प्रज्वालितॊ ज्ञानमयप्रदीपः

ಬುಧವಾರ, ಫೆಬ್ರವರಿ 20, 2013

BARAT BAND

ಇಂದು ಯಾರೋ ಹೇಳ್ತಿದ್ರು... ಮಂತ್ರಿಗಳು... ಈ ಬಂದ್ ಮಾಡಿದ್ರಿಂದ ಒಂದು ದಿನಕ್ಕೆ ೨೩ ಸಾವಿರ ಕೋಟಿ ನಷ್ಟ ಆಯ್ತಂತೆ...!!! ಅಂದ್ರೆ..... ಪ್ರತೀದಿನ ೨೩ ಸಾವಿರ ಕೋಟಿ ಲಾಭ ಆಗ್ತಿತ್ತು ಅಂತಾಯಿತಲ್ಲವೇ ಅಷ್ಟಾದ್ರೂ ಅದೆಲ್ಲಾ ಎಲ್ಲೀಗ್ ಹೋಗ್ತಿತ್ತೋ...ಆದೇವರೇ ಬಲ್ಲ...ಈ ಕಾರ್ಮಿಕರಿಗಂತೂ ಸಿಗಲೇ ಇಲ್ಲಾ ಬಿಡೀ.....ಆಯ್ತು...ಇಷ್ಟೆಲ್ಲಾ ನಷ್ಟ ಯಾಕ್ ಮಾಡ್ಕೋತೀರೀ.... ಇದೆಯಲ್ಲಾ ಅಲ್ಲಿ ಸ್ವಿಸ್ ಬ್ಯಾಖಲ್ಲಿ ತಂದುಬಿಡೀ ....... ಅದನ್ನ ತಂದ್ರೆ ...ಇನ್ನು ೩೦ ವರ್ಷ್ ಯಾರೂ ಟ್ಯಾಕ್ಸೇ ಕಟ್ಟೊದ್ ಬ್ಯಾಡವಂತೆ... ಅದೇ ಹಣದಲ್ಲಿ ಇಡೀ ದೇಶಾನ ಸಾಕಬಹುದಂತೆ...!!! ಅದೂ ಇರೋ ಸಾಲಾನೆಲ್ಲಾ ತೀರಿಸಿ.... ಅಬ್ಬಾ...!!! ನಿಜವಾಗಲೂ ಭಾರತ ಬಡವಾಗಿದ್ಯಾ...... ಇಲ್ಲಾರೀ...ಹಂ ....ಮತ್ತೆ ತಡ ಯಾಕೆ......ನಾಳೇನೇ ತಂದ್...ಚೆಲ್ಲಾಡ್ಬುಡೀ.... ಎಲ್ಲಾ ಸಂತೋಷವಾಗಿ ಇರಲೀ..

namma Sikshana

ನಮ್ಮನ್ನು ಆಳುವವರಿಗೆ ನಮ್ಮ ದೇಶದ ಎಲ್ಲಾ ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಬೇಕೂ ಅನ್ನೂ ಮನಸ್ಸು ಇದೆಯಾ..? ಅದಕ್ಕಾಗಿ ಸಂವಿಧಾನ ಏನೋ ಹೇಳಿದೆ.. ಎಲ್ಲರಿಗೂ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರಕಬೇಕು ಅಂತ... ಅದಕ್ಕೇ ಇವರೂ ವರ್ಷಕ್ಕೊಂದು ಹೊಸಾ ಹೊಸಾ ಯೋಜನೆ ಮೂಲಕ ದುಡ್ಡು ಸುರೀತಾನೇ ಇದ್ದಾರೆ.. ಭಾಷಣಗಳಲ್ಲಿ ಹೇಳ್ತಾನೇ ಇದ್ದಾರೆ ಎಲ್ಲೋರಿಗೂ ಶಿಕ್ಷಣಾ ಸಿಗಬೇಕೂ... ಎಲ್ಲರೂ ಸಾಕ್ಷರರಾಗಬೇಕೂ ೧೦ ನೇ ತರಗತಿ ವರೆಗೆ ಎಲ್ಲಾ ಮಕ್ಕಳೂ ಕಲೀಲೇ ಬೇಕೂ..ಅದಕ್ಕಾಗಿ ಏನ್ ಬೇಕೋ ಅದ್ ಮಾಡ್ತೀವೀ... ಬಟ್ಟೆ ಕೊಡ್ತೀವಿ, ಊಟಾ ಕೊಡ್ತೀವಿ,,, ಸೈಕಲ್ ಕೊಡ್ತೀವಿ,,ಪುಸ್ತಕಾ ಕೊಡ್ತೀವಿ,, ಶೈಕ್ಷಣಿಕ ಪ್ರವಾಸ ಮಾಡಿಸ್ತೀವಿ.. ರೂಂ ಕೊಡ್ತೀವಿ.. ಎಲ್ಲಾ ಕೊಡ್ತೀವಿ...ಅಂತಾ... ಆದ್ರೆ ಒಳ್ಳೇ ಶಿಕ್ಷಣಾ ಕೊಡ್ತೀವಿ ಅನ್ನೋ ಒಂದೇ ಒಂದು ಯೋಜನೇನೂ ಇಲ್ವೇ ಇಲ್ಲಾ..!!!!! ಹೆತ್ತರಿಕೆ....!!! ಅಂದ್ರೆ ನಿಮಗೆಲ್ಲಾ ಶಿಕ್ಷಣಾ ಕೊಟ್ಬುಟ್ಟು ೧೦ ಕ್ಲಾಸ್ ಪಾಸಾದ್ರೆ... ನಮಗೆ ವೋಟಾಕಾಕೇ ಬರ್ತೀರಾ...ಊಹೂಂ ಖ್ಂಡಿತಾ ಬರಲ್ಲಾ...ಅದ್ಕೇ....ಸಂವಿಧಾನ ಏನೋ ಹೇಳ್ ಬಿಟ್ಟಿದೆ..ಕೊಡಬೇಕೂ ಅಂತ ಅದರ ವಿರುದ್ಧವಾಗಿ ಮಾತಾಡೋ ಹಾಗಿಲ್ಲಾ... ಅದ್ಕೇ ಅಂತೀವಪ್ಪಾ.. ಆದ್ರೆ ಮೇಸ್ಟ್ರುಗಳಿಗೆ ಪಾಟ್ಃಆ ಮಾಡೋಕೆ ಬಿಟ್ರೆ ತಾನೇ ನೀವ್ ಕ್ಲಿಯೋದೂ... ನೀವ್ ಕಲತರೆ ಮತ್ತೆ ನಮ್ಮನ್ ಮಾತಾಡ್ಸಲ್ಲಾ... ವೋಟೂ ಹಾಕಲ್ಲಾ,,,
ಅದ್ಕೇ ಮಗೂನೂ ಚಿವುಟ್ತೀವಿ ತೊಟ್ಳನ್ನೂ ತೂಗ್ತೀವಿ...!!!!!ಹ್ಯಾಂಗೇ...ಇಲ್ಲೊಬ್ರು ಒಳ್ಳೇ ಮೇಸ್ಟ್ರು ಇದ್ರು... ಆಶಾಲೆಗೆ ೧೯೯೬ ಬಂದ್ರಂತೆ... ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ರೂ ಆವಾಗ್ ಅವಕೈಯ್ಯಲ್ಲಿ ಓದಿದ್ ಮಕ್ಕಳು ಇಂದೂ ಅವರನ್ನು ಕಂಡು ಮಾತಾಡಿಸಿಕೊಂಡು ಹೋಗೋದನ್ನು ನೋಡಿದ್ದೇನೆ... ಆದ್ರೆ... ೨೦೦೭ರಲ್ಲಿ ಅದೇ ಶಾಲೆಯಲ್ಲಿ ಈ ರಾಜಕೀಯ ಅನ್ನೊದು ಪ್ರವೇಶ ಮಾಡ್ತು... ಆ ಮೇಸ್ಟ್ರ ಮೇಲೆ ಸುಮ್ ಸುಮ್ಮನೇ ಅಪವಾದಗಳು..ಸಿಲ್ಲಿ ಅಪವಾದಗಳು ಬರೋಕೆ ಶುರು ಆಯ್ತು... ಯಾರೋ ಒಬ್ಬ ಅಪ್ಪ ತನ್ ಮಗನೀಗೆ ಯೇಕೆ ಹೊಡೀತೀಯಾ ಅಂತ ತಗಾದೆ ತೆಗದು ರಾಮಾ ರಂಪ ಮಾಡಿದ... ಆಯ್ತು ಇನ್ನು ಹಾಗಾಗಲ್ಲಪ್ಪಾ ಅಂತ ಕಳಿಸಿದ್ದಾಯ್ತು.... ಮೇಸ್ಟ್ರು ಅದೇ ಶಾಲೆಯಲ್ಲಿ ಇದ್ದಾರೆ... ( ಗುಟ್ಟಿನಲ್ಲಿ ಅವ್ರು ಹೇಳಿದ್ದು) ಆದ್ರೆ..ಅಂದು ಎರಡು ಮೂರನೆ ಕ್ಲಾಸಿನ ಮಕ್ಕಳು ಮಗ್ಗಿ ಹೇಳಿ ವಾಕ್ಯಬರದು ತುಂಬಾ ಚೆನ್ನಾಗಿ ಕಲಿಕೆ ಮಾಡುತ್ತಿದ್ದವರು..ಇಂದು ಆಆಶಾಲೆಗೆ ಹೋಗಿ ನೋಡಿದರೇ... ಅಳು ಬರುತ್ತೇರೀ... ೫ ವರ್ಷದಲ್ಲಿ ಆ ಊರಿನ ಮಕ್ಕಳ ಅಂದರೆ ಒಂದು ಪೀಳಿಗೆಯ ಸರ್ವನಾಶ ಆಗೋಯ್ತು...೭ನೇ ಕ್ಲಾಸ್ ಹುಡುಗನಿಗೆ ಸ್ವಾತಂತ್ರ್ಯ ಅಂತ ಬರೆಯೋಕೆ ಬರೊಲ್ಲಾ... "ಸ್ವಾತತರ" ಅಂತ ಬರೆದೋನೇ ಕ್ಲಾಸಲ್ಲಿ ಹುಶಾರಿ ಹುಡುಗ...!!!! ಸಾಕಲ್ಲವಾ....ಅದ್ಕೇ ಹೇಳ್ತೀನಿ.... ವೈದ್ಯ..ಒಂದು ರೋಗಿಯ ಜೀವ ತೆಗೀಬಹುದು ಆಲಸ್ಯ-ಅಸಡ್ಡೆ ಮಾಡಿದರೆ..ಆದರೆ..ಅದೇ ಅಸಡ್ಡೆನಾ ಒಬ್ಬ ಶಿಕ್ಷಕ ಮಾಡಿದರೆ..ಹಾಗೆ ಅವನ ಮನಸ್ಸಿಗೆ ನೋವು ಉಂಟು ಮಾಡಿದರೆ... ಇಡೀ ಒಂದು ಸಮುದಾಯದ ಒಂದು ಪೀಳಿಗೆಯ ಜನರ ಜೀವನವನ್ನೇ ಸರ್ವನಾಶ ಮಾಡಿಬಿಡಬಹುದು... ಹಾಗಾಗಿ ಅಪ್ಪ ಅಮ್ಮಂದಿರೇ.... ನಿಮ್ಮ ಮಗುವಿನ ಜೀವನ ಆ ಶಿಕ್ಷಕರ ಕೈಯ್ಯಲ್ಲಿದೆ ಎಂಬುದನ್ನು ಮರೆಯಬೇಡಿ... ನಿಮ್ಮ ಮಗುವಿನ ಮೇಲಿನ ಮಮಕಾರಕ್ಕೆ ಶಿಕ್ಷಕನಿಗೆ ನೋವುಂಟುಮಾಡಿದರೆ.... ನಿಮಗೆ ಅಳಿಸಲಾಗದ ನೋವು ಕಟ್ಟಿಟ್ಟ ಬುತ್ತಿ...!!!!
ಇಂದಿನ ಇಡೀ ಸಮಾಜದ ಮನುಷ್ಯರಲ್ಲಿ ಮಾನವೀಯತೆ, ಸತ್ಯ ,, ನ್ಯಾಯಪರತೆ ,ಸಹಕಾರ,, ಇದು ಸತ್ತೋಗಿರೊದಕ್ಕೆ ಖಂಡಿತವಾಗಿ ಶಿಕ್ಷಕ.ಮತ್ತು ಶಿಕ್ಷಣಾನೇ ಕಾರಣ...!!! ಎಲ್ಲೆಲ್ಲಿ ಶಿಕ್ಷಕನಿಗೆ ಬಿಗಿ ಮಾಡುತ್ತಾ ಬಂದರೋ.. ಎಲ್ಲೆಲ್ಲಿ ಶಿಕ್ಷಕನನ್ನು ಕಡೆಗ್ಣಿಸಿ ಇಡೀ ದೇಶದಲ್ಲಿ ಪ್ರಾಥಮಿಕ ಶಿಕ್ಷಕನನ್ನು ಮೂರನೇ ದರ್ಜೆಯ " ನೌಕರ" ಎಂದು ಪರಿಗಣಿಸಿದರೋ... ಅಲ್ಲಿಗೆ ಮುಗಿದು ಹೋಯ್ತು..... ಅವನಲ್ಲಿನ ಅಂತಃ ಸತ್ವಕ್ಕೇ ಕೊಡಲೀ ಪೆಟ್ಟು ಬಿದ್ದಮೇಲೇ ಅವನು ಎಲ್ಲವನ್ನೂ ನುಂಗಿ ನೀರ್ ಕುಡಿದುಬಿಟ್ಟ... ಶಿಕ್ಷ್ಣಣ ಎಲ್ಲಿಗೆ ಹೋಗಬೇಕಿತ್ತೋ ಅದರ ವಿರುದ್ಧ ದಿಕ್ಕಿಗೆ ತೆಕ್ಕೋಂಡು ಹೋಗಿ ನಿಲ್ಲಿಸಿದ..ಕಾಗದ ಕುದುರೆ ವ್ಯಾಪಾರಕ್ಕೆ ಇಳಿದುಬಿಟ್ಟ...ದಾಖಲೆ ಕೇಳುವೋರು ಕಂಡ್ರೂ...ಅವರೀಗೆ ಬೇಕಾದ್ ದಾಖಲೇ ಇಟ್ಟ... ಫಾಠ ಪ್ರವಚನ ಬಿಟ್ಟೇ ಬಿಟ್ಟ!!!.
"ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ " ಅಂತ ಬಾಯಲ್ಲಿ ಹೇಳೋದೂ ಅದೇ ಗಿಡಾನ ತಿದ್ದಿ ತೀಡಿ ಮಾಡುವ ಶಿಕ್ಷಕ ವರ್ಗಕ್ಕೆ ಕೊಡಬಾರದ ಹಿಮ್ಸೆ ಕೊಟ್ಟು ಗಿಡದ ಹತ್ರಾ ಎಲ್ಲು ಸುಳೀದಾಮ್ಗೇ ಮಾಡಿ ಆ ಗಿಡಗಳು ಬಗ್ಗಲೂ ಇಲ್ಲಾ ನೇರಾ ನಿಲ್ಲೋಕೆ ಗೊತ್ತೂ ಆಗಲ್ಲಾ ಹಾಗ್ ಮಾಡಿಸಿ ಇಡೀ ಸಮಾಜವನ್ನು ತ್ರಿಶಂಕು ಮಾಡಿ ಕೂರಿಸಿ ಇಂದು... ಮೊರಲ್ ಎಜ್ಯುಕೇಶನ್ ಬಗ್ಗೆ,,,, ಧೈರ್ಯ ತುಂಬೋದರ ಬಗ್ಗೆ... ಕಾನೂನು ಅರಿವಳಿಕೆಬಗ್ಗೆ... ಹೀಗೇ ಬೇರೆ ಬೇರೇದರ ಬಗ್ಗೆ ಬೇರೆ ಬೇರೇಯೋರ ಹತ್ರ ಶಿಬಿರಾ ಮಾಡೊ ಮಟ್ಟಕ್ ತಂದು ನಿಲ್ಲಿಸಿಬಿಟ್ರು... ಬೇಕಿತ್ತಾ ಇದೆಲ್ಲಾ...?
ಅಯ್ಯೋ ಖರ್ಮವೇ.... ಇವರೀಗೆ ಮಕ್ಕಳ ಪುಸ್ತಕದಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮನ್ ಪಾಠ ಅಂಬೇಡ್ಕರ್ ಪಾಠ ತೆಗೀ ಬಾರ್ದು..ಆದ್ರೆ ಮಕ್ಕಳೀಗೆ ಕಂಪ್ಯೂಟರ್ ನಾಲೇಜ್ ಬರಬೇಕೂ...ಅದೇಂಗ್ ಸಾಧ್ಯಾರೀ... ಅಂಬೇಡ್ಕರ್ ಪಾಠಕ್ಕೂ ಕಂಪ್ಯೂಟರಿಗೂ... ಪಾಪ ಆ ಪುಣ್ಯಾತ್ಮ ಸಾಯೋದ್ರೊಳಗೆ ಕಂಪ್ಯೂಟರ್ ಅನ್ನೋ ಪದಾನಾದ್ರೂ ಕೇಳಿದ್ನೋ ಇಲ್ವೋ...
..
..
...ಇನ್ನೂ ಒಂದು ತಮಾಷೆ ಅಂದ್ರೆ...ಇ ಇತ್ತೀಚಿನ ಸಿನಿಮಾಗಳಲ್ಲಿ ಕಾಣೋಹಾಂಗೇ... ಒಂದು ಲವ್ವು... ಕಾಲೇಜ್ ಲೈಫ್, ಒಂದು ಹೊಡೆದಾಟ..೬ ಹಾಡು... ಕ್ಲೈಮ್ಯಾಕ್ಸಲ್ಲಿ ಒಂದು ಮದುವೆ.. ಹೀಗೇ ಪಟ್ಟಿ ಮಾಡಿಕೊಂಡು ರೀಲ್ ಬಿಚ್ಚಿದಾಂಗೇ ನಮ್ಮಪಟ್ಯಪುಸ್ತಕ ನೋಡಿ ಒಂದು ಅಂಬೇಡ್ಕರ್ ಪಾಠ, ಮೂರು ಹಾಡು ಅದ್ರಲ್ಲಿ ಒಂದು ದೇಶಭಕ್ತಿಗೀತೆ.( ಅವರೇ ಬರೆದಿರ್ತಾರೆ ಇದು ದೇಶಭಕ್ತಿ ಗಿತೆ ಅಂತ..!!) ಇನ್ನು ಬಸವಣ್ಣನ ಬಿಡೋಹಾಗಿಲ್ಲ...!! ಅಲ್ಲಾನ ಹೆಸರಿದ್ದಿದ್ದು ಒಮ್ದಾದ್ರೂ ಪಾಠ ಹಾಕದಿದ್ರೆ ಮುಸ್ಲೀಮರಿಗೆ ಬೇಜಾರಾಗತ್ತೆ... ಯಾವದಾದ್ರೂ ಒಮ್ದು ಪಾಠದಲ್ಲಿ ಮೇರಿ,ಥಾಮಸ್... ಅಬ್ದುಲ್ಲಾ... ಶಾಹಿದಾ ಬೇಗಂ ರವಿ ರಾಜು ಪುಟ್ಟಿ ಬರಲೇಬೇಕು...!! ಎರಡು ಕಥೆಗಳು... ಅದ್ರಲ್ಲಿ ಒಂದು ಎನಿಮೇಶನ್ ಪಿಚ್ಚರ್ ಥರದ್ದು..ಇನ್ನೊಂದು ಯಾವುದೋ ದೇಶದ್ ಯಾವುದೋ ಭಾಷೆಯ ಅನುವಾದಿತ ಕಥೆ.. ಇನ್ನು ಕೊನೇ ಪಾಠ ಗೋವಿನ ಹಾಡು ಇರಬೇಕಿತ್ತು,,,ಅದರ ಬದಲು ಇತ್ತೀಚಿನ ಯಾರೋ ಕವಿಗಳು ಬರೆದ ಅರ್ಥ ಅವರಿಗೇ ಆಗದ ಒಂದು ಊಊದ್ದ ಪದ್ಯ...ಅಲ್ಲಿಗೆ ಪುಸ್ತಕ ಕ್ಲೋಸ್... ಇನ್ನೇನು ಕಡಿದು ಕಟ್ಟೆ ಹಾಕ್ಯಾರು ಮಕ್ಕಳು...?
...
..
..
ಇನ್ನು ಇತಿಹಾಸ ಅಂತೂ ಕೇಳೋದೇ ಬ್ಯಾಡಾ..ಈವರ್ಷ ಆಳೋ ಪಕ್ಷದವರು ಯಾವದನ್ನು ನಮ್ಮ ಇತಿಹಾಸ ಅಂತ ಹೇಳಿ ಪಠ್ಯದಲ್ಲಿ ಹಾಕಿದ್ದರೋ ಮುಂದಿನ್ ವರ್ಷ ಬಂದ ಬೇರೆ ಸರಕಾರ ಅದು ಕಿತ್ತು ಬೇರೇನೇ ಇತಿಹಾಸ ಬರದು ನಂ ಕೈಗೆ ಕೊಟ್ಟು ಇದನ್ನೇ ಹೇಳಿ ಅಂತ ಹೇಳಿಸುತ್ತೆ.... ನಮಗೇ ಗೊಂದಲ ನಾವ್ ಓದಿದ್ ಇತಿಹಾಸ..!!! ಹಿಂದಿನ್ ಸರಕಾರ ಇದ್ದಾಗ ಕೊಟ್ಟ ಇತಿಹಾಸ...!!!!! ಈಗಿನ್ ಸರಕಾರದೋರು ಹೇಳೋ ಇತಿಹಾಸಾ...!!... ಯಾವ್ದೂ ಬ್ಯಾಡ ಅತ್ಲಾಗೆ ಸುಮ್ಮನೇ ಸೈನಾಕಿ ೩೦ ಕ್ಕೆ ಸಂಬ್ಳ ತಗಂಡು ಹೋಗೋಣಪ್ಪಾ ಅನ್ನಿಸಿಬಿಟ್ಟಿದೆ..
ಇನ್ನು ಈ ವಿಜ್ಞಾನದ ಕಥೆ ಕೇಳೋದೇ ಬ್ಯಾಡಾ... ಇದುವರೆಗೂ ನಾವು ನ್ಯೂತನ್ ಅಣುಗಳನ್ನು ಕಂಡುಹಿಡಿದ.(ಕಂಡುಹಿಡಿಯೋಕೆ ಏನು ಅವು ತಪ್ಪಿಸಿಕೊಂಡು ಹೋಗಿದ್ವೇ..? ಇರಲೀ). ಏಣೊ ಎಂತೋ ಹೇಳಿ ಪಾಠ ಮಾಡಿದ್ದಾಯ್ತು..ಈಗ ನಮಗೆ ಅಲ್ಲ್ಲಲ್ಲಾ..ಅವನಿಗಿಂತಾ ನೂರಾರು ವರ್ಷ ಮೊದಲೇ ಬದುಕಿದ್ದ ನಮ್ಮ ದೇಶದವನೇ ಆದ ಕಣಾದ ಈ ಅಣುಗಳ ಇರುವಿಕೆಯನ್ನು ಪತ್ತೆ ಮಾಡಿದ ಎಂದು ಪಾಠ ಮಾಡಿ ಅಂದ್ರು... ಅಯ್ಯೋ ರಾಮಾ... ಕಣಾದ ಅನ್ನೋನು ಈ ದೇಶದಲ್ಲಿ ಇದ್ದೋನು ಅವನು ಅಣು ಶಾಸ್ತ್ರವನ್ನು ಬರೆದ ಅನ್ನೋದು ಈಗ ಗೊತ್ತಾಯ್ತಾ,,,? ಹಾಗಾದ್ರೆ ಸರ್ ಎಂ.ವಿ. ಸರ್ ಸಿವಿ.ರಾಮನ್ ಎಲ್ಲಾ ಇದನ್ನು ಓದೇ ಇಲ್ವಾ..ಆದ್ರೂ ಅವರೀಗೆ ವಿಜ್ಞಾನಿ ಪಟ್ಟ ಸಿಕ್ ಬುಡ್ತಾ..?ಥೂ...ಏನ್ ಬೇಕಾದ್ರೂ ಆಗೋಗ್ಲಿ...ಅಂದ್ಕೊಂಡ್ರೆ..
....
ಈ ಜೀವಶಾಸ್ತ್ರ ಅನ್ನೋ ಕಥೆ ಕೇಳಿದ್ರೆ...ಅಯ್ಯಯ್ಯ...ಅದೇನೋಪ್ಪಾ..ನಾವೂ ಓದಿದ್ವೀ ಪಾಟ್ಃಆನೂ ಮಾಡಿದ್ವೀ ಇದೂವರ್ಗೂ... ಹಾಲು ಮೊಸರು ಬೆಣ್ಣೆ ತುಪ್ಪ ಇವೆಲ್ಲಾ ಶಕ್ತಿ ವ್ರ್ಧಕ ಆಹಾರಗಳು ...ಇದನ್ನು ಬೆಳೆಯುವ ಮಕ್ಕಳು ತಿನ್ನಬೇಕು... ಎಂದು...ಈಗ್ ನೋಡಿದ್ರೆ ಅದು ಹಾಗಲ್ವಂತೆ... ಅವನ್ನು ತಿಂದ್ರೆ ಬೊಜ್ ಬರುತ್ತಂತೆ.... ಮಕ್ಕಳಿಗೆ ಆ ಪಾಠ ತಿರುಗಿಸಿ ಹೇಳಬೇಕು...!!! ಎಂಥಾ ಗ್ರಾಚಾರನಪ್ಪಾ...

