!( ಇರುತ್ತಾರೆ... ಮನೆಯಲ್ಲಿ ಬೇರೆ ಕೆಲಸ ಇಲ್ಲದವರು..!!!)ನಾವು ಕೆಲವು ಜನ ಇನ್ನೂ ಭಾರತಕ್ಕೆ...ಯುರೋಪಿ...ಅಷ್ಟೇ ಬರೆದಾಗಿತ್ತು... ಅದನ್ನೇ ಓದುತ್ತಾ ಕುಳಿತೇ ಇದ್ದೆವು...ನೋಟ್ ಪುಸ್ತಕ ತೋರುತ್ತಿದ್ದವರೆಲ್ಲಾ ತಮ್ಮ ತಮ್ಮ ಬ್ಲೌಸ್,, ಶರ್ಟ್ ಕುಡುಗಿಕೊಳ್ಳುತ್ತಾ ( ಅಲ್ಲೆಲ್ಲಾ ಅವರುಗುಳಿದ ಕವಳದ ಬಿಂದುಗಳು ...!!) ಈಚೆ ಬರುತ್ತಿದ್ದರೆ.. ನಮಗೆ ಕುಳಿತಲ್ಲೇ ನಡುಕ ಶುರುವಾಗಿತ್ತು( ಬರೆದಿಲ್ಲದಿದ್ದರೆ.. ಹೊಡಿತಾರಲ್ಲಾ)
...
ಅಂತೂ..... ಇನ್ನೂ ಬರೆಯದೇ ಇದ್ದವರು ....? ಎಂದು ಮುಖದಲ್ಲೇ ಕೇಳುತ್ತಿರುವಾಗಲೇ... ಕೆಲ ಸೂರರು.... ಓ ಅವನು ಬರೆದಿಲ್ಲಾ...ಓ ಇವಳು ಬರೆದಿಲ್ಲಾ ಎಂದು ಅವರಿಗೆ ತೋರಿಸಿ.. ತಮ್ಮ ಹಳೇ ಸಿಟ್ಟನ್ನು ತಿರಿಸಿಕೊಳ್ಲುವ ಕೆಲ ಅತಿ ಬುದ್ಧಿವಂತರು ಇದ್ದರಲ್ಲಾ...!!!
 ಎದ್ನಿಲ್ಲಿ.... ಎಲ್ಲಾ..ಎನ್ನುತ್ತಾ ಕುಳಿತ ಖುರ್ಚಿಯನ್ನು ಮುಂದಕ್ಕೆ ಬಗ್ಗಿಸಿ... ಮತ್ತೆ ಯಥಾ ಸ್ಥಾನಕ್ಕೆ ಕುಳಿತ ಶಿಕ್ಷಕರು... ಮುಖ ಕೆಂಪಗೆ ಮಾಡಿಕೊಂಡಿದ್ದು ಕಂಡಾಗ ನಮ್ಮ ಜಂಘಾಬಲವೇ ಉಡುಗಿ ಹೋಗಿತ್ತು... ಅಂತೂ....." ಬಾರಾ ಇಲ್ಲಿ.. ಯಾಕ..? ಯಾಕ್ ಬರೆದಿಲ್ಲಾ..?" ಎನ್ನುತ್ತಾ ಹುಡುಗನೊಬ್ಬನನ್ನು ಹತ್ತಿರ ಕರೆದು ಕಪಾಳಕ್ಕೆ ಹೊಡೆದಾಗ ಅವ ಅಲ್ಲೇ ಬಿದ್ದು ಬಿಟ್ಟ... ಇದನ್ನು ನೋಡಿ ಕೆಲವರು... ನೋಟ್ ಬುಕ್ ಮರೆಯಾಗಿಸಿ ನಕ್ಕರೆ.. ಕೆಲವರ ಚೆಡ್ಡಿ ತೇವಗೊಳ್ಳುತ್ತಿತ್ತು...
ಇನ್ನೊಬ್ಬಳು ಆಹುತಿಯಾದ ಮೇಲಂತೂ ಉಳಿದ ನಿಂತಿದ್ದ ಹೆಮ್ಮಕಳ ಪರಿಸ್ಥಿತಿಯನ್ನು ನಾನು ವರ್ಣಿಸುವುದು ಸರಿಯೆನಿಸುವುದಿಲ್ಲ....!!
"ಯೇ.... ಮಕ್ಕಿಗೆದ್ದೆ ಭಟ್ಟಾ..."!!! ಆ ಸದ್ದಿಗೇ ನಾನು ಅದುರಿದ್ದೆ... ಹಿಂದಿನವರಿಗೆ ಬಿದ್ದ ಹೊಡೆತಗಳ ನೆನಪು ಎಲ್ಲವೂ ಒಮ್ಮೆಲೇ ಆಗಿ.... ಯಬ್ಬೇ....ಎಂದಿದ್ದೆ.... " ಬಾರಾ ಇಲ್ಲಿ..." ಮೂರ್ ಖಾಸನವನೇ..." ಎಂದು ತಮ್ಮಖುರ್ಚಿಯ ಹತ್ತಿರಕ್ಕೆ ಕರೆದಾಗಲಂತೂ.... 106 ಡಿಗ್ರಿ ಜ್ವರ ಒಮ್ಮೆಲೇ ಬಂದಿತ್ತು... ಸಾಲದ್ದಕ್ಕೆ ಒಂದು ಅಕ್ಷರವನ್ನೂ ಬರೆದಿಲ್ಲವಲ್ಲಾ... ಏನೋ ಹೇಳಿ ತಪ್ಪಿಸಿಕೊಳ್ಳೊಣ ಎಂದರೆ.. ಥೂ.... ಏನಪ್ಪಾ ಮಾಡೋದು...ಎನ್ನುತ್ತಾ ನಡುಗುತ್ತಾ ಅವರಿದ್ದಲ್ಲಿಗೆ ಹೋದಾಗ.. ಕೈ ಹಿಡಿದೆಳೆದರು.... ಇನ್ನೇನು..." ಅಯ್ಯಪ್ಪಾ.." ಎನ್ನುವುದರಲ್ಲಿದ್ದೆ....... " ಭಟ್ಟಾ.... ಅಪ್ಪಯ್ಯಂಗೆ ನಾಳೆ ಬೇಗ್ ಬಪ್ಪಲಕ್ಕೆ ಹೇಳು...ಅಮಾಸೆ ಭಟ್ಟಂಗೆ. ನಾಳೆ ಒಂದು ತಿರಗಾಟ ಇದ್ಯಂತೆ ಹೇಳು ಮಾಸ್ತರಿಗೆ" ಎಂದು ಸಣ್ಣದಾಗಿ ಉಲಿದು.. ಬಾಯಲ್ಲಿನ ಕವಳದ ತುಣುಕಿಗೆ ನಾಲಗೆ ತಾಗಿಸಬೇಕೆನ್ನು ವಷ್ಟರಲ್ಲಿ ಅವರಿಂದ ದೂರ ಸರಿದಿದ್ದೆ.!!!!....." ಹೇಳು ಮತ್ತೆ"... ಬೇಗ್ ಬರಲೀ... ಗಂಧಾಕ್ಷತೆ ಕೊಟ್ ಮುಗಿಸಾಕ್ತೆ.."....ಎನ್ನುವಷ್ಟರಲ್ಲಿ ತರಗತಿಯ ಗಂಟೆ ಬಾರಿಸಿದ ವೆಂಕಟಾಚಲ ಶೆಟ್ಟಿ.... ಮುಂದಿನ್ ಪೀರಿಯಡ್ ಧರ್ಮಶಾಲೆ ಜಿ. ಆರ್. ಭಟ್ರದ್ದು....ಹಾಗಾಗಿ ಅವರು ಬಾಗಿಲಲ್ಲೇ ಕಾಯುತ್ತಿದ್ದರು... ಅಂತೂ ಬಚಾವಾಗಿದ್ದೆ.....!!!
.....
......
ಮರೆಯಲಾಗದ ಮಾಸ್ತರರುಗಳು....!!

ಗುರುವಾರ, ಜುಲೈ 11, 2013

ಫಲಿಸದ ಆಸೆ...