ಮಂಗಳವಾರ, ಸೆಪ್ಟೆಂಬರ್ 25, 2012

ಯಕ್ಷ ಪ್ರಶ್ನೆ ....???

ಯಕ್ಷ ಪ್ರಶ್ನೆ ....???

ಯಕ್ಷ :-    ಸೂರ್ಯನು ಉದಯಿಸುವಂತೆ ಮಾಡುವುದು ಯಾವುದು ?
              ಅವನ ಸುತ್ತಲೂ ಸಂಚಾರ ಮಾಡುವವರು ಯಾರು ?
              ಅವನನ್ನು ಮುಳುಗುವಂತೆ ಮಾಡುವವರು ಯಾರು ?
              ರವಿಯು ಪ್ರತಿಷ್ಠಿತನಾಗಿರುವುದೆಲ್ಲಿ ?
ಧರ್ಮ :- ಪರಬ್ರಹ್ಮವು   ಸೂರ್ಯನನ್ನು ಉದಯಿಸುವಂತೆ ಮಾಡುವುದು .
             ಅವನ ಸುತ್ತಲೂ ದೇವಾನು ದೇವತೆಗಳು ಸಂಚಾರ ಮಾಡುವವರು.
             ಕಾಲಧರ್ಮವು ಅವನನ್ನು ಮುಳುಗುವಂತೆ ಮಾಡುವುದು.
             ಸಕಲ ಜೀವಕ್ಕೂ ಕಾರಣನಾದ ಅವನು ಸತ್ಯದಲ್ಲಿ ಪ್ರತಿಷ್ಠಿತನಾಗಿರುವನು.

ಯಕ್ಷ :-   ಯಾವುದರಿಂದ ಮಾನವನು ಶ್ರೋತ್ರೀಯನೆನಿಸುವನು ?
             ಯಾವುದರಿಂದ ಮಹತ್ತನ್ನು ಸಾಧಿಸಬಲ್ಲನು ?
             ಯಾವುದರಿಂದ ದ್ವಿತೀಯ ವ್ಯಕ್ತಿತ್ವವು ಬರಲು ಸಾಧ್ಯ ?
             ಮಾನವನು ಹೇಗೆ ಚತುರನೆನಿಸಬಲ್ಲನು ?

ಧರ್ಮ :- ಶೃತಿವಾಕ್ಯಗಳನ್ನು ಕೇಳುವುದರಿಂದ ಶ್ರೋತ್ರೀಯನಾಗುವನು.
              ತಪೋಬಲದಿಂದ ಮಹತ್ತನ್ನು ಸಾಧಿಸಬಲ್ಲನು.
              ದ್ವಿತೀಯ ವ್ಯಕ್ತಿತ್ವವನ್ನು ಧೈರ್ಯವು ನೀಡಬಲ್ಲುದು.
              ಜ್ಞಾನ ವೃದ್ಧರ, ವಯೋವೃದ್ಧರ ಸಂಗ - ಸೇವನೆಯಿಂದ ಮಾನವನು ಚತುರನೆನಿಸುವನು.

ಭಾನುವಾರ, ಆಗಸ್ಟ್ 5, 2012

.............. ಹಸಿವು


............................
.............. ಹಸಿವು....... ಹಸಿವು...... ಅಮ್ಮಾ...ಹಸಿವಾಗ್ತಿದೆ....ಅಣ್ಣಾ....ಅಸಿವೂ..... ಯೆಂಥಾ ಹಸಿವೂ.. ಯೆಂಥಾ ಹಸಿವು...ಅಯ್ಯೋ.... ತಡಕೊಳ್ಳೋಕೇ ಆಗತಾ ಇಲ್ಲಾ... ಹಸಿವು....... ಸಿಕ್ಕಿದ್ದು ತಿಂದು ಬಿಡೋಣ ಅನ್ನಿಸುತ್ತದೆ......ಆದ್ರೆ ಯೇನೂ ಸಿಗುವುದಿಲ್ಲವಲ್ಲಾ..... ಅಯ್ಯೊ ಹಸಿವು.... ಈ ಹಸಿವನ್ನು ತಡೇಯೋದು ಹ್ಯಾಂಗೇ.... ಇಲ್ಲಾ ಇಲ್ಲಾ.... ಯೇನು ಸಿಕ್ಕಿದರೂ ತಿಂದು...ಹೂಂ...ಸಾಕು ಅದೂ ಆದೀತು....ಕೊಡಿ ಕೊಡಿ... ಈ ಹಸಿವಿನ ಮುಂದೆ...ಯೇನೂ ಇಲ್ಲಾ.... ಹೌದು....ಆಸ್ತಿ ,ಅಂತಸ್ತು..... ಊಹೂಂ...ಯೇನಿದ್ದರೇನು ಈ ಹಸಿವು ಹಾಗೇ ಇದೆಯಲ್ಲಾ....ಅಯ್ಯೋ, ಅಯ್ಯೋ, ನಾನು ಹಸಿವೂ ಅಂತ ಬೇಡ್ತಾ ಇದ್ದೇನೆ..... ಯಾರೂ ಕೊಡೋದಿಲ್ಲವಲ್ಲಾ..... ಈ ಮಾನಾ.. ಮರ್ಯಾದೆ.... ಊಹೂಂ..ಯಾವುದೂ ನನ್ನ ಈ ಹಸಿವನ್ನು ನೀಗಿಸಲಾರದಲ್ಲಾ..... ಹೌದು..ಹೌದು..... ಮಾನ ಇರೋದು ನನಗೋ ಈ ಶರೀರಕ್ಕೋ......? ಛೇ...ಈ ಅಧ್ಯಾತ್ಮ ಊಹೂಂ...ತಲೆಗೆಲ್ಲಿ ಹೋದೀತು..ಅಂಥಾ ಹಸಿವಾಗ್ತಿದೆ.... ಮಾನಹೋದ್ರೂ ಚಿಂತಿಲ್ಲಾ ಹಸಿವು ನೀಗಬೇಕು.... ಅದೋ ಅದೋ ಯಾರೋ ಉಂಡ ಎಂಜಲೆಲೆ ಅಲ್ಲಿ ಬೀಸಾಕಿದ್ರು ...ಓಡು ಓಡು...ಬೇಗ ಓಡು...ಅಲ್ಲಿ ಆ ಎಲೆಯಲ್ಲಿ ಉಳಿದಿದ್ದು ಯೇಣಾದರೂ ಸಿಕ್ಕೀತು..... ಓಹೋ...ಅದೋ ನನ್ನಂಥವರು ಸುಮಾರುಜೆನ ಓಡಿ ಬರುತ್ತಿದ್ದಾರೆ..ಅಲ್ಲಿಗೇ...ಹೋಯ್...ನಿಲ್ಲಿ..ನಿಲ್ಲಿ...ಮೊದಾಲು ನಾನು ನೋಡಿದ್ದು ಇದನ್ನ....ಮುಟ್ಟಬೇಡೀ..ನಂದು ಅದು....ಅಯ್ಯೋ..ಓಡಲೂ ಶಕ್ತಿಯಿಲ್ಲವಲ್ಲಾ....ಬಂದೇ ಬಿಟ್ಟರು...ಆಯ್..... ಹಚ್ಚಾ...ಈ ನಾಯಿ ಬೇರೆ... ಅದನ್ನೇ ಎಗರಿ ತಿನ್ನೋಕೆ ನೋಡ್ತಾಯಿದೆ.... ಅಯ್ಯಪ್ಪಾ...ಸತ್ತೇ,,,,, ಅದ್ಯಾರಪ್ಪಾ.. ನನ್ನ ಮೈಮ್ಯಾಲೇ ಬಿದ್ದುಬಿಟ್ರಲ್ಲಾ... ಥೂ... ಹಾಳು ಜನಾ... ಉಣ್ಣೋಕೂ ಬಿಡ್ತಾಯಿಲ್ಲಾ ಇಲ್ಲ ಇಲ್ಲ ಆಗಲ್ಲ  ಆಗಲ್ಲ ......ಕಟ್ಟಿಕೊಂಡು ಹೋಗೋದೇ ಸರಿ...ಆದ್ರೆಯೇನೂ  ಇಲ್ವೇ... ಹಾಂ..ಈ ಹರಿದೋಗಿರೋ ಅಂಗಿ... ಸಾಕು... ಸಾಕು..ಇದಾದ್ರೂ ಇದ್ಯಲ್ಲಾ.... ಯಪ್ಪಾ..... ಬಿಡಣ್ಣಾ... ನಾನ್ ಹೋಗ್ತೀನಿ ಬಿಡಣ್ಣಾ... ಅಯ್ಯಪ್ಪಾ..ಹೊಡೀಬ್ಯಾಡಾ... ನಿಂಗೇ ಕೊಡ್ತೇನೆ ತಗೋ... ಇದಾ... ನೀನೂ ಉಣ್ಣು.... ನನಗೆ ಒಂಚೂರು ಕೊಡು.....ಇಲ್ಲಣ್ಣಾ..ಯೇನೂ..ತಿಂದಿಲ್ಲಾ... ನೋಡು ಹೊಟ್ಟೆ ಹಸಿದಿದೆ... ನಿಲ್ಲೋಕೂ ಆಗ್ತಾ ಇಲ್ಲಾ... ಅಯ್ಯಯ್ಯೋ... ಯಾರಪ್ಪಾ ಇದೂ... ಅದೇ,,ಅದೇ ಅಲ್ಯಾರೋ ದೇವರ ನಾಮಾ ಹೇಳ್ತಾರೆ ಉಣ್ಣೋ ಮೊದ್ಲು ದೇವರ ನೆನೆಯಬೇಕಂತೆ.. ಹೌದು... ಹೌದು ಥೂ... ಅದ್ಕೂ ಬಿಡ್ತಾಯಿಲ್ವೇ ಈ ನಾಯಿಗಳೂ... ಅಯೋ ಹೊಯ್ತು..ಹೋಯ್ತು...

ಶನಿವಾರ, ಆಗಸ್ಟ್ 4, 2012

ನಾವೂ...ಎಳೇಯ ಗೆಳೆಯರಾಗೋಣವೇ?

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೋ ಸುಂದರ
..............
ಹೌದು, ನಾವೆಲ್ಲಾ ಒಂದೇ ಒಂದು ಬಾರಿ ಎಳೇಯ ಗೆಳೆಯರಾಗೋಣವೇ?
ಅದೇ, ಉಡುದಾರದ ಬಲದ ಮೇಲೇ ನಿಂತಿರುವ ಗುಂಡಿಗಳಿಲ್ಲದ ಚೆಡ್ಡಿ....
ಮೇಲಿಂದು ಕೆಳಗೆ ಕೆಳಗಿನ ಗುಂಡಿ ಮೇಲೆ ಸಿಕ್ಕಿಸಿಕೊಂಡ ಅಂಗಿ,......
ಒಮ್ದುಕೈಯ್ಯಲ್ಲಿ ಬೀಳುತ್ತಿರುವ ಚೆಡ್ಡಿಯನ್ನು ಹಿಡಿದುಕೊಂಡೇ ...ಯೇ...ನಿಲ್ಲ...ನಾನೂ ಬತ್ತೆ... ನಾನೂ ಬತ್ತೆ ಹೇಳಿ ಓಡುವ ಓಡುವಾಗ ಕಲ್ಲು, ಕೊದಂಟಿಗಳು ತಡೆಸಿದರೂ ಸಾವರಿಸಿಕೊಂಡು ಓಡುವ ನಮ್ಮ ಆ ಅಗಾಧ ಭ್ರಾಮಕತೆ,
ಗುಬ್ಬಿ ಎಂಜಲು ಮಾಡಿ ತಿಂದ ಪೇರಳೆ ಹಣ್ಣು.......
ಸೊಂಟಕ್ಕೆ ಹಗ್ಗ ಕಟ್ಟಿ ಓಡಿಸುವ .....ಹೋಕ್ಯ ಹೋಕ್ಯ.... ಕಾಮನ ಹಬ್ಬ,
ನಿನ್ನೆ ನೋಡಿದ ಕೆರೆಮನೆ ಮ್ಯಾಳದ ಆಟದ ತದ್ರೂಪು....ಸೋಂಗೆ ಅಟ್ಟಣಿಗೆಯಲ್ಲಿ ಎತ್ತರ ಎತ್ತರ ಜಿಗಿದು... ಹಾಳೆ ಕೊಟ್ಟೆ ಬಡ್ಯುತ್ತಾ.. ....ತತ್ತೋಂಕ ಧಿಕುತಕ ತೈಯ್ಯ ತೈಯ್ಯ ತಕ ತತ್ತೋಂಗ ಧಿಕುತಾ ಧೇಂ.... ಬಚ್ಚಲ ಒಲೆಯ ಮಸಿ ಇಳ್ಗಾಳವ ತೇದು ಬಳಿದುಕೊಂಡ ಮೀಸೆ,
ಅರ್ಥವಾಗದ ವಯಸ್ಸಿನಲ್ಲೇ........ ಮಾನೀನಿ ಮಣಿಯೇ ಬಾರೇ... ಎಂದು ಆಚೆ ಮನೆ ಕೂಸಿನ ಕೈ ಹಿಡಿದೆಳೆದು... ಕುಣಿದ ಯಕ್ಷಗಾನ,
.... ಕೆಳಗೆ ಬೀಳಿಸಿದರೆ.... ಉಳಿದವರೆಲ್ಲಗೂ ಪಾಲು ಕೊಡಬೇಕಲ್ಲಾ ಎಂದು ಹಲಸಿನ ಮರದ ಮೇಲೇ ಕುಳಿತು ಪೂರಾ ಒಂದು ಚೆಕ್ಕೆ ಹಲಸಿನ ಹಣ್ಣು ಬಿರಿದು ತಿಂದು ಕೆಳಗಿಳಿದು ಬಂದು ಉಳಿದವರಿಗ್ರ್...... ತೊಮ್ಮೆ ನಿಂಗ್ ತೊಮ್ಮೆ... ಹೇಳಿದ್ದು....
ಮೊಣಕಾಲುದ್ದ ನೀರಿನ ಗದ್ದೆ ಹೊಂಡದಲ್ಲಿ.... ಕವಳೆ ಕಾಯಿ ಹೆಕ್ಕಿ ಹೆಕ್ಕಿ ನಂದು ಹೆಚ್ಚಾತು ನಂದು ಹೆಚ್ಚಾತು ಹೇಳಿ ಹಾಕಿದ ಅಂಗಿಯಲ್ಲೇ ಗಂಟು ಕಟ್ಟಿ ಮನೆಗೆ ಓಡಿ ಬಂದದ್ದು,,, ಅದರ ದೋಸೆ ಮಾಡಿಕೊಡು ಎಂದು ಅಮ್ಮನಿಗೆ ದುಂಬಾಲುಬಿದ್ದಿದ್ದು....
ಆಚೆಮನೆ ತಂಗಿ ಗೆ ಮರ ಹತ್ತುಲಾಗತಿಲ್ಲೆ ಹೇಳಿ... ಅಷ್ಟು ಎತ್ತರದ ಅಂಡಮುರುಗಲ ಮರ ಹತ್ತಿ.... ಅದರ ಹಳದಿ ಹಣ್ಣುಗಳನ್ನು ಕೊಯ್ದು ಕೆಳ ಹಾಕುವಾಗ ತಂಗಿ ತನ್ನ ಲಂಗವ ಹಿಡಿದು ಕೊಂಡು ಕಾಯ್ದಿದ್ದು..... ಅದು ಕಡೆಗೂ ಕಲ್ಲು ಬಂಡೆಯ ಮೇಲೆ ''' ಪಚಕ್... ಎಂದು ಬಿದ್ದು.....ಅಯ್ಯೊಯ್ಯೋ...ಬಿದ್ದೋತು...ಹೇಳಿದ್ದು..ಮತ್ತೊಂದು ಕೊಯ್ದು ಕೈಯ್ಯಲ್ಲೇ ಹಿಡಿದು ಕೆಳಬಂದು ಅವಳಕೈಗಿತ್ತು ಅವಳ ಆ ನಗುವಿನಲ್ಲಿ ನಾವೆಲ್ಲಾ ನೆಗಾಡಿದ್ದು..
ಇದು ಗೆಳೆತನ ಅಂದಿನ ನೆನಪು...

ಭಾನುವಾರ, ಜುಲೈ 29, 2012

ರಾಮ ನಿರ್ಯಾಣ.....

ರಾಮ ನಿರ್ಯಾಣ.....