     ಅದೊಂದು ಸುಂದರ ಸಂಜೆ.. ಮತ್ತು ನನ್ನ ಜೀವನದ ಮರೆಯಲಾರದ ಸುದಿನ. ಅಂದು ಏಪ್ರಿಲ್ ಹತ್ತು... ನಾನು ಶಾಲೆಗೆ ಶಿಕ್ಷಕನಾಗಿ ಸೇರಿದ ಮೇಲೆ ಮೊದಲಬಾರಿಗೆ ಮನೆಗೆ ರಜೆ ಕಳೆಯಲೆಂದು ಹೋಗುತ್ತಿದ್ದೆ. ಮನತುಂಬೆಲ್ಲಾ ತುಂಬಿಕೊಂಡ ಹರ್ಷದ ಮಹಾಪೂರ...!! ಅದುವರೆಗೆ ಸಂಪಾದಿಸಿದ ತಿಂಗಳ ಸಂಬಳವನ್ನೆಲ್ಲಾ ಕೂಡಿಟ್ಟು ಒಂದೇ ಕಂತಿನಲ್ಲಿ ನೋಟಿನ ಕಟ್ಟುಗಳನ್ನು ಅಮ್ಮನ ಮುಂದೆ ಹರಡಿ... ಇಕೋ...ನಿನ್ನ ಮಗ ದುಡಿದಿದ್ದು... ಎಂದು ತೋರಬೇಕೆಂಬ ಹಂಬಲ..
      ಅಂದು ಸಂಜೆ ಬೇಗನೆ ಮನೆಗೆ ಬಂದು ಪಟಪಟನೆ ಮನೆಯ ಅಳಿದುಳಿದ ಹಳಸಲುಗಳನ್ನೆಲ್ಲಾ ಬದಿಗೆ ಒತ್ತರಿಸಿಟ್ಟು... ಹಾಳಾಗುವಂಥಹುದನ್ನು ಹೊರಗೆಸೆದು, ಬಟ್ಟೆ ಬರೆಗಳನ್ನೆಲ್ಲಾ ಗಂಟು ಕಟ್ಟಿ ಮೂಲೆಗೆ ಸೇರಿಸಿ ಒಪ್ಪಗೊಳಿಸಿ ಮನೆಗೆ ತೆಗೆದುಕೊಂಡು ಹೋಗಬೇಕಾದ ಅಮ್ಮನಿಗೆ ಕೊಡುವ ಹೊಸ ಸೀರೆ, ತಂಗಿಗೆ ಕೊಡುವ ಹೊಸ ಚೂಡಿದಾರ್ ಎಲ್ಲಾ ಶೂಟ್ ಕೇಸಿನಲ್ಲಿ ಭದ್ರ ಪಡಿಸಿ ಅಂತೂ.. ಗಡಿಬಿಡಿಯಲ್ಲೇ ರಾಮನಗರದಿಂದ ಬಸ್ಸನೇರಿದ್ದಾಯ್ತು... ನನಗಾಗಿ ಅಂದಿನ ಕುಮಟಾ ಬಸ್ಸಿನ ಒಂದು ಕಿಟಕಿ ಸೀಟು ಕಾಯ್ದಿರಿಸಿದ್ದೆ... ಬೆಂಗಳೂರು ಮೆಜೆಸ್ಟಿಕ್ ಎಂಬುದು ಒಂದು ಸ್ವರ್ಗವೇ ಆಗಿತ್ತು ಅಂದು... ಜನರ ಜಾತ್ರೆಯೇ ಸೇರಿತ್ತು ಅಲ್ಲಿ ಎಲ್ಲರೂ ಹೋಗುವವರೇ.. ಬಂದ ಬಸ್ಸುಗಳೇಲ್ಲಾ ಭರ್ತಿಯಾಗಿ ಹೊರಡುತ್ತಿದ್ದವು... ಅಂತೂ ನಾನು ಹೋಗಬೇಕಾದ ಬೆಂಗಳೂರು - ಕುಮಟಾ ಸೆಮಿ ಲಕ್ಸುರಿ ಬಂದು ನಿಂತಿತು.. ಸೆಕೆಯ ಆ ದಿನಗಳಲ್ಲಿ ಬೆಂಗಳೂರು ಸಣ್ಣಗೆ ನಡುಗುವ ಛಳಿಯನ್ನು ತೋರುತ್ತಿತ್ತು... ಅದು ಬೆಂಗಳೂರು...!! ಅಂ..ನಾನು ಬಸ್ಸನ್ನೇರಿ ನನ್ನ ನಂಬರಿನ ಸೀಟಿನಲ್ಲಿ ಕುಳಿತೆ..ಕಿಟಕಿ ಪಕ್ಕ. ನಾನು ಕುಳಿತ ಸೀಟಿನ ಪಕ್ಕದಲ್ಲಿ ಒಂದು ಖಾಲಿ ಇತ್ತು.. ಯಾರೂ ಇಲ್ಲ... ಬಸ್ಸೆಲ್ಲಾ ಫುಲ್ ಆಗಿತ್ತು... ಓಹ್ ಈ ಸೀಟು ಖಾಲಿಯೇ ಇರಲಪ್ಪಾ..ಆರಾಮಾಗಿ ಮಲಗಿ ಹೋಗಬಹುದಲ್ಲಾ ಎನ್ನಿಸಿತು.... ಕಂಡಕ್ಟರ್ ಮತ್ತೊಮ್ಮೆ ಬಂದು ಎಲ್ಲಾ ಸೀಟುಗಳೂ ಬಂದವೆಂಬುದನ್ನು ಖಾತ್ರಿ ಪಡಿಸಿಕೊಂಡು..." ರೈಟ್.... " ಹೇಳಿದ. ಅಂತೂ ಬಸ್ಸು ಮೆಜೆಸ್ಟಿಕ್ ನಿಂದ ಹೊರಟೇಬಿಟ್ಟಿತು... ಹಾಕಿದ್ದ ಗರಿಗರಿಯಾದ ಪ್ಯಾಂಟ್ ಶರ್ಟ್ ಸರಿ ಪಡಿಸಿಕೊಂಡು ಏನೋ ಒಮ್ದು ಉಲ್ಲಾಸದ ಉಸಿರು ಬಿಟ್ಟೆ.. ಮನೆಗೆ ಹೋಗಿ ಏನೇನು ಮಾಡಬೇಕು..ಎಲ್ಲೆಲ್ಲಿ ಹೋಗಬೇಕು, ಯಾರ್ಯಾರನ್ನು ಕಾಣಬೇಕು.ಅವರಿವರ ಮನೆಯ ಮದುವೆ ಉಪನಯನ ಹೊಸ ಮನೆಯ ಗೃಹಪ್ರವೇಶಗಳಿಗೆಲ್ಲಾ ನಾನು ಹೋಗಬೇಕು.. ಅದಕ್ಕೆಂದೇ  ನಾಲ್ಕು ಜೊತೆ ಹೊಸಾ ಪ್ಯಾಂಟ್-ಶರ್ಟ್ ಹೊಲಿಸಿ ಶೂಟ್ಕೇಸ್ ತುಂಬಿದ್ದೆ.. ಎಲ್ಲರೂ ನನ್ನನ್ನು ಗಮನಿಸ ಬೇಕು..ಮುಖ್ಯವಾಗಿ ಗಮನಿಸುವಂಥವರಿಗೆ ನಾನು ಕಾಣಿಸಿಕೊಳ್ಳಬೇಕು.... ಇನ್ನೂ ೨೮ರ ಪ್ರಾಯ......ಇತ್ಯಾದಿ ಮನದ ಮೂಲೆಯಲ್ಲಿದ್ದುದೆಲ್ಲಾ ಒಂದೊಂದಾಗಿ ಬರುತ್ತಿತ್ತು..
       ಬೋರೆಂದು ಶಬ್ದ ಮಾಡುತ್ತಾ ಬಸ್ಸು ಮುಂದೆ ಮುಂದೆ ಸಾಗುತ್ತಿತ್ತು.. ಅಲ್ಲಲ್ಲಿ ಹಂಪ್ಸ್ ಗಳು.. ಬ್ರೇಕ್ ಇನಸ್ಪೆಕ್ಟರುಗಳು..ಕುಲುಕಾಟ ಅಲುಗಾಟ ಇವೆಲ್ಲ ಬೆಂಗಳೂರಿನ ರಸ್ತೆಗಳ ಸ್ಥಿತಿಯನ್ನು ತೋರುತ್ತಿದ್ದವು... ಹಾಗೇ ಮನಸ್ಸಿನ ಕುದುರೆಯ ಹಗ್ಗವನ್ನು ಹರಿದು ಬಿಟ್ಟಾಗ ಎತ್ತೆತ್ತಲೋ ಓಡುತ್ತಿತ್ತು... ಡೈವರ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದಾಗಲೇ ಕಿಟಕಿಯಿಂದ ಕತ್ತೆತ್ತಿ ಆಚೆ ನೋಡಿದರೆ ..ರಾಜಾಜಿ ನಗರ..!!! ಛೇ..ಇನ್ನೂ ಬೆಂಗಳೂರು ಮುಗಿದಿಲ್ಲವಾ..? ನಾನು ಬೇಗೆ ಹೋಗಬೇಕು.. ಮನೆ ಸೇರಿ ಅಮ್ಮನಿಗೆ ನನ್ನನ್ನು ಕಾಣಿಸಬೇಕು... ನಾನು ಅಂದಿನ ನಾನಾಗಿರಲಿಲ್ಲವಲ್ಲ..! ಅಂತೂ ನಿಂತ ಬಸ್ಸಿಗೆ ಒಂದೆರಡು ಜನ ಹತ್ತಿದ ಹಾಗೇ ಕಂಡಿತು... ಬಸ್ಸು ನಿಧಾನಕ್ಕೆ ಚಲಿಸುತ್ತಿದ್ದಂತೇ ನನ್ನ ಪಕ್ಕದಲ್ಲಿ ಒಂದು ಸುಂದರ ತರುಣಿ ಬಂದವಳೇ ತನ್ನ ವ್ಯಾನಿಟಿ ಬ್ಯಾಗನ್ನು ಸೀಟಿನ ಮೇಲೆ ಬಿಸಾಡಿ ಕೈಯ್ಯಲ್ಲಿದ್ದ ಕೂಸಿನ ಮೊದಲು ಸೀಟಿನಲ್ಲಿ ಕೂರಿಸಿದಳು...!! ತುಂಬುಗೆನ್ನೆಯ ಆ ಮಗುವನ್ನು ನೋಡಿದರೆ ಯಾವುದೋ ಅಡ್ವಟಾಯ್ಜ್ ಮೆಂಟಿನಲ್ಲಿ ಕಂಡಂತೆ ಭಾಸವಾಯಿತು. ದುಂಡುಗೆನ್ನೆಯ ಬೆಳ್ಳಗಿನ ನಗುಮೊಗದ ಆ ಮಗುವನ್ನು ವರ್ಣಿಸಿದ ಮೇಲೆ ಅದನ್ನೆತ್ತಿಬಂದ ಆಮಗುವಿನ ಅಮ್ಮನ ಸೌಂದರ್ಯವನ್ನು ಹೊಸದಾಗಿ ಹೇಳಬೇಕಿಲ್ಲವಲ್ಲಾ...!!ನಗುನಗುತ್ತಿರುವ ಒಂದೆರಡು ವರ್ಷದ ಆಮಗು ನನ್ನನ್ನೂ ಅಮ್ಮನನ್ನು ಬಸ್ಸನ್ನೂ ಎವೆಯಿಕ್ಕದೇ ನೋಡುತ್ತಿತ್ತು... ಎಲ್ಲಾ ಹೊಸದು.... ಮಗುವಿನೊಂದಿಗೆ ಸೀಟಿನಲ್ಲಿ ಕುಳಿತ ಆ ತರುಣಿಗೆ ಚೂರು ಹೆಚ್ಚೇ ಜಾಗ ಮಾಡಿಕೊಟ್ಟೆ..!!!
ಮಗುವನ್ನು ನೋಡುವುದೇ ನನಗೆ ಆನಂದಕೊಡುತ್ತಿತ್ತು ಎಂದರೆ ನೀವು ನಂಬಲಿಕ್ಕಿಲ್ಲ... !!!ಹಾಗೇ ಚಲಿಸುತ್ತಿದ್ದ ಬಸ್ಸಿನ ಕುಲುಕಾಟಕ್ಕೆ ಆ ಮಗು ನನ್ನ ಕಾಲಮೇಲೆ ಬಂದು ಕೂರುತ್ತಿತ್ತು.. ಮತ್ತೆ ಅಮ್ಮನ ಮಡಿಲಿಗೆ ಹಾರುತ್ತಿತ್ತು... ಆಗ ಏನೋ ನೆನಪಾದವನಂತೆ ಪ್ಯಾಂಟಿನ ಜೇಬಿನೊಳಕ್ಕೆ ಕೈ ಹಾಕಿದೆ... ಅಲ್ಲೊಂದೈದಾರು ಚಾಕಲೇಟುಗಳು.... ಮಕ್ಕಳು ಅಂದು ಶಾಲೆಯ ಕೊನೇಯದಿನವೆಂದು ತಂದು ಕೊಟ್ಟಿದ್ದು... ಸಿಕ್ಕಿದ ಆ ಚಾಕಲೇಟುಗಳಲ್ಲಿ ಎರಡು ಕೈಗೆ ತೆಗೆದುಕೊಂಡು ಅದನ್ನು ಬಿಡಿಸಿ ಮಗುವಿನ ಮುಂದೆ ಹಿಡಿದೆ... ಮಗು ಅದನ್ನು ಊಂದೇ ಏಟಿಗೆ ಬಾಚಿಕೊಂಡು ಬಾಯಲ್ಲಿಕ್ಕಿ ನಗಾಡಿತು..ಅದರ ನಗುವಿಗಿಂತ ಮಗುವನ್ನು ನೋಡಿ ಮುಗುಳ್ನಗುವ ಆ ತರುಣಿಯ ಮುಖವೇ ನನಗೆ ಆಪ್ಯಾಯಮಾನವೆನಿಸಿತು...ಬಸ್ಸು ಸಾಗುತ್ತಿತ್ತು... ಕೈಯ್ಯಲ್ಲಿದ್ದ ಎರಡೂ ಚಾಕಲೇಟುಗಳನ್ನು ಮುಗಿಸಿ ಮತ್ತೆ ನನ್ನ ಕೈ ನೋಡುತ್ತಿದ್ದ ಮಗುವಿಗೆ ಇನ್ನೊಂದು ಬಿಡಿಸಿಕೊಟ್ತೆ,,,,.... ಅಂತೂ ಚಾಕಲೇಟ್ ಮಾಮನಾದೆ..!!. ಅಮ್ಮನ ಬಾಯಿಂದ ಹೊರಬಿದ್ದ ಧ್ವನಿ ಅದು..!! ಬಸ್ಸಿನ ನಸುಬೆಳಕು ನಮ್ಮ ಸೀಟಿನ ಮುಂದೇ ಇದ್ದುದು ಆ ಅಮ್ಮ ಮಗುವಿನ ಮುಖವನ್ನು ನನಗೆ ತೋರುತ್ತಿರುವುದರಲ್ಲಿ ಯಾವ ದಾಕ್ಷಿಣ್ಯಅನ್ವನೂ ತೋರಲಿಲ್ಲ್ಲ. ಬಸ್ಸು ಸಾಗುತ್ತಿತ್ತು ಅದರ ಭೋರಿಡುವ ಶಬ್ದವನ್ನು ಬಿಟ್ಟರೆ ಆ ಮಗುವಿನ ಕೇಕೆ ನಗು ಮಾತ್ರ ಕೇಳಿಸುತ್ತಿತ್ತು...