        ಸೀತೆ ಹೆಸರೇ ಸೂಚಿಸುವಂತೆ ಅವಳು ಭೂಜಾತೆ. ..... ಈ ಭೂಮಿಗೆ ಆರೋಪಿತವಾದ ಎಲ್ಲಾ ಸದ್ಗುಣಗಳ ಸಾಕಾರ ಅವಳು. ಇಂದು ಅದೇಕೋ ನನ್ನ ಮನದಲ್ಲಿ ಅವಳ ಕುರಿತಾಗಿ ಗಾಢವಾದ ಕೆಲವು ಆಲೋಚನೆಗಳು ಧುಮ್ಮಿಕ್ಕಿ ಬಂತು.... ಭೂಮಿಯನ್ನು ನೆನೆದಾಗಲೆಲ್ಲಾ ನಾನು ಸೀತೆಯ ಮಡಿಲ ಮಗುವೆಂದು ಬಗೆಯುವುದು ಅಭ್ಯಾಸವಾಗಿ ಹೋಗ್ಯದೆ.ಆ ತಾಳ್ಮೆ, ಆ ಅನುರಾಗ, ಆ ಮಮತೆ, ಎಲ್ಲಾ.... ಪದಗಳೂ ಅವಳಿಗಾಗಿಯೇ ಹುಟ್ಟಿದ್ದೋ... ಅಥವಾ ಅವಳ ಮೂಲಕವೇ ಲೋಕವರಿಯಿತೋ ಒಂದೂ ಗೊತ್ತಾಗುವುದೇ ಇಲ್ಲಾ. ತಾಳ್ಮೆ..... ಹಹ್ಹಹ್ಹಾ ಯೆಷ್ಟು ಕಾಯುವುದು.... ಹುಟ್ಟಿದಂದಿನಿಂದ ಕಾಯುವುದೇ ಅವಳ ಕಾಯಕ..... ಆ ರಾಮ ಬರುವನೆಂದು ಶಬರಿ ಆ ಮುದಿ ವಯದಲ್ಲಿ ಕಾದಿದ್ದು ದೊಡ್ಡ ಸುದ್ದಿಯಾಗಿಬಿಡುತ್ತದೆ.. ಆದರೆ........ ಆದರೆ... ಆ ರಾಮನಿಗಾಗಿ ತನ್ನ ಜೀವಿತವನ್ನೆಲ್ಲಾ ಕಾಯ್ದವಳು ಜಾನ್ನಕಿ...  ಅದೇನೋ... ಅವಳ ಜೀವನದಲ್ಲಿ ಲೋಕೋದ್ಧಾರ ಕ್ಕಾಗಿ ವಿಧಿ ಹೀಗೂ ಬರೆಯಬಹುದೆಂದು ನಾನೆಣಿಸಿರಲೇ ಇಲ್ಲ. ಒಬ್ಬ ರಾಮ ಬರೇ ಒಂದು ವರ್ಷ....!! ಹನ್ನೆರಡು ತಿಂಗಳು ಸೀತೆಯಿಲ್ಲದೇ ಪರಿತಪಿಸಿದ್ದು ಮಹಾಹವವನ್ನೇ ತಂದು ನಮ್ಮ ಕೈಗಿತ್ತಿದ್ದು ಆ ವಾಲ್ಮೀಕಿಗಳ ವಾಗ್ವೈಭವವೆನ್ನದೇ ಬೇರೆ ದಾರಿ ಯಿಲ್ಲ. ಆದರೆ ಕೈ ಹಿಡಿದ ದಿನದಿಂದ ಅದೆಷ್ಟು  ವಿಯೋಗಗಳು.... ಸಪ್ತ ಪದಿ ತುಳಿದು ಇನಿಯನೊಡಗೂಡಿ ವನವಿಹಾರವ ಗೈವ ತನ್ನ ಕನಸಿಗೆ ಲೋಕೋತ್ತರವಾದ ವಿರಹ ವೇದನೆಯುಂಬ ಬಯಕೆಯಿದೆ ಎಂದು ಅರಿತಿರಲಾರಳು...ಮುಗುದೆ.
    ಅಂತೂ ಸೀತೆ ರಾಮನ ಮನದನ್ನೆಯಾಗಿ ಬಂದಳು ಎಂಬಲ್ಲಿಗೆ ರಾಮಾಯಣದ ಹೊಸಾ ಪುಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ...ಈ ವಿಯೋಗದ ಅಥವಾ ವಿಯೋಗಗಳ ಸರಮಾಲೆಯೇ ಶ್ರೀಮದ್ರಾಮಾಯಣ... ವಿಯೋಗ, ವೇದನೆ, ಕಾಯುವಿಕೆ ಇವೆಲ್ಲಾ ರಾಮಾಯಣದ ಬಂಡವಾಲ. ಅದಿಲ್ಲದಿದ್ದರೆ...ಅದನ್ನು ಇದೆಂಥಾ ರಾಮಾಯಣ ಎನ್ನುವಷ್ಟು ಮುಳುಗಿಸಿ ಬಿಟ್ಟಿದೆ ನಮ್ಮನ್ನು ಈ ಜೀವಯಾತನೆ.... ಅಂದು ಬಂದ ಸೀತೆ... ಹೋದಳು.... ಮತ್ತೆ ಬರಲಾರಳು... ಹಿಂದೆಲ್ಲಾ ರಾಮನಿಗೆ ಈ ಪರಿ ಅನ್ನಿಸಿರಲಿಲ್ಲ.... ಯೇಕೆಂದರೆ.... ಹೋಗುವಾಗ ಹೇಳಿ ಹೋಗಿರಲಿಲ್ಲ...ಅಂದು. ಆದರೆ ಇಂದು ಹೇಳಿ ಹೋಗಿದ್ದಾಳೆ..... ಯಾವ ತಾಯಿ... ನನ್ನನ್ನು ಈ ನಿನ್ನ ಚರಣ ಸೇವೆಗಾಗಿ ಹೊತು ಹೆತ್ತು ಪೊರೆದು ಕೈಗಿತ್ತಳೋ... ರಾಮಾ.... ಆ ಕೆಲಸ ಮುಗಿ ಯಿತು..... ನಿನಗೆ ಸೇವೆಯ ಅಗತ್ಯವಿಲ್ಲ.... ಅನ್ನಿಸಿರಬೇಕು..... ಆ ಲವ-ಕುಶರಿಗಾಗಿ ನೀನು ನನ್ನನ್ನೇ ಪಾಲು ಮಾಡಿ ಅವರವ ಕೈಗಿತ್ತೆ.... ಕುಶಸ್ಥಲ-ಲವಪುರಿಗಳನ್ನು ನೀನವರಿಗೆ ಕೊಟ್ಟು ಕೈ ತೊಳೆದುಕೊಂಡೆ...  ಅಲ್ಲಿಗೆ ನಿನಗೆ ಈ ಮಣ್ಣಿನ ಮೇಲೆ ಆಧಿಪತ್ಯ ಬೇಡವೆನಿಸಿತಲ್ಲವೇ? ರಾಜನಿಲ್ಲದ ರಾಜ್ಯ, ದೇವರಿಲ್ಲದ ಗುಡಿ.... ಯಾರಿಗೆ ಬೇಕು..... ಇದೋ... ನಿನ್ನೆದುರಿನಲ್ಲೇ ಮಣ್ಣಿಗೆ ಮಣ್ಣಾಗಿ ಹೋಗುತ್ತೇನೆ.... ನಿನಗಾಗಿ ನಾನು, ಓರ್ವ ಗೃಹಿಣಿಯಾಗಿ ಮನೆಗೆ,ಒಂದು ಕುಲಕ್ಕೆ ವಧುವಾಗಿ ಯೇನೆಲ್ಲವನ್ನೂ ಕೊಡ ಬಹುದೋ ಅದನ್ನೆಲ್ಲಾ ನೀಡಿದೆ.... ನನ್ನೊಳಗಿನ ಅಗ್ನಿಗೆ ಆಹುತಿಯಾದೆ....!!!ಇದೋ ಅದೇ ಆ ಅಗ್ನಿಯೇ ನನ್ನನ್ನು ಕರೆಯುತ್ತಿ ದ್ದಾನೆ... ತವರ ಹಂಬಲ ಹೆಚ್ಚುತ್ತಿದೆ... ಬಹುದಿನಗಳಾಗಿ ಹೋಯಿತು..... ನನ್ನವರು ನಿನ್ನವರೇ ಆಗಿದ್ದರು... ನಿನ್ನ ಪದತಲದಲ್ಲಿ ಯೆಲ್ಲರನ್ನೂ ಕಾಣುತ್ತಿದ್ದೆ... ಯಾಕೋ ಈಗನಿಸುತ್ತಿದೆ ಅಲ್ಲಿದ್ದಾರೆ ನನ್ನವರು...ಹೋಗಿ ನೋಡಬೇಕು.. ಅವರೊಂದಿಗೆ ಹರಟಬೇಕು..ನಿನ್ನ ನನ್ನ ಆ ಮಧುರ ಜೀವನದ ಕನಸಿನ ಕಥೆಯನ್ನೆಲಾ ಹೇಳಿಕೊಳ್ಳಬೇಕು.. ಅನ್ನಿಸಿದೆ.
     ಇದೋ ಉರಿಯುತ್ತಿರುವ ಈ ಅಗ್ನಿ ನನ್ನನ್ನು ತನ್ನತ್ತ ಬರ್ಸೆಳೆದುಕೊಳ್ಳಲೀ.... ಛೇ.... ಅಗ್ನಿಗೆ ಸಂಕಟವಾಗುತ್ತಿರಬೇಕು.. ಅದೆಷ್ಟು ಭಾರಿ ನಿನ್ನ ಓಲೈಸಲೀ ಎಂದು ಕೋಪಿಸಿಕೊಂಡಾನು.... ಆದರೂ ಇದೋ ಇದೋ ಇದೊಂದೇ ಬಾರಿ ನಿನ್ನ ಆ ಕೆನ್ನಾಲಗೆಯ ಸ್ಪರ್ಷಕ್ಕಾಗಿ ಈ ಸೀತೆ ಹಂಬಲಿಸುತ್ತಿದ್ದಾಳೆ... ಬಾ..ಬಾ... ರಾಮಾ...ಯೋಗವಿದ್ದರೆ..ಆ ಸುಯೋಗವಿದ್ದರೆ ಮತ್ತೆ ಒಂದಾಗೋಣ.... ಅಲ್ಲಿ.... ಅಲ್ಲಿ ನಮ್ಮ ಮನೆಯಲ್ಲಿ...... ಬಂದು ಬಿಡು ಬೇಗ.... ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೇ ಹೌದು...ಸುಮ್ಮನೇ.... ನೀನೇ ಹೇಳಿದೆಯಲ್ಲಾ ನಾನು ಮಾನವ... 'ರಾಮೋಹಂ ಮಾನುಷಂ ಮನ್ಯೇ' ಹೌದು..ಅದು ಹಾಗೇ..... ನಿನ್ನನ್ನು ನೀನು ಲೋಕಕ್ಕೆ ತೆರೆದುಕೊಂಡಿದ್ದೇ ಹಾಗೆ... ಇಲ್ಲದಿದ್ದರೆ ಈ ಮಾನವ ಮಾತ್ರರಿರುವ ಈ ಮಣ್ಣಿಗೆ ಮನದನ್ನನಾಗುವ ಭಾಗ್ಯವಿತ್ತೇ..... ಮಕ್ಕಳೇ ಇದೋ ನಿಮ್ಮಪ್ಪ ಈ ಭುವಿಯಲ್ಲಿ ಸಾಧಿಸಿದ್ದು ನಿಮಗೆ ದಾರಿದೀವಿಗೆಯಾಗಲೀ... ಲೋಕ ಮರ್ಯಾದೆಯ ಭಯ ನಿಮ್ಮನ್ನೂ ಬೆಳೆಸಲೀ... ಪೂಜ್ಯರಾದ ವಸಿಷ್ಠರ ಕೃಪಾಶೀರ್ವಾದ ಈ ಎಳ್ಯ ಕಂದಮ್ಮಗಳ ಮೇಲೆಯೂ ಸದಾ ಇರಲಿ. ತಂದೆಯ ಬೆಳ್ಗೊಡೆಯ ಋಣಭಾರದಿಂದ ಅವರ ಶಿರಸ್ಸನ್ನು ಕಾಪಾಡುವ ಶಕ್ತಿ ನೀಡಬೇಕು ನೀವು.... ಹನುಮಾ... ಲೋಕವರಿತದ್ದು ಯೆಷ್ಟೋ ಗೊತ್ತಿಲ್ಲ... ನಾನರಿಯೆನೇ ನಿನ್ನ ಪರಾಕ್ರಮವಾ..? ಶೌರ್ಯ, ಧೈರ್ಯ, ಪರಾಕ್ರಮ ,ಸಾಹಸ, ಕೀರ್ತಿ ಈ ಎಲ್ಲ ಆಭೂಷಣಗಳೂ ನಿನ್ನ ಕೊರಳನ್ನಲಂಕಸಿವೆ... ಆದರೂ ಹಿಗ್ಗಿದವ ಕುಗ್ಗಿದವ ಬಗ್ಗಿದವನಲ್ಲ... ರಾಮ ಮಂತ್ರದ ಪರಮೋಚ್ಚ ಶಕ್ತಿಯನ್ನು ಲೋಕಕ್ಕೆ ತೋರಿದವನು ನೀನು... ಚಿರಾಯುವಾಗಿರು..... ಪುರ ಜನರೇ ಪರಿಜನರೇ..... ನಿಮ್ಮ ಉಳಿವಿನಿಂದ ಈ ರಾಮರಾಜ್ಯ ಉಳಿದಿದೆ... ಮುಂದೆಯೂ ಉಳಿಯುತ್ತದೆ... ನಾನು ಹೋಗಿಬರಲೇ......ಇಲ್ಲ ಹೋಗುತ್ತೇನೆ..... ಬರುವ ಮಾತೆಲ್ಲಿ...... ಬಂದರೆ..ಬಂದರೆ..ಮತ್ತದೇ ಬಂಧನ..... ಈ ಜಗದ ಬಂಧನ..... ರಾಮಾ..... ಈಗ ನಿನ್ನ ಹೆಸರನ್ನೇ ಹಿಡಿದು ಕೂಗುತ್ತೇನೆ. ಉಳಿದೆಲ್ಲಾ ಮನುಜರಿಗೆ ಈ ಭಾಗ್ಯವನ್ನು ನೀನೇ ಕೊಟ್ಟಿದ್ದೆ. ನಿನ್ನ ನಾಮವನ್ನು ಬಾಯ್ತುಂಬಿ ಕರೆಯಲು ಕೂಗಲು ಅವಕಾಶವಿತ್ತು.... ನನಗಾ ಭಾಗ್ಯವೇ ಇರಲಿಲ್ಲಾ.... ಆದರೆ...ಆದರೆ... ಇದೋ ಮನದಣಿಯೆ ಕೂಗುತ್ತೇನೆ ರಾಮಾ..ರಾಮಾ..... ಜಗದಾಭಿರಾಮಾ... ರಘುಕುಲತಿಲಕ ರಾಮಾ ಆಹಾ....ಆಹಾ...ಯೆಂಥಾ ಸುಖ...ಆನಿನ್ನ ನಾಮದಲ್ಲಿರುವ ಎರಡಕ್ಷರವ ಹೇಳಲದೇನು ಸುಖ..... ರಮಯತೇತಿ ರಾಮ... ನಿಜವಾಗಲೂ ನೀನು ರಮಮಾಣನೇ...ಯೇಕೆಂದರೆ ನೀನೆನ್ನ ರಮಣನೂ ಅಲ್ಲವೇ.... ಹೇ ಚಂದ್ರಾನ್ವಯದ ಮಹೋನ್ನತ ಶಿಖರವೇ..... ರಾಮಾ...ಇದೋ ನಾನು ಹೊರಟೆ...... ಯೆಲ್ಲಿಗೆಂದು ಕೇಳಬೇಡಾ..... ಏಕೆಂದರೆ....ಬರುವಾಗ ಎಲ್ಲಿಂದ ಬಂದೆ ಎಂದು ಯಾರೂ ಕೇಳಲಿಲ್ಲ..... ಹಾಗಾಗಿ ಬಂದಲ್ಲಿಗೇ ಹೋಗುತ್ತಿದ್ದೇನೆ.... (ಉರಿಯುತ್ತಿರುವ ಅಗ್ನಿಯಲ್ಲಿ ಲೀನವಾಗಿ ಹೋದಳು ಸೀತೆ)
          ರಾಮನ ಆಸ್ಥಾನ ಪುರಜನರಿಂದ ತುಂಬಿ ತುಳುಕುತ್ತಿದೆ.... ಯಾವುದೋ ಗಹನವಾದ ವಿಚಾರವನ್ನು ದೊರೆ ಪ್ರಜೆಗಳಿಗೆ ಸಾದರ ಪಡಿಸಬೇಕಿದೆ...... ಮುಂದಿರುವ ಸಿಂಹಾಸನ ಅರಸನ ಬರವನ್ನೇ ನಿರೀಕ್ಷಿಸುತ್ತಿದೆ... ಪುರೋಹಿತರು ಮಂಗಳಸೂಕ್ತವನ್ನು ಉಚ್ಚರಿಸುತ್ತಿದ್ದಾರೆ.. ಅದೋ..ಅದೋ...ಅಲ್ಲಿ..ಬರುತ್ತಿದ್ದಾನೆ...ರಾಜಾಧಿ ರಾಜ ರಘುಕುಲ ತಿಲಕ ಅಯೋಧ್ಯಾ ಸಿಂಹಾಸನಾಧೀಶ್ವರ... ಸೀತಾ ವಲ್ಲಭ... ಶ್ರೀ ರಾಮಚಂದ್ರ ಮಹಾಪ್ರಭುಗಳಿಗೇ ಬಹುಪರಾಕ್ ಬಹುಪರಾಕ್........ ಮಹಾರಾಜರು ಸಭೆಗೆ ಆಗಮಿಸುತ್ತಿದ್ದಾರೇ...... (ಎಲ್ಲರೂ ಎದ್ದುನಿಲ್ಲುತ್ತಾರೆ) ರಾಮ ಬಂದ.... ರಾಮನೇ ಬಂದ. ರಾಮನೊಬ್ಬನೇ ಬಂದ.... ಸಿತೆಯಿಲ್ಲದ ರಾಮನ ಹೆಜ್ಜೆಗಳು ಅರಮನೆಯ ನೆಲಹಾಸನ್ನು ತುಳಿದಿರಲಿಲ್ಲವೇನೋ.... ಅವೂ ಅಲ್ಲಲ್ಲಿ ಅಲ್ಲಲ್ಲಿ ಹುರುಪೆಯೆದ್ದು ಅಣಕಿಸುತ್ತಿದ್ದವು.... ಅಯ್ಯೋ ಹನುಮ...ಯೆಲ್ಲಿ ಆ ಹನುಮ...ಶ್ರೀ ರಾಮ ದೂತ..ಹನುಮ..ಅವನೂ ಬರಲಿಲ್ಲವೇ...ಅದೆಲ್ಲಿ ಘನಕಾರ್ಯವನ್ನು ಹೊಂಚಿ ಹೋದನೋ..... ತಮ್ಮ ಹೌದು ತಮ್ಮ ಲಕ್ಷ್ಮಣನಿಗೇನಾಯಿತು.? ಅವನೂ ಇಂದು ರಾಮನೊಡನಿಲ್ಲಾ...!!! ರಾಮನೊಬ್ಬನೇ ಆ ಭಾರವಾದ ಹೆಜ್ಜೆಗಳನ್ನಿಟ್ಟು ಅರಮನೆಯ ರಾಜಾಂಗಣದಲ್ಲಿ ನಡೆದು ಬರುತ್ತಿರುವುದು ಇದೇ ಮೊದಲು.... ಬಂದ... ಸಿಂಹಾಸನಕ್ಕೆ ಕೈಮುಗಿದು ಅದೇನೋ ಆಲೋಚಿಸುತ್ತಾ ನಿಂತೇ ಬಿಟ್ಟ.... ಹೊಸದಾಗಿ ಕಂಡಿರಬೇಕು ಸಿಂಹಾಸನ...ಅದರ ಕೈಯ್ಯಿಂದ ಸವರಿ ಸವರಿ ನೋಡುತ್ತಿದ್ದ.... ಮತ್ತೆ ಮತ್ತೆ ಮುಟ್ಟಿ ನಮಸ್ಕರಿಸುತ್ತಿದ್ದ... ಅದು ಇಕ್ಷ್ವಾಕು ವಂಶದ ಅಮರ ಸಿಂಹಾಸನ...!!! ತಿರುಗಿ ನಿಂತು ಪ್ರಜಾಕೋಟಿಗೆ ಕುಳಿತುಕೊಳ್ಳುವಂತೆ ಸನ್ನೆಯನ್ನೇನೋ ಮಾಡಿದ... ತಾನು ಕೂರಲೋ ಬೇಡವೋ ಎಂದು ಆಲೋಚಿಸುತ್ತಿದ್ದ..ಆದ್ದರಿಂದ ಇವರೂ ನಿಂತೇ ಇದ್ದರು..... ರಾಜ ಸಿಂಹಾಸನವೇರದೇ ಇವರೆಂತು ಕೂರುವುದು..... ಹಾಂ..... ವಸಿಷ್ಠರು..... ರಾಜ ಮಾಂಗಲ್ಯವನ್ನು ವಾಚಿಸಿದರು.... ಸ್ವಸ್ತಿವಾಚನ ಗೈದರು.... ರಾಮಾ..ಇದೇನಿದು.... ನಿನ್ನ ಪ್ರಜೆಗಳು ಕುಶಲಿಗಳಾಗಿದ್ದಾರೆ..... ರಾಜ ನರ್ತಕಿಯರ ಬಣ್ಣ ಮಾಸುತ್ತಿದೆ.... ದೀಪದ ಕುಡಿ ಕವಲೊಡೆಯುತ್ತಿದೆ... ಇನ್ನೂ ನಿಂತೇ ಇರುವೆಯಲ್ಲಾ.....ಆಂ....ಹೋ..ಹೌದಲ್ಲವಾ...ಕುಳಿತುಕೊಳ್ಳಿ ಕುಳಿತುಕೊಳ್ಳಿ...ಸಿಂಹಾಸನಾರೂಢನಾದ ಶ್ರೀರಾಮ ಎಂದಿನಂತಿಲ್ಲದ್ದು ಹೇಳಬೇಕಾಗಿರಲಿಲ್ಲ.... ಆದರೂ... ನರ್ತನಕ್ಕೆ ಅಣಿಯಾದರು ಅಂಗನೆಯರು... ನಿಲ್ಲಿ.... ಏಕೋ ಇಂದಿನ ಸಭೆಗೆ ನರ್ತನ ಬೇಕೆನಿಸುವುದಿಲ್ಲ.... ಗಾಯನ ರುಚಿಸುವುದಿಲ್ಲ.... ಮನಸ್ಸು ಹುಯ್ದಾಡುತ್ತಿದೆ... ಹನುಮನಿಲ್ಲದ ತಮ್ಮಲಕ್ಷ್ಮಣನಿಲ್ಲದ... ಅದೂ ಅಲ್ಲ ನನ್ನ ಮಕ್ಕಳು... ಮಕ್ಕಳು...ಲವ...ಕುಶ...ಅವರೀರ್ವರೂ ಇಲ್ಲದ ಸಭೆ..... ಬೆತ್ತಲೆಯಾದೆನೇ.... ಏಕಾಂಗಿಯಾದೆನೇ..... ಯಾರೂ ಇಲ್ಲವೇ....ಊಹೂಂ..ಯಾರೂ ಕಾಣಿಸುವುದೇ ಇಲ್ಲ..... ಬೇಡ ಏನೂ ಬೇಡ..... (ಸುಮ್ಮನೇ ಕುಳಿತುಕೊಳ್ಳುತ್ತಾನೆ... ಪ್ರಜೆಗಳು ಮೌನಕ್ಕೇ ಶರಣುಹೋಗುತ್ತಾರೆ)
     ಇಂದ್ರನ ಅಮರಾವತಿ..ಅದು ಬೆಳಗುತ್ತಲೇ ಇರಬೇಕು.... ಅದೇಕೋ ಇತ್ತೀಚೆಗೆ ಅಲ್ಲಿ ಬೆಳ್ಕು ಕಾಣಿಸುವುದಿಲ್ಲ... ಗೆಜ್ಜೆಯ ನಾದ...ಅದೇ ಅದೇ..ರಂಭೆ ಊರ್ವಶೀ, ಮೇನಕೆ,ತಿಲೋತ್ತಮೆಯರ ಕಾಲಿನ ಗೆಜ್ಜೆಯ ನಿನಾದ ಕೇಳಿಸುವುದಿಲ್ಲ....ಸೂರೆ ಹೋಗಬೇಕಾದ ಸಗ್ಗದ ಸುಖ ಅಲ್ಲಿಲ್ಲ.... ಏಕೆ..ಏನಾಗಿದೆ.... ತುಂಬಾದಿನಗಳಿಂದ ಕಿಲುಬು ಹಿಡಿದ ಪಾತ್ರೆಯಾಗಿದೆಯಲ್ಲಾ...ಓಹೋ... ಯಾರಿಗಾಗಿ ಲೋಕ ಕಾಯ್ದು ಕೂತಿತ್ತೋ ಅವರಿನ್ನೂ ಬಂದಿರಲಿಲ್ಲ.... ಅವರು ಬಾರದ್ದೇ ಈ ಲೋಕ ಬೆಳಗುವುದಿಲ್ಲ... ಪೂರ್ಣ ಚಂದ್ರಮನ ನಿರೀಕ್ಷೆಯಲ್ಲೇ ಕರಗಿ ಹೋಗುತ್ತಿರುವ ಸುರಲೋಕ..... ಯಾರು ಆ ಚಂದ್ರಮ? ಅದೋ ನಾರದರು ಅಲ್ಲಿ ತಂಬ್ರವ ಮೀಂಟಿ ಹೇಳುತ್ತಿದ್ದಾರೆ...... ರತ್ನಾಕರನಿಗೇನೋ ರಾಮಮಂತ್ರೋಪದೇಶ ಮಾಡಿದೆ.... ಅಂವ ರಾಮಾಯಣವನ್ನೂ ಬರೆದ.... ಲೋಕಕ್ಕೆ ಸಾರಿ ಹೇಳಿದ..... ಆದರೆ ಆದರೆ... ಈ ಲೋಕ ಇನ್ನೂ ಆ ರಾಮನನ್ನು ನೋಡುವ ಭಾಗ್ಯವಿಲ್ಲದೇ ಮಂದವಾಗುತ್ತಿದೆಯಲ್ಲಾ... ಯೆಲ್ಲಿ ರಾಮ ಬರಲೇಯಿಲ್ಲ...... ಹೋದವ ಬರಬೇಕಲ್ಲವೇ? ಹೇಳಿ ಹೋಗಿದ್ದಾನೆ.... ರಾವಣಾದಿಗಳ ಹನನಗೈದು ಬರುತ್ತೇನೆ.... ಯೆಲ್ಲವನ್ನೂ ಗಮನಿಸುತ್ತಿದ್ದ ಅದೇ ಯಮಧರ್ಮ...... ಯಮ..!!! ನಾರದರೇ.... ಏಕೆ ಹೀಗಾಯ್ತು..... ಅಮರರಿಗೆ ಮರವೆಯ ಸಂಕೋಲೆಯ ಬಂಧನ ಆಗಿರಬಹುದೇ?  ಇಲ್ಲ...ಇದನ್ನು ನಾನೇ ವಿಚಾರಿಸಬೇಕು..... ಯೆಲ್ಲಿ ಆ ದೂರ್ವಾಸರು....ಮನೋ ವೇಗದಲ್ಲಿ ಸತ್ಯದ ಸಾಕ್ಷಾತ್ಕಾರಕ್ಕೆ ಮೂಲವಾದವರು...?ನಾರದರೇ.... ತುಂಬ ಸಂದಿಗ್ಧ ಕಾಲ ಇದು ಕಾಲವನ್ನೇ ಕಾಯುವ ಪರಿಸ್ಥಿತಿಯೊದಗಿ ಬಂದಿದೆ..ಆದರೆ ಆ ಕಾಲಕ್ಕೆ ಕೊನೆಮೊದಲಿಲ್ಲವಲ್ಲಾ... ಹಾಗಾಗಿ ಕಾಲನ ಕರೆ ಕೇಳಿಸಬೇಕು ಆ ರಾಮನಿಗೆ...... ಇದೋ ಸ್ವರ್ಗದಲ್ಲಿ ಇರಬೇಕಾದ ಸೊತ್ತು ಅದು..... ಹೇಳಿಹೋದವ ಬಾರದಿದ್ದರೆ ಹೇಗೆ....ಬರಬೇಕಲ್ಲಾ..... ಅದು ಯಾವ ಬಂಧನವೋ... ಈ ಮನುಷ್ಯರೇ ಹೀಗೆ.... ಸಾವಿನ ಸನಿಹದಲ್ಲಿದ್ದರೂ ಈ ಸ್ನೇಹವನ್ನು ಈ ಮಣ್ಣಿನ ಮೋಹವನ್ನು ಬಿಡಲೊಲ್ಲರು...ಎಚ್ಚರಿಸಬೇಕು...ಎಚ್ಚರಿಸಬೇಕು...ನಾನೇ ಹೋಗಿ ಯೆಚ್ಚರಿಸುತ್ತೇನೆ...ಅನುವು ಮಾಡುತ್ತೀರಾ ಮುನಿವರ್ಯಾ...ದೂರ್ವಾಸ ತಲೆಯಾಡಿಸುತ್ತಾನೆ... ಏನೋ ಅಳುಕು ಇಬ್ಬರಲ್ಲೂ.... ಅದು ಹಾಗೇ ಮೇಲೇರುವುದಕ್ಕೆ ಅಳುಕುವುದಿಲ್ಲ ಮನ... ಆದರೆ ಏರಿದವನು ಕೆಳಗಿಳಿಯಬೇಕು ಎಂದರೆ..... ಆದರೂ 'ಅವಶ್ಯಮನುಭೋಕ್ತವ್ಯಮ್'ಅಲ್ಲವೇ? ಕರೆತರಲೇಬೇಕು... ಇನ್ನೂ ಯೇನೇನೋ ಹಡಾವಿಡಿಗಳು ಲೋಕ ಕಂಟಕರು...ಕಾಯುತ್ತಿದ್ದಾರೆ...ಶ್ರೀಮನ್ನಾರಾಯಣನಿಗಾಗಿ.......ಭೂಜಾತೆ ಆ ಮಾತೆ ಲಕುಮೀದೇವಿ ಅದಾಗಲೇ ತವರ ಸೇರಿದಳಲ್ಲಾ... ಭೂರಮಣನೆಲ್ಲಿ....... ಅವನೆಲ್ಲಿ... ಇಲ್ಲಿಲ್ಲವಲ್ಲಾ...ಅದೋ ಆ ಅಯೋಧ್ಯೆ....ಅದರೊಳಗೆ ಮುಳುಗಿ ಹೋಗಿದ್ದಾನವನು.... ಈ ಭೂಮಿಯ ಮಮಕಾರವೇ ಹಾಗೆ ಇಳಿದವ ಮುಳುಗಿಯೇ ಹೋಗುತ್ತಾನೆ... ಅಂತೂ ನಾನೂ ಇಳಿಯಬೇಕು ಇಳೆಗೆ......................ಕಾಲಪುರುಷ...!!!!
         ಅದೋ ಅದಾರೋ ಬಾಗಿಲಲ್ಲಿನಿಂತು ರಾಜಘಂಟಾನಾದವನ್ನು ಮಾಡುತ್ತಿದ್ದಾರೆ... ಇದೇನು ಅಚ್ಚರಿ ರಾಮರಾಜ್ಯ...!!! ಹೇಳಿ ಕೇಳಿ ಇದು ರಾಮ ರಾಜ್ಯ. ಇಲ್ಲಿ ಅತೃಪ್ತರಾರು ಕಾಣಸಿಗುವುದಿಲ್ಲ...!! ಅನ್ಯಾಯಕ್ಕೆ ಎಡೆಯಿಲ್ಲಾ... ಅಸತ್ಯವ ನುಡಿವರಿಲ್ಲ..!! ಕಳ್ಳರಿಲ್ಲ !! ಮೋಸ ವಂಚನೆಗಳಿಲ್ಲ!!! ಏಕೆಂದರೆ ಇದು ರಾಮರಾಜ್ಯ..!!!.ಆದರೂ ಒಂದು ದೂರು ಗಂಟೆ ಇದೆ .ಲಕ್ಷಣಕ್ಕಾಗಿ ಅದು. ಯಾರೂ ಬಡಿದಿಲ್ಲ ಇದುವರೆಗೆ.... ಆದರೆ ಇಂದು... ಅದೇನೋ ಸದ್ದು ಬರುತ್ತಿದೆಯಲ್ಲಾ...!!! ಯೇನಾಯಿತು? ಬಾಗಿಲಿನ ಕಾವಲುಗಾರ ವಿಚಾರಿಸಿ ಬಂದು ಒಡೆಯ ಶ್ರೀರಾಮನಿಗೆ ಅರುಹಿದ.... ಕಾಲ ಪುರುಷನಂತೆ.... ಜೀಯಾ....ಮಾತಾಡಬೇಕಂತೆ ನಿಮ್ಮಲ್ಲಿ.... ಬರಲಪ್ಪಣೆಯ ಬೇಡುತ್ತಿದ್ದಾನೆ.....!!!! ವಾಹ್.... ಕಾಲಾತೀತನಾದವನಿಗೆ ಕಾಲಪುರುಷನ ಕಾಯುವಿಕೆ..... ಯಮನೂ ಕಾಯಬಲ್ಲ...ಕಾಲವನ್ನು...ಯೇಕೆಂದರೆ..ಇದು ರಾಮರಾಜ್ಯ.... !!! ಓಹೋ....ಬಂದನೇ... ಬರಹೇಳು..... ಬಂದವ ಯಾರೇ ಆಗಿರಲಿ..ರಾಮನ ಮುಖ ದರ್ಶನ ಸುಲಭ ಇಲ್ಲಿ..... ಅಹಲ್ಯೆಗೆ ದೊರೆತಿಲ್ಲವೇ ಶಬರಿ ಅನುಭವಿಸಿಲ್ಲವೇ....ತುಂಬ ಸುಲಭ ಲಭ್ಯ..ಶ್ರೀ ರಾಮ...!!! ಅದಕ್ಕೇ ಅವ ರಾಮನಾದ...!!! ಹಾಂ ಅದೋ ಬಂದ.... ಕಾಲನರಮನೆಯ ಒಡೆಯ..... ಕರೆದೊಯ್ಯಬೇಕಿತ್ತು.... ಕಲಿಭೀಮ ರಾಮನನ್ನು.... ಅದಕ್ಕೇ ಬಂದ.ಬದವನಿಗೆ ಸೂಕ್ತ ಸ್ವಗತವಿತ್ತು ಸ್ಮುಚಿತಾಸನವನಿತ್ತ ರಾಮ.. ಯಾರಯ್ಯಾ...? ನೀನು? ನಾನು ಇದುವರೆಗೆ ನೋಡದ ಮುಖ...!!!! ಅಯ್ಯೋ ಅವನ ಮುಖ ಆಗಾಗ ಕಾಣಿಸಬಲ್ಲುದೇ? ಕಾಲಯಮ.. ಅವ...!!! ಯಮನ ದರ್ಶನ ಅಡಿಗಡಿಗೆ ಬಯಸುವರೇ... ಒಮ್ಮೆ ಮುಖ ಕಂಡರೆ....ಅದು ಇವನ ಕೊನೇಯ ನೋಟ ಮುಗಿದು ಹೋಗುತ್ತದೆ.... ಮುಂದೆ ಆ ಮುಖ ಕಾಣಸಿಗದು...ಇದು ಸಾಮಾನ್ಯರಿಗೆ ಮಾತ್ರ..ಆದರೆ..ಇಲ್ಲಿ ಸರ್ವ ದರ್ಶಕನಾದ ಶ್ರೀರಾಮನೇ ಕೇಳುತ್ತಿದ್ದಾನೆ... ನೋಡಿಲ್ಲ ನಿನ್ನ ಮೋರೆಯನ್ನು ಎಂದು. ......