        ಹಾಗೇ ರಸ್ತೆಯ ಉದ್ದವನ್ನು ಅಳೆಯುತ್ತಾ ಸಾಗುತ್ತಿದ್ದ ಬಸ್ಸು... ನನ್ನ ಕಾಲ ಮೇಲೇ ಒರಗಿ ನಿದ್ದೆಗೆ ಜಾರುತ್ತಿರುವ ಆ ಮಗು... ಹೀಗೇ ನನಗೂ ಕಣ್ಣು ನಿದ್ದೆಯನ್ನು ಕರೆಯುತ್ತಿತ್ತು..ಅದೆಲ್ಲೋ ಬಸ್ಸು ಇದ್ದಕ್ಕಿದ್ದಂತೇ ರಸ್ತೆಯ ಪಕ್ಕಕ್ಕೆ ಸರಿದು ನಿಂತಿತು..ಕಂಡಕ್ಟರ್ ... ನಿಂತ ಬಸ್ಸಿನ ಜನರ ಸವಿನಿದ್ದೆಯನ್ನು ಕಳೆಯಲೆಂಬತೆ... ...."ನೋಡೀ ಯಾರಾದ್ರೂ ಊಟಾ ಮಾಡೋದಿದ್ರೆ ಬೇಗ ಹೋಗಿ ಬನ್ನಿ ಹತ್ ನಿಮಿಷ ಟೈಮಿದೆ" ಎಂದಾಗಲೇ ನಾನು ಹೊರ ನೋಡಿದ್ದು... ಬಸ್ಸು ತುಮಕೂರಿನಿಮ್ದ ಸ್ವಲ್ಪ ಮುಂದೆ ಬಂದಿರಬೇಕು..ಅಲ್ಲಿ ಹೋಟೇಲೊಂಡರಲ್ಲಿ ಪುಕ್ಕಟೆಯಾಗಿ ಸಿಗುವ ಊಟಕ್ಕಾಗಿ ಈ ಡ್ರೈವರ್ ಕಂಡಕ್ಟರ್ ಇಲ್ಲೇ ತಂದು ನಿಲ್ಲಿಸೋದು ಬಸ್ಸನ್ನು... ನಾನು ಅಲ್ಲಿ ಇಳಿದು ಏನೂ ಮಾಡುವುದಿರಲಿಲ್ಲ. ಕುಳಿತೇ ಇದ್ದೆ. ಅಷ್ಟರಲ್ಲಿ ಪಕ್ಕದಲ್ಲಿ ಕುಳಿತ ಆ ತರುಣಿ ಎದ್ದು .." ಸಾರ್.. ಒಂಚೂರು ಏನಾದ್ರೂ ತಿಂದು ಬರ್ತೇನೆ..ಬೆಂಗಳೂರಲ್ಲಿ ಆಗಲೇ ಇಲ್ಲ ಈ ಮಗುವನ್ನೂ ಕಟಗೊಂಡು..." ಎಂದಳು... ಮಗು ನನ್ನ ಕಾಲ ಮೇಲೆ ಹಾಯಾಗಿ ಮಲಗಿತ್ತು.. ಮಗುವನ್ನು ನನ್ನಲ್ಲೇ ಇರಲೀ ಎಂಬಂತೆ ಸನ್ನೆ ಮಾಡಿ  ಬೇಡಿಕೊಂಡಳು... ಆಯಿತು ಹೋಗಿಬನ್ನಿ ಮಗುವನ್ನು ನಾನು ನೋಡಿಕೊಳ್ತೇನೆ ಎಂದು ಆ ಮಗುವಿಗೆ ನನ್ನ ಕತ್ತಿಗೆ ಬೇಕಾಗುತ್ತದೆಂದು ಇರಿಸಿಕೊಂಡಿದ್ದ ಶಾಲನ್ನು ತೆಗೆದು ಹೊದೆಸಿ ಅವಳನ್ನು ಬೀಳ್ಕೊಟ್ಟೆ...
      "ಎಲ್ಲಾ ಬಂದ್ರಾ..?".... ರೀ ಅಲ್ಲಿ ಯಾರೀ ಆಸೀಟಿಗೆ ಇನ್ಯಾರ್ ಬರಬೇಕೂ.." ಎನ್ನುತ್ತಾ ಕಂಡಕ್ಟರ್ ಬಸ್ಸನ್ನು ಹೊರಡಿಸಲು ವಿಸಿಲ್ ಊದುವುದರಲ್ಲಿದ್ದ... ನಾನೆಂದೆ..." ಸಾರ್..ಇಲ್ಲೊಬ್ಬರು ಬರಬೇಕು.. " ಅದಕ್ಕೆ ಕಂಡಕ್ಟರ್.. ನನ್ನ ಸೀಟಿನ ಹತ್ತರ ಬಂದು ನೋಡಿ ಹೋದ...  ಯಾರ್ರೀ ಅದೂ.. ಬೇಗ ಬನ್ರೀ..." ಪೀಂ.ಪೀಂ..ಪೀಂ.. ಎಂದು ಕೂಗಿಕೊಂಡ... ಊಹೂಂ... ಯಾರೂ ಬರಲಿಲ್ಲ... "ಇಲ್ಲೊಬ್ರು..ಲೇಡಿ ಬರಬೇಕ್ರೀ.." ಎಂದೆ... ಎಲ್ಲರೂ ನನ್ನನ್ನೇ ದುರುಗುಟ್ತಿ ನೋಡುತ್ತಿದ್ದರು... ಎಷ್ಟು ಹೊತ್ತು ಕಾದರೂ ಬಾರದಿದ್ದಾಗ ... ಕಂಡಕ್ಟರ್ ಬಸ್ಸಿಂದ ಇಲಿದು ಆಚೀಚೆ ನೋಡಿ ಎರಡು ಬಾರಿ ವಿಸಲ್ ಊದಿದ.. ಊಹೂ ಯಾರೂ ಇಲ್ಲ....!! ಉಂಡ ಹೋಟೇಲಿನಲ್ಲಿಯೂ ಯಾರೂ ಕಾಣುತ್ತಿಲ್ಲ ಎಂದ ಅಲ್ಲಿಗೆ ಹೋಗಿ ಬಂದ ಕಂಡಕ್ಟರ್...". ಅಯ್ಯೋ... ಮಗು ಇದೇರೀ..ಇಲ್ಲಿ... ಊಟ ಮಾಡೋಕೆ ಹೋಗಿದ್ದಾರೆ.. "... ಮತ್ತೂ ಚೂರ್ ಹೊತ್ತು ಕಾದರೂ ಯಾರೂ ಬಾರದಿದ್ದಾಗ.. ಮೇಲೆ ಬಸ್ಸನ್ನೇರಿದ ಕಂಡಕ್ಟರ್.. ನನ್ನ ಬಳಿಗೆ ಬಂದು.." ಯಾರೀ ಅದೂ" ಕಂಡಕ್ಟರ್.. "ಲೋ ನಡೀಯಪ್ಪಾ ಏನ್ ಜನಾನೋ.." ಎನ್ನುತ್ತಾ ಡ್ರೈವರ್ ನಿಗೆ ಬಸ್ಸನ್ನು ಮುಂದಕ್ಕೆ ಬಿಡಲು ಹೇಳಿದ...!!! ನನಗೋ.. ಏನಪ್ಪಾ ಇದೂ... ಹೀಗೂ ಮಾಡ್ತಾರಾ.." ರೀ.. ಏನ್ ..ನಿಮಗೆ ಬುದ್ಧಿ ಇಲ್ವಾ... ಮಗೂನ್ ಬಿಟ್ ಹೋಗಿದ್ದಾರೆ.. ಅವರನ್ ಬಿಟ್ ಹೋದ್ರೆ...?"  ಎಂದೆ.... ಅದಕ್ಕೆ.. ಯಾರ್ರೀ ಅದೂ... ಮಗೂನ್ ಬಿಟ್ಟ್ ಹೋಗಿದ್ದಾರೇ ಅಂತ ನಾವ್ ರಾತ್ರಿಯೆಲ್ಲಾ ಇಲ್ಲೇ ಇರೋಕಾಗುತ್ತಾ..?" ಎಂದ... ಅಯ್ಯೋ ಶಿವನೇ.. ಇದೇನಪ್ಪಾ..? ಎಂದು ಆಚೀಚೆ ನೋಡುತ್ತಾ ಇರುವಾಗ..ಅದ್ಯಾರೋ ಹೇಳಿದ್ದು ಕೇಳಿಸಿತು.." ಅಯ್ಯ.... ಈ ಹೆಂಗಸರೀಗ್ ಇಷ್ಟ್.... ಇವರು ಯಾವಾಗ್ಲೂ ಹೀಂಗೇನೇ...ಇಲ್ಲೊಂದಿಷ್ಟ್ ಜನ ಸೇರಕಂಡು ಇದೇ ದಂಧೆ ಮಾಡಕಂಬುಟ್ಟವ್ರೇ..." ಅದೆಲ್ಲೋ ಇದ್ದ ಕಂಡಕ್ಟರ್.. ಹ್ವಾಯ್.. ಹೋ..ಇದು ಅದೇ ಕಥೆ ಕಣ್ರೀ..ಎನ್ನುತ್ತಾ... ನಡಿಯಪ್ಪಾ ನೀನು ಎಂದು ಡ್ರೈವರ್ ನಿಗೆ ಪುಸಲಾಯಿಸುತ್ತಿದ್ದ... ಅವರಿಗದು ಸಾಮಾನ್ಯವಾಗಿತ್ತೇನೋ... ಅಂತೂ ಬಸ್ಸಿನ ಚಕ್ರಗಳು ಚಲಿಸಲಾರಂಭಿಸಿದವು..ನನಗೋ... ಕಾಲಿನಲ್ಲಿ ಮಲಗಿದ ಮಗು ಕೆಂಡದಷ್ಟು ಕಾಯಿಸುತ್ತಿತ್ತು.... ಬಸ್ಸು ಚಲಿಸಿಯೇಬಿಟ್ಟಿತು... ಸುಮಾರು ದೂರ ಬಂದ ಬಸ್ಸನ್ನು ನಿಲ್ಲಿಸಿ ನಾನು ನನ್ನಧ್ವನಿಯನ್ನು ಏರಿಸಿದೆ..." ಏನ್ರೀ ನೀವ್ ಮಾಡ್ತಾ ಇರೋದು... ಈ ಮಗೂನ್ ಇಲ್ಲೇ ಬಿಟ್ಟು ಹೋಗಿದ್ದಾಳೆ ಅಂದ್ರೂ ಕೇಳಿಲ್ಲಾ ಈಗ್ ನೋಡಿದ್ರೆ ಮಗು ಬೇರೆ ನನ್ನ ಹತ್ತಿರನೇ ಇದೆ ಆ ಮಹತಾಯಿ ಅದೆಲ್ಲಿದ್ದಾಳೋ.".. ಎಂದೆಲ್ಲಾ ಬಡಬಡಿಸತೊಡಗಿದೆ...ಅದನ್ನು ಕೇಳಿದ ಡ್ರೈವರ್..ನನ್ನತ್ತ ತಿರುಗಿ.ನೋಡಿ.. ಬಸ್ಸನ್ನು ನಿಲ್ಲಿಸಿ.. ಹಿಂದೆ ನೋಡುತ್ತಾ ರಿವರ್ಸ್ ತೆಗೆದುಕೊಳ್ಳತೊಡಗಿದ.. ಬಸ್ಸು ಪುನಃ ತುಮಕೂರು ಕಡೆಗೆ ಮುಖ ಮಾಡಿ ಹೊರಟಿತು... ಬಸ್ಸು ಊಟಕ್ಕೆ ನಿಲ್ಲಿಸಿದ ಹೋಟೇಲು ಸಮೀಪಕ್ಕೇ ತಿರುಗಿ ಬಂತು... ಊಹೂಂ..ಎಲ್ಲೂ ಆ ತರುಣಿಯ ಸುಳಿವಿಲ್ಲ... ಆಚೀಚೆ ನೋಡಿದೆ..ಎಲ್ಲೂ ಕಾಣಿಸುತ್ತಿಲ್ಲ... ಬಸ್ಸನ್ನು ಚೂರು ಮುಂದಕ್ಕೆ ತೆಗೆದುಕೊಂಡು ಹೋಗಿ ನೋಡಿ... ಎಂದು ಬೇಡಿಕೊಂಡೆ...!!! ಡ್ರೈವರನಿಗೆ ಅದೇನು ಬುದ್ಧಿ ಬಂತೋ ..ಅಥವಾ ನನ್ನ ಅದೃಷ್ಟ ಚೆನ್ನಾಗಿತ್ತೋ ಹೇಳಿದ ಕೂಡಲೇ ಡ್ರೈವರ್ ಬಸ್ಸನ್ನು ತುಮಕೂರಿನಕಡೆಗೇ ಓಡಿಸತೊಡಗಿದ ....!!..ಇನ್ನೇನು ಅರ್ಧ ಫರ್ಲಾಂಗ್ ಬಂದಿರಬೇಕು.. ಅಲ್ಲೊಬ್ಬಳು ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು... ನಾನು ಕೂಗಿಕೊಂಡೆ... "ಸಾರ್...ಸಾರ್... ನಿಲ್ಸೀ...ಅದೇ..ಅಲ್ಲೋಗ್ತಾ ಇದ್ದಾಳೆ...ಅವಳೇ ಅವಳೇ.... "... ಡ್ರೈವರ್... ಅವಳ ಪಕ್ಕದಲ್ಲೇ ತಂದು ಬಸ್ಸನ್ನು ನಿಲ್ಲಿಸಿದ... ಕಂಡಕ್ಟರ್ ಕ್ಷಣಮಾತ್ರದಲ್ಲಿ ಇಳಿದವನೇ ಆ ತರುಣಿಯ ಮುಮ್ದೆ ನಿಂತು.". ಏಯ್,,, ಯೆಲ್ಲೋಗ್ತಾ ಇದ್ದೀ.... ಮಗು ಬ್ಯಾಡ್ವಾ... ಮಗೂನ ಬಸ್ಸಲ್ಲಿ ಬಿಟ್ ಬಿಟ್ಟು ಹೀಗ್ ನಡಕೊಂಡ್ ಹೋಗ್ತಾ ಇದ್ದೀಯಲ್ಲಾ...ಲೇ..ನಿನಗೇ ಹೇಳ್ತಾ ಇರೋದು" ಎಂದು ಅವಳ ಭುಜವನ್ನು ಕುಕ್ಕಿದ..