                     ಮಹಾ ಬಾಹೋ........ ನನ್ನನರಿಯೆಯಾ..... ಇಷ್ಟು ಬೇಗ ಮರೆತು ಹೋಯಿತೇ..... ಅಂದರೇ..ಅಂದರೆ... ನೀನೂ ಮರೆತೆಯಾ .... ಓಹ್..ನಾನೇ ಮರೆತಿದ್ದೆ... ನೀನು ರಾಮನಲ್ಲವೇ.....ಅದು ಮರೆವಲ್ಲ...!!! ಮರೆತಂತೆ ನಟಿಸುತ್ತಿದ್ದೀಯಾ...ಇರಲಿ.... ಇದೋ ನಾನು ಬಂದುದು.... ಬೇಡ...ಇಲ್ಲಿ ಬೇಡಾ..... ಒಂದು ಏಕಾಂತ ಬೇಕು.... ಅಲ್ಲಿ ನಾನು ಮತ್ತು ನೀನು..ಅಷ್ಟೇ.... ಇದು ಈ ರಾಜ್ಯದ ಸುಖದುಃಖದ ವಿಚಾರವಲ್ಲಾ... ಅದೋ ಅದು ಆ ರಾಜ್ಯದ್ದು.... ಹೇಳು ಭಟರಿಗೆ... ಏಕಾಂತವೇರ್ಪಡಿಸು ನಾನೆಲ್ಲವನ್ನೂ ಹೇಳಿ ಹಗುರಾಗುತ್ತೇನೆ... ಹೌದು...ಇದು ಭಾರದ ವಿಷಯವೇ.... ಸಗ್ಗದ ಸಿರಿಯ ಭಾರ.... ಯಕ್ಷ,ಕಿನ್ನರ,ಕಿಂಪುರುಷಾದಿಗಳ ದುಃಖದ ಭಾರ ಆ ದಿವಿಜೇಂದ್ರನ ಕಣ್ಣಿರಿನ ಭಾರ ಹಾಗಾಗಿ ಯೇಕಾಂತ ಬೇಕು....ರಾಮ ತನ್ನ ಭಟರಿಗನುಜ್ಞೆಯನಿತ್ತ.... ಹೋಗಿ ಆ ನನ್ನ್ನ ತಮ್ಮ ಲಕ್ಷ್ಮಣನ ಬರ ಹೇಳು..... ಹೌದು... ಇಂಥಾ ಏಕಾಂತ ಅವನಿಗಲ್ಲದೇ ಬೇರಾರಿಗೆ ಸಿಕ್ಕೀತು.... ಲಕ್ಷ್ಮಣ... ಓಡೋಡಿ ಬಂದ ಅಣ್ಣನಾಗಮನಕ್ಕೆ ಕಾಣದವ ಈಗ ಬಂದ..... ಬರಲೇ ಬೇಕಿತ್ತು ...ಇದು ರಾಜಾಜ್ಞೆ...... ಅಣ್ಣನಾಜ್ಞೆಯೊಂದೇ ಅಲ್ಲವಲ್ಲಾ....ಬಂದವ ಅಲ್ಲಿ ಕುಳಿತಿರುವ ಕಾಲನ ಕಂಡು ಹುಬ್ಬೇರಿಸಿದ...? ಯಾರು ಈತ....
      ಅಣ್ಣನನುಜ್ಞೆಯಂತೇ ತಮ್ಮ ಲಕ್ಷ್ಮಣ ಏಕಾಂತವೇರ್ಪಡಿಸಲು ಹೋದ.... ಯೆಂಥಾ ಏಕಾಂತ ........ ರಾಮನಿಗಾಗಿ ಏರ್ಪಡಿಸಬೇಕಾದ ಏಕಾಂತ ಅದು.... ಕಾವಲು ಕಾಯಬೇಕು..... ಯಾರೂ ಒಳನುಳಲನುವಿಲ್ಲದ ಕಾವಲು...!!! ಯೆಂಥಾ ಕಾವಲು ಹಾಂ...ಸರ್ಪಗಾವಲು... ಸರ್ಪಗಾವಲು... ಲಕ್ಷ್ಮಣನ ಕಾವಲು  ಹೌದು ಅವನೇ ನಿಂತ.....ಅಣ್ಣಾ..... ಇದೋ ನಿನಗಾಗಿ ನಿನ್ನವರ ಮಾತುಕತೆಗಾಗಿ ಸ್ವತಹ ನಾನೇ ಕಾವಲು ಕಾಯ್ದು ನಿಲ್ಲುತ್ತೇನೆ... ನಿನನ್ನು ಕಾವಲು ಕಾಯುವುದೇ...?? ಹೆಹ್ಹೆಹ್ಹೇ... ಹೌದು ನನ್ನ ಕೆಲಸವೇ ಅದಲ್ಲವೇ..... ಆ ಕ್ಷೀರ ಸಾಗರದಲ್ಲಿ ನಾನೇ ಅಲ್ಲವೇ ನಿನ್ನನ್ನು ಕಾಯುತ್ತಿರುವವನು... ಅದೇ ಅದೇ ಸರ್ಪಗಾವಲಿದೆ ಇಲ್ಲೂ....
         ಬಂದರಿಬ್ಬರೂ..ಅಲ್ಲಿಗೆ. ರಾಮ ಕಾಲಪುರುಷ ಈರ್ವರೂ ಲಕ್ಷ್ಮಣನ ಏಕಾಂತ ಭವನಕ್ಕೆ ಅಡಿಯಿಟ್ಟರು.... ಇದೋ... ರಾಮಾ   ಹೇಳು ಆನಿನ್ನ ತಮ್ಮನಿಗೆ... ಇದು ಏಕಾಂತ... ಯಾರೆಂದರೆ ಯಾರಿಗೂ ಎಡೆಯಿಲ್ಲ ಇಲ್ಲಿ... ಹಾಗೆ ಕಾವಲಿಗೆ ಹೇಳು... ಒಂದು ವೇಳೆ ಕಾವಲು ಕಲುಷಿತಗೊಂಡರೆ....... ತಮ್ಮ  ತಮ್ಮನೆಂಬ ಮಮಕಾರ ಬೇಡ..... ಇದು ಸಾಮಾನ್ಯವಾದ ಮಾತಲ್ಲ... ಲೋಕ ರಕ್ಷಕನಾಗಿ ಇರಬೇಕಾದವ ನೀನು ನಿನ್ನ ಜೊತೆಗೆ ಆಡುವ ಮಾತು ನನ್ನದು ಏಕಾಂತಕ್ಕೆ ಭಂಗವಾದರೆ....ಭಂಗವಾದರೇ.... ತಮ್ಮನೆಂಬ ಮೋಹ ಬಿಡು .. ಅತ್ಯುಗ್ರವಾದ ಶಿಕ್ಷೆಗೊಳಪಡಿಸು.... ಆಯಿತು ಮಹರಾಯಾ... ನಿನ್ನಿಷ್ಟದಂತೆಯೇ ಆಗಲೀ.... ಇದೋ ತಮ್ಮಾ ...ಲಕ್ಷ್ಮಣಾ... ಕಾವಲಿಗೆ ನಿಂತವ ನೀನೇ ಹೌದಲ್ಲವೋ.... ಇದೋ ಕಾವಲಿನ ಕಾಯಕದಲ್ಲಿ ಮರೆತೆಯಾದರೆ.... ತಮ್ಮಾ...ಮರೆತೆಯಾದರೆ...ದೇಹಾಂತ ಶಿಕ್ಷೆ ಕಾದಿದೆಯೆಂಬುದನ್ನು ಮರೆಯ ಬೇಡಾ...ಇದು ರಾಜಾಜ್ಞೆ,...... ನಿನ್ನಣ್ಣನಾಜ್ಞೆ... ಅಯೋಧ್ಯಾ ಸಿಂಹಾಸನದ ಬೆಳ್ಗೊಡೆಯ ಆಜ್ಞೆ..!!! ದೇಹಾಂತ ಶಿಕ್ಷೆ....
ಅಣ್ಣಾ... ಅಣ್ಣಾ... ಅದೋ..ಅದೋ ಆ ಮಾತು ನನ್ನ ಕಿವಿಯಲ್ಲಿ ಕೆಂಡದ ಮಳೆ ಸುರಿದಂತೆ ಆಗುತ್ತಿದೆ ,,, ಅಣ್ಣನಾಜ್ಞೆ,, ಆ ಬಾಲರವಿಯ ಕಿರಣಗಳೂ ಅಣ್ಣನ ಸುಡಬಾರದೆಂದೆಣಿಸಿ ಆ ತಪೋವನಗಳಲ್ಲಿ ಅಣ್ಣನ ಶಿರಕ್ಕೆ ನನ್ನ ಕೈಯ್ಯಾನಿಸಿ ನೆರಳು ನೀಡಿ ಕರೆದೊಯ್ದ ಈ ಕೈಗಳು..... ಅದೋ ಅದೋ.... ಹದಿನಾಲ್ಕು ವರ್ಷಗಳೂ ಅಣ್ಣನಿಗಾಗಿ ತೇದ ಜೀವ.... ಆದೀತು ಅಣ್ಣಾ.. ದೇಹಾಂತ ಶಿಕ್ಷೆಯೇ... ಆಗಲೀ.... ಹಹ್ಹಾಹ್ಹಾಆ..... ತಿಳಿಯಿತು ಬಿಡು.... ನಾನೇ ನಾನೇ ಹೋಗಬೇಕಲ್ಲವೇ... ಆದೀತು.. ಆದೀತು..... ರಾಮ ರಾಜ್ಯದಲ್ಲಿ ಶಿಕ್ಷೆಯನ್ನನುಭವಿಸಿದವರಾರೂ ಸಿಗರು.... ನಾನೇ ಮೊದಲಿಗೆ... ಆಯಿತು ಅಣ್ಣಾ... ಸಾಕ್ಷಾತ್ ಸರ್ಪಗಾವಲನ್ನೇ ಹಾಕುತ್ತೇನೆ..... ಯಾರು ಯಾರು ಈ ಲಕ್ಷ್ಮಣ... ? ಅದೋ...ಆ ಕ್ಷೀರಾಬ್ಧಿಯ ನೊರೆತೆರೆಗಳಿಂದ ನಿನ್ನ ವಕ್ಷಸ್ಥಳವನ್ನು ತೋಯದಂತೆ ಕಾಪಿಟ್ಟ ಲಕ್ಷ್ಮಣ... ನಿನ್ನ ತ್ರಿಭುವನ ಪಾಲಕ ಭಾರವನ್ನು ನನ್ನ ಬಲವಾದ ಶರೀರ ಹೊತ್ತಿಲ್ಲವೇ..? ಆ ಸಿರಿದೇವಿ ಭೂದೇವಿಯರು ನಿನ್ನ ಕಾಲೊತ್ತಿ ಸಾರ್ಥಕ್ಯವ ಪಡೆದಾಗ ಆ ಭಾರವನ್ನೂ ಹೊತ್ತಿಲ್ಲವೇ.... ಅಷ್ಟೇ ಅಲ್ಲ... ಚತುರ್ದಶ ಭುವನಕ್ಕೊಡೆಯನಾದ ನಿನ್ನ ಶಿರ ಆ ಭಾನುವಿನ ಕಿರಣಗಳಿಂದ ಬಿಸಿಯೇರದಂತೇ ಸಹಸ್ರ ಸಹಸ್ರ ಹೆಡೆಗಳಿಂದ ರಕ್ಷಿಸಲಿಲ್ಲವೇ ಕಾಯಲಿಲ್ಲವೇ..... ತಿಳಿಯಿತು.ಬಿಡು..ಅದೇ ಕಾವಲು.. ಅದೇ ಕಾವಲು... ಆದರೆ ಆದರೆ ಆಗದಿದ್ದರೆ...ದೇಹಾಂತ ಶಿಕ್ಷೆ.... ಅಣ್ಣಾ...ದೇಹಾಂತ ಶಿಕ್ಷೆ..ಅದನ್ನು ಹೇಗೆ ತಡೆಯಲೀ.... ಒಳಗೆ ನಡೆಯುತ್ತಿದ್ದ ಕಾಲಪುರುಷ ಮತ್ತು ಶ್ರೀ ರಾಮನ ಸಂಭಾಷಣೆ.. ಅದು ಕೇವಲ ಮಾತಲ್ಲ... ಅದು ಲೋಕವರಿಯದ ಗುಟ್ಟು.... ರಾಮಾ..... ರಾಮಾ...ಇನ್ನೂ ಮುಗಿದಿಲ್ಲವೇ...? ಮತ್ತೆ ಏಕೆ ತಡ...ಅಲ್ಲಿ ನಿನ್ನವರು ಕಾಯುತ್ತಿದ್ದಾರೆ... ನೀನು ಬರುವಿಯೆಂದು ದಿವಿಜರು ಕಾಯುತ್ತಿದ್ದಾರೆ... ಆದರೂ ಈ ಸಾಕೇತವನ್ನು ಬಿಡಲೊಲ್ಲೆಯಲ್ಲಾ...ಸಾಕು ಸಾಕು...ಇನ್ನೂ ಸಾಕೇತಕ್ಕೆ...ಬೇಕೇ... ಬಾ.. ಬಂದುಬಿಡು....ಎಂದು ಉಸುರುತ್ತಿರುವಾಗಲೇ ಬಾಗಿಲು ಕಿರ್ರನೆ ತೆರೆದ ಸದ್ದು.... ಅದೇನದೂ..ಅದೇನದೂ.... ಲಕ್ಷ್ಮಣಾ....... ಹೌದು ಲಕ್ಷ್ಮಣ ಕಾವಲಿದ್ದಾನೆ... ಏಕಾಂತ ಅದು... ಅಲ್ಲಿಗೇ ಬಂದ ದೂರ್ವಾಸರು.....!!!!! ಅವರು ದೂರ್ವಾಸರೇ.....
             ಯೆಲ್ಲಿ ಯೆಲ್ಲಿ ರಾಮಾ...ರಾಮಾ....ಎಲ್ಲಿದ್ದೀಯಾ...ಇನ್ನೂ ನಿದ್ದೆಯ ಏಕಾಂತವೇ.... ಇದೋ ನಿನ್ನನ್ನೇ ಹುಡುಕಿ ಬಂದಿದ್ದೇನೆ ಯಾರು ಯಾರದು ನನ್ನನ್ನು ತಡೆವವರು..ಓಹ್..ಲಕ್ಷ್ಮಣ...!!!! ಲಕ್ಷ್ಮಣಾ..... ಇದೇನಿದು ನನ್ನ ಪರಿಚಯವಿಲ್ಲವೇ.....? ಬಿಡು ದಾರಿಯನ್ನು.... ನಾನು ಈಗಲೇ ಪ್ರಭು ಶ್ರೀರಾಮನನ್ನು ಕಾಣಬೇಕು.... ಸ್ವಾಮಿನ್... ಇದೋ.. ಇದೋ..ನಿಲ್ಲಿ ನಿಲ್ಲಿ... ಅದು ಏಕಾಂತದಲ್ಲಿದ್ದಾನೆ ಅಣ್ಣ... ಅದಾರೋ ಮಾತಾಡುತ್ತಿದ್ದಾರೆ..ಸ್ವಲ್ಪ ಸೈರಿಸಿಕೊಳ್ಳಿ.... ಆಂ.... ಈ ದೂರ್ವಾಸನೂ...ಸೈರಿಸಿಕೊಳ್ಳುವುದೇ.... ನಿಲ್ಲುವುದೇ... ನಿನಗೆ ಗೊತ್ತಿಲ್ಲಾ ನಾನಾರೆಂಬುದನರಿಯೆ ನೀನು ಘನಕಾರ್ಯವಿಲ್ಲದೇ ತಿರುಗುತ್ತಿರುವ ಬಡ ಮುನಿಯೆಂದು ಭ್ರಮಿಸಿದೆಯಾ ಬೇಡ ಬೇಡ ನನ್ನನ್ನು ತಡೆಯ ಬೇಡಾ...ಕುಲ ನಾಶ ಮಾಡಿಯೇನು... ಎಚ್ಚರಾ....!!!!!. ಹೌದು ಅದು ದೂರ್ವಾಸರ ಸಹಜ ಭಾವ.... ಸಿಟ್ಟು ಅವರ ಸುತ್ತಿಕೊಂಡೇ ಇರುತ್ತದೆ..ಅರಿವಿಲ್ಲದಿಲ್ಲ.ಆದರೂ ಅಣ್ಣನಾಜ್ಞೆ!!!..ಬಿಡಲಾದೀತೇ...ಇಲ್ಲಾ...ಇಲ್ಲಾ...ಆಹಾಂ...ಲಕ್ಷ್ಮಣಾ...ಇದೋ ದಾರಿಗಡ್ಡ ನಿಲ್ಲಬೇಡಾ...ನಿನ್ನಿಂದಾಗಿ ಇಡೀ ಅಯೋಧ್ಯೆ ಸುಟ್ಟು ಭಸ್ಮವಾಗಬೇಕೇ?... ವಿಚಾರಮಾಡು... ಬಿಡು ದಾರಿಯನ್ನು.... ಓಹೋ...ಇದು ನಾನೆಣಿಸಿದಂತೇ ಆಗುತ್ತಿದೆ.... ಈ ಲಕ್ಷ್ಮಣನಿಂದಾಗಿ ಹಿರಿಯ ಜೀವಗಳು ಕಟ್ಟಿ ಬೆಳೆಸಿದ ಈ ಅಯೋಧ್ಯೆ ಸುಟ್ಟುರಿದು ಹೋಗಬೇಕೇ... ಹೋದರೆ ಹೋಗಲಿ ಈ ಲಕ್ಷ್ಮಣನೊಬ್ಬನೇ.... ಅದೇ ಅದೇ ದೇಹಾಂತ ಶಿಕ್ಷೆ.... ಆಗಲೀ... ಬಿಡುತ್ತೇನೆ... ಒಳಹೋಗಿ... .ದೂರ್ವಾಸರು...ಒಳಸೇರಿದರು...ಬಂದರು... ಅಷ್ಟೇ..... ಅದೋ ರಾಮ ಕೂಗಿದ..ತಮ್ಮಾ......ತಮ್ಮಾ... ಮುಗಿಸಿಬಿಟ್ಟೆಯಾ.... ಏಕಾಂತವೇರ್ಪಡಿಸುವೆನೆಂದು ನಂಬಿಸಿ ಈರೀತಿ ಮಾಡಬಹುದೇ... ರಾಮಾ....ರಾಮಾ...ಇದೋ ನಾನೂ ಹೊರಡುತ್ತೇನೆ...ಬಂದ ಕಾರ್ಯವಾಯಿತಲ್ಲಾ.... ಇರಲೀ...ನಿನ್ನ ಆಜ್ಞೆಗೆ ತಕ್ಕ ಫಲ ನೀಡಲೇ ಬೇಕಲ್ಲಾ.... ನುಡಿದಂತೆ ನಡೆಯುವ ಶ್ರೀರಾಮನಲ್ಲವೇ ನೀನು..ನಡೆ ನಡೆ...ಬರುತ್ತೇನೆ... ಕಾಲ ಪುರುಷ ಸಾಗಿಹೋದ...ಆಗಬೇಕಾದ ಘನಕಾರ್ಯ ಆಗಿ ಹೋಗಿತ್ತು..ಅಲ್ಲಿ...
               ತಮ್ಮಾ...ಯೆಂಥಾ ಕೆಲಸವಾಗಿಹೋಯಿತು ನಿನ್ನಿಂದ.... ಏಕೆ ಮರವೆಯಾದೆ... ಹೀಗೇಕೆ ಮಾಡಿದೆ.. ಈ ರಾಮನ ನೆರಳು ಬೇಡವಾಯ್ತೇ... ನಿನಗೇ.. ? ಅಣ್ಣಾ...ಅದು ವಿಧಿಲಿಖಿತ.... ಅದು ಅವರ ಮೊರೆ... ನಾನು ಬಲ್ಲೆ..ಬಂದವ ಯಾರು ಎಂಬುದನ್ನು... ದೇಹಾಂತ ಶಿಕ್ಷೆ ಯಾಕಾಗಿ ಎಂಬುದನ್ನೂ ಬಲ್ಲೆ..ಅಣ್ಣಾ...!!! ತಮ್ಮಾ...ಇದೋ ಈ ಅಣ್ಣನ ಆಜ್ಞೆಯನ್ನು ಮೀರಿದೆ ಎಂಬ ಅಪಖ್ಯಾತಿಗೆ ಗುರಿಯಾದೆಯಲ್ಲಾ...ಬೇಕಿತ್ತೇ ನಿನಗೇ ಬಯಸಿದೆಯಾ ಇದನ್ನೂ.... ಹೋಗು ಹೋಗು ದೂರ ಹೊರಟು ಹೋಗು ಈ ಅಯೋಧ್ಯೆ... ಈ ಅಣ್ಣ...ಯೆಲ್ಲರಿಂದ ದೂರ ಹೋಗು... !!!! ಅಣ್ಣಾ..ಅಣ್ಣಾ...ನೀನು ಹೇಳುತ್ತಿರುವೆಯಾ ಈ ಮಾತನ್ನೂ... ನಾನಿಲ್ಲದೇ ನೀನು ಇರಬಲ್ಲೆಯಾ... ತಮ್ಮಾ ಲಕ್ಷ್ಮಣಾ..ಎಂದು ಯಾರನ್ನು ಕೂಗುವೆ..? ದೂರದಲ್ಲಿ ಹೆಹ್ಹೆಹ್ಹೇ..ನಿನ್ನನ್ನೂ ಬಿಟ್ಟು ಬಹುದೂರದಲ್ಲಿ ಈ ಲಕ್ಷ್ಮಣ....ಬದುಕಿಯಾನೇ.... ಅದು ಬದುಕೇ.... ರಾಮನ ಕಂಟದಿಂದೊರಲುವ ಈ ಲಕ್ಷ್ಮಣಾ ಎಂಬ ರವದಿಂದ ದೂರಾಗಿ ಬದುಕು ಮಾಡಿಯಾನೇ ಈ ಲಕ್ಷ್ಮಣ... ಇಲ್ಲ ಇಲ್ಲ.... ಅಣ್ಣಾ...ಯಾಕೆ ಇನ್ನೂ ಯೋಚಿಸಿ ಯೋಚಿಸಿ ಮಾತಾಡುತ್ತಿರುವೆ ನಿನ್ನ ಸೇವೆಗೆ ಇರಬೇಕಾದ ನಾನು ಇನ್ನು ಇಲ್ಲಿದ್ದರೆ ಆದೀತೇ... ಹಾಹಾ...ತಿಳಿದೂ ತಿಳಿಯದಂತೆ ಹೇಳುತ್ತಿರುವೆಯಲ್ಲಾ..... ಅಲ್ಲಿದೆ...ಅಲ್ಲಿದೆ ನಮ್ಮನೆ..... ಅಲ್ಲವೇ...ನಾನು ಹೋಗಿ ಸೇರಬೇಕಾದು ಮೊದಲಲ್ಲವೇ ನಿನಗೆ ಆಸನವಾಗಿ ಮಲಗಬೇಕಲ್ಲವೇ.... ಆ ಕ್ಷೀರಾಭ್ಧಿಯಲ್ಲಿ.... ಇದೋ ಅಣ್ಣಾ...ಹೋಗುತ್ತೇನೆ.... ಬಾ..ನೀನೂ ..ತಡಮಾಡಬೇ ಡಾ...!!! ಇದೋ ಇ ಸಲಿಲ ಸರಯೂ ನನ್ನನ್ನು ಕೈಬೀಸಿ ಕರೆಯುತ್ತಿದೆ ಯಾರಿಗೂ ಹೇಳಬೇಡಾ...ಇದೋ ಇದೇ ದಾರಿಯಲ್ಲಿ ಸಾಗಿ ಹೋಗುತ್ತೇನೆ ಅದೇ ದೇಹಾಂತ ಶಿಕ್ಷೆ,,,, ನಾರಾಯಣಾ... ..ಅಲ್ಲೇ ಎತ್ತರದ ಮರವೇರಿ ಈ ಕೌತುಕವನ್ನು ನೋಡುತ್ತಿದ್ದ ಹನುಮ... ಆಹಾ.... ಎಂಥಾ ಸೋದರ ವಾತ್ಸಲ್ಯ ...ಯೆಲ್ಲ ತೋರಿಕೆಗಾಗಿ ತೋರಿದ್ದು... ನಾರಾಯಣಾ.... ಲಕ್ಷ್ಮಣ ಆ ಸರಯೂ ನದಿಯ ನೀರಿಗಿಳಿದು ಮುಳುಗಿ ಹೋದ ಮುಳುಗಿ ಹೋದ ಹಾಗೇ...ಬಾಲ ಮಾತ್ರ ಕಾಣುತ್ತಿತ್ತು ಹನುಮನಿಗೆ........!!!!!
               ವಿಧೀ......... ನೀನೂ ನಾಟಕವಾಡುತ್ತೀಯಾ..? ಈ ರಾಮ... ಬದುಕಿಯಾನೇ... ಸೀತೆಯಿಲ್ಲದ ರಾಮ ಬದುಕಿದ್ದ ..ಅಭ್ಯಾಸವಾಗಿಹೋಗಿತ್ತು.... ಅದು...ಜೀವನ ಇದು ಆದರೆ ಅದು..ಅದು... ನಿಯಮ..... ಅದನ್ನು ಮೀರಲಾದೀತೇ.. ತಮ್ಮಾ ನಿನ್ನನ್ನೂ ಕಳಕೊಂಡು ಬದುಕಿದವನ ರಾಮ ಎಂದು ಕರೆದಾರೇ...ಲೋಕ ಮೆಚ್ಚೀತೇ..ನನ್ನ..ಇಲ್ಲ...ಇಲ್ಲ... ಇದೋ... ಆ ಸರಯೂ ನನ್ನನ್ನೂ ಕೂಗುತ್ತಿದ್ದಾಳೆ... ರಾಮನ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಹೋಗ್ಯದೆ... ಅಯೋಧ್ಯೆ ಮಸುಕಾಗಿ ಕಾಣುತ್ತಿದೆ ರಾಮನ ಕಣ್ಣ ಕಂಬನಿಯ ಮಸುಪಲ್ಲಿ..... ಕಾಲು ಅದುರುತ್ತಿದೆ... ಇಲ್ಲಾ ಜಾರುತ್ತಿದೆ..ಸರಯೂ..ಎಳೆಯುತ್ತಿದ್ದಾಳೆ....ಅದೋ ವಸಿಷ್ಠರೇ... ಪುರಜನರೇ... ಇದೋ ನೋಡಿ ಇಲ್ಲಿ...ಯೇನಾಗುತ್ತಿದೆ ಅಯೋಧ್ಯೆಯಲ್ಲೀ ...ಹನುಮ ಕಿರುಚುತ್ತಿದ್ದಾನೆ.. ಊಹೂಂ..ಯಾರೂ ಇಲ್ಲ ಅಲ್ಲಿ... ಮತ್ತೂ ಮೇಲೇರಿ ದಿಟ್ಟಿಸುತ್ತಾನೆ... ಅದೋ ಅಲ್ಲಿ ಆ ಸಲಿಲ ಮಂಜುಳ ನಿನಾದದಲ್ಲಿ ಲೀನವಾಗುತ್ತಿದೆ ರಾಮನ ಬಣ್ಣದ ಬದುಕು... ಕಾಲು ನೀರನ್ನು ಪಾವನಗೊಳಿಸಿತು.... ಅದೋ..ಆ ಆಜಾನು ಬಾಹುವಿನ ಬಾಹುಗಳಿ ಸರಯೂ ಸಲಿಲವ ಬರಸೆಳೆದು ಬಿಗಿದಪ್ಪುತ್ತಿವೆ....ಆಯಿತು...ಆ ವಿಶಾಲ ವಕ್ಷಸ್ಥಲ.... ಯಾವ ಸೀತಾ ಮಾತೆಗೆ ಆಸರೆಯ ಅಡರಾಗಿ ನಿಂದಿತ್ತೋ... ಅದು ಮುಳುಗುತ್ತಿದೆ... ಹೌದು ಅದೋ ನನ್ನ ಪ್ರಭು ಶ್ರೀರಾಮ... ರಾಮಾ..ರಾಮಾ..ರಾಮಾ...... ನಿನ್ನ ಭಾಗ್ಯ ನನಗಿಲ್ಲದೇ ಹೋಯಿತೇ...ಮಾತೆ ಸೀತೆಯ ವರ.... ಮರಣವಿಲ್ಲದ ಬದುಕು..ಛೇ... ರಾಮಾ... ಅದೋ.ಅದೋ..ಆ ಕಪಿವೀರರೂ ಮುಳುಗುತ್ತಿದ್ದಾರೆ.... ಅಯ್ಯೋ ಇವರಿಗೇನಾಗಿದೆ..ಅದೋ ಆ ಮುವತ್ಮೂರು ಕೋಟಿ ಕಪಿವೀರರೂ ಅಲ್ಲಿ ಇಳಿಯುತ್ತಿರುವರಲ್ಲಾ... ಹಾಹ್ಹಾಹ್ಹಾ...ಹೌದದು ಹೋಗಲೇಬೇಕು ಮೂವತ್ಮೂರು ಕೋಟಿ ಕಪಿವೀರರು ಯಾರು ? ಯಾರವರು..? ಓಹ್.... ದೇವಾದಿ ದೇವತೆಗಳೂ ಮುಳುಗುತ್ತಿದ್ದಾರಲ್ಲಾ.... ಅದೋ ರಾಮನ ಕಣ್ಣು ಅಯೋಧ್ಯೆಯ ಜನರತ್ತಲೇ ನೆಟ್ಟಿದೆ ಅವರಿಗಭಯವಿತ್ತಾಂತೇ... ತೋರುತ್ತಿದೆ... ರಾಮಾ... ಹೋಗುತ್ತಿರುವೆಯಾ...ಕಪಟ ನಾಟಕ ಸೂತ್ರಧಾರೀ.... ಬಾ.... ಬುವಿಗಿಳಿದು ಬಾ.... ಕಾಯುವಿಕೆ ತಪ್ಪುವುದಿಲ್ಲ.... ಕಾಯುತ್ತೇನೆ..ಕಾಯುತ್ತೇನೆ.... ಅದೋ ಪುರಜನರಿಗೆ ಅರುಹಬೇಕಲ್ಲವೇ..... ಬೇಗ ಹೇಳ್ ಬೇಕು.... ರಾಮ ಸರಯೂವಿನಲ್ಲಿ ತೇಲಿ ತೇಲಿ ಹೋದ ವಿಚಾರವನ್ನು ಲವ ಕುಶರಿಗೆ ಹೇಳಬೇಕು...ಇದೋ ಇಳಿದು ಹೋಗುತ್ತೇನೆ ರಾಮಾ..ರಾಮಾ....ರಾಮಾ.... ಇನ್ನೆಲ್ಲಿ ರಾಮ...ಎಲ್ಲೆಲ್ಲಿ..ರಾಮ..ಎಲ್ಲೆಲ್ಲೂ................ರಾಮನೇ.... ಎದೆಬಗೆದು ನೋಡುತ್ತೇನೆ... ರಾಮಾ... ನೀನ್ಯಾಕೋ ...ನಿನ್ನ ಹಂಗ್ಯಾಕೋ...ಹೋಗು ಹೋಗು...ನಿನ್ನ ನಾಮದ ಬಲವೊಂದಿದ್ದರೆ ಸಾಕೋ...ರಾಮಾ..ರಾಮಾ......