ಅವಳು ಗಕ್ಕನೆ ನಿಂತು ಅವಾಕ್ಕಾದಂತೇ ನೋಡಿದಳು..!! ಮತ್ತು ಒಂದೇ ಸಮನೆ ಕೂಗಿಕೊಳ್ಳತೊಡಗಿದಳು. "ಯಾರಾದ್ರೂ ಬನ್ನಿ ಇಲ್ನೋಡೀ ಇವನ್...". ನಾನೂ ಮಗುವನ್ನು ಕಟ್ಟಿಕೊಂಡೇ ಬಸ್ಸಿಳಿದು ಅವಳೆದುರು ಹೋಗಿ ನಿಂತೆ..ನೋಡಿದೆ...ಅವಳೇ...ಅವಳೇ..!!! ಅರೇ... ಇದೇನಪ್ಪಾ..?! "ಲೇ...ಇದೇನ್ ಮಾಡ್ತಾ ಇದ್ದೀಯಾ... ಮಗೂನ್ ಬಿಟ್ ಹೋಗ್ತಾ ಇದ್ದೀಯಲ್ಲಾ...ಬ್ಯಾಡ್ವೇ.... " ಎಂದೆ..ಅದಕ್ಕವಳು ನನ್ನನ್ನೊಮ್ಮೆ ನೋಡಿ ಮಗುವಿನ ಕಡೆ ನೋಡಿದವಳು ತನಗೆ ಸಂಬಂಧವೇ ಇಲ್ಲವೆಂಬಂತೆ ಮುಖ ಕೆಳಗೆ ಹಾಕಿದವಳು  ಮತ್ತೆ ನಡೆಯಲು ಮುಂದಾದಳು... ನನಗೆ ಜಂಘಾಬಲವೇ ಉಡುಗಿ ಹೋದಂತಾಯ್ತು..!!ಆದರೂ ಬರಬಾರದ ಆಲೋಚನೆಗಳೆಲ್ಲಾ ಕ್ಷಣಮಾತ್ರದಲ್ಲಿ ನನ್ನನ್ನು ಕಟ್ಟಿ ಸುತ್ತಿದವು... ಏನೂ ಹೊಳೆಯುತ್ತಿರಲಿಲ್ಲ...ಆದರೂ ಏನೂ ಮಾಡುವಂತಿರಲಿಲ್ಲ.. ಮಗು ನನ್ನ ಭುಜದ ಮೇಲೆ ಮಲಗಿ ನಿದ್ರಿಸುತ್ತಿತ್ತು..." ಸಾರ್...ಇವಳೇ..ಇವಳೇ..ಈ ಮಗುವನ್ನು ಬಿಟ್ ಹೋದೋಳು ... ಗ್ಯಾರಂಟೀ ಇವಳೇ..ಈಗ್ ನಾಟಕಾ ಆಡ್ತಾ ಇದ್ದಾಳೇ.. ಎಳ್ಕೊಳ್ಳಿ ಇವಳನ್ನಾ,,, ರೀ ಡ್ರೈವರ್ರೇ.. ಸ್ತೇಶನ್ನಿಗೇ ತಗಂಡ್ ಹೋಗಿ ಈಯಮ್ಮನ್ನಾ... ಇಲ್ಲ್ದೇ ಇದ್ರೆ ಇವಳು ಬಾಯ್ ಬಿಡೊಲ್ಲಾ... " ಎನ್ನುತ್ತಾ ಒಂದುಕೈಯ್ಯಲ್ಲಿ ಆ ತರುಣಿಯ ಕೈಯ್ಯನ್ನು ಗಟ್ಟಿಯಾಗಿ ಹಿಡಿದು ಎಳೆದು ಬಸ್ಸಿನೊಳಕ್ಕೆ ಕರೆತಂದೆ..ಕಂಡಕ್ಟರ್ ಕುಡಾ ಸಹಕರಿಸಿದ..ಅಂತೂ ಕೂಗಿಕೊಳ್ಳುತ್ತಿರುವ ಆತರುಣಿಯನ್ನು ಚೆನ್ನಾಗಿ ಬೈದು.. ಸ್ಟೇಷನ್ ವರೆಗೆ ಬಸ್ಸನ್ನು ತೆಗೆದುಕೊಂಡುಹೋಗಲು ಹೇಳಿದೆ. ಡ್ರೈವ್ರ್ ಮುಂದಕ್ಕೆ ಬಸ್ಸನ್ನು ಓಡಿಸ ಹತ್ತಿದ ..ಅಂತೂ ತುಮಕೂರು ಪೋಲೀಸ್ ಸ್ಟೇಶನ್ ಒಳಕ್ಕೆ ಬಸ್ಸು ನುಗ್ಗಿತು....
       ಬಸ್ಸಿಂದ ನಾನೇ ಮುಂದಾಗಿ ಇಳಿದು.." ಎಳಕೊಂಡ್ ಬನ್ನೀ ಅವಳನ್ನಾ.." ಎನ್ನುತ್ತಾ ನಾಲ್ಕೇ ಹೆಜ್ಜೆಗೆ ಸ್ಟೇಶನ್ ಒಳಸೇರಿದ್ದೆ ನಾನು... ಕಂಡಕ್ಟರ್ ಅವಳನ್ನೂ ಎಳಕೊಂಡು ಒಳಬಂದ... ಅಲ್ಲೇ ನಿಮ್ತಿದ್ದ ಸೆಂಟ್ರೀ..ಕಣ್ಣೋರೆಸಿಕೊಳ್ಳುತ್ತಾ "ಯಾರೀ..ಅದೂ... " ಎಂದ.. ಅವನಿಗೆ ಹೇಳುತ್ತಿರುವಾಗ್ಲೇ ಅಲ್ಲಿಗೆ ಬಂದ ಇನಸ್ಪೆಕ್ಟರ್..ನನ್ನನ್ನೂ..ನನ್ನ ತೋಳನ್ನೇರಿದ್ದ ಮಗುವನ್ನೂ, ಆ ತರುಣಿಯನ್ನೂ ಒಂದೇ ಸಮನೆ ನೋಡುತ್ತಿದ್ದ.. ಅದುವರೆಗೂ ಯಾವದೇ ಕಾರಣಕ್ಕೂ ಈ ಪೋಲೀಸರ ಸಹವಾಸವನ್ನೇ ಮಾಡದ ನಾನು ಆ ಖಾಖೀ ಬಟ್ತೆಯನ್ನು ನೋಡುತ್ತಲೇ ಒಳಗೊಳಗೇ ಬೆವೆತಿದ್ದೆ...
   ಏನ್ರೀ..ಅದೂ... ಗೋಳೂ...ಎನ್ನುತ್ತಾ ಹತ್ತಿರ ಬಂದ ಆ ಇನಸ್ಪೆಕ್ತರನನ್ನು ನೋಡುತ್ತಾ ನಡೆದುದೆಲ್ಲವನ್ನೂ ಬಿಚ್ಚಿಟ್ಟೆ... " ನೋಡೀ ಸಾ... ಈಗ್ ಮಗು ತಂದೇ ಅಲ್ಲವೇನೋ ಅನ್ನೋಥರ ನಡಕೊಂಡು ಹೋಗ್ತಾ ಇದ್ದಾಳೇ..ಮಗೂ ಇಟಗೊಂದು ನಾನೇನ್ ಮಾಡ್ಳೀ.." ಎಂದೆ... ಇನಸ್ಪೆಕ್ಟರ್..ಅವಳತ್ತ ತಿರುಗೀ.. ಲೇ ಬೋಸೂಡಿ.... ಏನ್ ನಿನ್ ಕಥೆ..? ಬೊಗಳಲೇ... ಎಂದು ತನ್ನ ಪೋಲೀಸ್ ಭಾಷೆಯನ್ನು ಬೆಳಗಿದ..ಆಗವಳು.. ರ್ರೀ.. ಹೀಂಗೆಲ್ಲಾ ಮಾತಾಡ್ಬೇಡೀ..ನಾನೇನ್ ಈ ಮಗೂನ್ ಅಮ್ಮಾನೂ ಅಲ್ಲಾ..ನನಗೆ ಗೊತ್ತೂ ಇಲ್ಲಾ..ಫ್ಯಾಕ್ಟರೀ ಬಿಟ್ ಮನೆಗೆ ಬರತಿದ್ದೋಳನ್ನ ಹೀಂಗ್ ಎಳಕ್ಂಡ್ ಬಂದು ಏನ್ ತೊಂದ್ರೆ ಕೊಡ್ತೀರಾ.. ನನಗೆ ಮಗೂ ಆಗೋಕೆ ನಾನಿನ್ನೂ ಮದ್ವೇನೇ ಆಗಿಲ್ಲಾ.. ನಾಚ್ಕೆ ಆಗಲ್ವಾ ನಿಮಗೇ..ನಾನೇ ಒಮ್ದು ಕಂಪ್ಲೇಂಟ್ ಕೊತ್ರೆ ಸರೀ ಆಗುತ್ತೆ... " ಎಂದು ಜೋರಾದಳು... ಆಗ ಇನಸ್ಪೆಕ್ತರ್.. ಮತ್ತೆ ನನ್ನತ್ತ ತಿರುಗಿ... ಇದು ಆಗೋ ಮಾತಲ್ಲಾ ನೀವೇ ಏನೋ  ನಾಟಕಾ ಆಡ್ತಾ ಇದ್ದೀರಿ.. ಎಂದು ಮಗುವನ್ನು ಎತ್ತಿಕೊಂಡ....!! ನೋಡೀ.. ಈಮಗೂ ಯಾರದೂ ಅಂತ ಬ್ಯಾಗ್ ಹೇಳಿ.. ಇಲ್ಲಾ ಅಂದ್ರೆ ಇಬ್ರನ್ನೂ ಒದ್ದು ಒಳ್ಗಾಕಿ ಬುದ್ಧೀ ಕಲೀಸ್ ಬೇಕಾಗುತ್ತೆ.. ಎನ್ನುತ್ತಾ ಒಳಗೆ ಹೋದ... ನನಗೋ ಪೀಕಲಾಟ.. ನನಗೆ ಗೊತ್ತಿತ್ತು..ಸತ್ಯ ಎಲ್ಲೀದ್ದರೂ ಗೆಲ್ಲುತ್ತದೆ ಎಂದು... ಸುಮ್ಮನೇ ನಿಂತಿದ್ದೆ... ಅವಳೂ ತನಗೆ ಸಂಬಂಧವೇ ಇಲ್ಲವೇನೋ ಎಂಬಂತೇ ನಿಂತೇ ಇದ್ದಳು... ಎಲಾ ಇವಳಾ..!!..
    ಒಳಗಿನಿಂದ ಬಂದ ಇನಸ್ಪೆಕ್ಟರನ ಕೈಯ್ಯಲ್ಲಿ ಲಾಠಿಯೊಂದು ಕಂಡಿತು...!! ಅಯ್ಯೋ... ಇದೇನಪ್ಪಾ ಗ್ರಹಚಾರಾ..!! ಎನ್ನುತ್ತಾ ಸರಿದು ನಿಂತಿದ್ದೆ.. ಹತ್ತಿರ ಬಂದವನೇ ಇನ್ಸ್ಪೆಕ್ಟರ್...ತನ್ನಕೈಯ್ಯಲ್ಲಿದ್ದ ಎರಡು ಬಿಸ್ಕೇಟ್ ಗಳನ್ನು ನನಗೊಮ್ದು ಆ ತರುಣಿಯ ಕೈಗೊಮ್ದು ಇಡುತ್ತಾ... ಮಗು ಯಾರದೂ ಅಂತ ಇಲ್ಲೇ..ಈಗ್ಲೇ ಪತ್ತೆ ಮಾಡ್ತೀನ್ ನೋಡೀ ಎಂದೆನ್ನುತ್ತಾ... ನೋಡಿ ಇಬ್ರೂ..ಬಿಸ್ಕೇಟ್ ತೋರಿಸಿ ಆ ಮಗೂನಾ ಕರೆಯಿರಿ.. ಮಗು ಯಾರ್ ಹತ್ರಕ್ಕೆ ಹೋಗುತ್ತೋ... ನೋಡೋಣ ನಿಜವಾದ್ ಪಾಲಕರು ಯಾರೂ ಅಂತ ಗೊತ್ತಾಗಿಬಿಡುತ್ತೇ ಈಗ್ಲೇ ಎನ್ನುತ್ತಾ ಹಿಂದೆ ಸರಿದ...
       ನನಗೋ ಹೇಗಂದರೂ ಮಗು ತಾಯಿಯ ಹತ್ತಿರಕ್ಕೇ ಹೋಗುತ್ತದೆ ಎಂಬ ದೃಢವಾದ ನಂಬಿಕೆ...ಅವಳೂ ಬಿಸ್ಕೇಟು ಹಿಡಿದು ಕೂಗಿಯೇ ಬಿಟ್ಟಳು.... ನಾನೂ ಕರೆದೆ....!!!!!!
ಛೇ... ಆ ಮಗು  ನನ್ನತ್ತಲೇ ಬಂದುಬಿಡೋದಾ..?!!! ಮೊದಲೆರಡು ಚಾಕಲೇಟು ಕೊಟ್ಟು ಚಾಕಲೇಟು ಮಾಮ ಎನ್ನಿಸಿಕೊಂಡಿದ್ದೆನಲ್ಲಾ..!!! ನನ್ನ ಕೈಯ್ಯ ಬಿಸ್ಕೇಟ್ ಮಗುವಿನ ಬಾಯಿ ಸೇರಿ ಆಗಿತ್ತು... ಅಲ್ಲೇ ಇದ್ದ ತುಮಕೂರು ಸ್ಟೇಶನ್ ಇನಸ್ಪೆಕ್ಟರ್..ಕೈಯ್ಯಲ್ಲಿನ ಲಾಠಿ ನನ್ನ ಬೆನ್ನಿನ ಮೇಲೆ ಆಟ ಆಡಿತ್ತು... ಲೋಫರ್... ಸುಳ್ ಬೇರೆ ಬೊಗಳ್ತೀಯಾ..." ಃ.ಫ್ಟ್...ಅಯ್ಯೋ... ಸತ್ತೇ,,,, "  ಎನ್ನುತ್ತಾ ಕಾಲಿನಿಂದ ಒಮ್ಮೆ ಒದರಿಕೊಂಡೆ...ಪಕ್ಕದಲ್ಲಿ ಮಲಗಿದ್ದ ನನ್ನ ಹೆಂಡತಿ..ಏನಾತ್ರೀ... ಮಧ್ಯರಾತ್ರೇಲಿ.... ಆನಮನೀ ಕೂಗತ್ರೀ.... ಥೋ... ಎಂದಳು.... ಕಣ್ಣೊರೆಸಿಕೊಂಡು ಅವಳನ್ನೇ ನೋಡಿದೆ... ಪಕ್ಕದ ಗೋಡೆಯ ಮೇಲಿನ ಗಡಿಯಾರ... ರಾತ್ರಿ ೩ ಘಂಟೆಯನ್ನು ತೋರುತ್ತಿತ್ತು...ಮುಸುಕೆಳೆದೆ ಮತ್ತೆ..!!











ಶನಿವಾರ, ಮಾರ್ಚ್ 16, 2013

ಊರೆಲ್ಲಾ ಮಂಗ...!!

             ಒಮ್ಮೆ ಒಂದು ಊರಿಗೆ ಓರ್ವ ಮಹಾ ಪುರುಷನ ಆಗಮನವಾಯಿತು.. ಛೇ...ಮಹಾಪುರುಷ ಅಂದಕೂಡ್ಳೇ ಯಾರೋ ಮಹಾಪುರುಷ ಅಂದ್ಕೋಬ್ಯಾಡೀ.. ಅಂತೂ ಬಂದ... ಬಂದವನೇ ಊರಿನ ಹಲವರನ್ನು ಅಲ್ಲಲ್ಲ ಕೆಲವರನ್ನು ಸೇರಿಸಿ ಒಂದು ಅಹವಾಲನ್ನು ಎದುರಿಟ್ಟ... "ನೋದ್ರ್ಯಪ್ಪಾ... ನಾನು ಸುಮ್ ಸುಮ್ಮನೇ ಬಂದೋನಲ್ಲಾ ಈ ಊರಲ್ಲಿ ಮಂಗಗಳು ಹೆಚ್ಚಿವೆ ಅಂತ ಸುದ್ದಿ ಗೊತ್ತಾಯ್ತು..ಅದ್ರಿಂದಾ ನೀವೆಲ್ಲಾ ತುಂಬಾ ತೊಂದ್ರೀನೂ ಅನುಭವಿಸುತ್ತಾ ಇದ್ದೀರಿ ಅಂತಾನೂ ಗೊತ್ತಾಯ್ತು..ಇನ್ನು ಅದಿಲ್ಲ.. ನೀವು ಒಂದು ಕೆಲಸ ಮಾಡಬೇಕು... ಅದ್ರಿಂದಾ ನಿಮಗೆಹಣಾನೂ ಬರುತ್ತೆ ಅಲ್ಲದೇ ಮಂಗನ ಕಾಟಾನೂ ತಪ್ಪುತ್ತೇ ಅಂತ ಭರವಸೆ ಕೊಡ್ತೀನಿ" ಅಂದ. ಇವನ ಮಾತು ಕೇಳಲು ಕೆಲವರಿದ್ದವರು ಹಲವರಾದರು...ಆವಾಗ ಇವನಿಗೆ ಅದೆಲ್ಲಿಂದ ಬಂತೋ ...ಆವೇಶದಿಂದಾ.." ನೋಡೀ ನೀವು ಈ ಊರಲ್ಲಿ ಇರೋ ಮಂಗಗಳನ್ನೆಲ್ಲಾ ಹಿಡದು ನನಗೆ ತಂದು ಕೊಡೀ... ನಾನು ಅದನ್ನು ಖರೀದಿ ಮಾಡ್ತೀನಿ...!!! ಸುಮ್ಮನೇ ಅಲ್ಲಾ...ಒಂದು ಮಂಗನಿಗೆ ೧೦ ರೂಪಾಯಿ ಕೊಡ್ತೀನಿ" ಅಂದ... ಮೊದ ಮೊದಲು ನಂಬದ ಜನ ಕೊನೆಯಲ್ಲಿ ಅದೇ ಆ ಕೆಲವರು ಮೊದಲೇ ಇವನ ಮಾತು ಕೇಳಲು ಬಂದಿದ್ದರಲ್ಲಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿಯೇ ಬಿಟ್ಟರು... ಊರಿಗೆ ಊರೇ ಮಂಗನನ್ನು ಹಿಡಿಯುವವರ ಬೀಡಾಗಿಹೋಯಿತು...
....
ಮನೆಗೊಬ್ಬರಂತೇ ಮಂಗನನ್ನು ಹಿಡಿಯೋಕೆ ತಾಮುಂದು ನಾ ಮುಂದು ಎಂದು ಓಡಿದರು.. ಕೆಲವರು ದೊಡ್ಡ ದೊಡ್ಡ ಗಡವಗಳನ್ನೇ ಕಷ್ಟ ಪಟ್ಟು ಹಿಡಿದು ತಂದರು... ಅಂತೂ ತಂದ ಮಂಗ ಗಳನೆಲ್ಲಾ ಈ ಮಹಾಪುರುಷ ೧೦ ರೂಪಾಯಿಗೊಂದರಂತೇ ವ್ಯಾಪಾರ ಮಾಡಿದ...ಜನರಿಗೆ ಖುಶಿಯೋ ಖುಶಿ... ಮಂಗನಿಗೆ ದುಡ್ಡು ದುಡೀಬಹುದಲ್ಲಾ...
ತಿರುಗಿ ತಿರುಗಿ ಮಂಗನನ್ನು ಕಂಡ ಕಂಡಲ್ಲೆಲ್ಲಾ ಹಿಡಿದು ಅಮುಕಿದರು.... ಎಲ್ಲಾ ಮಂಗಗಳೂ ಖಾಲಿ..!! ೧೦ ರೂಪಾಯಿಗೆ ಒಂದು ಮಂಗ ಸಾರಾ ಸಗಟಾಗಿ ಖರೀದಿಸಿ ಒಂದು ದೊಡ್ಡ ಹಾಲಿನಲ್ಲಿ ಕೂಡಿ ಹಾಕಿದ ಮಹಾಪುರುಷ... ಮಂಗನ ಮಹಲು ಭರ್ತಿ ಆಗೋಯ್ತು...!!ಆದರೂ.... ಈ ಊರವರ ಮಂಗನ ಹಿಡಿಯುವ ದಾಹ ತೀರಲೇ ಇಲ್ಲ... ೧೦ ರೂಪಾಯಿಗೊಂದು ಮಂಗ...!! ಮತ್ತೆ ಕಾಡು ಮೇಡು ಅಲೆದೂ ಅಂತೂ ಮರಿ ಪರಿ ಎಲ್ಲಾ ತಂದರು.. ಅವರೂ ೧೦ ರೂಪಾಯಿ ಎಣಿಸಿ ಜೋಬಿಗೆ ತುರುಕಿ ಮತ್ತೆ ಬೆಟ್ಟ ಬೇಣ ಬಿದ್ದರು... ಊಹೂಂ ಎಲ್ಲೂ ಇಲ್ಲಾ ಮಂಗ...!! ಹೋದವರು ಬರಿಗೈಯ್ಯಲ್ಲಿ ಬರಹತ್ತಿದರು.... ಆಗ ಇದನ್ನು ಗಮನಿಸಿದ ಮಹಾಪುರುಷ... ನೋಡೀ... ಒಂದು ಮಂಗನಿಗೆ ೨೦ ರೂಪಾಯಿ...!!!! ಎಂದ....ಕೆಲವರು ಹೊಟ್ಟೆ ಹಿಸುಕಿಕೊಂಡರು... ಮತ್ತೂ ಓಡಿದರು... ಮೂಲೆ ಮೂಲೆಯಲ್ಲಿರೋ ಮಂಗನಿಗೆಲ್ಲಾ ಶುಕ್ರದೆಸೆ...!!
...
ಅಯ್ಯೋ ಮೊದಲಿನಷ್ಟು ಕಷ್ಟ ಇಲ್ಲಾ ಮೊದಲಾದರೆ ಒಂದು ಮಂಗನಿಗೆ ೧೦ ರೂಪಾಯಿ ಇತ್ತು... ಈಗ ಹಾಗಲ್ಲ ೨೦ ರೂಪಾಯಿ..!! ಹಿಡೀರಪ್ಪೋ..ಅಕ ಅಕ ಕ್ಕಕ್ಕ..ಅಲ್ಲಿ ಹಿಡೀ... ಎಂದು ತಬ್ಬಲಿಯಾದ ಹಾಲೂಡುವ ಮರಿಯನ್ನೂ ಬಿಡಲಿಲ್ಲಾ ಬೆಟ್ಟದ ತುದಿಯಲ್ಲಿ ಅವಿತಿರೋ ಮಂಗನನ್ನೂ ಬಿಡಲಿಲ್ಲಾ ಎಳೆದೆಳೆದು ತಂದರು...ಒಂದಕ್ಕೆ ೨೦ ರೂಪಾಯಿ... ಯಾರಿಗುಂಟು ಯಾರಿಗಿಲ್ಲಾ... ಮಹಲಿನಲ್ಲಿ ಮಂಗ... ಜೇಬಲ್ಲಿ ಹಣ... ಛೇ.... ಎಲ್ಲಾ ಮಂಗ ಖಾಲಿ ಆಗೋಯ್ತಲ್ಲಾ.... ಇನ್ನೂ ಹುಡುಕಿದರು ಮತ್ತೆ ಹುಡುಕಿದರು.. ಸಿಗಲಿಲ್ಲ..ಕೆಲವರು ಅನ್ನ ನೀರು ಬಿಟ್ಟರು.. ಬೆಟ್ಟ ಬೇಣ ಸುತ್ತಿದರು..ಊಹೂಂ ಇಲ್ಲ... ತಿರುಗಿ ಬಂದವರಿಗೆ ಮಹಾ ಪುರುಷ ಕಾಣಲಿಲ್ಲ.. ಬದಲಿಗೆ ಇನ್ನೊಬ್ಬ ಅಸಿಸ್ಟೆಂಟ್ ಕಾಯುತ್ತಿದ್ದ..." ಸಾಯಾಬ್ರು... ಊರಿಗೆ ಹೋಗವ್ರೇ..ದುಡ್ಡಿನ ಗಂಟು ತರೋಕೆ.... ನೋಡೀ... ಅವ್ರು ಹೇಳಿ ಹೋಗಿದ್ದಾರೆ ನನಗೆ... ಇನ್ನು ಒಂದಕ್ಕೆ..೩೦ ರಂತೇ ಕೊಡುತ್ತಾರಂತೆ.. ತಗೊಂಬನ್ನೀ" ಅಂದ... ಮತ್ತೆ ಓಡಿದರು ಜನ... ಊಹೂಂ ಇಲ್ಲಾ.. ಸಿಗಲೇ ಇಲ್ಲಾ... ತಿರುಗಿ ವಾಪಾಸ್ಸು ಬಂದು ನಿಂತರು... ಆಗ ಈ ಅಸಿಸ್ಟೆಂಟ್ ಹೇಳಿದ ಪರಿಸ್ತಿತಿಯನ್ನು ಪೋನ್ ಮಾಡಿ ಸಾವ್ಕಾರರಿಗೆ ಹೇಳಿದೆ.... ಅವ್ರು ಹೇಳಿದ್ರೂ ೫೦ ಕ್ಕೆ ಖರೀದಿ ಮಾಡು ಎಂದು... ಏನ್ ಮಾಡ್ತೀರೀ.. ಹೋಗಿ ತಗೊಂಬನ್ನಿ ಎಂದ್...ಅಯ್ಯಾ ೫೦ ರೂಪಾಯಿನಾ...? ಏನ್ ಮಾಡೋದೂ.... ಒಂದೂ ಸಿಗಲ್ವೇ... ಆಚೀಚೆ ನೋಡುತ್ತಾ ನಿಂತೇ ಬಿಟ್ಟರ್ರು....!! ಆವಾಗ ಈ ಅಸಿಸ್ಟೆಂಟ್ ಒಬ್ಬನ ಕಿವಿಯಲ್ಲಿ ಉಸುರಿದ.." ಲೋ ತಮ್ಮಾ... ಇಲ್ಲಿ ಬಾ... ನೋಡೂ ..ಈ ಮಹಲಿನಲ್ಲಿ ಎಷ್ಟೊಂದು ಮಂಗಗಳು ಬಿದ್ದಿವೆ.. ನಮ್ ಸಾವ್ಕಾರಂಗೆ ಇಲ್ಲಿ ಎಷ್ಟ್ ಇವೆ ಅಂತ ಲೆಕ್ಕಾ ಅಂತೂ ಇಲ್ಲಾ.... ನೋಡು ಆಗೋದಾದ್ರೆ ಹೇಳೂ... ೪೦ ಕ್ಕೆ ಒಂದರಂತೇ ನಿಮಗೇ ಕೊಡತೀನಿ ೫೦ ಕ್ಕೆ ಸಾವ್ಕಾರ ಈಸ್ಕೋತಾನೆ ಗೊತ್ತಾಗಲ್ಲಾ ಅವನೀಗೆ" ಅಂದ... ಈ ಮಾತು ಕಿವ್ವಿಯಿಂದ ಕಿವಿಗೆ ಕ್ಷಣಾಮಾತ್ರದಲ್ಲಿ ಹರಿದು ಹೋಯ್ತು... ೧೦ ರೂಪಾಯಿ ೨೦ ರೂಪಾಯಿನಂತೇ ದುಡಿದಿದ್ದು ಜೋಬಲ್ಲಿ ಕುಣೀತಾ ಇತ್ತಲ್ಲಾ... ಎಲ್ಲಾ ಹೋ ಎಂದರು... ಅಸಿಸ್ಟೇಂಟ ಆರಿಸಿ ಆರಿಸಿ ೪೦ ಕ್ಕೆ ಒಂದರಂತೇ ಮಂಗಗಳನ್ನು ಊರವರಿಗೆ ಕೊಟ್ಟ... ಸಾವ್ಕಾರ ತಿರುಗಿ ಬರೋ ದಿನಾ ಹತ್ರ ಬಂತು ಇನ್ನು ಸಾಕು ಗೊತ್ತಾಗ್ ಬಿಡುತ್ತೆ ಕಷ್ಟ ...ಎಂದ ...ಆದ್ರೂ ಅರ್ಧಕ್ಕರ್ಧ... ಮಹಲಿನ ಮಂಗ ಊರವರ ಹಟ್ಟಿ ಗೂಡಲ್ಲಿ ಬಂಧಿ ಆಗಿತ್ತು...೪೦ ರೂಪಾಯಿಗೆ ತಂದಿದ್ದು.... ಸುಮ್ನೇ ಬರುತ್ತಾ... ಚಿನ್ನದ ರೇಟು.... ೫೦ಕ್ಕೆ ಮಾರೋದು.... ಅಷ್ಟರಲಿ ಪಕ್ಕದ ಊರೀಗೂ ಸುದ್ದಿ ಹೋಯ್ತು... ೪೦ ಕ್ಕೆ ಕೊಡ್ತಾರಂತೆ ಮಂಗನ್ನಾ..!!! ೫೦ ಕ್ಕೆ ಸಾವ್ಕಾರ ಬಂಡಮೇಲೆ ಈಸ್ಕೋತಾನಂತೆ... ಮೇಲೆಬಿದ್ದು ಬಂದರು... ಕಂತೆ ಕಂತೆ ಎಸೆದರು.. ಅಸಿಸ್ಟೆಂಟ...ಇರೋ ಬರೋ ಮಂಗಾನೆಲ್ಲಾ ರಾತ್ರೋ ರಾತ್ರಿ ಮಾರಿದ ೪೦ ರ್ಗೆ ಒಂದು...!! ಮಾಲಿನ ಮಂಗ ಎಲ್ಲಾ ಖಾಲಿ..!!ಇನ್ನೇನು ಸಾವ್ಕಾರ ಬರೋ ವರೆಗೆ ಇವನಿಗೆ ಕೆಲಸಾ ಇಲ್ಲವಲ್ಲಾ.... ಪಕ್ಕದ ಪ್ಯಾಟೇಗೋಗಿ ಗುಂಡಾಕಿ ಬರ್ತೇನೆ ಎಂದು ಬ್ಯಾಗ್ ಹಿಡದು ಹೊರಟ.... ಜನ ಮಂಗನನ್ನು ಊರ ತುಂಭಾ ಬಿಟಗೊಂಡು ಸಾವ್ಕಾರನ ಬರಾ ಕಾಯ್ತಾ ನಿದ್ದೆ ಬಿಟ್ರು... ಊಹೂಂ ಬರಲೇ ಇಲ್ಲ ಸಾವ್ಕಾರ... ಊರೆಲ್ಲಾ ಮಂಗ...!!! ೪೦ ರೂಪಾಯಿನ ಮಂಗ...!!ಸುಖದಲ್ಲಿದ್ದೋರಿಗೆ ಶೂಂಠಿ ಕಷಾಯ ಕುಡಿಸಿದ್ದ...
(೧೦,೨೦ ಕ್ಕೆ ಹಿಡದಿದ್ದು ೪೦ ಗಳಿಸಿತ್ತು... ಸರಾಸರಿ ೨೫ ಲಾಬ ತಂದಿತ್ತು..... ಶೇರು ಮಾರುಕಟ್ಟೆಯಲ್ಲಿ ಹುಚ್ಚಾದ ನನ್ನ ಗೆಳೆಯನೊಬ್ಬನಿಗೆ ನಾನು ಹೇಳಿದ ಕಥೆ... ನಿಮಗೂ ಹಂಚಿದ್ದೇನೆ...)

ಸೋಮವಾರ, ಮಾರ್ಚ್ 11, 2013

ಶಿವರಾತ್ರಿ ಜಾಗರಣೆ.

ನಿಜವಾಗಿ ಹೇಳ್ತೇನೆ.. ಶಿವರಾತ್ರಿಯ ಜಾಗರಣೆ ಅಂದರೆ ಕೇಳಿದ್ದೆನೇ ಹೊರತೂ ಇದೂವರೆಗೆ ಮಾಡಿರಲಿಲ್ಲ..!! ನಿನ್ನೆ ಅದೇಕೋ ನೋಡೋಣ ನಾವೂ ಜಾಗರಣೆ ಮಾಡೋಣ ಎನ್ನಿಸಿ ಎಲೆಪೆಟ್ಟಿಗೆಗೆ ಮೊದಲೇ ಭರ್ತಿಗೊಳಿಸಿ ಹೆಂಡತಿಯೊಡನೆ ಹೇಳಿಕೊಂಡೆ ಮನದಿಂಗಿತವನ್ನು. ಅವಳೂ ಸಮ್ಮತಿಸಿದಳೂ ಅನ್ನಿ.
ಜಾಗರಣೆ ಎಂದರೆ ಎಚ್ಚರಾಗಿರುವುದು...! ಅಲ್ಲವೇ..? ಪಾಪಪ್ರಜ್ಞೆಯಕೊರತೆಯೋ ನನ್ನ ಅಹಂಕಾರದ ಪರಮಾವಧಿಯೋ ಯಾವುದೇ ದೇವರ ಧ್ಯಾನ-ಭಜನೆ-ಪೂಜಾದಿಗಳನ್ನು ಮಾಡಿ ಹೊತ್ತು ಕಳೆಯಬೇಕೆಂದೆನಿಸಲಿಲ್ಲ. ಟಿ.ವಿ. ನೊಡೋಣವೆಂದರೆ ಇದುವರೆಗೂ ಹೆಂಡತಿಗೆ ಟಿ.ವಿ.ಕೇಳಿ ಅಭ್ಯಾಸವೇ ಹೊರತೂ ನೋಡಿ ಅಭ್ಯಾಸವಿಲ್ಲ..ಅವಳು ಇಲ್ಲಿ ಟಿ.ವಿ. ಹಾಕಿ ಒಳಗೆ ಅಡಿಗೆ ಮನೆಯಲ್ಲಿ ಕಾಯಕದಲ್ಲಿ ತೊಡಗಿರುವವಳು.ಮಕ್ಕಳಿಬ್ಬರೂ ತಮಗೆ ಜಾಗರಣೆ ನಿಷಿದ್ಧ ಎಂದು ಮೊದಲೇ ಸಾರಿದ್ದರು...!!ನಾವಿಬ್ಬರೇ ಜಾಗರಣೆ ಮಾಡಬೇಕು..!! ಮೊದಲೆಲ್ಲಾ ಅನ್ನಿಸುತ್ತಿತ್ತು ಎಲ್ಲ ಗಂಡ ಹೆಂಡತಿಯರಿಗನ್ನಿಸಿದಂತೆ...!! ನಾವಿಬ್ಬರೇ ಇರಬೇಕು.. ನಾವೇ ಇರಬೇಕು.. ತುಂಬಾಹೊತ್ತು ನಾವಿಬ್ಬರೇ ಕಳೆಯಬೇಕು .....ಎಷ್ಟೊಂದು ಹೇಳಿಕೊಳ್ಳಬೇಕು..ಇನ್ನೂ ಏನೇನೋ...ಆದರೆ ಬದುಕಿನ ಬಹುದಿನಗಳನ್ನು ಹಾಗೆ ಕಳೆಯಬೇಕೆಂದೆನಿಸಲಿಲ್ಲ..ಕಳೆಯಲು ಪುರುಸೊತ್ತೂ ಇರಲಿಲ್ಲ.. ಆದರೆ ಇಂದು ನಮಗಾಗಿಯೇ ಈ ಶಿವರಾತ್ರಿ-ಜಾಗರಣೆ ಬಂತೇನೋ ಎನ್ನಿಸಿ ಇಬ್ಬರೂ ಜಾಗರಣೆಗೆ ಕುಳಿತೆವು. ಅದೂ ಇದೂ ಮಾತಾಡುತ್ತಾ ಹೊತ್ತು ಸರಿಯುತ್ತಿತ್ತು...
..... ಓಹ್ ಬೆಳಗಾಗಿ ಹೋಯಿತು... ಇನ್ನೂ ಏನನ್ನೋ ಹೇಳಬೇಕಿತ್ತು... ಆಗಲೇ ಇಲ್ಲ.. ಬೆಳಗಾಗಿ ಹೋಯಿತು ಪುಟ್ಟಕ್ಕಾ... ಇನ್ನು ನಾವಿಬ್ಬರೇ ಮಾತಾಡೋದಕ್ಕೆ ಆಗದೇನೋ..ಹಾಲಿನವ ಬಂದೇಬಿಟ್ತ ಮಕ್ಕಳು ಮೈ ಮುರಿದು ಎದ್ದೇಳುವ ಹೊತ್ತು..ನಾವೂ ಎದ್ದು.. ಕಾಯಕದೆಡೆಗೆ ಸರಿದು ಹೋದೆವು.
....ಆಹಾ...ಎಂಥಾ ಜಾಗರಣೆ..ಎಂಥಾ ಜಾಗರಣೆ... ಬದುಕಿನ ಬಹುದಿನಗಳ ಸಿಂಹಾವಲೋಕನ...!!! ಅವಳು ಹೇಳಿದಳು... ನಾನು ಬಡವಿ...ನೀನೂ ಬಡವ ಒಲವೇ ನಮ್ಮ ಬದುಕು...ಛೇ....ನಾನೆಂದೆ... ಅಲ್ಲ ಪುಟ್ಟಕ್ಕಾ... ಬಡವರಲ್ಲ... ಎಂದೆಂದೂ ನನ್ನ ನಿನ್ನ ಬದುಕಿನಲ್ಲಿ ಬಡತನ ಬಂದಿಲ್ಲ ನೋಡೂ... ಎಂದೂ ಅತ್ತಿಲ್ಲ..ನೀನು... ಎಂದೂ ಎದೆಗುಂದಿಲ್ಲ ನಾನೂ.. . ಬದುಕಿಗೆ ಬಡತನ ಬಂದಿಲ್ಲ. ನಿನ್ನೆಯ ಚಿಂತೆಯಿಲ್ಲ..!! ನಾಳಿನ ಯೋಚನೆಯಿಲ್ಲ... ಏಕೆಂದರೆ.... ಶಿವ ಮೆಚ್ಚುವಂತೆ ಬದುಕಿದ್ದೀವಲ್ಲವೇ..? ಮುಂದೂ ಹಾಗೇ...