                                     ||ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ|
                                       ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಭವೇತ್||

ಭಾನುವಾರ, ಜುಲೈ 1, 2012

" 'ವೈದ್ಯರ ದಿನ'ಕ್ಕೊಂದು ವೈದ್ಯರ ಸಂಸ್ಮರಣೆ"

‎................................." 'ವೈದ್ಯರ ದಿನ'ಕ್ಕೊಂದು ವೈದ್ಯರ ಸಂಸ್ಮರಣೆ" ...................................
.........................................................................
ನನಗಾಗ ಕೇವಲ ನಾಲ್ಕು ಐದು ವರ್ಷ. ಮನೆಯಲ್ಲಿ ಯಾರಾದರೂ ಖಾಯಿಲೆ ಬಿದ್ದರೆ (ದೊಡ್ಡ ಖಾಯಿಲೆ ಇರಲಿಲ್ಲ, ಜ್ವರ,ಖೆಮ್ಮು, ಇತ್ಯಾದಿ) ನಾವು ನಂಬಿದ ವೈದ್ಯ ನಾರಾಯಣರೆಂದರೆ ಹೆಗಡೆ ಮನೆ ಗಣಪಜ್ಜ...!! ನಿಜವಾಗಿ ಅವನ ಅಪ್ಪ ಗಣಪತಿ ಹೆಗಡೆ, ಇವರ ಹೆಸರು ಗಣೇಶ ಹೆಗಡೆ ಎಂದು. ಆದರೂ ಅವರು ಇಡೀ ಊರಿಗೇ ಡಾಕ್ಟರ್ ಗಣಪಜ್ಜನಾಗಿದ್ದರು. (ಅವರನ್ನು ಇನ್ನು ಮುಂದೆ ನಾನು ಏಕವಚನದಲ್ಲಿಯೇ ಹೆಸರಿಸುತ್ತೇನೆ. ಏಕೆಂದರೆ ನನಗೆ ಏಕವಚನದಲ್ಲಿ ಹೆಸರಿಸಿದರೆ ಅದೇನೋ ನಮ್ಮವರೆಂಬ ಭಾವನೆ. ) 
ನಾನು ಆಗಾಗ ಈ ಗಣಪಜ್ಜನ ಮನೆಯ ಹಾದಿ ತುಳಿಯುತ್ತಿದ್ದೆ. ಏಕೆಂದರೆ ಈ ಜ್ವರ,ಖೆಮ್ಮು, ಇತ್ಯಾದಿ ನನ್ನ ಆಪ್ತ ಸ್ನೇಹಿತರಾಗಿದ್ದರು.. ಹಾಗಾಗಿ ಪದೇ ಪದೇ ಗಣಪಜ್ಜನ ತೀರ್ಥ ಬೀಳಲೇಬೇಕು ನನಗೆ. ಹೀಗಿರಲು, ನಾನು ಹೋದಾಗಲೆಲ್ಲಾ ಗಣಪಜ್ಜ "ತಮಾ... ಯಾರಿಗೋ? ಯೆಂತಾ ಆತೋ? "ಇತ್ಯಾದಿಗಳಿಂದಲೇ ಸ್ವಾಗತ ಮಾಡುತ್ತಿದ್ದುದು,( ಡಾಕ್ಟರ್ ಮನೆಯಲ್ಲಿ ಇನ್ನೇನು ಆರಾಮಾ ಯಾವಾಗ ಬಂದ್ರೀ ಎಂದು ಕೇಳುವುದಕ್ಕುಂಟೇ, ಮನೆಗೆ ನೆಂಟರು ಬಂದರೂ ಯಾರಿಗೆ? ಯೇನಾಯ್ತು? ಎಂದೇ ಮಾತಾಡಿಸಿ ಅಭ್ಯಾಸ...!! ಅದು ಸತ್ಯವೂ ಹೌದು) ಆಗ ನಾನು ನನ್ನ ಬಾಲ ಭಾಷೆಯಲ್ಲಿಯೇ ನನಗೆ ಬಂದ ರೋಗದ ವಿವರ ಸಲ್ಲಿಸುತ್ತಿದ್ದೆ. ನಾನು ನನ್ನ ವಿಚಾರವನ್ನು ಹೇಳುತ್ತಿದ್ದಂತೇ ನಾನು ತೆಗೆದುಕೊಂಡು ಹೋದ ಬಾಟಲಿಗೆ ಎರಡು ಜಾತಿಯ ಕೆಂಪು ಮದ್ದು, ಒಂದಷ್ಟು ಸಕ್ಕರೆಯಂತಹ ವಸ್ತು, ಒಂದೋ ಎರಡೋ ಸಣ್ಣ ಮಾತ್ರೆಗಳ ಪುಡಿ ಮಾಡಿ ಇಟ್ಟಿದ್ದು ಬಿದ್ದಿರುತ್ತಿತ್ತು. ಅದು ಎಲ್ಲಾ ಸೇರಿದರೆ ಒಂದು ಮೂರು ಚಮಚ ಆಗಬಹುದು. ಮತ್ತೆ ನನ್ನನ್ನು ಪ್ರಶ್ನಿಸುವವನಂತೇ ಕನ್ನಡಕದ ಮೇಳಿನಿಂದ ನೋಡಿದಾಗಲೇ ನಾನು ಹೇಳ ಬೇಕಿತ್ತು.. " ಗಣಪಜ್ಜಾ ಅಬ್ಬೆಗೂ ನನ್ನಾಂಗೇ ಜ್ವರ ಖೆಮ್ಮು . ಅದಕ್ಕೂ ಇದ್ರಲ್ಲೇ ಕೊಡು....!!!!!! " ಯೆಂತಾ ಹೇಳಿಕೆ ಅಬ್ಬೆಗೂ ಮಗನಿಗೂ ಒಂದೇ ರೋಗ ಒಂದೇ ಔಷಧ..!! ಒಂದೇ ಬಾಟಲಿಯಲ್ಲಿ...!! "ಆತೋ ಹೇಳಿದ ಗಣಪಜ್ಜ ಮನೆಯ ಒಳಗೆ ಹೋಗುತ್ತಿದ್ದ....!!! ಅಲ್ಲಿ ಅವನ ಹೆಂಡತಿ ಕಮಲಕ್ಕ ಬಿಸಿನೀರು ಕಾಯಿಸಿ ಆರಿಸಿ ಮಡುಗಿರುತ್ತಿದ್ದಳು.. ಅದನ್ನು ಒಂದು ಚೊಂಬು ತಕ್ಕೊಂಡು ಬಂದು ಆ ಬಾಟಲು ತುಂಬುವಷ್ಟು ನೀರು ಹಾಕಿ ಸುಮಾರು ಅಲ್ಲಾಡಿಸಿದಾಗ ಎಲ್ಲವೂ ತಿಳಿಗುಲಾಬಿ ಬಣ್ಣಕ್ಕೆ ತಿರುಗುತ್ತಿತ್ತು ಮದ್ದು.
ತುಂಬಿದ ಬಾಟಲಿಗೆ ಮುಚ್ಚಳ ಇದ್ದರೆ ಹಾಕುತ್ತಿದ್ದ....! ಇಲ್ಲದಿದ್ದರೆ ಪೇಪರಿನ ಸುರುಳಿ ಹಾಕಿ ಮತ್ತೆ ಪೇಪರಿನ ಒಂದು ಎಳೆ ತಕ್ಕೊಂಡು ಅದನ್ನು ಸ್ಮನಾಗಿ ಮಡಚಿ ಮೂಲೆ ಕತ್ತರಿಸಿ ಗೋಂದು ಕಾಕಿ ಬಾಟ್ಳಿಗೆ ಅಂಟಿಸಿ ಕೈಗಿತ್ತು" ತಮ್ಮಾ ಇದ್ನಾ ನೀನು ನಿನ್ನ ಅಬ್ಬೆ ಇಬ್ರೂ ಹೊತ್ತಿಗೆ ಒಂದೊಂದು ಗೆರೆ ಕುಡೀರಿ....!!! ಬಾಟ್ಳಿ ಅಲ್ಲಾಡಿಸಿ ಕುಡೀರಿ. ಮತ್ತೆ ಈ ಗುಳಿಗೆಗಳನ್ನು ಹೊತ್ತಿಗೆ ಒಂದೊಂದರಂತೇ ನಿನ್ನ ಅಬ್ಬೆ ತಕ್ಕೊಳ್ಳಲೀ ನೀನು ಅದ್ರಲ್ಲಿ ಅರ್ಧ ತಕ್ಕೊ......!!!! ಔಷಧ ಮುಗಿದ ಮೇಲೆ ಮತ್ತೆ ಬಾ. ಎನ್ನುತ್ತಿದ್ದ. ನಾನು ಅವನಿಗೆ ದುಡ್ಡು ಕೊಟ್ಟು ಔಷಧಿ ತೆಗೆದುಕೊಂಡು ಬರುತ್ತಿದ್ದೆ. ಆಗ ಹೆಚ್ಚೇನೂ ಇರಲಿಲ್ಲ.. ಔಷಧಿಗೂ ದಿನದ ಲೆಕ್ಕ....! ಒಂದು ದಿನದ್ದಾದರೆ ಎರಡು ರೂಪಾಯಿ....!! ಎರಡು ದಿನದ್ದಾದರೆ ಐದು ರೂಪಾಯಿ......!!!!
ಔಷಧಿ ತಂದು ಕುಡಿದು ಬೆಚ್ಚಗೆ ಹೊದ್ದು ಮಲಗಿದರೆ ಜ್ವರ ಕಮ್ಮಿ ಹೇಳಿಯೇ ಲೆಕ್ಕ. ಆದರೂ ಕಡಿಮೆ ಆಗದಿದ್ದರೆ ಮತ್ತೆ ಇದ್ದೇ ಇದೆಯಲ್ಲಾ.. ಗಣಪಜ್ಜನ ಮನೆ . ಆದರೂ ನಾನು ಕೊನೆ ಕೊನೆಗೆ ಈ ಗಣಪಜ್ಜನ ಔಷಧಿಯಿಂದ ಯಾಕೋ ಗುಣವಾಗದೆಂದು ಹೇಳುತ್ತಿದ್ದೆ. ಮತ್ತೆ.....!!!! ಮತ್ತೇನಿಲ್ಲಾ ಅಲ್ಲೇ ಹೋಗಬೇಕು... ಆದರೂ ಗಣಪಜ್ಜನಿಲ್ಲದಿದ್ದಾಗ ಹೋದರೆ ಕಮಲಕ್ಕನೇ ಔಷಧ ಕೊಡುತ್ತಿದ್ದಳು....!!! "ಕಮಲಕ್ಕನ ಔಷಧಿ ಬಹಳ ಸ್ಟ್ರಾಂಗು ಒಳ್ಳೆ ಗುಣಕಾರಿ" ಜನರಾಡಿಕೊಳ್ಳುತ್ತಿದ್ದುದು ನನ್ನ ಅನುಭವಕ್ಕೂ ಬಂತು. ಹಾಗಾಗಿ ಕಮಲಕ್ಕ ಇದ್ದಾರೆಯೆ ಎಂದು ನೋಡಿಕೊಂಡೇ ಹೋಗುತ್ತಿದ್ದೆ...!
ಅಂತೂ ಊರಿನ ಒಬ್ಬೇ ಒಬ್ಬ ವೈದ್ಯರ ಮನೆ ನನಗೆ ತುಂಬಾ ಅಚ್ಚು ಮೆಚ್ಚು. ಯಾರು ಏನೇ ಹೇಳಲೀ... ಅಂದಿನ ಕಾಲಕ್ಕೆ ಉಪಕೃತರಾದವರು ಇಂದಿಗೂ ನೆನೆಯದಿರಲಾರರು.