ಜಾಗರಣೆಯ ಫಲ......೧
...
........
ಮದುವೆಗೆ ಮುನ್ನ ಮಡದಿಯಾಗುವವಳನ್ನು ಕೇಳಬೇಕಾಗಿತ್ತು ಎಂದುಕೊಂಡಿದ್ದೆ... ಆದರೆ ಅದೇಕೋ ಕೇಳಲು ಆಗಿರಲಿಲ್ಲ... 
೧) ನಿಜವಾಗಿ ನನ್ನನ್ನು ಮದುವೆ ಆಗೋದಕ್ಕೆ ಇಷ್ಟ ಇದೆಯಾ..?
೨) ನಿನ್ನ ಮನದಲ್ಲಿ ಮದುವೆ ಆಗುವವ ಶ್ರೀಮಂತನಾಗಿರಬೇಕು ಎಂದಿದೆಯಾ?
೩) ನನ್ನನ್ನು ಮದುವೆ ಆದರೆ ಸುಖವಾಗಿರುವೆನೆಂಬ ಸಮಾಧಾನ ಇದೆಯಾ?
.....ಕೇಳಲು ಪುರುಸೊತ್ತೇ ಇರಲಿಲ್ಲ...
ಜಾಗರಣೆಯಲ್ಲಿ...ಕೇಳಿದೆ...ಅದೇ ಪ್ರಶ್ನೆ... ಆದರೆ ಭೂತಕಾಲದ ರೂಪ...!!
ಅವಳೆಂದಳು..
೧) ಇದುವರೆಗಿನ ನನ್ನೊಂದಿಗಿನ ಬದುಕು ತೃಪ್ತಿ ಕೊಟ್ಟಿದೆಯಾ..?
೨) ನೀನು ಶ್ರೀಮಂತನಲ್ಲಾ ಎಂಬ ಕೊರಗು ಇನ್ನೂ ಇದೆಯಾ..?
೩) ಸುಖ ಎಂದರೆ ಏನು ಎಂದು ತಿಳಿಯುವುದು ಯಾವಾಗ? ದುಃಖದ ಮಡುವಲ್ಲಿದ್ದಾಗ ಅಲ್ಲವಾ?...
....ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾಗಿತ್ತು.....
ಇಬ್ಬರೂ ಕಣ್ಣುಜ್ಜಿಕೊಂಡೆವು.... ಬೆಳಗಾಯಿತು..ಜಾಗರಣೆ ಮುಗಿಸೋಣ..


ಜಾಗರನೆಯ ಫಲ...೨
...
ಅಂದು ನಿನ್ನ ಕೈಹಿಡಿಯುವಾಗ, ತಂದೆಯಿಲ್ಲದ ನನಗೆ ತಂದೆಯ ಸ್ಥಾನದಲ್ಲಿ ನಿಂತು ನಿನ್ನನ್ನು ಮನೆತುಂಬಿಸಿಕೊಳ್ಳುವಾಗ ನನ್ನ ಚಿಕ್ಕಪ್ಪ ಹೇಳಿದ್ದ ನನಗೆ.ಬರೇ ಹೇಳಿದ್ದಲ್ಲ...ಆದೇಶಿಸಿದ್ದ... ಅವನ ಮಾತೇ ಹಾಗೆ... ಎಲ್ಲವೂ ತಕ್ಕದ್ದು ಎಂಬ ಕ್ರಿಯಾಪದದೊಂದಿಗೇ ಅಂತ್ಯವಾಗುತ್ತಿತ್ತು...ಅವನ ಬದುಕೂ ಹಾಗೇ ಇತ್ತು..!!.. ನೋಡು.. ನಿನಗವಲು ಹೆಂಡತಿಯಾಗಿ ಇಂದಿನಿಂದ ನಿನ್ನ ಮನೆಯ ಹೊಸಿಲನ್ನು ತುಳಿದು ಬರುತ್ತಿದ್ದಾಳೆ.. ಕಳೆದ ಮೂವತ್ತು ವರ್ಷಗಳ ಅವಲ ಬದುಕಿನಲ್ಲಿ ನೀನಿರಲಿಲ್ಲ.. ಅಲ್ಲಿ ಅವಳ ಅಪ್ಪ-ಅಮ್ಮ.. ಅಕ್ಕಂದಿರು.. ಅದೇ ಅವಳ ಜಗತ್ತು ಆಗಿದ್ದಿತ್ತು.. ಆದರೆ ಇನ್ನು ಮುಂದೆ ಅವಳ ಜಗತ್ತೆಂದರೆ ನೀನೇ ನೀನೊಬ್ಬನೇ ಇಲ್ಲಿ ಅವಳ ಬದುಕು ಕೇವಲ ಮೂವತ್ತು ವರ್ಷಗಳದ್ದಲ್ಲ. !! ಇಲ್ಲಿ ಅವಳಪ್ಪ ಅವಳಮ್ಮ ಅಕ್ಕಂದಿರು ಇರುವುದಿಲ್ಲ... ಆದರೆ ಎಂದೂ ಕೂಡಾ ಅವಳು ಆ ಕೊರಗನ್ನನುಭವಿಸದಂತೆ ನೋಡ್ಕೊಳ್ಲಬೇಕಾದ್ದು ನಿನ್ನ ಕರ್ತವ್ಯ..!! ಇಂದಿನಿಂದ ನೀನು ಅಂದುಕೊಂಡಂತೆ ಕೇವಲ ಅವಳಿಗೆ ಗಂಡನೊಬ್ಬನೇ ಅಲ್ಲ..!! ಅವಳು ನೆನೆದಾಗ ನೀನೇ ಅಪ್ಪನಾಗಬೇಕು... ಬಯಸಿದಾಗ ಅಮ್ಮನಾಗಬೇಕು.. ಅಣ್ಣತಮ್ಮಂದಿರನ್ನು ಕಾಣದ ಅವಳಿಗೆ ಆ ಸೋದರವಾತ್ದ್ಸಲ್ಯದ ಸವಿಯನ್ನೂ ಉಣಬಡಿಸಬೇಕು..!! ನೋಡು ಕೊನೇಯದಾಗಿ ಹೇಳ್ತೇನೆ...ಏಕೆಂದರೆ ಇನ್ನು ನೀನು ನಮ್ಮ ಮಾತನ್ನು ಕೇಳುವುದೂ ಇಲ್ಲ ಕೇಳಬಾರದು ಕೂಡಾ..!!
ಇದೊ.. ನಿನ್ನವಳ ಕಣ್ಣಲ್ಲಿ ಒಂದೇ ಒಂದು ದಿನ ಕೊರಗಿನ ಕಣ್ಣೀರು ತರಿಸಬೇಡ ಹಾಗೇನಾದರೂ ಬಂದರೆ... ಅದು ನಿನ್ನ ವಂಶವನ್ನೇ ತೊಳೆದುಕೊಂಡು ಹೋದಿತು...ಹಿರಿಯರ ಮಹಾನ್ ತಪಸ್ಸಿನ ಫಲವಾಗಿ ದೊರೆತ ಈ ವಂಶದ ಯಶದ ಹೊಲವನ್ನು ಅವಳ ಕಣ್ಣೀರ ಕೋಡಿಯಿಂದ ಕೊಚ್ಚಿಹೋಗುವಂತೆ ಮಾಡಬೇಡ..ಸರ್ವನಾಶವಾಗಿಬಿಡುತ್ತದೆ...!!
ಎಂದು ಅಂದು ಹೇಳಿದ್ದನಲ್ಲವಾ ಸಣ್ಣ ಮಾವ...! ನಾನೂ ಕೇಳಿಸಿಕೊಂಡಿದ್ದೆ... ಎಂದಾಗ ಜಾಗರಣೆ ಮುಗಿದಿತ್ತು ಬೆಳಕು ಕಂಡಿತ್ತು..!!

ಶುಕ್ರವಾರ, ಫೆಬ್ರವರಿ 22, 2013

ಪ್ರೆಸ್ತ


ಆಚಾರಿ ಮನೆ "ಪ್ರೆಸ್ತ"

...... ನನ್ನ ಚಿಕ್ಕಪ್ಪ ಇಡೀ ಊರಿಗೇ ಪುರೋಹಿತ.... ನಮ್ಮ ಕುಟುಂಬವೇ ಆ ವೃತ್ತಿ ಮಾಡಿಕೊಂಡು ಬಂದದ್ದು... ಊರಿಗೇ ಪ್ಪುರೋಹಿತ ಅಂದ್ರೆ ಸಾಮಾನ್ಯವಾಗಿ ಆ ಊರಲ್ಲಿರುವ ಕೇವಲ ಬ್ರಾಹ್ಮಣರ ಮನೆಗಷ್ಟೇ ಅಲ್ಲ.. ಎಲ್ಲಾ ಜಾತಿ ವರ್ಗದವರಿಗೂ ಕೂಡಾ...ಹಾಗಾಗಿ... ಯಾರದೇ ಮನೆಯಲ್ಲಿ ಏನೇ ಶುಭ ಶೋಭನಾದಿ ಕಾರ್ಯಗಳಾಗಲೀ, ಸಾವು ಶ್ರಾದ್ಧಾದಿ ಕಾರ್ಯಗಳಾಗಲೀ ಚಿಕ್ಕಪ್ಪ ಅಲ್ಲಿಗೆ ಹೋಗಿ ಕಾರ್ಯ ಮುಗಿಸಿಕೊಡುವುದು ಲಾಗಾಯತ್ತಿನಿಂದ ನಡೆದುಬಂದದ್ದು....
ಅದೇ ರೀತಿ ನಮ್ಮ ಊರಿನಲ್ಲಿ ಒಂದಿಷ್ಟು ಆಚಾರಿಗಳ ಕುಟುಂಬ ಇದೆ.. ಆಚಾರಿ ಎಂದರೆ.. ಈ ಮರದ, ಕಬ್ಬಿಣದ ಕೆಲಸ ಮಾಡಿ ಬದುಕಿಕೊಂಡಿರುವ ಜನ. ಸ್ವಲ್ಪ ಪುಕ್ಕಲು ಸ್ವಭಾವದವರು... ಮತ್ತು ಅತಿಯಾದ ಬಾಂಧವ್ಯವನ್ನು ನೆಚ್ಚಿಕೊಳ್ಳುವವರು. ಬಡ ವರ್ಗ ಬೇರೆ... ಇವರು ಮೂಲತಃ ವಿಶ್ವಕರ್ಮ ಬ್ರಾಹ್ಮಣ ವರ್ಗಕ್ಕೆ ಸೇರಿದವರು..ಆದರೂ ಮಾಂಸಾಹಾರ ಸೇವನೆ ಮಾಡುವುದರಿಂದ ನಮ್ಮ ಬ್ರಾಹ್ಮಣರೊಂದಿಗೆ ಕೊಡುಕೊಳ್ಳುವ ಸಂಬಂಧ ಇಲ್ಲ.ಆದರೂ... ಎಲ್ಲಾ ಧಾರ್ಮಿಕ ಕಾರ್ಯಗಳೂ ಬ್ರಾಹ್ಮಣರ ಮನೆಯಲ್ಲಿ ನಡೆದಂತೇ ಇವರ ಮನೆಗಳಲ್ಲೂ ನಡೆಯಬೇಕು...
....ಹೀಗಿರುವ  ಆಚಾರಿ ಕುಟುಂಬದಲ್ಲಿ ಆಗುವ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ನನ್ನ ಚಿಕ್ಕಪ್ಪನೇ ಪುರೋಹಿತನಾಗಿ ನಿಂತು ಮಾಡಿಸಿಕೊಡುತ್ತಿದ್ದ... ಬ್ರಾಹ್ಮಣ ಭೋಜನಕ್ಕಾಗಿ ಅವರ ಜಾತಿಕರೇ ಕೆಲವರು ಕೂರುತ್ತಿದ್ದರು.. ಚಿಕ್ಕಪ್ಪ ಕೇವಲ ಮಂತ್ರಾದಿಗಳನ್ನು ಮಾತ್ರ ಹೇಳಿ ಪೂಜೆ ಪುನಸ್ಕಾದಿಗಳನ್ನು ಮಾಡಿ ಬರುತ್ತಿದ್ದ.
ನಮ್ಮ ಮನೆಗೆ ಅತಿ ಸಮೀಪದಲ್ಲೇ ಇರುವ ಒಂದು ಈ ಆಚಾರಿ ಕುಟುಂಬ... ಮೂರ್ನಾಕು ಜನ ಅಣ್ಣ ತಮ್ಮಂದಿರು...ಎಲ್ಲರೂ ಅವರ ಕುಲ ಕಸುಬಿನಿಂದಲೇ ಹೊಟ್ಟೆ ತುಂಬಿಸಿಕೊಂಡು ಬದುಕು ಸಾಗಿಸುತ್ತಿದ್ದವರು...ಹೇಳಿಕೊಳ್ಳುವಂಥಾ ಆದಾಯದ ಕೆಲಸ ಇಲ್ಲ.ಆದರೂ.... ಬಳಗ ದೊಡ್ಡದೇ... ಏನಾದರೂ ಕಾರ್ಯಗಳಾದರೆ...ಬಹಳ ಮಂದಿ ನೆಂಟರುಗಳು ,ಬಂದುಹೋಗುವುದು ಸಾಮಾನ್ಯವಾಗಿತ್ತು. ಹೀಗಿರುವಾಗ ಆ ಮನೆಯಲ್ಲಿ ಒಂದು ಆ ನಾಲ್ಕುಜನ ಮಕ್ಕಳ ಹೆತ್ತಪ್ಪನಿಗೊಂದು ತಿಲೋದಕ ಬಿಡಬೇಕಿತ್ತು ಎಲ್ಲಾ ಸೇರಿ...
      ನಾಲ್ಕು ದಿನ ಮುಂಚಿತವಾಗಿ ನನ್ನ ಚಿಕ್ಕಪ್ಪನಿಗೆ ಹೇಳಿಕೆ ಬಂದಿತ್ತು.... ಅಲ್ಲಾ..ವಡೆಯಾ.... ನಾಡ್ದೀಕೆ... ಅಪ್ಪ ವಂದ್ ಬತ್ತಾ... ನೀವು ಎಷ್ಟ್ ಮುಂಚೆ ಸಾಧ್ಯಾನೋ ಅಷ್ಟ್ ಮುಂಚೆ ಬನ್ನಿ... ನಮ್ಮೋರ್ ಮುಂಚೆ ಬತ್ತೆ ಹೇಳಿದ್ರು... ( ನಮ್ಮೋರು ಅಂದ್ರೆ ಅವರ ಮನೆಯ ತಿಥಿ ಊಟ ಉಣ್ಣುವ ಬ್ರಾಹ್ಮಣರ ಲೆಕ್ಕದ ಜನ ಅವರ ಜಾತಿಕರೇ)ಬ್ಯಾಗ್ ಬಂದಬುಡೀ.... ನಾಮತ್ತೆ ಕ್ವಾಸನ ( ಕ್ವಾಸ=ಮಗ) ಕಳಿಸ್ತೆ ಆದ್ ಕೂಡ್ಳೇಯಾ..ಬಿಲ್ರೋ...ಅದಕ್ಕೆ ಚಿಕ್ಕಯ್ಯ ವಾರ ದಿನಾ ನೋಡಿ ಬೇರೆ ಎಲ್ಲೆಲ್ಲಿ ಏನೇನು ಕೇರ್ಯಗಳಿವೆ ಎಂಬುದನ್ನೆಲ್ಲಾ ನೋಡಿ...ಅಂತೂ ಕೊನೆಗೆ...ಆಯ್ತಾ... ಬತ್ನಾ... ಹೇಳಿ ಅವನನ್ನು ಕಳಿಸಿಕೊಡುವುದು ವಾಡಿಕೆ.ಅಂತೆಯೇ ಹೇಳಿದ್ದ ಅಂದೂ ಕೂಡಾ...
..ಅಂತೂ... ಆದಿನ ಬಂತು...... ಚಿಕ್ಕಪ್ಪ ಬೇರೆ ಎರಡು ಮೂರು ಕಡೆ ಸತ್ಯನಾರಾಯಣ ಪೂಜೆ, ಪಾರಾಯಣ,,, ಇತ್ಯಾದಿಗಳನ್ನು ನೆರವೇರಿಸಲು ಬೆಳ್ಳಂಬೆಳಿಗ್ಗೆಯೇ ವೊಲೆಗೆ ಉರಿಹಾಕಿ ಮಿಂದು ದೇವರಿಗೆ ಪೂಜೆ ಸಲ್ಲಿಸಿ ಮಡಿಗಂಟಿನೊಂದಿಗೆ ಹೋದೋನು ಗಂಟೆ ಎರಡಾದರೂ ಇನ್ನೂ ಬರಲಿಲ್ಲ...!!! ಅಯ್ಯೋ ಇಂದು ಆ ಆಚಾರಿ ಮನೆಗೆ ಬೇರೆ ಹೋಗಬೇಕಲ್ಲಾ....ಇವ ಇನ್ನೂ ಬಂದೇ ಇಲ್ಲಾ... ಎಂದು ನಾವು ಹೇಳಿಕೊಳ್ಳುತ್ತಿರುವಾಗಲೇ ಗದ್ದೆಯ ತುದಿಯಲ್ಲಿ ಆ ಆಚಾರಿಯ ಮಗ ಬರುತ್ತಿರುವುದು ಕಾಣಿಸಿತು... ಹಾಂ... ಅವ ಬಂದೇ ಬಿಟ್ಟ ಈ ಚಿಕ್ಕಯ್ಯ ಎಲ್ಲಿ ಕುಳಿತಿದ್ದಾನೋ ಎಂದುಕೊಳ್ಳುತ್ತಿರುವಾಗಲೇ ಚಿಕ್ಕಯ್ಯನ ಚರ್ಮದ ಚಪ್ಪಲಿ ಶಬ್ದ ಕೇಳಿತ್ತು ತೋಟದ ಕಡೆಯಿಂದ...
ಅಂತೂ ಇಬ್ಬರೂ ಮನೆಗೆ ಬಂದು ನಿಂತರು... ಚಿಕ್ಕಯ್ಯ ಮಡಿಗಂಟನ್ನು ನನ್ನ ಕೈಗಿತ್ತು..ಒಳ ಕೊಂಡೋಗಿ ಕೊಡು ಎದವನೇ... ತಮಾ....!! ಹಾಂ...ಬಂದ್ಯಾ.... ನಾನು ಒಂದು ಚೂರು ಮಿಂದ್ ಬತ್ನಾ...ಘೋರ್ ಶೆಕೆ... ಬೆವರು... ಅಂದವನು ಬಚ್ಚಲಿಗೆ ಹೋದವ... ಸುಮಾರು ಹೊತ್ತು ಕಳೆದರೂ ಬರಲೇ ಇಲ್ಲ
       ಅಲ್ಲಿಗೆ ಸುಮಾರು ಸಂಜೆ  ೩-೦೦ ಗಂಟೆ ಆಗಿತ್ತು.... ಚಿಕ್ಕಮ್ಮ ಒಳಹೋಗಿ ಚಹದೊಂದಿಗೆ ಹಾಜರಿದ್ದಳು ಜಗುಲಿಯಲ್ಲಿ... ಮಿಂದು ಬಂದವನೇ ಚಿಕ್ಕಮ್ಮನ ಕೈಯ್ಯಿಂದ ಚಹದ ಲೋಟ ತೆಗೆದುಕೊಂಡು ಚಹ ಹೀರುತ್ತಾ ಕುಳಿತ... !!! ಚಹ ಕುಡಿದು ಒಂದು ಕವಳ ಹಾಕಿ ...ತಮಾ.... ಹೋಗ್ವನಾ... ಎಲ್ಲಾ ಬಂದಿರೂರಪ್ಪಾ.... ಅತ್ತೆ ಮಾವಂದಿಕ್ಕಳು ಬದ್ ಮುಟ್ಟರ್ಯಾ...? ಎಂದು ವಿಚಾರಿಸುತ್ತಾ ಕಾಲಿಗೆ ಹಾವುಗೆ ಮೆಟ್ಟಿ ನಿಂತ .... ಆ ಹುಡುಗ ...ಈ ಬರೂರೂ( ಬರಬಹುದು) ಗಾಡೀ ಇನ್ನೂ ಹೋಗಲಿಲ್ಲಾ ಮೂರೂವರೆದೂ... ಎಂದ... ಅಂತೂ ಚಿಕ್ಕಪ್ಪ ಅವನ ಹಿಂದೆ ಹೆಜ್ಜೆ ಹಾಕಿ ಹೋದ...ಅಲ್ಲೇ ಆಡುತ್ತಿರುವ ನನಗೆ ಚಿಕ್ಕಪ್ಪನೊಟ್ಟಿಗೆ ನಾನೂ ಆ ಆಚಾರಿಯ ಮನೆಗೆ ಹೋಗಬೇಕು ನೋಡಬೇಕು ಎನ್ನಿಸಿತು... ನಾನೂ ಹೊರಟೆ...ಹಿಂಬಾಲಿಸಿ... ಚಿಕ್ಕಪ್ಪ ಒಂದೆರಡು ಬಾರಿ ಹಿಂತಿರುಗಿ ನನ್ನನ್ನು ನೋಡಿ ಮುಂದೆ ಸಾಗಿದ...ಅಲ್ಲೇ ಇರುವ ಇನ್ನೊಬ್ಬ ಚಿಕ್ಕಪ್ಪನ ಮನೆಯ ಒಳಗೆ ಹೋಗಿ ಕುಳಿತ..
ಅಂತೂ ಮನೆಯ ಹತ್ತಿರದಲ್ಲೇ ಇತ್ತಲ್ಲಾ... ರಸ್ತೆ, ಬಸ್ ಸ್ಟ್ಯಾಂಡು..ಅಂಗಡಿಗಳು ಮೂರ್ನಾಲ್ಕು... ಅದನ್ನು ದಾಟಿ ಹೋದರೆ ಸಿಗುವುದೇ ಆಚಾರಿಯ ಮನೆ.....! ರಸ್ತೆಗೆ ಬಂದು ನಿಂತರೆ....!!! ತಿಥಿ ಮಾಡಬೇಕಾದ ಆಚಾರಿ ಯಜಮಾನ ಅಲ್ಲೇ ನಿಂತಿದ್ದ.!!!!. ಅವನ ಮಗ ಕೇಳಿದ... ಅಪ್ಪಾ..ಬಸ್ ಹೋಯ್ತಾ... ಅತ್ತಿ ಬಂತಾ..?... ಅಪ್ಪ ಗೋಣು ಆಡಿಸುತ್ತಿದ್ದಾಗಲೇ ಬಸ್ಸಿನ ಶಬ್ದ ಕೇಳಿಸಿತು... ಅಂತೂ ಬಸ್ಸು ಬಂತು... ಅತ್ತೆ ಮಾವ... ಬಸ್ಸಿಳಿದು ಈ ಯಜಮಾನ ಆಚಾರಿಯ ಹತ್ತಿರಕ್ಕೆ ಬಂದರು.. ನಾನು ಅಲ್ಲಿಯೇ ಗೆಳೆಯರೊಂದಿಗೆ ಮಾತಾಡಿಕೊಂಡು ನಿತ್ತಿದ್ದೆ... ಆ ಆಚಾರಿಯ ಮಗಅವನ ಹೆಸರು ಗೋಪಾಲ.... ಅಪ್ಪನ ಹೆಸರು... ಶಂಕರ... ಆದರೆ ನಾವೆಲ್ಲಾ ಕರೆಯುವುದು ಅಪ್ಪನಿಗೆ ಶಂಕ್ರಾಚಾರಿ.. ಮಗ ಗ್ವಾಪ್ಲ....!! ಈ ಗ್ವಾಪ್ಲ ಅತ್ತೆ ಕರಕೊಂಡು ಮನೆಯಕಡೆ ಹೆಜ್ಜೆ ಹಾಕಿದ.. ಮತ್ತೂ ಅಪ್ಪನಿಗೆ ಹೇಳಿದ.... ಅಪ್ಪಾ... ವಡೀದೀರು.. ಈ ಮನೇಲಿ ಕುಂತವ್ರೆ... ಬರೂಕೆ ಹೊತ್ ಮಾಡಬೇಡಾ... ಬ್ಯಾಗ್ ಬಾ... ಮಾವನ್ ಕರಕಂಡೂ..... ಎಂದ ... ನಾನುಅಲ್ಲೇ ಇದ್ದೆ..ಈ ಶಂಕಾಚಾರಿ... ಬಂದ ಆಭಾವನ ಕರಕ್ಕೊಂಡು ಅಂಗಡಿ ಒಳಕ್ಕೆ ಹೋದೋನು ಸುಮಾರು ಹೊತ್ತಿನ ಮೇಲೆ ಹೊರಗೆ ಬಂದ......!!! ಪಂಚೆಯಲ್ಲಿ... ಒಂದಿಷ್ಟು ಸಾಮಾನುಗಳೂ ಇದ್ದವು..ಅವನ್ನು ಗಂಟು ಕಟ್ಟಿ ಹೆಗಲ ಹಿಂಬದಿಗೆ ಜೋತು ಬಿಟ್ಟಿದ್ದ... ಹಾಗೇ ಹೇಳುತ್ತಿದ್ದ... ಬಾವಾ... ಚಾ ಕುಡ್ದ್ ಬಂದ್ಯಾ ಅಥ್ವಾ ಇಲ್ಲೇ ಕುಡೀವನಾ..? ಯೆ... ಬ್ಯಾಡ್ವೇ.. ನಾ ಬರುವಾಗ ಕುಮಟೀಲೇ ಕುಡ್ಕಾ ಬಂದೆ... ಅದು ಸತ್ತದ್ದು ಹಶ್ವಾಯ್ತದೇ... ಅಂತು... ಅದ್ಕೇ ಅಲ್ಲಿ ಬೋಂಡು.. ಮಿಸ್ಸೋಳ್ ಬಾಜಿ ತಿಂದ್ ಚಾಕುಡದೇ ಗಾಡಿ ಹತ್ತದ್ದು.. ಈಗೆಂತಾ ಬ್ಯಾಡ್ವೇ... ಎಂದು ಹೇಳುತ್ತಾ... ಹಿಂತಿರುಗಿ ತಿರುಗಿ ನೋಡುತ್ತಿದ್ದ... ಈ ಬಾವ ...... ಆಗ್ಲಾ ಬಾವಾ.... ವಂದ್ ಗುಟಕು ಕುಡೀವನಾ... ನಂಗೆ ಬೆಳಗಾಗೆ  .. ಓ... ಆ ಕೇಶವ ಹೆಗಡೇರ್ ಮನೀಗೆ ಕೆಲ್ಸಕೆ ಹೋಗೀನಲಾ... ಅಲ್ಲೂ ಸರೀ ಆಸರಗೇ ಆಗ್ಲಿಲ್ಲಾ... ಅವರ ಮನೀಲಿ ಇಂದು ಸತ್ನಾರಣ ಕತಿ ಅಂತೆ...ಮುಸ್ರೀ ತಿಂಬೂಕಾಗಾ ಹೇಳಿ ಅವಲಕ್ಕಿ ಮಾಡೀರು... ಥೋ ನಂಗ್ ಮೆಚ್ಚೂದಿಲ್ವಾ ಬಾವಾ... ...ನಾ ...ಆ ಅವಲಕ್ಕೀ ಮಾತ್ರ ಎಲ್ಲೂ ಹಾಯಕಂಬೂದಿಲ್ಲಾ ನೋಡೂ... ಆದ್ರೂ ಆ ವಡತಿ ಮೊಗ್ ಮೊಗದೀ ಹಾಕತ್ರು... ಬಿಡೂಕಾಯ್ತದ್ಯಾ.... ಆದ್ರೂ ಈಗ ವನ್ನಮೂನಿ ಹಶ್ವಾಯ್ತದೆ... ಭಟ್ರ್ ಬರೂ ಹೊತ್ತಾಯ್ತೆನಾ ಆದ್ರೂ ಗಣಪತಿ ಅಂಗಡೀ ಚಾ ವಂದ ಹನೀ ಕುಡದ್ರೇ ಸಮಾದಾನಾ ಬಿಲಾ.. ಎನ್ನುತ್ತಾ ಬಾವನನ್ನೂ ಎಳಕೊಂಡು ಚಹದಂಗಡಿಗೆ ಹೋದ ಶಂಕ್ರ...!!
         ಅಂತೂ ಆ ಗಣಪತಿ ಮಡಿವಾಳನ ಅಂಗಡಿಯಲ್ಲಿ ಚಹ ಕುಡದು.. ಮನೆಯಕಡೆ ಹೆಜ್ಜೆ ಹಾಕಿದ್ರು..ಭಾವ-ಭಾವ...!!! ಅಲ್ಲಿ... ಮನೆಯ ಯಜಮಾನತಿ... ಈ ಶಂಕ್ರನ ಹೆಂಡತಿ.... ಗೌರಿ.. ಗಂಡನ ದಾರಿಯನ್ನೇ ಕಾಯುತ್ತಿದ್ದವಳು ಅವನನ್ನು ನೋಡಿದಾಕ್ಶಣ.. ಮಂತ್ರಾಕ್ಷತೆಯ ಮಳೆಯನ್ನೇ ಸುರಿಸ ಹತ್ತಿದಳು.. ಅಲ್ವೇ.... ನೀ ಹೀಂಗೇ ಹೇಳಿ ನಂಗ್ ಇಂದ್ ಗುತ್ತಾಯ್ತು ನೋಡು... ಅಲ್ಲಾ... ಪ್ರಸ್ತ್ ಕೇ ಹೇಳಿ ಮನೀಗೆ ನೆಂಟ್ರ ಬಂದ್ ಕುಂತವ್ರೇ.. ನೀ ಇನ್ನೂ ಆ ಸುಟ್ ಮಡವಾಳನ್ ಅಂಗಡಿಲೇ ಅಮಿತಶಿವಾಹರ ಮಾಡಕಂಡು ಕುಂತಿದ್ಯಾಲಾ.. ಯಾರಗೆ ಹೇಳೂದೂ..?... ಎಂದು ಹಲವರೆಯುತ್ತಾ.. ಅವನ ಬೆನ್ನ ಮೇಲೆ ಇದ್ದ ಪೊಟ್ಟಣವನ್ನು ತೆಗೆದುಕೊಂಡು ಒಳಹೋದಳು.. ಅತ್ಗೀ ನಾ ವಂಚಂಬ ಮಿಂದಕಂಡೇ ವಳಗ್ ಬತ್ನೇ.. ಎಂದು ಹೇಳುತ್ತಾ..ಬಚ್ಚಲ ಕಡೆಗೆ ನಡೆದ ಈ ಶಂಕ್ರ.. ಬಾಗಿಲಲ್ಲಿ ನಿಂತಿದ್ದ ಈ ಭಾವನನ್ನು ಮಾತಾಡಿಸುವವರು ಯಾರೂ ಇರಲಿಲ್ಲ....!!! ಅಲ್ಲಿ ಒಳಗೆ ಕೆರಸಿ ಮೊರ ಹಿಡಿಕುಂಟೆ.. ಸದ್ದು ಕೇಳಿಬರುತ್ತಿತ್ತು.. ಇದೀಗ ತಾನೇ ಅಂಗಡಿಯಿಂದ ಬಂದ ಸಾಮಾನುಗಳನ್ನು ಕೇರಿ ಒಂದು ಊಟಕ್ಕೆ ಅಣಿ ಮಾಡಬೇಕಿತ್ತಲ್ಲಾ.. ಅಂತೂ ಮಿಂದು ಬಂದ ಶಂಕ್ರ....ಅರೇ.. ಭಾವಾ.. ವಳಗ್ ಬಾರಾ...ಅಲ್ಲೇ ಅಂಗಳದಲ್ಲೇ ನಿಂತೀದೆ... ಎಂದು ಭಾವನಿಗೆ ಸ್ವಾಗತ ಸಮ್ಮಾನ ಮಾಡುತ್ತಾ... ಗೌರೀ..ಈ ಭಾವಂಗೆ ಚಾ ಬೇಕಾಗಿತ್ತಾ ಏನೆನಾ... ನಾ ಕೇಳ್ಳೂ ಇಲ್ಲಾ.. ನೀನಾರೂ ಮಾತಾಡ್ಸೀದ್ಯಾ... ಹೇಂಗೆ..ಎಂದು ಹೆಂದತಿಯ ಕಡೆಗೆ ಭವನ ಮಾತಾಡಿಸುವ ಹೊಣೆ ಹಾಕಿ ಒಳಕ್ಕೆ ಸರಿದು ಹೋದ....
         ಮಿಂದು ಬಂದ ಶಂಕ್ರ ವಲೆಗೆ ಉರಿ ಹಚ್ಚಿ,,, ಅಕ್ಕೀ ಬೇಯಿಸಲು ಚರಿಗೆ ಇಟ್ಟ.. ಅನ್ನ ಆಯಿತು.. ಉಳಿದಂತೆ ಸಾಮ್ಬಾರು..ಪಾಯಸ. ಇಡ್ಳಿ.. ಹಾಗೇ ಒಂದು ಸಿಹಿ ತಯಾರಾದ್ದು.. ಹೊತ್ತು ಮುಳುಗುವ ಹೊತ್ತಿಗೆ..!!! ಅಷ್ಟಾಗುವಾಗ ಚಿಕ್ಕಪ್ಪ.. ಥೋ ಶಂಕ್ರಾ... ಇಂದು ನೀ ಹೊತ್ ಕಂತೂರೊಳಗೆ ಪಿಂಡಕ್ಕೆ ನೀರ್ ಬಿಡೂ ನಮನೀ ಕಾಂಬುದಿಲ್ವೋ... ಎನ್ನುತ್ತಾ ಅಲ್ಲಿಗೆ ಬಂದ......
            ಊಹೂಂ.. ಆಗೋಯತ್ರಾ... ಇನೇನ್ ನಮ್ ಜನಾನೂ ಆಗ್ಲೇ ಬಂದವ್ರೇ.. ನೀವ್ ಸುರುಮಾಡಕಳೀ.. ಅಷ್ಟೊತ್ತೀಗೆ ನಮ್ಮನೇದು ತಂದಿಡ್ತದೇ ಯೆಲ್ಲಾವಾ.. ಎನ್ನುತ್ತಾ.. ವಡಾ... ನಾನೂ ಮಡಿ ಹಚ್ಚಲಾ..ಎಂದ.. ಅಂತೂ ಶ್ರಾದ್ಧಕ್ಕೆ ಮಡಿ ಹಚ್ಚಿ ಬಂದ ಶಂಕ್ರ.. ಚಿಕ್ಕಪ್ಪ ಶ್ರಾದ್ಧದ ಕರ್ಮಾಚರಣೆಗಳನ್ನು ಪ್ರಾರಂಭಿಸಿ...ಅಥ ದ್ವಿರಾಚಮ್ಯ... ದೇಶ ಕಾಲೌ ಸಂಕೀರ್ತ್ಯ... ಎನ್ನುತ್ತಾ ಒಂದು ಪಕ್ಕದಲ್ಲಿ ಕುಳಿತು.. ಅವರ ಜನಕ್ಕೆ ಹೇಳಿಕೊಡುತ್ತಾ ಈ ಶಂಕ್ರನಿಂದ ಎಲ್ಲ ಶ್ರಾದ್ಧ ಕರ್ಮಗಳನ್ನೂ ಮಾಡಿಸುತ್ತಿದ್ದ.... ಅಲ್ಲಿಗೆ ೫-೦೦ ಆಗುತ್ತಿತ್ತು...ಶ್ರಾದ್ಧದ ಎಲ್ಲಾ ಆಚರಣೆಗಳೂ ಸಾಂಗವಾಗಿ ಮುಗಿದು.. ಪಿಂಡ ಪ್ರದಾನವಾಗಿ ಎಲ್ಲರೂ ಊಟ ಮಾಡಿ ಎಂದು ಹೇಳಿ ಚಿಕ್ಕಪ್ಪ ಮನೆಯ ಕಡೆ ಹೆಜ್ಜೆ ಹಾಕಿದ -ಶಂಕ್ರ ಕೊಟ್ಟ ದಕ್ಷಿಣೆ ತಾಂಬೂಲದೊಂದಿಗೆ...
       ಅಂದು ಬಂದ ನೆಂಟರು ಉಂಡು ತೇಗಿ, ಅವರ ಮನೆಯ ಕವಳ ಬಟ್ಟಲ ಖಾಲಿ ಮಾಡಿ.. ಹೊರಡಲನುವಾಗುವಾಗ... ಥೋ...ಈಗೆಂತಾ ಹೋಗೂದಾ... ಭಾವಾ..ವಳಕಳಾ.. ಬೆಳಗಾಗೆ ಎದ್ದು ಹಾಂಗೇ ಹೋಗಲಾಗೂದೂ.... ಅದೂ ಈಗ್ ಮಾತ್ರ ಉಂಬೂಕೆ ಕುಂತದೇ... ಉಂಡ್ ಉಸರ್ ತೆಗೀದೇ ಓಡೂಕಾಯ್ತದಾ.. ಎಂದು ಸಮ್ಮಾನಕ್ಕೆ ಸುರುವಿಟ್ಟುಕೊಂಡ..ಶಂಕ್ರ... ಅದಕ್ಕೆ ಭಾವ ...ಊಹೂಮ್... ನಾ ಹೋಗ್ವವನೇಯಾ... ಇಶ್ಶೀ.. ನಂಗ್  ವಳೂಕೆಲ್ಲಾ ಆಗೂದಿಲ್ವಾ ಬಾವಾ.. ಅದ್ ಬೇಕಾರೆ ನಾಳೀಕೇ ಬರಲೀ... ಅತ್ಗೀ...ನಾ ಹೋಯ್ತ್ನೇ.... ಬಾ..ನೀನು..ಹಮ್.. ಎನ್ನುತ್ತಾ ಎರಡೆರಡು ಬಾರಿ ಹೋಗುವ ಮುನ್ಸೂಚನೆಯನ್ನು ಹೆಂಡತಿಗೆ ರವಾನಿಸುತ್ತಿದ್ದ ಆ ಭಾವ..!!......ಇಶ್ಶೀ..ಈಗೆಂತಾ ಹೋಗೂದಾ...? ಹೇಂಗೂ ಬಂದಾಗದೇ... ನಾಳೆ ವಳಕಂಡು..ಸಂಜೆ ಕಡಾಗೆ ಹೋದ್ರಾಯ್ತೂ.. ಇಲ್ಬಾ ಇಲ್ಲೀ... ಮತ್ತೆ ಹೋಗೂ ಸುದ್ದೀ ಹೇಳೂಕಿಲ್ಲಾ.....ಆದರೂ..ಈ ಭಾವ... ಅದೇನೋ ಹಠ ಹಿಡಿದವರಂತೇ ನಾನು.. ಇಂದು ಹೋಗ್ಲೇ ಬೇಕೂ.. ಆಗೂದೇ ಇಲ್ಲಾ... ಎನ್ನುತ್ತಾ ರಸ್ತೆಗಿಳಿಯುತ್ತಿದ್ದ.. ಅದನ್ನು ಗಮನಿಸಿದ ಶಂಕ್ರ ತಡೀ ನಾನೂ ಬಂದೆ.. ಅಲ್ಲಿ ಅಂಗಡೀ ತಕಾ ಬತ್ತೆ.. ಇನ್ನೂ ಬಸ್ ಬರೂಕೆ ಲೇಟದ್ಯಾ.. ಗಡಿಬಿಡಿ ಮಾಡಬೇಡ..ಎನ್ನುತ್ತಾ ಒಂದು ಲುಂಗಿ ಸುತ್ತಿ ಹೊರಗೆ ಬಂದ.. ಅಂತೂ ಮನೆಗೆ ಹೋಗಲೇಬೇಕೆನ್ನುವ ಆ ಭಾವನನ್ನೂ ಕರಕೊಂಡು ಬಸ್ ನಿಲ್ದಾಣಕ್ಕೆ ಬರುತ್ತಿದ್ದ... ಅಷ್ಟರಲ್ಲಿ ಬುರ್ರ್ರ್ರ್ರ್.. ಸದ್ದು ಮಾಡುತ್ತಾ ಬಸ್ಸು ಅಲ್ಲಿಂದ ಹೊರಟಿದ್ದ ಸದ್ದು ಇಬ್ಬರಿಗೂ ಕೇಳಿಸಿತು... ಓಹ್.. ಅತೋ ಬಾವಾ..ನೆಡೀತಲಾ ಬಸ್ಸೂ..ಇನ್ ಮನೀಗೋಗೂದು ಹ್ಯಾಂಗೇ... ಹೌದಲಾ ಆ ಸುಟ್ ಮಕದ್ ಅಬಸ್ಸೀಗೆ ಇಂದೇ ಬ್ಯಾಗ ಬರಬೇಕಾ.. ಸಾಯಲ್ಲೋ... ಬೆಂಕಿ  ಸುಟ್ ಹೋಗೂಕೆ... ಆದರೂ ಭಾವನೊಟ್ಟಿಗೆ ಅಂಗಡಿ ಸಮೀಪಕ್ಕೆ ಬಂದ ಶಂಕ್ರ... ಬಾವಾ,,,, ಹ್ಯಾಂಗಂದ್ರೂ ನೀ ನಾಳೇಗ್ ಹೋಗೂದೇಯಾ.. ಇನ್ನು ಬೆಳಗ್ ವರೆಗೂ ಯಾವ್ ಗಾಡೀನೂ ಬರೂದಿಲ್ಲಾ.. ವಂದ್ ಕೆಲಸಾ  ಮಾಡ್ವಾ... ಹ್ಯಾಂಗಂದ್ರೂ ಬಂದಾಗದೇ.. ಚಾ ಕುಡಕಂಡೀ.. ಹೋಗ್ವಾ.. ಎನ್ನುತ್ತಾ ಭಾವನನ್ನೂ ಕರಕೊಂಡು ಅಂಗಡಿ ವಳಕ್ಕೆ ಹೋದ.. ಅಲ್ಲಿಗೆ ಸಂಜೆ ದೀಪ ಹೊತ್ತಿಕೊಂಡಿತ್ತು....ಮತ್ತೆ ಶಂಕ್ರ ಭಾವನೊಟ್ಟಿಗೆ ಮನೆಯ ಕಡೆಗೇ ಹೆಜ್ಜೆ ಹಾಕಿದ್ದ... ಅಂತೂ ಪ್ರೆಸ್ತ ಮುಗಿದಿತ್ತು...